Police Bhavan Kalaburagi

Police Bhavan Kalaburagi

Saturday, August 21, 2021

BIDAR DISTRICT DAILY CRIME UPDATE 21-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-08-2021

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 12/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 20-08-2021 ರಂದು ಫಿರ್ಯಾದಿ ಸುಭಾಷ ತಂದೆ ರಾಮಶೆಟ್ಟಿ ಚಿನ್ನಾ ರಾಠೋಡ, ವಯ: 48 ವರ್ಷ, ಜಾತಿ: ಲಮಾಣಿ, ಸಾ: ಮದರಗಿ ಗುಡಿ ತಾಂಡಾ ರವರು ಹೊಲ ಸರ್ವೆ ನಂ. 155 ನೇದರಲ್ಲಿ ತನ್ನ ತಮ್ಮನಾದ ಭಗವಂತ, ರವಿ ಹಾಗೂ ತಮ್ಮನ ಹೆಂಡತಿ ರುಕುಮಾಬಾಯಿ ಹಾಗೂ ಮಗನಾದ ಸುದೀಪ ಎಲ್ಲರೂ ಹೊಲದಲ್ಲಿರುವ ಸೋಯಾ ಬೆಳೆಯಲ್ಲಿನ ಸೇದಿ ಕಳೆಯಲು ಹೋಗಿದ್ದು, ಸೇದಿ ಕಳೆದು ಹಾಕಿದ ಹುಲ್ಲನ್ನು ಮಗ ಸುದೀಪ ತೆಗೆದು ಕಟ್ಟೆಗೆ ಹಾಕುವ ಕೆಲಸ ಮಾಡುತ್ತಿದ್ದನು, ನಂತರ ಹಿಂದೆ ಹುಲ್ಲು ತೆಗೆಯುತ್ತಿದ್ದ ಮಗನು ಕಾಣದಿರುವಾಗ ಫಿರ್ಯಾದಿಯು ಸೇದೆಯನ್ನು ಕಟ್ಟೆವರೆಗೆ ಪೂರ್ತಿಗೊಳಿಸಿ ನ್ನ ಮಗನಿಗೆ ಹುಡುಕುತ್ತಾ ಸೋಯಾ ಬೆಳೆಯ ಸಾಲುಗಳಲ್ಲಿ ಹೋದಾಗ, ಮಗನು ಹುಲ್ಲಿನ ಕುಂಪಿ ಹತ್ತಿರ ನರಳಾಡುತ್ತಾ ಬೋಹೋಷಾಗಿ ಬಿದ್ದಿದ್ದು, ಬಾಯಿಯಿಂದ ಬುರುಗು ಬರುತ್ತಿದ್ದುದ್ದನ್ನು ನೋಡಿ ಚೀರಿದಾಗ ಜೊತೆ ಕೆಲಸ ಮಾಡಲು ಬಂದವರೆಲ್ಲರೂ ಬಂದಿದ್ದು ಅದೇ ವೇಳೆ ಒಂದು ವಿಷಕಾರಿ ಹಾವು ಅಲ್ಲಿಂದ ಸಾಲುಗಳಲ್ಲಿ ಓಡಿ ಹೋಗಿರುತ್ತದೆ, ನಂತರ ನ್ನ ಮಗನಿಗೆ ತಾಂಡಾಕ್ಕೆ ತಂದು ಅಲ್ಲಿಂದ ಫಿರ್ಯಾದಿಯು ತನ್ನ ಭಾವಂದಿರಾದ ಮಾಣಿ ಹಾಗೂ ತುಕಾರಾಮ ಸೇರಿ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ತೆಗೆದುಕೊಂಡು ಮನ್ನಾಎಖೇಳ್ಳಿಗೆ ಹೋಗುವಾಗ ದಾರಿಮದ್ಯ ಮೃತಪಟ್ಟಿದ್ದು ಇರುತ್ತದೆ, ಹೊಲದಲ್ಲಿ ಸುದಿಪ ಇತನಿಗೆ ಹಾವು ಕಚ್ಚಿ ಮೃತಪಟ್ಟಿದ್ದು ಅವನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 141/2021, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಅಂಜನಾ ಗಂಡ ಮನೋಹರ ಕಟಾರ, ವಯ: 50 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಕೊಡಂಬಲ, ತಾ: ಚಿಟಗುಪ್ಪಾ ರವರ ಹಿರಿಯ ಮಗಳಾದ ಯಶೋಧಾ ಇವಳಿಗೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ನಾಗಪ್ಪಾ ತಂದೆ ಶಿವರಾಯ ಮಹಾಂತನೋರ ಎಂಬುವವನೊಂದಿಗೆ 15 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಅವಳಿಗೆ ಸೋನಾ ವಯ: 08 ವರ್ಷದ ಹೆಣ್ಣು ಮಗಳಿರುತ್ತಾಳೆ, ಹೀಗಿರುವಾಗ ಕಳೆದ 15 ದಿವಸಗಳ ಹಿಂದೆ ಫಿರ್ಯಾದಿಯು ಮಗಳ ಹತ್ತಿರ ಚಿಮ್ಮನಚೋಡ ಗ್ರಾಮಕ್ಕೆ ಹೋದಾಗ ಅಳಿಯನಾದ ನಾಗಪ್ಪಾ ಈತನು ಕುಡಿದು ಬಂದು ಜಗಳ ಮಾಡಿದ್ದರಿಂದ ಮಗಳು ಫಿರ್ಯಾದಿಯೊಂದಿಗೆ 4 ದಿವಸ ತವರು ಮನೆಗೆ ಬರುತ್ತೇನೆಂದು ಹೇಳಿದ್ದರಿಂದ ಫಿರ್ಯಾದಿಯು ತನ್ನ ಮಗಳನ್ನು ಹಾಗೂ ಮೊಮ್ಮಗಳನ್ನು ಚಿಮ್ಮನಚೋಡ ಗ್ರಾಮದಿಂದ ಕೊಡಂಬಲ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದು ಇರುತ್ತದೆ, ನಂತರ ಅದೇ ದಿವಸ ಅಳಿಯ ಸಹ ಊರಿಗೆ ಬಂದು ಎಂದಿನಂತೆ ಇಲ್ಲಿಯೂ ಸಹ ಇಬ್ಬರು ಜಗಳ ಮಾಡುತ್ತಿದ್ದರು, ಪಂಚಮಿ ಹಬ್ಬದಂದು ದಿನಾಂಕ 13-08-2021 ರಂದು ಮಗಳು ಮನೆಯಿಂದ ಹೊರಗೆ ಹೋದವಳು ಬಹಳ ಹೊತ್ತಾದರೂ ಮನೆಗೆ ಬರದೇ ಇರುವಾಗ ಫಿರ್ಯಾದಿಯು ಅಕ್ಕಪಕ್ಕದ ಮನೆಯವರಿಗೆ ವಿಚಾರಿಸಿ ಹುಡುಕಿದರೂ ಸಿಕ್ಕಿರುವುದಿಲ್ಲ, ನಂತರ ಅಳಿಯ ನಾಗಪ್ಪಾ, ಗಂಡ ಮನೋಹರ ಹಾಗೂ ಹಿರಿಯ ಮಗನಾದ ಸ್ವಾಮಿದಾಸ ಸೇರಿ ಕೊಡಂಬಲ ಹಾಗು ಚಿಮ್ಮನಚೋಡ, ಚಿಕ್ಕಮಗಳೂರಾದ ಚಿತ್ತಕೋಟಾ ಮತ್ತು ಸಂಬಂಧಿಕರ ಗ್ರಾಮಗಳಾದ ಕಲಬುರ್ಗಿ, ಮಂಗಲಗಿ, ಹೊಸಳ್ಳಿ, ಐನಾಪೂರಗಳಲ್ಲಿ ಕರೆ ಮಾಡಿ ಹಾಗೂ ಹೋಗಿ ನೋಡಿ ಹುಡುಕಿದರೂ ಸಿಕ್ಕಿರುವುದಿಲ್ಲ, ನಂತರ 2 ದಿನಗಳ ನಂತರ ಅಳಿಯ ಮೊಮ್ಮಗಳನ್ನು ಕರೆದುಕೊಂಡು ಚಿಮ್ಮನಚೋಡಕ್ಕೆ ಹೋಗಿರುತ್ತಾನೆ, ಫಿರ್ಯಾದಿಯವರ ಮಗಳಾದ ಯಶೋಧಾ ಇಕೆಯು ದಿನಾಂಕ 13-08-2021 ರಂದು 1100 ಗಂಟೆ ಸುಮಾರಿಗೆ ಹೊರಗೆ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ ಬರದೇ ಕಾಣೆಯಾಗಿರುತ್ತಾಳೆ, ಕಾಣೆಯಾದ ಮಗಳ ಚಹರೆ ಪಟ್ಟಿ 1) ಯಶೋಧಾ ಗಂಡ ನಾಗಪ್ಪಾ ಮಹಾಂತನೋರ, ವಯ: 35 ವರ್ಷ, 2) ಎತ್ತರ:  5’4’’ 3) ಚಹರೆ ಪಟ್ಟಿ: ಸಾಧರಣ ಮೈಕಟ್ಟು & ಗೋಧಿ ಬಣ್ಣ, 4) ಧರಿಸಿದ ಬಟ್ಟೆಗಳು: ಹಸಿರು ಬಣ್ಣದಲ್ಲಿ ಹಳದಿ ಬಣ್ಣ ಚುಕ್ಕೆಯುಳ್ಳ ನೈಟಿ ಹಾಗೂ ಭಾಷೆಕನ್ನಡ ಮತ್ತು ಹಿಂದಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-08-2021 ರಂದು ಪ್ರಕಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: