Police Bhavan Kalaburagi

Police Bhavan Kalaburagi

Tuesday, August 24, 2021

BIDAR DISTRICT DAILY CRIME UPDATE 24-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-08-2021

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 17/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ತುಕ್ಕಣ್ಣಾ ತಂದೆ ಸಾಯಿಬಣ್ಣಾ ಕಂಠೆಕರ ವಯ: 75 ವರ್ಷ, ಜಾತಿ:  ಕುರುಬ, ಸಾ: ರಾಜೇಶ್ವರ ರವರ ಮಗನಾದ ರಾಜಕುಮಾರ ಇತನು ಯಾವಾಗಲು ಸರಾಯಿ ಕುಡಿಯುವ ಚಟವುಳ್ಳನಾಗಿದ್ದು, ಸರಾಯಿ ಕುಡಿದಾಗ ಮನೆಯಲ್ಲಿ ಯಾರಿಗೂ ಹೇಳದೇ ಲಾರಿ ಮೇಲೆ ಹೋಗುತ್ತಿದ್ದನು, ಒಂದೊಂದು ವಾರದ ನಂತರ ತಿರುಗಿ ಮನೆಗೆ ಬರುತಿದ್ದ, ಅದರಂತೆ ದಿನಾಂಕ 19-08-2021 ರಂದು ಮಗ ರಾಜಕುಮಾರ ಇವನು ಮನೆಯಿಂದ ಹೋದವನು ತಿರುಗಿ ಮನೆಗೆ ಬಂದಿರುವುದಿಲ್ಲಾ, ಹೀಗಿರಲು ದಿನಾಂಕ 19-08-2021 ರಂದು ರಾಜಕುಮಾರ ಇತನು ಸರಾಯಿ ಕುಡಿದ ಅಮಲಿನಲ್ಲಿ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ, ತನ್ನ ಮಗನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ತರಹದ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 57/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 22-08-2021 ರಂದು ಫಿರ್ಯಾದಿ ಶೇಖ ಶೆಬ್ಬಿರ ತಂದೆ ರಸೂಲಸಾಬ ಸಾ: ಬೆಡಕುಂದಾ ರವರ ಹೆಂಡತಿಯ ತಮ್ಮಂದಿರಾದ ಚಾಂದ ತಂದೆ ಅಬ್ದುಲಸಾಬ ಮುಲ್ಲಾ ಇವರು ಕರೆ ಮಾಡಿ ನಾವು ತಪಶ್ಯಾಳ ಕ್ರಾಸೀನ ಬಳಿಗೆ ಕುಳಿತ್ತಿದ್ದು ನಮಗೆ ಕುಶನೂರ ಗ್ರಾಮಕ್ಕೆ ಹೋಗಲು ಯಾವುದೇ ವಾಹನ ಇಲ್ಲ ತಿಳಿಸಿದಕ್ಕೆ ಫಿರ್ಯಾದಿಯು ತನ್ನ ತ್ರೀಚಕ್ರ ವಾಹನ ನಂ. ಕೆಎ-38/ವಿ-7835 ನೇದನ್ನು ತೆಗೆದುಕೊಂಡು ಹೋಗಿ ತಪಶ್ಯಾಳ ಕ್ರಾಸ ಹತ್ತಿರ ಅವರಿಬ್ಬರಿಗೆ ನ್ನ ವಾಹನದಲ್ಲಿ ಕೂಡಿಸಿಕೊಂಡು ಮರಳಿ ಠಾಣಾ ಕುಶನೂರ ಗ್ರಾಮಕ್ಕೆ ಬರುತ್ತಿರುವಾಗ ಚಾಂದೂರಿ ಗ್ರಾಮದ ಶಿವಾರದಲ್ಲಿ ತಿರುವು ರಸ್ತೆಯಲ್ಲಿ ಎದುರಿನಿಂದ ಮೋಟಾರ್ ಸೈಕಲ್ ನಂ. ಕೆಎ-38/ವ್ಹಿ-7056 ನೇದರ ಚಾಲಕನಾದ ಆರೋಪಿ ಇಬ್ರಾಹೀಂ ತಂದೆ ರಶೀದಖಾನ ಪಠಾಣ ಸಾ: ಕೋರ್ಯಾಳ ಇತನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ತ್ರಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿ ತನ್ನ ಮೋಟಾರ್ ಸೈಕಲನ್ನು ನಿಲ್ಲಿಸದೇ ಓಡಿಡಿಕೊಂಡು ಹೋಗಿರುತ್ತಾನೆಮ, ಸದರಿ ಅಪಘಾತದಲ್ಲಿ ಫಿರ್ಯಾದಿಗೆ ಯಾವುದೇ ಗಾಯವಾಗಿರುವುದಿಲ್ಲಾ, ಚಾಂದಪಾಷಾ ಇವನಿಗೆ ಬಲಗಾಲಿನ ಮೋಲಕಾಲಿಗೆ ಭಾರಿ ಗುಪ್ತಗಾಯ, ಆರೀಫ ಪಾಷಾ ಇವನಿಗೆ ಬಲಗಾಲಿನ ಮೋಳಕಾಲಿನ ಕೆಳಭಾಗದಲ್ಲಿ ರಕ್ತಗಾಯವಾಗಿರುತ್ತದೆ, ನಂತರ ಅಲ್ಲಿ ಸೇರಿದ ಜನರು 108 ಅಂಬುಲೇನ್ಸಗೆ ಕರೆ ಮಾಡಿ ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 83/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 23-08-2021 ರಂದು ಬ್ಯಾಲಹಳ್ಳಿ[ಕೆ] ಗ್ರಾಮದಲ್ಲಿ ಕಣಜಿ [ಕೆ] ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಹೇಳಿ ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ನಸಿಬಿನ ಮಟಕಾ ಜೂಜಾಟ ಆಡಿಸುತ್ತಿದ್ದಾನೆಂದು ವೀರಣ್ಣ ಎಸ್. ದೊಡ್ಡಮನಿ ಸಿಪಿಐ ಭಾಲ್ಕಿ ಗ್ರಾಮಿಣ ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೆರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಕಟ್ಟಿತುಗಾಂವ ಮಾರ್ಗವಾಗಿ ಬ್ಯಾಲಹಳ್ಳಿ ಕಾರಂಜಾ ಬ್ರೀಜ್ಡ [ಡ್ಯಾಮ] ಎದುರುಗಡೆ ಇರುವ ಹುಮನಾಬಾದ - ಬೀದರ ರಸ್ತೆಯ ಸೇತುವೆ ಮೇಲೆ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಅಲ್ಲಿ ಕಣಜಿ[ಕೆ] ಕ್ರಾಸ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಆರೋಪಿ ಅನೀಲಕುಮಾರ ತಂದೆ ರೇವಣಪ್ಪಾ ಮಾಹಗಾಂವ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಕಣಜಿ [ಕೆ] ಇತನು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಕೂಗುತ್ತಾ ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ನಸಿಬಿನ ಮಟಕಾ ಜೂಜಾಟ ನಡೆಸುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಗೆ ಹಿಡಿದುಕೊಂಡು ವಿಚಾರಣೆ ಮಾಡಲು ಆತನು ತಾನು ಜನರಿಂದ ಅಕ್ರಮವಾಗಿ ಹಣ ಪಡೆದು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಆಸೆ ತೋರಿಸಿ ಜನರಿಗೆ ಮಟಕಾ ಚೀಟಿ ಬರೆದುಕೊಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ, ನಂತರ ಆರೋಪಿಗೆ ಪಂಚರ ಸಮಕ್ಷಮ ಶೋಧನೆ ಮಾಡಿದ್ದು ಆತನ ಹತ್ತಿರ 1830/- ರೂ ನಗದು ಹಣ, ಒಂದು ಬಾಲ ಪೆನ್ನ ಹಾಗು ಮಟಕಾ ನಂಬರ ಬರೆದ 06 ಮಟಕಾ ಚೀಟಿಗಳು ದೊರೆತಿದ್ದು ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: