ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-08-2021
ಗಾಂಧಿ ಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 125/2021, ಕಲಂ. 381 ಐಪಿಸಿ :-
ದಿನಾಂಕ 11-04-2021 ರಿಂದ ದಿನಾಂಕ 13-04-2021 ರ ಮಧ್ಯದಲ್ಲಿ ಫಿರ್ಯಾದಿ ಸುರೇಖಾ ಗಂಡ ಮೊಗಲಪ್ಪಾ ಮೇತ್ರೆ ಸಾ: ಹೈದ್ರಾಬಾದ್ ರವರ ತವರು ಮನೆಯಲ್ಲಿ ಒಂದು ಬ್ಯಾಗಿನಲ್ಲಿಟ್ಟ ತನ್ನ ಬಂಗಾರದ ಆಭರಣಗಳಾದ 1) ಬಂಗಾರದ ಗಂಟನ್ 4.5 ತೊಲೆ, 2) ಬಂಗಾರದ ಮಂಗಳಸೂತ್ರ 3 ತೊಲೆ, 3) ಬಂಗಾರದ ಬಳೆಗಳು 2 ತೊಲೆ, 4) ಬಂಗಾರದ ಸರಪ 3 ಗ್ರಾಂ., 5) ಬಂಗಾರದ ಕಿವಿಯೋಲೆ 4 ಗ್ರಾಂ., 6) ಬಂಗಾರದ ಕಿವಿಯೋಲೆ 3 ಗ್ರಾಂ. (2 ಜೋತೆ) ಎಲ್ಲಾ ಆಭರಣಗಳ ಅ.ಕಿ 05,20,000/- ರೂ. ಬೆಲೆಬಾಳುವುದು ಕಳುವಾಗಿರುತ್ತವೆ, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕವಿತಾ ಗಂಡ ಚಂದ್ರಶೇಖರ್ ಎಂಬುವವಳೇ ಪಾತ್ರೆ ತೊಳೆಯುವ, ನೇಲೆವರೆಸುವ ಹಾಗೂ ಕಸ ಗುಡಿಸುವ ಕೆಲಸ ಮಡಲು ಬರುತ್ತಾಳೆ, ಕವಿತಾ ಇವಳೇ ಸದರಿ ಬಂಗಾರದ ಆಭರಣಗಳನ್ನು ಕಳವು ಮಾಡಿರುತ್ತಾಳೆಂದು ನನಗೆ ಬಲವಾದ ಸಂಶಯವಿದೆ ಅಂತ ಕೊಟ್ಟ ಫಿರ್ಯಾದಿಯವರ ದೂರು ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 26-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment