ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 31-08-2021
ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ, ಬೀದರ ಅಪರಾಧ ಸಂ. 05/2021, ಕಲಂ. 406, 409, 420, 465, 468, 471 ಐಪಿಸಿ :-
ಫಿರ್ಯಾದಿ ವಿಘ್ನೇಶ ಮವೆಂತೂgÀ ತಂದೆ ವಿಷ್ಣುಮೂರ್ತಿಭಟ, ವಯ: 33 ವರ್ಷ, ಜಾತಿ: ಬ್ರಾಹ್ಮಣ, ಸಾ: ಕಲಾಯಿ ಮೂರು ಮನೆ ಪೋಸ್ಟ್ ಅರಳೆ, ಜಿ: ದಕ್ಷಿಣ ಕನ್ನಡ ರವರ ನಮ್ಮ ಎಜೆನ್ಸಿಯಲ್ಲಿ ಪರಮೇಶ ಎಸ್.ಎಸ್ ತಂದೆ ಶಂಭುಲಿಂಗಪ್ಪ ಶಿವಾಪ್ಲರ್, ವಯ: 24 ವರ್ಷ, ಜಾತಿ: ಲಿಂಗಾಯತ, ಸಾ: ಗುಳ್ಳದಹಳ್ಳಿ ಗ್ರಾಮ, ತಾ: ಹರಿಹರ, ಜಿಲ್ಲೆ: ದಾವಣಗೆರೆ ಇತನು ದಿನಾಂಕ 02-01-2020 ರಂದು ಸೇಲ್ಸಮೇನ್ ಅಂತ ಕೆಲಸಕ್ಕೆ ಸೇರಿರುತ್ತಾನೆ, ಆತನಿಗೆ ಹುಮನಾಬಾದ, ಚಿಟಗುಪ್ಪಾ, ಭಾಲ್ಕಿ, ಬಸವಕಲ್ಯಾಣ, ಕಮಲನಗರ, ಔರಾದ, ಹುಲಸೂರ ಇತ್ಯಾದಿ ಕಡೆಗಳಲ್ಲಿರುವ ಮೇಡಿಕಲ್ ಅಂಗಡಿಗಳಿಗೆ ಔಷಧಗಳನ್ನು ಸರಬರಾಜು ಮಾಡುವುದು, ಆರ್ಡರ ತೆಗೆದುಕೊಳ್ಳುವುದು ಹಾಗೂ ಬಾಕಿ ಹಣವನ್ನು ಸಂಗ್ರಹ ಮಾಡಿ ತಮ್ಮ ಎಜೆನ್ಸಿಯ ಬ್ಯಾಂಕ ಅಕೌಂಟಿಗೆ ಜಮಾ ಮಾಡÄವ ಹೊಣೆಯನ್ನು ವಹಿಸಲಾಗಿತ್ತು, ನಂತರ 5-6 ತಿಂಗಳಿಂದ ಎಂದಿನಂತೆ ಔಷಧಿ ಸರಬರಾಜು ಆಗುತ್ತಿದ್ದರು ಸಹ ಸತತವಾಗಿ ಹಣ ಸಂಗ್ರಹ ಕಡಿಮೆಯಾಗುತ್ತಾ ಬರುತ್ತಿತ್ತು ಇದರಿಂದ ಎಜೆನ್ಸಿಗೆ ಪರಮೇಶ ಇವನು ಸಂಗ್ರಹ ಮಾಡುವ ನಗರದ ಔಷಧ ಅಂಗಡಿಗಳಿಂದ ಬರಬೇಕಾದ ºÀಣ ಬಾಕಿ ಹೆಚ್ಚಾಗುತ್ತಾ ಬಂದಿರುತ್ತದೆ, ಇದರಿಂದ ಸಂಶಯಗೊಂಡು ಫಿರ್ಯಾದಿಯು ತಮ್ಮ ಮೇ|| ವೆಂಕಟೇಶ ಎಜೆನ್ಸಿಯ ಮ್ಯಾನೆಜರ ಮಲ್ಲಪ್ಪಾ ಕುಳಾಲಿ ಇಬ್ಬರೂ ಕೂಡಿ ಹುಮನಾಬಾದ, ಚಿಟಗುಪ್ಪಾ, ಭಾಲ್ಕಿ, ಬಸವಕಲ್ಯಾಣ, ಕಮಲನಗರ, ಔರಾದ & ಹುಲಸೂರ ನಗರದಲ್ಲಿಯ ಔಷಧ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಎಜೆನ್ಸಿಗೆ ಜಮಾ ಮಾಡಿದ ಹಣ ಹಾಗೂ ಅಂಗಡಿಯವರು ಸಂದಾಯ ಮಾಡಿದ ಹಣದ ತಾಳೆ ಮಾಡಿ ನೋಡಲು ಬಹಳಷ್ಟು ಔಷಧ ಅಂಗಡಿಯವರು ಸಂದಾಯ ಮಾಡಿದ ಹಣ ಎಜೆನ್ಸಿಗೆ ಜಮಾ ಆಗಿರುವುದಿಲ್ಲ, ಅದರಲ್ಲಿ ಭವಾನಿ ಮೇಡಿಕಲ್ & ಜನರಲ್ ಸ್ಟೋರ್, ರಾಜೇಶ್ವರ ಇವರಿಂದ 1) ದಿನಾಂಕ 09-07-2021 ರ ರಸೀದಿ ಸಂ. 109087 ರೂ. 47,919/-, 2) ದಿನಾಂಕ 22-07-2021 ರ ರಸೀದಿ ಸಂ. 127724 ರೂ. 32,138/-, 3) ದಿನಾಂಕ 30-07-2021 ರ ರಸೀದಿ ಸಂ. 88599 ರೂ. 31,437/-, ಹೀಗೆ ಒಟ್ಟು ರೂ. 1,11,494/- ನಗದು ºÀಣವನ್ನು ಸಂಗ್ರಹ ಮಾಡಿರುತ್ತಾನೆ, ಹೀಗೆ ಅಂತಹವು ಎಲ್ಲಾ ಔಷಧ ಅಂಗಡಿಗಳ ಪಟ್ಟಿ ಮಾಡಿ ಪರಿಶೀಲಿಸಿ ನೋಡಲು ದಿನಾಂಕ 02-01-2020 ರಿಂದ ದಿನಾಂಕ 14-08-2021 ರವರೆಗೆ ಮೇಡಿಕಲ್ ಅಂಗಡಿಗಳಿಂದ ಸಂಗ್ರಹ ಮಾಡಿದ ನಗದು ರೂ. 50,22,741/- ಹಾಗೂ ಪರಮೇಶ ಇತನ ಹೆಚ್.ಡಿ.ಎಫ್.ಸಿ ಬ್ಯಾಂಕ ಖಾತೆ ಸಂ. 50100222281400 ನೇದಕ್ಕೆ ಸುರೇಶ ಮೇಡಿಕಲ್ & ಜನರಲ್ ಸ್ಟೋರ್, ಕಮಲನಗರ ರವರಿಂದ ದಿನಾಂಕ 04-07-2021 ರಂದು ರೂ. 37,980/- ನೆಪ್ಟ್ ಮೂಲಕ ತನ್ನ ಖಾತೆಗೆ ಹಾಕಿಸಿಕೊಂಡಿರುತ್ತಾನೆ, ಅದೇ ರೀತಿ ಜಿಲ್ಲೆಯಲ್ಲಿರುವ ಬೇರೆ-ಬೇರೆ ಮೇಡಿಕಲ್ ಅಂಗಡಿಗಳಿಂದ ಪೋನ್ ಪೇ, ಗೂಗಲ ಪೇ & ನೆಫ್ಟ್ ಮುಖಾಂತರ ರೂ. 6,09,930/- ಹಣ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿರುತ್ತಾನೆ, ಹೀಗೆ ಅಂದಾಜು ರೂ. 56,32,671/- ಎಜೆನ್ಸಿಗೆ ಜಮಾ ಆಗದ ಬಗ್ಗೆ ಕಂಡು ಬಂದಿರುವ ಪ್ರಯುಕ್ತ ಇದರ ಬಗ್ಗೆ ಪರಮೇಶ ಇತನಿಗೆ ವಿಚಾರಿಸಲು ಅವನು ಸದರಿ ಹಣ ತನ್ನ ಸ್ವಂತಕ್ಕೆ ಬಳಸಿPೆÆಂಡಿರುವುದಾಗಿ ಒಪ್ಪಿಕೊಂಡಿರುತ್ತಾನೆ, ಈ ಬಗ್ಗೆ ಎಜೆನ್ಸಿಯ ಮೇಲಾಧೀಕಾರಿಗಳಿಗೆ ಮಾಹಿತಿ ನೀಡಿದಾಗ ಅವರು ಪೋಲಿಸ್ ಠಾಣೆಗೆ ದೂರು ನೀಡಲು ತಿಳಿಸಿದ್ದರಿಂದ ಹಾಗೂ ಫಿರ್ಯಾದಿಯು ದೂರು ನೀಡುವ ಪ್ರಾಧೀಕಾರವುಳ್ಳವನಾಗಿದ್ದರಿಂದ ಸದರಿ ಘಟನೆಯ ಬಗ್ಗೆ ದೂರು ನೀಡುತ್ತಿದ್ದೆನೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 30-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 57/2021, ಕಲಂ. 279, 338 ಐಪಿಸಿ :-
ದಿನಾಂಕ 30-08-2021 ರಂದು ಫಿರ್ಯಾದಿ ಬಸವರಾಜ ತಂದೆ ಸಂಜೀವಕುಮಾರ ಸಾ: ಕೋಸಂ, ತಾ: ಭಾಲ್ಕಿ ರವರು ತಮ್ಮೂರಿನಿಂದ ಬೀದರನ ಜೇಮಿನಿ ಕಂಪನಿಯಲ್ಲಿ ಕೆಲಸ ಮಾಡಲು ತನ್ನ ಮೋಟಾರ ಸೈಕಲ್ ನಂ. ಎಪಿ-28/ಡಿ.ಎನ್-4515 ನೇದರ ಮೇಲೆ ಹೋಗುವಾಗ ಬೀದರ ಭಾಲ್ಕಿ ರೋಡ ಲಾಲಬಾಗ ಗ್ರಾಮದ ಹತ್ತಿರ ಎದುರಿನಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆ.ಎ-38/ಎಫ್-0996 ನೇದರ ಚಾಲಕನಾದ ಆರೋಪಿ ಚಾಂದಪಾಷಾ ತಂದೆ ಫಕೀರ ಅಹ್ಮದ ಹೈದರ ಕಾಲೋನಿ ಬೀದರ ಇತನ ಸದರಿ ಬಸ್ಸನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಾಲು ಮೋಳಕಾಲ ಡಬ್ಬಿಯ ಮೇಲೆ ಭಾರಿ ರಕ್ತ & ಗುಪ್ತಗಾಯ ಮತ್ತು ಬಲಗಡೆ ತೋಡೆಯ ಮೇಲೆ ಗುಪ್ತಗಾಯ, ಎಡಭುಜದ ಮೇಲೆ ಗುಪ್ತಗಾಯ, ಬಲ ಭುಜದ ಮೇಲೆ ಗುಪ್ತಗಾಯವಾಗಿರುತ್ತದೆ, ಸದರಿ ಘಟನೆಯು ಫಿರ್ಯಾದಿಯ ಹಿಂದೆ ತಮ್ಮ ಮೋಟಾರ ಸೈಕಲ್ ಮೇಲೆ ಬರುತ್ತಿದ್ದ ಸಂಭಂದಿ ಸದಾನಂದ ತಂದೆ ಲವಂಗಪ್ಪಾ ಬಸಪಾಟೀಲ ಹಾಗು ಅಣ್ಣೆಪ್ಪಾ ತಂದೆ ಗುಂಡೆಪ್ಪಾ ಬಸಪಾಟೀಲ ರವರು ಕಣ್ಣಾರೆ ನೋಡಿ ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕುರಿತು ಸದಾನಂದ ರವರು 108 ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಬೀದರನ ಶ್ರೀ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 72/2021, ಕಲಂ. 279, 338 ಐಪಿಸಿ :-
ದಿನಾಂಕ 30-08-2021 ರಂದು ಫಿರ್ಯಾದಿ ರವೀಂದ್ರ ತಂದೆ ಪಂಡಿತ ಜಾಯೆ, ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ನಾರಾಯಣಪೂರ, ತಾ: ಬಸವಕಲ್ಯಾಣ ರವರು ತಮ್ಮ ಚಿಕ್ಕಪ್ಪ ಶರಣಪ್ಪಾ ತಂದೆ ಮಾದಪ್ಪಾ ಜಾಯೇ, ವಯ: 65 ವರ್ಷ ರವರ ಜೊತೆಯಲ್ಲಿ ಇಬ್ಬರು ಖಾಸಗಿ ಕೆಲಸ ಕುರಿತು ಬಸವಕಲ್ಯಾಣಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗಲು ನಾರಾಯಣಪೂರ ಕ್ರಾಸ್ ಕಡೆಗೆ ನಡೆದುಕೊಂಡು ಹೋಗುವಾಗ ರಾಜಕಮಲ ಹೋಟೆಲ ಕ್ರಾಸ್ ಹತ್ತಿರ ಗಾಂಧಿ ಚೌಕ್ ಕಡೆಯಿಂದ ಮೋಟಾರ್ ಸೈಕಲ್ ನಂ. ಕೆಎ-56/ಜೆ-4108 ನೇದರ ಚಾಲಕನಾದ ಆರೋಪಿ ಮೊಹ್ಮದ ತಾಜ್ ತಂದೆ ಮೇಹಬೂಬಸಾಬ ಚುನ್ನೆವಾಲೆ, ವಯ: 19 ವರ್ಷ, ಸಾ: ಕರೀಮ ಕಾಲೋನಿ ಬಸವಕಲ್ಯಾಣ ಇತನು ತನ್ನ ಮೋಟಾರ್ ಸೈಕಲನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಚಿಕ್ಕಪ್ಪನಿಗೆ ಡಿಕ್ಕಿ ಮಾಡಿದನು, ಸದರಿ ಅಪಘಾತದಿಂದ ಅವರ ಎಡಗಡೆ ಹಣೆಗೆ ಭಾರಿ ರಕ್ತಗಾಯ, ಎಡ ಭುಜಕ್ಕೆ ತರಚಿದ ಗಾಯ, ಎಡಗಡೆ ಎದೆಯಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ, ಕೂಡಲೇ ಅವರಿಗೆ ಒಂದು ಆಟೋದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 102/2021, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ಪಪಿಲಾ ಗಂಡ ವೀರಭದ್ರ ಸೂರೆ ಸಾ: ಕಾಸರತುಗಾಂವ ರವರ ಗಂಡ ಸರಾಯಿ ಕುಡಿಯುವ ಚಟದವನಿದ್ದು, ಸರಿಯಾಗಿ ಊಟ ಮಾಡುತ್ತಿರಲಿಲ್ಲ, ಹೀಗಿರುವಾಗ ದಿನಾಂಕ 17-08-2021 ರಂದು ಗಂಡನಿಗೆ ಮೈಯಲ್ಲಿ ಹುಷಾರಿಲ್ಲದ್ದರಿಂದ ಅತ್ತೆ ರಾಚಮ್ಮಾ ಮತ್ತು ನಾದಿನಿ ಸಂಗಿತಾ ಚಾಂಡೇಶ್ವರ ಇವರು ಬೀದರ ಜಿಲ್ಲಾಸ್ಪತ್ರೆಗೆ ತಂದು ಶೇರಿಕ ಮಾಡಿರುತ್ತಾರೆ, ನಂತರ ಗಂಡ ದಿನಾಂಕ 19-08-2021 ರಂದು 0400 ಸುಮಾರಿಗೆ ಫಿರ್ಯಾದಿಯು ಬಹಿರ್ದೆಸೆಗೆಂದು ವಾಶರೂಮಗೆ ಹೋಗಿ ಬಂದು ನೋಡಲು ತನ್ನ ಗಂಡ ಬೆಡ್ ಮೇಲೆ ಇರಲಿಲ್ಲ, ನಂತರ ಫಿರ್ಯದಿಯು ಆಸ್ಪತ್ರೆಯಲ್ಲಿ ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಆತನಿಗೆ ಎಲ್ಲಾ ಕಡೆಗೆ ಹುಡುಕಾಡಿದೂ ಸಹ ಸಿಕ್ಕಿರುವುದಿಲ್ಲ, ಕಾಣೆಯಾದ ಗಂಡನ ವಿವರ 1) ವೀರಭದ್ರಸೂರೆ ತಂದೆ ಗಂಗಾಧರ ವಯ: 40 ವರ್ಷ, 2) ಎತ್ತರ: 5’ 5’’, 3) ಉದ್ದನೆ ಮುಖ ನೇರವಾದ ಮೂಗೂ, ಗೋದಿ ಬಣ್ಣ, ಅಗಲ ಹಣೆ, ಎಡಗಡೆ ಕಣ್ಣಿನ ಎಡಭಾಗದಲ್ಲಿ ಒಂದು ಹಳೆಗಾಯ ಗುರುತು ಇರುತ್ತದೆ, 4) ಧರಿಸಿದ ಬಟ್ಟೆಗಳು: ಕ್ರೀಮ ಕಲರ್ ಶರ್ಟ್, ಬಿಳಿ ಬನಿಯಾನ, ಬಿಳಿ ಶಲ್ಯಾ ಮತ್ತು ಕಪ್ಪು ಬಣ್ಣದ ಪ್ಯಾಂಟ, 5) ಮಾತನಾಡುವ ಭಾಷೆ: ಮರಾಠಿ, ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 30-8-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 100/2021, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 30-08-2021 ರಂದು ಅಂಬೆಸಾಂಗವಿ ಗ್ರಾಮದ ಶಿವಾರದಲ್ಲಿ ನರಸಿಂಗರಾವ
ಮಾನಕರಿ ರವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂದು
ನಂದಕುಮಾರ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ
ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಅಂಬೆಸಾಂಗವಿ ಗ್ರಾಮದ
ನರಸಿಂಗರಾವ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ
1) ಬಾಬುರಾವ ತಂದೆ ಜಮಲು ಜಾಧವ ವಯ: 47 ವರ್ಷ, ಜಾತಿ:
ಲಮಾಣಿ, ಸಾ: ಬೀರಿ (ಬಿ) ತಾಂಡಾ, 2) ಶಿವಗೀರಿ
ತಂದೆ ಪ್ರೆಮಗೀರಿ ವಯ: 53 ವರ್ಷ, ಜಾತಿ: ಗೋಸಾಯಿ, ಸಾ: ಕೊಟಗ್ಯಾಳ
ವಾಡಿ, 3) ವೀರಶೇಟ್ಟಿ ತಂದೆ ಸನ್ಮಕಪ್ಪಾ ಪ್ರಭಾ
ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಅಬೆಸಾಂಗವಿ,
4) ನರಸಿಂಗರಾವ ತಂದೆ ತುಕಾರಾಮ ಮಾನೆ ವಯ:
52 ವರ್ಷ, ಜಾತಿ: ಮರಾಠಾ, ಸಾ: ಅಂಬೆಸಾಂಗವಿ,
5) ಬಸವರಾಜ ತಂದೆ ಅಪ್ಪಾರಾವ ಪ್ರಭಾ ವಯ:
55 ವರ್ಷ, ಜಾತಿ: ಲಿಂಗಾಯತ, ಸಾ: ಅಂಬೆಸಾಂಗವಿ,
6) ರಾಜೇಂದ್ರ ತಂದೆ ಪ್ರೇಮಗೀರ ವಯ: 55 ವರ್ಷ, ಜಾತಿ: ಗೋಸಾಯಿ, ಸಾ: ಕೊಟಗ್ಯಾಳ ವಾಡಿ ಹಾಗೂ 7) ಧನರಾಜ ತಂದೆ ಭವರಾವ ಜೈರಾಮಜಿ ವಯ: 46
ವರ್ಷ, ಜಾತಿ:
ಎಸ್.ಟಿ ಗೊಂಡಾ, ಸಾ: ಭಾಲ್ಕಿ ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ
ನಸಿಬಿನ ಜೂಜಾಟ ಆಡುತ್ತಿರುವಾಗ ಸದರಿ ಆರೋಪಿತರ ಮೇಲೆ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ
ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು 52 ಇಸ್ಪೀಟ
ಎಲೆಗಳು ಹಾಗೂ ನಗದು ಹಣ 10,970/-
ರೂ.
ನೇದವುಗಳನ್ನು ತಾಬೆಗೆ ತೆಗೆದುಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
1 comment:
Kindly update all case till today
Post a Comment