Police Bhavan Kalaburagi

Police Bhavan Kalaburagi

Tuesday, December 26, 2017

KALABURAGI DISTRICT REPORTED CRIMES

ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಭಾಗೀರತಿ ಗಂಡ ಶಿವಶರಣ ನಾಲವಾರ ಸಾ : ಮಾವನೂರ ರವರು ದಿನಾಂಕ: 24-12-2017 ರಂದು ರಾತ್ರಿ ನಮ್ಮ ತಂದೆಯನ್ನು ಮಾವನೂರ ಗ್ರಾಮದ 1] ಭಾಗಣ್ಣ ತಂದೆ ಧೂಳಪ್ಪ ಹೊತಪೇಠ, 2] ಅಮೋಘಿ ತಂದೆ ಧೂಳಪ್ಪ ಹೊತಪೇಠ, 3] ಧರ್ಮಣ್ಣ ತಂದೆ ಧೂಳಪ್ಪ ಹೊತಪೇಠ, 4] ಸಿದ್ದಪ್ಪ ನಿಂಗಪ್ಪ ಸೀತಾಳೆ, 5] ಕೇದಾರಲಿಂಗ ಮಲಕಪ್ಪ ಸೀತಾಳೆ, 6] ಗುರುರೇವಣಸಿದ್ದ ನಿಂಗಪ್ಪ ಕಿರಣಗಿ, 7] ಗುಂಡುರಾವ ಶೇಖಪ್ಪ ಹೇರೂರ, 8] ಮಹಾದೇವಪ್ಪ ನಿಂಗಪ್ಪ ಜೇವರ್ಗಿ , 9] ಬಾಗಣ್ಣ ತಂದೆ ಧರ್ಮಣ್ಣ ಕೊಳಕೂರ,, 10] ಗೊಲ್ಲಾಆಳ ತಂದೆ ಧರ್ಮಣ್ಣ ಕಿರಣಗಿ, 11] ವಿಠ್ಠಲ ತಂದೆ ಸಣ್ಣಭಾಗಣ್ಣ ಕಿರಣಗಿ, 12] ಕೆರಪ್ಪ ತಂದೆ ಸಿದ್ದಪ್ಪ ಹಿರೇಕುರುಬರ 13] ಮಲ್ಲು ತಂದೆ ಕಾಂತಪ್ಪ ಜೇವರಗಿ 14] ಶರಣಪ್ಪ ತಂದೆ ತಿಪ್ಪಣ್ಣ ಆಲೂರ 15] ಮುತ್ತಪ್ಪ ತಂದೆ ಅಮೋಗಿ ಕೋಳಕೂರ 16] ಭೀಮಣ್ಣ ತಂದೆ ನಿಂಗಪ್ಪ ಸಿತಾಳ 17] ಧರ್ಮಣ್ಣ ತಂದೆ ನಿಂಬಣ್ಣ ಗುಡೂರ ಸಾ: ಮಾವನೂರ ಇವರೆಲ್ಲರೂ ಸೇರಿ ನಮ್ಮ ತಂದೆಯನ್ನು ಬಲವಂತವಾಗಿ ಅಟೋದಲ್ಲಿ ಎತ್ತಿ ಹಾಕಿಕೊಂಡು ಹೋಗಿ ರಾಸುಣಗಿಗೆ ಹೋಗಿ ಅಲ್ಲಿ ನಮ್ಮ ತಮ್ಮನಾದ ಸಿದ್ದಣ್ಣ, ಶಿವರುದ್ರಪ್ಪನನ್ನು ನಮಗೆ ಒಪ್ಪಿಸು ಇಲ್ಲದಿದ್ದರೆ ನಿನ್ನನೇ ಕೊಲೆ ಮಾಡಿ ಬಾಯಲ್ಲಿ ತೊಗರಿ ಎಣ್ಣೆಯನ್ನು ಹಾಕಿ ಸಾಯಿಸಿ ರಾತ್ರಿ ಸುಮಾರು 12-00 ಗಂಟೆಗೆ ನಮ್ಮ ತಂದೆಯನ್ನು ನಮ್ಮ ಮನೆಯ ಮುಂದೆ ಎಸೆದು ಫರಾರಿಯಾಗಿದ್ದಾರೆ, ನಾವು ತಕ್ಷಣವೇ ನಮ್ಮ ತಂದೆಯನ್ನು ಜೇವರಗಿ ಆಸ್ಪತ್ರೆಗೆ ತರುವಷ್ಟರಲ್ಲಿ ನಮ್ಮ ತಂದೆ ಜೀವ ಹೋಗಿತ್ತು. ನಾವು ನಮ್ಮ ತಂದೆಯನ್ನು ಗಾಡಿಯಲ್ಲಿ ತಂದು ಹಾಕುವಾಗ ನನಗೆ ಮಗಳೇ ನನಗೆ ಜೀವ ಹೋಗುವ ಹಾಗೆ ಹೊಡೆದು ಬಾಯಿಯಲ್ಲಿ ತೊಗರಿ ಎಣ್ಣೆ ಹಾಕಿದ್ದಾರೆ ನಾನು ಉಳಿಯುವದಿಲ್ಲವೆಂದು ಚಿರಾಡಿದ್ದಾನೆ ತಕ್ಷಣವೇ ಜೇವರಗಿ ಆಸ್ಪತ್ರೆಗೆ ತರುವಷ್ಟರಲ್ಲಿಯೇ ದಾರಿಯಲ್ಲಿಯೇ ಜೀವ ಹೋಗಿರುತ್ತದೆ. ನಮ್ಮ ತಂದೆಯನ್ನು ಕೊಲೆ ಮಾಡಿದ ಎಲ್ಲಾ ಆರೋಪಿಗಳನ್ನು ಶೀಘ್ರ ಬಂಧಿಸಿ ಉಗ್ರವಾದ ಶಿಕ್ಷೆ ನೀಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಅಶ್ವಿನಿ ಗಂಡ ಲಕ್ಷ್ಮೀಕಾಂತ ಪಾಟೀಲ್ ಸಾ: ಅಣ್ಣಾರಾವ್ ಸಣ್ಣಮನಿ ಮನೆ ನಂ 10 ನೀಯರ ಸಂಜನಾ ಆಸ್ಪತ್ರೆ ಹತ್ತಿರ ಆಳಂದ ರೋಡ ಕಲಬುರಗಿ ಹಾ:ವ: ಪ್ಲಾನಂ 41ಮಂಜುನಾಥ ನಿವಾಸ ಎಸ್.ಬಿ.ಐ ಕಾಲೋನಿ ಹೇಳೆ ಜೆವರ್ಗಿ ರೋಡ ಕಲಬುರಗಿ ಇವರು ಲಕ್ಷ್ಮೀಕಾಂತ ಪಾಟೀಲ್ ಪ್ರಿತಿಸಿಕೊಂಡುದ್ದು ನನ್ನ ಮದುವೆ ಮುಂಚೆ ನನ್ನ ತವರು ಮನೆಯಲ್ಲಿ ನನಗೆಂದು ನನ್ನ ತಂದೆ - ತಾಯಿಯವರು ಮಾಡಿ ಇಟ್ಟಿದ ಬಂಗಾರದ ವಡೆವೆಗಳು ಹಾಗೂ ಹಣ ತೆಗೆದುಕೊಂಡು ಬಾ ಎಂದು ನಾವು ರಜಿಸ್ಟರ ಮದುವೆಯಾಗೋಣ ಎಂದು ನನ್ನ ಗಂಡ ಲಕ್ಷ್ಮೀಕಾಂತ ಇತನು ಹೇಳಿದಾಗ ನಾನು ನಮ್ಮ ತವರು ಮನೆಯಲ್ಲಿ ಇದ್ದು ಒಟ್ಟು 15 ತೋಲೆ ಆಭರಣಗಳು ತೆಗೆದುಕೊಂಡು ಹೋಗಿ ದಿನಾಂಕ 27.04.2015 ರಂದು ಸ್ನೆಹಿತರ ಸಮುಖದಲ್ಲಿ ಕಲಬುರಗಿ ನಗರದ ಯಲ್ಲಮ್ಮಾ ಟೆಂಪಲ್ದಲ್ಲಿ ಸದರಿ ಲಕ್ಷ್ಮೀಕಾಂತ ಇತನೋಂದಿಗೆ ಮದುವೆಯಾಗಿರುತ್ತೆವೆ. ನಂತರ ನಾನು ಇಬ್ಬರು ಗಂಡ ಹೆಂಡತಿ ಬೆಂಗಳೂರುಗೆ ಹೋಗಿ 5-6 ತಿಂಗಳು ಇದ್ದು ನಂತರ ನನ್ನ ಗಂಡ ಅವರ ಮನೆಗೆ ಕರೆದುಕೊಂಡು ಬಂದರು ಆಗ ನನ್ನ ಅತ್ತೆ ಹಾಗೂ ನಾದಿನಿಯರು 2-3 ತಿಂಗಳು ಸರಿಯಾಗಿದ್ದು ನಾನು ಆಗ ನಾನು 4 ತಿಂಗಳ ಗರ್ಭಿಣಿಯಾದಗ ನನ್ನ ತಂದೆ - ತಯಿಯವರು ನನ್ನ ಜೋತೆ ಮಾತನಾಡುತ್ತಿದಾಗ ನಾನು ನನ್ನ ತವರು ಮೆನಗೆ ಹೋಗಿ ಬರುತ್ತಿದೆ ಆಗ ನನ್ನತ್ತೆಯಾದ ಮಹಾದೇವಿ , ಹಾಗೂ ನಾದಿನಿ ಜ್ಯೋತಿ ಇಬ್ಬರು ಸೇರಿಕೊಂಡು ನಿನು ಪ್ರಿತಿ ಮಾಡಿ ಮದುವೆ ಮಾಡಿಕೊಂಡಿದಿ ಹಣ ಮತ್ತು ಬಂಗಾರ ತವರು ಮೆನೆಯಿಂದ ತರಬೇಕು ಅಂತಾ ವಿನಾ ಕಾರಣ ಕಿರುಕುಳ ಕೊಡುತ್ತಿದ್ದರು ಆದ ನನ್ನ ಗಂಡ ನಿನ್ನ ತವರು ಮನೆಯಿಂದ 70 ಸಾವಿರ ರೂಪಾಯಿ ತೆಗೆದುಕೊಂಡು ಬಾ ಅಂತಾ ಅಂದಾಗ ನಾನು 70 ಸಾವಿರ ತಂದು ಕೋಟ್ಟಿದ್ದು 2-3 ತಿಂಗಳ ನಂತರ ಕೊಡುತ್ತೆನೆ ಅಂತಾ ಹೇಳಿ ಇಲ್ಲಿಯವರೆಗೆ ಕೊಟ್ಟಿರುವುದಿಲ್ಲಾ ನಂತರ ನನ್ನ 20 ತೋಲೆ ಬಂಗಾರದ ಆಭರಣ ನನ್ನ ಗಂಡ ಮನೆಯಿಂದ ಹೇಳದೆ ಕೇಳದೆ ತೆಗೆದುಕೊಂಡು ಹೋಗಿ ನಂತರ ನಾನು ಕೇಳಿದಾಗ ನಾನು ಬೇರೆಯವರಿಗೆ ಹಣ ಕೊಡಬೇಕಾಗಿದೆ ಅದಕ್ಕೆ ತೆಗೆದುಕೊಂಡು ಹೋಗಿರುತ್ತೆನೆ 4-5 ದಿವಸಗಳಲ್ಲಿ ಮರಳಿ ತಂದು ಕೊಡುತ್ತೆನೆ ಅಂತಾ ಹೇಳಿದವನು 5 ತಿಂಗಳ ವರೆಗೆ ಮರಳಿ ತಂದ್ದಿರುವುದಿಲ್ಲಾ ನಾನು ಕೇಳಿದರೆ ನನಗೆ ಅವಾಚ್ಯವಾಗಿ ಬೈದಿರುತ್ತಾನೆ ದಿನಾಂಕ 22.12.17 ರಂದು ಬೇಳಿಗ್ಗೆ 11 ಗಂಟೆಗೆ ನನ್ನ ಗಂಡ ನಿನು ನಿನ್ನ ತವರು ಮನೆಯಿಂದ ಇನ್ನೊ ಹಣ ಹಾಗೂ ಬಂಗಾರ ತೆಗೆದುಕೊಂಡು ಬಾ ಅಂತಾ ಹೇಳಿ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೋಡೆ ಬಡೆ ಮಾಡಿ ಮಾನಸಿಕ ಕಿರುಕುಳ ಕೋಟ್ಟು ಮನೆಯಿಂದ ಹೋರಗೆ ಹಾಕಿರುತ್ತಾನೆ ಆಗ ನಾನು ನನ್ನ 1 ವರ್ಷದ ಮಗಳೋಂದಿಗೆ ನನ್ನತವರು ಮನೆಗೆ ಹೋಗಿರುತ್ತೆನೆ ಈಗ ನಾನು ಸದ್ಯ ನನ್ನ ತವರು ಮನೆಯಲ್ಲಿ ಇರುತ್ತನೆ ನನ್ನ ಪತಿಯವರ ವಿರುದ್ದ ಡೌರಿ ಕೇಸ್ ಹಾಗೂ ನನ್ನ ತಂದೆ - ತಾಯಿ ಯವರಿಂದ ಪಡೆದ 20 ಸಾವಿರ ರೂಪಾಯಿ ನನ್ನಿಂದ ಪಡೆದ 17 ತೋಲೆ ಬಂಗಾರ ನಿಮಿತ್ಯ ಠಾಣೆಗೆ ದೂರು ಸಲ್ಲಿಸಿದ್ದು ಆದರೆ ಮಾನ್ಯರವರು ನನ್ನಪತಿಯ ಹಾಗೂ ಅತ್ತೆ , ನಾದಿನಿ ರವರ ವಿರುದ್ದ ಯಾವುದೆ ಕ್ರಮ ಕೈಗೋಳದೆ ನ್ಯಾಯ ನೀಡಿರುವುದಿಲ್ಲಾ ನನ್ನ ಪತಿಯವರು ನಾನು ಆತ್ಮ ಹತ್ಯೆ ಮಾಡಿಕೊಂಡು ನುನ್ನ ಮೇಲೆ ಹಾಗೂ ನಿನ್ನ ತಂಧೆ- ತಾಯಿಯವರ ಮೇಲೆ ಹಾಕುತ್ತೆನೆ ಅಂತಾ ಹೆದರಿಸುತ್ತಾನೆ ನನ್ನ ಪತಿಯವರು ಆತ್ಮಹತ್ಯಾ ಮಾಡಿಕೋಂಡಲಿ  ಅವರೆ ಹೋಣೆಗಾರು ಇರುತ್ತಾರೆ ಕಾರಣ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೋಟ್ಟು ತವರು ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂತಾ ನನ್ನ ಗಂಡ ಲಕ್ಷ್ಮೀಕಾಂತ ಅತ್ತೆ ಮಹಾದೆವಿ , ನಾದಿನಿ ಜ್ಯೋತಿ ಇವರ ಮೇಲೆ ಕಾನೂನು ರಿತಿ ಕ್ರಮ ಕೈಗೋಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಕಾಕಸಿಂಗ್ ತಂದೆ ಸತ್ತಪಾಲಸಿಂಗ ಇವರು ಸುಮಾರು 4-5 ವರ್ಷಗಳಿಂದ ನಮ್ಮ ಊರ ಪಕ್ಕದಲ್ಲಿರುವ ಜಸವೀರಸಿಂಗ ಇವರ ರಾಶಿ ಮಶೀನ ಮೇಲೆ ನಾನು ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದು  ನಾನು ಈ ರಾಶಿ ಮéಷಿನ ತೆಗೆದುಕೊಂಡು ಬೆಳೆ ಕಟಾವಿಗೆ ಬಂದಾಗ ಕರ್ನಾಟಕಕ್ಕೆ ಬಂದು ಇಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೆವೆ, ಅದರಂತೆ ಈ ವರ್ಷ ಕೂಡ ಬೆಳೆ ಕಟಾವು ಮಾಡಲು ಮೆಲ್ಕಂಡ ಮಷಿನನ್ನು ತೆಗೆದುಕೊಂಡು ನಾನು ಮತ್ತು ನಮ್ಮೂರಿನ ಜೀಂದರ ತಂದೆ ಪ್ರೀತಮಸಿಂಗ ಸವಾಜಪೂರ ಇತನನ್ನು ಚಾಲಕನಾಗಿ ರಾಶಿ ಮಶೀನ ಮೇಲೆ ಹೇಲ್ಪರ್ ಅಂತಾ ಗಗನದೀಪಸಿಂಗ ತಂದೆ ಜಕಪಾಲಸಿಂಗ ಸಾ: ಕಕ್ಕರಾಲ್ ಪೋ; ವಾಜಿದಪೂರ ನಾವು ಮೂರು ಜನರು ಈಗ ಸುಮಾರು 10 ದಿವಸಗಳ ಹಿಂದೆ ನಮ್ಮೂರಿನಿಂದ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಕಮಲಾಪೂರ ಗ್ರಾಮಕ್ಕೆ ಬಂದು ಎರಡು ದಿವಸಗಳ ಹಿಂದೆ ಓಕಳಿ ಗ್ರಾಮದಲ್ಲಿ ತೋಗರಿ ರಾಶಿ ಮಾಡಿಕೊಂಡು ನಿನ್ನೆ ಮಧ್ಯಾಹ್ನ ಕಮಲಾಪೂರ ಗ್ರಾಮದ ಡಿ.ಎಮ್.ಕೆ ಪೇಟ್ರೊಲ್ ಪಂಪಿನಲ್ಲಿ ನಮ್ಮ ರಾಶಿ ಮಶೀನ ನಿಲ್ಲಿಸಿ, ನಾನು ಮತ್ತು ನಮ್ಮ ಚಾಲಕ ಜೀಂದರ ಇಬ್ಬರು ಮೋ.ಸೈಕಲ್ ಮೇಲೆ ಹುಮನಾಬಾದ ಕಡೆಗೆ ಕೆಲಸ ಹುಡುಕಾಡಲು ಸಾಯಂಕಾಲ 6 ಗಂಟೆ ಸುಮಾರಿಗೆ ಹೊರಟು ಮಷಿನ ಹತ್ತಿರ ಗಗನದೀಪಸಿಂಗ ಇತನ್ನು ಬಿಟ್ಟು ಹೋಗುವಾಗ ಪೆಟ್ರೋಲ ಪಂಪನಲ್ಲಿ ಕೆಲಸ ಮಾಡುವ ರೇವಣಸಿದ್ದಪ್ಪ ತಂದೆ ಗುರುಲಿಂಗಪ್ಪ ತವಡಿ ಇವರಿಗೆ ಹೇಳಿ ಹೋಗಿದ್ದು ಇರುತ್ತದೆ. ರಾತ್ರಿ ಅಲ್ಲೆ ಉಳಿದುಕೊಂಡು ಬೆಳಗ್ಗೆ ಪುನ: ನಾವಿಬ್ಬರು ತೋಗರಿ ಹೋಲಗಳನ್ನು ನೋಡುತ್ತಿದ್ದಾಗ ಬೆಳಗ್ಗೆ 08-00 ಗಂಟೆಯ ಸುಮಾರಿಗೆ ಕಮಲಾಪೂರದ ಡಿ.ಎಮ್.ಕೆ ಪೆಟ್ರೋಲ್ ಪಂಪ್ದಲ್ಲಿ ಕೆಲಸ ಮಾಡುವ ರೇವಣಸಿದ್ದಪ್ಪ ತಂದೆ ಗುರುಲಿಂಗಪ್ಪ ತವಡಿ ಇವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಿಮ್ಮ ಹೆಲ್ಪರ್ ಗಗನದೀಪಸಿಂಗ ಈತನು ಸಂಡಾಸ ಮುಗಿಸಿಕೊಂಡು ರಸ್ತೆ ದಾಟಿ ಬರುವಾಗ  ನಮ್ಮ ಪೆಟ್ರೋಲ ಪಂಪ ಎದುರಿನ ಹೆದ್ದಾರಿಯ ಮೇಲೆ ರಸ್ತೆ ಅಪಘಾತವಾಗಿ ಅವನು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಹೇಳಿದ ಕೂಡಲೆ ನಾವಿಬ್ಬರು ಕೂಡಿಕೊಂಡು ಬೆಳಿಗ್ಗೆ ಸ್ಥಳಕ್ಕೆ ಬಂದು ನೋಡಲಾಗಿ, ನಮ್ಮ ಹೆಲ್ಪರ್ ಗಗನದೀಪಸಿಂಗನದೆ ಶವವು ರಸ್ತೆಯ ಕಲಬುರಗಿಯ ಕಡೆಗೆ ಎಡಗಡೆ ತಗ್ಗಿನಲ್ಲಿ ಬಿದ್ದಿದ್ದು  ರೇವಣಸಿದ್ದಪ್ಪ ಹೇಳಿದ ವಿಷಯ ನಿಜವಿದ್ದು ಗಗನದೀಪಸಿಂಗನಿಗೆ ನಾನು ಮತ್ತು ಜೀಂದಾರ ಹಾಗೂ ರೇವಣಸಿದಪ್ಪ ನೋಡಲಾಗಿ ಗಗನದೀಪಸಿಂಗನ ಎಡಗೈ ಹಸ್ತದ ಮೇಲ್ಭಾಗದಲ್ಲಿ ಮತ್ತು ಅಲ್ಲಲಿ ತರಚಿದ ಗಾಯಗಳಾಗಿದ್ದು, ಎಡ ಮೋಣಕಾಲಿನ ಮೇಲ್ಭಾಗದಿಂದ ಎಡ ಕುಂಡಿಯ ಕದದವರೆಗೆ ಎಲುಬು ಮುರಿದ್ದು ಮೌಂಸ ಖಂಡ ಹೊರಗೆ ಬಂದು ಭಾರಿ ರಕ್ತಗಾಯವಾಗಿರುತ್ತದೆ. ಬಲಗಾಲಿನ ಮೋಣಕಾಲಿನ ಹಿಂಬಾಗದಲ್ಲಿ ಮತ್ತು ಮೋಣಕಾಲಿನ ಕೆಳಗೆ ಭಾರಿಗಾಯವಾಗಿದ್ದು, ಬಲ ತೊಡೆಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು, ಎಡ ಹಣೆಯ ಮೇಲೆ ತರಚಿದ ಗಾಯ, ಬಲ ಕಿವಿಮೂಗಿನಿಂದ, ಎಡ ಕಣ್ಣಿನಿಂದ ರಕ್ತ ಬರುತ್ತಿದ್ದು ರೋಡಿನ ಸ್ವಲ್ಪ ಮುಂದುಗಡೆ ಕಬ್ಬು ತುಂಬಿಕೊಂಡು ನಿಂತಿದ್ದ ಲಾರಿಯನ್ನು ನೋಡಲಾಗಿ ಅದರ ಬಗ್ಗೆ ರೇವಣಸಿದ್ದಪ್ಪ ಈತನಿಗೆ ವಿಚಾರ ಮಾಡಲಾಗಿ ಗಗನದೀಪಸಿಂಗನಿಗೆ ಎಮ್.ಹೆಚ್-26-ಎಡಿ-1784 ನೇದ್ದರ ಚಾಲಕನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿ ನಿಮ್ಮ ಹೆಲ್ಪರ್ ಗಗನಸಿಂಗನಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಜಿಂದಾರ ಇಬ್ಬರು ಕೂಡಿಕೊಂಡು ಲಾರಿಯ ಹತ್ತಿರ ಹೋಗಿ ನೋಡಲಾಗಿ ಲಾರಿ ನಂ. ಎಮ್.ಹೆಚ್-26-ಎಡಿ-1784 ನೇದ್ದು ಇದ್ದು ಅದರ ಟೈರುಗಳಿಗೆ ರಕ್ತ ಹತ್ತಿದ್ದು ಅಶೋಕ ಲೈಲ್ಯಾಂಡ್ ಕಂಪನಿಯನೇದ್ದು ಇರುತ್ತದೆ.  ಲಾರಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 24-12-2017 ರಂದು ಕಂದಾಯ ನಿರೀಕ್ಷಕರು ಕರಜಗಿ ಶ್ರೀ ಶ್ರೀಶೈಲ ನಂದಿಕೋಲ ರವರು ಗಸ್ತು ತಿರುಗುತ್ತಿದ್ದಾಗ (ಮಾನ್ಯ ಸಹಾಯಕ ಆಯುಕ್ತಕರು & ಮಾನ್ಯ ತಹಸಿಲ್ದಾರರೊಂದಿಗೆ) ಬೆಳಿಗ್ಗೆ 5 ಗಂಟೆ 30 ನಿಮಿಷಕ್ಕೆ ಶೇಷಗಿರಿಯಿಂದ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಶಿರವಾಳ ಗ್ರಾಮದ ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಸದರಿ ವಾಹನಗಳನ್ನು ತಡೆದು ನಿಲ್ಲಿಸಲಾಯಿತು, ಸದರಿ ವಾಹನಗಳ ಟಿಪ್ಪರ ಸಂಖ್ಯೆ ಕೆಎ-32 ಸಿ-5478 ಮತ್ತು ಕೆಎ28-ಸಿ 6956 ಇರುತ್ತವೆ. ಸದರಿ ವಾಹಗಳ ಚಾಲಕರು ಟಿಪ್ಪರ (ಭಾರತ ಬೆಂಜ್‍) ನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾರೆ. ಸದರಿ ವಾಹನಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರಿಂದ ಈ ಟಿಪ್ಪರಗಳ ಮಾಲಿಕರ ಮತ್ತು ಚಾಲಕರ ಮೇಲೆ   ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 24.12.2017 ರಂದು ಬೆಳ್ಳಿಗ್ಗೆ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಮದಿನಾ ಕಾಲೋನಿಯ ಇದಗಾ ಮೈದಾನ ಹತ್ತಿರ ರಸ್ತೆಯ ಮೇಲೆ ಟಿಪ್ಪರದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಮದಿನಾ ಕಾಲೋನಿಯ ಇದಗಾ ಮೈದಾನ ಹತ್ತಿರ ರಸ್ತೆಯ ಮೇಲೆ ಹೊಗುತ್ತಿದ್ದಂತೆ ನಮ್ಮ ಮುಂದೆ ಒಂದು ಟಿಪ್ಪರ ಲಾರಿ ಬರುತ್ತಿದ್ದು ಸದರಿ ಟಿಪ್ಪರ ಚಾಲಕನು ನಮ್ಮ ಪೊಲೀಸ ಜೀಪನ್ನು ನೋಡಿ ತನ್ನ ಟಿಪ್ಪರನ್ನು ಅಲ್ಲೆ ನಿಲ್ಲಿಸಿ ಓಡಿ ಹೋಗಿದ್ದು ನಂತರ ನಾವು ಟಿಪ್ಪರ ಹತ್ತಿರ ಹೋಗಿ ನೋಡಲು ಸದರಿ ಟಿಪ್ಪರ ನಂ ಎಮ್.ಎಚ್. 04 ಸಿಪಿ 4610 ಅಂತ ಇದ್ದು. ನಂತರ ನಾನು ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲು ಅದರಲ್ಲಿ ಅಂದಾಜ 3 ಬ್ರಾಸ ಕೆಂಪುಮರಳು ಇದ್ದು ನಂತರ ಸದರಿ ಟಿಪ್ಪರ ಕ್ಯಾಬಿನ ಒಳಗೆ ಹೋಗಿ ಕ್ಯಾಬಿನ ಪರಿಸಿಲಿಸಿ ನೋಡಲು ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಯಾವುದೆ ದಾಖಲಾತಿಗಳು ಲಭ್ಯವಾಗಿರುವದಿಲ್ಲ. ಸದರಿ ಟಿಪ್ಪರ ಚಾಲಕ ಮತ್ತು ಟಿಪ್ಪರ ಮಾಲಿಕ ಕೂಡಿಕೊಂಡು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಟಿಪ್ಪರ ನಂ ಎಮ್.ಎಚ್. 04 ಸಿಪಿ 4610 ನೇದ್ದು ಅ:ಕಿ: 3 ಲಕ್ಷ ರೂ ಟಿಪ್ಪರದಲಿದ್ದ ಅಂದಾಜ 3 ಬ್ರಾಸ ಕೆಂಪು ಮರಳು ಅ:ಕಿ: 6,000/- ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

Monday, December 25, 2017

BIDAR DISTRICT DAILY CRIME UPDATE 25-12-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-12-2017

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 138/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 24-12-2017 ರಂದು ಫಿರ್ಯಾದಿ ಲೊಕೇಶ ತಂದೆ ಝರೇಪ್ಪ ವಯ: 25 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಲೇಬರ ಕಾಲೋನಿ ಶಾಹಗಂಜ ಬೀದರ ರವರು ಜನವಾಡ ರಸ್ತೆಯ ಬಸ್ ನಿಲ್ದಾಣದ ಹತ್ತಿರ ನಿಂತಿರುವಾಗ ಫಿರ್ಯಾದಿಯವರ ಅಜ್ಜಿಯಾದ ತೇಜಮ್ಮಾ ಗಂಡ ಲಕ್ಷ್ಮಣ ವಯ: 75 ವರ್ಷ ಇವರು ಜನವಾಡ ಸಿದ್ದಾರ್ಥ ಕಾಲೇಜ ಚೌರಸ್ಥಾ ಕಡೆಯಿಂದ ಶಾಹಗಂಜ ಕಡೆಗೆ ಹೋಗಲು ಜನವಾಡ ಡಾ|| ಬಿ.ಆರ್ ಅಂಬೇಡ್ಕರ ವೃತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಜನವಾಡ ರಸ್ತೆಯ ಬಸ್ ನಿಲ್ದಾಣದ ಎದುರಿಗೆ ಇರುವ ಹಿಂದುಳಿದ ವರ್ಗಗಳ ವಸತಿ ನಿಲಯ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಕ್ರೂಜರ್ ಜೀಪ್ ನಂ. ಕೆಎ-38/ಎಮ್-1151 ನೇದ್ದರ ಚಾಲಕನಾದ ಆರೋಪಿಯು ತನ್ನ ಜೀಪನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ಹಿಂದಕ್ಕೆ (ರಿವರ್ಸ್) ಚಲಾಯಿಸಿ ಹಿಂದೆ ಬರುತ್ತಿದ್ದ ಫಿರ್ಯಾದಿಯವರ ಅಜ್ಜಿ ತೇಜಮ್ಮಾ ಇವಳಿಗೆ ಡಿಕ್ಕಿ ಮಾಡಿ ತನ್ನ ಕ್ರೂಜರ್ ಜೀಪನ್ನು ಡಾ|| ಬಿ.ಆರ್.ಅಂಬೇಡ್ಕರ ವೃತ್ತದ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಅಜ್ಜಿಗೆ ಬಲಗಾಲ ಪಾದಕ್ಕೆ ಭಾರಿ ರಕ್ತಗಾಯ ಹಾಗೂ ಎಡಗಾಲ ಪಾದಕ್ಕೆ ರಕ್ತಗಾಯವಾಗಿರುತ್ತದೆ, ಆಗ ಫಿರ್ಯಾದಿಯು ಗಾಯಗೊಂಡ ಮ್ಮ ಅಜ್ಜಿಗೆ ಚಿಕಿತ್ಸೆ ಕುರಿತು ಬೇರೊಂದು ವಾಹನದಲ್ಲಿ ಹಾಕಿಕೊಂಡು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ  ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 281/2017, PÀ®A. 379 L¦¹ eÉÆvÉ 102 ¹.Dgï.¦.¹ :-
ದಿನಾಂಕ 24-12-2017 ರಂದು ಭಾಲ್ಕಿಯ ಜನತಾ ಕಾಲೋನಿಯಲ್ಲಿ ಒಬ್ಬ ವ್ಯಕ್ತಿ ಮೋಟಾರ ಸೈಕಲ ಮತ್ತು ಮೋಬೈಲಗಳು ಕಳವು ಮಾಡಿಕೊಂಡು ಬಂದು ಮಾರಾಟ ಮಾಡುವ ಕುರಿತು ತನ್ನ ವಶದಲ್ಲಿ ಇಟ್ಟುಕೊಂಡಿರುತ್ತಾನೆಂದು ಮಾಣಿಕರಾವ ಎ.ಎಸ್.ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಎ.ಎಸ್.ಐ ರವರು ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜನತಾ ಕಾಲೋನಿಯ ಸತ್ಯ ಸಾಯಿ ಪಬ್ಲೀಕ ಶಾಲೆ ಹತ್ತಿರ ಹೋಗಿ ಓಣಿಯಲ್ಲಿ ಹೋಗುವಾಗ ಆರೋಪಿ ಜಿತೇಶ ತಂದೆ ಬಾಬುರಾವ ಸಂಗಮಕರ ವಯ 23 ವರ್ಷ, ಸಾ: ಜನತಾ ಕಾಲೋನಿ ಭಾಲ್ಕಿ ಇತನು ತನ್ನ ಮನೆಯ ಮುಂದೆ ಮೂರು ಮೋಟಾರ ಸೈಕಲಗಳನ್ನು ನಿಲ್ಲಿಸಿ ಅವುಗಳನ್ನು ನೋಡುತ್ತಾ ನಿಂತಿದ್ದು, ಎ.ಎಸ್.ಐ ರವರಿಗೆ ನೋಡಿ ಓಡಿ ಹೋಗುವಾಗ ಅವನಿಗೆ ಬೆನ್ನತ್ತಿ ಹಿಡಿದು ಅವನಿಗೆ ಅವನ ಮನೆಯ ಮುಂದೆ ನಿಲ್ಲಿಸಿದ ಮೋಟಾರ ಸೈಕಲಗಳ ದಾಖಲಾತಿಗಳ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಯಾವದೆ ದಾಖಲಾತಿಗಳು ಇರುವದಿಲ್ಲಾ ಇವುಗಳು ಉದಗೀರ ಪಟ್ಟಣದಲ್ಲಿ ಕಳವು ಮಾಡಿಕೊಂಡು ಬಂದಿದ್ದು ಇರುತ್ತವೆ ಅಂತಾ ತಿಳಿಸಿದನು, ನಂತರ ಪಂಚರ ಸಮಕ್ಷಮ ಅವನಿಗೆ ಚೆಕ್ಕ ಮಾಡಲು ಅವನ ಪ್ಯಾಂಟಿನ ಜೇಬುಗಳಲ್ಲಿ 6 ಮೋಬೈಲಗಳು ಸಿಕ್ಕಿದ್ದು, ಅವುಗಳ ದಾಖಲಾತಿಗಳು ಹಾಜರ ಪಡಿಸುವಂತೆ ತಿಳಿಸಿದಾಗ ಇವುಗಳ ಬಗ್ಗೆಯು ಯಾವದೆ ದಾಖಲಾತಿಗಳು ಇರುವದಿಲ್ಲಾ ಅಲ್ಲಲ್ಲಿ ಕಳವು ಮಾಡಿಕೊಂಡು ಬಂದಿದ್ದು ಇರುತ್ತವೆ ಅಂತಾ ತಿಳಿಸಿದ್ದರಿಂದ ಸದರಿ ಮೋಟಾರ ಸೈಕಲಗಳು ಮತ್ತು ಮೊಬೈಲಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿಗೆ ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 201/2017, ಕಲಂ. 379 ಐಪಿಸಿ :-
ದಿನಾಂಕ 14-12-2017 ರಂದು ಕಮಲನಗರ ಗ್ರಾಮದ ವಾರ್ಡ ನಂ. 1 ರ ಹತ್ತಿರ ಇರುವ ನೀರಿನ ಟ್ಯಾಂಕರ ಹತ್ತಿರ ಬೋರ ಕೆಟ್ಟಿದ್ದರಿಂದ ಮೆಕಾನಿಕ ಮೋಟಾರ ರೀಪೇರಿಗಾಗಿ ತೆಗೆದುಕೊಂಡು ಹೊಗುವಾಗ ಜಿ1 ಪೈಪಗಳು (53) ಹಾಗು ಕೇಬಲ 4 ಎಸ್‌.ಕ್ಯೂ.ಎಮ್‌.ಎಮ್‌ ಸುಮಾರು 600 ಫಿಟ ಬೋರ ಮೇಲಗಡೆ ಇಡಲಾಗಿತ್ತು, ರಾತ್ರಿ ವೇಳೆಯಲ್ಲಿ ಯಾರೋ ಸದರಿ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ವಿನೋದ ಕುಲಕರ್ಣಿ ಪಿಡಿಓ  ಗ್ರಾಮ ಪಂಚಾಯತ ಕಮಲನಗರ ರವರ ಹೇಳಿಕೆ ಸಾರಾಂಶದ ಮೇರೆಗೆ  ದಿನಾಂಕ 24-12-2017 ರಂದು ಪ್ರಕರಣ ದಾಖಲಿಸಿಕೊಡು ತನಿಖೆ ಕೈಗೊಳ್ಳಲಾಗಿದೆ.