Police Bhavan Kalaburagi

Police Bhavan Kalaburagi

Monday, September 30, 2019

BIDAR DISTRICT DAILY CRIME UPDATE 30-09-2019

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-09-2019

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 28-09-2019 ಫಿರ್ಯಾದಿ ಲಕ್ಷ್ಮೀಬಾಯಿ ಗಂಡ ಸತೀಷ ಜಾಧವ ಸಾ: ಸಾವಳಿ, ಸದ್ಯ: ಡೊಣಗಾಪೂರ ರವರ ಗಂಡನಾದ ಸತೀಷ ತಂದೆ ಚಿಮಣಾಜಿ ಜಾಧವ ವಯ: 35 ವರ್ಷ, ಸಾ: ಸಾವಳಿ  ರವರು ಡೊಣಗಾಪೂರ ಶಿವಾರದ ಮಲ್ಲಪ್ಪಾ ಕುಲಕರ್ಣಿ ರವರ ಹೊಲದಲ್ಲಿ ಅವರ ಎತ್ತುಗಳ ಮೈ ತೊಳೆಯಲು ಮಾಂಜ್ರಾ ನದಿಯ ನೀರಿನಲ್ಲಿ ಹೋಗಿ ಎತ್ತುಗಳ ಮೈ ತೊಳೆಯುವಾಗ ಒಮ್ಮೆಲೆ ಗಂಡ ಸತಿಷ ರವರು ನೀರಿನಲ್ಲಿ ಮುಳಗಿ ಮ್ರತಪಟ್ಟಿರುತ್ತಾರೆ, ಅವರ ಮ್ರತ ದೇಹ ದಿನಾಂಕ 29-09-2019 ರಂದು 1200 ಗಂಟೆಗೆ ಮಾಂಜ್ರಾ ನದಿಯ ನೀರಿನ ಮೇಲೆ ತೇಲಿರುತ್ತದೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವದಿಲ್ಲಾ ಅಂತ ನೀಡಿದ ಫಿರ್ಯಾದಿಯವರ ಲಿಖಿತ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 22/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 29-09-2019 ರಂದು ಫಿರ್ಯಾದಿ ಸಂಜೀವಕುಮಾರ ತಂದೆ ನರಸಿಂಗರಾವ ವಯ: 45 ವರ್ಷ, ಜಾತಿ: ಬುರುಡ,  ಉ: ಭಾರತೀಯ ಪುರಾತತ್ವ ಇಲಖೆ ಬೀದರನಲ್ಲಿ ಸ್ವಾರಕ ಸಂರಕ್ಷಕರು, ಸಾ: ಮನೆ ಸಂ. 9-7-344 ಖಾಜಿ ಕಾಲೊನಿ ಬೀದರ ರವರು ಸಬ್ಬಲ್ ಬರೀದ ಗಾರ್ಡನ ಮೇನ ಗೇಟ್ ತೆಗೆದು ನಂತರ ಅಂದಾಜು 1400 ಗಂಟೆಗೆ ಪುನಃ ರೌಂಡಿಗ್ ಮೇಲೆ ಸಬ್ಬಲ ಬರೀದಗೆ ಬಂದಾಗ ಗೊತ್ತಾಗಿದ್ದೆನೆಂದರೆ ಸಬ್ಬಲ ಬರೀದ ಗಾರ್ಡನ ಪುರ್ವ ದಿಕ್ಕಿಗೆ ಒಬ್ಬ ಅಪರಿಚಿತ ವ್ಯಕ್ತಿಯು ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆಂದು ಗೊತ್ತಾಗಿ ಫಿರ್ಯಾದಿ ಮತ್ತು ಲೇಬರ ಪಂಢರಿ ಇಬ್ಬರು ಕೂಡಿ ಹೋಗಿ ನೋಡಲಾಗಿ ಒಂದು ಜಂಗ್ಲಿ ಮರದ ಟೊಂಗೆಗೆ ತನ್ನ ಅಂಗಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ನೋಡಿದ್ದು, ಸದರಿ ಅಪರಿಚಿತ ವ್ಯಕ್ತಿಯ ವಯಸ್ಸು 35-40 ವರ್ಷ ಇರುತ್ತದೆ, ಸದರಿಯವನು ಯಾವ ಕಾರಣಕ್ಕೆ ಮೃತಪಟ್ಟಿರುತ್ತಾನೆಂದು ಗೊತ್ತಿರುವುದಿಲ್ಲಾ, ಸದರಿ ಅಪರಿಚಿತ ವ್ಯಕ್ತಿಯು ದಿನಾಂಕ 29-09-2019 ರಂದು 0600 ಗಂಟೆಯಿಂದ 1400 ಗಂಟೆಯ ಅವಧಿಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 105/2019, ಕಲಂ. 279, 337, 338 ಐಪಿಸಿ :-
ದಿನಾಂಕ 29-09-2019 ರಂದು ಫಿರ್ಯಾದಿ ಬಸವರಾಜ ತಂದೆ ಚಂದ್ರಕಾಂತ ಜಪನಬಾಯಿ, ವಯ: 22 ವರ್ಷ, ಜಾತಿ: ಕಬ್ಬಲಿಗ, ಸಾ: ಉಡಬಾಳ ರವರು ತಮ್ಮ ಭಾವನಾದ ರಮೇಶ ತಂದೆ ಶರಣಪ್ಪಾ ಮಾಚೆನೊರ ವಯ: 28 ವರ್ಷ ಇಬ್ಬರೂ ತಮ್ಮೂರಿನಿಂದ ಚಿಟಗುಪ್ಪಾಕ್ಕೆ ಮೋಟರ ಸೈಕಲ ನಂ. ಎಪಿ-28/ಎಸಿ-9568 ನೇದರ ಮೇಲೆ ಬಂದು ಮರಳಿ ತಮ್ಮೂರಿಗೆ ಹೋಗುವಾಗ ರಮೇಶ ರವರು ಮೋಟರ ಸೈಕಲನ್ನು ಚಲಾಯಿಸುತ್ತಿದ್ದು ಅವರು ಚಿಟಗುಪ್ಪಾ-ಉಡಬಾಳ ರೋಡ ಮೇಲೆ ಕ್ರೀಶ್ಚಿಯನ ರುದ್ರ ಭೂಮಿ ಹತ್ತಿರ ಮೋಟರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ಫಿರ್ಯಾದಿಯ ಎಡಗಣ್ಣಿನ ಹತ್ತಿರ, ಎರಡೂ ಭುಜಗಳಿಗೆ ತರಚಿದ ಗಾಯಗಳಾಗಿದ್ದು, ರಮೇಶ ರವರಿಗೆ ತಲೆ ಹಿಂದೆ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿ ಎರಡು ಕಿವಿಯಿಂದ ರಕ್ತಸ್ರಾವವಾಗಿರುತ್ತದೆ, ಬಲಗಣ್ಣಿನ ಹತ್ತಿರ ತರಚಿದಗಾಯಗಳಾಗಿ ಬೇಹೋಷಾಗಿರುತ್ತಾರೆ, ನಂತರ ದಾರಿ ಹೋಕರು ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 160/2019, ಕಲಂ. 379 ಐಪಿಸಿ :-
ಫಿರ್ಯಾದಿ ಅಬ್ದುಲ್ ಜುನೇದ ತಂದೆ ಅಬ್ದುಲ ನಜೀರ ವಯ: 23 ವರ್ಷ, ಸಾ: ಮಾಸೂಮ ಪಾಶಾ ಕಾಲೋನಿ ಭಾಲ್ಕಿ ರವರು ಭಾಲ್ಕಿಯ ಚೂಡಿ ಬಜಾರದಲ್ಲಿ ಮೇನ್ಸ ಟೇಲರ ಮತ್ತು ಬಟ್ಟೆ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 25-09-2019 ರಂದು 2130 ಗಂಟಗೆ ತನ್ನ ಅಂಗಡಿಯನ್ನು ಬಂದು ಮಾಡಿ ತನ್ನ ಹೊಂಡಾ ಲಿವೊ ಮೋಟರ ಸೈಕಲ ನಂ. ಕೆಎ-39/ಕ್ಯೂ-0063, ಬಣ್ಣ ಕಪ್ಪು ನೇದನ್ನು ಅಂಗಡಿ ಹತ್ತಿರ ಪಾರ್ಕ ಮಾಡಿ ತನಗೆ ಅವಶ್ಯಕ ಕೆಲಸವಿದ್ದ ಕಾರಣ ತನ್ನ ಗೆಳೆಯನ ಜೊತೆ ಕಾರನಲ್ಲಿ ಬೀದರಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ದಿನಾಂಕ 26-09-2019 ರಂದು ತನ್ನ ಅಂಗಡಿ ಹತ್ತಿರ ಬಂದು ನೋಡಲು ಫಿರ್ಯಾದಿಯು ನಿಲ್ಲಿಸಿ ಹೋದ ಸದರಿ ಮೋಟಾರ ಸೈಕಲ ಇರಲಿಲ್ಲ, ನಂತರ ಫಿರ್ಯಾದಿಯು ಅಂದಿನಿಂದ ಇಂದಿನವರೆಗೂ ತನ್ನ ಮೋಟರ ಸೈಕಲನ್ನು ಎಲ್ಲಾ ಕಡೆ ಹುಡುಕಾಡಿದರೂ ಸಹ ಎಲ್ಲಿಯೂ ಪತ್ತೆ ಆಗಿರುವದಿಲ್ಲ, ಫಿರ್ಯಾದಿಯವರ ಮೋಟಾರ್ ಸೈಕಲ್ ನಂ. ಕೆಎ-39/ಕ್ಯೂ-0063, ಅ.ಕಿ 40,000/- ರೂ. ಬೆಲೆವುಳ್ಳದ್ದು ಯಾರೋ ಕಳ್ಳರು ದಿನಾಂಕ 25-09-2019 ರಂದು 2130 ಗಂಟೆಯಿಂದ ದಿನಾಂಕ 26-09-2019 ರಂದು 0030 ಗಂಟೆಯ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಫಿರ್ಯಾದಿಯವರು ದಿನಾಂಕ 29-09-2019 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Sunday, September 29, 2019

KALABURAGI DISTRICT REPORTED CRIMES

ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ದೇವಕಿ ಗಂಡ ಶಿವರಾಯ ನಾಯಿಕೊಡಿ ಸಾ|| ಮಾರಡಗಿ (ಎಸ್.ಎ) ರವರ ಮಗ  ವಿಶ್ವರಾಧ್ಯ @ ಈಶಪ್ಪ ತಂದೆ ಶಿವರಾಯ ನಾಯಿಕೊಡಿ ರವರು  ತನ್ನ ಕೃಷಿ ಚಟುವಟಿಕೆಗಾಗಿ ಐ.ಸಿ.ಐ.ಸಿ ಬ್ಯಾಂಕ್ ಜೇವರಗಿ ಶಾಖೆ ಮತ್ತು ಊರಲ್ಲಿ ಅವರಿವರ ಹತ್ತಿರ ಒಟ್ಟು 6.71.000/- ರೂ ಸಾಲ ಮಾಡಿಕೊಂಡಿರುತ್ತಾನೆ. ಸಮಯಕ್ಕೆ ಸರಿಯಾಗೇ ಮಳೆ ಬಾರದ ಕಾರಣ ಬೇಳೆ ಬಾರದೆ ಮಾಡಿರುವ ಹೇಗೆ ತೀರಿಸಬೇಕೆಂದು ಚಿಂತೆ ಮಾಡಿ ಸಾಲದ ಬಾದೆಯಿಂದ ದಿನಾಂಕ 09.09.19 ರಂದು ಬೇಳಗ್ಗೆ 03:00 ಸುಮಾರಿಗೆ ತಾನು ಮನೆಯಲ್ಲಿ ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಚಿಕಿತ್ಸೆ ಗುಣಮುಖವಾಗದೆ ನಿನ್ನೆ ದಿನಾಂಕ 26.09.2019 ರಂದು 23:40 ಕ್ಕೆ ಸರಕಾರಿ ಆಸ್ಪತ್ರ  ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳೆ ನಾಶ ಮಾಡಿ ಜೀವದ ಭಯ ಹಾಕಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಅಪ್ಪಣ್ಣಗೌಡ ತಂದೆ ಸಿದ್ದರಾಮಪ್ಪ ಇಟಗಿ ಸಾ; ಬಿರಾಳ (ಕೆ) ತಾ; ಜೇವರ್ಗಿ ಹಾ,ವ ಗಾಬರೆ ಲೇಔಟ್ ಸಿದ್ದೇಶ್ವರ ಕಲ್ಯಾಣ ಮಂಟಪ ಹತ್ತಿರ ಕಲಬುರಗಿ  ರವರದು; ಜೇವರ್ಗಿ ತಾಲೂಕಿನ ಹೊನ್ನಾಳ ಗ್ರಾಮ ಸೀಮಾಂತರದ ಜಮೀನು ಸರ್ವೇ ನಂ; 43/ಅ ವಿಸ್ತೀರ್ಣ 10 ಎಕರೆ 13 ಗುಂಟೆ ಹಾಗು 43/ಆ ವಿಸ್ತೀರ್ಣ 9 ಎಕರೆ 29 ಗುಂಟೆ ಜಮೀನು ಇದ್ದು ಸದರಿ ಜಮೀನು ನನ್ನ ಮಗ ಶರಣು ಈತನ ಹೆಸರಿನಲ್ಲಿ ಇರುತ್ತದೆ. ಈ ಜಮೀನು ನಾವು ಉಳುಮೆ ಮಾಡುತ್ತಾ ಬಂದು ಸಾಗುವಳಿ ಮಾಡುತ್ತಾ ಬಂದಿರುತ್ತೇವೆ. 1) ಸಂಗಣ್ಣಗೌಡ ತಂದೆ ಲಿಂಗನಗೌಡ 2) ಭೀಮರಾಯಗೌಡ ತಂದೆ ಲಿಂಗನಗೌಡ 3) ಶರಣಗೌಡ ತಂದೆ ಲಿಂಗನಗೌಡ ಇವರು ಜಮೀನು ತಮಗೆ ಸೇರಿರುತ್ತದೆ ಎಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಈ ವಿಷಯದಲ್ಲಿ ಅವರು ನಮ್ಮೊಂದಿಗೆ ವೈಮನಸ್ಸು ಹೊಂದಿರುತ್ತಾರೆ. ದಿನಾಂಕ; 20.09.2019 ಹಾಗು ದಿ; 21.09.2019 ರಂದು ಈ ಎರಡು ದಿನ ಈ ಮೇಲೆ ನಮೂದಿಸಿದ ಜಮೀನಿನಲ್ಲಿನ ತೊಗರೆ ಬೆಳೆಯನ್ನು ಹೊನ್ನಾಳ ಗ್ರಾಮದ 1) ಸಂಗಣ್ಣಗೌಡ ತಂದೆ ಲಿಂಗನಗೌಡ 2) ಭೀಮರಾಯಗೌಡ ತಂದೆ ಲಿಂಗನಗೌಡ 3) ಶರಣಗೌಡ ತಂದೆ ಲಿಂಗನಗೌಡ 4) ಈಶ್ವರಪ್ಪ ತಂದೆ ಮರೆಪ್ಪ ಸೂಗೂರ ಸಾ; ಎಲ್ಲರೂ ಹೊನ್ನಾಳ ಗ್ರಾಮ ಕೂಡಿಕೊಂಡು ನಮಗೆ ಕೇಡು ಮಾಡುವ ಉದ್ದೇಶದಿಂದ ತಮ್ಮ ದನಕರುಗಳನ್ನು ನಮ್ಮ ಜಮೀನಿನಲ್ಲಿ ಬಿಟ್ಟು ಬೆಳೆಯನ್ನು ಹಾಳು ಮಾಡಿರುತ್ತಾರೆ. ದಿ; 21.09.2019 ರಂದು ಮದ್ಯಾಹ್ನ 2-00 ಘಂಟೆಯ ಸುಮಾರಿಗೆ ನಮ್ಮ ಆಳು ಮಗ ಮಹಾಂತೇಶ ತಂದೆ ಸೈಬಣ್ಣ ಈತನು ಹೊಲದಲ್ಲಿ ಹೋದಾಗ ಅವರು ಆ ಭೋಸಡಿ ಮಗ ನಿಮ್ಮ ಮಾಲಕನಿಗೆ ಹೇಳು ನಮ್ಮ ತಂಟೆಗೆ ಬಂದರೆ ಒಬ್ಬೊಬ್ಬರಿಗೆ ಜೀವಂತವಾಗಿ ಸುಟ್ಟು ಹಾಕುತ್ತೇವೆ ಎಂದು ಜೀವದ ಭೇದರಿಕೆ ಹಾಕಿರುತ್ತಾರೆ. ಎಂದು ನಮ್ಮ ಆಳು ಮಗ ನಮಗೆ ಪೋನ್ ಮಾಡಿ ತಿಳಿಸಿರುತ್ತಾನೆ. ನಂತರ ನಾನು ನಮ್ಮ ಗ್ರಾಮದ ವಜ್ರಪ್ಪ ತಂದೆ ಈರಪ್ಪ ತಳವಾರ, ಸಾಬಣ್ಣ ತಂದೆ ಈರಪ್ಪ ತಳವಾರ, ಮಲ್ಲಣ್ಣ ತಂದೆ ಬಸು ರೆಡ್ಡಿ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದರಿಂದ ಅವರು ನಮ್ಮ ಹೊಲಕ್ಕೆ ಹೋದಾಗ ತೊಗರೆ ಬೆಳೆ ಮೈಸುತ್ತಿರುವ ಈ ಮೇಲಿನವರು ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ಮರು ದಿನ ದಿನಾಂಕ 22.09.2019 ರಂದು ಬೆಳಿಗ್ಗೆ 6-30 ಘಂಟೆಯ ವೇಳೆಗೆ ನಮ್ಮ ಆಳು ಮಗ ಮಹಾಂತೇಶ ದೊರೆ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಇಂದು ಬೆಳಿಗ್ಗೆ 6-00 ಘಂಟೆಯ ವೇಳೆಗೆ ನಾನು ಹೊನ್ನಾಳ ಸೀಮಾತರದಲ್ಲಿ ಇರುವ ಮೇಲೆ ನಮೂದಿಸಿದ ಹೊಲಕ್ಕೆ ಹೋದಾಗ ಹೊಲದಲ್ಲಿ 1) ಸಂಗಣ್ಣಗೌಡ ತಂದೆ ಲಿಂಗನಗೌಡ 2) ಭೀಮರಾಯಗೌಡ ತಂದೆ ಲಿಂಗನಗೌಡ 3) ಶರಣಗೌಡ ತಂದೆ ಲಿಂಗನಗೌಡ ಸಾ; ಎಲ್ಲರು ಹೊನ್ನಾಳ ಗ್ರಾಮ ಇವರು ಕೂಡಿಕೊಂಡು ಟ್ರಾಕ್ಟರ ನಂ; ಕೆ.ಎ-32-ಟಿ-9444 ಮೂಲಕ ಹೊಲದಲ್ಲಿನ ತೊಗರೆ ಬೆಳೆ ಹರಗುತ್ತಿದ್ದರು. ಆಗ ನಾನು ಹೊಲದಲ್ಲಿ ಬರುವದನ್ನು ನೋಡಿ ಅವರು ಟ್ರಾಕ್ಟರ ಸಮೇತ ಅಲ್ಲಿಂದ ಓಡಿ ಹೋದರು. ಎಂದು ನಮ್ಮ ಆಳು ಮಗ ನನಗೆ ಪೋನ್ ಮಾಡಿ ತಿಳಿಸಿದನು. ನಂತರ ಅದೇ ದಿವಸ ನಾನು ಹೊಲಕ್ಕೆ ಹೋಗಿ ನೋಡಲಾಗಿ ಹೊಲದಲ್ಲಿ ಬೆಳೆ ಸಂಪೂರ್ಣ ಟ್ರಾಕ್ಟರದಿಂದ ಹರಗಿ ಹಾಳು ಮಾಡಿದ್ದು ನಿಜವಿರುತ್ತದೆ. ಇದರಿಂದ ಹೊಲದಲ್ಲಿ ಇದ್ದ ಸುಮಾರು 7,00,000/ ರೂ ಮೌಲ್ಯದ ಬೆಳೆಯನ್ನು ಹಾನಿ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ 26/09/2019 ರಂದು ಶ್ರೀ ಸೂರ್ಯಕಾಂತ ತಂದೆ ಬಸವಣಪ್ಪಾ ಕಲಶಟ್ಟಿ ಸಾ ಬೆಳಮಗಿ ರವರು ಮತ್ತು  ಹೆಂಡತಿಯಾದ ಜಗದೇವಿ ಮಕ್ಕಳಾದ ಅಂಬೀಕಾ ಮತ್ತು ಶಂಭುಲಿಂಗ ಎಲ್ಲರೂ ರಾತ್ರಿ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಅಡುಗೆ ಕೋಣೆ ಮತ್ತು ದೆವರ ಕೋಣೆಗಳಿಗೆ ಬಾಗಿಲು ಕೊಂಡಿ ಹಾಕಿ ಹಾಗು ನಮ್ಮ ಮನೆಯ ಅಡುಗೆ ಕೋಣೆಯ ಹೊರಭಾಗದ ಬಾಗಿಲಿಗೆ ಹಾಗು ನಮ್ಮ ಮನೆಯ ಪಡಸಾಲಿಗೆ ಹೊಂದಿಕೊಂಡು ಕೂಡಿಸಿದ ಶೆಟರ ಚೈನಿಗೆ ಚಾವಿ ಹಾಕಿಕೊಂಡು ನಾವೆಲ್ಲರೂ ಮನೆಯ ಪಡಸಾಲೆಯಲ್ಲಿ ರಾತ್ರಿ ಮನೆಯಲ್ಲಿನ ಲೈಟ ಆರಿಸಿಕೊಂಡು ಮಲಗಿಕೊಂಡಿರುತ್ತೆವೆ. ದಿನಾಂಕ 27/09/2019 ರಂದು ಬೆಳಿಗ್ಗೆ ನಾನು ಪ್ರತಿ ದಿನದಂತೆ ನನ್ನ ಹೊಟಲ ಕೆಲಸಕ್ಕೆ ಹೋಗಲು ಎದ್ದು ನನ್ನ ಹೆಂಡತಿಯಾದ ಜಗದೇವಿ ಇವಳಿಗೂ ಎಬ್ಬಿಸಿದೆನು. ಲೈಟ ಹಾಕಿ ನೋಡಿದಾಗ ನಮ್ಮ ಮನೆಯ ದೆವರು ಕೋಣೆಗೆ ಹಾಕಿದ ಬಾಗಿಲು ತೆರೆದ ಸ್ಥಿತಿಯಲ್ಲಿದ್ದುದ್ದರಿಂದ ನಾನು ನನ್ನ ಹೆಂಡತಿ ಇಬ್ಬರು ಗಾಬರಿಯಾಗಿ ದೆವರು ಕೋಣೆಯಲ್ಲಿ ನೋಡಲಾಗಿ ನಮ್ಮ ಬಟ್ಟೆ ಬರೆ ಬಂಗಾರದ ಒಡವೆಯ ಡಬ್ಬಿಗಳು ಚೆಲ್ಲಾಪಿಲ್ಲಿಯಾಗಿ ತೆರೆದ ಸ್ಥಿತಿಯಲ್ಲಿ ಬಿದ್ದಿದ್ದು ನಾನು ನನ್ನ ಹೆಂಡತಿ ಇಬ್ಬರು ಒಳಗೆ ಹೋಗಿ ನೋಡಲಾಗಿ ತಿಜೂರಿ ತೆರೆದಿದ್ದು ಪರಿಶೀಲಿಸಲಾಗಿ ತಿಜೂರಿಯಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು ಹಾಗು ಬೆಳ್ಳಿಯ ಆಭರಣಗಳನ್ನು  ಎರಡು ಪ್ಲಾಸ್ಟಿಕ ಕ್ಯಾರಿಬ್ಯಾಗಗಳಲ್ಲಿ ನಾನು ಮುಂಬರುವ ದಿಪಾವಳಿ ಹಬ್ಬದ ಸುಮಾರಿಗೆ ನನ್ನ ಮಗಳಾದ ಅಂಬೀಕಾ ಇವಳ ಮದುವೆಗಾಗಿ ನಾನು ಜಮಾ ಮಾಡಿಟ್ಟ ಹಾಗು ಬಿ,ಸಿ ಎತ್ತಿ ಹಾಗು ಕೈಗಡ ಪಡೆದುಕೊಂಡು ಸಂಗ್ರಹಿಸಿ ಇಟ್ಟ ಒಟ್ಟು  4,50,000/- ರೂ ಹಾಗು ಮನೆಯಲ್ಲಿ ಫ್ರಿಜ್ ಮೆಲೆ ಇಟ್ಟಿದ್ದ  ಒಂದು ಚಾರ್ಜರ ಬ್ಯಾಟ್ರಿ ಅ: ಕಿ: 1500/- ರೂ  ಒಂದು ಸಾದಾ ಮೊಬೈಲ್ ಸೆಟ ಅ: ಕಿ: 1000/- ರೂ  ಒಂದು ಪವರ ಬ್ಯಾಂಕ ಅ:ಕಿ: 500/- ರೂ ಹೀಗೆ ಎಲ್ಲವುಗಳು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.