Police Bhavan Kalaburagi

Police Bhavan Kalaburagi

Thursday, January 16, 2020

BIDAR DISTRICT DAILY CRIME UPDATE 16-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-01-2020

ಚಿಂತಾಕಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2020, ಕಲಂ. 174 ಸಿ.ಆರ.ಪಿ.ಸಿ :-
ದಿನಾಂಕ 15-01-2020 ರಂದು ಫಿರ್ಯಾದಿ ಅಶ್ವಿನಿ ಗಂಡ ರವಿ ಸೊಮವಂಶಿ ವಯ: 25 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ನಿಡೆಬಾನ ಗ್ರಾಮ, ತಾ: ಉದಗೀರ, ಸದ್ಯ: ಬೆಲ್ದಾಳ ಗ್ರಾಮ, ತಾ: ಔರಾದ(ಬಿ) ರವರ ಗಂಡನಾದ ರವಿ ತಂದೆ ಪ್ರಕಾಶ ಸೊಮೌಂಶಿ ವಯ: 35 ವರ್ಷ ಇತನು ಸರಾಯಿ ಕುಡಿದ ಅಮಲಿನಲ್ಲಿ ಯಾವುದೋ ಒಂದು ಕ್ರಿಮಿಕಿಟ ಔಷಧವನ್ನು ಸೇವನೆ ಮಾಡಿ ಮ್ರತಪಟ್ಟಿರುತ್ತಾನೆ, ಆತನ ಸಾವಿನ ಮೇಲೆ ಯಾರ ಮೇಲು ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಪಿüರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 392 ಐಪಿಸಿ :-
ದಿನಾಂಕ 28-12-2019 ರಂದು 1800 ಗಂಟೆಗೆ ಫಿರ್ಯಾದಿ ಸರೋಜಾ ಗಂಡ ಧೈರ್ಯವಾನ ಸಾಳೊಂಕೆ ವಯ: 58 ವರ್ಷ, ಜಾತಿ: ಮರಾಠಾ, ಸಾ: ಶಿವಾಜಿ ನಗರ ಬಸವಕಲ್ಯಾಣ ರವರು ಪಾಟೀಲ್ ಆಸ್ಪತ್ರೆಯ ಎದುರುಗಡೆ ಇದ್ದ ಕಿರಾಣಿ ಅಂಗಡಿಗೆ ಹೋಗಿ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮರಳಿ ಮನೆಗೆ ಹೋಗುವಾಗ 1830 ಗಂಟೆಗೆ ಪಾಟೀಲ್ ಆಸ್ಪತ್ರೆಯ ಪಕ್ಕದ ಶಿವಾಜಿ ನಗರಕ್ಕೆ ಹೋಗುವ ರೋಡಿನ ಮೇಲೆ ಎದುರಿನಿಂದ ಒಂದು ಮೋಟಾರ ಸೈಕಲ್ ಮೇಲೆ ಇಬ್ಬರೂ ಅಪರಿಚಿತ ವ್ಯಕ್ತಿಗಳು ಕುಳಿತುಕೊಂಡು ಪಿüರ್ಯಾದಿಯವರ ಹತ್ತಿರ ಬಂದು ಮೋಟಾರ್ ಸೈಕಲ್ ಸ್ವಲ್ಪ ನಿಧಾನ ಮಾಡಿ ಒಮ್ಮೇಲೆ ಮೋಟಾರ ಸೈಕಲ್ ಹಿಂದೆ ಕುಳಿತ್ತಿದ್ದ ವ್ಯಕ್ತಿ ಪಿüರ್ಯಾದಿಯವರ ಕೊರಳಿಗೆ ಕೈ ಹಾಕಿ ಕೊರಳಿನಲ್ಲಿದ್ದ 4 ತೊಲೆ ಬಂಗಾರದ ಗಂಟನ್ ಅ.ಕಿ 1,20,000/- ರೂ. ನೇದನ್ನು ಎಳೆದು ದೋಚಿಕೊಂಡು ತನ್ನ ಮೋಟಾರ ಸೈಕಲ್ ಮೇಲೆ ಓಡಿ ಹೋಗಿದ್ದು, ನಂತರ ಪಿüರ್ಯಾದಿಯು ಚೀರಾಡಿದರು ಯಾರು ಬರಲಿಲ್ಲ, ಹಾಗೂ ಫಿರ್ಯಾದಿಯವರು ಮೋಟಾರ ಸೈಕಲ್ ನ ನಂಬರ್ ನೋಡಿರುವುದಿಲ್ಲ ಅಂತ ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-01-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 04/2020, ಕಲಂ. 498(ಎ), 323, 504, 354 ಜೊತೆ 34 ಐಪಿಸಿ :-
ಫಿರ್ಯಾದಿ ಕಲ್ಪನಾ ಗಂಡ ಶ್ರೀಕಾಂತ ಇಪ್ಪಿ ವಯ: 24 ವರ್ಷ, ಜಾತಿ: ಕಬ್ಬಲಿಗ, ಸಾ: ಹಿರನಾಗಾಂವ ರವರ ಮದುವೆಯಾಗಿ ಸುಮಾರು ಆರು ವರ್ಷಗಳು ಆಗಿದ್ದು, ಸುಮಾರು ಒಂದು ವರ್ಷದ ಹಿಂದೆ ಗಂಡನ ಮನೆಯಲ್ಲಿ ಫಿರ್ಯಾದಿಗೆ ಗಂಡ ಶ್ರೀಕಾಂತ ತಂದೆ ಕುಪ್ಪಣ್ಣಾ ಇಪ್ಪಿ ಇವರು ಮತ್ತು ಅತ್ತೆ ಶಾಂತಾಬಾಯಿ, ಮಾವ ಕುಪ್ಪಣ್ಣ ಮತ್ತು ಮೈದುನ ವರೆಲ್ಲರು ಕೂಡಿ ಕಿರುಕುಳ ಕೊಟ್ಟು ಹೊಡೆ ಬಡೆ ಮಾಡುತ್ತಿರುವದರಿಂದ ತನ್ನ ತಂದೆಯ ಮನೆಯಲ್ಲಿ ತಂದೆ ತಾಯಿಯವರೊಂದಿಗೆ ವಾಸವಾಗಿದ್ವು, ಹೀಗಿರುವಾಗ ದಿನಾಂಕ 15-01-2020 ರಂದು 2000 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ಜೊತೆ ಅಕ್ಕ ರೇಣುಕಾ ಇರುತ್ತಾಳೆ, ಆಗ ಗಂಡ ಶ್ರೀಕಾಂತ ಇತನು ಬಂದು ಇಲ್ಲೆ ಎಷ್ಟು ದಿವಸ ಕುಡತಿ ಬಾ ಹೊರಗೆ ನಿನಗೆ ನೋಡಕೋತಿನಿ ಅಂತಾ ಬೈಯುತ್ತಿದ್ದಾಗ ಫಿರ್ಯಾದಿ ಹಾಗೂ ಅಕ್ಕ ಇಬ್ಬರು ಹೊರಗೆ ಬಂದಾಗ ಇಬ್ಬರಿಗೂ ಅವರೆಲ್ಲರೂ ಕೈಯಿಂದ ಹೊಡೆಯುವದು ಕಾಲಿನಿಂದ ಒದೆಯುವದು ಮಾಡಿದಾಗ ಹೊರಗಡೆಯಿಂದ ತಾಯಿ ಬಿಡಿಸಲು ಬಂದಾಗ ಅವಳಿಗೆ ಬಲಗೈ ಹಿಡಿದು ಜಿಂಜಾ ಮುಷ್ಠಿ ಮಾಡಿರುತ್ತಾನೆ ಮತ್ತು ಫಿರ್ಯಾದಿಗೆ ಎದೆಯಲ್ಲಿ ಒದ್ದಿರುವುದರಿಂದ ನೋವು ಆಗಿರುತ್ತದೆ, ಅಕ್ಕನ ಬಲಗೈಯನ್ನು ಹಿಡಿದು ಮುರಿದಿರುತ್ತಾನೆ, ನಂತರ ಜಗಳ ನೋಡಿ ಮಕ್ತಮ್ ಸಾಮ ಮುಲ್ಲಾ, ನಿಲಮ್ಮ ನಾಗೂರೆ ಇವರು ಬಂದು ಬಿಡಿಸಿಕೊಂಡಾಗ ಮೈದುನ ತಂದೆಗೆ ಹೊಡೆದಿರುತ್ತಾನೆಂದು ಕೊಟ್ಟ ಫಿರ್ಯಾಧಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 15-01-2020 ರಂದು ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಫಿರ್ಯಾದಿ ದಿಲೀಪ ತಂದೆ ಕಾಶಿನಾಥ ಸಿರಾಪೂರೆ, ವಯ: 30 ವರ್ಷ, ಜಾತಿ: ವಡ್ಡರ, ಸಾ: ದೇವಣಿ ರವರು ತನ್ನ ಹೆಂಡತಿ ಮೀನಾ ಹಾಗೂ 4 ವರ್ಷದ ಮಗಳಾದ ಮಹೇಶ್ವರಿ ಕೂಡಿ ತನ್ನ ಮೊಟಾರ್ ಸೈಕಲ ನಂ. ಎಂಎಚ-24/ಬಿ.ಇ-1558 ನೇದ್ದರ ಮೇಲೆ ತಮ್ಮೂರಿನಿಂದ ಬಿಟ್ಟು ಭಾಲ್ಕಿ ಮಾರ್ಗವಾಗಿ ಜೋಳದಾಬಕಾ ಗ್ರಾಮಕ್ಕೆ ಭಾಲ್ಕಿ ಹುಮನಾಬಾದ ರೋಡ ಮುಖಾಂತರ ಹೋಗುವಾಗ ಆರ್.ಇ.ಸಿ ಕಾಲೇಜ ಹತ್ತಿರ ಹೋದಾಗ ಅದೇ ಸಮಯಕ್ಕೆ ಕಲವಾಡಿ ಕಡೆಯಿಂದ ಟ್ರಾಕ್ಟರ ನಂ. ಎಪಿ-22/ಕೆ-7146 ನೇದ್ದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರ ಅತಿವೇಗ ಹಾಗು ನಿಷ್ಕಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಮೊಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಟ್ರಾಕ್ಟರ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಘಟನೆಯಲ್ಲಿ ಫಿರ್ಯಾದಿಗೆ ಬಲಗಾಲ ಹೆಬ್ಬೆಟ್ಟು ಮತ್ತು ಬಲ ಮೊಣಕಾಲಿಗೆ, ಬಲಗೈ ರಟ್ಟೆಗೆ ರಕ್ತ ಮತ್ತು ಗುಪ್ತಗಾಯಗಳು ಆಗಿರುತ್ತವೆ, ಹೆಂಡತಿ ಮೀನಾ ಇವಳಿಗೆ ತಲೆಯಲ್ಲಿ ರಕ್ತಗಾಯವಾಗಿರುತ್ತದೆ ಹಾಗೂ ಮಗಳಾದ ಮಹೇಶ್ವರಿ ಇವಳಿಗೆ ಬಲಗಾಲಿಗೆ ಭಾರಿ ಗಾಯವಾಗಿ ಕಾಲು ಮುರಿದಿರುತ್ತದೆ, ಆಗ ಅಲ್ಲೆ ಇದ್ದ ಯಾರೋ ಒಬ್ಬರು ಅಂಬುಲೆನ್ಸಗೆ ಕೆರ ಮಾಡಿ ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 15-01-2020 ರಂದು ಫಿರ್ಯಾದಿ ಸಿದ್ದಪ್ಪಾ ತಂದೆ ಜೀತಪ್ಪಾ ಕಪಲಾಪರೆ ವಯ: 60 ವರ್ಷ, ಜಾತಿ: ಲಿಂಗಾಯತ, ಸಾ: ಅಲಿಯಂಬರ್, ತಾ: ಬೀದರ ರವರು ಓಂಕಾರ ಸಾ: ಅಲಿಯಂಬರ್ ಇರವರ ಜೊತೆಯಲ್ಲಿ ಇಬ್ಬರು ಓಂಕಾರ ಇವರ ಮೊಟಾರ ಸೈಕಲ ನಂ. ಕೆಎ-38/ಎಸ್-2061 ನೇದರ ಮೇಲೆ ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಸಂಗಮೇಶ್ವರ ದೇವಾಲಕ್ಕೆ ಬಂದು ಅಲ್ಲಿ ದರ್ಶನ ಮಾಡಿಕೊಂಡು ಮರಳಿ ತಮ್ಮೂರಿಗೆ ಹೊಗಲು ಸದರಿ ಮೊಟಾರ ಸೈಕಲ ಮೇಲೆ ಬೀದರ-ಹುಮನಾಬಾದ ರಸ್ತೆಯ ನಿಲಮನಳ್ಳಿ ತಾಂಡದ ಹತ್ತಿರ ಸಂಗಮೆಶ್ವರ ದೇವಾಲಯದ ಕಮಾನ ಹತ್ತಿರ ಬಂದಾಗ ಎದರುಗಡೆಯಿಂದ ಅಂದರೆ ಬೀದರ ಕಡೆಯಿಂದ ಸ್ಕಾರ್ಪಿವೊ ಕಾರ ನಂ. ಕೆಎ-20/ಸಿ-5950 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡ ಬಂದು ಫಿರ್ಯಾದಿಯವರು ಕುಳಿತ ಮೊಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಕಾರನ್ನು ಓಡಿಸಿಕೊಂಡು ಹೊಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಬಲಗಾಲು ಮೊಳಕಾಲು ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗೈ ಭುಜಕ್ಕೆ ಗುಪ್ತಗಾಯ, ಎಡಗಾಲ ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ, ಓಂಕಾರ ಇತನಿಗೆ ತಲೆಯ ಬಲಭಾಗದಲ್ಲಿ ಭಾರಿ ರಕ್ತಗಾಯ, ಬಲ ಮೆಲಕಿನ ಮೇಲೆ ತರಚಿದ ರಕ್ತಗಾಯ, ಎಡಗೈ ಮುಂಗೈ ಕೆಳಗೆ, ಎಡಗಾಲು ಕೀರು ಬೆರಳಿಗೆ ತರಚಿದ ಗಾಯ ಮತ್ತು ಎಡಗಾಲು ಮೊಳಕಾಲಿಗೆ ಗುಪ್ತಗಾಯವಾಗಿರುತ್ತದೆ, ಆಗ ಹಿಂದೆ ಬರುತ್ತಿದ್ದ ತಮ್ಮೂರ ಕಾಮಶೇಟ್ಟಿ ತಂದೆ ಶಿವರಾಯ ಬಿರಾದಾರ ಮತ್ತು ಅಶೋಕ ತಂದೆ ಬಂಡೆಪ್ಪಾ ಗಾದಗೆ ಇವರು ಘಟನೆ ನೋಡಿ ಗಾಯಗೊಂಡ ಎಲ್ಲರಿಗೂ ಖಾಸಗಿ ವಾಹನದಲ್ಲಿ ಹಾಕಿಕೊಂಡು ಹಳ್ಳಿಖೇಡ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Wednesday, January 15, 2020

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ:14-01-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಣ್ಣೂರ ಗ್ರಾಮದ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ.ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು ಸುಭಾಷ ತಂದೆ ಶರಣಪ್ಪ ಲಾತೂರ ಸಾ||ಮಣ್ಣೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1430/-  ರೂಪಾಯಿ ನಗದು ಹಣ ಹಾಗೂ 2)ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3)ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ:14-01-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಣ್ಣೂರ ಗ್ರಾಮದ ಯಲ್ಲಮ್ಮ ದೇವಸ್ಥಾನದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ ಇದು ಮುಂಬೈ ಮಟಕಾ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ.ಅಂತಾ ಮಾಹಿತಿ ಬಂದ  ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಯಲ್ಲಮ್ಮನ ದೇವಸ್ಥಾನದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು  ಸಾಯಬಗೌಡ ತಂದೆ ಭೀಮಾಶಂಕರ ಹಳಿಮನಿ ಸಾ||ಮಣ್ಣೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1160/-  ರೂಪಾಯಿ ನಗದು ಹಣ ಹಾಗೂ 2)ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3)ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ಪಡೆದು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೆರಾ ಈ ವ್ಯಕ್ತಿಯು ದಿನಾಂಕ:14-01-2020 ರಂದು ಸಮಯ 05:00 ಗಂಟೆಗೆ ಈ ವ್ಯಕ್ತಿಯು ಬಂದು ತಹಸೀಲ್ದಾರ ಸಾಹೇಬರಿಗೆ ನನಗೆ ಬೇಡ ಜಂಗಮ್ಮ ಪ್ರಮಾಣ ಪತ್ರ ನಿಡಬೇಕೆಂದು ವಾದ ಮಾಡುವಾಗ ಶ್ರೀ ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ  ರವರಿಗೆ ಹೋರಗಡೆ ಹಾಕಲು ಯತ್ನಿಸಿದಾಗ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ನನ್ನ ಮೇಲೆ ಕೈ ಮಾಡಲು ಯತ್ನಿಸಿದ್ದು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾನೆ ಕಾರಣ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶಿವರಾಜ ತಂದೆ ಬನಗೌಡ ಬಿರಾದಾರ :ಸೀಪಾಯಿ ತಹಸೀಲ್ದಾರ ಕಾರ್ಯಾಲಯ ಯಡ್ರಾಮಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೇರಾ ಈ ವ್ಯಕ್ತಿ ಇಂದು ದಿನಾಂಕ:14-01-2020 ರಂದು ಸಮಯ 05:00 ಘಂಟೆಗೆ ಮಾನ್ಯ ದಂಡಾಧಿಕಾರಿಗಳ ಹತ್ತಿರ ಬೇಡ ಜಂಗಮ್ಮ SC ಜಾತಿ ಪ್ರಮಾಣ ಪತ್ರ ನೀಡಬೆಕೆಂದು  ಬಲವಂತ ಮಾಡುತ್ತಿರುವಾಗ ನಾನು ನನ್ನ ಕೆಲಸದ ಪ್ರಯುಕ್ತ ಹೋಗಿದ್ದೆ ನಾನು ನೀವು ಗುರುಗಳು ನೀವು ದೋಡ್ಡ ಕುಲದವರು ನೀವು ಈ ರೀತಿ ಸುಳ್ಳು ದಾಖಲೆ ನೀಡಿ SC ಪ್ರಮಾಣ ಪತ್ರ ತೆಗೆದುಕೊಂಡರು ನಾವು ಮೂಲ SC ಜಾತಿ ಅವನು ಏನು ಮಾಡಬೇಕೆಂದು ಕೇಳಿದರೆ ನೀ ಏನು ಕೇಳತಿ ವಡ್ಡರ ಸೂಳಿ ಮಗನ್ಯಾ ನಿನ್ನಗೆ ಸಾಹೀಸುತ್ತೆನೆ ಎಂದು ನನಗೆ ಒಂದು ಏಟು ಹೊಡೇದು ತಳ್ಳಿ ನುಕಿದನು ಅಲ್ಲಿ ಇದ್ದ ಪೀವುನ ಮತ್ತು ಜನರು ಬಂದು ನನಗೆ ರಕ್ಷಣೆ ಮಾಡಿದ್ದರು. ಆದ ಕಾರಣ ತಾವು ದಯಾಳುಗಳಾದ ತಾವು ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೇರ ಈ ವ್ಯಕ್ತಿಗೆ ಬಂದಿಸಿ ನನಗೆ ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಆನಂದಕುಮಾರ ತಂದೆ ಬಸಣ್ಣ ಕುಸ್ತಿ ಸಾ:ಯಡ್ರಾಮಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ  ಸುನಂದಾ ಗಂಡ ಚನ್ನಬಸಪ್ಪ ಕರೂಟಿ ಸಾ||ಶಿವಬಾಳ ನಗರ ಮಣ್ಣೂರ ಗ್ರಾಮ ರವರದು ಅಕ್ಕಲಕೋಟ ತಾಲೂಕಿನ ಹಿಳ್ಳಿ ಗ್ರಾಮದ ಸಿಮಾಂತರದಲ್ಲಿ ಬರುವ ಹೊಲ ಸರ್ವೆ ನಂ:170 ನೇದ್ದು ನನ್ನ ಅಣ್ಣನಾದ ಶಾಂತಪ್ಪ ತಂದೆ ಚಂದ್ರಾಮಪ್ಪ ಹೆಗ್ಗೊಂಡೆ ಸಾ||ಹಿಳ್ಳಿ ರವರ ಹೆಸರಿನಲ್ಲಿದ್ದು ಸದರಿ ಹೊಲ ನನ್ನ ಗಂಡನು ಪಾಲಕ್ಕೆ ಮಾಡಿದ್ದು ಇರುತ್ತದೆ ಹಿಗಿದ್ದು ಇಂದು ನಾನು ಮತ್ತು ನನ್ನ ಗಂಡನು ಕೂಡಿಕೊಂಡು ಹೊಲದಲ್ಲಿ ಕೇಲಸ ಮುಗಿಸಿಕೊಂಡು ಮರಳಿ ನಮ್ಮ ಗ್ರಾಮಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ 5-30 ಪಿ,ಎಮ್.ಕ್ಕೆ ಹೀಳ್ಳಿ ಗ್ರಾಮದ 1)ಬಸಣ್ಣ ತಂದೆ ಮಲಕಣ್ಣ ಶಟಗಾರ 2)ಸಾಗರ ತಂದೆ ಬಸಣ್ಣಮ ಶಟಗಾರ 3)ಶಿವಲಿಂಗವ್ವ ಗಂಡ ಬಸಣ್ಣ ಶಟಗಾರ ಮತ್ತು  ಲಚ್ಯಾಣ ಗ್ರಾಮದ 4) ಗುರು ಮುಜಗೊಂಡ ರವರು ಕೂಡಿ ಕೊಂಡು ಬಂದು ನಮಗೆ ಅಡ್ಡಗಟ್ಟಿ ಮುಂದೆ ಹೋಗದಂತೆ ತಡೆದು ಅದರಲ್ಲಿ ಸಾಗರ ಈತನು ನನ್ನ ಗಂಡನಿಗೆ ಏ ಬೋಸಡಿ ಮಗನೆ ಆ ಹೊಲ ನಾವು ಖರಿದಿ ಮಾಡಿದ್ದಿವಿ ನಿ ಯಾಕೆ ಬಟಾಯಿ ಪಾಲ ಮಾಡಿದಿ ಅಂತ ಅವಾಚ್ಯವಾಗಿ ಬೈದನು ಮತ್ತು ಬಸಣ್ಣ ಈತನು ಈ ಸುಳಿ ಮಗನಿಗೆ ಈ ಮೋದಲು ನಾ ಹೇಳಿದರು ಕಿಮ್ಮತ್ತೆ ಮಾಡಲಾಗ್ಯಾನ ಅಂತ ಅಂದನು ಶಿವಲಿಂಗವ್ವ ಇವಳು ನನಗೆ ಕಪಾಳ ಮೇಲೆ ಹೊಡೆದು ಎಲ್ಲಾ ಈ ರಂಡಿನೆ ಮಾಡುಕತ್ತಾಳ ಅಂತ ಬೈದಳು ಆಗ ಅಲ್ಲೆ ರೋಡಿನ ಮೇಲೆ ಮೋಟಾರ ಸೈಕಲ ಮೇಲೆ ಹೋಗುತ್ತಿದ್ದ ನಮ್ಮ ಗ್ರಾಮದ 1)ಭೀಮಶ್ಯಾ ತಂದೆ ಸಾಯಬಣ್ಣ ನಾಯಕೋಡಿ 2)ಶಿವರಾಜ ತಂದೆ ಪರಮೇಶ್ವ್ರ ಪೂಜಾರಿ ರವರು ಜಗಳ ನೋಡಿ ಜಗಳ ಬಿಡಿಸಿದರು ಆಗ  ಗುರು ಮುಜಗೊಂಡ ಈತನು ನಮಗೆ ಇವತ್ತು ನೀವು ಉಳಿದುಕೊಂಡಿರಿ ಇನ್ನೋಮ್ಮೆ ಸಿಕ್ಕರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ ಕಾರಣ ನಮಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಪಾಳಕ್ಕೆ ಹೊಡೆದು ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.