Police Bhavan Kalaburagi

Police Bhavan Kalaburagi

Saturday, May 9, 2020

BIDAR DISTRICT DAILY CRIME UPDATE 09-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 09-05-2020
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 18/2020 3 & 4 ಇ.ಸಿ. ಕಾಯ್ದೆ :-

ದಿನಾಂಕ 08/05/2020 ರಂದು 21:30 ಗಂಟೆಗೆ ಶ್ರೀ ಅರುಣಕುಮಾರ ಆಹಾರ ನೀರಿಕ್ಷಕರು ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಾಂಶವೆನೆಂದರೆ ದಿನಾಂಕ 08/05/2020 ರಂದು ಸಾಯಂಕಾಲ 1810 ಗಂಟೆ  ಸುಮಾರಿಗೆ ನಬಿಸಾಬ ಡಾಂಗೆ ರವರ ಕಾಂಪ್ಲೇಕ್ಸ್ ಎದುರುಗಡೆ ರೋಡಿನ ಪಕ್ಕದಲ್ಲಿ ವಾಹನ ನಿಂತಿದ್ದು ಅದನ್ನು ನೋಡಿ ಪರಿಶೀಲಿಸಿ ನೋಡಲಾಗಿ ವಾಹನ ಚಾಲಕನಿಗೆ ವಿಚಾರಿಸಿದ್ದು ಆತನ ಹೆಸರು ಎಂ.ಡಿ ಜಾವೀದ್ ತಂದೆ ಎಂ.ಡಿ ಮುಜೀಬ್ ವಯಃ 28 ವರ್ಷ ಜಾತಿಃ ಮುಸ್ಲಿಂ ಉಃ ಲಾರಿ ಚಾಲಕ ಮತ್ತು ವಾಹನದ ಮಾಲಿಕ ಸಾಃ ಮನ್ನಳ್ಳಿ ಅಂತ ತಿಳಿಸಿದನು. ವಾಹನದಲ್ಲಿ ಏನಿದೆ ಅಂತ ಕೇಳಲಾಗಿ ಅಕ್ಕಿ ಇರುವುದಾಗಿ ತಿಳಿಸಿದಾಗ ನಾವು ಅಕ್ಕಿಯನ್ನು ಪರಿಶೀಲಿಸಿ ನೋಡಲಾಗಿ ಪಡಿತರ ಅಕ್ಕಿ ಇರುವುದು ಧೃಡಿಪಟ್ಟಿದ್ದು ಸದರಿ ಲಾರಿ ಚಾಲಕನು ಅಕ್ರಮವಾಗಿ ಪಡಿತರ ಅಕ್ಕಿಯ ಚೀಲಗಳನ್ನು ತನ್ನ ಈಚರ್ ಲಾರಿ ನಂ ಕೆ.ಎ 38 5891 ನೇದ್ದರಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದು, ಸದರಿ ಲಾರಿ ಚಾಲಕನಿಗೆ ಅಕ್ಕಿ ಸಾಗಾಟದ ಬಗ್ಗೆ ಪರವಾನಿಗೆ ವಗೈರೆ ಇದೆಯೇ ಅಂತಾ ಕೇಳಿದಾಗ ಸದರಿಯವನು ಯಾವುದೇ ಪರವಾನಿಗೆ ವಗೈರೆ ಇರುವುದಿಲ್ಲಾ  ಅಂತಾ ತಿಳಿಸಿರುತ್ತಾನೆ. ನಂತರ ಅಕ್ಕಿ ತುಂಬಿರುವ ಲಾರಿಯನ್ನು ಪರಿಶೀಲಿಸಿ ನೋಡಲಾಗಿ ಅದರ ನಂ ಕೆ.ಎ 38 5891 ಇದ್ದು  ಲಾರಿಯಲ್ಲಿನ ಚೀಲಗಳನ್ನು ನೋಡಲಾಗಿ ಅಂದಾಜು 50 ಕೆ.ಜಿ ತೂಕದ 140 ಅಕ್ಕಿ ತುಂಬಿದ ಚೀಲಗಳು ಇವುಗಳನ್ನು ಆಹಾರ ನೀರಿಕ್ಷಕರಾದ ಶ್ರೀ ಅರುಣಕುಮಾರ ರವರು ನೋಡಿ ಇವು ಸಾರ್ವಜನಿಕರಿಗೆ ವಿತರಿಸುವ ಉಚಿತ ಪಡಿತರ ಆಹಾರದ ಅಕ್ಕಿ  ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಅಂತಾ ದೃಢಪಟ್ಟಿದ್ದು  ಅಕ್ಕಿಯ ಪ್ರತಿ ಚೀಲ 50 ಕೆ.ಜಿ ಉಳ್ಳದ್ದು ಒಟ್ಟು 140 ಪ್ಲಾಸ್ಟಿಕ್ ಮತ್ತು ಗೋಣಿ ಚೀಲಗಳು ಇರುತ್ತವೆ. ಒಟ್ಟು ತೂಕ 70 ಕ್ವಿಂಟಾಲ ಅಕ್ಕಿ ಇದ್ದು, ಇದರ ಅಂದಾಜು ಕಿಮ್ಮತ್ತು ಒಂದು ಕ್ವಿಂಟಾಲಗೆ ರೂ 2319 ರಂತೆ ಹೀಗೆ ಒಟ್ಟು ಅ.ಕಿ ರೂ 1,62,330/- ಹಾಗೂ ಐಚರ್ ಲಾರಿ ಅ.ಕಿ 7,00000/-ರೂ ಇರುತದೆ ಅಂತಾ ನೀಡಿದರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 30/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 08/05/2020 ರಂದು 1100 ಗಂಟೆಗೆ ಪಿಎಸ್ಐ ರವರು ಪೊಲೀಸ ಠಾಣೆಯಲ್ಲಿರುವಾಗ ಫೋನ್ ಮೂಲಕ ಮಾಹಿತಿ ಬಂದಿದ್ದೆನೆಂದರೆ, ಮಿರಕಲ್ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಲವು ಜನರು ಸೇರಿ ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ 1) ಜಗನ್ನಾಥ ತಂದೆ ಕಾಳಪ್ಪಾ ಮೇತ್ರೆ ವಯ 40 ವರ್ಷ,  ಈತನ ಮುಂದೆ ನಗದು ಹಣ ರೂ. 600=00 ರೂ 2) ಅಶೋಕ ತಂದೆ ದೀಲಿಪರಾವ ಮೇತ್ರೆ ವಯ 33 ವರ್ಷ, ಇತನ ಮುಂದೆ ನಗದು ಹಣ ರೂ.700=00 ರೂ 3) ತುಕಾರಾಮ ತಂದೆ ಪ್ರಲ್ಹಾದ ಕೊಂಡಾಪೂರೆ ವಯ 37 ವರ್ಷ ಜಾತಿ  ಇತನ ಮುಂದೆ ನಗದು ಹಣ ರೂ.550=00 ರೂ  4] ಪರಮೇಶ್ವರ ತಂದೆ ವೆಂಕಟರಾವ ಮೇತ್ರೆ ವಯ 34 ಇತನ ಮುಂದೆ ನಗದು ಹಣ 910=00 ರೂ. 5] ರಾಜಕುಮಾರ ತಂದೆ ನರಸಪ್ಪಾ ಖಾನಾಪೂರೆ ವಯ 47 ವರ್ಷ,  ಇತನ ಮುಂದೆ ನಗದು ಹಣ 590=00ರೂ 6] ಬಾಲಾಜಿ ತಂದೆ ಧನಾಜಿ ಮೂಳೆ ವಯ 32 ವರ್ಷ  ಇತನ ಮುಂದೆ ನಗದು ಹಣ 650=00 ರೂ,  ಎಲ್ಲರ ಮಧ್ಯದಲ್ಲಿ ಜೂಜಾಟಕ್ಕೆ ಬಳಸಿದ ನಗದು ಹಣ 310-ರೂ. ಹೀಗೆ ಒಟ್ಟು: 4310=00 ರೂ. ಹಾಗು 52 ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತ ಮಾಡಿ ಕೊಂಡು ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೊಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 26/2020 ಕಲಂ 363 ಐಪಿಸಿ :-
 ದಿನಾಂಕ 07/05/2020 ರಂದು ಪಿಎಸ್ಐ ರವರು ರಾತ್ರಿ 2200 ಗಂಟೆಯಿಂದ ವಿಶೇಷ ರಾತ್ರಿ ಗಸ್ತು ಚೇಕಿಂಗ ಮತ್ತು ರೋಡ ಪೇಟ್ರೊಲಿಂಗ ಕರ್ತವ್ಯ ಕುರಿತು ಸಿಬ್ಬಂದಿಯೊಂದಿಗೆ ಖಟಕ ಚಿಂಚೋಳಿ ಕ್ರಾಸ್, ಏಣಕೂರ, ನಾವದಗಿ, ಮಾವಿನಹಳ್ಳಿ. ಉಚ್ಛಾ, ಮೊರಂಬಿ ಕಡೆಗಳಿಗೆ ಹೊಗಿ ದಿನಾಂಕ-08/05/2020 ರಂದು ನಸುಕಿನ ಜಾವ 0430 ಗಂಟೆಗೆ ಬಾಜೋಳಗಾ ಕ್ರಾಸ್ ಹತ್ತಿರ ಬಂದು ನಿಂತಾಗ ಅಲ್ಲಿ ಬಾಜೋಳಗಾ ಕ್ರಾಸ್ ಬಸ್ ನಿಲ್ದಾಣದ ಹತ್ತಿರ ನಿಂತಿದ್ದ ಒಬ್ಬ ವ್ಯಕ್ತಿ  ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ತಕ್ಷಣ ಓಡಲು ಪ್ರಾರಂಬಿಸಿದಾಗ  ಸದರಿ ವ್ಯಕ್ತಿಗೆ ಹಿಡಿದು   ವಿಚಾರಣೆ ಮಾಡಿದಾಗ    ಅವನು ತನ್ನ ಹೇಸರು ಸಚೀನ ತಂದೆ ರಘುನಾಥ ಬಿರಾದಾರ ವಯ-30 ವರ್ಷ ಜಾ-ಮರಾಠಾ ಉ-ಕೂಲಿ ಕೆಲಸ ಸಾ-ಕೋರುರ ಅಂತಾ ತಿಳಿಸಿದ್ದು ಇರುತ್ತದೆ.  ಸದರಿ ವ್ಯಕ್ತಿಗೆ ವಿಚಾರಣೆ ಮಾಡಲು ಅವನು ತಿಳಿಸಿದ್ದೆನಂದರೆ ತಾನು ಬಾಜೋಳಗಾ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಹೊಗಿ ಬರುವ ಮೊಟಾರ ಸೈಕಲ್ ವಾಹನಗಳ ಸವಾರರನ್ನು ತಡೆದು ಅವರ ಕಣ್ಣಲ್ಲಿ ಖಾರದ ಪುಡಿ ಎರಚಿ ಅವರಿಗೆ ಚಾಕು ತೊರಿಸಿ, ಹೇದರಿಸಿ ಅವರಿಂದ ಹಣ ಕಿತ್ತುಕೊಳ್ಳುವ ಸಲುವಾಗಿ ನಿಂತಿರುತ್ತೆನೆ ಅಂತಾ ತಿಳಿಸಿರುತ್ತಾನೆ ನಂತರ ಸದರಿ ವ್ಯಕ್ತಿ ಬಾಜೋಳಗಾ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಹೊಗಿ ಬರುವ ಮೋಟಾರ ಸೈಕಲ್ ವಾಹಗಳ ಸವಾರರಿಗೆ ತಡೆದು ಸೂಲಿಗೆ ಮಾಡಲು ಹೊಂಚುಹಾಕಿ ಪ್ರಯತ್ನ ಮಾಡಲು ನಿಂತಿರುವುದನ್ನು ಸದರಿ ವ್ಯಕ್ತಿಯ ವಿಚಾರಣೆಯಿಂದ ಖಾತ್ರಿಯಾಗಿರುತ್ತದೆ ಸದರಿ ವ್ಯಕ್ತಿಯು ಸರಿಯಾಗಿ ನಡೆದುಕೊಂಡು ಬರದೆ ಕುಂಟುತ್ತಿದ್ದರಿಂದ ಅವನಿಗೆ ಏನಾಗಿರುತ್ತದೆ ಅಂತಾ ವಿಚಾರಣೆ ಮಾಡಿದಾಗ ನಾನು ಪೊಲೀಸ ಸಮವಸ್ತ್ರದಲ್ಲಿದ ತಮಗೆ ನೊಡಿ ಹೆದರಿ ಓಡುತ್ತಿರುವಾಗ ಒಂದು ಕಲ್ಲಿಗೆ ತೊಡಕಿ ಜಾರಿ ಬಿದ್ದಿರುತ್ತೆನೆ ಅದರಿಂದ ನನ್ನ ಎಡಗಾಲಿನ ಮೋಳಕಾಲ ಕೆಳಗೆ ಸಣ್ಣ ಪುಟ್ಟ ಗುಪ್ತಗಾಯ ಆಗಿರುತ್ತವೆ ಅಂತಾ ತಿಳಿಸಿರುತ್ತಾನೆ. ಅವನ ಅಂಗ ಝಡ್ತಿ ಮಾಡಿ  ಚೇಕ್ ಮಾಡಿ ನೊಡಲು ಸದರಿ ವ್ಯಕ್ತಿಯ ಪ್ಯಾಂಟಿನ ಎಡ ಜೇಬಿನಲ್ಲಿ ಒಂದು ಚಾಕು ಇದ್ದು ಮತ್ತು ಬಲ ಜೇಬಿನಲ್ಲಿ ಒಂದು ಪೇಪರದಲ್ಲಿ ಖಾರದ ಪುಡಿ ಇರುತ್ತವೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 59/2020 ಕಲಂ 32, 34 ಕೆಇ ಕಾಯ್ದೆ:’

ದಿನಾಂಕ: 08/05/2020 ನಾನು 1400 ಗಂಟೆಗೆ  ಪಿಎಸ್ಐ ರವರು  ಠಾಣೆಯಲ್ಲಿದ್ದಾಗ    ವಳಸಂಗ ಗ್ರಾಮದಲ್ಲಿ ಬಾಲಾಜಿ ದಾಮುವಾಲೆ ಈತನ ತಗಡದ ಶೆಡ್ಡಿನ ಪಕ್ಕದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಸರಕಾರದಿಂದ ಯಾವುದೆ ಪರವಾನಿಗೆ ಹೊಂದದೆ ಸರಾಯಿ ಬಾಟಲಗಳು ಮಾರಾಟ ಮಾಡುತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ಒಂದು ತಗಡದ ಶೆಡ್ಡಿನ ಪಕ್ಕದಲ್ಲಿ ಮರೆಯಾಗಿ ನಿಂತು ನೊಡಲು  ಒಬ್ಬ ವ್ಯಕ್ತಿ  ತನ್ನ ಮುಂದೆ  ಒಂದು ಬಿಳಿ ಬಣ್ಣದ ಪ್ಲಾಸ್ಟಿಕ ಚೀಲದಲ್ಲಿ  ಸರಾಯಿ ಬಾಟಲಗಳು  ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು  ನಿಂತಿರುವದನ್ನು ನೋಡಿ ಖಚಿತಪಡಿಸಿಕೊಂಡು  ಆತನ ಮೇಲೆ  ದಾಳಿ ಮಾಡಿ    ಬಾಲಾಜಿ ತಂದೆ ಶ್ರೀಪತಿ ದಾಮುವಾಲೆ ವಯ 30 ವರ್ಷ ಜಾ; ಸಮಗಾರ  ಉ; ಕೂಲಿ ಕೆಲಸ ಸಾ; ವಳಸಂಗ ಇತನ ಹತ್ತಿರ ಇದ್ದ  90  ಎಂ. ಎಲ್. ವುಳ್ಳ 90 ಯು.. ಎಸ್.  ವಿಸ್ಕಿ ಸರಾಯಿ ಬಾಟಲಗಳು ಇದ್ದು  ಅದರ ಪ್ರತಿಯೊಂದು ಬಾಟಲ ಕಿ; 30. 32 ಪೈಸೆ /- ಇದ್ದು ಹೀಗೆ 2728. 8 ಪೈಸೆ  ಬೇಲೆ ಬಾಳುವ ಸರಾಯಿ ಬಾಟಲಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Friday, May 8, 2020

BIDAR DISTRICT DAILY CRIME UPDATE 08-05-2020

  
 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:  08-05-2020

ಮೆಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ: 07-05-2020 ರಂದು 1000 ಪಿಎಸ್ಐ ರವರು ಗಂಟೆಗೆ   ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದೇನೆಂದ್ದರೆ, ಬಸವನ ವಾಡಿ ಕ್ರಾಸ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಸಾರಾಯಿ ಮಾರಾಟ ಮಾಡಲು ಒಯುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ಬಸವನವಾಡಿ ಕ್ರಾಸ ಹತ್ತಿರ  ರೋಡಿಗೆ 1100 ಗಂಟೆಗೆ ಹೋಗಿ ನೋಡಿದಾಗ ಬಸವನ ವಾಡಿ  ಹತ್ತಿರ ಒಂದು ಮೋಟಾರ ಸೈಕಲ್ ಮೇಲೆ ಮಧ್ಯದಲ್ಲಿ ಒಂದು ಬಿಳಿಯ ಪ್ಲಾಸ್ಟಿಕ ಚೀಲ ಇಟ್ಟುಕೊಂಡು  ಇಬ್ಬರೂ ಬರುತ್ತಿದ್ದು, ಅವರಿಗೆ   ಕೈಮಾಡಲು ಅವರು ಮೋಟಾರ ಸೈಕಲ ನಿಲ್ಲಿಸಿದ್ದು ಅವರ ಹೆಸರು ಮತ್ತು ವಿಳಾಸ ವಿಚಾರಿಸಿದಾಗ 1. ತುಳಸಿರಾಮ ತಂದೆ ಕಂಟೆಪ್ಪ ಬಿರಾದಾರ 60 ವರ್ಷ ಜಾ: ಕೋಳಿ ಉ: ಕೂಲಿ ಕೆಲಸ ಸಾ: ಕಾಸರ ತೂಗಾಂವ ವಾಡಿ ಅಂತ ಹೇಳಿದ್ದು,   ಹಿಂದೆ ಕುಳಿತವನ ಹೆಸರು ವಿಚಾರಿಸಲು ಭಗವಾನ ತಂದೆ ಬಾಲಾಜಿ ವಾಂಜರಖೇಡೆ 26 ವರ್ಷ ಜಾ: ಮರಾಠಾ ಉ: ಟ್ರಾಕ್ಟರ ಚಾಲಕ ಸಾ; ಕಾಸರ ತೂಗಾಂವ ವಾಡಿ ಅಂತ ಹೇಳಿದ್ದು,  ಅವರ  ಮೋಟಾರ ಸೈಕಲ ನಂ ಕೆಎ 38 ಕೆ 9641 ಮತ್ತು ಅವರ ಹತ್ತಿರವಿದ್ದ 90 ಎಮ್.ಎಲ್. ಸಾಮಥ್ರ್ಯವುಳ್ಳ 50 ಪ್ಲಾಸ್ಟಿಕ ಬಾಟಲಗಳಿದ್ದು, ಅದರ ಅ:ಕಿ; 1516/- ರೂ ನೇದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 20/2020 ಕಲಂ 271 ಐಪಿಸಿ ಹಾಗು ಕಲಂ 7 ಕೋಟ್ಪಾ  ಸಿಗರೇಟ್ ಆಂಡ್ ಅದರ್ ಟೋಬೋಕೋ ಪ್ರೋಡ್ಯಾಕ್ಸ ಎಕ್ಟ 2003 :-

ದಿನಾಂಕ 07/05/2020  ರಂದು 1415 ಗಂಟೆ ಸುಮಾರಿಗೆ ಬೀದರನಿಂದ ಔರಾದ ಕಡೆಗೆ ಅಶೋಕ್ ಲಿಲ್ಯಾಂಡ್ ಗೂಡ್ಸ್ ಪಿಕಪ್ ವಾಹನ ನಂ. ಕೆಎ-38/ಎ-2877 ನೇದ್ದರಲ್ಲಿ ಪಾನಮಸಾಲ (ಗುಟಕಾ) ಸಾಗಣಿಕೆ ಮಾಡುತ್ತಿದ್ದಾರೆ. ಅಂತಾ ಪಿಎಸ್ಐ ರವರಿಗೆ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಮರಖಲ್ ಗ್ರಾಮದ ಭಗತಸಿಂಗ್ ಚೌಕ್ ಹತ್ತಿರ ಬೀದರ ಕಡೆಯಿಂದ ಬರುತ್ತಿದ್ದ ಅಶೋಕ್ ಲಿಲ್ಯಾಂಡ್ ಗೂಡ್ಸ್ ಪಿಕಪ್ ವಾಹನ ನಂ. ಕೆಎ-38/ಎ-2877 ನೇದರ ಮೇಲೆ 1430 ಗಂಟೆಗೆ ದಾಳಿ ಮಾಡಿ  ಸ್ಥಳಕ್ಕೆ ಡಾ|| ಸಂತೋಷ ಕಾಳೆ ಡಿ.ಓ. ಜಿಲ್ಲಾ ಅಂಕೀತ ಅಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬೀದರ ರವರಿಗೆ ಫೋನ್ ಮಾಡಿ ಬರಮಾಡಿಕೊಂಡು. ಆರೋಪಿತರಾದ 1) ಅಬ್ದುಲ್ ಖಯುಮ ತಂದೆ ಎಮ್ ಡಿ ಖುಷರ್ಿದ ಪಂಜಾರ ಸಾ|| ಸಿಂಧೆಗಲ್ಲಿ ಔರಾದ (ಬಾ) ಹಾಗು 2) ಗ್ಯಾನೋಬಾ ತಂದೆ ನಾರಾಯಾಣರಾವ ಸಂಗನಾಳೆ ಸಾ|| ಔರಾದ (ಬಾ) ರವರನ್ನ ದಸ್ತಗಿರಿ ಮಾಡಿಕೊಂಡು ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಮುದ್ದೆಮಾಲು  ಒಟ್ಟು 10 ರಟ್ಟಿನ ಕಾಟನ್ಗಳಲ್ಲಿನ ವಿ-1 ತಂಬಾಕು ಅ. ಕೀ. 60,000/- ರೂ ದಷ್ಟು ಹಾಗು 10 ಗೋಣಿ ಚೀಲ ವಿಮಲ್ ಪಾನ ಮಸಾಲಾಚ ಅ. ಕೀ. 2,40,000/- ರೂ ದಷ್ಟು ಬೆಲೆಯುಳ್ಳದನ್ನು ಹಾಗು ಅಶೋಕ್ ಲಿಲ್ಯಾಂಡ್ ಗೂಡ್ಸ್ ಪಿಕಪ್ ವಾಹನ ನಂ. ಕೆಎ-38/ಎ-2877 ಅ. ಕೀ, 4,00,000/- ರೂ ದಷ್ಟು ಬೇಲೆಯುಳ್ಳದ್ದು ಜಪ್ತಿ ಮಾಡಿಕೊಂಡು ಲಾಕಡೌನ ಅವಧಿಯಲ್ಲಿ ಸದರಿ ವಿಮಲ್ ಪಾನ ಮಸಾಲ ಮತ್ತು ತಂಬಾಕುಗಳನ್ನು ತಿಂದು ಉಗಳಿದಲ್ಲಿ ಕರೋನ ಸಾಂಕ್ರಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಎಂದು ಸರಕಾರ ಸಾಗಾಣಿಗೆ ನಿಷೇಧ ಇದ್ದರು ಇವರು ಅದರ ಉಲಂಘನೆ ಮಾಡಿದ್ದರಿಂದ  ಆರೋಪಿತರಿಗೆ ದಸ್ತಗಿರಿ ಮಾಡಿಕೊಂಡು ಕಲಂ 271 ಐಪಿಸಿ ಹಾಗು ಕಲಂ 7 ಕೋಪ್ಟಾ, ಸಿಗರೇಟ್ ಆಂಡ್ ಅದರ್ ಟೋಬೋಕೋ ಪ್ರೋಡ್ಯಾಕ್ಸ ಎಕ್ಟ 2003 ಅಡಿಯಲ್ಲಿ ಪ್ರಕಣದ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 41/2020 ಕಲಂ 87 ಕೆಪಿ ಕಾಯ್ದೆ ;-

ದಿನಾಂಕ 07-05-2020 ರಂದು 1430 ಗಂಟೆಗ ಪಿಎಸ್ಐ ರವರು ಔರಾದ(ಬಿ) ಪೊಲೀಸ ಠಾಣೆಯಲ್ಲಿದ್ದಾಗ ತಹಸಿಲ್ ತಾಂಡಾದ ಆಚೆಗೆ ಔರಾದ ಶೀವಾರದಲ್ಲಿ ಹೋಗುವ ರೋಡಿನ ಪಕ್ಕದಲ್ಲಿ  ಕೆಲವು ಜನರು ಸೇರಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾರೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಬೇವಿನ ಮರದ ಕೆಳಗೆ  6 ಜನರು ಗೊಲಾಗಿ ಕುಳಿತು ಇಸ್ಪೇಟ ಎಲೆಗಳಿಂದ ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಅನ್ನುವ ಜೂಜಾಟ ಆಡುತ್ತಿದ್ದನ್ನು ನೋಡಿ ಖಚೀತ ಪಡಿಸಿಕೊಂಡು ಸದರಿ ದಾಳಿ ಮಾಡಿ ಹಿಡಿದುಕೊಂಡು  ಹೆಸರು ವಿಳಾಸ ವಿಚಾರಿಸಿ ಅಂಗ  ಪರೀಶಿಲಿಸಿ ನೋಡಲು 1) ಓಂಕಾರ ತಂದೆ ಗಂಗಾಧರ ಢೋಂಪರೆ ವಯ 24 ವರ್ಷ ಇತನ ಹತ್ತಿರ ನಗದು ಹಣ 960/-ರೂ. 2) ವಿಠಲ ತಂದೆ ಶಿವಾಜಿರಾವ ಸುಸಲಾದೆ ವಯ 30 ವರ್ಷ ಇತನ ಹತ್ತಿರ ನಗದು ಹಣ 790/-ರೂ. 3) ರಾಜು ತಂದೆ ಮಾನಸಿಂಗ ಚೌಹಾಣ ವಯ 28 ಇತನ ಹತ್ತಿರ ನಗದು ಹಣ 650/-ರೂ 4) ಸಿದ್ದಲಿಂಗ ತಂದೆ ಬಸವರಾಜ ಮಡ್ಡೆ ವಯ 30 ವರ್ಷ  ಹತ್ತಿರ ನಗದು ಹಣ 1350/-ರೂ 5) ವಿಕಾಸ ತಂದೆ ಸುಭಾಷ ಗಾಯಕವಾಡ ವಯ 30 ವರ್ಷ ಇತನ ಹತ್ತಿರ ನಗದು ಹಣ 320/-ರೂ ಇದ್ದವು 6) ಪ್ರಮೋದ ತಂದೆ ಲಕ್ಷ್ಮೀಣ ಪಾಟೀಲ್ ವಯ 23 ವರ್ಷ ಇತನ ಹತ್ತಿರ ನಗದು ಹಣ 840/-ರೂ ಇದ್ದವು ನಂತರ ಎಲ್ಲರ ಮಧ್ಯ ಇರುವ ಸ್ಥಳ ಪರೀಶೀಲಿಸಿ ನೋಡಲು ನಗದು ಹಣ 2340/-ರೂ, ಹಾಗೂ 52 ಇಸ್ಪೇಟ ಎಲೆಗಳು ಇದ್ದು  ಹೀಗೆ ಒಟ್ಟು ನಗದು ಹಣ 7250/-ರೂ ಹಾಗೂ 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ 32, 34 ಕೆ.ಇ. ಕಾಯ್ದೆ;- 

ದಿನಾಂಕ 07/05/2020 ರಂದು 1300 ಗಂಟೆಗೆ ಶ್ರೀಮತಿ ಸುನೀತಾ ಪಿಎಸ್ ಐ (ಕಾಸು) ರವರಿಗೆ  ಬನ್ನಳ್ಳಿ ಗ್ರಾಮದ ವಾಲ್ಮೀಕಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ಚೀಲದಲ್ಲಿ ವಿಸ್ಕಿ ಬಾಟಲಗಳು ಇಟ್ಟು ಸಾರ್ವಜನಿಕರಿಂದ ಹಣ ಪಡೆದು ಮಾರಾಟ ಮಾಡುತ್ತೀದ್ದಾನೆ. ಅಂತಾ ಖಚಿತ ಬಾತ್ಮೀ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಬನ್ನಳ್ಳಿ ಗ್ರಾಮಕ್ಕೆ ಹೋಗಿ  ನೋಡಿದಾಗ ತೀಪ್ಪಣ್ಣಾ ತುಕಾರಾಮ ಇವರ ಮನೆಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಬಳಿ ಇದ್ದ ಬೀಳಿ ಖಾಲಿ ಚಿಲದಿಂದ ವಿಸ್ಕಿ ಬಾಟಲಗಳನ್ನು ತೆಗೆದು ಸಾರ್ವಜನೀಕರಿಂದ ಹಣ ಪಡೆದು ಮಾರಾಟಾ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ  ಮಾಡಿ ವಿಸ್ಕಿ ಮಾರಾಟಾ ಮಾಡುತ್ತಿದ್ದ ವ್ಯಕ್ತಿ ಸಮವಸ್ತ್ರದಲ್ಲಿದ್ದ ಪೊಲೀಸರಿಗೆ ನೋಡಿ ಆ ವ್ಯಕ್ತಿ ಹಾಗು ಖರೀದಿ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೊದರು ಅಲ್ಲಿಯೇ ಬಿಟ್ಟು ಹೊದ ಚಿಲದಲ್ಲಿ   1) ಓರಿಜನಲ್ ಚಾಯಸ್ಸ 180 ಎಮ್ ಎಲ್ ಕಾಗದ ಪುಟದಿಂದ ತೈಯಾರಿಸಿದ 13 ವಿಸ್ಕಿ ಬಾಟಲಗಳು ಇದ್ದು ಅವುಗಳ ಕಿಮ್ಮತ್ತು 785=00 ರೂಪಾಯಿ ಹಾಗು 2) ಯು.ಎಸ್ ವಿಸ್ಕಿ 90 ಎಮ್ ಎಲ್ ವುಳ್ಳ 15 ಬಾಟಲಗಳು ಇದ್ದು ಇವುಗಳ ಕಿಮ್ಮತ್ತು 460=00 ರೂ ಹೀಗೆ ಒಟ್ಟು 1245=00 ರೂ ಬೇಲೆ ಬಾಳುವ ವಿಸ್ಕಿ ಇದ್ದು ವಿಸ್ಕಿ ಬಾಟಲಗಳನ್ನು ಮಾರಾಟಾ ಮಾಡುತ್ತಿದ್ದ ಓಡಿ ಹೊದ ವ್ಯಕ್ತಿಯ ಹೆಸರು ಮತ್ತು ವಿಳಾಸ ತೀಳಿದುಕೋಳ್ಳಲ್ಲು ಸದರಿಯವನ ಹೇಸರು ಧೂಳಪ್ಪಾ ತಂದೆ ತುಕಾರಾಮ ಖಾನಾಪುರೆ ವಯ:30 ವರ್ಷ ಜಾ:ಕಬ್ಬಲಿಗ ಉ: ಕೂಲಿ ಕೇಲಸ ಸಾ: ಬನ್ನಳ್ಳಿ  ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.