Police Bhavan Kalaburagi

Police Bhavan Kalaburagi

Thursday, May 21, 2020

BIDAR DISTRICT DAILY CRIME UPDATE 21-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 21-05-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 454, 457 ಐಪಿಸಿ :-

ದಿನಾಂಕ. 20-05-2020 ರಂದು. 10.00 ಗಂಟೆಯ ಸುಮಾರಿಗೆ ಬೀದರ ಅಂಬೇಡ್ಕರ ಕಾಲೋನಿಯಲ್ಲಿ ಒಂದು ಮನೆಯು ಕಳ್ಳತನ ಆದ ಬಗ್ಗೆ ಮಾಹಿತಿ ಬಂದ ಮೇರೆಗೆ ಅಂಬೇಡ್ಕರ ಕಾಲೋನಿಗೆ ಭೇಟ್ಟಿ ನೀಡಿ ಪರಿಸೀಲಿಸಿ ನೋಡಿದಾಗ ಕಳ್ಳತನದ ಆದ ಬಗ್ಗೆ ಕಂಡು ಬಂದಿದರಿಂದ  ಫಿರ್ಯಾದಿ ಶ್ರೀಮತಿ ಶಾಂತಮ್ಮಾ  ಗಂಡ ದಿ. ಮಾರುತಿ ವಯ- 36 ವರ್ಷ ಜಾ/ ಕಬ್ಬಲಗೇರ ಉ- ಜಿಲ್ಲಾ ಆಸ್ಪತ್ರೆಯಲ್ಲಿ ಆಯಾಮ್ಮಾ ಕೆಲಸ ಸಾ/ ಅಂಬೇಡ್ಕರ ಕಾಲೋನಿ ಬೀದರ ರವರು ತಮ್ಮ ಮೌಖಿಕ ಹೇಳಿಕೆ ನೀಡಿದೇನೆಂದರೆ. ತಾನು ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ದಿನಾಂಕ.04-05-2020 ರಂದು   ತಮ್ಮ ಮನೆಗೆ ಸಾಯಂಕಾಲ. 5 ಗಂಟೆಗೆ ಬೀಗ ಹಾಕಿಕೊಂಡು  ಜಿಲ್ಲಾ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಂಡು ದಿನಾಂಕ. 19-05-2020 ರಂದು ರಾತ್ರಿ 2300 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಗುಣಮುಖವಾಗಿ ಬಿಡುಗಡೆ ಹೊಂದಿ ತಮ್ಮ ಮನೆ ಅಂಬೇಡ್ಕರ ಕಾಲೊನಿಗೆ ರಾತ್ರಿ 12 ಗಂಟೆಯ ಸುಮಾರಿಗೆ ಬಂದು ತನ್ನ ಮನೆ ಮೇನ್ ಗೇಟ ತೆಗೆದು ಒಳಗೆ ಹೋಗಿ ಬಾಗಿಲ ತೆರೆಯಲು ಹೋದಾಗ ತನ್ನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದಿದ್ದು ಇತ್ತು. ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿರುವ ಅಲಮಲಾರಿಯ ಬೀಗ ಸಹ ಮುರಿದಿದ್ದು ಇತ್ತು ಅಲಮಾರಿಯ ಲಾಕರದಲ್ಲಿಟ್ಟ ಬಂಗಾರದ ಒಡವೆಗಳು ನೋಡಿದಾಗ ಅವುಗಳು ಇರಲಿಲ್ಲಾ ಮತ್ತು ಹೋರಗೆ ನಮ್ಮ ತಾಯಿಯನ್ನು ಒಂದು ಸ್ಟೀಲ್ ಡಬ್ಬಿಯಲ್ಲಿಟ್ಟ ಬಂಗಾರದ ಒಡವೆ ಹಾಗೂ ಬೆಳ್ಳಿಯ ಚೈನ್ ಸಹ ಕಾಣಲಿಲ್ಲಾ ನನ್ನ ಅಲಮಾರಿಯಲ್ಲಿ ಇದ್ದ ಬಂಗಾರದ ಒಡೆವೆಗಳಾದ 1) ಪೆಂಡೆಂಟ್ ಸರ್ ಒಂದು ಬಂಗಾರದು 7 ಗ್ರಾಂ ಅ.ಕಿ. 28000/-ರೂ 2) ಹೂವ್ವಾ ಮತ್ತು ಜೋಮಕಾ ಬಂಗಾರದು 7 ಗ್ರಾಂ. ಅ.ಕಿ. 28000/-ರೂ , 3) ಬೆರಳ್ಳಿನ ಉಂಗರ 4 ಗ್ರಾಂ ಬಂಗಾರದು ಅ.ಕಿ. 16000/-ರೂ , 4) ನಗದು ಹಣ. 55000/-ರೂ ಹಾಗೂ ಅವಳ ತಾಯಿಯ ಡಬ್ಬಿಯಲ್ಲಿಟ್ಟ  ಬಂಗಾರದ ಒಡವೆಗಳು 1) ಮಂಗಳಸೂತ್ರ  1 ತೊಲೆ ಅ.ಕಿ. 40000/-ರೂ  2) ಗುಂಡಿನ ಸರ್ 1 ತೊಲೆ ಅ.ಕಿ. 40000/-ರೂ 3) ಹೂವ್ವಾ ಮತ್ತು ಜೊಮಕಾ 8 ಗ್ರಾಂ ಅ.ಕಿ. 32000/-ರೂ 4) ಬೆಳ್ಳಿ ಚೈನ್ 30 ತೊಲೆ ಅ.ಕಿ. 15000/-ರೂ ಹೀಗೆ ಒಟ್ಟು. 2,54000/-ರೂ ಬೆಲೆ ಬಾಳವು ಬಂಗಾರದ ಒಡವೆಗಳು ಮತ್ತು ಬೆಳ್ಳಿ ಒಡವೆ ಹಾಗೂ ನಗದು ಹಣ  ದಿನಾಂಕ. 04-05-2020   ರಂದು ಸಾಯಂಕಾಲ 5 ಗಂಟೆಯಿಂದ ದಿನಾಂಕ. 19-05-2020 ರಂದು ರಾತ್ರಿ 23.45 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಅಪರಾಧ ಸಂಖ್ಯೆ 03/2020 ಕಲಂ 174 ಸಿಆರ್.ಪಿ.ಸಿ :-

ದಿನಾಂಕಃ 20-05-2020 ರಂದು 1700 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಒಂದು ಎಂ ಎಲ್ ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ  ಭೇಟಿ ನೀಡಿ ಅಲ್ಲಿ ಹಾಜರಿದ್ದ ಫಿರ್ಯಾದಿ ಶ್ರೀಮತಿ ಮಹೇಮೂನ ಬೀ ಗಂಡ ಹಸನಖಾನ ಬಿರಾದಾರ ವಯಃ50 ವರ್ಷ ಜಾತಿಃಮುಸ್ಲಿಂ ಉಃಮನೆಕೆಲಸ ಸಾಃತಾಳಮಡಗಿ ಗ್ರಾಮ ಇವರು ತನ್ನ ಫಿರ್ಯಾದು ಹೇಳಿಕೆ ನೀಡಿದರ ಸಾರಾಂಶವೆನೆಂದರೆ  ಫಿರ್ಯಾಧಿಗೆ 6 ಜನ ಮಕ್ಕಳಿದ್ದು 5 ಗಂಡು 1 ಹೆಣ್ಣು ಮಗಳು ಇರುತ್ತಾಳೆ ಹಿಗಿರುವಾಗ ದಿನಾಂಕಃ20-05-2020 ರಂದು ತಾಳಮಡಗಿ ಗ್ರಾಮದ ಮನೆಯ ಮುಂದೆ ನಳದ ನೀರು ಬಂದಿದ್ದರಿಂದ ಮನೆಯಲ್ಲಿ ನೀರು ತುಂಬುವ ಸಲುವಾಗಿ ಇವರ ಕೊನೆಯ ಮಗನಾದ ಶಾಜೀದಖಾನ ತಂದೆ ಹಸನಖಾನ ವಯಃ15 ವರ್ಷ ಇತನು ನಳಕ್ಕೆ ಕೈ ಪೈಪ ಹಚ್ಚಿ ಕರೆಂಟ ಹಚ್ಚಿ ಮೋಟಾರ ಚಾಲು ಮಾಡಿರುತ್ತಾನೆ ಮನೆಯಲ್ಲಿ ನೀರು ತುಂಬಿಕೊಂಡ ನಂತರ ಅಂದಾಜು ಸಮಯ 1400 ಗಂಟೆಯ ಸುಮಾರಿಗೆ ಬೋರ್ಡಗೆ ಇರುವ ಬಟನ ಬಂದ ಮಾಡಿ ನಂತರ ಮೊಟಾರದ ಸ್ವಿಚ್ಚ ಕಿತ್ತುವಾಗ ಒಮ್ಮೆಲೆ ಕರೆಂಟ ಹಿಡಿದು ಬಿಸಾಡಿದಾಗ ಕಲ್ಲಿನ ಮೇಲೆ ಬಿದ್ದು ಆತನ ಬಲಗಡೆ ಹುಬ್ಬಿನ ಮೇಲೆ ರಕ್ತಗಾಯವಾಗಿದ್ದು   ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿದ್ದು ನಂತರ ವೈದ್ಯರ ಸಲಹೆ ಮೇರೆಗೆ ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷಿಸಿ ಮೃತ ಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                                                               

Wednesday, May 20, 2020

BIDAR DISTRICT DAILY CRIME UPDATE 20-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 20-05-2020

ಗಾಂದಿಗಂಜ ಪೊಲೀಸ  ಠಾಣೆ ಅಪರಾಧ ಸಂಖ್ಯೆ 83/2020 ಕಲಂ 307 ಐಪಿಸಿ :-

ದಿನಾಂಕ 19-5-2020 ರಂದು 1915 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ಎಂ ಎಲ ಸಿ ಇದೆ ಅಂತಾ ಮಾಹಿತಿ ಮೆರೆಗೆ ಬೀದರ ಸರಕಾರಿ ಆಸ್ಪತ್ರೆಗೆ 19-30 ಗಂಟೆಗೆ ಭೇಟಿ ನೀಡಿ ಗಾಯಾಳು ಸ್ವಾಮಿದಾಸ ಇತನಿಗೆ ನೋಡಲು ಇತನು ಮಾತನಾಡುವ ಸ್ಥಿತಿಯಲ್ಲಿ ಇರದೆ ಇರುವುದರಿಂದ ಅಲ್ಲಿ ಹಾಜರಿದ್ದ ಸ್ವಾಮಿದಾಸ ಇತನ ಹೆಂಡತಿಯಾದ ಸಲೋಮಿ ಗಂಡ ಸ್ವಾಮಿದಾಸ ಹಂಗರಗೆನೋರ ವಯ 32 ವರ್ಷ ಜಾತಿ ಕ್ರಿಶ್ಚನ ಸಾ: ಜಂಬಗಿ ಕಾಲೋನಿ ಮೈಲೂರ ಇವಳ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ  ಇವರ ಪತಿ ಸ್ವಾಮಿದಾಸ ಇತನು ಸೆಂಟ್ರಿಂಗ ಕೆಲಸ ಮಾಡುತ್ತಿದ್ದು ದಿನಾಂಕ 19-5-2020 ರಂದು ಕೆಲಸ ಇಲ್ಲದ ಪ್ರಯುಕ್ತ ಮನೆಯಲ್ಲಿ ಇದ್ದು ಅಂದಾಜು ಮದ್ಯಾಹ್ನ 1400 ಗಂಟೆಗೆ  ಮನೆಯ ಎದರುಗಡೆ ಮೋಟಾರ ಸೈಕಿಲ ಮೇಲೆ ಒಬ್ಬ ವ್ಯಕ್ತಿ ಬಂದು ತನ್ನ ಗಂಡ ಸ್ವಾಮಿದಾಸ ಇತನಿಗೆ ಕರೆದಿದ್ದು ಅವನು ಮುಖ ತೊಳೆದುಕೊಂಡು ಬರುತ್ತೇನೆ ಅಂತಾ ಹೇಳಿ ಮುಖ ತೊಳೆದುಕೊಂಡು ಕರೆಯಲು ಬಂದವನ ಮೋಟಾರ ಸೈಕಿಲ ಮೇಲೆ ಹೊರಗೆ ಹೊಗಿದ್ದು ಇರುತ್ತದೆ ನಂತರ ನನ್ನ ನಾದನಿಯಾದ ರೇಣುಕಾ ಗಂಡ ಸೂರ್ಯಕಾಂತ ಮತ್ತು ಗೊದಾವರಿ ಗಂಡ ಯಾಕುಬ ಇವರು ಬಂದು ತಿಳಿಸಿದ್ದೆನೆಂದರೆ ನಿನ್ನ ಗಂಡನಾದ ಸ್ವಾಮಿದಾಸ ಇವರಿಗೆ ಹಾರೋ ಚಾಕುವಿನಿಂದ ಹೊಟ್ಟೆಯಲ್ಲಿ ಹೊಡೆದು ಗಾಯ ಗೊಳಿಸಿದ್ದು ಅವನು ನೆಲದ ಮೇಲೆ ಬಿದ್ದಿದ್ದು ಹೊಟ್ಟೆಉಯಿಂದ ರಕ್ತ ಬರುತ್ತಿದೆ ಅಂತಾ ಸಾಯಾಂಕಾಲ 5-30 ಗಂಟೆ ಸುಮಾರಿಗೆ ತಿಳಿಸಿದ ಮೇರೆಗೆ ಹೊಗಿ ನೋಡಲು ಓಣಿಯ ಒಂದು ಬಿಲ್ಡಿಂಗ ಹತ್ತಿರ ನೆಲದ ಮೇಲೆ ಬಿದ್ದಿದ್ದು ಫಿರ್ಯಾದಿ ಗಂಡ ನೆಲದ ಮೇಲೆ ಬಿದ್ದಿದ್ದು ಬಲ ಹೊಟ್ಟೆಯ ಕೆಳಗಡೆ ಗಾಯವಾಗಿ ರಕ್ತ ಸೊರುತ್ತಿದ್ದು ತಕ್ಷಣ ಎಲ್ಲರು ಕೂಡಿ   ಸ್ವಾಮಿದಾಸ ಇತನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿ ಸೆರಿಕ ಮಾಡಿದ್ದು ಘಟನೆಯ ಬಗ್ಗೆ ನನಗೆ ಗೊತ್ತಾಗಿದ್ದೆನೆಂದರೆ ನನ್ನ ಗಂಡ ಇತನು ರವಿ ತಂದೆ ಜೈವಂತ ಇತನ ಹತ್ತಿರ ಖಚರ್ಿಗಾಗಿ ರೂ: 1000/- ತೆಗೆದುಕೊಂಡಿದ್ದು ತೆಗೆದುಕೊಂಡ ಹಣ ಕೊಡು ಅಂತಾ ಕೇಳಿದ್ದು ಅದಕ್ಕೆ ತನ್ನ ಹತ್ತಿರ ಹಣ ಇಲ್ಲ ಅಂತಾ ಅಂದಿದ್ದಕ್ಕೆ ರವಿ ಇತನು ಸಿಟ್ಟಿಗೆದ್ದು ತನ್ನ ಗಂಡನ ಸ್ವಾಮಿದಾಸ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಅವನ ಹತ್ತಿರ ಇದ್ದ ಚಾಕುವಿನಿಂದ  ಬಲ ಹೊಟ್ಟೆಯ ಕೆಳಗಡೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ: 19-05-2020 ರಂದು 1600 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ  ಕಾಡವಾದ ಸಿವಾರದ  ಇಜಾಜ್ ರವರ ಫಾರ್ಮಹೌಸ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಡುತ್ತಿದ್ದಾರೆ. ಎಂಬ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಇಜಾಜ್ ರವರ ಫಾರ್ಮಹೌಸ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೇಲವು ಜನರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಟುತ್ತಿದ್ದದನ್ನು ಖಚಿತ ಪಡಿಸಿಕೊಂಡು ಸದರಿ ಜನರ ಮೇಲೆ ಎಲ್ಲರು ಸೇರಿ ಏಕ ಕಾಲಕ್ಕೆ ದಾಳಿ ಮಾಡಿ ಇಸ್ಪೇಟ್ ಆಡುತ್ತಿದ್ದ 08 ಜನರನ್ನು ಹಿಡಿದ ನಂತರ ಮೆಹಬೂಬ ಅಲಿ [.ವಿ] ಪಿ.ಎಸ್. ಸಾಬೇಬರು ಅವರನ್ನು ವಿಚಾರಿಸಲಾಗಿ   1]ಮೈನೊದ್ದೀನ ತಂದೆ ಮೆಹಬೂಬಸಾಬ ಗಾಡಿವಾಲೆ ವಯ 60 ವರ್ಷ ಜಾತಿ:ಮುಸ್ಲಿಂ ಉದ್ಯೋಗ: ಕೂಲಿ ಕೆಲಸ ಸಾ||ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 450/- ರೂ  2]ಮಹ್ಮದ ತಂದೆ ಚಾಂದಸಾಬ ದರ್ಗಾವಾಲೆ ವಯ 38 ವರ್ಷ ಜಾತಿ:ಮುಸ್ಲಿಂ ಉದ್ಯೋಗ:ಕೂಲಿ ಕೆಲಸ ಸಾ|| ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 650/- ರೂ 3] ಫಿರೋಜ ತಂದೆ ನಬೀಸಾಬ ಕಲ್ಯಾಣಿವಾಲೆ ವಯ 32 ವರ್ಷ ಜಾತಿ:ಮುಸ್ಲಿಂ ಉದ್ಯೋಗ: ಕೂಲಿ ಕೆಲಸ ಸಾ||ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 400/- ರೂ 4]ಮಹೇಮುದ ತಂದೆ ಉಸ್ಮಾನಮಿಯ್ಯಾ ಯುಪಿವಾಲೆ ವಯ 20 ವರ್ಷ ಜಾತಿ:ಮುಸ್ಲಿಂ ಉದ್ಯೋಗ: ಕೂಲಿ ಕೆಲಸ ಸಾ|| ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 450/- ರೂ 5]ಮಲ್ಲಪ್ಪಾ ತಂದೆ ಜೆಟ್ಟೆಪ್ಪಾ ರಾಯಗೊಂಡ ವಯ 50 ವರ್ಷ ಜಾತಿ:ಕುರುಬ ಉದ್ಯೋಗ: ಪೆಂಟಿಂಗ್ ಕೆಲಸ ಸಾ|| ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 500/- ರೂ 6]ಉಸ್ಮಾನಮಿಯ್ಯಾ ತಂದೆ ರೆಹಮಾನಸಾಬ ಯುಪಿವಾಲೆ ವಯ 50 ವರ್ಷ ಜಾತಿ:ಮುಸ್ಲಿಂ ಉದ್ಯೋಗ: ವ್ಯಾಪಾರ ಸಾ|| ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 560/- ರೂ 7]ಮಲ್ಲಪ್ಪಾ ತಂದೆ ಮಾಣಿಕಪ್ಪಾ ರಾಯಗೊಂಡ ಜಾತಿ:ಕುರುಬ ಉದ್ಯೋಗ: ಒಕ್ಕಲುತನ ಕೆಲಸ ಸಾ|| ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 400/- ರೂ 8]ವೈಜಿನಾಥರಡ್ಡಿ ತಂದೆ ತುಕರಾಮ ಔರಾದಕರ ವಯ 55 ವರ್ಷ ಜಾತಿ:ರಡ್ಡಿ ಉದ್ಯೋಗ: ಒಕ್ಕಲುತನ ಕೆಲಸ ಸಾ||ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 300/- ರೂ ಎಲ್ಲರ ಮಧ್ಯ 350/- ಹೀಗೆ ಒಟ್ಟು 4060/- ಮತ್ತು 52 ಇಸ್ಪೀಟ ಎಲೆಗಳುನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖ ಕೈಗೋಳ್ಳಲಾಗಿದೆ.  

Tuesday, May 19, 2020

BIDAR DISTRICT DAILY CRIME UPDATE 19-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 19-05-2020


ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 67/2020 ಕಲಂ 379 ಐಪಿಸಿ :-

ದಿನಾಂಕ 18/05/2020 ರಂದು 12:30 ಗಂಟೆಗೆ ಅರ್ಜಿದಾರರಾದ ಶ್ರೀ ಮಹ್ಮದ ಯಾಸೀನ ತಂದೆ ಮಹ್ಮದ ದಸ್ತೆಗೀರ ಖಾದಿವಾಲೆ ವಯ 29 ವರ್ಷ ಜಾತಿ ಮುಸ್ಲಿಂ ಉ// ಅಟೊ ಮೊಬೈಲ್ಸ್ ಅಂಗಡಿ ವ್ಯಾಪಾರ ಸಾ// ಮಹೇಬೂಬನಗರ ಬಸವಕಲ್ಯಾಣ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶ ಎನೆಂದರೆ ಇವರ ಹತ್ತಿರ ಒಂದು ಹೊಂಡಾ ಸಿಡಿ-110 ಡ್ರೀಮ್ ಮೋಟಾರ ಸೈಕಲ್ ನಂ ಕೆಎ-56/ಜೆ-2115 ಅದರ ಚೆಸ್ಸಿ ನಂ ಎಮ್.ಇ.4ಜೆಸಿ677ಸಿಜೆ8139918 ಮತ್ತು ಇಂಜಿನ್ ನಂ ಜೆಸಿ6784145073 ಅದರ ಮಾಡಲ್ 2018 ಇರುತ್ತದೆ.  ಬೈಕಿನ ಮೌಲ್ಯ ಅ.ಕಿ. 40,000/- ರೂಪಾಯಿ ಇರುತ್ತದೆ.   ದಿನಾಂಕ 16/03/2020 ರಂದು ರಾತ್ರಿ 9 ಗಂಟೆಗೆ ಕಿರಾಣಿ ಸಾಮಾನುಗಳು ತರುವಗೋಸ್ಕರ ನನ್ನ ಮೋಟಾರ ಸೈಕಲ್ ಕೆಎ-56/ಜೆ-2115 ನೆದ್ದರ ಮೇಲೆ ಹೋಗಿ  ಬಸವಕಲ್ಯಾಣ ನಗರದ ಬಸ್ ನಿಲ್ದಾಣ ಹತ್ತಿರ ಇರುವ ಕಿರಾಣಿ ಅಂಗಡಿಯ ಎದುರುಗಡೆ   ಮೋಟಾರ ಸೈಕಲ್ ನಿಲ್ಲಿಸಿ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮರಳಿ ಬಂದು ನೋಡಿದಾಗ ಮೋಟಾರ ಸೈಕಲ್ ಇರುವುದಿಲ್ಲ. ಎಲ್ಲಾ ಕಡೆ ಹುಡಿಕಾಡಿದರು ಮೋ.ಸೈ. ಸಿಕ್ಕಿರುವುದಿಲ್ಲ ಯಾರೋ ಅಪರಿಚಿತರು ಮೋ.ಸೈಕಲ್ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮುಡುಬಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 37/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 18/05/2020 ರಂದು 1130 ಗಂಟೆಯ ಸುಮಾರಿಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಫೋನ್ ಮುಖಾಂತರ ಮಾಹಿತಿ ಬಂದಿದ್ದೇನೆಂದರೆ ಕಲಖೋರಾ ಗ್ರಾಮದಲ್ಲಿ ಮರಗೆಮ್ಮ ಮಂದೀರದ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ   ಸಿಬ್ಬಂದಿಯೊಂದಿಗೆ ಕಲಖೋರಾ ಗ್ರಾಮಕ್ಕೆ ಹೋಗಿ ಬಾಗಹಿಪ್ಪರಗಾ ರೋಡಿನ ಮೇಲೆ ಮರಗೆಮ್ಮ ಮಂದೀರದ ಇಚೆಗೆ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಮುಂದೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಬಾಗಹಿಪ್ಪರಗಾ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಚೀಲ ಇಟ್ಟುಕೊಂಡಿದ್ದು, ಸಂಶಯ ಬಂದು ಸದರಿ ವ್ಯಕ್ತಿಯ ಮೇಲೆ  ದಾಳಿ ಮಾಡಿ ಅವನಿಗೆ ಹಿಡಿದು ಅವನ ಹತ್ತೀರ ಇದ್ದ ಬಿಳಿ ಚೀಲ ಪರಿಶೀಲಿಸಿ ನೋಡಲಾಗಿ ಅದರಲ್ಲಿ 180 ಎಮ್ ಎಲ್ ನ 20 ಯು ಎಸ್ ಸರಾಯಿ ಬಾಟಲಗಳಿರುತ್ತವೆ. ಮತ್ತು 90 ಎಮ್ ಎಲ್ ನ 10 ಯು ಎಸ್ ವಿಸ್ಕಿ ಬಾಟಲ್ ಗಳಿದ್ದು, ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಂಜುಕುಮಾರ ತಂದೆ ಬಸವಣಪ್ಪ ಹುಳಗೇರಿ ವಯ 35 ವರ್ಷ ಉ: ಒಕ್ಕಲುತನ ಜಾ; ಲಿಂಗಾಯತ ಸಾ: ಕಲಖೋರಾ ಅಂತ ತಿಳಿಸಿದನು ಅವನ ಹತ್ತೀರ ಚೀಲದಲ್ಲಿದ್ದ 180 ಎಮ್ ಎಲ್ ನ 20 ಯು ಎಸ್ ಸರಾಯಿ ಬಾಟಲಗಳ ಒಟ್ಟು ಕ್ಕಿಮ್ಮತ್ತು 1212 ರೂ ಮತ್ತು 90 ಎಮ್ ಎಲ್ ನ 10 ಯು ಎಸ್ ವಿಸ್ಕಿ ಬಾಟಲ್ಗಳು ಅದರ ಕ್ಕಿಮ್ಮತ್ತು 303.20 ರೂ ಒಟ್ಟು 1515.20 ರೂಗಳಷ್ಟು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.