Police Bhavan Kalaburagi

Police Bhavan Kalaburagi

Tuesday, July 7, 2020

BIDAR DISTRICT DAILY CRIME UPDATE 07-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-07-2020

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 76/2020 ಕಲಂ 379 ಐಪಿಸಿ :-

ದಿನಾಂಕ 06/07/2020  ರಂದು 1915 ಗಂಟೆಗೆ ಫಿರ್ಯಾದಿ  ಶ್ರೀ. ನರಸಿಂಹ ಮೈಸೂರ ತಂದೆ ನಾರಾಯಣರಾವ ಮೈಸೂರ ವಯ:35 ವರ್ಷ ಜಾತಿ:ಪದ್ಮಶಾಲಿ(ನೇಕಾರ) ಉ:ಖಾಸಗಿ ನೌಕರಿ  ಸಾ/ವಿದ್ಯಾನಗರ ಕಾಲೋನಿ 11 ನೇ ಕ್ರಾಸ  ಬೀದರ  ರವರು ಠಾಣೆಗೆ ಹಾಜರಾಗಿ ತನ್ನದೊಂದು ಕನ್ನಡದಲ್ಲಿ ಲಿಖಿತ  ದೂರನ್ನು ಸಲ್ಲಿಸಿದ್ದು ಸ್ವೀಕರಿಸಿಕೊಂಡಿದ್ದು, ದೂರಿನ ಸಾರಾಂಶವೇನಂದರೆ, ಫಿರ್ಯಾದಿಯು ಲಾಹೋಟಿ ಷೋರೂಮನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ ಅಂತ ಕೆಲಸ ಮಾಡಿಕೊಂಡು  ಉಪಜೀವಿಸಿಕೊಂಡಿದ್ದು  2017  ನೇ ಸಾಲಿನಲ್ಲಿ ಒಂದು  ಹೊಂಡಾ ಶೈನ  ಮೋಟರ ಸೈಕಲ  ನಂ ಕೆಎ38ಯು4888 ನೇದ್ದನ್ನು  ಖರಿದಿಸಿದ್ದು ಇರುತ್ತದೆ.     ಹೀಗಿರುವಾಗ ದಿನಾಂಕ 23/06/2020  ರಂದು ಬೆಳಿಗ್ಗೆ 11:00 ಎ.ಎಮ. ಗಂಟೆಗೆ ತನ್ನ ಮೊಟರ ಸೈಕಲನ್ನು ಪ್ರತಾಪನಗರ ದಲ್ಲಿರುವ ಲಾಹೋಟಿ ಷೋರೂಮಿನ ಮುಂದೆ ನಿಲ್ಲಿಸಿ ಷೋರೂಮನಲ್ಲಿ ಕೆಲಸಕ್ಕಾಗಿ ಹೋಗಿದ್ದು, 11:30 ಗಂಟೆಯ ಸಮಯಕ್ಕೆ ಷೊರೂಮಿನಿಂದ ಹೊರಗೆ ಬಂದು ನೋಡುವಷ್ಟರಲ್ಲಿ    ಮೊಟರ ಸೈಕಲ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ.      ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ, ಸಿಗದಿದ್ದಾಗ  ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಮೋ.ಸೈಕಲನ ಅಂ.ಕಿ. 30,000/- ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 88/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ:06/07/2020 ರಂದು 11:30 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿರುವಾಗ ಬಸವ ಕಲ್ಯಾಣ ನಗರದ ಮುಂಡೆಪಾಳಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಬಂದಿದರ ಮೇರೆಗೆ ಸಿಬ್ಬಂದಿಯೊಂದಿಗೆ  ಹೋಗಿ ನೋಡಿದಾಗ ಮುಂಡೆಪಾಳಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 16:00 ಗಂಟೆಗೆ   ದಾಳಿಮಾಡಿ ತಾಜ ತಂದೆ ಸುಲ್ತಾನಸಾಬ ಸೈಯದ ವಯಸ್ಸು//22 ವರ್ಷ ಜಾತಿ//ಮುಸ್ಲಿಂ //ಕೂಲಿಕೆಲಸ ಸಾ//ರೀಕ್ಷಾ ಕಾಲೋನಿ ಬಸವಕಲ್ಯಾಣ ಇತನನ್ನು ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 1250/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ. ನೇದ್ದವುಗಳು ಒಂದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/2020 ಕಲಂ 174 ಸಿಆರ್.ಪಿ.ಸಿ:-

ದಿನಾಂಕ 6-7-2020 ರಂದು 0900 ಗಂಟೆಗೆ ಶ್ರೀ ದೇವಿದಾಸ ತಂದೆ ಧನಾಜಿ ಜಟಗೋಂಡ ವಯ 50 ವರ್ಷ ಜಾ// ಕುರುಬ ಉ// ಓಕ್ಕಲುತನ ಸಾ//ಸಂಗನಾಳ ರವರು ಠಾಣೆಗೆ ಹಾಜರಾಗಿ   ಲಿಖತ ದೂರು ಅರ್ಜಿ ಸಲ್ಲಿಸಿದರ ಸಾರಾಂಶವೆನೆಂದರೆ ಇವರ ತಮ್ಮ ಲಕ್ಷ್ಮಣ ತಂದೆ ಧನಾಜಿ ಜಟಗೊಂಡ ವಯ// 35 ವರ್ಷ ಸಾ// ಸಂಗನಾಳ ಗ್ರಾಮದ ನಿವಾಸಿಯಾಗಿದ್ದು ಇವರಿಗೆ 3 ಎಕ್ಕರೆ 15 ಗುಂಟೆ  ಜಮೀನು ಇದ್ದು ಓಕ್ಕಲುತನ ಕೆಲಸ ಮಾಡಿಕೊಂಡು ಇರುತ್ತಾನೆ. ಎರಡು ಸಲ ಸೋಯಾಬೀನ  ಬೀಜ ಬಿತ್ತಿದ್ದರು ಮಳಕೆ ಎಳಲಿಲ್ಲ ಬ್ಯಾಂಕೀನ ಸಾಲ ಕೂಡ ಆಗಿದೆ ಸಾಲ ಹೇಗೆ ತಿರಿಸುವುದು ಹೆಂಡತಿ ಮಕ್ಕಳಿಗೆ ಹೇಗೆ ಸಾಕುವುದು ಅಂತ ಮನಸ್ಸಿನಲ್ಲಿ ವಿಚಾರ ಮಾಡುತ್ತಾ ಆಗಾಗ  ಫಿರ್ಯಾದಿಗೆ ಸಿಕ್ಕಾಗ ತಿಳಿಸಿತ್ತಾ ಇದ್ದನ್ನು . ಈ ಮೇಲಿನ ವಿಷಯಕ್ಕೆ ಮನ ನೊಂದು  ದಿನಾಂಕ 5-7-2020 ರಂದು 1600 ಗಂಟೆ ಸೂಮಾರಿಗೆ ತನ್ನ ಮನೆಯಲ್ಲಿ ಯಾರು ಇಲ್ಲದಿದ್ದಾಗ 4 ಪಿ.ಎಮ. ಗಂಟೆಗೆ ವಿಷ ಕುಡಿದಿದರಿಂದ ಚಿಕಿತ್ಸೆ ಕುರಿತು ಔರಾದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಕರಿತು ಬೀದರ ಜೀಲ್ಲಾ ಆಸ್ಪತ್ರೆಗೆ ಕಳಸಿದ್ದು. ಬೀದರ ಜೀಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿ ಆಗದೆ   ದಿನಾಂಕ 6/7/2020 ರಂದು ನಸುಕಿನ ಜಾವ 0330 ಗಂಟೆಗೆ ಮೃತ್ತ ಪಟ್ಟಿದ್ದು ಇರುತ್ತದೆ. ಫಿರ್ಯಾದಿ ತಮ್ಮ ಲಕ್ಷ್ಮಣ ಬ್ಯಾಂಕೀನ ಸಾಲ ಹಾಗೂ ತನ್ನ ಹೋಲದಲ್ಲಿ ಎರಡು ಸಲ ಸೋಯಾಬೀನ ಬೀಜ ಬಿತ್ತಿದ್ದರು ಕೂಡ ಏಳಲೀಲ್ಲ ಮತ್ತು 125000/- ರೂ. ಬ್ಯಾಂಕ್ ಸಾಲ ಕೂಡ ಆಗಿದೆ ಎಂದು  ಮನನೊಂದು ವಿಷ ಕುಡಿದು ಆತ್ಮ ಹತ್ಯೆ  ಮಾಡಿಕೊಂಡಿರುತ್ತಾನೆ. ಇತನ ಮರಣ ಬಗ್ಗೆ ಯಾರ ಮೆಲೆಯು ಯಾವದೇ ಸಂಶಯ ಇರುವುದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Monday, July 6, 2020

BIDAR DISTRICT DAILY CRIME UPDATE 06-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-07-2020

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 33/2020 ಕಲಂ 420, 471 ಐಪಿಸಿ :-    



ಪೊಲೀಸ ಆಧೀಕ್ಷಕರು ಬೀದರ ರವರ ಜ್ಞಾಪನ ಪತ್ರ ಸಂ/ಅಪರಾಧ-1/ಇತರೆ/ಬೀ/2020/492 ದಿನಾಂಕ 10-06-2020 ನೇದನ್ನು ಸ್ವೀಕೃತ ಮಾಡಿಕೊಂಡಿದ್ದು ಅದರ ಉಲ್ಲೇಖಿತ ಪತ್ರದಲ್ಲಿನ ವಿವರವೆನೆಂದರೆ, ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆಡಳಿತ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು-ನಿರ್ದೇಶನಾಲಯ ಅನಂದರಾವ ವೃತ್ತ ಬೆಂಗಳೂರು ರವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶೂಶ್ರುಕರ ನೇಮಕಾತಿ ಕುರಿತು ಈ ಕೇಳಕಂಡ 4  ಭ್ಯರ್ಥಿಗಳು ಅಂಗವಿಕಲ ಮಿಸಲಾತಿ ಅಡಿಯಲ್ಲಿ  ಅಯ್ಕೆಯಾಗಿದ್ದು, ಅಯ್ಕೆಯಾದ ಅಭ್ಯರ್ಥಿಗಳು ಅಂಗವಿಕಲತೆಯ ಬಗ್ಗೆ ಸುಳ್ಳು ವೈದ್ಯಕೀಯ ಮಂಡಳಿ ವರದಿಯನ್ನು ನೀಡಿದ್ದು/ಸಲ್ಲಿಸಿದ್ದು ವರದಿಯನ್ನು ನೀಡಿರುವವರ ಹಾಗೂ ಸಲ್ಲಿಸಿದವರ ವಿರುಧ್ದ ತನಿಖೆ ನಡೆಸಿ 4 ಜನರಲ್ಲಿನ ( ಜಗಪ್ಪಾ ತಂದೆ ಜಟ್ಟೆಪ್ಪಾ ಶಿವಗೊಂಡನೋರ ಸಾ: ಯಾಕತಪೂರ) ಈತನ ವಿರುದ್ದ ಕಾನೂನು ರೀತ್ಯ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರಿರುತ್ತಾರೆ, ಕಾರಣ ಮನ್ನಳ್ಳಿ ಪೊಲೀಸ ಠಾಣೆ ಅಪರಾಧ ಸಂಖ್ಯೆ 33/2020 ಕಲಂ 420,471,ಐಪಿಸಿ ನೇದರ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Sunday, July 5, 2020

BIDAR DISTRICT DAILY CRIME UPDATE 05-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 05-07-2020

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 11/2020 ಕಲಂ 174(ಸಿ) ಸಿ.ರ್.ಪಿ.ಸಿ :-

ದಿನಾಂಕ 04/074/2020 ರಂದು 1040 ಗಂಟೆಗೆ ಫಿರ್ಯಾದಿ ಆಶಾರಾಣಿ ಗಂಡ ಶ್ರೀನಿವಾಸ ಸಾ. ಧಮ್ಮನಸೂರ ಇವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ಸಲ್ಲಿಸಿದೆನೆಂದರೆ ಫಿರ್ಯಾದಿಗೆ 11 ವರ್ಷಗಳ ಹಿಂದೆ ಧುಮ್ಮನಸೂರ ಗ್ರಾಮದ ಶ್ರೀನಿವಾಸ ಕಿಣಿ ಇವನ ಜೊತೆ ಮದುವೆ ಅಗಿದ್ದು ಫಿರ್ಯಾದಿಗೆ ಆಕಾಶ 6 ವರ್ಷ, ಖುಷಿ 4 ವರ್ಷ, ಮತ್ತು ನಿತೇಶ 3 ವರ್ಷ ಅಂತಾ ಮಕ್ಕಳಿರುತ್ತಾರೆ. ಇವರಿಗೆ ಆರಾಮ ಇಲ್ಲಾದ ಕಾರಣ ತನ್ನ ಮಕ್ಕಳೊಂದಿಗೆ ಎರಡು ದಿವಸಗಳ ಹಿಂದೆ ತನ್ನ ತವರು ಮೆನೆಯಾದ ಆನಂದವಾಡಿ ಗ್ರಾಮಕ್ಕೆ ಹೋಗಿರುತ್ತಾರೆ ದಿನಾಂಕ 04/07/2020 ರಂದು ಬೆಳಿಗ್ಗೆ 8 ಗಂಟೆಗೆ ಸುಮಾರಿಗೆ ಇವರ ಕಾಕಾ ಸಚೀನ ತಂದೆ ವಿಶ್ವನಾಥ ಡಾಂಗೆ ಇವರು ಫೋನ ಮಾಡಿ ನನಗೆ ತಿಳಿಸಿದೆನೆಂದರೆ ಫಿರ್ಯಾದಿಯ ಪತಿ ಶ್ರೀನಿವಾಸ ಇವನು ಗ್ರಾಮದ ಶಿವಾರದ ಬಸಿರಸಾಬ ತಂದೆ ಮುಜೀಬಸಾಬ ಇವರ ಹೋಲದ ಮಾವಿನ ಗಿಡಕ್ಕೆ ತನ್ನ ಬನಿನದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ   ಆನಂದವಾಡಿದಿಂದ ಧುಮ್ಮನಸೂರಕ್ಕೆ ಬಂದು ನೋಡಲು ನನ್ನ ಗಂಡ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಗಂಡ ನೇಣು ಹಾಕಿಕೊಂಡು ಯಾವ ಕಾರಣಕ್ಕೆ ಮೃತಪಟ್ಟಿದ್ದಾನೆ ಎಂಬ ಬಗ್ಗೆ ನನಗೆ ಗೊತ್ತಿಲ್ಲಾ ನನ್ನ ಗಂಡ ಮೃತಪಟ್ಟ ಬಗ್ಗೆ ನನಗೆ ಸಂಶಯ ಇರುತ್ತದೆ. ಕಾರಣ ನನ್ನ ಗಂಡ ಮೃತಟಪಟ್ ಬಗ್ಗೆ ಕಾನೂನು ಕ್ರಮ ಜರುಗಿಸಲಬೇಕಾಗಿ ವಿನಂತಿ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


Saturday, July 4, 2020

BIDAR DISTRICT DAILY CRIME UPDATE 04-07-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 04-07-2020

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 38/2020 ಕಲಂ 279, 337, 338, 304 ()  ಐಪಿಸಿ :-

ದಿನಾಂಕ 03/07/2020 ರಂದು ಮದ್ಯಾಹ್ನ 1430 ಗಂಟೆಯ ಸುಮಾರಿಗೆ ಫಿರ್ಯಾದಿ ನಾಜೀಯಾ ಬೇಗಂ ಗಂಡ ಮೋಹ್ಮದ್ ರಿಯಾಜ ಗುತ್ತೆದಾರ ಸಾ|| ಮರಖಲ್  ಮತ್ತು ಇವರ ಗಂಡ ಮೊಹ್ಮದ್ ರಿಯಾಜ ತಂದೆ ಅಬ್ದುಲ್ ಸತ್ತಾರ ಮತ್ತು ಮಗಳಾದ ನಹಿಮಾ ವಯ|| 7 ವರ್ಷ ರವರು ಮ್ಮ ಹಿರೋ ಹೊಂಡಾ ಸಿಡಿ ಡಿಲಕ್ಸ್ ಮೋಟಾರ್ ಸೈಕಲ್ ನಂಬರ ಕೆಎ-38/ಕೆ- 9541 ನೇದರ ಮೇಲೆ ಮರಖಲದಿಂದ ಮೈಲೂರದಲ್ಲಿರುವ  ಅತ್ತೆ ಮಾವನ ಮನೆಗೆ ಹೊಗುತ್ತಿದ್ದು   ಮರಖಲ್ ಬೀದರ ರೋಡಿನ  ರಾಜಕುಮಾರ ಪಾಟೀಲ್ ರವರ ಹೊಲದ ಹತ್ತಿರ ಬಂದಾಗ ಇವರ ಎದುರುಗಡೆ ಬೀದರ ಕಡೆಯಿಂದ ಹಿರೋ ಹೊಂಡಾ ಫ್ಯಾಶನ್ ಪ್ರೋ ಮೋಟಾರ್ ಸೈಕಲ್ ನಂಬರ ಕೆಎ-41/ಎಲ್ – 8419 ನೇದರ ಮೇಲೆ ಇಬ್ಬರೂ ಜನರು ಕುಳಿತುಕೊಂಡು ಬರುತ್ತಿದ್ದು, ಅದರ ಚಾಲಕ ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿರವರ ಮೋಟಾರ್ ಸೈಕಲಗೆ ಡಿಕ್ಕಿಪಡಿಸಿದ್ದರಿಂದ   ಮೋಟಾರ್ ಸೈಕಲದೊಂದಿಗೆ ಕೆಳಗಡೆ ಬಿದ್ದಿದ್ದು,  ಸಣ್ಣಪುಟ್ಟ ಗಾಯಗಳಾಗಿದ್ದು, ನಹಿಮಾ ಇವಳಿಗೆ ತಲೆಯ ಮೇಲೆ ರಕ್ತಗಾಯ, ಮತ್ತು  ಗಂಡ ಮೋಹ್ಮದ್ ರಿಯಾಜ ರವರಿಗೆ ತಲೆ ಎಡಭಾಗದಲ್ಲಿ ಭಾರಿ ರಕ್ತಗಾಯ, ತಲೆಯ ಮೇಲಭಾಗದಲ್ಲಿ ರಕ್ತಗಾಯ, ಬಲಕಣ್ಣಿನ ರೆಪ್ಪೆಗೆ ಕಂದುಗಟ್ಟಿದ ಗಾಯವಾಗಿ ಮಾತನಾಡಲಾರದ ಸ್ಥತಿಯಲ್ಲಿ ಬಿದ್ದಿದ್ದರು. ಡಿಕ್ಕಿ ಪಡಿಸಿದ ಮೋಟಾರ್ ಸೈಕಲ್ ಚಾಲಕನಿಗೆ ಹೆಸರು ವಿಚಾರಿಸಲು ಅವರು ತಮ್ಮ ಹೆಸರು ಸಂತೋಷ ತಂದೆ ಕಾಶಿನಾಥ ಮೇತ್ರೆ ಜನವಾಡ ಗ್ರಾಮ ಅಂತಾ ತಿಳಿಸಿದ್ದು, ಅವರಿಗೆ ಎಡಕಾಲಿಗೆ ಭಾರಿ ರಕ್ತಗಾಯ, ಗುಪ್ತಗಾಯ, ಗಟಾಯಿಗೆ ರಕ್ತಗಾಯ, ಮುಖದ ಮೇಲೆ ತರಚಿದ ಗಾಯವಾಗಿದ್ದು, ಅವರ ಹಿಂದುಗಡೆ ಕುಳಿತ್ತಿದ್ದ ಹೆಣ್ಣು ಮಗಳಿಗೆ ಅವರ ಹೆಂಡತಿ ಅವರ ಹೆಸರು ವಿಚಾರಿಸಲು ಅವರು ತಮ್ಮ ಹೆಸರು ಅಂಬೀಕಾ ಗಂಡ ಸಂತೋಷ ಮೇತ್ರೆ ಜನವಾಡ ಗ್ರಾಮ ಅಂತಾ ತಿಳಿಸಿದ್ದು, ಅವರ ಹಣೆಯ ಮೇಲೆ ಮತ್ತು ಮೂಗಿನ ಮೇಲೆ ರಕ್ತಗಾಯ, ಬಲಕೈ ಭುಜಕ್ಕೆ ಗುಪ್ತಗಾಯವಾಗಿದ್ದು, ಅಷ್ಟರಲ್ಲಿ ಬೀದರ ಕಡೆಯಿಂದ ತಮ್ಮ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದ   ನಸೀರ ತಂದೆ ನಬೀಸಾಬ ಯರನಳ್ಳೆ, ರವರು ಘಟನೆ ಕಣ್ಣಾರೆ ನೋಡಿ  108 ಅಂಬುಲೇನ್ ವಾಹನಕ್ಕೆ ಫೋನ್ ಮಾಡಿ ಕೆರೆಯಿಸಿ ಅದರಲ್ಲಿ ಗಾಯಗೊಂಡ ಎಲ್ಲರಿಗೂ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತಂದಿದ್ದು, ಫಿರ್ಯಾದಿ ಗಂಡ ಮೊಹ್ಮದ್ ರಿಯಾಜ ರವರಿಗೆ ಮದ್ಯಾಹ್ನ 1530 ಗಂಟೆಯ ಸುಮಾರಿಗೆ ವೈಧ್ಯರು ನೋಡಿ ಅವರು ಮೃತಪಟ್ಟಿರುತ್ತಾರೆ ಅಂತಾ ತಿಳಿಸದರು.  ಸದರಿ ಘಟನೆಯು ಎದುರುಗಡೆಯಿಂದ ಮೋಟಾರ ಸೈಕಲ್ ನಂಬರ ಕೆಎ-41/ಎಲ್ -8419 ನೇದರ ಚಾಲಕ ಸಂತೋಷ ಮೇತ್ರೆ ರವರು ತಮ್ಮ ಮೋಟಾರ್ ಸೈಕಲ್ ಅತಿವೇಗ  ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಮೋಟಾರ್ ಸೈಕಲಗೆ ಡಿಕ್ಕಿಪಡಿಸಿದ್ದರಿಂದಲೆ ಜರುಗಿದ್ದು ಸಂತೋಷ ಮೇತ್ರೆ ಮತ್ತು ಅವರ ಮೋಟಾರ್ ಸೈಕಲ್ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 26/2020 ಕಲಂ 379 ಐಪಿಸಿ:-

ದಿನಾಂಕ 03/07/2020 ರಂದು 1800 ಗಂಟೆಗೆ ಸಂಜೀವಕುಮಾರ ತಂದೆ ಅಣ್ಣೆಪ್ಪಾ ಜೆಟಗೊಂಡ್ ವಯ-41|| ಶಾಖಾಧಿಕಾರಿ ಜೆಸ್ಕಾಂ ಕಮಠಾಣಾ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸಾರಾಂಶವೆನೆಂದರೆ ಈ ಮೇಲಿನ ವಿಷಯದ ಬಗ್ಗೆ ನಾನು  ಸಂಜೀವಕುಮಾರ ತಂದೆ ಅಣ್ಣೆಪ್ಪಾ ಜೆಟಗೊಂಡ್ ವಯ-41|| ಶಾಖಾಧಿಕಾರಿ ಜೆಸ್ಕಾಂ ಕಮಠಾಣ ರವರು ನೀಡಿದ ದೂರಿನ ಸಾರಾಂಶವೆನಂದರೆ  ದಿನಾಂಕ 02/07/2020 ರಂದು ಮುಂಜಾನೆ 0900 ಗಂಟಗೆ  ವೆಂಕಟ ತಂದೆ ವಿಠಲ ಸಾ|| ವಿದ್ಯಾನಗರ ಬೀದರ ಎಂಬುವವರು   ಫೋನ ಮಾಡಿ ಯದಲಾಪೂರ   ಶಿವಾರದಲ್ಲಿನ ಬ್ರಹ್ಮಕುಮಾರಿ ಆಸ್ರಮದಿಂದ ಪ್ರಕಾಶ ಕೊಟೆ ರವರ ಹೋಲದ  ವರೆಗೆ ಅಳವಡಿಸಿದ ವಿದ್ಯುತ ತಂತಿಯನ್ನು ಕಳುವು ಆಗಿರುತ್ತದೆ ಅಂತ ತಿಳಿಸಿದ ಮೇರೆಗೆ   ಮುಂಜಾನೆ 1030 ಗಂಟೆಗೆ  ನಮ್ಮ ಲೈನಮ್ಯಾನ ಮೋಹ್ಮದ ಅಹ್ಮದ ರವರೋಂದಿಗೆ  ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಯದಲಾಪೂರ ಶಿವಾರದಲ್ಲಿನ ಬ್ರಹ್ಮಕುಮಾರಿ ಆಸ್ರಮದಿಂದ ಪ್ರಕಾಶ ಕೋಟೆ ರವರ ಹೋಲದ  ವರೆಗೆ ಇದ್ದ್ 11 ವಿದ್ಯುತ ಕಂಬಕ್ಕೆ ಅಳವಡಿಸಿದ  ವಿದ್ಯುತ ತಂತಿ ಕಳುವು ಮಾಡಿಕೊಂಡು ಹೋಗಿದ್ದು ಕಂಡು ಬಂದಿರುತ್ತದೆ ಕಳವು ಮಾಡಿಕೊಂಡು ಹೋದ ವಿದ್ಯುತ ತಂತಿಯ ಅಂದಾಜು ಕಿಮತ್ತು ರೂ. 46000/-ಆಗುತ್ತದೆ.   ಈ ಘಟನೆ  ದಿನಾಂಕ 30/06/2020 ಮತ್ತು 01/07/2020 ರ ರಾತ್ರಿ ವೇಳೆಯಲ್ಲಿ  ಯಾರೋ ಅಪರಿಚಿತ ಕಳ್ಳರು 11 ವಿದ್ಯುತ ಕಂಬಕ್ಕೆ ಅಳವಡಿಸಿದ ಎಲ್.ಟಿ  ವಿದ್ಯುತ ತಂತಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂಖ್ಯೆ 97/2020 ಕಲಂ 379 ಐಪಿಸಿ :-     
          
ದಿನಾಂಕ:03/07/2020 ರಂದು 1830 ಗಂಟೆಗೆ ಫಿರ್ಯಾದಿ ಸಂತೋಷ ತಂದೆ ಸತೀಷ ದಿಕೊಂಡ, ವಯ: 28, ಜಾತಿ: ಪದ್ಮಶಾಲಿ, : ಕೂಲಿ  ಸಾ/ ಹುಸೇನಿ ಆಲಂ ಗಲ್ಲಿ ಚಿಟಗುಪ್ಪಾ, ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ  ಸಾರಾಶವೇನೆಂದರೆದಿನಾಂಕ 15/05/2020 ರಂದು ಮುಂಜಾನೆ 10;30 ಗಂಟೆ ಸುಮಾರಿಗೆ ತನ್ನ ಮೊಟಾರ ಸೈಕಲ್ ನಂಬರ ಕೆ.ಎ.32ಇ.ಜೆ-3417 ಹೀರೊಹೊಂಡಾ ಶೈನ್ ಆದರ ಅಂ.ಕಿ. 40000/- ಸಾವಿರ ರುಪಾಯಿದನ್ನು ಯಾರೋ ಕಳ್ಳರು  ಚಿಟಗುಪ್ಪಾ ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಹತ್ತಿರ ನಿಲ್ಲಿಸಿ ನಿಲ್ಲಿಸಿ ನನ್ನ ಖಾಸಗಿ ಕೆಲಸದಲ್ಲಿ ನಿರತರಾಗಿದ್ದು ಸಮಯದಲ್ಲಿ   ವಾಹನವು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.   ವಾಹನವನ್ನು ಅಲ್ಲಿ ಇಲ್ಲಿ ಹುಡಿಕಾಡಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಮೋಟಾರ ಸೈಕಲ ನಂಬರ  ಕೆ.ಎ.32ಇ.ಜೆ-3417ನೇದನ್ನು ಯಾರೊ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಾರ್ಕೇಟ ಪೊಲೀಸ ಠಾಣೆ ಬೀದರ ಯುಡಿಆರ್ ಸಂಖ್ಯೆ 7/2020 ಕಲಂ 174 ಸಿಆರ್.ಪಿ.ಸಿ. :-

ದಿನಾಂಕ:03/07/2020 ರಂದು 1400 ಗಂಟೆಯಿಂದ 1600 ಗಂಟೆಯ ಅವಧಿಯಲ್ಲಿ ಬೀದರ ನಗರದ ನರಸಿಂಹ ಝರಣಾ ದೇವಸ್ಥಾನದ ಮುಂದೆ ಇರುವ ಪಾರ್ಕಿಂಗ ಎದುರುಗಡೆ   ಇಂದಮ್ಮಾ ಗಂಡ ತುಳಸಿರಾಮ ದೊಡ್ಡೆ ವಯ:40 ವರ್ಷ ಜಾ:ಎಸ್.ಸಿ(ಮಾದಿಗ) ಉ:ಪಾರ್ಕಿಂಗ ಕೆಲಸ ಸಾ:ನಾವದಗೇರಿ ಬೀದರ ಇವಳು ಫಿಟ್ಸ್ ಬೇನೆ ಬಂದು ಕಾಲು ಜಾರಿ ಭಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾಳೆ  ಅಂತಾ ಫಿರ್ಯಾದಿಯ ಅಕ್ಕ ಸಿದ್ದಮ್ಮಾ ತಂದೆ ಶರಣಪ್ಪಾ ಬಡಗೆ ವಯ:35 ವರ್ಷ ಜಾ:ಎಸ್.ಸಿ(ಮಾದಿಗ) ಉ:ಅಡುಗೆ ಮಾಡುವ ಕೆಲಸ ಸಾ:ನಾವದಗೇರಿ ಬೀದರ ರವರು ನೀಡಿದ   ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 148/2020 ಕಲಂ 87 ಕೆ.ಪಿ. ಕಾಯ್ದೆ ;-

ದಿನಾಂಕ 02/07/2020 ರಂದು 15:00 ಗಂಟೆಗೆ ಅಮರ ಕುಲಕಣರ್ಿ ಪಿ.ಎಸ್.ಐ(ಕಾಸೂ-1) ರವರು ಠಾಣೆಯಲ್ಲಿ ಇದ್ದಾಗ ಭಾಲ್ಕಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಇರುವ ಹನುಮಾನ ಮಂದಿರದ ಹತ್ತಿರ ಕೆಲವು ಜನರು ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹನುಮಾನ ಮಂದಿರದ ಹತ್ತಿರ ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶೀಬಿನ ಇಸ್ಪೆಟ ಜೂಜಾಟ ಆಡುತ್ತಿರುವದನ್ನು ನೋಡಿ 15:45 ಗಂಟೆಗೆ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಒಬ್ಬೋಬ್ಬರ ಹೆಸರು ಮತ್ತು ವಿಳಾಸ ವಿಚಾರಿಸಲು ತಮ್ಮ ಹೆಸರು 1] ವಿಜಯಕುಮಾರ ತಂದೆ ಭೀಮರಾವ ಚವ್ಹಾಣ ಸಾ:ಧಾರಜವಾಡಿ ತಾಂಡಾ, 2] ಅನೀಲ ತಂದೆ ಶಿವಾಜಿರಾವ ಮಾನಕರಿ ಸಾ:ಧಾರಜವಾಡಿ, 3] ಖಂಡೆರಾವ ತಂದೆ ಜ್ಞಾನೇಶ್ವರ ಕುಟಮಲಗೆ ಸಾ:ಧಾರಜವಾಡಿ, 4] ಮಹಾದೇವ ತಂದೆ ನಾಮದೇವ ತಗಾರೆ ಸಾ:ಧಾರಜವಾಡಿ, 5] ಅನೀಲ ತಂದೆ ಶಂಕರ ಚ್ವಹಾಣ ಸಾ:ಧಾರಜವಾಡಿ ತಾಂಡಾ ಅಂತಾ ತಿಳಿಸಿದ್ದು ಸದರಿಯವರಿಗೆ ಪುನಃ ವಿಚಾರಣೆ ಮಾಡಲು ತಾವೆಲ್ಲರೂ ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶಿಬಿನ ಇಸ್ಪೇಟ ಜೂಜಾಟ ಆಡುತಿದ್ದ ಬಗ್ಗೆ ಒಪ್ಪಿ ಕೊಂಡಿದರಿಂದ ಸದರಿಯವರು ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 4350 ರೂ ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ೆ ಜಪ್ತಿ ಪಂಚನಾಮೆ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.