Police Bhavan Kalaburagi

Police Bhavan Kalaburagi

Thursday, August 27, 2020

BIDAR DISTRICT DAILY CRIME UPDATE 27-08-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-08-2020

 

ಬೀದರ ನೂತನ ನಗರ ಠಾಣೆ ಅಪರಾಧ ಸಂಖ್ಯೆ 95/2020 ಕಲಂ 379 ಐಪಿಸಿ :-

 

ದಿನಾಂಕ 26/08/2020  ರಂದು 1945  ಗಂಟೆಗೆ ಫಿರ್ಯಾದಿ  ಶ್ರೀಮತಿ.  ಚಿತ್ರಮ್ಮ ಗಂಡ ಸುಂದರರಾಜ ವಯ:46 ವರ್ಷ ಜಾತಿ:ಕ್ರಿಶ್ಚನ ಉ:ಕೂಲಿ ಕೆಲಸ ಸಾ/ಚಟನಳ್ಳಿ ತಾ/ಬೀದರ.  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನಂದರೆ  ದಿನಾಂಕ 20/08/2020 ರಂದು ಇವರ ಮಗನಾದ ಪ್ರದೀಪನು  ಮೊಟರ ಸೈಕಲನ್ನು ತೆಗೆದುಕೊಂಡು ಬೀದರಕ್ಕೆ ಬಂದು  ಮುಂಜಾನೆ 11:30 ಗಂಟೆಗೆ ಬೀದರ ಅಕ್ಕಮಹಾದೇವಿ ಕಾಲೇಜ ಕಾಂಪ್ಲೆಕ್ಸನಲ್ಲಿ ಇರುವ ಎಮ್.ಐ. ಮೊಬೈಲ ಅಂಗಡಿಯ ಎದುರಿಗೆ ನಿಲ್ಲಿಸಿ ಅಂಗಡಿಯಲ್ಲಿ ಮೊಬೈಲನ್ನು ರಿಪೇರಿ ಮಾಡಿಕೊಂಡು  12:00 ಪಿ.ಎಮ.  ಗಂಟೆಯ ಸಮಯಕ್ಕೆ ಮರಳಿ ಹೊರಗೆ ಬಂದು ನೋಡಿದಾಗ   ಮೊಟರ ಸೈಕಲ ನೊಡಲು ಅದು ನಾನು ಇಟ್ಟಿದ್ದ ಜಾಗದಲ್ಲಿ ಇರಲಿಲ್ಲ. ಅಕ್ಕಪಕ್ಕದಲ್ಲಿ ನೋಡಿದರೂ ಎಲ್ಲಿಯೂ ಕಾಣಲಿಲ್ಲ   ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ ಸಿಗದಿದ್ದಾಗ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.  ಕಳ್ಳತನವಾದ ಮೋಟಾರ್ ಸೈಕಲ್ ವಿವರ   ಹೀರೊ ಸ್ಪ್ಲೆಂಡರ ಪ್ಲಸ್  ಮೋಟರ ಸೈಕಲ  ನಂ ಕೆ,ಎ,38ಡಬ್ಲ್ಯೂ0597 ಚಾಸಿಸ್ ನಂ. ಎಮ್.ಬಿ.ಎಲ್.ಎಚ್.ಎ.ಡಬ್ಲ್ಯೂ08ಎಕ್ಸ್.ಕೆ.ಎಚ್.ಎ.00779 ಮತ್ತು ಇಂಜಿನ್ ನಂ. ಎಚ್ಎ.10ಎಜಿಕೆಎಚ್.ಎ.08217 ಅಂದಾಜು ಕಿಮ್ಮತ್ತು ರೂ-  40,000/-ರೂ ಆಗಿರುತ್ತದೆ.   ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 180/2020 ಕಲಂ 32, 34 ಕೆ.ಇ. ಕಾಯ್ದೆ :-

 

ದಿನಾಂಕ 26/08/2020 ರಂದು 10:30 ಗಂಟೆಗೆ ಡಿ.ಎಸ್.ಪಿ ರವರಿ ಆದಿತ್ಯಾ ಕಾಲೇಜ ಹತ್ತಿರ ಇರುವ ನ್ಯೂ ಜಗದಂಬಾ ಧಾಬಾದ ಬದಿಯಲ್ಲಿ ಇಬ್ಬರು ತಮ್ಮ ಹತ್ತಿರ ಸಬಂಧಪಟ್ಟ ಇಲಾಖೆಯಿಂದ ಯಾವುದೆ ಅನುಮತಿ ಇಲ್ಲದೆ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುವ ಕುರಿತು ತಮ್ಮ ವಶದಲ್ಲಿ ಇಟ್ಟುಕೊಂಡು ಕುಳಿತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ   ಸಿಬ್ಬಂದಿಯೊಂದಿಗೆ  ನ್ಯೂ ಜಗದಂಬಾ ಧಾಬಾದ ಹತ್ತಿರ ಹೋಗಿ ನೋಡಿದಾಗ ಇಬ್ಬರು ತಮ್ಮ ವಶದಲ್ಲಿ ಕಾಟನಗಳನ್ನು ಇಟ್ಟುಕೊಂಡು ಕುಳಿತಿದ್ದಾಗ 11:15 ಗಂಟೆಗೆ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿಯುವಷ್ಟರಲ್ಲಿ ಇಬ್ಬರು ಓಡಿ ಹೋದರು ಅವರು ಸ್ಥಳದಲ್ಲಿ ಬಿಟ್ಟು ಹೋದ ಕಾಟನಗಳನ್ನು ಪರಿಶೀಲಿಸಿ ನೋಡಲು 650 ಎಂ.ಎಲ್ ವುಳ್ಳ 64 ಕಿಂಗ್ ಫೀಶರ ಸ್ಟ್ರಾಂಗ್ ಬೀಯರ ಬಾಟಲಿಗಳು ಇದ್ದು ಒಂದರ ಬೇಲೆ 145 ರೂ ಇರುತ್ತದೆ, 650 ಎಂ.ಎಲ್ ವುಳ್ಳ 10 ಕಿಂಗ್ ಫೀಶರ ಪ್ರಿಮಿಯಮ ಬೀಯರ ಬಾಟಲಿಗಳು ಇದ್ದು ಒಂದರ ಬೇಲೆ 150 ರೂ ಇರುತ್ತದೆ, 650 ಎಂ.ಎಲ್ ವುಳ್ಳ 64 ಕಿಂಗ್ ಫೀಶರ ಸ್ಟ್ರಾಂಗ್ ಬೀಯರ ಬಾಟಲಿಗಳು ಇದ್ದು ಒಂದರ ಬೇಲೆ 145 ರೂ ಇರುತ್ತದೆ, 650 ಎಂ.ಎಲ್ ವುಳ್ಳ 4 ಟುಬರ್ಗ ಬೀಯರ ಬಾಟಲಿಗಳು ಇದ್ದು ಒಂದರ ಬೇಲೆ 150 ರೂ ಇರುತ್ತದೆ, 90 ಎಂ.ಎಲ್ ವುಳ್ಳ 22 ಯು.ಎಸ್ ವ್ಹಿಸ್ಕಿಯ ಪ್ಲಾಸ್ಟೀಕ ಬಾಟಲಗಳು ಇದ್ದು ಒಂದರ ಬೆಲೆ 35 ರೂ 13 ಪೈಸೆ ಇರುತ್ತದೆ ಎಲ್ಲ ಸೇರಿ ಅ:ಕಿ: 12,1,53 ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

  

 ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 69/2020 ಕಲಂ 87 ಕೆಪಿ ಕಾಯ್ದೆ :-

 

 ದಿನಾಂಕ: 26/08/2020 ರಂದು 14:45 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಗುಪ್ತ ಮಾಹಿತಿ ಕರ್ತವ್ಯದ ಸಿಬ್ಬಂದಿ ಲೋಕೇಶ ಸಿಪಿಸಿ-1152 ರವರು ತಿಳಿಸಿದೇನೆಂದರೆ ಜಾಜನ ಮುಗಳಿ ಗ್ರಾಮದ ವಿಠ್ಠಲ ರುಕ್ಮಣಿ ಮಂದಿರದ ಹತ್ತಿರ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಗೋಲಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರಭಾಹರ್ ಇಸ್ಪೇಟ ಜೂಜಾಟ ಆಡುತಿದ್ದಾರೆ ಅಂತಾ ಮಾಹಿತಿ ಬಂದಿರುತ್ತದೆ. ಅಂತಾ ತಿಳಿಸಿದ ಮೇರೆಗೆ ಸಿಬ್ಬಂದಿಯೊಂದಿಗೆ   ಜಾಜನ ಮುಗಳಿ ಗ್ರಾಮದ ವಿಠ್ಠಲ ರುಕ್ಮಣಿ ಮಂದಿರದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ಮರೆಯಲ್ಲಿ ನಿಂತು ನೋಡಲು ರುಕ್ಮಣಿ ಮಂದೀರದ ಹತ್ತಿರ ಕೆಲವು ಜನರು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಅಂದರಭಾರ್ ಎಂಬ ನಶಿಬಿನ ಇಸ್ಪೇಟ ಜೂಜಾಟ ಆಡುತಿದ್ದನ್ನು ಖಚಿತ ಪಡಿಸಿಕೊಂಡು 17:00 ಗಂಟೆಗೆ ಪಂಚರ ಸಮಕ್ಷಮ ಸಿಬ್ಬಂದಿಯವರಾದ ಲೋಕೇಶ ಸಿಪಿಸಿ-1152, ಬಸವರೆಡ್ಡಿ ಸಿಪಿಸಿ-1029 ಹಾಗೂ ಮಹಾದೇವ ಎಪಿಸಿ-356 ರವರ ಸಾಹಾಯದಿಂದ ಸದರಿಯವರ ಮೇಲೆ ದಾಳಿ ಮಾಡಿ ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 26,600/- ರೂ ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅರೋಪತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 119/2020 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ 26/08/2020 ರಂದು 1700 ಗಂಟೆಗೆ  ಹುಮನಾಬಾದ ಪಟ್ಟಣದ ಬಾಲಾಜಿ ಮಂದಿರ ಹತ್ತಿರ ರೊಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರೋಡಿನ ಮೇಲೆ ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತಾ ಅವರಿಂದ ಹಣ ಪಡೆದು ಅವರಿಗೆ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ  ಸಿಬ್ಬಂದಿಯವರಾದ 1] ಭಗವಾನ ಸಿಎಚಸಿ 881 2] ನವೀನ ಸಿಪಿಸಿ 1107, ರವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ಭಾತ್ಮಿ ನಿಜ ಇದ್ದು 1745 ಗಂಟೆಗೆ ಮಟಕಾ ಚೀಟಿ ಬರೆದುಕೊಡುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಆಕಾಶ ತಂದೆ ಸುಭಾಷ ಬಿರಾದಾರ, ವಯ 29 ವರ್ಷ, ಜಾ. ಲಿಂಗಾಯತ, ಉ. ಕಿರಾಣಿ ಅಂಗಡಿ, ಸಾ. ಧನ್ನೂರ, ಸಧ್ಯ ಬಾಲಾಜಿ ಮಂದಿರ ಹತ್ತಿರ ಹುಮನಾಬಾದ ಅಂತ ತಿಳಿಸಿರುತ್ತಾನೆ ಅವರಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3800=00 ರೂಪಾಯಿಗಳು, ಒಂದು ಬಾಲ ಪೇನ್ನ, ಹಾಗು 10 ಮಟಕಾ ಅಂಕಿ ಸಂಖ್ಯೆ ಬರೆದ ಚಿಟಿಗಳು, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


Wednesday, August 26, 2020

BIDAR DISTRICT DAILY CRIME UPDATE 26-08-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-08-2020

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 94/2020, ಕಲಂ. 379 ಐಪಿಸಿ :-

ದಿನಾಂಕ 03-08-2020 ರಂದು 1430 ಗಂಟೆಗೆ ಫಿರ್ಯಾದಿ ಸುಧಾಕರ ತಂದೆ ಸಂಗಪ್ಪ ಸಾ: ಜಾಂಪಾಡ, ತಾ: ಬೀದರ ರವರು ತನ್ನ ಮೊಟರ ಸೈಕಲ ನಂ. ಕೆಎ-38/ಯು-6637 ನೇದನ್ನು ಬೀದರ ಕೆನರಾ ಬ್ಯಾಂಕ ಮುಖ್ಯ ಶಾಖೆಯ ಪಕ್ಕದಲ್ಲಿ ನಿಲ್ಲಿಸಿ ಬ್ಯಾಂಕಿನಲ್ಲಿ ತನ್ನ ಕರ್ತವ್ಯದ ಸಲುವಾಗಿ ಹೋಗಿ 1700 ಗಂಟೆಗೆ ಮರಳಿ ಹೊರಗೆ ಬಂದು ನೋಡಲು ಸದರಿ ಮೊಟರ ಸೈಕಲ ಇರಲಿಲ್ಲ, ಅಕ್ಕಪಕ್ಕದಲ್ಲಿ ನೋಡಿದರೂ ಎಲ್ಲಿಯೂ ಕಾಣಲಿಲ್ಲ, ನಂತರ ಫಿಯರ್ಾದಿಯು ತನ್ನ ಗೆಳೆಯರೊಂದಿಗೆ ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಕಳುವಾದ ಮೋಟಾರ್ ಸೈಕಲ್ ವಿವರ 1) ಹೀರೊ ಸ್ಪ್ಲೆಂಡರ ಪ್ಲಸ್  ಮೋಟರ ಸೈಕಲ  ನಂ. ಕೆಎ-38/ಯು-6637, 2) ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್.ಎ.ಆರ್.ಓ.78.ಹೆಚ್.ಹೆಚ್.ಹೆಚ್.35813, 3) ಇಂಜಿನ್ ನಂ. ಹೆಚ್.ಎ.10.ಎ.ಜಿ.ಹೆಚ್.ಹೆಚ್.ಹೆಚ್.36832, 4) ಮಾಡಲ್ 2017, 5) ಬಣ್ಣ: ಸಿಲ್ವರ್, 6) ಅ.ಕಿ 30,000/- ರೂ. ಆಗಿರುತ್ತದೆ ಅಂತ ಕೊಟ್ಟ ಫಿಯರ್ಾದಿಯವರ ದೂರಿನ ಹೇಳೀಕೆ ಸಾರಾಂಶದ ಮೇರೆಗೆ ದಿನಾಂಕ 25-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 128/2020, ಕಲಂ. 3, 14(ಎ) ಬಾಲ ಕಾರ್ಮಿಕ  ಕಾಯ್ದೆ :-

ದಿನಾಂಕ 25-08-2020 ರಂದು ಶ್ರೀ ಪ್ರಸನ್ನ, ಕಾರ್ಮಿಕ ನಿರೀಕ್ಷಕರು ಕಾರ್ಮಿಕ ಇಲಾಖೆ ಬೀದರ ರವರು ಠಾಣೆಗೆ ಹಾಜರಾಗಿ ಫಿರ್ಯಾದು ಸಲ್ಲಿಸಿದ್ದು ಸಾರಾಂಶವೇನೆಂದರೆ ದಿನಾಂಕ 31-07-2020 ರಂದು ಕಾಮರ್ಿಕರ ನಿರೀಕ್ಷಕರು, ಬೀದರ, ಜಿಲ್ಲಾ ಮಕ್ಕಳ ರಕ್ಷಣಾದಿಕಾರಿಗಳು ಬೀದರ, ಸಿ.ಡಿ.ಪಿ.ಓ ಬೀದರ, ಯೋಜನಾ ನಿದರ್ೇಶಕರು, ಬಾಲ ಕಾಮರ್ಿಕ ಕೋಶ ಬೀದರ ಹಾಗೂ ಮಕ್ಕಳ ಸಹಾಯವಾಣಿ ಬೀದರ ಜಂಟಿಯಾಗಿ ನಡೆಸಲಾದ ಬಾಲ ಕಾಮರ್ಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಚರಣೆಯಲ್ಲಿ ಐಶಾ ಅಲುಮಿನಿಯಂ ವರ್ಕ ಬಿವಿಬಿ ಕಾಲೇಜ ರೋಡ ಬೀದರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕು. ರೇಹಾನ ತಂದೆ ಶೇಕ ಅಹೆಮದ ವಯ: 12 ವರ್ಷ, ಸಾ: ಚಿಟ್ಟಾ ವಾಡಿ, ತಾ: ಬೀದರ ಎಂಬ ಬಾಲ ಕಾರ್ಮಿಕನು ಸದರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಬಾಲ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು, ಆರೋಪಿ ಅನ್ವರಶಾ ತಂದೆ ಖಾಜಾ ಶಾ ಚಿಟ್ಟಾ ಬೀದರ ಇವನು ಬಾಲ ಕಾರ್ಮಿಕ ನನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದು ಬಾಲ ಕಾರ್ಮಿಕ  ಮತ್ತು ಕಿಶೋರ ಕಾಮರ್ಿಕ (ನಿಷೇದ ಮತ್ತು ನಿಯಂತ್ರಣ) ಕಾಯಿದೆ 1986 ಹಾಗೂ ತಿದ್ದುಪಡಿ ಕಾಯಿದೆ 2016 ರ ಕಲಂ 3(ಎ) ಉಲ್ಲಂಘನೆಯಾಗಿರುತ್ತದೆ, ಮಗುವಿನ ವಯಸ್ಸಿನ ದೃಢಿಕರಣವನ್ನು ಶಾಲೆಯಿಂದ ಪಡೆಯಲು ವಿಳಂಬವಾಗಿದ್ದರಿಂದ ದೂರು ಸಲ್ಲಿಸಲು ವಿಳಂಬವಾಗಿರುತ್ತದೆ, ಸದರಿ ಉಲ್ಲಂಘನೆಯು ಸಜ್ಞೆಯ ಅಪರಾಧವಾಗಿದ್ದರಿಂದ ಆರೋಪಿ ಅನ್ವರಶಾ ಇವರ ವಿರುದ್ದ ಎಫ.ಐ.ಆರ್ ದಾಖಲಿಸಲು ವಿನಂತಿ ಅಂತ ನೀಡಿದ ದೂರಿನ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 129/2020, ಕಲಂ. 3, 14(ಎ) ಬಾಲ ಕಾರ್ಮಿಕ  ಕಾಯ್ದೆ :-

ದಿನಾಂಕ 25-08-2020 ರಂದು ಶ್ರೀ ಪ್ರಸನ್ನ, ಕಾರ್ಮಿಕ ನಿರೀಕ್ಷಕರು ಕಾರ್ಮಿಕ ಇಲಾಖೆ ಬೀದರ ರವರು ಠಾಣೆಗೆ ಹಾಜರಾಗಿ ಫಿರ್ಯಾದು ಸಲ್ಲಿಸಿದ್ದು ಸಾರಾಂಶವೇನೆಂದರೆ ದಿನಾಂಕ 31-07-2020 ರಂದು ಕಾರ್ಮಿಕ ನಿರೀಕ್ಷಕರು, ಬೀದರ, ಜಿಲ್ಲಾ ಮಕ್ಕಳ ರಕ್ಷಣಾದಿಕಾರಿಗಳು ಬೀದರ, ಸಿ.ಡಿ.ಪಿ.ಓ ಬೀದರ, ಯೋಜನಾ ನಿರ್ದೇಶಕರು, ಬಾಲ ಕಾರ್ಮಿಕ ಕೋಶ ಬೀದರ ಹಾಗೂ ಮಕ್ಕಳ ಸಹಾಯವಾಣಿ ಬೀದರ ಜಂಟಿಯಾಗಿ ನಡೆಸಲಾದ ಬಾಲ ಕಾರ್ಮಿಕ ಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಚರಣೆಯಲ್ಲಿ ಮೇ: ಅಮರ ಸಾಯಿ ಸ್ಪೊರ್ಟ ಬೈಕ ಸವರ್ಿಸ್ ಸಂಟರ ಬಿ.ವಿ.ಬಿ ಕಾಲೇಜ ರೋಡ ಬೀದರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕು. ಪ್ರವೀಣ ತಂದೆ ವಸಂತ ವಯ: 15 ವರ್ಷ, ಸಾ: ಚಿಟ್ಟಾ, ತಾ: ಬೀದರ ಎಂಬ ಬಾಲ ಕಾಮರ್ಿಕನು ಸದರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಬಾಲ ಕಾಮರ್ಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು, ಆರೋಪಿ ಸಂದಾನಂತ ತಂದೆ ಮಲ್ಲಪ್ಪಾ ಮೇ: ಅಮರ ಸಾಯಿ ಸ್ಪೊರ್ಟ ಬೈಕ ಕಾರ್ಮಿಕ ಸಂಟರ ನ ಮಾಲೀಕ ಬೀದರ ಇವನು ಬಾಲ ಕಾರ್ಮಿಕ ಕನನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದು ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯಿದೆ 1986 ಹಾಗೂ ತಿದ್ದುಪಡಿ ಕಾಯಿದೆ 2016 ರ ಕಲಂ 3(ಎ) ಉಲ್ಲಂಘನೆಯಾಗಿರುತ್ತದೆ, ಮಗುವಿನ ವಯಸ್ಸಿನ ದೃಢಿಕರಣವನ್ನು ಶಾಲೆಯಿಂದ ಪಡೆಯಲು ವಿಳಂಬವಾಗಿದ್ದರಿಂದ ದೂರು ಸಲ್ಲಿಸಲು ವಿಳಂಬವಾಗಿರುತ್ತದೆ, ಸದರಿ ಉಲ್ಲಂಘನೆಯು ಸಜ್ಞೆಯ ಅಪರಾಧವಾಗಿದ್ದರಿಂದ ಆರೋಪಿ ಸಂದಾನಂತ ಇವರ ವಿರುದ್ದ ಎಫ.ಐ.ಆರ್ ದಾಖಲಿಸಲು ವಿನಂತಿ ಅಂತ ನೀಡಿದ ದೂರಿನ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 179/2020 ಕಲಂ 392 ಐಪಿಸಿ :-

 

ದಿನಾಂಕ 25/08/2020 ರಂದು 12:00 ಗಂಟೆಗೆ ಫಿರ್ಯಾದಿ ಶ್ರೀಮತಿ ಸರಸ್ವತಿ ಗಂಡ ಅಮೃತರಾವ ಬಿರಾದಾರ ಸಾ: ಗಣೇಶ ನಗರ ಲೇಕ್ಚರ ಕಾಲೋನಿ ಭಾಲ್ಕಿ  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ   ಪಿರ್ಯಾದಿಯವರು ದಿನಾಂಕ 25/08/2020 ರಂದು ನಸುಕಿನ ಜಾವ ಅಂದಾಜು 0500 ಗಂಟೆ ಸುಮಾರಿಗೆ ಎದ್ದು ಮನೆಯ ಹಾಲ ಸ್ವಚ್ಛ ಮಾಡಿ ನಂತರ ಅಂದಾಜು 0525 ಗಂಟ  ಸುಮಾರಿಗೆ ಮನೆಯ ಮುಂದೆ ಇರುವ ಗಣೇಶ ಮಂದೀರದ ಸುತ್ತಲು ಇರುವ ರೋಡಿನ ಮೇಲೆ ವಾಕಿಂಗ್ ಮಾಡಿ ನಂತರ ಅಂದಾಜು 0540 ಗಂಟೆ ಸುಮಾರಿಗೆ ಮರಳಿ ಮನೆಗೆ ಬಂದು ಮನೆಯ ಗೇಟ ಮುಂದೆ ಗೇಟ ಎಡಭಾಗಕ್ಕೆ ರಸ್ತೆಯ ಮೇಲಿದ್ದ ಕಸವನ್ನು ಕುಳಿತುಕೊಂಡು ಸ್ವಚ್ಛ ಗೋಳಿಸುತ್ತಿರುವಾಗ ಅಂದಾಜು 0545 ಗಂಟೆ ಸುಮಾರಿಗೆ ನನ್ನ ಹಿಂದಿನಿಂದ ಒಬ್ಬ ಅಪರಿಚೀತ ವ್ಯಕ್ತಿ ಬಂದು   ಸಿರೇಯಿಂದ ಇವರ ಬಾಯಿ ಒತ್ತಿ ಹಿಡಿದು ಇವರ ಕೋರಳಲ್ಲಿ ಕೈ ಹಾಕಿ  ಕೊರಳಲ್ಲಿನ ಬಂಗಾರದ ಆಭರಣಗಳಾದ 1] 35 ಗ್ರಾಂ ಬಂಗಾರದ ನಾನ ಅ:ಕಿ: 1,75,000 2] ಕೊರಳಲ್ಲಿನ ಬಂಗಾರದ ತಲಾ ಒಂದು ಗ್ರಾಂನ 2 ಮಂಗಳಸೂತ್ರ, ಮಂಗಳಸೂತ್ರದ ಜೋತೆ ಇರುವ ಒಂದು ಗ್ರಾಂ ಬಂಗಾರದ 8 ಗುಂಡುಗಳು, 6 ಗ್ರಾಂ ಬಂಗಾರದ 82 ಮಣಿಗಳು ಒಟ್ಟು 9 ಗ್ರಾಂ ಅ:ಕಿ: 45,000 ರೂ ಹೀಗೆ ಒಟ್ಟು 44 ಗ್ರಾಂ ಬಂಗಾರ ಅ:ಕಿ: 2,20,000 ರೂ ಬೆಲೆ ಬಾಳುವದನ್ನು ಕಿತ್ತುಕೊಂಡು ಮನೆಯ ಬಲಗಡೆ ಇರುವ ಖುಲ್ಲಾ ಜಾಗದ ಕಡೆಯಿಂದ ಓಡಿ ಹೋಗಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂಖ್ಯೆ 112/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ 25/08/2020 ರಂದು 1400 ಗಂಟೆಗೆ ಠಾಣೆಯಲ್ಲಿದ್ದಾಗ  ಖಚಿತ ಮಾಹಿತಿ ಬಂದಿದ್ದೇನೆಂದರೆ,  ಮೂವರು ವ್ಯಕ್ತಿಗಳು ಭಾತಂಬ್ರಾ  ರೋಡಿಗೆ ಇರುವ ಸಾಯಿ ಹೊಟಲ ಹತ್ತಿರ  ಸಾರ್ವಜನಿಕರಿಂದ 1 ರೂಪಾಯಿಗೆ 90 ರೂಪಾಯ ಕೊಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಮಟಕಾ ಚೀಟಿ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ಸದರಿ  ವ್ಯಕ್ತಿಗಳ ಮೇಲೆ ದಾಳಿ ಮಾಡಿದಾಗ ಜನರು ಓಡಿ ಹೋಗಿದ್ದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ 03 ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ವಿಕಾಶ ತಂದೆ ಜನಾರ್ಧನರಾವ ಜಗತಾಪ; ವಯ 28 ವರ್ಷ ಜಾ; ಮರಾಠಾ ಉ; ಡ್ರೈವರ ಸಾ; ಇಂಚೂರ ತಾ; ಭಾಲ್ಕಿ ಅಂತ ತಿಳಿಸಿದ್ದರು ಈತನ ಅಂಗ ಜಡತಿ ಮಾಡಲು  ಒಂದು ಕಾರಬನ ಕಂಪನಿಯ ಮೋಬಾಯಿಲ್ ಅ;ಕಿ- 500/- ರೂ, ನಗದು ಹಣ 1500/- ರೂ ಹಾಗೂ 3 ಮಟಕಾ ಚೀಟಿಗಳು ಇದ್ದು 2) ದಯಾನಂದ ತಂದೆ ವಿಜಯಕುಮಾರ ಪವಾರ ವಯ 34 ವರ್ಷ ಜಾ; ಮರಾಠಾ ಉ; ಡ್ರೈವರ ಸಾ; ಸಾಯಗಾಂವ ತಾ; ಭಾಲ್ಕಿ ಈತನ ಅಂಗ ಜಡತಿ ಮಾಡಲು ಆತನ ಹತ್ತಿರ ಒಂದು ವಿವೋ ಕಂಪನಿಯ ಮೋಬಾಯಿಲ್ ಅ;ಕಿ; 15000/- ರೂ, ಹಾಗೂ ನಗದು ಹಣ 1200/- ರೂ ಹಾಗೂ 2 ಮಟಕಾ ಚೀಟಿಗಳು ಇದ್ದು 3) ಸಂದೀಪ ತಂದೆ ಶಂಕರರಾವ ಜಗತಾಪ ವಯ 32 ವರ್ಷ ಜಾ; ಮರಾಠಾ ಉ; ಅಟೋ ಡ್ರೈವರ ಸಾ; ಇಂಚುರ ತಾ; ಭಾಲ್ಕಿ. ಈತನ ಅಂಗ ಜಡತಿ ಮಾಡಲು ಆತನ ಹತ್ತಿರ 1600/- ರೂ ಹಾಗೂ 3 ಮಟಕಾ ಚೀಟಿಗಳು ಇದ್ದು ಹೀಗೆ ಒಟ್ಟು ನಗದು ಹಣ 4300/- ರೂಪಾಯಿ, ಎರಡು ಮೋಬಾಯಿಲ್ ಅ;ಕಿ; 15, 500/- ರೂ, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.