ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 27-08-2020
ಬೀದರ ನೂತನ ನಗರ ಠಾಣೆ
ಅಪರಾಧ ಸಂಖ್ಯೆ 95/2020 ಕಲಂ 379 ಐಪಿಸಿ :-
ದಿನಾಂಕ 26/08/2020 ರಂದು 1945 ಗಂಟೆಗೆ ಫಿರ್ಯಾದಿ ಶ್ರೀಮತಿ.
ಚಿತ್ರಮ್ಮ ಗಂಡ ಸುಂದರರಾಜ ವಯ:46 ವರ್ಷ ಜಾತಿ:ಕ್ರಿಶ್ಚನ ಉ:ಕೂಲಿ ಕೆಲಸ
ಸಾ/ಚಟನಳ್ಳಿ ತಾ/ಬೀದರ. ರವರು ಠಾಣೆಗೆ ಹಾಜರಾಗಿ
ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನಂದರೆ
ದಿನಾಂಕ 20/08/2020 ರಂದು ಇವರ ಮಗನಾದ
ಪ್ರದೀಪನು ಮೊಟರ ಸೈಕಲನ್ನು ತೆಗೆದುಕೊಂಡು
ಬೀದರಕ್ಕೆ ಬಂದು ಮುಂಜಾನೆ 11:30 ಗಂಟೆಗೆ ಬೀದರ
ಅಕ್ಕಮಹಾದೇವಿ ಕಾಲೇಜ ಕಾಂಪ್ಲೆಕ್ಸನಲ್ಲಿ ಇರುವ ಎಮ್.ಐ. ಮೊಬೈಲ ಅಂಗಡಿಯ ಎದುರಿಗೆ ನಿಲ್ಲಿಸಿ
ಅಂಗಡಿಯಲ್ಲಿ ಮೊಬೈಲನ್ನು ರಿಪೇರಿ ಮಾಡಿಕೊಂಡು 12:00 ಪಿ.ಎಮ. ಗಂಟೆಯ ಸಮಯಕ್ಕೆ ಮರಳಿ ಹೊರಗೆ ಬಂದು ನೋಡಿದಾಗ ಮೊಟರ ಸೈಕಲ ನೊಡಲು ಅದು ನಾನು ಇಟ್ಟಿದ್ದ ಜಾಗದಲ್ಲಿ
ಇರಲಿಲ್ಲ. ಅಕ್ಕಪಕ್ಕದಲ್ಲಿ ನೋಡಿದರೂ ಎಲ್ಲಿಯೂ ಕಾಣಲಿಲ್ಲ ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ
ಸಿಗದಿದ್ದಾಗ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಳ್ಳತನವಾದ ಮೋಟಾರ್ ಸೈಕಲ್ ವಿವರ ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ
ನಂ ಕೆ,ಎ,38ಡಬ್ಲ್ಯೂ0597
ಚಾಸಿಸ್ ನಂ. ಎಮ್.ಬಿ.ಎಲ್.ಎಚ್.ಎ.ಡಬ್ಲ್ಯೂ08ಎಕ್ಸ್.ಕೆ.ಎಚ್.ಎ.00779 ಮತ್ತು ಇಂಜಿನ್ ನಂ. ಎಚ್ಎ.10ಎಜಿಕೆಎಚ್.ಎ.08217
ಅಂದಾಜು
ಕಿಮ್ಮತ್ತು ರೂ- 40,000/-ರೂ ಆಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆ 180/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ 26/08/2020 ರಂದು 10:30 ಗಂಟೆಗೆ ಡಿ.ಎಸ್.ಪಿ ರವರಿ
ಆದಿತ್ಯಾ ಕಾಲೇಜ ಹತ್ತಿರ ಇರುವ ನ್ಯೂ ಜಗದಂಬಾ ಧಾಬಾದ ಬದಿಯಲ್ಲಿ ಇಬ್ಬರು ತಮ್ಮ ಹತ್ತಿರ
ಸಬಂಧಪಟ್ಟ ಇಲಾಖೆಯಿಂದ ಯಾವುದೆ ಅನುಮತಿ ಇಲ್ಲದೆ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುವ ಕುರಿತು
ತಮ್ಮ ವಶದಲ್ಲಿ ಇಟ್ಟುಕೊಂಡು ಕುಳಿತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ನ್ಯೂ ಜಗದಂಬಾ ಧಾಬಾದ ಹತ್ತಿರ ಹೋಗಿ ನೋಡಿದಾಗ ಇಬ್ಬರು
ತಮ್ಮ ವಶದಲ್ಲಿ ಕಾಟನಗಳನ್ನು ಇಟ್ಟುಕೊಂಡು ಕುಳಿತಿದ್ದಾಗ 11:15 ಗಂಟೆಗೆ ಪಂಚರ ಸಮಕ್ಷಮ
ಸದರಿಯವರ ಮೇಲೆ ದಾಳಿ ಮಾಡಿ ಹಿಡಿಯುವಷ್ಟರಲ್ಲಿ ಇಬ್ಬರು ಓಡಿ ಹೋದರು ಅವರು ಸ್ಥಳದಲ್ಲಿ ಬಿಟ್ಟು
ಹೋದ ಕಾಟನಗಳನ್ನು ಪರಿಶೀಲಿಸಿ ನೋಡಲು 650 ಎಂ.ಎಲ್ ವುಳ್ಳ 64 ಕಿಂಗ್ ಫೀಶರ ಸ್ಟ್ರಾಂಗ್
ಬೀಯರ ಬಾಟಲಿಗಳು ಇದ್ದು ಒಂದರ ಬೇಲೆ 145 ರೂ ಇರುತ್ತದೆ, 650 ಎಂ.ಎಲ್ ವುಳ್ಳ 10 ಕಿಂಗ್ ಫೀಶರ ಪ್ರಿಮಿಯಮ
ಬೀಯರ ಬಾಟಲಿಗಳು ಇದ್ದು ಒಂದರ ಬೇಲೆ 150 ರೂ ಇರುತ್ತದೆ, 650 ಎಂ.ಎಲ್ ವುಳ್ಳ 64 ಕಿಂಗ್ ಫೀಶರ ಸ್ಟ್ರಾಂಗ್
ಬೀಯರ ಬಾಟಲಿಗಳು ಇದ್ದು ಒಂದರ ಬೇಲೆ 145 ರೂ ಇರುತ್ತದೆ, 650 ಎಂ.ಎಲ್ ವುಳ್ಳ 4 ಟುಬರ್ಗ ಬೀಯರ ಬಾಟಲಿಗಳು
ಇದ್ದು ಒಂದರ ಬೇಲೆ 150 ರೂ ಇರುತ್ತದೆ, 90 ಎಂ.ಎಲ್ ವುಳ್ಳ 22 ಯು.ಎಸ್ ವ್ಹಿಸ್ಕಿಯ
ಪ್ಲಾಸ್ಟೀಕ ಬಾಟಲಗಳು ಇದ್ದು ಒಂದರ ಬೆಲೆ 35 ರೂ 13 ಪೈಸೆ ಇರುತ್ತದೆ ಎಲ್ಲ
ಸೇರಿ ಅ:ಕಿ: 12,1,53 ರೂ ನೇದ್ದನ್ನು ಜಪ್ತಿ
ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 69/2020
ಕಲಂ
87 ಕೆಪಿ ಕಾಯ್ದೆ :-
ದಿನಾಂಕ: 26/08/2020 ರಂದು 14:45 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ
ಗುಪ್ತ ಮಾಹಿತಿ ಕರ್ತವ್ಯದ ಸಿಬ್ಬಂದಿ ಲೋಕೇಶ ಸಿಪಿಸಿ-1152 ರವರು ತಿಳಿಸಿದೇನೆಂದರೆ ಜಾಜನ ಮುಗಳಿ ಗ್ರಾಮದ ವಿಠ್ಠಲ ರುಕ್ಮಣಿ ಮಂದಿರದ ಹತ್ತಿರ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಗೋಲಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರಭಾಹರ್ ಇಸ್ಪೇಟ ಜೂಜಾಟ ಆಡುತಿದ್ದಾರೆ ಅಂತಾ ಮಾಹಿತಿ ಬಂದಿರುತ್ತದೆ. ಅಂತಾ ತಿಳಿಸಿದ ಮೇರೆಗೆ ಸಿಬ್ಬಂದಿಯೊಂದಿಗೆ
ಜಾಜನ ಮುಗಳಿ ಗ್ರಾಮದ ವಿಠ್ಠಲ ರುಕ್ಮಣಿ ಮಂದಿರದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ಮರೆಯಲ್ಲಿ ನಿಂತು ನೋಡಲು ರುಕ್ಮಣಿ ಮಂದೀರದ ಹತ್ತಿರ ಕೆಲವು ಜನರು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಅಂದರಭಾರ್ ಎಂಬ
ನಶಿಬಿನ ಇಸ್ಪೇಟ ಜೂಜಾಟ ಆಡುತಿದ್ದನ್ನು ಖಚಿತ ಪಡಿಸಿಕೊಂಡು 17:00 ಗಂಟೆಗೆ ಪಂಚರ ಸಮಕ್ಷಮ ಸಿಬ್ಬಂದಿಯವರಾದ ಲೋಕೇಶ ಸಿಪಿಸಿ-1152, ಬಸವರೆಡ್ಡಿ ಸಿಪಿಸಿ-1029 ಹಾಗೂ ಮಹಾದೇವ ಎಪಿಸಿ-356 ರವರ ಸಾಹಾಯದಿಂದ ಸದರಿಯವರ ಮೇಲೆ ದಾಳಿ ಮಾಡಿ ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 26,600/- ರೂ ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅರೋಪತರ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 119/2020 ಕಲಂ
78(3) ಕೆ.ಪಿ. ಕಾಯ್ದೆ :-
ದಿನಾಂಕ 26/08/2020 ರಂದು 1700 ಗಂಟೆಗೆ ಹುಮನಾಬಾದ ಪಟ್ಟಣದ ಬಾಲಾಜಿ ಮಂದಿರ ಹತ್ತಿರ ರೊಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರೋಡಿನ ಮೇಲೆ ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತಾ ಅವರಿಂದ ಹಣ ಪಡೆದು ಅವರಿಗೆ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಸಿಬ್ಬಂದಿಯವರಾದ 1] ಭಗವಾನ ಸಿಎಚಸಿ 881 2] ನವೀನ ಸಿಪಿಸಿ 1107, ರವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ಭಾತ್ಮಿ ನಿಜ ಇದ್ದು 1745 ಗಂಟೆಗೆ ಮಟಕಾ ಚೀಟಿ ಬರೆದುಕೊಡುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಆಕಾಶ ತಂದೆ ಸುಭಾಷ ಬಿರಾದಾರ, ವಯ 29 ವರ್ಷ, ಜಾ. ಲಿಂಗಾಯತ, ಉ. ಕಿರಾಣಿ ಅಂಗಡಿ, ಸಾ. ಧನ್ನೂರ, ಸಧ್ಯ ಬಾಲಾಜಿ ಮಂದಿರ ಹತ್ತಿರ ಹುಮನಾಬಾದ ಅಂತ ತಿಳಿಸಿರುತ್ತಾನೆ ಅವರಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3800=00 ರೂಪಾಯಿಗಳು, ಒಂದು ಬಾಲ ಪೇನ್ನ, ಹಾಗು 10 ಮಟಕಾ ಅಂಕಿ ಸಂಖ್ಯೆ ಬರೆದ ಚಿಟಿಗಳು, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment