ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-08-2020
ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 05/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 27-08-2020 ರಂದು ಫಿರ್ಯಾದಿ ವಿಠಲ ರೆಡ್ಡಿ ತಂದೆ ವೆಂಕಟರೆಡ್ಡಿ ನಾನಾಪುರ ಸಾ: ಬರೂರ ರವರ ಹೆಂಡತಿಯಾದ ಸರೆಮ್ಮಾ ಗಂಡ ವಿಠಲರೆಡ್ಡಿ ಹಾಗೂ ಸಂಬಂಧಿಕರಾದ ಸುಮಿತ್ರಾ ಗಂಡ ರಾಮರೆಡ್ಡಿ ಹಾಗೂ ಶೋಬಮ್ಮಾ ಹಾಗೂ ಲಕ್ಷ್ಮಮ್ಮ ಇವರೆಲ್ಲರೂ ಕೂಡಿಕೊಂಡು ಸಂಬಂಧಿಯಾದ ಲಚಮ್ಮಾ ರೆಡ್ಡಿ ತಂದೆ ಬೋಜರೆಡ್ಡಿ ನಾನಾಪುರ ರವರ ಹೋಲ ಸರ್ವೆ ನಂ. 63 ನೇದರಲ್ಲಿ ಹೆಸರು ಬೆಳೆ ಕಟಾವು ಮಾಡಲು ಹೋದಾಗ ಫಿರ್ಯಾದಿಯವರ ಹೆಂಡತಿಗೆ ಹೋಲದಲ್ಲಿ ಆಕಸ್ಮಿಕವಾಗಿ ಹಾವು ಬಲಗಾಲು ಹಿಮ್ಮಡಿ ಮೇಲೆ ಕಚ್ಚಿದ್ದರಿಂದ ಅವರಿಗೆ ಚಿಕಿತ್ಸೆಗಾಗಿ ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ವೈದ್ಯಾಧೀಕಾರಿಗಳು ಪರಿಕ್ಷಿಸಿ ಮ್ರತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 15/2020, ಕಲಂ. 174 ಸಿ.ಆರ್.ಪಿ.ಸಿ :-
ಸುಮಾರು 5-6 ತಿಂಗಳಿಂದ ಫಿರ್ಯಾದಿ ವೆಂಕಪ್ಪಾ ತಂದೆ ಲಕ್ಷ್ಮಣ ವಾಡೆಕರ ವಯ: 50 ವರ್ಷ, ಜಾತಿ: ವಡ್ಡರ, ಸಾ: ಕನಕಟ್ಟಾ ರವರ ತಂದೆಯವರು ಮಾನಸಿಕ ಅಸ್ವಸ್ಥರಾಗಿದ್ದು, ಆಗಾಗ ಮನೆಯಿಂದ ಯಾರಿಗೂ ಹೇಳಿದೆ ಹೊರಗಡೆ ಹೋಗಿದ್ದರು ಹೊರಗಡೆ ಹೊದಾಗಲೆಲ್ಲಾ ಅಣ್ಣ-ತಮ್ಮಂದಿರು ಮತ್ತು ಮಕ್ಕಳು ಎಲ್ಲರೂ ಕೂಡಿ ಹುಡಕಾಡಿ ಮನೆಗೆ ಕರೆದುಕೊಂಡು ಬರುತಿದ್ದರು, ಹೀಗಿರುವಾಗ ದಿನಾಂಕ 25-08-2020 ರಂದು ಫಿರ್ಯಾದಿಯವರ ತಂದೆಯಾದ ಲಕ್ಷ್ಮಣ ತಂದೆ ತಿಪ್ಪಣ್ಣಾ ವಾಡೆಕರ ರವರು ಮನೆಯಿಂದ ಯಾರಿಗೂ ಹೇಳದೆ ಹೋದಾಗ ದಿನಾಂಕ 26-08-2020 ರಂದು ತಂದೆಯವರೆಗೆ ಹುಡಕಾಡಿದ್ದು, ನಂತರ ದಿನಾಂಕ 27-08-2020 ರಂದು ಕೂಡ ಎಲ್ಲರೂ ಕೂಡಿ ಅವರಿಗೆ ಹುಡಕಾಡುವಾಗ ತಮ್ಮೂರ ಗಣಪತಿ ತಂದೆ ನಾಗಪ್ಪಾ ಕೊರಿಯಾರ ಇವರು ಫಿರ್ಯಾದಿಗೆ ರಾಜೋಳ ಶಿವಾರದಲ್ಲಿ ಸುರೇಶ ತಂದೆ ಮಲ್ಲಿಕಾರ್ಜುನ ಖಪ್ಲೆ ರವರ ಹೊಲದ ಕಟ್ಟೆ ಹತ್ತಿರ ಒಂದು ಹೆಣ ಬಿದಿದ್ದೆ ಜನರು ಜಮಾ ಆಗಿರುತ್ತಾರೆಂದು ತಿಳಿಸಿದ ಕೂಡಲೆ ಫಿರ್ಯಾದಿಯು ಹೋಗಿ ನೋಡಲು ಹೆಣ ತಂದೆಯವರದ್ದೆ ಇದ್ದು ಮುಖಕ್ಕೆ ದೆಹಕ್ಕೆ ಎಲ್ಲಾ ಕಡೆ ಹುಳಗಳು ಆಗಿದ್ದು, ಸದರಿಯವರು ಮಾನಸಿಕ ಅಸ್ವಸ್ಥರಾಗಿ ಅವರಿಗೆ ರಕ್ತದ ಒತ್ತಡ, ಸಕ್ಕರೆ ಕಾಯಿಲೆಗಳು ಇದ್ದವು ಅಲ್ಲದೆ ವಯಸ್ಸು ಕೂಡಾ ಆಗಿರುವುದರಿಂದ ದಿನಾಂಕ 25-08-2020 ರಂದು 2000 ಗಂಟೆಯ ಅವಧಿಯಲ್ಲಿ ತಮ್ಮೂರಿನ ಸುರೇಶ ಖಪ್ಲೆ ರವರ ಹೊಲದ ಬಂದಾರಿ ಹತ್ತಿರ ಮೃತಪಟ್ಟಿರುತ್ತಾರೆ, ತನ್ನ ತಂದೆಯವರ ಸಾವಿನಲ್ಲಿ ನನ್ನದು ಯಾವುದೇ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 63/2020, ಕಲಂ. 279, 337, 338 ಐಪಿಸಿ :-
ದಿನಾಂಕ 27-08-2020 ರಂದು ಫಿರ್ಯಾದಿ ಸುರೇಶ ತಂದೆ ಶಂಕರ ಚನಪನೋರ್ ಸಾ: ವಾಂಜರಿ ಹುಮನಾಬಾದ, ಜಿಲ್ಲೆ: ಬೀದರ ರವರು ತನ್ನ 06 ವರ್ಷದ ಮಗ ವೀರೇಶ ಇಬ್ಬರೂ ಕೂಡಿಕೊಂಡು ಕಾಯಿಪಲ್ಲೆ ತೆಗೆದುಕೊಂಡು ಹೋಗಲು ವಾಂಜರಿ ಕಡೆಯಿಂದ ರೋಡಿನ ಬದಿಯಲ್ಲಿ ಕಾಲ ನಡಿಗೆಯಲ್ಲಿ ನಡೆದುಕೊಂಡು ಥೇರ್ ಮೈದಾನ ಕಡೆಗೆ ಬರುತ್ತಿರುವಾಗ ಇಂಡಿಕ್ಯಾಶ್ ಎ.ಟಿ.ಎಮ್ ಹತ್ತಿರ ಬಂದಾಗ ಅದೇ ಸಮಯಕ್ಕೆ ಹಿಂದಿನಿಂದ ಅಂದರೆ ಕಲ್ಲೂರ ಕಡೆಯಿಂದ ಮೋಟಾರ್ ಸೈಕಲ್ ಸಂ. ಕೆಎ-39/ಜೆ-1182 ನೇದರ ಚಾಲಕನಾದ ಆರೋಪಿ ನಮೋ ತಂದೆ ಸಂತೋಷ ಮೇಲದೊಡ್ಡಿ ಸಾ: ಎಮ್.ಪಿ ಗಲ್ಲಿ ಹುಮನಾಬಾದ ಇವನು ತನ್ನ ಮೋಟಾರ್ ಸೈಕಲ ಮೇಲೆ ಅನಿರುದ್ಧ ತಂದೆ ಅರವಿಂದ ಕುಲಕರ್ಣಿ ಸಾ: ಎಮ್.ಪಿ ಗಲ್ಲಿ ಹುಮನಾಬಾದ ಇವನಿಗೆ ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ರೋಡಿನ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೀರೇಶ ಇವನಿಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿ ತನ್ನ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾನೆ, ಕಾರಣ ಸದರಿ ಅಪಘಾತದಿಂದ ವೀರೇಶ ಇವನಿಗೆ ನೋಡಲಾಗಿ ಹಣೆಗೆ, ಬಲಗಡೆ ಕಪಾಳಕ್ಕೆ ತೀವ್ರ ರಕ್ತಗಾಯ, ಬಲಗಡೆ ಕಣ್ಣಿಗೆ ಗುಪ್ತಗಾಯ ಮತ್ತು ಹೊಟ್ಟೆಯ ಬಲಗಡೆಗೆ ತರಚಿದ ಗಾಯಗಳು ಆಗಿರುತ್ತವೆ, ನಮೋ ಇವನಿಗೆ ನೋಡಲಾಗಿ ಬಲಗಡೆ ಕಪಾಳಕ್ಕೆ ತರಚಿದ ಗಾಯ ಮತ್ತು ಬಲಗೈ ಮೊಣಕೈ ಕೆಳಗೆ ತೀವ್ರ ಗುಪ್ತಗಾಯವಾಗಿರುತ್ತದೆ, ಅನಿರುದ್ದ ಇವನಿಗೆ ನೋಡಲಾಗಿ ಹಣೆಯ ಎಡಗಡೆಗೆ ರಕ್ತಗಾಯ, ಎಡಗೈ ಮೊಣಕೈಗೆ ಮತ್ತು ಎರಡು ಮೊಣಕಾಲಗಳಿಗೆ ತರಚಿದ ಗಾಯಗಳು ಆಗಿರುತ್ತವೆ, ನಂತರ ಮೂವರು ಗಾಯಾಳುಗಳಿಗೆ ಒಂದು ಆಟೋದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 67/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 27-08-2020 ರಂದು ಗೌರ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿ ಬರೆದುಕೊಳ್ಳುತ್ತಿದ್ದಾನೆಂದು ಗೌತಮ ಪಿಎಸ್ಐ ಹುಲಸೂರ ಪೊಲೀಸ ಠಾಣೆ ರವರಿಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗೌರ ಗ್ರಾಮದ ಆಸ್ಪತ್ರೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಗೌರ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಂಬ್ರಿಷ ತಂದೆ ಅಣ್ಣಾರಾವ ಮೂಲಗೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಹಳ್ಳಿಖೇಡ [ಕೆ], ಸದ್ಯ: ಗೌರ ಗ್ರಾಮ, ಇತನು ಒಂದು ರೂಪಾಯಿಗೆ 90/- ರೂಪಾಯಿ ಕೊಡುವದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿ ಬರೆದುಕೊಳ್ಳುತಿರುವದನ್ನು ನೋಡಿ ಆತನ ಮೇಲೆ ದಾಳಿ ನಡೆಸಿ ಹಿಡಿದುಕೊಂಡು ಆತನಿಂದ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 1 ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನ ಹಾಗು ನಗದು ಹಣ 840/- ರೂಪಾಯಿಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 108/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 27-08-2020 ರಂದು ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುನೀಲಕುಮಾರ್ ಪಿಎಸ್‍ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿಎಸಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಗೌಸ ಖುರೇಶಿ ತಂದೆ ಉಸ್ಮಾನ ಖುರೇಶಿ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಅಮೀಪರೆಟ ಕಾಲೋನಿ ಬಸವಕಲ್ಯಾಣ ಹಾಗೂ ಎಂ.ಡಿ ಇಲಾಹಿ ತಂದೆ ಫಕೀರಾಬ ಮಸೂಲ್ದಾರ ವಯ: 23 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಆಶ್ರಯ ಕಾಲೋನಿ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ 1/- ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಇಬ್ಬರಿಗೂ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 20,040/- ರೂ. 04 ಮಟಕಾ ಚೀಟಿಗಳು ಹಾಗೂ 02 ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 181/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 27-08-2020 ರಂದು ಪಾಪವ್ವ ನಗರದ ಅಂಬೇಡ್ಕರ ವೃತ್ತದ ಹತ್ತಿರ ಇಬ್ಬರು ತಮ್ಮ ಹತ್ತಿರ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುವ ಕುರಿತು ತಮ್ಮ ವಶದಲ್ಲಿ ಇಟ್ಟುಕೊಂಡು ಕುಳಿತಿದ್ದಾನೆಂದು ಅಮರ ಕುಲಕರ್ಣಿ ಪಿಎಸ್ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಪಾಪವ್ವ ನಗರದಲ್ಲಿ ಅಂಬೇಡ್ಕರ ವೃತ್ತದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಪಾಪವ್ವ ನಗರದ ಅಂಬೇಡ್ಕರ ವೃತ್ತದ ಹತ್ತಿರ ಆರೋಪಿತರಾದ 1) ಶಾಲಿವಾನ ತಂದೆ ನಾಗಪ್ಪಾ ರಾಮಲೆ, ಸಾ: ಪಾಪವ್ವ ನಗರ ಭಾಲ್ಕಿ, 2) ಗೈಬು ತಂದೆ ಗೋವಿಂದ ಸಿಂಧೆ, ಸಾ: ಸಾಯಿ ನಗರ ಭಾಲ್ಕಿ ಇವರಿಬ್ಬರು ತಮ್ಮ ವಶದಲ್ಲಿ ಒಂದು ಚೀಲದ ಗಂಟು ಇಟ್ಟುಕೊಂಡು ಕುಳಿತಿರುವುದನ್ನು ನೋಡಿ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರ ವಶದಲ್ಲಿದ್ದ ಪ್ಲಾಟಿಕ ಗೋಣಿ ಚೀಲ ಪರಿಶೀಸಿಲಿಸಲು ತಲಾ 90 ಎಂ.ಎಲ ವುಳ್ಳ ಯು.ಎಸ. ವಿಸ್ಕಿಯ 6 ಪ್ಲಾಸ್ಟಿಕ ಬಾಟಲಗಳು ಒಂದರ ಬೆಲೆ 35.13 ಪೈಸೆ ಮತ್ತು ತಲಾ 90 ಎಂ.ಎಲ ವುಳ್ಳ ಓರಿಜಿನಲ ಚಾಯಸ ವಿಸ್ಕಿಯ 41 ಪೌಚಗಳು ಒಂದರ ಬೆಲೆ 35.13 ಪೈಸೆ. ಹೀಗೆ ಒಟ್ಟು ಎಲ್ಲಾ ಸೇರಿ ಅ.ಕಿ 1651/- ರೂ. ದಷ್ಟು ಇರುತ್ತದೆ, ನಂತರ ಸದರಿ ಆರೋಪಿತರಿಗೆ ಮದ್ಯ ತಮ್ಮ ವಶದಲ್ಲಿ ಇಟ್ಟುಕೊಂಡ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಂದ ಪಡೆದ ಯಾವುದಾರು ಅನುಮತಿ ಪತ್ರ ಇದ್ದಲ್ಲಿ ಹಾಜರು ಪಡಿಸುವಂತೆ ತಿಳಿಸಿದಾಗ ತಮ್ಮ ಹತ್ತಿರ ಯಾವದೆ ಅನುಮತಿ ಪತ್ರ ಇರುವದಿಲ್ಲಾ ಅಂತ ತಿಳಿಸಿದ್ದರಿಂದ ಪಂಚರ ಸಮಕ್ಷಮ ಅವರ ವಶದಲ್ಲಿ ದೋರೆತ ಎಲ್ಲಾ ಮದ್ಯವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment