ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-08-2020
ದಿನಾಂಕ 28/08/2020 ರಂದು 1100 ಗಂಟೆಗೆ ಫಿರ್ಯಾದಿ ಶ್ರೀ ಕೃಷ್ಣಮುರ್ತಿ ತಂದೆ ಸಂಗಯ್ಯಾ ಬಚ್ಚಾ ವಯ-50 ವರ್ಷ ಜಾ/ ಕೊಂಮಟಿ (ಆರ್ಯ ವೈಶ್ಯ) ಉ-ಎ.ಪಿ.ಎಂ.ಸಿ. ಗಾಂಧಿಗಂಜ ದಲ್ಲಿ
ತೇರಿಗೆ ವಸೂಲಿ ಸಾ/ ಮನೆ ನಂ, 3-2-99 ಬ್ರಹ್ಮನವಾಡಿ ಬೀದರ ನಿವಾಸಿ
ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಇವರ ಹತ್ತಿರ ಒಂದು ಹಿರೊ
ಸ್ಪ್ಲೆಂಡರ ಪ್ಲಸ ದ್ವಿ-ಚಕ್ರ ವಾಹನ ಇದ್ದು ಅದರ
ನೊಂದಣಿ ಸಂ, ಕೆ.ಎ-38ಯು-0931 ಅದರ ಮಾದರಿ 2016 ಕಪ್ಪು ಬಣ್ಣದು ಇದ್ದು ಅಂ. ಕಿ 28000/-
ರೂ
ಇರುತ್ತದೆ ಅದನ್ನು ದಿನಾಂಕ 24/07/2020 ರಂದು ಮುಂಜಾನೆ 1100 ಗಂಟೆಗೆ ದಿನ ನಿತ್ಯದ
ಕೆಲಸಕ್ಕೆ ಗಾಂಧಿಗಂಜ ಎ.ಪಿ.ಎಂ.ಸಿ. ಗೆ ಬಂದು ಎ.ಪಿ.ಎಂ.ಸಿ ವಾಹನ ಪಾಕರ್ಿಂಗ
ಜಾಗೆಯಲ್ಲಿ ನಿಲ್ಲಿಸಿ ಕರ್ತವ್ಯಕ್ಕೆ ಹೊಗಿದ್ದು
ಮರಳಿ 1200 ಗಂಟೆಗೆ ಬಂದು ನೊಡಿದಾಗ ಇವರ
ವಾಹನವು ನಿಲ್ಲಿಸಿದ ಜಾಗೆಯಲ್ಲಿ ಇರಲಿಲ್ಲಾ
ಗಾಬರಿ ಗೊಂಡು ಅಕ್ಕಪಕ್ಕದ ಜನರಿಗೆ ವಿಚಾರಿಸಲು
ಯಾವದೆ ಮಾಹಿತಿ ಸಿಕ್ಕಿರುವದಿಲ್ಲಾ ಯಾರೊ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ. ಅಂತಾ ನೀಡಿದ
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ)
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 68/2020 ಕಲಂ 457, 380, 427 ಐಪಿಸಿ :-
ದಿನಾಂಕ: 28/08/2020 ರಂದು 12:05 ಗಂಟೆಗೆ ಶ್ರೀ ಬಸವರಾಜ ತಂದೆ ಸಂಗಪ್ಪಾ ಚಿಕಲೆ
ಸರಕಾರಿ ಪೋಲಟೇಕ್ನೀಕ ಕಾಲೇಜ ಔರಾದ ಬಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಸಲ್ಲಿಸದರ
ಸಾರಾಂಶವೆನೆಂದರೆ ಫಿರ್ಯಾದಿಯು ಸುಮಾರು 8 ವರ್ಷದಿಂದ ಔರಾದ ಬಿ ಪಾಲಟಿಕ್ನಿಕ
ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತಿದ್ದು ಅದೆ ರೀತಿ ಕಾಲೇಜಿನಲ್ಲಿ ಸುಮಾರು 11 ಜನ ಉಪನ್ಯಾಸಕರು,7 ಜನ ಕಛೇರಿಯ ಸಿಬ್ಬಂದಿಯವರು,13 ಜನ ಗುತ್ತಿಗೆ ಆಧಾರದ ಮೇಲೆ
ಡಿ.ಗ್ರೂಪ್ ಸಿಬ್ಬಂದಿ ಕೆಲಸ ಮಾಡುತ್ತಾರೆ. ದಿನಾಂಕ:27/08/2020 ರಂದು ಫಿಯರ್ಾದಿಯು ಒಂದು ದಿವಸ ರಜೆಯ ಮೇಲೆ ಇದ್ದು ನಮ್ಮ ಕಾಲೇಜಿನಲ್ಲಿ
ಎಲ್ಲಾ ಸಿಬ್ಬಂದಿಯವರು ದಿನ ನಿತ್ಯದಂತೆ ಬೆಳಿಗ್ಗೆ 10 ಗಂಟೆಗೆ ತಮ್ಮ ತಮ್ಮ
ಕರ್ತವ್ಯಕ್ಕೆ ಬಂದು ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಸಾಯಂಕಾಲ 5:30 ಗಂಟೆಯ ಸುಮಾರಿಗೆ ಎಲ್ಲರು
ಹೋಗುತ್ತಾರೆ. ಅದೆ ರೀತಿ ಡಿ.ಗ್ರೂಪ ಸಿಬ್ಬಂದಿಯವರಾದ ರವೀಂದ್ರ,
ಅರವಿಂದ, ಗಣೇಶ, ಸುರ್ಯಕಾಂತ, ಗೊರಖನಾಥ, ಶ್ರೀಕಾಂತ ಇವರುಗಳು ಪಾಳಿ ಪ್ರಕಾರ
ಕಾಲೇಜನಲ್ಲಿ ರಾತ್ರಿ ಹಗಲು ಕಾವಲುಗಾರ ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ನಂತರ ರಾತ್ರಿ 8:57 ಗಂಟೆಯ ಸುಮಾರಿಗೆ ರವೀಂದ್ರ ಭಾಲ್ಕೆ ಕಾವಲುಗಾರ ಇವನ ದೂರವಾಣಿ ಮುಖಾಂತರ
ತಿಳಿಸಿದ್ದು ನಾನು ಕರ್ತವ್ಯಕ್ಕೆ ಬಂದಾಗ ನಿಮ್ಮ ಕೋಣೆಯ ಬಾಗಿಲವನ್ನು ಕೊಂಡಿ ಮುರಿದಿದ್ದು
ಬಾಗಿಲು ತೆರೆದಿದ್ದು ಒಳಗೆ ಕೆಲವು ಸಾಮಾನುಗಳು
ನೇಲಕ್ಕೆ ಬಿದ್ದಿದ್ದು ಇರುತ್ತದೆ. ಯಾರೋ ಅಪರಿಚಿತ ಕಳ್ಳರು ಬಂದು ಬಾಗಿಲು ಕೊಂಡಿ ಮುರಿದು ಒಳಗೆ
ಹೋಗಿರುತ್ತಾರೆ ಅಂತ ತಿಳಿಸಿರುತ್ತಾರೆ. ದಿನಾಂಕ:28/0/2020 ರಂದು ಬೆಳಿಗ್ಗೆ 0600 ಗಂಟೆಗೆ ಫಿರ್ಯಾದಿ ಮತ್ತು ವಿಜಯಕುಮಾರ
ಜಾಧವ,ಗಂಗಪ್ಪಾ ಹಣಮಶೇಟ್ಟೆ ರವರು ಬಂದು ಕಾಲೇಜಿನಲ್ಲಿ
ಹೋಗಿ ನೊಡಿದಾಗ ಕೋಣೆ ಬಾಗಿಲು ಕೊಂಡಿ ಮುರಿದು
ಒಳಗೆ ಇದ್ದ 1] ಸಿ.ಸಿ ಟಿ.ವಿಯ ಕ್ಯಾಮರಾದ
ಡಿ.ವಿ.ಅರ್.2] ಎರಡು ಸಿಪಿಯು 3]ಒಂದು ಮೊನೀಟರ್ ಗಳು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು
ಹಾಗು ಒಂದು ಎಲ್.ಜಿ ಕಂಪನಿಯ ಎಲ್.ಇ.ಡಿ 32 ಇಂಚ ಮಾನಿಟರ ಒಡೆದು ಬಿಸಾಡಿ ಲುಕ್ಸಾನ ಮಾಡಿರುತ್ತಾರೆ. ಕಾಲೇಜಿನಲ್ಲಿದ್ದ 1] ಸಿ.ಸಿ ಟಿ.ವಿಯ ಕ್ಯಾಮರಾದ ಡಿ.ವಿ.ಅರ್ ಅ:ಕೀ=40,120/-ರೂ,
2] ಎರಡು
ಸಿಪಿಯು ಹಾಗೂ ಒಂದು ಮೊನೀಟರ್ ಅ:ಕಿ:-55000/-ರೂ ಒಟ್ಟು ಕಳುವಾದ ಕಿಮ್ಮತ್ತು 95.120/-ರೂಗಳು ಮತ್ತು ಒಂದು ಎಲ್.ಜಿ ಕಂಪನಿಯ ಎಲ್.ಇ.ಡಿ 32 ಇಂಚ ಮಾನಿಟರ ಒಡೆದು ಬಿಸಾಡಿ
ಲುಕ್ಸಾನ ಅದ ಅ:ಕಿ:-32450/-ರೂ ಆಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 83/2020 ಕಲಂ
379 ಐಪಿಸಿ :-
ದಿನಾಂಕ
28/08/2020 ರಂದು 16:30 ಗಂಟೆಗೆ ಫಿರ್ಯಾದಿ
ಶ್ರೀ ಎಂ.ಎ ಅಕ್ರಮ ತಂದೆ ಎಂ.ಎ ಖಾಲಿಕ್ ವಯ:31 ವರ್ಷ ಜಾ:ಮುಸ್ಲಿಂ ಉ: ವ್ಯಾಪಾರ ಸಾ: ಮನೆ ನಂ 5-2-93 ಬಾರೂಧ ಗಲ್ಲಿ ಬೀದರ
ರವರು ಠಾಣೆಗೆ ಹಾಜರಾಗಿ
ದೂರು ಸಲ್ಲಿಸದರ ಸಾರಾಂಶವೆನೆಂದರೆ
ಫಿರ್ಯಾದಿಯು
ಟ್ರಾಕ್ಟರ್
ಇಟ್ಟುಕೊಂಡು ವ್ಯವಹಾರ ಮಾಡುತ್ತಿದ್ದು ಇದರೊಂದಿಗೆ
ಮನೆಯಲ್ಲಿ
ಆಡು ಸಾಕಾಣಿಕೆ ಮಾಡಿಕೊಂಡಿದ್ದು ಇವರ ಹತ್ತಿರ 3 ಆಡುಗಳು ಇದ್ದು ಅವು
ಪ್ರತಿ ದಿನ ನನ್ನ ಮನೆಯ ಮುಂದೆ ಕಟ್ಟುತ್ತೇನೆ. ದಿನಾಂಕ
27/08/2020 ರಂದು
ರಾತ್ರಿ ಆಡುಗಳು ಎಂದಿನಂತೆ ಮನೆಯ ಮುಂದೆ ಕಟ್ಟಿ ರಾತ್ರಿ ಎಲ್ಲರೂ
ಮಲಗಿಕೊಂಡು
ನಂತರ ದಿನಾಂಕ
28/08/2020 ರಂದು
ನಸುಕಿನ ಜಾವ ಅಂದಾಜು 5:30 ಗಂಟೆ ಸುಮಾರಿಗೆ ಮನೆಯ ಮುಂದೆ ಆಟೊ ಹೊಗುವ ಶಬ್ದ ಕೇಳಿ ಮನೆಯಿಂದ
ಹೊರಗಡೆ ಬಂದು ನೋಡಲು ಒಂದು ಆಟೋದಲ್ಲಿ 3 ಜನರಿದ್ದು ಮನೆಯ ಮುಂದೆ ಕಟ್ಟಿದ 3 ಆಡುಗಳು ಅಂದಾಜು 15,000/ರೂ ಬೆಲೆ ಬಾಳುವ
ಆಡುಗಳು ಆಟೋದಲ್ಲಿ ಹಾಕಿಕೊಂಡು ಆಟೋ ಓಡಿಸಿಕೊಂಡು ಹೋಗಿರುತ್ತಾರೆ ಆಟೋಕ್ಕೆ
ಹಿಡಿಯಲು ಬೆನ್ನು ಹತ್ತಿದ್ದಾಗ ಆಟೋ ಓಡಿಸಿಕೊಂಡು ಹೋಗುತ್ತಿರುವದ್ದನ್ನು ನೋಡಿ ಅದರ ನಂಬರ ನೋಡಿದ್ದು
ಕೆಎ-38/9919
ನೇದ್ದು
ಇರುತ್ತದೆ ಅಂತಾ ನೀಡಿದ ದೂರಿನ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 114/2020 ಕಲಂ 286, 338 ಐಪಿಸಿ 3 & 4 ಎಕ್ಸ್.ಪ್ಲೊಸಿವ್ ಕಾಯ್ದೆ
;-
ದಿನಾಂಕ 28/08/2020 ರಂದು 1700 ಗಂಟೆಗೆ
ಭಾಲ್ಕಿ ಸರಕಾರಿ ಆಸ್ಪತ್ರೆಯಿಂದ ಗಾಯಾಳು ಶ್ರೀ ಸಂಜುಕುಮಾರ ಸೂರ್ಯವಂಶಿ ರವರ ಎಂ.ಎಲ್.ಸಿ. ಪತ್ರ
ಸ್ವೀಕರಿಸಿಕೊಂಡು ಆಸ್ಪತ್ರೆಗೆ ಭೆಟಿ ನೀಡಿ ಅಲ್ಲಿ ಹಾಜರಿದ್ದ ಸಂಜುಕುಮಾರ ತಂದೆ ಬಾಬುರಾವ
ಸೂರ್ಯವಂಶಿ ವಯ 40 ವರ್ಷ ಜಾ; ಎಸ್.ಸಿ. ಮಾದಿಗ
ಸಾ;
ಸಿದ್ದಾರ್ಥನಗರ
ಭಾಲ್ಕಿ. ರವರಿಗೆ ವಿಚಾರಣೆ ಮಾಡಲು ಸದರಿಯವರು ದಿನಾಂಕ
28/08/2020 ರಂದು ಹಚಿಕಮಟ
ಗ್ರಾಮದ ಶ್ರೀ ನಾಗಶೇಟ್ಟಿ ತಂದೆ ಕಾಶಿನಾಥ ಪಾಟೀಲ್ ರವರು ಹೊಲದಲ್ಲಿ ಕಟ್ಟುತಿದ್ದ ಮನೆಯ
ಸೆಂಟ್ರಿಂಗ ಕೆಲಸಕ್ಕೆ ಹೋಗಿರುತ್ತಾರೆ. ನಂತರ ಮಧ್ಯಾಹ್ನ ಇವರು ಮತ್ತು ನಾಗಶೇಟ್ಟಿ ಪಾಟೀಲ
ಮತ್ತು ಶ್ರೀಮಂತ ಪಾಟೀಲ್ ಹಾಗೂ ಇತರರು ಹೊಲದಲ್ಲಿರುವ ತಗಡದ ಶೇಡ್ಡಿನಲ್ಲಿ ಕುಳಿತಿದಾಗ 3 ಪಿ.ಎಂ. ಗಂಟೆಯ
ಸುಮಾರಿಗೆ ಕಾರಾಂಜಾ ಕಾಲುವೆ ಹತ್ತಿರ ಸರಕಾರದಿಂದ ಗುತ್ತಿಗೆ ಪಡೆದು ಎತನಿರಾವರಿಯ ಕೆಲಸ
ನಿರ್ವಹಿಸುತ್ತಿದ್ದ ಸೈಟ ಮ್ಯಾನೇಂಜರ್ ಈತನು ಕೆಲಸ ವೇಳೆಯಲ್ಲಿ ಗುಂಡಿಯಲ್ಲಿ ಯಾವುದೆ ಅನುಮತಿ
ಪಡೆಯದೆ ಸ್ಪೋಟಕ ಶೇಲ್ (ಜಲಾಯಟಿನ ) ಬಳಸಿ
ಒಮ್ಮೇಲೆ ಸ್ಪೋಟ ಮಾಡಿದಾಗ ಗುಂಡಿಯಲ್ಲಿನ ಕಲ್ಲು ಹಾರಿ ತಗಡದ ಒಳಗಡೆ ಬಂದು
ಇವರ
ಹೊಟ್ಟೆಯ
ಮೇಲೆ ಹತ್ತಿ ರಕ್ತಗಾಯವಾಗಿರುತ್ತದೆ. ಆಗ ಕೂಡಲೇ ಸಿಬ್ಬಂದಿಯವರಾದ ಶ್ರೀ
ಮಹೇಶ ಸಿಪಿಸಿ-1908,
ಶ್ರೀ
ಭಾಗವತ ಸಿಪಿಸಿ-1880 ರವರಿಗೆ
ಕರೆದುಕೊಂಡು ಹಚ್ಚಿಕಮಟ ಗ್ರಾಮದ ಘಟನೆ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲಿಸಿದಾಗ ಅಲ್ಲಿ ಕಾರಂಜಾ
ಕಾಲುವೆಗೆ ಸರಕಾರದಿಂದ ಗುತ್ತಿಗೆ ಪಡೆದುಕೊಂಡು ಮಾಂಜ್ರಾ ನದಿಯಿಂದ ಏತ ನೀರಾವರಿ ( ಲಿಫ್ಟ
ಇರಿಗೇಶನ) ಕೆಲಸ ಮಾಡುತಿದ್ದ ಸೈಟ ಮ್ಯಾನೇಂಜರ್ ಯಾವುದೇ ಅನುಮತಿ ಪಡೆಯದೆ ಗುಂಡಿಯಲ್ಲಿ ಸ್ಪೋಟಕ ಶೆಲ್ (ಜಲಾಯಿಟಿನ) ಸ್ಪೋಟಕ ವಸ್ತು ಅಳವಡಿಸಿ
ಸ್ಪೋಟ ಮಾಡಿರುತ್ತಾನೆ ಎಂದು ಘಟನೆ ಸ್ಥಳದಿಂದ ಕಂಡು ಬಂದಿರುತ್ತದೆ. ಮತ್ತು ಘಟನೆ
ಸ್ಥಳದಲ್ಲಿ ಒಂದು
ಲಾರಿ ನಂ.ಎಪಿ-39/ಸಿ.ಝೇಡ-3548 ನೇದ್ದನ್ನು ನಿಂತಿದ್ದು ಸದರಿ ಲಾರಿಯ ಕ್ಯಾಬಿನ ಸುಟ್ಟು
ಹೊಗಿರುತ್ತದೆ. ಸ್ಥಳದಲ್ಲಿ 1) 23 ಎಕ್ಪಪ್ಲೋಸಿವ
ಪಾಕೆಟ್ (ಐಡಲ್ ಬುಸ್ಟ್) 83 ಎಮ್.ಎಮ್. 2.78 ಕೆ.ಜಿ. ಅ.ಕಿ. 5000/- , 2] ಸೆಫ್ಟಿ ಕೆಪ್-1 ಅ.ಕಿ.
500/- 3] ಎಲೆಕ್ಟ್ರಾನಿಲ್ ಡಿಟೊನೆಟರ್-8 ಅ.ಕಿ. ಅ;ಕಿ; 5000/- ರೂ ಸ್ಥಳದಲ್ಲಿ ಕಂಡು ಬಂದಿರುತ್ತವೆ. ನಂತರ ಸದರಿ ಕಾರಂಜಾ ಕಾಲುವೆಯ ಎತನಿರಾವರಿ ಕೆಲಸವು ಓಷಿಯನ್ ಕನಸ್ಟ್ರಕ್ಷನ್
ಇಂಡಿಯಾ ಪ್ರೈ.ಲಿ. ಮಂಗಳೂರು ಕಂಪನಿ
ನಿರ್ವಹಿಸುತಿದ್ದು ಅದರ ಸೈಟ ಮ್ಯಾನೇಂಜರ ಹೆಸರು ಆಶೀಫ ತಂದೆ ಹೈದರಅಲಿ ಸಾ; ಹೊಸುರ ತಾ; ತಿರ್ಥಹಳ್ಳಿ
ಜಿಲ್ಲೆ ಶಿವಮೊಗ್ಗ ಅಂತ ಗೋತ್ತಾಗಿರುತ್ತದೆ. ಆದ್ದರಿಂದ
ಹಚಿಕಮಟ ಗ್ರಾಮದ ಶಿವಾರದಲ್ಲಿ ಕಾರಂಜಾ ಕಾಲುವೆಗೆ ಏತ ನೀರಾವರಿ ಯೋಜನೆಯ ಕೆಲಸ ನಿರ್ವಹಿಸುತಿದ್ದ ಸದರಿ ಕಂಪನಿ ಹಾಗು ಸೈಟ ಮ್ಯಾನೇಂಜರ ಆಶೀಫ ತಂದೆ ಹೈದರಅಲಿ ಸಾ; ಹೊಸುರ ತಾ; ತಿರ್ಥಹಳ್ಳಿ
ಜಿಲ್ಲೆ ಶಿವಮೊಗ್ಗ ಈತನು ಯಾವುದೆ ಅನುಮತಿ ಪಡೆಯದೆ ಅನಧಿಕೃತವಾಗಿ ಗುಂಡಿಯಲ್ಲಿ ಸ್ಪೋಟಕ ಶೆಲ್ (ಜಲಾಯಿಟಿನ) ಸ್ಪೋಟಕ ವಸ್ತು ಅಳವಡಿಸಿ
ಸ್ಪೋಟ ಮಾಡಿದರಿಂದ
ಪ್ರಕರಣದ
ದಾಖಲು ಮಾಡಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
No comments:
Post a Comment