Police Bhavan Kalaburagi

Police Bhavan Kalaburagi

Sunday, December 27, 2020

BIDAR DISTRICT DAILY CRIME UPDATE 27-12-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-12-2020

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 146/2020 ಕಲಂ 392 ಐಪಿಸಿ :-

ದಿನಾಂಕ 26/12/2020 ರಂದು 2000 ಗಂಟೆಗೆ ಫಿರ್ಯಾದಿ ಶ್ರೀಮತಿ. ಸಂಗೀತಾ ಗಂಡ ರಾಮಶೆಟ್ಟಿ ಮಸೂದಿ ವಯ:54 ವರ್ಷ ಜಾತಿ:ಲಿಂಗಾಯತ ಉ:ಮನೆಗೆಲಸ ಸಾ/ಗುರುನಗರ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ  ಸಾರಾಂಶವೆನೆಂದರೆ  ದಿನಾಂಕ 26/12/2020 ರಂದು ಸಾಯಂಕಾಲ 7:15 ಪಿ.ಎಮ್. ಗಂಟೆಯ ಸುಮಾರಿಗೆ ಫಿರ್ಯಾದಿ ರವರು ತಮ್ಮ ಪತಿಯೊಂದಿಗೆ ತಗಾರೆ ಕ್ರಾಸ ಕಡೆಯಿಂದ ಬೀದರ ಬಸ್ ನಿಲ್ದಾಣದ ಕಡೆಗೆ ರೋಡಿನ ಮೇಲೆ ನಡೆದುಕೊಂಡು ಬರುವಾಗ ಎದುರಿನಿಂದ  ಎರಡು ಜನ ಅಪರಿಚಿತ ವ್ಯಕ್ತಿಗಳು ಒಂದು ದ್ವಿಚಕ್ರ ವಾಹಾನದ ಮೇಲೆ ಬಂದು ಕೊರಳಲ್ಲಿದ್ದ 50 ಗ್ರಾಂ ತೂಕದ ಬಂಗಾರದ ಗಂಠನ ಸರ ಅ.ಕಿ. 2,00,000  ನೇದನ್ನು ಕಿತ್ತಿಕೊಂಡು ಮೊಟರ ಸೈಕಲನ್ನು ಓಡಿಸಿಕೊಂಡು  ತಗಾರೆ ಕ್ರಾಸ ಕಡೆಗೆ ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 147/2020 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್.ವಿ ಕಾಯ್ದೆ :-

ದಿನಾಂಕ: 26/12/2020 ರಂದು ಫಿರ್ಯಾದಿ ಶ್ರೀಮತಿ ಸಾಬೇರಾಬೇಗಂ ಗಂಡ ಮೃತ ಸೈಯದ ಅಬ್ದುಲ್ ಗಫಾರ ವಯ 45 ವರ್ಷ ಉದ್ಯೋಗ: ಮನೆ ಕೆಲಸ ಸಾ: ಕೋಳಾರ (ಕೆ) ರವರು ನೀಡಿದ ದೂರಿನ ಸಾರಾಂಶವೇನೆಂದರೆ,   ಫಿರ್ಯಾದಿ ಗಂಡನಾದ ಸೈಯದ ಅಬ್ದುಲ್ ಗಫಾರ ವಯ 53 ವರ್ಷ ರವರು ಬೀದರನ ಬಿ.ವಿ.ಬಿ ಕಾಲೇಜಿನಲ್ಲಿ ಅಟೆಂಡರ ಅಂತ ಕೆಲಸ ಮಾಡಿಕೊಂಡಿದ್ದರು. ಗಂಡನ ಹತ್ತಿರ ಒಂದು ಟಿ.ವಿ.ಎಸ್ ಮೋಫಾಯಿಸ್ ಮೋಟಾರ ಸೈಕಲ್ ಇದ್ದು, ಅದರ ನಂ. ಕೆಎ-38/ಡಬ್ಲ್ಯೂ-0734 ಇರುತ್ತದೆ. ಸದರಿ ಮೋಟಾರ ಸೈಕಲ್ ಮೇಲೆ ದಿನಾಲು ಭೂಮಾರೆಡ್ಡಿ ಕಾಲೇಜಿಗೆ ಬೆಳಗೆ ಡ್ಯೂಟಿಗೆ ಹೋಗಿ ಸಾಯಂಕಾಲ ಮರಳಿ ಮನೆಗೆ ಬರುತ್ತಿದ್ದರು. ಹೀಗಿರುವಲ್ಲಿ ದಿನಾಂಕ 26/12/2020 ರಂದು ರಜೆಯಿದ್ದ ಪ್ರಯುಕ್ತ ಮನೆಯಲ್ಲಿ ಉಳಿದುಕೊಂಡಿದ್ದು, ಸಾಯಂಕಾಲ 7.00 ಪಿ.ಎಂ ಗಂಟೆ ಸುಮಾರಿಗೆ ರೆಷ್ಮೆ ಇಲಾಖೆಯ ಎದುರುಗಡೆ ಇರುವ ಮೋಟಾರ ಸೈಕಲ್ಗೆ ಪೆಟ್ರೋಲ್ ಹಾಕಿಕೊಂಡು ಬರುತ್ತೇನೆ ಅಂತ ಹೇಳಿ ಮೋಟಾರ ಸೈಕಲ್ ತೆಗೆದುಕೊಂಡಿರುತ್ತಾರೆ. ಮೋಟಾರ ಸೈಕಲ್ ನಂ. ಕೆಎ-38/ಡಬ್ಲ್ಯೂ-0734 ನೇದರ ಮೇಲೆ ಹೋಗುವಾಗ ಬೀದರ ಹುಮನಾಬಾದ ರೋಡಿನ ಮೇಲೆ ರೇಷ್ಮೆ ಇಲಾಖೆ ಕಾರ್ನರ್ ಹತ್ತಿರ ಒಂದು ಕೆ.ಎಸ್.ಆರ್.ಟಿ.ಸಿ ಬಸ್ಸ ಚಾಲಕನು ತನ್ನ ಬಸ್ಸನ್ನು ವೇಗವಾಗಿ ನಡೆಸಿಕೊಂಡು ಬಂದು ಮೋಟಾರ ಸೈಕಲ್ಗೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿ ಗಂಡ ಭಾರಿ ರಕ್ತಗಾಯವಾಗಿ  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಡಿಕ್ಕಿ ಮಾಡಿರುವ ಬಸ್ ನಂ ನಂಬರ ಕೆಎ-32/ಎಫ-2338.  ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 153/2020 ಕಲಂ 78(3) ಕೆಪಿ ಕಾಯ್ದೆ :-

 ದಿನಾಂಕ:26/12/2020 ರಂದು 14:00 ಗಂಟೆಗೆ ಜಿ.ಎಂ.ಪಾಟೀಲ್ ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಖಿಲಾ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಭಾತ್ಮಿಯಂತೆ ಹೋಗಿ ನೋಡಿದಾಗ  ಖಿಲಾ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 16:30 ಗಂಟೆಗೆ ಎಲ್ಲರು ಒಮ್ಮಲೆ ದಾಳಿಮಾಡಿ ಹಿಡಿದ ಇಬ್ಬರು ವ್ಯಕ್ತಿಗಳಿಗೆ ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1] ಬಬ್ಲೂ ತಂದೆ ಖಾಸಿಮ ಖಾನ ಪಠಾಣ ವಯಸ್ಸು// 22 ವರ್ಷ ಜಾತಿ// ಮುಸ್ಲಿಂ ಉ// ಟೇಲರ ಕೆಲಸ ಸಾ// ರಿಕ್ಷಾ ಕಾಲೋನಿ ಬಸವಕಲ್ಯಾಣ ಇತನ ಅಂಗ ಶೋಧನೆ ಮಾಡಲು ಇತನ ಹತ್ತಿರ ನಗದು ಹಣ 2100/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ. 2] ಇಮ್ರಾನ್ ತಂದೆ ಶೇರಖಾನ್ ಪಠಾಣ ವಯಸ್ಸು//25 ವರ್ಷ ಜಾತಿ//ಮುಸ್ಲಿಂ ಉ//ಬಟ್ಟೆ ವ್ಯಾಪಾರ ಸಾ//ಗಾಡವಾನಗಲ್ಲಿ ಬಸವಕಲ್ಯಾಣ ಇತನ ಅಂಗ ಶೋಧನೆ ಮಾಡಲು ಇತನ ಹತ್ತಿರ ನಗದು ಹಣ 2050/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Saturday, December 26, 2020

BIDAR DISTRICT DAILY CRIME UPDATE 26-12-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 26-12-2020

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 108/2020 ಕಲಂ ಮನುಷ್ಯ ಕಾಣೆ :-

ದಿನಾಂಕ 25/12/2020 ರಂದು 1830 ಗಂಟೆಗೆ ಶ್ರೀಮತಿ ಮಲ್ಲಮ್ಮಾ ಗಂಡ ಸಂಜುಕುಮಾರ ಹಲ್ಮಡಗೆ ವಯ 35 ವರ್ಷ ಜ್ಯಾತಿ ಲಿಂಗಾಯತ ಉ// ಮನೆಕೆಲಸ ಸಾ// ಮುರ್ಕಿರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಸಾರಾಂಶವೆಎನಂದರೆ ಫಿರ್ಯದಿಗೆ 16 ವರ್ಷಗಳ ಹಿಂದೆ ಸಂಜುಕುಮಾರ ತಂದೆ ನಾಗನಾಥ ಹಲ್ಮಡಗೆ ವಯ 45 ವರ್ಷ ಜ್ಯಾತಿ  ಲಿಂಗಾಯತ ಉ// ಟೇಲರ ಕೆಲಸ ಸಾ// ಮುರ್ಕಿ ಇವರ ಜೊತೆ ಮದುವೆ ಯಾಗಿದ್ದು ಇವರಿಗೆ ಎರಡು ಹೆಣ್ಣು ಮಕ್ಕಳಿರುತ್ತಾರೆ. 1) ಲಾವಣ್ಯ 15 ವರ್ಷ 2) ಅಕ್ಷತಾ 12 ವರ್ಷ ಅಂತಾ ಇರುತ್ತಾರೆ.   ಹಿಗೀರುವಲ್ಲಿ ದಿನಾಂಕ 23/12/2020 ರಂದು 07-00 ಗಂಟೆಗೆ ಮನೆಯಿಂದ ಟೇಲರ ಕೆಲಸಕ್ಕೆ ಅಂತಾ ಹೊಗಿದ್ದು ರೂಪಾ ಚಾಂಡೇಶ್ವರೆ ಇವಳು   ಮನೆಗೆ ಬಂದು ನಿನ್ನ ಗಂಡ ಕುಡಿದು ಮುಸ್ಲಿಂ ಹೆಣ್ಣು ಮಗಳಿಗೆ ಬೈದಿರುತ್ತಾರೆ, ಅವರಿಗೆ ಸಂಬಾಳಿಸಿ ಇರಲು ಹೇಳು ಅಂತಾ ಅಂದು ಹೊಗಿದ್ದು ನಂತರ  ಮುಸ್ಲಿಂ ಹೆಣ್ಣು ಮಗಳು   ಮನೆಗೆ ದಿನಾಂಕ 23/12/2020 ರಂದು 08-30 ಗಂಟೆಯ ಸುಮಾರಿಗೆ  ಬಂದು ಮುಸ್ಲಿಂ ಹೆಣ್ಣು ಮಗಳ ಜೊತೆ ಅಂದರೆ ಮುಸ್ಲಿಂ ಹೆಣ್ಣು ಮಗಳ ಮಗಳ ಜೊತೆ  ಜಗಳವಾಡಿರುತ್ತಾರೆ ಅವರಿಗೆ ಸರಿಯಾಗಿ ಇರಲು ಹೇಳಿರಿ ಅಂತಾ ಅಂದಾಗ ಫಿರ್ಯಾದಿಯು ಗಂಡನಾದ ಸಂಜುಕುಮಾರ  ಹಲ್ಮಡಗೆ ಇವರಿಗೆ ಫೋನ ನಂ 8050201323 ಗೆ ಕಾಲ ಮಾಡಿದ್ದಾಗ ಫೋನ ಸ್ವಿಚ್ ಆಫ್ ಅಂತಾ ಬಂದಿದ್ದು ಇರುತ್ತದೆ. ಆಗಿನಿಂದ ಇಲ್ಲಿಯವರೆಗೆ  ಗಂಡನ ಫೋನ ಸ್ವಿಚ ಆಫ್ ಆಗಿರುತ್ತದೆ. ಅಲ್ಲದೆ ದಿನಾಂಕ 20/12/2020 ರಂದು  ಮಾವ ನಾಗನಾಥ ಇವರು  ಗಂಡನ ಜೊತೆ ನೀನು ಕುಡಿದು ಅಲ್ಲಿ ಇಲ್ಲಿ ಮಾತನಾಡಬೇಡ ನಮ್ಮ ಓಟುಗಳು ಕೆಡುತ್ತವೆ ಅಂತಾ ಹೇಳಿದ್ದು ಇರುತ್ತದೆ.    ಕಾರಣ ಫಿರ್ಯಾದಿ ಗಂಡ ಸಂಜುಕುಮಾರ ತಂದೆ ನಾಗನಾಥ ಹಲ್ಮಡಗೆ ಇವರು ಕಾಣೆಯಾಗಿರುತ್ತಾರೆ. ಅವರ ವಯಸ್ಸು 45 ವರ್ಷ ಇರುತ್ತದೆ. ಅವರು ಹೊಗಿದ್ದಾಗ ನೀಲಿ ಬಣ್ಣದ ಜೀನ್ಸ ಪ್ಯಾಂಟ, ಫಿಕಾ ನೀಲಿ ಬಣ್ಣದ ಫುಲ್ ಶೆರ್ಟ, ಬಿಳಿ ಬಣ್ಣದ ಹಾಫ್ಬನಿಯಾನ, ಮಾಚೋ ಕಂಪನಿಯ ಅಂಡರವಿಯರ್  ಹಾಕಿದ್ದು ಇರುತ್ತದೆ. 6 ಫಿಟ್ ಎತ್ತರ,  ಸಾಧಾರಣ ಮೈಕಟ್ಟು  ಗೋದಿ ಬಣ್ಣ ಉಳ್ಳವರಾಗಿರುತ್ತಾರೆ. ಈ ಬಗ್ಗೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ  ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್.ಸಂಖ್ಯೆ 31/2020 ಕಲಂ 174 ಸಿಆರ್.ಪಿ.ಸಿ :-

ದಿನಾಂಕ: 25/12/2020 ರಂದು 1800 ಗಂಟೆಗೆ ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀ ಖಧಿರೊದ್ದಿನ ಎ.ಎಸ್.ಐ ಧನ್ನೂರ ಪೊಲೀಸ ಠಾಣೆ ರವರಿಗೆ ಫಿರ್ಯಾದಿ ಶ್ರೀಮತಿ ಕವಿತಾ ಗಂಡ ಶ್ರೀಪತಿ ಸಂತಪೂರ ವಯ: 40 ವರ್ಷ ಜಾತಿ: ಎಸ್.ಸಿ  ಉ: ಕೂಲಿ ಕೆಲಸ ಸಾ: ಅಮದಾಬಾದ ಇವರು ನೀಡಿದ ದೂರು ಅರ್ಜಿ ಹಾಜರ ಪಡಿಸಿದ್ದು ಅದರ ಸಾರಾಂಶವೇನೆಂದರೆ ಫಿರ್ಯಾದಿಗೆ 1] ಸುನಿಲ್, 2] ಅನಿಲ್, 3] ಸೋನಿ ಅಂತ ಮೂರು ಜನ ಮಕ್ಕಳಿದ್ದು ಇವರ ಗಂಡ ಶ್ರೀಪತಿಯವರು ಅಂದಾಜು 7 ವರ್ಷಗಳ ಹಿಂದೆ ಮೃತ ಪಟ್ಟಿದ್ದು  ಫಿರ್ಯಾದಿಯು ಕೂಲಿ ಕೆಲಸ ಮಾಡಿಕೊಂಡಿದ್ದು  ಇವರ ಮಗ ಸುನಿಲ್ ಇವನು ಒಂಬತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ನಂತರ ಕೂಲಿ ಕೆಲಸ ಮಾಡಿಕೊಂಡು, ಇರುತ್ತಾನೆ. ನನ್ನ ಮಗ ಸುನಿಲ್ ಈತನಿಗೆ ಅಂದಾಜು 5-6 ತಿಂಗಳಿಂದ ಅತಿಯಾಗಿ ಹೊಟ್ಟೆಬೇನೆ ಪ್ರಾರಂಭವಾಗಿದ್ದು ಆತನಿಗೆ ಖಾಸಗಿ ಇಲಾಜು ಮಾಡಿಸಿದರು ಸಹ ಕಡಿಮೆಯಾಗಲಿಲ್ಲ. ಹಾಗಾಗಿ ಅವನಿಗೆ ತಾಳಲಾರದಷ್ಟು ಬೇನೆ ಆಗುತ್ತಾ ಇರುತ್ತಿತ್ತು.  ಹೀಗಿರುವಲ್ಲಿ ದಿನಾಂಕ: 25/12/2020 ರಂದು ಮುಂಜಾನೆ ಸುನೀಲ್ ಇವನು ಕೂಲಿ ಕೆಲಸಕ್ಕೆ ಹೋಗಿದ್ದು ಆತನು ಅಂದಾಜು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮನೆಗೆ ಬಂದು ನನಗೆ ತಿಳಿಸಿದ್ದೇನೆಂದರೆ ನನಗೆ ಹೊಟ್ಟೆಬೇನೆ ತಾಳಲಾರದೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು  ವಿಷಕಾರಿ ಕೀಟನಾಶಕ ಔಷಧಿವನ್ನು ಅರ್ಧಗಂಟೆಯ ಹಿಂದೆ ಸೇರವಿಸಿದ್ದೇನೆ ಎಂದು ತಿಳಿಸಿದ ಕೂಡಲೇ ಈತನಿಗೆ ಚಿಕಿತ್ಸೆ ಕುರಿತು ಅಂಬುಲೆನ್ಸನಲ್ಲಿ ಬೀದರ್ ಸರ್ಕಾರಿ ಆಸ್ಪತ್ರೆಗೆ 3 ಗಂಟೆಗೆ ತಂದು ಸೇರಿಕೆ ಮಾಡಿದ್ದು ಆತನಿಗೆ ಚಿಕಿತ್ಸೆ ಫಲಕಾರಿಯಾಗದೇ ಮದ್ಯಾಹ್ನ 3:15 ಗಂಟೆಗೆ ಚಿಕಿತ್ಸೆಯಲ್ಲಿ ಮೃತಪಟ್ಟಿರುತ್ತಾನೆ ಮಗ ಸುನಿಲ್ ವಯ 19 ವರ್ಷ ಈತನು ಹೊಟ್ಟೆಬೇನೆ ತಾಳಲಾರದೆ ವಿಷ ಸೇವಿಸಿದ್ದು ಚಿಕಿತ್ಸೆಯಲ್ಲಿ ಮೃತಪಟ್ಟಿದ್ದು ಆತನು ಹೊಟ್ಟೆಬೇನೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತನು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

Thursday, December 24, 2020

BIDAR DISTRICT DAILY CRIME UPDATE 24-12-2020

  

                                                      ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 24-12-2020

ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2020 ಕಲಂ 498(ಎ), 302 ಐಪಿಸಿ :-

ದಿನಾಂಕ 23-12-2020 ರಂದು 1130 ಗಂಟೆಗೆ ಫಿರ್ಯಾದಿ ಶ್ರೀಮತಿ ಸಾವಿತ್ರಿ ಗಂಡ ವಿಠ್ಠಲ್ ವಯ 45 ವರ್ಷ ಉ: ಮನೆ ಕೆಲಸ ಜಾ: ಕೊಳಿ ಸಾ: ದೇಗಲವಾಡಿ ತಾ: ನಾರಾಯಣಖೇಡ ಜಿ: ಸಂಗಾರಡ್ಡಿ (ಟಿಎಸ್.) ರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಸಾರಾಂಶವೆನೆಂದರೆ ಇವರ ಹಿರಿಯ ಮಗಳಾದ ಪದ್ಮಾವತಿ ಇವಳಿಗೆ ಕೃಷ್ಣಾ ತಂದೆ ದಿ: ಚಂದರರಾವ ಸಾ: ಹಣೆಗಾಂವ ತಾ: ದೆಗಲೂರ ಇತನಿಗೆ ಕೊಟ್ಟು 4 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತಾರೆ. ಅವಳಿಗೆ ಚಂದ್ರೀಕಾ ಅಂತ ಎರಡು ವರ್ಷದ ಹೆಣ್ಣು ಮಗು ಇರುತ್ತದೆ.  ಅಳಿಯ ಕೃಷ್ಣಾ ಇತನು ಸದಾಶಿವಪೇಟದಲ್ಲಿ ಲೊಕಲ್ ಆಟೋ ಪೈನಾನ್ಸ್ ವ್ಯಾಪಾರ ಮಾಡಿಕೊಂಡು ಇರುತ್ತಾನೆ. ಅಳಿಯನಿಗೆ ಬೇರೆ ಹೆಣ್ಣುಮಕ್ಕಳ ಸಹವಾಸ ಇದ್ದು, ಮದುವೆಯಾದ ಸ್ವಲ್ಪ ತಿಂಗಳ ನಂತರ ಆತನು ಫೀರ್ಯಾದಿ ಮಗಳ ಜೊತೆಯಲ್ಲಿ ಯಾವಾಗಲು ಜಗಳ ತೆಗೆಯುವದು ಮಾಡುತ್ತಾ ಬಂದು ನೀನು ಸರಿಯಾಗಿಲ್ಲ, ನನಗೆ ಇಷ್ಟ ಇಲ್ಲ ನೀನು ಮನೆಯಿಂದ ಹೋಗು ಅಂತ ಜಗಳ ಮಾಡುತ್ತಾ ಕೈಯಿಂದ ಹೊಡೆ ಬಡೆ ಮಾಡುತ್ತಾ ಬಂದು ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ.  ನಂತರ ಅವನಿಗೆ ತಿಳುವಳಿಕೆ ಹೇಳಿದ ನಂತರ ಇಂದಿಗೆ 15-20 ದಿವಸಗಳ ಹಿಂದೆ ನನ್ನ ಮಗಳಿಗೆ ಚೆನ್ನಾಗಿ ನೋಡಿಕೊಳ್ಳುತ್ತೆನೆಂದು ಅವಳಿಗೆ ನಮ್ಮ ಮನೆಯಿಂದ ಕರೆದುಕೊಂಡು ಹೋಗಿರುತ್ತಾನೆ. ನಂತರ ನಮ್ಮ ಮಗಳಿಗೆ ನಾವು ವಿಚಾರಿಸಿದಾಗ, ಆತನು ಏನು ಸುದರಾಯಿಸಿರುವದಿಲ್ಲ ಮೊದಲಿನ ಹಾಗೆ ಇರುತ್ತಿದ್ದಾನೆ ಅಂತ ಹೇಳಿರುತ್ತಾಳೆ.  ದಿನಾಂಕ 21-12-2020 ರಂದು  ಅಳಿಯ ಕೃಷ್ಣಾ ಹಾಗು ನನ್ನ ಮಗಳು ಮತ್ತು ಮೊಮ್ಮಗಳಿಗೆ ಜೊತೆಯಲ್ಲಿ ಕರೆದುಕೊಂಡು ಫಿರ್ಯಾದಿ ಮನೆಯಲ್ಲಿ ಉಳಿದುಕೊಂಡಿರುತ್ತಾರೆ. ಅವಳು  ಮನೆಗೆ ಬಂದಾಗ, ನಾನು ಅವಳಿಗೆ ಹೇಗೆ ಇದ್ದಿ ಅಂತ ವಿಚಾರಿಸಿದಾಗ, ನನಗೆ ದಿನಾಲು ಅಲ್ಲಿ ಹೊಡೆ ಬಡೆ ಮಾಡುತ್ತಾ, ಹೊಲಸು ಶಬ್ದಗಳಿಂದ ರಂಡಿ ನೀನು ಇದ್ದರೆ ಇರು ಇಲ್ಲವಾದರೆ ಹೋಗು ಅಂತ ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾನೆ, ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಅಂತ ಅಳುತ್ತಾ ನನ್ನ ಮತ್ತು ನನ್ನ ಗಂಡನ ಮುಂದೆ ಹೇಳಿರುತ್ತಾಳೆ. ಆ ದಿವಸ ರಾತ್ರಿ ಉಳಿದು ದಿನಾಂಕ 22-12-2020 ರಂದು ರಾತ್ರಿ 7-00 ಗಂಟೆಗೆ ನಾವು ಸದಾಶಿವಪೇಟಕ್ಕೆ ಹೋಗುತ್ತೇವೆ ಅಂತ ಹೇಳಿದಾಗ. ಬೇಡ ಕತ್ತಲಾಗಿದೆ ಇಲ್ಲೆ ಉಳಿಯಿರಿ ನಾಳೆ ಹೋಗಿರಿ ಅಂತ ಹೇಳಿರುತ್ತೇವೆ. ಆಗ ಅಳಿಯ ಚಿಂತಾಕಿಯಲ್ಲಿ ನನ್ನ ಅಣ್ಣನಿದ್ದಾನೆ ಆತನಿಗೆ ಭೆಟ್ಟಿ ಮಾಡಿ ಹೋಗುತ್ತೇವೆ ಅಂತ ಹೇಳಿ ಹೋಗಿರುತ್ತಾರೆ. ನಂತರ ರಾತ್ರಿ 9-30 ಗಂಟೆಗೆ  ಬೆನಕನಳ್ಳಿ ದಾಟಿದ ನಂತರ ಕಾರ ಎಕ್ಸಿಡೆಂಟ್ ಆಗಿದೆ ಪದ್ಮಾವತಿ ಇವಳು ಸಿರಿಯಸ್ ಇದ್ದು, ಅವಳಿಗೆ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇನೆ  ತಿಳಿಸಿರುತ್ತಾರೆ. ತಕ್ಷಣ ಬೀದರ ಸಕರ್ಾರಿ ಆಸ್ಪತ್ರೆಗೆ ರಾತ್ರಿ 1100 ಗಂಟೆಯ ಸುಮಾರಿಗೆ ನೋಡಲಾಗಿ, ಅವಳ ಕುತ್ತಿಗೆಯ ಸುತ್ತಲು ಕಂದು ಗಟ್ಟಿದ ರಕ್ತಗಾಯ ಆಗಿದ್ದು ಇರುತ್ತದೆ. ನಂತರ ನಾವೆಲ್ಲರೂ ಸ್ಥಳಕ್ಕೆ ಹೋಗಿ ಕಾರ ಸಹ ನೊಡಿ ಬಂದಿರುತ್ತೇವೆ. ನನ್ನ ಅಳಿಯ ಕಾರನಲ್ಲಿ ಕರೆದುಕೊಂಡು ಬಂದು ಕೈಯಿಂದ ಕೊರಳಿಗೆ(ಕುತ್ತಿಗೆ) ಹಿಚುಕಿ (ಒತ್ತಿ) ಕೊಲೆ ಮಾಡಿರುತ್ತಾನೆ. ಆತನು ಕೊಲೆ ಮಾಡಿದ ಬಗ್ಗೆ ಯಾರಿಗೂ ಸಂಶಯ ಬರಬಾರದೆಂದು ತನ್ನ ಕಾರನ್ನು ರೊಡಿಗೆ ಪಿಕಾಕ್ ಧಾಬಾದ ಮುಂದೆಹೊಸದಾಗಿಕಟ್ಟಿದ  ಅಂಗಡಿಯ ಎಂಗಲಗೆ ಉದ್ದೇಶ ಪೂರ್ವಕವಾಗಿ ಹೊಡೆದು ಎಕ್ಸಿಡೆಂಟ್ ಮಾಡಿದ ಹಾಗೆ ನಿಲ್ಲಿಸಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 84/2020 ಕಲಂ 279, 304 (ಎ) ಐಪಿಸಿ ಜೋತೆ 187 ಐ ಎಮ್ ವಿ ಆಕ್ಟ್ :-

ದಿನಾಂಕ 23/12/2020 ರಂದು 2030 ಗಂಟೆಗೆ ಶ್ರೀಮತಿ ಫರಿದಾ ನಿಬತ ಗಂಡ ಮಹಮದ್ ಫಯಾಜೋದ್ದಿನ ಸಾ|| ಓಲ್ಡ್  ಮೈಲೂರು ಬೀದರ ರವರು   ಠಾಣೆಗೆ ಹಾಜರಾಗಿ ನೀಡದ ದೂರಿನ ಸಾರಾಂಶವೆನೆಂದರೆ  ಅವರು ತಮ್ಮ ದೂರಿನಲ್ಲಿ ನನ್ನ ಗಂಡ ಫಯಾಜೋದ್ದಿನ್ ರವರು ಸುಮಾರು 20 ವರ್ಷಗಳಿಂದ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಫೀಲ್ಡ್ ಮ್ಯಾನ ಅಂತಾ ಕೆಲಸ ಮಾಡಿಕೊಂಡು ಇದ್ದರು.   ದಿನಾಂಕ 23/12/2020 ರಂದು ಮುಂಜಾನೆ 8:00 ಗಂಟೆಯ ಸುಮಾರಿಗೆ ನಾಳೆ ನಾರಂಜಾ ಸಕ್ಕರೆ ಕಾರ್ಖಾನೆಯಲ್ಲಿ ಜಿಬಿ ಮೀಟಿಂಗ್ ಇದ್ದ ಕಾರಣ ನಾರಂಜಾ ಸಕ್ಕರೆ ಕಾರ್ಖಾನೆಗೆ ತಮ್ಮ ಹೊಂಡ ಸಿಬಿ ಸೈನ್ ಮೋಟಾರ ಸೈಕಲ್ ನಂ ಕೆಎ-38/ಕ್ಯೂ-2776 ನೇದರ ಮೇಲೆ ಮೈಲೂರದ   ಮನೆಯಿಂದ ನಾರಂಜಾ ಸಕ್ಕರೆ ಕಾರ್ಖಾನೆಗೆ ಹೊಗಿರುತ್ತಾರೆ.      ದಿನಾಂಕ 23/12/2020 ರಂದು ರಾತ್ರಿ 7:30 ಗಂಟೆಯ ಸುಮಾರಿಗೆ ನಾರಂಜಾ ಸಕ್ಕರೆ ಕಾರ್ಖಾನೆಯಲ್ಲಿ ಫಿರ್ಯಾದಿ ಗಂಡನೊಂದಿಗೆ ಫಿಲ್ಡ್ ಮ್ಯಾನ್ ಅಂತಾ ಕೆಲಸ ಮಾಡುವ  ಪರಿಚಯಸ್ಥ ರಾದ ಗೌಸೊದ್ದಿನ್ ತಂದೆ ನವಾಬೊದ್ದಿನ್ ಅಮಲಾಪೂರ ಗ್ರಾಮ ರವರು  ಫೋನ್ ಮಾಡಿ ನಿಮ್ಮ ಗಂಡ ಮಹಮದ್ ಫಯಾಜೋದ್ದಿನ್ ರವರು ಎನ್ ಎಸ್ ಎಸ್ ಕೆ ದದ್ದಾಪೂರ ರೋಡಿನ ಮೇಳೆ ವಾಹನ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ ತಕ್ಷಣ ಘಟನೆ ಸ್ಥಳಕ್ಕೆ ಹೋಗಿ ನೋಡಲು ಅವರ ಹಣೆಯ ಮೇಲೆ ಮತ್ತು ತಲೆಗೆ ಭಾರಿ ರಕ್ತಗಾಯ, ಹಾಗು ಬಲಕಾಲಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.    ಸದರಿ ಘಟನೆ ದಿನಾಂಕ  23/12/2020 ರಂಧು ರಾತ್ರಿ 7:00 ಗಂಟೆಯ ಸುಮಾರಿಗೆ ಹೊಂಡಾ ಸಿಬಿ ಸೈನ್ ಮೋಟಾರ ಸೈಕಲ್ ನಂ ಕೆಎ-38/ಕ್ಯೂ-2776 ನೇದರ ಮೇಲೆ ಕಾರ್ಖಾನೆಯಿಂದ ದದ್ದಾಪೂರ ಮಾರ್ಗವಾಗಿ ಬೀದರಕ್ಕೆ ಬರುತ್ತಿರುವಾಗ ದದ್ದಾಪೂರ ಕಡೆ ಯಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಹಾಗು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಎನ್ ಎಸ್ ಎಸ್ ಕೆ ದದ್ದಾಪೂರ ರೋಡಿನ ದದ್ದಾಪೂರ ಗ್ರಾಮದ ನರಸಿಂಗರಾವ ಬಿರಾದಾರ ರವರ ಹೊಲದ ಹತ್ತಿರ ಮಹಮದ್ ಫಿಯಾಜೋದ್ದಿನ್ ರವರ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿದ್ದರಿಂದ ಅಪಘಾತ ವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 85/2020 ಕಲಂ 457, 380 ಐಪಿಸಿ :-

ದಿನಾಂಕ 23-12-2020 ರಂದು 0830 ಗಂಟೆಗೆ ಫಿರ್ಯಾದಿ ಶ್ರೀ ಖುಷಾಲ ತಂದೆ ಹಾವಣ್ಣಾ ಕೋರೆ ಸಾ: ಕೌಠಾ(ಬಿ) ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 22-12-2020 ರಂದು ಫಿರ್ಯಾದಿ ಮಗಳು ಪ್ರೀಯಾ ಇವಳಿಗೆ ಆರಾಮ ಇಲ್ಲದ ಕಾರಣ ಹೆಂಡತಿ ಹಾಗೂ ಮಕ್ಕಳಿಬ್ಬರೂ ಬೀದರ ಆಸ್ಪತ್ರೆಗೆ ಹೋಗಿ ಅಲ್ಲಿ ಬೀದರನಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿರುತ್ತಾರೆ. ರಾತ್ರಿ 2100 ಗಂಟೆಗೆ  ಮನೆಯಲ್ಲಿ ಊಟ ಮಾಡಿ ಮನೆಯ ಹೊರಗಿನಬಾಗಿಲು ಮುಚ್ಚಿ ಕೀಲಿ ಹಾಕಿಕೊಂಡು   ಅಣ್ಣಾ ಸಂಗಪ್ಪಾ ರವರ ಮನೆಗೆ ಹೋಗಿ ಅಲ್ಲಿಯ ಮಲಗಿಕೊಂಡಿದ್ದು ದಿನಾಂಕ 23-12-2020 ರಂದು ನಸುಕಿನ ಜಾವ 5:00 ಗಂಟೆಗೆ ಎದ್ದು ಮನೆಗೆ ಹೋಗಿದ್ದಾಗ ಮನೆಯ ಹೊರ ಬಾಗಿಲಿನ ಕಿಲಿ ಮುರಿದಿದ್ದು ತಟ್ಟಿಗಳು ಮುಚ್ಚಿದ್ದು ಇರುತ್ತವೆ ಆಗ ನಾನು ತಟ್ಟಿಗಳು ತೆರೆದು ಒಳಗೆ ಹೋಗಿ ನೊಡಿದಾಗ ಎದುರಿನ ಮನೆಯ ಬಾಗಿಲು ತಟ್ಟಿ ತೆರೆದಿದ್ದು ಅದರ ಒಳಗೆ ಹೋಗಿ ನೋಡಲು ಅದರಲ್ಲಿದ್ದ ಅಲ್ಮಾರಿಯ ತಟ್ಟಿಗಳು ಒಡೆದು ತೆರೆದಿದ್ದ ಸ್ಥೀತಿಯಲ್ಲಿದ್ದು ಅಲ್ಮಾರೆಯಲ್ಲಿದ್ದ ಬಟ್ಟೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ ಅಲ್ಮಾರಿಯಲ್ಲಿನ ಲಾಕರ ತೆರೆದಿದ್ದುರುತ್ತದೆ. ಲಾಕರದಲ್ಲಿ ಇಟ್ಟಿದ್ದ 1] 4 ತೊಲೆಯ ಎರಡೂ ಬಂಗಾರದ ಬಳೆ ಅಕಿ 1,20,000/-ರೂ ನೇದು 2] 4 ತೊಲೆ ಬಂಗಾರದ ಕೊರಳಿನಲ್ಲಿ ಹಾಕುವ ಸರ ಅಕಿ 1,20,000/-ರೂ. 3] 1 ತೊಲೆ ಬಂಗಾರದ ನೆಕಲೇಸ್ ಅಕಿ 20,000/-ರೂ. ನೇದು 4] 3 ಗ್ರಾಂ ನ ಎರಡೂ ಕಿವಿ ಬಂಗಾರದ  ಝುಮಕಾ  ಅಕಿ 9,000/-ರೂ. 5] 5 ಗ್ರಾಂ ಉಳ್ಳ ಬಂಗಾರದ ಎರಡೂ ಉಂಗರುಗಳು ಅಕಿ 25,000/-ರೂ ನೇದು 6] 5 ಗ್ರಾಂ ಬಂಗಾರದ ಚೈನ ಸರ ಅಕಿ 10,000/-ರೂ. ಮತ್ತು 7] ನಗದು ಹಣ 25,000/-ರೂ ನೇದವು ಇದ್ದಿರುವುದಿಲ್ಲಾ   ಯಾರೋ ಅಪರಿಚಿತ ಕಳ್ಳರು ದಿನಾಂಕ 22-12-2020 ರಂದು 9:00 ಪಿಎಂ ಗಂಟೆಯಿಂದ ದಿನಾಂಕ 23-12-2020 ರಂದು 5:00 ಎ ಎಂ ಗಂಟೆ ಮಧ್ಯಾವಧಿಯಲ್ಲಿ ನಮ್ಮ ಮನೆಯ ಬೀಗಮುರಿದು ನಮ್ಮ ಮನೆಯಲ್ಲಿ ನುಗ್ಗಿ ಮನೆಯ ಅಲ್ಮಾರಿಯಲ್ಲಿದ್ದ 3,04,000/-ರೂ ಮೌಲ್ಯದ ಬಂಗಾರದ ಒಡೆಗಳು ಹಾಗೂ ನಗದು ಹಣ 25,000/-ರೂ. ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.