Police Bhavan Kalaburagi

Police Bhavan Kalaburagi

Tuesday, February 9, 2021

BIDAR DISTRICT DAILY CRIME UPDATE 09-02-2021

 ದಿನಂಪ್ರತಿ ಅಪರಾಧಗಳ ಮಾಹಿತ ದಿನಾಂಕ 09-02-2021

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 153, 504, 505(1ಬಿ), 506 ಐಪಿಸಿ :-

ದಿನಾಂಕ 06-02-2021 ರಂದು 1000 ಗಂಟೆಗೆ ಫಿರ್ಯಾದಿ ಘಾಳೆಪ್ಪಾ ತಂದೆ ಚೆನ್ನಮಲ್ಲಪ್ಪ ಸಾ: ಚಟನಳ್ಳಿ, ತಾ: & ಜಿ: ಬೀದರ ರವರು ತಮ್ಮ ಮನೆಯಲ್ಲಿ ತನ್ನ ಮೋಬೈಲ ನಲ್ಲಿ ತನ್ನ ಫೇಸಬುಕ್ ಅಕೌಂಟ್ ನೋಡುತ್ತಿರುವಾಗ ರಾಮಶೆಟ್ಟಿ ಬಿರಾದಾರ ಅನ್ನುವ ವ್ಯಕ್ತಿ ಫಿರ್ಯಾದಿಯವರ ಫೇಸಬುಕ್ ಗೆಳೆಯರಾಗಿದ್ದು ಅವರು ಒಂದು ಪೋಸ್ಟ ಶೇರ ಮಾಡಿದ್ದು ಅದರಲ್ಲಿ “PUBLIC TV” Facebook account ನಲ್ಲಿ ಯಡಿಯೂರಪ್ಪ ನವರ ಕುರಿತಾಗಿ “ಮೋದಿ, ಅಮಿತ ಶಾ, ರಾಜ್ಯದ ಜನತೆ ಆಶಿರ್ವಾದ ಇರುವರೆಗೆ ಸಿ.ಎಮ್ ಸ್ಥಾನದಿಂದ ಕೆಳಗಿಳಿಸಲು ಸಾಧ್ಯಾವಿಲ್ಲ” ಎಂಬ News ಪೊಸ್ಟ್ ಗೆ https;//www.facebook.com/basavaraj.nagaral.3990 ಖಾತೆ ಹೊಂದಿರುವ ಆರೋಪಿ ಬಸವರಾಜ ತಂದೆ ಈರಣ್ಣಾ ನಾಗರಾಳ ಸಾ: ಹಗರಟಗಿ, ತಾ: ಹುಣಸಗಿ, ಜಿ: ಯಾದಗೀರ ಈತನು ತನ್ನ ಫೇಸಬುಕ್ ಖಾತೆಯಿಂದ “ವೋಟು ಕೇಳುವಾಗ ಶಾ, ಮೋದಿ ಬರಲಿಲ್ಲಾ ಅಂತ ಅವಾಚ್ಯವಾಗಿ ಬೈದು ನೀನು 2ಎ ಮಿಸಲಾತಿ ಕೊಡದಿದ್ದರೆ ರಾಜಿನಾಮೆ ಕೊಡು ಇಲ್ಲವಾದರೆ 20 ನೇ ತಾರೀಖು ನಿನ್ನ ಸಾವು ಖಚಿತಾ ಅಂತಾ ಕಮೆಂಟ್ ಮಾಡಿದ್ದು ಇದನ್ನು ಫೇಸಬುಕ್ ನಲ್ಲಿ ನೋಡಿದ ಜಗದೀಶ ಜಗದೀಶ ಎನ್ನುವ ಫೇಸಬುಕ್ ಖಾತೆದಾರರು ಬಿಎಸ್ ವೈ ಫ್ಯಾನ್ಸ್ ಫೇಸ್ಬುಕ್ ಖಾತೆಗೆ ಹಾಕಿದ್ದು ಅದನ್ನು ಗೆಳೆಯ ರಾಮಶೆಟ್ಟಿ ಬಿರಾದಾರ ಪುನಃ ಫೇಸಬುಕ್ ಖಾತೆಯಲ್ಲಿ ಹಂಚಿಕೊಂಡಿರುತ್ತಾರೆ, ಆದ್ದರಿಂದ ಹಗರಟಗಿ ನಿವಾಸಿ ಬಸವರಾಜ ತಂದೆ ಈರಣ್ಣಾ ನಾಗರಾಳ ವಯ: 27 ವರ್ಷ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಕೋರಿದೆ ಅಂತಾ ಫಿರ್ಯಾದಿಯವರ ದೂರು ಅರ್ಜಿ ಸಾರಾಂಶದ ಮೇರೆಗೆ ದಿನಾಂಖ 08-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೆಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 16/2021, ಕಲಂ. 279, 337, 338, 304 (ಎ) ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-

ದಿನಾಂಕ 08-02-2021 ರಂದು ಫಿರ್ಯಾದಿ ಕಲಾವತಿ ಗಂಡ ಅರ್ಜುನ ಕಾಂಬಳೆ ವಯ: 55 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಗೊಗ್ಗಾ, ತಾ: ಬಸವಕಲ್ಯಾಣ ರವರ ಮಗಳಾದ ಶ್ರೀದೇವಿ ಇವಳಿಗೆ ಆರಾಮ ಇಲ್ಲದ ಕಾರಣ ಚಿಟ್ಟಗುಪ್ಪಾದಲ್ಲಿ ಖಾಸಗಿ ಆಸ್ಪತ್ರೆಗೆ ತೋರಿಸಲು ಫಿರ್ಯಾದಿಯು ತನ್ನ ತಂಗಿ ಮಹಾದೇವಿ ಇಬ್ಬರು ಮನ್ನಾಎಖೇಳ್ಳಿಯಿಂದ ಚಿಟ್ಟಗುಪ್ಪಾಗೆ ಹೋಗಿ ತನ್ನ ಮಗಳಿಗೆ ಆಸ್ಪತ್ರೆಯಲ್ಲಿ ತೊರಿಸಿಕೊಂಡು ಮೂರು ಜನರು ಚಿಟ್ಟಗುಪ್ಪದಿಂದ ಪ್ರಯಾಣಿಕರನ್ನು ಸಾಗಿಸುವ ಆಟೊ ನಂ. ಕೆಎ-32/ಬಿ-9801 ನೇದರಲ್ಲಿ ಪ್ರಯಾಣಿಕರ ಜೊತೆ ಕುಳಿತುಕೊಂಡು ಚಿಟ್ಟಗುಪ್ಪದಿಂದ ಶಮತಾಬಾದ ಮಾರ್ಗಾವಾಗಿ ಬರುತ್ತಿರುವಾಗ ಶಮತಾಬಾದ ಗ್ರಾಮದ ಹತ್ತಿರ ಹಂಪ್ಸ ಹತ್ತಿರ ಸದರಿ ಆಟೋ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸುತ್ತಾ ಬಂದು ತನ್ನ ವಾಹನ ರೋಡಿನ ಮೇಲೆ ಪಲ್ಟಿ ಮಾಡಿದ್ದು ಇರುತ್ತದೆ, ಸದರಿ ಆಟೊ ಪಲ್ಟಿಯಿಂದ ಫಿರ್ಯಾದಿಯ ತಂಗಿಯ ತಲೆಯ ಹಿಂದೆ ಒಡೆದು ಭಾರಿ ರಕ್ತಗಾಯ, ಎಡ ಭಕಾಳಿಗೆ ಭಾರಿ ರಕ್ತಗಾಯ ಮತ್ತು ಭಾರಿ ಗುಪ್ತಗಾಯ, ಮುಖದ ಬಲಗಡೆ ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಹಾಗೂ ಫಿರ್ಯಾದಿಯ ತಲೆಯ ಹಿಂದೆ ಗುಪ್ತಗಾಯ, ಬೆನ್ನಿಗೆ ಗುಪ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಯವರ ಜೋತೆ ಆಟೋದಲ್ಲಿ ಕುಳಿತ ಮಗಳು ಶ್ರೀದೇವಿ ಗಂಡ ರಾಮಚಂದ್ರ ವಗ್ಗೆ ವಯ: 38 ವರ್ಷ, ಸಾ: ತಡೊಳಾ ಗ್ರಾಮ ಇವಳ ಮೂಗಿಗೆ ರಕ್ತಗಾಯ, ಎಡಭುಜಕ್ಕೆ ಗುಪ್ತಗಾಯ, ಎಡ ಮೊಳಕಾಲಿಗೆ ಗುಪ್ತಗಾಯ ಹಾಗು ಇತರೆ ಪ್ರಯಾಣಿಕರಾದ ಕಮಳಮ್ಮಾ ಗಂಡ ಧೂಳಪ್ಪ ಉಪ್ಪಾರ ಸಾ: ಐನಾಪೂರ ಇವಳ ಎಡ ತಲೆಗೆ ತರಚಿದ ರಕ್ತಗಾಯ, ಎಡಮೇಲಕಿಗೆ ರಕ್ತಗಾಯ, ಎಡ ಮುಂಗೈಗೆ ಭಾರಿ ಗುಪ್ತಗಾಯ ಮತ್ತು ರಜಿಯಾ ಬೇಗಂ ಗಂಡ ಮುನ್ನುಮಿಯ್ಯಾ ಸಾ: ತಾಳಮಡಗಿ ಇವಳಿಗೆ ಎಡಗಾಲ ಮೊಳಕಾಲ ಕೆಳಗೆ ತರಚಿದ ರಕ್ತಗಾಯ ಹಾಗು ಪಾದಕ್ಕೆ ತರಚಿದ ಗುಪ್ತಗಾಯವಾಗಿರುತ್ತದೆ, ಆರೋಪಿಯು ವಾಹನ ಪಲ್ಟಿಯಾದ ಕೂಡಲೆ ತನ್ನ ಆಟೋ ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ನಂತರ ಗಾಯಾಳು ಶ್ರೀದೇವಿ, ಕಮಳಮ್ಮಾ, ರಜಿಯಾ ಬೇಗಂ ಇವರಿಗೆ ಚಿಕಿತ್ಸೆ ಕುರಿತು 108 ವಾಹನದಲ್ಲಿ ಸರಕಾರಿ ಆಸ್ಪತ್ರೆ ಚಿಟ್ಟಗುಪ್ಪಾಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 19/2021, ಕಲಂ. 420, 464, 465, 468, 471  ಜೋತೆ 34 ಐ.ಪಿ.ಸಿ :-

ಆರೋಪಿತರಾದ 1) ಎಂ.ಡಿ ರಫೀಕ್ ತಂದೆ ಸೈಯದ ಖಾಜ ಮಿಯ್ಯಾ ಸಾ: ಅರ್ಫತ ಕಾಲೋನಿ ಬಸವಕಲ್ಯಾಣ, 2) ಹಬೀಬಸಾಬ ತಂದೆ ಉಸ್ಮಾನಸಾಬ ಮುಲ್ಲಾ ಸಾ: ಅರ್ಫತ ಕಾಲೋನಿ ಬಸವಕಲ್ಯಾಣ, 3) ಅಸ್ಲಂಖಾನ ತಂದೆ ಅಬ್ಬಾಸ ಖಾನ ಸಾ: ಯಾಕುಬಪೂರ ಬಸವಕಲ್ಯಾಣ ಮತ್ತು 4) ಎಂ.ಡಿ ಮೈನೋದ್ದಿನ್ ತಂದೆ ಲೇಟ ಎಂ.ಡಿ  ಜೈಹಿರೋದ್ದಿನ್ ಸಾ: ಪಾಶಪೂರಗಲ್ಲಿ ಬಸವಕಲ್ಯಾಣ ಇವರು ಹಾಗು ಇತರರು ಕೂಡಿಕೊಂಡು ಫಿರ್ಯಾದಿ ಗೌತಮಬುದ್ದ ಕಾಂಬಳೆ ಪೌರಾಯುಕ್ತರು ನಗರ ಸಭೆ ಬಸವಕಲ್ಯಾಣ ರವರಿಗೆ ಗೋತ್ತಿಲ್ಲದೆ ವಿದ್ಯೂತ್ ಜೋಡೆಣೆ  ಕುರಿತು ಕಛೇರಿಯಿಂದ ಕೋಡಬೇಕಾದ ಆಕ್ಷೇಪಣಾ ರಹಿತ ಪ್ರಮಾಣ ಪತ್ರವನ್ನು ನಕಲಿ ರಚಿಸಿ ಸದರಿ ಪತ್ರದ ಮೇಲೆ ಕಛೇರಿಯ ರೌಂಡ ಶೀಲು ಅಥವಾ ಮೋಹರು ಮತ್ತು ಪೌರಾಯುಕ್ತರು ನಗರ ಸಭೆ ಬಸವಕಲ್ಯಾಣ ಎಂಬ ಮೋಹರು ಅಥವಾ ಶೀಲು ಹಾಕಿ ಪೌರಾಯುಕ್ತರು ನಗರ ಸಭೆ ಬಸವಕಲ್ಯಾಣ ಎಂಬ ಮೋಹರಿನ ಮೇಲೆ ಫಿರ್ಯಾದಿಯವರ ನಕಲಿ ಸಹಿ ಮಾಡಿ ಅದುವೇ ನೀಜವೆಂದು ವಿದ್ಯೂತ್ ಜೋಡಣೆಗಾಗಿ ಬಸವಕಲ್ಯಾಣ ಜೆಸ್ಕಂ ಕಛೇರಿಯಲ್ಲಿ ಸಲ್ಲಿಸಿರುತ್ತಾರೆ, ಹೀಗಿರುವಾಗ ದಿನಾಂಕ 08-02-2021 ರಂದು ಬಸವಕಲ್ಯಾಣ ಜೆಸ್ಕಂ ಕಛೇರಿಗೆ ಭೇಟಿ ನೀಡಿದಾಗ ಅಲ್ಲಿಯ ಅಧಿಕಾರಿಯಾದ ಎ.ಇ.ಇ ಜೆಸ್ಕಂ ಕಛೇರಿ ಬಸವಕಲ್ಯಾಣ ರವರು ಆಕ್ಷೇಪಣಾ ರಹಿತ ಪ್ರಮಾಣ ಪತ್ರಗಳನ್ನು ತೋರಿಸಿ ತಮ್ಮ ಸಹಿಯಲ್ಲಿ ಬದಲಾವಣೆ ಕಂಡುಬರುತ್ತಿದೆ ಎಂದು ತಿಳಿಸಿ ಆಕ್ಷೇಪಣಾ ರಹಿತ ಪ್ರಮಾಣ ಪತ್ರಗಳನ್ನು ಹಾಜರು ಪಡಿಸಿದಾಗ ಫಿರ್ಯಾದಿಯವರು ಅವುಗಳನ್ನು ಪರಿಶೀಲಿಸಿ ನೋಡಲು ತಮ್ಮ ಕಛೇರಿಯಿಂದ ನೀಡಿದ ಆಕ್ಷೇಪಣಾ ರಹಿತ ಪ್ರಮಾಣ ಪತ್ರಗಳು ಇರುವುದಿಲ್ಲ ಮತ್ತು ಅವುಗಳ ಮೇಲೆ ಇದ್ದ ರುಜು ನಕಲಿ ಇದ್ದು ಮತ್ತು ಕಛೇರಿಯ ಮೋಹರು ಹಾಗು ಪೌರಾಯುಕ್ತರು ನಗರ ಸಭೆ ಬಸವಕಲ್ಯಾಣ ಎಂಬ ಹೆಸರಿನ ಮೋಹರು ಕೂಡ ನಕಲಿ ಇರುತ್ತದೆ, ಕಾರಣ ಸದರಿ ಆರೋಪಿತರು ಹಾಗು ಇತರರು ಕೂಡಿಕೊಂಡು ದಿನಾಂಕ 15-12-2020, ದಿನಾಂಕ 18-12-2020 ಮತ್ತು ದಿನಾಂಕ 27-01-2021 ರಂದು ನಕಲಿ ಅಥವಾ ಜಾಲಿ ಆಕ್ಷೇಪಣಾ ರಹಿತ ಪ್ರಮಾಣ ಪತ್ರ ರಚಿಸಿ ಕಛೇರಿಯ ನಕಲಿ ಮೋಹರು ಮತ್ತು ಫಿರ್ಯಾದಿಯವರ ನಕಲಿ ಸಹಿ ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ ಫಿರ್ಯಾದಿಗೆ ಮತ್ತು ಇಲಾಖೆಗೆ ಮೋಸ, ವಂಚನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೋಂಡು ತನಿಖೆ ಕೈಗೊಳ್ಳಲಾಗಿದೆ.

Monday, February 8, 2021

BIDAR DISTRICT DAILY CRIME UPDATE 08-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-02-2021

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 13/2021, ಕಲಂ. 279, 337, 338 ಐಪಿಸಿ ಜೊತೆ 187 ಐ.ಎಂ.ವಿ ಕಾಯ್ದೆ :-

ದಿನಾಂಕ 07-02-2021 ರಂದು ಫಿರ್ಯಾದಿ ಗಣೇಶ @ ಗಣಪತಿ ತಂದೆ ತಿಪ್ಪಣ್ಣ ಮೇತಕಲ್ಲೆ, ವಯ: 30 ವರ್ಷ, ಜಾತಿ: ಹೇಳವಾ, ಸಾ: ಈಶ್ವರ ನಗರ ಬಸವಕಲ್ಯಾಣ ರವರ ತಮ್ಮನಾದ ಮಾಣಿಕ ವಯ: 29 ವರ್ಷ ಇತನು ಹೆಂಡತಿ ಮಹಾನಂದಾ ವಯ: 24 ವರ್ಷ ಇಬ್ಬರೂ ಕೂಡಿ ತನ್ನ ಮಗ ಕರಣ ವಯ: 09 ತಿಂಗಳು ಈತನಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರಲು  ಡಾ: ಭುರಾಳೆ ಆಸ್ಪತ್ರೆಗೆ ಹೋಗುವದಾಗಿ ಹೇಳಿ ತನ್ನ ಟಿ.ವ್ಹಿ.ಎಸ್ ಮೋಪೇಡ್ ನಂ. ಕೆಎ-56/ಜೆ-0793 ನೇದರ ಮೇಲೆ ಹೋಗಿ ಮರಳಿ ಮನೆಗೆ ಹೋಗುವಾಗ ಈಶ್ವರ ನಗರ ಕ್ರಾಸ್ ಡಿವೈಡರ್ ಗ್ಯಾಪ್ ಹತ್ತಿರ ಮಾಣಿತ ಈತನು ತನ್ನ ಟಿ.ವ್ಹಿ.ಎಸ್ ಮೋಪೇಡನ ಬಲಭಾಗದ ಇಂಡಿಕೇಟರ್ ಹಾಕಿ & ಕೈಸನ್ನೆ ಮಾಡಿ ಯು-ಟರ್ನ್ ತಿರಿಗಿಸಿಕೊಳ್ಳುತ್ತಿರುವಾಗ ಅದೇ ಸಮಯಕ್ಕೆ ಬಸ್ ನಿಲ್ದಾಣದ ಕಡೆಯಿಂದ ಮೋಟರ ಸೈಕಲ ನಂ. ಕೆಎ-39/ಹೆಚ್-2943 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಮ್ಮನ ಟಿ.ವ್ಹಿ.ಎಸ್. ಮೋಪೇಡಗೆ ಡಿಕ್ಕಿ ಮಾಡಿದ್ದ, ಸದರಿ ಅಪಘಾತದಿಂದ ತಮ್ಮನಿಗೆ ಯಾವುದೇ ಗಾಯವಾಗಿರುದಿಲ್ಲ ಹಾಗೂ ಆತನ ಹೆಂಡತಿಗೆ ತಲೆಯ ಹಿಂದೆ, ಎಡಭಾಗದಲ್ಲಿ ರಕ್ತಗಾಯ, ಬೆನ್ನಿನಲ್ಲಿ ಗುಪ್ತಗಾಯ, ಎರಡು ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ತಮ್ಮನ ಮಗನಾದ ಕರಣ ಈತನಿಗೆ ತಲೆಗೆ ಮತ್ತು ಬಲಗೈಗೆ ರಕ್ತ ಮತ್ತು ಗುಪ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಆರೋಪಿಯು ಮೋಟಾರ ಸೈಕಲ್ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಗಾಯಗೊಂಡ ಮಹಾನಂದಾ ಹಾಗೂ ಕಿರಣ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವಕಲ್ಯಾಣ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ  ಪೊಲೀಸ ಠಾಣೆ ಅಪರಾಧ ಸಂ. 15/2021, ಕಲಂ. 279, 337, 338 ಐಪಿಸಿ :-

ದಿನಾಂಕ 07-02-2021 ರಂದು ಫಿರ್ಯಾದಿ ಬಲಬೀರ ತಂದೆ ಪರಸರಾಮ ವಯ: 35 ವರ್ಷ, ಜಾತಿ: ಎಸ್.ಸಿ ಚವ್ಹಾರ, ಸಾ: ಮದನಾಪೂರ (ಯು.ಪಿ) ರವರು ತನ್ನ ಐಸ್ ಕ್ರೀಮ್ ಭಂಡಿ ತೆಗೆದುಕೊಂಡು ಮಾರಾಟ ಮಾಡಲು ಭಾತಂಬ್ರಾ ಗ್ರಾಮಕ್ಕೆ ಹೋಗಿ ಭಾತಂಬ್ರಾ ಗ್ರಾಮದಲ್ಲಿ ಐಸ್ ಕ್ರೀಮ್ ಮಾರಾಟ ಮಾಡಿ ಐಸ್ ಕ್ರೀಮ್ ಭಂಡಿಯನ್ನು ಭಾತಂಬ್ರಾ ಗ್ರಾಮದಿಂದ ಭಾಲ್ಕಿಗೆ ತಳ್ಳಿಕೊಂಡು ಬರುವಾಗ ಭಾತಂಬ್ರಾ- ಭಾಲ್ಕಿ ರೋಡಿನ ಮೇಲೆ ಸಿದ್ದಾಪೂರವಾಡಿ ಕ್ರಾಸ್ ದಾಟಿ ಸ್ವಲ್ಪ ಮುಂದೆ ಇರುವ ಬ್ರಿಜ ಹತ್ತಿರ ಹಿಂದಿನಿಂದ ಅಂದರೆ ಭಾತಂಬ್ರಾ ಕಡೆಯಿಂದ ಫ್ಯಾಶನ ಪ್ಲಸ್ ಮೋಟಾರ ಸೈಕಲ್ ನಂ. ಕೆಎ-37/ಆರ್- 1897 ನೇದರ ಚಾಲಕನಾದ ಆರೋಪಿ ಶೇಖಮಹೇಬೂಬ ತಂದೆ ಚಾಂದಸಾಬ ಸಾ: ಭಾಲ್ಕಿ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಬಲಗಾಲ ಹೆಬ್ಬಟಿಗೆ ರಕ್ತಗಾಯ, ಬಲಗೈ ಮೋಳಕೈ ಹತ್ತಿರ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿಯ ಗಟಾಯಿಗೆ ಭಾರಿ ರಕ್ತಾ,ಗಾಯ, ಎಡ ಮೋಳಕಾಲಿಗೆ ಭಾರಿ ರಕ್ತಾಗಾಯ, ಎಡಮೋಳಕೈಗೆ ರಕ್ತಗಾಯ, ಹೊಟ್ಟೆಯ ಎಡಬದಿಗೆ, ಎಡಗಾಲ ಪಾದಕ್ಕೆ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 07-02-2021 ರಂದು ಸಾವಳಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ತಾನಾಜಿ ಪಿಎಸ್ಐ ಕಮಲನಗರ ಪೊಲಿಸ್  ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಾವಳಿ ಗ್ರಾಮಕ್ಕೆ ಹೋಗಿ ಸಾವಳಿ ಗ್ರಾಮದ ಶಾಲೆಯ ಹಿಂದೆ ಇರುವ ಟೀನ್ ಶೇಡ ಮುಂದೆ ಆರೋಪಿತರಾದ 1) ಮೈನು ತಂದೆ ಇಮಾಮಸಾಬ ಶೇಖ ವಯ: 29 ವರ್ಷ, ಜಾತಿ: ಮುಸ್ಲಿಂ, 2) ಗಣೇಶ ತಂದೆ ಸಂಜು ನಾಗಂಪಲ್ಲೆ ವಯ: 20 ವರ್ಷ, ಜಾತಿ: ಮರಾಠಾ, ಇಬ್ಬರು ಸಾ: ಸಾವಳಿ ಇವರಿಬ್ಬರು ತನ್ನ ಮುಂದೆ ಒಂದು ಬೀಳಿ ಚೀಲದಲ್ಲಿ ಸರಾಯಿ ಇಟ್ಟುಕೊಂಡು ಹೊಗಿಬರುವ ಜನರಿಗೆ ಸರಾಯಿ ಮಾರಾಟ ಮಾಡಲು ಇಟ್ಟುಕೊಂಡಿರುವುದನ್ನು ನೋಡಿ ಸದರಿ ಆರೋಪಿತರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಅವರಿಗೆ ಹಿಡಿದು ಅವರಿಗೆ ನಿಮ್ಮ ಹತ್ತಿರ ಸರಕಾರದಿಂದ ಯಾವುದಾದರು ಪರವಾನಿಗೆ ಇದೆಯೇ ಅಂತಾ ವಿಚಾರಿಸಲು ಇಲ್ಲಾ ಅಂತಾ ತಿಳಿಸಿದ್ದು, ನಂತರ ಅವರಿಂದ 1) ಯು.ಎಸ್ ವಿಸ್ಕಿ 90 ಎಂ.ಎಲ್ ನ 80 ಪ್ಲಾಸ್ಟಿಕ್ ಬಾಟಲಗಳು ಅ.ಕಿ 2810/- ರೂ., 2) ಓಲ್ಡ್ ಟಾವರ್ನ ವಿಸ್ಕಿ 180 ಎಂ.ಎಲ್ 10 ಪೇಪರ್ ಪೌಚಗಳು ಅ.ಕಿ 867/- ರೂ. ಹೀಗಿ ಇವುಗಳ ಒಟ್ಟು ಮೊತ್ತ 3677/- ರೂಪಾಯಿ ಇದ್ದು, ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಮಡು ತನಿಖೆ ಕೈಗೊಳ್ಳಲಾಗಿದೆ.