Police Bhavan Kalaburagi

Police Bhavan Kalaburagi

Saturday, April 21, 2018

Yadgir District Reported Crimes Updated on 21-04-2018


                                        Yadgir District Reported Crimes
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ ;- 44/2018 ಕಲಂ: 323, 324, 504, 506 ಐ.ಪಿ.ಸಿ.;- ಪಿಯರ್ಾದಿಯು ದಿನಾಂಕ:19/04/2018ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಹಗರಟಗಿ ಗ್ರಾಮದ ತಿಪ್ಪಣ್ಣ ಮ್ಯಾಕಲದೊಡ್ಡಿ, ವಿರೇಶ ಸಜ್ಜನ ಕೂಡಿ ಮಾತನಾಡುತ್ತ ಹಗರಟಗಿ ಗ್ರಾಮದಲ್ಲಿನ ದೇವು ಬಂಡಿ ಸಾ|| ಹಗರಟಗಿ ಇವರ ಪಂಚರ ಅಂಗಡಿ ಹತ್ತಿರ ಇದ್ದಾಗ ತಿಪ್ಪಣ್ಣ ಮ್ಯಾಕಲದೊಡ್ಡಿ ಇವರು ತನ್ನ ಮೋಬೈಲ್ಗೆ ಕರೆನ್ಸಿ ಹಾಕು ಅಂತಾ ಅಡಿವೆಪ್ಪ ಸುಂಟಾಣ ಇವರಿಗೆ ಕೇಳಿದಾಗ ಪಿಯರ್ಾದಿಯು ಅವರಿಗೆ ದುಡ್ಡು ತೆಗೆದುಕೊಂಡು ಕರೆನ್ಸಿ ಹಾಕು ಅಂತಾ ಮಜಾಕಿಗೆ ಅಂದಾಗ ಅಲ್ಲಿಯೆ ಇದ್ದ ಆರೋಪಿತನು ಪಿಯರ್ಾದಿಗೆ ಯಾಕಲೆ ನಿಮ್ಮ ತಿಂಡಿ ಬಹಳ ಆಗಿದೆ ನಮ್ಮ ಮನುಷ್ಯನ ಗೂಡ ಜಗಳ ತೆಗೆಯುತ್ತಿರಿ ಭೊಸುಡಿ ಮಕ್ಕಳೆ ನಿನಗೆ ಖಲಾಸ್ ಮಾಡುತ್ತೇನೆ ಅಂತಾ ಬೈದು ಜಗಳ ತೆಗೆದು ತಕ್ಕೆಕುಸ್ತಿಗೆ ಬಿದ್ದು ಕೈಯಿಂದ ಹೊಡೆದು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಪಿಯರ್ಾದಿಯ ಬಾಯಿಗೆ ಹೊಡೆದು ತೆರಚಿದ ರಕ್ತಗಾಯ ಪಡೆಸಿದ್ದು ಇರುತ್ತದೆ. ಈ ಜಗಳವನ್ನ ಅಲ್ಲಿಯೇ ಇದ್ದ ಹಗರಟಗಿ ಗ್ರಾಮದ ವಿರೇಶ ಸಜ್ಜನ, ಅಡಿವೆಪ್ಪ ಸುಂಟಾಣ ಇವರುಗಳು ಬಿಡಿಸಿದ್ದು ಹೊಡೆದವನ ವಿರುದ್ಧ ಕ್ರಮ ಜರುಗಿಸಲು ವಿನಂತಿ ಅಂತಾ ಲಿಖಿತ ದೂರಿನ ಸಾರಾಂಶ ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 45/2018 ಕಲಂ: 323, 324, 504, 506 ಐ.ಪಿ.ಸಿ.;- ಪಿಯರ್ಾದಿಯು ದಿನಾಂಕ:19/04/2018ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಹಗರಟಗಿ ಹಗರಟಗಿ ಗ್ರಾಮದ ಗುರಣ್ಣ ತಂದೆ ಬಸನಗೌಡ ಮೈಲೆಸೂರ, ತಿಪ್ಪಣ್ಣ ತಂದೆ ಸಂಗಣ್ಣ ಮ್ಯಾಕಲದೊಡ್ಡಿ, ವಿರೇಶ ತಂದೆ ಬಸಪ್ಪ ಸಜ್ಜನ ಕೂಡಿ ಮಾತನಾಡುತ್ತ ಹಗರಟದಲ್ಲಿನ ದೇವು ಬಂಡಿ ಸಾ||ಹಗರಟಗಿ ಇವರ ಪಂಚರ ಅಂಗಡಿ ಹತ್ತಿರ ಇದ್ದಾಗ ಪಿಯರ್ಾದಿಯು ಅಲ್ಲಿಯೇ ಇದ್ದನು ತಿಪ್ಪಣ್ಣ ಮ್ಯಾಕಲದೊಡ್ಡಿ ಇವರು ತನ್ನ ಮೋಬೈಲ್ಗೆ ಕರೆನ್ಸಿ ಹಾಕು ಅಂತಾ ಅಲ್ಲಿಯೇ ಇದ್ದ ಅಡಿವೆಪ್ಪ ಸುಂಟಾಣ ಇವರಿಗೆ ಕೇಳಿದಾಗ ಆರೋಪಿ ಗುರಣ್ಣ ತಂದೆ ಬಸನಗೌಡ ಮೈಲೆಸೂರ ಸಾ|| ಹಗರಟಗಿ ಈತನು ಮದ್ಯದಲ್ಲಿ ಬಂದು ಅವರಿಗೆ ದುಡ್ಡು ತೆಗೆದುಕೊಂಡು ಕರೆನ್ಸಿ ಹಾಕು ಅಂತಾ ಅಡಿವೆಪ್ಪನಿಗೆ ಹೇಳಿದಾಗ ಪಿಯರ್ಾದಿಯು ಗುರಣ್ಣ ಮೈಲೆಸೂರ ಈತನಿಗೆ ಅಡಿವೆಪ್ಪನು ಎಲ್ಲಿಗಾದರು ಹೋಗುತ್ತಾನ ನೀನು ಯಾಕೆ ದುಡ್ಡು ತೆಗೆದುಕೊಂಡು ಕರೆನ್ಸಿ ಹಾಕು ಅಂತಾ ಹೇಳುತ್ತಿ ಅಂತಾ ಕೇಳಿದಾಗ ಗುರಣ್ಣ ಮೈಲೆಸೂರ ಈತನು ಪಿಯರ್ಾದಿಗೆ ಲೇ ಸೂಳಿ ಮಗನೆ ಅದನ್ನೆಲ್ಲಾ ನೀನು ಏನು ಕೇಳುತ್ತಿ ಅಂತಾ ಅಲ್ಕಾ ಶಬ್ದಗಳಿಂದ ಬೈದು ತಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಮತ್ತು ಕಲ್ಲಿನಿಂದ ಮೈ-ಕೈಗೆ ಹೊಡೆ-ಬಡೆ ಮಾಡಿದ್ದು ಇರುತ್ತದೆ  ಇರುತ್ತದೆ ಅಂತಾ ಪಿಯರ್ಾದಿಯ ಲಿಖೀತ ದೂರಿನ ಸಾರಾಂಶ ಇರುತ್ತದೆ.  

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 114/2018 ಕಲಂ 341 323 324 307 504 506 34 ಐಪಿಸಿ;- ದಿ:18/04/2018 ರಂದು ರಾತ್ರಿ 9 ಗಂಟೆ ಸುಮಾರಿಗೆ ಫಿರ್ಯಾಧಿಯು ಆರೋಪಿಯ ಮನೆಯ ಮುಂದೆ ಹೊರಟಾಗ ಆರೋಪಿತರೆಲ್ಲರೂ ಸೇರಿ ಹಳೆಯ ವೈಷ್ಯಮ್ಯದಿಂದ ಹಾಗು ರಾಜಕೀಯದಲ್ಲಿ ದಿಮಾಕು ಮಾಡುತ್ತಾ ತಿರುಗಾಡುತ್ತಿ ನಮ್ಮ ಪಕ್ಷದಲ್ಲಿ ಬಾ ಎಂದರೆ ಬರುವುದಿಲ್ಲ ಅಂತಾ ಫಿರ್ಯಾಧಿಗೆ ತಡೆದು ನಿಲ್ಲಿಸಿ ಬಡಿಗೆಯಿಂದ ಬಲಗಾಲಿಗೆ ಹೊಡೆದು ಭಾರಿಗಾಯ ಪಡಿಸಿದ್ದು ಅಲ್ಲದೆ ಕಲ್ಲಿನಿಂದ ಕೈಗೆ ಮತ್ತು ಕಾಲಿಗೆ ಹೊಡೆದು ರಕ್ತಗಾಯಗೊಳಿಸಿದ್ದು ಮತ್ತು ಫಿರ್ಯಾಧಿಯ ಮಮರ್ಾಂಗಕ್ಕೆ ಕೈಯಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿಸಲು ಪ್ರಯತ್ನಿಸಿದಾಗ ಫಿರ್ಯಾಧಿಯ ತಂದೆ ಹಾಗೂ ಇತರರು ಕೂಡಿಕೊಂಡು ಬಂದು ಜಗಳ ಬಿಡಿಸಲು ಪ್ರಯತ್ನಿಸಿದಾಗ ಫಿರ್ಯಾದಿಯ ತಂದೆಗೆ ಸಹ ಹೊಡೆ ಬಡೆ ಮಾಡಿದ್ದು ಸ್ವಲ್ಪ ಹೊತ್ತಿನ ನಂತರ ಫಿರ್ಯಾಧಿಯ ಮನೆಯ ಮುಂದೆ ಹೋಗಿ ಪುನ:ಹ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಫಿರ್ಯರ್ಾಧಿ ಮತ್ತು ಅವರ ತಂದೆಯು ಕೂಡಿಕೊಂಡು ವಿಜಯಪೂರ ಆಸ್ಪತ್ರೆಗೆ ಹೋಗಿ ಇಲಾಜ ಕುರಿತು ಸೇರಿಕೆಯಾಗಿದ್ದು ನಾವು ಸದರಿ ದೂರನ್ನು ಕೊಡಲು ತಡವಾಗಿರುತ್ತದೆ. ಆರೋಪಿತರ ವಿರುದ್ಧ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಫಿರ್ಯಾದಿಯ ಟೈಪ್ ಮಾಡಿದ ಅಜರ್ಿಯ  ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 263/2018 ಕಲಂ 379  ಐ.ಪಿ.ಸಿ;- ದಿನಾಂಕ 20/04/2018 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿ ಶ್ರೀ ಮಹಾಂತಗೌಡ ತಂದೆ ಶರಣಗೌಡ  ಪೊಲೀಸ್ ಪಾಟೀಲ ವಯ 40 ವರ್ಷ ಜಾತಿ ಲಿಂಗಾಯತ ಉಃ ಖಾಸಗಿ ಕೆಲಸ ಸಾಃ ಕಲ್ಲಹಂಗರಗಾ ತಾಃ ಜೇವಗರ್ಿ ಹಾಲಿವಸತಿ ಬಾಪುಗೌಡ ನಗರ ಶಹಾಪೂರ ತಾಃ ಶಹಾಪೂರ ಜಿಃ ಯಾದಗಿರಿ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ ಫಿರ್ಯಾದಿ ತಮ್ಮ ಪ್ಯಾಶನ ಮೋಟರ ಸೈಕಲ್ ನಂ  ಏಂ-28-ಇಅ-0164  ಅಂ.ಕಿ 40,000=00 ನೇದ್ದು ದಿನಾಂಕ 14/04/2018 ರಂದು ಮುಂಜಾನೆ 10-00 ಗಂಟೆಗೆ ಶಹಾಪೂರ ನಗರದ ವಿಜಯ ಗ್ಯಾಸ್ ಏಜೇನ್ಸಿ ಅಂಗಡಿಯ ಕಂಪೌಂಡ ಗೋಡೆಯ ಹತ್ತಿರ ನಿಲ್ಲಿಸಿ ಕೇಲಸಕ್ಕೆ ಹೋಗಿ ಮರಳಿ ಮದ್ಯಾಹ್ನ 13-30 ಗಂಟೆಗೆ ಊಟಕ್ಕೆ ಹೋಗುವ ಸಮಯದಲ್ಲಿ ತನ್ನ ಮೋಟರ ಸೈಕಲ್ ಹತ್ತಿರ ಬಂದಾಗ ಸದರಿ ಮೋಟರ ಸೈಕಲ್ ಇರಲಿಲ್ಲ ಎಲ್ಲಾಕಡೆ ಹುಡಕಾಡಿದರು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳುವಾದ ತನ್ನ ಮೋಟರ ಸೈಕಲ್ ಬಗ್ಗೆ  ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತ  ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 263/2018 ಕಲಂ  379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 264/2018.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.;- ದಿನಾಂಕ 20/04/2018 ರಂದು ಮದ್ಯಾಹ್ನ 13-00 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ನಾಗಾರಾಜ ಜಿ. ಪಿ.ಐ. ಸಾಹೇಬರು. ಇವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಲಾರಿ, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 20-04-2018 ರಂದು ಬೇಳಿಗ್ಗೆ 10-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ದೇವದುರ್ಗ ಕ್ರಾಸ್ ಕಡೆಯಿಂದ ಒಂದು ಲಾರಿಯಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ಲೋಡಮಾಡಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ. 164, ಲಕ್ಕಪ್ಪ.ಪಿ.ಸಿ.198. ಜೀಪ ಚಾಲಕ ಅಮಗೊಂಡ ಎ.ಪಿ.ಸಿ.169 ರವರಿಗೆ ಮಾಹಿತಿ ವಿಷಯ ತಿಳಿಸಿ. ದಾಳಿ ಕುರಿತು ಹೋಗುವ ಸಂಬಂದ ಲಕ್ಕಪ್ಪ.ಪಿ.ಸಿ.198. ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 26 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿಸಗರ ಶಹಾಪೂರ 2] ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವಯ 46 ವರ್ಷ ಜಾತಿ ಪ.ಜಾತಿ ಉಃ ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರಿಗೆ ಕರೆದು ಕೊಂಡು ಬಂದು 10-10 ಗಂಟೆಗೆ ಹಾಜರ ಪಡಿಸಿದ್ದು ಸದರಿಯವರಿಗೆ ಮಾಹಿತಿ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಪಂಚನಾಮೇ ಬರೆಯಿಸಿಕೊಡಲು ಕೆಳೀಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ದಾಳಿ ಕುರಿತು ಎಲ್ಲರು ಕೂಡಿ 10-20 ಗಂಟೆಗೆ ಠಾಣೆಯ ಜೀಪ್ ನಂ ಕೆ.ಎ-33-ಜಿ-0138 ನ್ನೇದ್ದರಲ್ಲಿ ಹೊರಟು ಶಹಾಪೂರ-ಸುರಪೂರ ಮುಖ್ಯರಸ್ತೆಯ ವಿಬೂತಿಹಳ್ಳಿ ಹತ್ತಿರದ ತಿಪನಳ್ಳಿ ಕ್ರಾಸ್ ಹತ್ತಿರ ರೋಡಿನ ಮೇಲೆ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ನಿಗಾಮಾಡುತ್ತ ಬೆಳಿಗ್ಗೆ 10-40 ಗಂಟೆಗೆ ನಿಂತಾಗ, ವಿಬೂತಿಹಳ್ಳಿ ಗ್ರಾಮದ ಕಡೆಯಿಂದ ಬೆಳಿಗ್ಗೆ 10-45 ಗಂಟೆಗೆ ಒಂದು ಮರಳು ತುಂಬಿದ ಲಾರಿ ರೋಡಿನ ಮೇಲೆ ಬರುತ್ತಿರುವದನ್ನು ನೋಡಿ ಅದನ್ನು ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಸದರಿ ಲಾರಿ ಚಾಲಕನಿಗೆ ವಾಹದ ಮತ್ತು ಲಾರಿಯಲ್ಲಿನ ಲೋಡಿನ ದಾಖಲಾತಿಗಳನ್ನು ತೆಗೆದು ಕೊಂಡು ಬರಲು ತಿಳಿಸಿದ್ದಾ ಸದರಿ ಚಾಲಕನು ನಮ್ಮ ಲಾರಿ ಮಾಲಿಕರು ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬಂದು ಶಹಾಪೂರಕ್ಕೆ ಮಾರಾಟ ಮಾಡಲು ತಿಳಿಸಿದ್ದರಿಂದ ನಾನು ಕಳ್ಳತನದಿಂದ ಮರಳು ತುಂಬಿಕೊಂಡು ಹೋರಟಿರುತ್ತೆನೆ ಅಂತ ಅನ್ನುತ್ತ ಲಾರಿ ಬಿಟ್ಟು ಓಡಿ ಹೋದನು ಆಗ ನಾವು ಸದರಿ ಚಾಲಕನಿಗೆ ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ ಮರಳಿ ಲಾರಿ ಹತ್ತಿರ ಬಂದು ಸದರಿ ಲಾರಿಯನ್ನು ಪಂಚರ ಸಮಕ್ಷಮ ಪರಿಸಿಲಿಸಿ ನೋಡಲಾಗಿ ಕೆಂಪು ಮತ್ತು ಬಿಳಿ ಬಣ್ಣದ ಟಾಟಾ ಕಂಪನಿಯ ಲಾರಿ ನಂಬರ ಕೆಎ-32ಎ-5127 ನ್ನೇದ್ದರ ಅ:ಕಿ: 300000=00 ರೂ ಸದರಿ ಲಾರಿಯಲ್ಲಿ ಅಂದಾಜು 5 ಬ್ರಾಸ್ ಮರಳು ಇದ್ದು ಅದರ ಅ:ಕಿ:7500=00 ರೂ ಇರುತ್ತದೆ. ಸದರಿ ಲಾರಿ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳತನದಿಂದ ಅಕ್ರಮವಾಗಿ ತುಂಬಿಕೋಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 11-00 ಎ.ಎಮ್. ದಿಂದ 12-00 ಪಿ.ಎಮ್. ವರೆಗೆ ಜಪ್ತಿ ಪಮಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಲಾರಿಯನ್ನು ಬೇರೆಚಾಲಕನ ಸಹಾಯದಿಂದ ಠಾಣೆಗೆ ಮದ್ಯಾಹ್ನ 12-30 ಪಿ.ಎಮ್.ಕ್ಕೆ ಬಂದು. ವರದಿಯನ್ನು ತಯ್ಯಾರಿಸಿ ಒಂದು ಮರಳು ತುಂಬಿದ ಲಾರಿ, ಜಪ್ತಿ ಪಂಚನಾಮೆಯನ್ನು, ಹಾಜರಪಡಿಸಿ ಸದರಿ ಲಾರಿ ಮಾಲಿಕ ಮತ್ತು ಓಡಿ ಹೋದ ಲಾರಿ ಚಾಲಕ ವಿರುದ್ದ ಮುಂದಿನ ಕ್ರಮ ಕೈಕೋಳ್ಳಲು ಮದ್ಯಾಹ್ನ 13-00 ಪಿ.ಎಂ.ಕ್ಕೆ ಸ||ತ|| ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 264/2018 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 118/2018 ಕಲಂ, 78(3) ಕೆ.ಪಿ.ಆ್ಯಕ್ಟ್;- ದಿನಾಂಕ: 20/04/2018 ರಂದು 07.15 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಜಗದೇವಪ್ಪ ಪಿ.ಎಸ್.ಐ ಸಾಹೇಬರು ಆರೋಪಿ ಮತ್ತು ಜಪ್ತಿಪಂಚನಾಮೆ, ಮುದ್ದೇಮಾಲು ಸಮೇತ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು, ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 20/04/2018 ರಂದು 05.55 ಪಿ.ಎಮ್.ಕ್ಕೆ ಗೋಗಿ ಪೇಠ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಆರೋಪಿತನಾದ )ಪರಶುರಾಮ ತಂದೆ ಹರಿಶ್ಚಂದ್ರ ಹೊಸಮನಿ ಸಾ: ಸಿಂಗನಳ್ಳಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣ ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 720=00 ರೂ. ಹಾಗೂ ಒಂದು ಮಟಕಾ ಚೀಟಿ ಅ.ಕಿ: 00=00 ರೂ.ಗಳು ಮತ್ತು ಒಂದು ಬಾಲ್ ಪೆನ್ ಅ.ಕಿ: 00=00 ರೂ. ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ಮತ್ತು ಸದರಿ ಆರೋಪಿ ಮಟಕಾ ಬರೆದುಕೊಂಡು ಹೋಗಿ ಕೊಡುತ್ತಿದ್ದ ಅಶೋಪ ಗುತ್ತೇದಾರ ಸಾ: ಗೋಗಿ ಪೆಠ ಈತನ ವಿರುದ್ದ ಕಲಂ, 78() ಕೆ.ಪಿ.ಕಾಯ್ದೆ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಜರಿಗಿಸಿ ಅಂತಾ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 08.15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 118/2018 ಕಲಂ, 78(3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 84/2018 ಕಲಂ:324, 504, 506, 342, 354 ಸಂಗಡ 34 ಐಪಿಸಿ;-ದಿನಾಂಕ:19.04.2018 ರಂದು ರಾತ್ರಿ 11:45 ಗಂಟೆಗೆ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ರಾಜನಕೊಳೂರು ಇವರು ಫೋನ್ ಮಾಡಿ ಶಿಲ್ಪಾ ಗಂಡ ಚಂದ್ರಶೇಖರಗೌಡ ಮಾಗನೂರು ಇವರು ಗಾಯಹೊಂದಿ ಉಪಚಾರಕ್ಕಾಗಿ ತಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ಹದ್ದಿಯ ಪ್ರಯುಕ್ತ ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ ತಿಳೀಸಿದ್ದರಿಂದ ನಾನು ಸದರ ಎಮ್,.ಎಲ್.ಸಿ ವಿಚಾರಣೆಗಾಗಿ ಠಾಣೆಯಿಂದ 11:50 ಗಂಟೆಗೆ ಹೊರಟು ಇಂದು ದಿನಾಂಕ:20.04.2018 ರಂದು 00:05 ಗಂಟೆಗೆ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಶ್ರೀಮತಿ ಶಿಲ್ಪಾ ಗಂಡ ಚಂದ್ರಶೇಖರಗೌಡ ಮಾಗನೂರು ವಯ:30 ವರ್ಷ, ಜಾ:ಹಿಂದೂ ರೆಡ್ಡಿ ಉ:ಮನೆಗೆಲಸ, ಸಾ:ರಾಜನಕೊಳೂರು ರವರಿಗೆ ವಿಚಾರಿಸಿ ಸದರಿಯವರ ಹೇಳಿಕೆಯನ್ನು 00:15 ಗಂಟೆಯಿಂದ 01:15 ಗಂಟೆಯ ವರೆಗೆ ಆಸ್ಪತ್ರೆಯಲ್ಲಿ ಪಡೆದುಕೊಂಡು ಮರಳಿ ಸದರಿ ಫಿಯರ್ಾದಿಯ ಹೇಳೀಕೆಯೊಂದಿಗೆ 01:30 ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ, ನಾನು ನನ್ನ ಮನೆಯವರಾದ ಚಂದ್ರಶೇಖರಗೌಡ, ಮಕ್ಕಳಾದ ಸಂಪತ್ಕುಮಾರ, ಚಂದನಾ ಮತ್ತು ಸಂಜನಾ ರವರೊಂದಿಗೆ ಉಪಜೀವಿಸುತ್ತಿದ್ದು, ನನ್ನ ಮನೆಯವರು ಯಾದಗಿರಿ ಜಿಲ್ಲಾ ಬಿಜೆಪಿ ಪಕ್ಷದ ಅದ್ಯಕ್ಷರಾಗಿದ್ದು, ರಾಜಕೀಯದಲ್ಲಿ ಹಾಗು ಬಿಸಿನೆಸ್ಗಳಲ್ಲಿ ಸಕ್ರೀಯರಾಗಿದ್ದು ಇರುತ್ತದೆ. ಇಂದು ರಾತ್ರಿ 10:30 ಪಿ.ಎಮ್ ಸುಮಾರಿಗೆ ಊಟ ಮಾಡಿ ನಮ್ಮ ಮನೆಯ ಹೊರಗಡೆ ವಾಕಿಂಗ್ ಮಾಢುತ್ತಿರುವಾಗ ಮನೆಗೆ (ಕಂಪೌಂಡ್) ಹತ್ತಿಕೊಂಡು ಇರುವ ನಮ್ಮ ಎಸ್.ಜಿ.ಕೆ.ಕೆ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಹತ್ತಿರ ಇರುವ ಮೂವೆಬಲ್ ಗೇಟ್ ದಾಟಿ ಸಪ್ಪಳ ಸದ್ದು ಕೇಳಿಸಲು ನಾನು ಆ ಕಡೆಗೆ ಹೋಗಿ ಗೇಟ್ ಹತ್ತಿರ ಬಾಗಿಲು ದಾಟಿ ನೋಡಬೇಕೆನ್ನುವಷ್ಟರಲ್ಲಿ ನಮ್ಮ ಶಾಲೆಯ ಮುಖ್ಯ ರಸ್ತೆಯಿಂದ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಇಬ್ಬರು ಜೀನ್ಸ್ ಪ್ಯಾಂಟ್ ಹಾಗು ಖಾಕಿ/ಕಟ್ಟಿಗೆ ಕಲರ್ ತರಹದ ಟೀ-ಶರ್ಟ ದರಿಸಿದ ಸುಮಾರು 25-30 ವರ್ಷದೊಳಗಿನ ಯುವಕರು ಬಂದವರೇ ಒಮ್ಮಿಂದೊಮ್ಮೇಲೆ ನನಗೆ ಕೈಗಳನ್ನು ಹಿಡಿದು ನಾನು ಮೈಮೇಲೆ ದರಿಸಿದ ನೈಟಿಯ ಮೇಲ್ಗಡೆ ಹಾಕಿಕೊಂಡ ಟವೆಲ್ದಿಂದ ಬಾಯಿ ಕಟ್ಟಿಹಾಕಿ ನಮ್ಮ ಶಾಲೆಯ ಒಂದನೇ ತರಗತಿಯಲ್ಲಿ ನನಗೆ ಕರೆದೊಯ್ದು ಖುಚರ್ಿಯ ಮೇಲೆ ಕೂಡಿಸಿ ಕ್ಯಾಂಡಲ್/ಮೇನದಬತ್ತಿಯನ್ನು ಬೆಂಕಿ ಪಟ್ಟಣದಿಂದ ಹಚ್ಚಿ ನನ್ನ ಕೂದಲಿ ಧರಿಸಿದ ಹೇರ್ ಕ್ಲಿಪ್ನ್ನು ಕಿತ್ತುಕೊಂಡು ನನ್ನ ಎರಡೂ ಕೈಗಳಿಗೆ ಕಾಲುಗಳಿಗೆ ಮೇಣದ ಬತ್ತಿಗೆ ಕ್ಲಿಪ್ನ್ನು ಕಾಯಿಸಿ ಕಾಯಿಸಿ ಬರೆ ಹಾಕಿದರು. ಈ ಮದ್ಯದಲ್ಲಿ ನನಗೆ ಅವಾಚ್ಯ ಶಬ್ದಳಿಂದ ಬೈಯುತ್ತ ನಿನ್ನ ಮಕ್ಕಳು ಎಲ್ಲಿ ನಿನ್ನ ಗಂಡನಿಗೆ ರಾಜಕೀಯ ಮಾಡುವದನ್ನು ಬಿಡು ಅಂತಾ ಹೇಳು ಇಲ್ಲದಿದ್ದರೆ ನಿನ್ನ ಗಂಡ ಹಾಗು ಮಕ್ಕಳಿಗೆ ಜೀವ ಸಹಿತ ಬಿಡುವದಿಲ್ಲ ಹಾಗು ಖಲಾಸ್ ಮಾಡಿಯೇ ತೀರುತ್ತೇವೆ ಅಂತಾ ನನಗೆ ಜೀವದ ಬೆದರಿಕೆ ಹಾಕುತ್ತಿರುವಾಗ ನಾನು ಸುಟ್ಟ ಗಾಯಗಳಿಂದ ವಿಪರೀತ ನೋವಾಗಿ ಚೀರಾಡ ಹತ್ತಲು ನಮ್ಮ ವಸತಿಯಿಂದ ಅಯ್ಯಮ್ಮ ಪಾಟೀಲ್ ಹಾಗು ಮನೆಯಲ್ಲಿದ್ದ ನವೀನ್ ತಂದೆ ಭೀಮನಗೌಡ ದದ್ದಲ್ ಇವರುಗಳು ಓಡಿ ಬರುವ ಸದ್ದು ಕೇಳಿ ನಮ್ಮ ಶಾಲೆಯ ಕಟ್ಟಡದ ಹಿಂದಿನಿಂದ ಇಬ್ಬರು ವ್ಯಕ್ತಿಗಳು ನನಗೆ ಅಲ್ಲಯೇ ಬಿಟ್ಟು ಹೋಡಿ ಹೋದರು. ಸದರಿ ಇಬ್ಬರನ್ನೂ ಕೂಡಾ ನಾನು ಗುರುತಿಸಬಲ್ಲೆ. ಕಾರಣ ನನಗೆ ಈ ರೀತಿಯಾಗಿ ಕೂಡಿ ಹಾಕಿ ಬರೆ ಕಟ್ಟು ನನ್ನ ಗಂಡ ಮಕ್ಕಳಿಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ ಇಬ್ಬರ ಮೇಲೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಫೀಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:85/2018 ಕಲಂ:324, 504, 506, 342, 354 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

Tuesday, April 17, 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 16-04-2018 ರಂದು ಮಣುರ ಗ್ರಾಮದ ಶ್ರೀ ಯಲ್ಲಮ್ಮಾ ದೇವಿಯ ಗುಡಿಯ ಹತ್ತಿರ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು ಮಣುರ ಗ್ರಾಮದ ಶ್ರೀ ಯಲ್ಲಮ್ಮಾ ದೇವಿಯ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ  ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಶರಣು @ ಶರಣಬಸಪ್ಪ ತಂದೆ ನೀಲಕಂಠ ಮೋಸಲಗಿ 2) ಸುರೇಶ ತಂದೆ ಆನಂದಪ್ಪ ತೋಳನೂರ 3) ಮಹೇಶ ತಂದೆ ಸಂಗಪ್ಪ ಕುಂಬಾರ 4) ಅನೀಲ ತಂದೆ ಕಾಶೀನಾಥ ಜೀಪೂರ ಸಾ|| ಎಲ್ಲರು  ಮಣೂರ ಗ್ರಾಮ  ಅಂತ ತಿಳಿಸಿದ್ದು  ಸದರಿಯವರಿಂದ  ಒಟ್ಟು 12390/- ರೂ ನಗದು ಹಣವನ್ನು ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ
ಅಫಜಲಪೂರ ಠಾಣೆ : ದಿನಾಂಕ 16/04/2018 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು  ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು  ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಪುಲೇಪ್ಪ @ ಶಿವಾನಂದ ತಂದೆ ದೇವರಾಯ ಕೋರಳ್ಳಿ ಸಾ|| ಮಣೂರ ಗ್ರಾಮ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1610/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಮೊಸಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ಇವರು 2 ವರ್ಷಗಳ ಹಿಂದೆ ಜೇವರ್ಗಿ ಸರಕಾರಿ ಪದವಿ ಕಾಲೇಜಿನಲ್ಲಿ ಬಿ.ಎ ವಿದ್ಯಾಭ್ಯಾಸ ಮಾಡುತ್ತಿದ್ದೆನು,  ಆ ಸಮಯದಲ್ಲಿ ಆಲುರ ಗ್ರಾಮದ ಹಮೀದ ತಂದೆ ಬಂದೇನವಾಜ ಹರನೂರ ಎಂಬುವನು ನನಗೆ ಪರಿಚಯಮಾಡಿಕೊಂಡನು, ಅವನು ಸಹ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ನಂತರ ನಾವಿಬ್ಬರು ಪರಸ್ಪರ ಪ್ರಿತಿಸುತ್ತಿದ್ದೇವು, ಹಮೀದ ಇವನು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅನ್ನುತ್ತಾ ಬಂದಿದ್ದನು, ದಿನಾಂಕ 09-07-2015 ರಂದು ನಾನು ಮನೆಯಲ್ಲಿದ್ದಾಗ ಹಮೀದ ಇವನು ನಮ್ಮ ಮನೆಗೆ ಬಂದಿದ್ದನು, ಆಗ ನಮ್ಮ ಮನೆಯಲ್ಲಿ ಯಾರು ಇರಲಿಲ್ಲಾ. ನಂತರ ಹಮೀದ ಇವನು ನನಗೆ ಪುಸಲಾಯಿಸಿ ಮುಂದೆ ನಾವು ಹೇಗಾದರು ಮದುವೆಯಾಗುವುದು ಖಚಿತ ಇದೆ ಅಂತಾ ಮನ ಒಲಿಸಿ ಸಂಭೋಗಕ್ಕೆ ಒತ್ತಾಯಿಸಿದನು, ಆಗ ನಾನು ಮದುವೆಯಾದ ನಂತರ ಸೇರೋಣಾ ಅಂತಾ ಹೇಳಿದರು ಕೇಳದೆ ಬಲವಂತವಾಗಿ ನಮ್ಮ ಮನೆಯಲ್ಲಿ ನನಗೆ ಸಂಭೋಗ ಮಾಡಿರುತ್ತಾನೆ, ಈ ವಿಷಯ ಯಾರಿಗು ಹೇಳಬೇಡಾ ಅಂತಾ ಹೇಳಿ ಹೋದನು. ನಂತರ ಆಗಾಗ ನಮ್ಮ ಮನೆಯಲ್ಲಿ ಯಾರು ಇರಲಾರದನ್ನು ಗಮನಿಸಿ ಹಮೀದ ಇವನು ನಮ್ಮ ಮನೆಗೆ ಬಂದು ನನ್ನೊಂದಿಗೆ ಸುಮಾರು ಸಲ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ, ನಾವಿಬ್ಬರು ಪ್ರಿತಿಸುವ ವಿಷಯ ನಮ್ಮ ಮನೆಯಲ್ಲಿ ಗೊತ್ತಾಗಿ ನಂತರ ನಮ್ಮ ಮನೆಯವರು ಸೇರಿಕೊಂಡು ಆಲೂರ ಗ್ರಾಮದ ಹಮೀದ ರವರ ಮನೆಗೆ ಹೋಗಿ ವಿಷಯ ಹೇಳಿದರು. ಹಮೀದ ಇವನು ಬೆಂಗಳೂರು ಸಿ.ಎ.ಆರ್ ಪೋಲಿಸ ನೇಮಕಾತಿಯಾಗಿದ್ದನು, ನಮ್ಮ ಮನೆಯವರು, ಹಮೀದನಿಗೆ ಹಾಗು ಅವರ ಮನೆಯವರಿಗೆ  ಪೊಲೀಸ ಟ್ರೇನಿಂಗ ಹೊಗುವ ಮುಂಚೆನೆ ಮದುವೆ ಮಾಡಿಬಿಡೋಣಾ ಅಂತಾ ಹೇಳಿದಾಗ ಹಮೀದ ರವರ ಮನೆಯವರು ಪೊಲೀಸ ಟ್ರೇನಿಂಗ ಮುಗಿದ ನಂತರ ಮದುವೆ ಮಾಡೋಣಾ ಸದ್ಯ ನಿಶ್ಚಿತಾರ್ಥ ಮಾಡೋಣಾ ಅಂತಾ ಹೇಳಿದರು. ದಿನಾಂಕ 26-10-2016 ರಂದು ನಮ್ಮೂರ ಇಸ್ಲಾಂ ಕಮೀಟಿ ಅಧ್ಯಕ್ಷರಾದ ಇಬ್ರಾಹಿಮಸಾಬ ಉಸ್ತಾದ, ರಜಾಕ ಮನಿಯಾರ, ಅಲ್ಲಾಪಟೇಲ ಚಿಂಚೋಳಿ, ಇಸ್ಮಾಯಿಲ್ ನಾಯ್ಕೋಡಿ, ಮಹಿಬೂಬಪಟೇಲ ಚಿಂಚೋಳಿ, ಶಿವಲಿಂಗ ಸುಂಕದ, ಚಂದ್ರಶೇಖರ ಪುರಾಣಿಕ, ಮಲ್ಲಿಕಾರ್ಜುನ ಹಲಕಟ್ಟಿ, ಕೆ. ವಿರೇಶಗೌಡ ಹಾಗು ನಮ್ಮ ಮತ್ತು ಹಮೀದ ರವರ ಸಂಬಂಧಿಕರ ಸಮಕ್ಷಮದಲ್ಲಿ ನಮ್ಮ ಮನೆಯಲ್ಲಿ ನಿಶ್ಚಿತಾರ್ಥ (ರಸಂ) ಮಾಡಿರುತ್ತಾರೆ, ನಂತರ ಹಮೀದ ಇವನು ನನ್ನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದನು, ಈಗ 5-6 ತಿಂಗಳಿಂದ ಹಮೀದ ಇವನು ನನಗೆ ಸರಿಯಾಗಿ ಮಾತನಾಡದೆ ನೀನು ಸರಿಯಾಗಿಲ್ಲಾ, ನಿನ್ನ ಕ್ಯಾರಕ್ಟರ್ ಸರಿ ಇಲ್ಲಾ ಅಂತಾ ಅನ್ನುತ್ತಾ ನನ್ನಿಂದ ದೂರ ಇರಲು ಪ್ರಾರಂಭೀಸಿದನು, ನಂತರ ಈ ವಿಷಯ ನಮ್ಮ ಮನೆಯವರಿಗೆ ಹೇಳಿದಾಗ ನಮ್ಮ ತಂದೆ ಇಮಾಮಖಾಸಿಂ, ತಾಯಿ ಮಮತಾಜ ಹಾಗು ಮೇಲ್ಕಂಡ ಜಮಾತ ಮಂದಿ ಕೂಡಿಕೊಂಡು ಆಲೂರ ಗ್ರಾಮಕ್ಕೆ 3-4 ಸಲ ಹೋಗಿ ಹಮೀದನ ತಂದೆ ತಾಯಿಗೆ ತೆಳವಳಿಕೆ ಹೇಳಿ ಮದುವೆ ಮಾಡೋಣಾ ಅಂತಾ ಹೇಳಿದರು ಅವರು ಒಪ್ಪದೆ ನಮ್ಮ ತಂದೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿ ನಾವು ನಮ್ಮ ಮನಗ ಮದುವೆ ನಿಮ್ಮ ಮಗಳೊಂದಿಗೆ ಮಾಡುವುದಿಲ್ಲಾ ಏನು ಮಾಡಕೋತಿರಿ ಮಾಡಕೋರಿ ಅಂತಾ ಅಂದರು, ಆಗ ನಮ್ಮ ತಂದೆಯವರು ಈ ಬಗ್ಗೆ ಪೊಲೀಸ ಕಂಪ್ಲೆಂಟ ಕೊಡುತ್ತೇವೆ ಅಂತಾ ಅಂದಾಗ ಪೊಲೀಸ ಕಂಪ್ಲೆಂಟ ಕೊಟ್ಟರೆ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಜೀವ ಭಯ ಹಾಕಿರುತ್ತಾರೆ. ಕಾರಣ ಹಮೀದ ತಂದೆ ಬಂದೇನವಾಜ ಹರನೂರ ಸಾ|| ಆಲೂರ ಈತನು ನನ್ನೊಂದಿಗೆ ಪ್ರಿತಿಸಿದಂತೆ ವರ್ತಿಸಿ ಮದುವೆಯಾಗುತ್ತೇನೆ ಅಂತಾ ನಂಬಿಸಿ ನನ್ನನ್ನು ಪುಸಲಾಯಿಸಿ ಸುಮಾರು ಸಲ ಬಲಾತಕಾರದಿಂದ ನಮ್ಮ ಮನೆಯಲ್ಲಿ ಸಂಭೋಗ ಮಾಡಿ ನನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಸದ್ಯ ನನಗೆ ಮದುವೆ ಯಾಗದೆ ಮೋಸ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಆರೀಫಖಾನ ತಂದೆ ನಿಜಾಮಖಾನ ಸಾ|| ಪ್ಲಾಟ ನಂ; 48 ವಿಶ್ವರಾದ್ಯ ಕಾಲೋನಿ ಆಳಂದ ರೋಡ ಕಲಬುರಗಿ ಇವರು ತಮ್ಮ ಬಡಾವಣೆಯಲ್ಲಿ ವಾಸವಾಗಿರುವ ಹೈದರ ತಂದೆ ಜಿಲಾನಿ, ಆರೀಫ್ ತಂದೆ ಸಲಿಂ, ಮುಭೀನ್ ತಂದೆ ಖಯುಂ, ಫಯಾಝ ಹಾಗು ಪ್ರಶಾಂತ ಇವರು ವಿನಾಕಾರಣ ನನ್ನ ಸಂಗಡ ವೈರತ್ವ ಬೇಳೆಯಿಸಿಕೊಂಡು ಬಂದಿದ್ದು ಇರುತ್ತದೆ. ನಾನು ಅವರ ಸಂಗಡ ತಿರುಗಾಡಲು ಹೋಗದಕ್ಕೆ ಸದರಿಯವರು ನನ್ನ ಮೇಲೆ ಹಗೆತನ ಬೇಳೆಯಿಸಿಕೊಂಡು ಬಂದಿದ್ದು ದಿನಾಂಕ 12/04/2018 ರಂದು ರಾತ್ರಿ 10.15 ಪಿ.ಎಂ ಸುಮಾರಿಗೆ ನಾನು ನಮ್ಮ ಮನೆಯಿಂದ ಅವಟೆ ಹಾಸ್ಪೆಟಲ್ ಕಡೆಗೆ ಹೊಗುವ ಕುರಿತು ಎಸ್ ಬಿ ಟ್ರೇಡರ್ಸ ಅಂಗಡಿಯ ಮುಂದಿನ ರಸ್ತಯ ಮೇಲೆ ನಡೆದುಕೊಂಡು ಹೊಗುತ್ತಿದ್ದು ಅದೆ ವೇಳೆಗೆ ನನ್ನ ಎದುರಗಡೆ ಹೈದರ ತಂದೆ ಜಿಲಾನಿ, ಆರೀಫ್ ತಂದೆ ಸಲಿಂ, ಮುಭೀನ್ ತಂದೆ ಖಯುಂ, ಫಯಾಝ ಹಾಗು ಪ್ರಶಾಂತ ಇವರೆಲ್ಲರೂ ಕೋಡಿಕೊಂಡು ಬಂದವರೆ ನನ್ನನ್ನು ತಡೆದು ಅವರಲ್ಲಿ ಹೈದರ ತಂದೆ ಜಿಲಾನಿ ಇತನು ರಂಡಿ ಮಗನೆ ನನ್ನ ಎದರು ಗಾಡಿಮೇಲೆ ದಿಮಾಕ ಮಾಡಿಕೊಂಡು ಹೊಗುತ್ತಿಯಾ ನಿನ್ನ ತಿಂಡಿ ಬಹಳ ಇದೆ ಬೋಸಡಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ಯಾಕೆ ನನಗೆ ಬೈಯುತ್ತಿ ಅಂತ ಕೇಳಿದಾಗ ಸದರಿಯವನು ತನ್ನ ಕೈಯಿಂದ ನನ್ನ ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು,  ಆರೀಫ್ ತಂದೆ ಸಲಿಂ ಇತನು ನಮಗೆ ಎದರು ಮಾತನಾಡುತ್ತಿಯಾ ಬೋಸಡಿಕ್ಯಾ ಅಂತಾ ಬೈದು ಅಲ್ಲೆ ಬಿದ್ದಿದ್ದ ಡ್ರ್ಯಾನೆಜ್ ಪೈಪು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡದು ರಕ್ತಗಾಯ ಪಡಿಸಿದ್ದು. ಮುಭೀನ್ ತಂದೆ ಖಯುಂ ಕೈಮುಷ್ಟಿಮಾಡಿ ನನ್ನ ತಲೆಯ ಹಿಂಬಾಗ, ಮೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ಫಯಾಜ ಇತನು ಕೈಯಿಂದ ನನ್ನ ಹೊಟ್ಟೆಗೆ ಹೊಡೆದನು. ಪ್ರಶಾಂತ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, April 14, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 13.04.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಕೈಲಾಸ ನಗರ ಗದಲೇಗಾವ ಕಲ್ಯಾಣ ಮಂಟಪಕ್ಕೆ ಹೊಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ಶ್ರೀ ಎ.ಪೌಲ ಎ.ಎಸ್‌‌.ಐ  ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಹಾಬಜಾರ ನಾಕಾದಿಂದ ನಡೆದುಕೊಂಡು ಗದಲೇಗಾವ ಕಲ್ಯಾಣ ಮಂಟಪ ಕಡೆಗೆ ಹೋಗುವ ರಸ್ತೆಯ ಹತ್ತಿರ ಹೋಗಿ ಮರೇಯಲ್ಲಿ ನಿಂತುಕೊಂಡು ಕಲ್ಯಾಣ ಮಂಟಪಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ರೇವಣಸಿದ್ದಪ್ಪ ತಂದೆ ಹಣಮಂತ್ರಾವ ಬೇಲೂರ ಸಾ: ಅಪಚಂದ ತಾ: ಆಳಂದ ಜಿ: ಕಲಬುರಗಿ ಹಾ:ವ: ಸುಭಾಶ ನಗರ ಶಹಾಬಜಾರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1150/- ರೂ 2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 13/04/2018 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ತಹಸಿ ಕಾರ್ಯಾಲಯದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ತಹಸಿಲ ಕಾರ್ಯಾಲಯದ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅರ್ಜುನ ತಂದೆ ಕಲ್ಲಪ್ಪ ವಾಲಿಕರ ಸಾ||ಸೊನ್ನ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1650/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಕ್ಕೆ ಪಡೆದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13-04-2018 ರಂದು ಕೆರಕನಹಳ್ಳಿ ಗ್ರಾಮದ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ . ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೆರಕನಹಳ್ಳಿ ಗ್ರಾಮಕ್ಕೆ  ಹೋಗಿ, ಗ್ರಾಮದ ಅಗಸಿಯಿಂದ ಸ್ವಲ್ಪ ದೂರ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಿಂಗಪ್ಪ ತಂದೆ ಸಿದ್ದಪ್ಪ ಚಿಂಚೋಳಿ ಸಾ||ಕೆರಕನಹಳ್ಳಿ ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ರಟ್ಟಿನ್ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 92 ರಟ್ಟಿನ ಪೌಚಗಳು ಅಕಿ- 2576/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 210/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು  ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 92 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ಮತ್ತು ನಗದು ಹಣ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Friday, April 13, 2018

KALABURAGI DISTRICT REPORTED CRIMES

ಪೊಲೀಸ ಅಧೀಕಾರಿಗಳ ಮೇಲೆ ಹಲ್ಲೆ ಮಾಡಿದವರ ಮೇಲೆ ಆತ್ಮರಕ್ಷಣೆಗೊಸ್ಕರ ಗುಂಡಿನ ದಾಳಿ :
ಗ್ರಾಮೀಣ ಠಾಣೆ : ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರ ಆದೇಶದಂತೆ ಇತ್ತೀತ್ತಲಾಗಿ ಕಲಬುರಗಿ ನಗರದ ವಿವಿಧ ಠಾಣಾ ಸರಹದ್ದಿನಲ್ಲಿ ಸುಲಿಗೆ  ಪ್ರಕರಣಗಳು ದಾಖಲಾಗಿದ್ದು, ಆ ಪ್ರಕರಣಗಳಲ್ಲಿಯ ಆರೋಪಿತರ ಪತ್ತೆ ಕುರಿತು ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರ ಆದೇಶದಂತೆ ಮಾನ್ಯ ಎ.ಎಸ್.ಪಿ. (ಎ) ಉಪವಿಭಾಗ ಕಲಬುರಗಿ ರವರ ಮೇಲು ಉಸ್ತುವಾರಿಯಲ್ಲಿ  ಒಟ್ಟು 06 ತಂಡಗಳು ರಚನೆ ಮಾಡಿದ್ದು. ಸದರಿ 06 ತಂಡಗಳಲ್ಲಿ  ನನ್ನ ನೇತೃತ್ವದಲ್ಲಿ ಹುಸೇನಬಾಷಾ ಸಿ.ಹೆಚ.ಸಿ.224, ಬಂದೇನವಾಜ ಸಿ.ಹೆಚ.ಸಿ. 546, ಭೀಮನಾಯಕ ಸಿಪಿಸಿ 855 ಇವರುಗಳು ಇದ್ದು, ಪಿ.ಎಸ್.ಐ. ವನಂಜಕರ ರವರ ನೇತೃತ್ವದಲ್ಲಿ  ರಾಜಕುಮಾರ ಸಿಪಿಸಿ 1100 ಸ್ಟೇಷನ ಬಜಾರ ಠಾಣೆ ಕಲಬುರಗಿ, ತೌಸೀಫ ಸಿಪಿಸಿ 1265 ಸ್ಟೇಷನ ಬಜಾರ ಠಾಣೆ ಕಲಬುರಗಿ, ಮತ್ತು ಸಿಪಿಸಿ 108 ನಿಂಗಪ್ಪ ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ ಇವರುಗಳಿರುತ್ತಾರೆ. ಈ ಮೇಲ್ಕಂಡ ಎರಡು ತಂಡಗಳೊಂದಿಗೆ  ಕಲಬುರಗಿ ನಗರದಲ್ಲಿ ವಿಶೇಷ ಗಸ್ತು ಮತ್ತು ಆರೋಪಿತರ ಪತ್ತೆ ಕಾರ್ಯದಲ್ಲಿದ್ದಾಗ  ಬೆಳಗಿನ 03-45  ಗಂಟೆ ಸುಮಾರಿಗೆ ಶಹಾಬಾದ ರಿಂಗ ರೋಡಿನ ವಿ.ಟಿ.ಯು. ಕಾಲೇಜ ಹತ್ತಿರ ಯಾರೋ ಅಪರಿಚಿತ ನಾಲ್ಕು ಜನರು ಹೊಂಡಾ ಎಕ್ಟಿವ್ ಮತ್ತು ಹೊಂಡಾ ಡಿಯೋ ಮೋಟಾರ ಸೈಕಲಗಳ ಮೇಲೆ ಬಂದು  ಅದೇ ದಾರಿಯಿಂದ ಹೋಗುತ್ತಿದ್ದ ಒಬ್ಬ ಮೋಟಾರ ಸೈಕಲ ಸವಾರನಿಗೆ ಅಡ್ಡಗಟ್ಟಿ  ಅವನ ಮೋಟಾರ ಸೈಕಲ ಮತ್ತು ಮೋಬಾಯಿಲ ಕಸಿದುಕೊಂಡು ಹೋಗಿರುತ್ತಾರೆ ಎಂದು ಕಂಟ್ರೋಲ ರೂಮಿನಿಂದ ಮಾಹಿತಿ ತಿಳಿದು ಬಂದ ಮೇರೆಗೆ ವಿಟಿಯು ಕಾಲೇ ಹತ್ತಿರ ಹೋಗಿ ಘಟನಾ ಸ್ಥಳ ಪರಿಶೀಲಿಸುತ್ತಿರುವಾಗ ಬೆಳಗಿನ 04-30 ಗಂಟೆ ಸುಮಾರಿಗೆ ಮತ್ತೆ ಕಂಟ್ರೋಲ ರೂಮಿನವರು ಹೀರಾಪೂರ ಕ್ರಾಸ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿಗೆ ನಾಲ್ಕು ಜನ ಅಪರಿಚಿತರು  ಹೊಂಡಾ ಎಕ್ಟಿವ್ ಮತ್ತು ಹೊಂಡಾ ಡಿಯೋ ಮೋಟಾರ ಸೈಕಲಗಳ  ಮೇಲೆ ಬಂದು ತಡೆದು ನಿಲ್ಲಿಸಿ ಆತನ ಹತ್ತಿರ ಲ್ಯಾಪಟ್ಯಾಪ, ಮೋಬಾಯಿಲ್, ನಗದುಹಣ  ಕಸಿದುಕೊಂಡು ಹೋಗಿರುತ್ತಾರೆ ಎಂದು ಮಾಹಿತಿ ಮೇರೆಗೆ ಪುನ:ಹ ನಾನು ಮತ್ತು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರು ಹಾಗೂ ಪಿ.ಎಸ್.ಐ. ವನಂಜಕರ ಹಾಗೂ ಅವರ ಜೊತೆಯಲ್ಲಿದ್ದ ಸಿಬ್ಬಂದಿಯವರು ಕೂಡಿಕೊಂಡು ಹೀರಾಪೂರ ಕ್ರಾಸ ಕಡೆಗೆ ಬಂದು ಪರಿಶೀಲಿಸಿ  ನಂತರ ಆರೋಪಿತರ ಪತ್ತೆ ಕುರಿತು ಪಿ.ಎಸ್.ಐ. ವನಂಜಕರ ಮತ್ತು ಸಿಬ್ಬಂದಿಯವರು  ಬಿದ್ದಾಪೂರ ಕಾಲನಿ, ಹೈ ಕೋರ್ಟ, ಉದನೂರ ರಿಂಗ ರೋಡ ಕಡೆಗೆ ಹೋಗಿದ್ದು. ನಾನು ಮತ್ತು ಸಿಬ್ಬಂದಿಯವರು ಹೀರಾಪೂರ,  ಮಿಜಾಬ ನಗರ, ಡಬರಾಬಾದ, ಕಡೆಗಳಲ್ಲಿ ಹೋಗಿದ್ದು, ಸದರಿ  ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದಾಗ ಬೆಳಗಿನ 06-30 ಗಂಟೆ ಸುಮಾರಿಗೆ ರೇಲ್ವೆ ಬ್ರೀಡ್ಜ ದಾಟಿ ಇರುವ ಡಬರಾಬಾದ ಸೀಮಾಂತರದಲ್ಲಿ ಇರುವ ಆಶ್ರಯ ಕಾಲನಿಯಲ್ಲಿ ಇರುವ ಹಾಳು ಬಿದ್ದ ಮನೆಯಲ್ಲಿ ಈ ಮೇಲೆ ಹೇಳಿದ ಸ್ಥಳಗಳಲ್ಲಿ ಸುಲಿಗೆ ಮಾಡಿದ ಅರೋಪಿತರು ಅಡಗಿ ಕುಳಿತುಕೊಂಡಿದ್ದಾರೆ ಎಂಬ ಬಾತ್ಮಿ ಮೇರೆಗೆ  ಹೈ ಕೋರ್ಟ ಕಡೆಗೆ ಹೋದ ಪಿ.ಎಸ್.ಐ. ವನಂಜಕರ ಮತ್ತು ಸಿಬ್ಬಂದಿಯವರಿಗೆ ಡಬರಾಬಾದ ರೇಲ್ವೆ ಬ್ರೀಡ್ಜ ಹತ್ತಿರ ಬರುವಂತೆ ಹೇಳಿದ ಪ್ರಕಾರ ಅವರು ಅಲ್ಲಿಗೆ ಬಂದಾಗ ನಾವೆಲ್ಲರೂ ಕೂಡಿಕೊಂಡು ಆರೋಪಿತರನ್ನು ಹಿಡಿಯಲು ಹಾಳು ಬಿದ್ದ ಡಬರಾಬಾದ ಆಶ್ರಯ ಕಾಲನಿಯ ಹತ್ತಿರ ಬೆಳಿಗ್ಗೆ 07-00 ಗಂಟೆ ಸುಮಾರಿಗೆ ಹೋದಾಗ ಒಂದು ಹಾಳು ಬಿದ್ದ ಮನೆ ಹತ್ತಿರ ಒಂದು ಹೊಂಡಾ ಎಕ್ಟೀವ್ ಮತ್ತು ಹೊಂಡಾ ಡಿಯೋ ಗಾಡಿ ನಿಂತಿದಿದ್ದು ನೋಡಿ ಸುಲಿಗೆ ಮಾಡಿದ ಆರೋಪಿತರು ಇಲ್ಲೇ ಅಡಗಿ ಕುಳಿತಿದ್ದಾರೆ ಎಂದು ಖಚಿತವಾದ ಮೇರೆಗೆ ಅವರನ್ನು ಹಿಡಿಯಲು ಸದರಿ ಮನೆಯ ಹತ್ತಿರ ಹೋದಾಗ ಒಳಗಡೆ ಇದ್ದ ನಾಲ್ಕು ಜನರು ಪೊಲೀಸ ಸಮವಸ್ತ್ರ ನೋಡಿ ನಮ್ಮ ಮೇಲೆ ಬಿಯರ ಬಾಟಲಿಗಳು ಎಸೆದಾಗ ಅದನ್ನು ಕಂಡು ನಾನು ಮತ್ತು  ಪಿ.ಎಸ್.ಐ. ವನಂಜಕರ ಹಾಗೂ ಸಿಬ್ಬಂದಿಯವರು ಅವರಿಗೆ ಬಿಯರ ಬಾಟಲಿ ಎಸೆಯಬೇಡಿರಿ ಶರಣಾಗಿರಿ ನಾವು ಪೊಲೀಸರಿದ್ದೆವೆ ಎಂದು ತಿಳಿ ಹೇಳಿದಾಗ ಅವರು ನಮ್ಮ ಮಾತಿಗೆ ಬೆಲೆ ಕೊಡದೇ  ಇದ್ದಾಗ ಅವರನ್ನು ಹಿಡಿಯಲು ಹೋದಾಗ ಒಳಗಡೆ ಇದ್ದ ಇಬ್ಬರು ತಮ್ಮ ತಮ್ಮ ಕೈಯಲ್ಲಿ ಜಂಭಾ ಹಿಡಿದುಕೊಂಡು  ರೂಮಿನಿಂದ ಹೊರಗಡೆ ಬಂದು ನನ್ನ ಮತ್ತು ಜೊತೆಗಿದ್ದ ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಅವರಿಗೆ ಶರಣಾಗಿರಿ ಪೊಲೀಸರ ಮೇಲೆ ಹಲ್ಲೆ ಮಾಡುವುದು ಸರಿ ಅಲ್ಲಾ ಎಂದು ತಿಳಿ ಹೇಳಿದರೂ ಕೂಡಾ  ಅವರಲ್ಲಿ ಒಬ್ಬನು ತನ್ನ ಕೈಯಲ್ಲಿದ್ದ ಜಂಭೆಯಿಂದ  ಬಂದೇನವಾಜ ಹೆಚಸಿ ಇವರಿಗೆ ಕೊಲೆ ಮಾಡುವ ಉದ್ದೇಶದಿಂದ ಅವರ ಬಲ ಕುತ್ತಿಗೆಯ ಮೇಲೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ರಕ್ತಗಾಯಗೊಳಿಸಿದನು. ನಾನು ಮತ್ತು ಪಿ.ಎಸ್.ಐ. ವನಂಜಕರ ಹಾಗೂ ಸಿಬ್ಬಂದಿಯವರು  ಹಲ್ಲೆ ಮಾಡಬೇಡಿರಿ ಶರಣಾಗಿರಿ ಎಂದು ಹೇಳಿ ಮತ್ತೆ ಅವರಿಗೆ ಹಿಡಿಯಲು ಹೋದಾಗ  ಅವರುಗಳು ಮತ್ತೆ ನಮ್ಮ ಮೇಲೆ ಜಂಭೆಯಿಂದ ಹಲ್ಲೆ ಮಾಡಲು ಮುಂದಾದಾಗ ನಾನು ಆತ್ಮ ರಕ್ಷಣೆಗಾಗಿ ಮತ್ತು ಜೊತೆಯಲ್ಲಿದ್ದ ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ನನ್ನ ಸರ್ವಿಸ ಪಿಸ್ತೂಲನಿಂದ  ಒಂದು ಸುತ್ತು ಗುಂಡು ಗಾಳಿಯಲ್ಲಿ ಹಾರಿಸಿ ಶರಣಗಾಗಿರಿ ಎಂದು ಎಚ್ಚರಿಕೆ ನೀಡಿದರೂ ಇನ್ನೊಬ್ಬ ತನ್ನ ಕೈಯಲ್ಲಿದ್ದ ಜಂಭೆಯಿಂದ  ಭೀಮನಾಯಕ ಸಿಪಿಸಿ ರವರ  ಬಲಭಜುದ ಮೇಲೆ ಮರಣಾಂತಿಕ ಹಲ್ಲೆ ಮಾಡಿದಾಗ ನಾನು ಆತ್ಮ ರಕ್ಷಣೆಗಾಗಿ ಮತ್ತು ಸ್ಥಳದಲ್ಲಿ ಹಾಜರಿದ್ದ ಸಿಬ್ಬಂದಿಯವರ ಪ್ರಾಣ  ರಕ್ಷಣೆಗಾಗಿ ಸರ್ವಿಸ ಪಿಸ್ತೂಲನಿಂದ ಭೀಮನಾಯಕನಿಗೆ  ಹಲ್ಲೆ ಮಾಡಿದ ವ್ಯಕ್ತಿಯ ಎಡಗಾಲಿಗೆ ಒಂದು ಸುತ್ತು ಗುಂಡು ಹೊಡೆದನು. ಅದನ್ನು ನೋಡಿ ಅವನ ಜೊತೆಯಲ್ಲಿದ್ದ ಬಂದೇನವಾಜನಿಗೆ ಹಲ್ಲೆ ಮಾಡಿದವನು ಮತ್ತೆ ಜಂಭೆದಿಂದ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದಾಗ ನನ್ನ ಆತ್ಮ ರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಆತನ ಎಡಗಾಲ ಮೇಲೆ ಹೊಡೆದನು. ಅದರಿಂದ ಇಬ್ಬರು ಸ್ಥಳದಲ್ಲಿ ಕುಸಿದು ಬಿದ್ದರು. ರೂಮಿನಲ್ಲಿದ್ದ ಇನ್ನಿಬ್ಬರು ಅಲ್ಲಿಂದ ಓಡಿ ಹೋದರು.  ಬಂದೇನವಾಜನಿಗೆ ಹಲ್ಲೆ ಮಾಡಿದವನ ಹತ್ತಿರ ಹೋಗಿ ಅವನ ಹೆಸರು ಕೇಳಲಾಗಿ ಶೇಖರ @ ಶೇಖು ತಂದೆ ಹಣಮಂತ ಖೇತ್ರಿ ಸಾ: ರಾಮ ತೀರ್ಥ ನಗರ ಕಲಬುರಗಿ ಅಂತಾ ಗೊತ್ತಾಯಿತು. ಮತ್ತು ಭೀಮನಾಯಕನ ಮೇಲೆ  ಹಲ್ಲೆ ಮಾಡಿದವನ ಹೆಸರು ಕೇಳಲಾಗಿ ಅಜೀಂಖಾನ  ತಂದೆ ರಹೇಮಾನಖಾನ ಖಾನಸಾಬ ಸಾ: ಆದರ್ಶ ನಗರ ಕಲಬುರಗಿ  ಅಂತಾ ಗೊತ್ತಾಯಿತು. ನಂತರ ಶೇಖರ ಮತ್ತು ಅಜೀಂ ಇಬ್ಬರಿಗೆ ಓಡಿ ಹೋದವರ ಹೆಸರು  ವಿಳಾಸ ಕೇಳಲಾಗಿ  3)ಅಮರ 4) ಸಾಗರ  ಅಂತಾ ಗೊತ್ತಾಯಿತು. ಈ ವಿಷಯ ಪೊಲೀಸ ಕಂಟ್ರೋಲ್ ರೂಮಿಗೆ ಮಾಹಿತಿ ತಿಳಿಸಿ ನಮ್ಮ ಮೇಲಾಧಿಕಾರಿಯವರಿಗೆ ತಿಳಿಸುವಂತೆ ಹೇಳಿದನು. ಅಲ್ಲದೇ ದು:ಖಾಪತಗೊಂಡು ಬಂದೇನವಾಜ ಮತ್ತು ಭೀಮಾನಾಯ್ಕ  ಹಾಗೂ ಶೇಖರ, ಅಜೀಂಖಾನ ಇವರಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಗೆ ಪೋನ ಮಾಡಲು ಕಂಟ್ರೋಲ ರೂಮಿಗೆ ತಿಳಿಸಿದೆನು. ಶೇಖರ ಮತ್ತು ಅಜೀಂಖಾನ ಇವರಿಗೆ ಭಾರಿ ರಕ್ತಗಾಯಗಳಾಗಿದ್ದರಿಂದ 108 ಅಂಬುಲೈನ್ಸ ಗಾಡಿ ಬರಲು ತಡವಾಗುತ್ತಿದ್ದರಿಂದ, ಮತ್ತು ಗಾಯಗೊಂಡ ಸಿಬ್ಬಂದಿಯವರ ಜೊತೆಯಲ್ಲಿ ಪಿ.ಎಸ್.ಐ. ವನಂಜಕರ ಮತ್ತು ಅವರ ಸಿಬ್ಬಂದಿಯವರನ್ನು ಬಿಟ್ಟು  ಶೇಖರ ಮತ್ತು ಅಜೀಂಖಾನ ಇವರಿಗೆ ರಕ್ತಸ್ರಾವ ಆಗುತ್ತಿದ್ದರಿಂದ ಪ್ರಾಣ ರಕ್ಷಣೆಗಾಗಿ  ನಾನು ಮತ್ತು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರು ಜೀಪು ನಂಬರ ಕೆಎ 32 ಜಿ 295 ರಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಅಂತಾ ಶ್ರೀ ವಾಹೇದ್ ಹೆಚ.ಕೋತ್ವಾಲ್ ಪಿ.ಎಸ್.ಐ. ಫರತಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 12-04-2018 ರಂದು  ಹಿಂಚಗೇರಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ  ಸಿ.ಪಿ.ಐ ಅಫಜಲಪೂರ ರವರು  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹಿಂಚಗೇರಾ ಗ್ರಾಮಕ್ಕೆ  ಹೋಗಿ, ಹಿಂಚಗೇರಾ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಬಸ್ ನಿಲ್ದಾಣ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಚೀಲ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶಿವಶರಣ ತಂದೆ ಸಿದ್ದಪ್ಪ ಕುಂಬಾರ ಸಾ|| ಹಿಂಚಗೇರಾ ಗ್ರಾಮ ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 64 ರಟ್ಟಿನ ಪೌಚಗಳು ಅಕಿ- 1800/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 200/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 64 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ವಶಕ್ಕೆ ಪಡೆದುಕೊಂಡೆನು, ಉಳಿದ ಪೌಚಗಳನ್ನು ಹಾಗೂ ಮದ್ಯ ಮಾರಾಟ ಮಾಡಿದ 200/- ರೂ ನಗದು ಹಣವನ್ನು  ವಶಪಡಿಸಿಕೊಂಡು ಸದರಿಯವನೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.

Thursday, April 12, 2018

KALABURAGI DISTRICT REPORTED CRIMES

ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ನರೋಣಾ ಠಾಣೆ : ದಿನಾಂಕ: 11/04/2018 ರಂದು ಲೇಂಗಟಿ ಗ್ರಾಮದ ಮಹಾದೇವ ದೇವಸ್ಥಾನದ ಹತ್ತಿರ  ಒಬ್ಬ ವ್ಯಕ್ತಿಯು ಅಕ್ರಮವಾಗಿ ಮದ್ಯವನ್ನು ತನ್ನ ಅಧೀನದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಲೇಂಗಟಿ ಗ್ರಾಮದಲ್ಲಿರುವ ಮಹಾದೇವ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಮಹಾದೇವ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಮುಂದೆ ಒಂದು ರಟ್ಟಿನ ಬಾಕ್ಸದಲ್ಲಿ ಮದ್ಯದ ಪೌಚಗಳನ್ನು ಸಂಗ್ರಹಿಸಿ ಇಟ್ಟಿಕೊಂಡು ಜನರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಡಲಾಗಿ ಸಾರಾಯಿ ಖರೀದಿಸಲು ಬಂದ ಜನರು ಓಡಿಹೋಗಿದ್ದು ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಲಕ್ಷ್ಮಣ ತಂದೆ ಬಂಡಪ್ಪ ಉಪ್ಪಾರ, ಸಾ||ಲೇಂಗಟಿ ಗ್ರಾಮ,ತಾ:ಆಳಂದ ಅಂತಾ ಹೇಳಿದನು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಪರವಾನಿಗೆ ಅಥವಾ ದಾಖಲಾತಿಗಳ ಬಗ್ಗೆ ವಿಚಾರಿಸಲು ಅನಧಿಕೃತವಾಗಿ ತನ್ನ ಅಧೀನದಲ್ಲಿ ಇಟ್ಟುಕೊಂಡು ಮಾರಾಟ ಮತ್ತು ಸಾಗಾಣೆ ಮಾಡುತ್ತಿರುವ ಬಗ್ಗೆ ತಿಳಿಸಿದನು. ಸದರಿಯವನ ಮುಂದೆ ಒಂದು ರಟ್ಟಿನ ಬಾಕ್ಸದಲ್ಲಿ ಸಂಗ್ರಹಿಸಿ ಇಟ್ಟಿರುವ ಪೌಚಗಳನ್ನು ಪರಿಶಿಲಿಸಲಾಗಿ Original choice 180 ML ನ 30 ಪೌಚಗಳು ಪ್ರತಿ ಪೌಚನ ಮೌಲ್ಯ 56 ರೂ 27 ಪೈಸೆ. ಒಟ್ಟು ಅ:ಕಿ: 1688 ರೂ ಇದ್ದು ಹಾಗು ಆಪಾದಿತನು ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ ನಗದು ಹಣ 250/- ರೂ ಗಳು ದೋರೆತಿದ್ದು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ 10/04/18 ರಂದು ನಂದಿಕೂರ ಗ್ರಾಮದ ಹನುಮಾನ ಗುಡಿಯ ಕಟ್ಟೆಯ ಮೇಲೆ ಸಾರ್ವ ಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಪರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ   ಸಾರ್ವಜನಿಕರಿಂದ ಹಣ ಪಡೆದು 1 ರೂಪಾಯಿಗೆ  80/- ರೂಪಾಯಿ ಕೊಡುತ್ತೇನೆ ಅಂತಾ ಕೂಗುತ್ತಾ ಮಟಾಕ ನಂಬರ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು  ದಾಳಿ ಮಾಡಿ ಒಬ್ಬನನ್ನು ವಶಕ್ಕೆ ಪಡೆದು ಹೆಸರು ವಿಚಾರಿಸಲು ಚಂದ್ರಯ್ಯ ತಂದೆ ಗುಂಡಯ್ಯ ಗುತ್ತೇದಾರ ಸಾ; ನಂದಿ ಕೂರ ತಾ: ಜಿ: ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಸಿದ  2250/- ರೂ ನಗದು ಹಣ ಒಂದು ಬಾಲ ಪೆನ್ನು, ಮಟಕಾ ಚೀಟಿ ಜಪ್ತ ಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದನಗಳ ಕಳವು ಪ್ರಕರಣ :
ನರೋಣಾ ಠಾಣೆ : ಶ್ರೀ.ಸಿದ್ರಾಮಪ್ಪ ತಂದೆ ಗುರುಶಾಂತಪ್ಪ ಭೂಸನೂರ, ಸಾ||ಕಡಗಂಚಿ ಗ್ರಾಮ ಇವರು ಎರಡು ಎಮ್ಮೆಗಳು ಮತ್ತು ಒಂದು ಎಮ್ಮೆ ಮಣಕಾ ಇರುತ್ತವೆ ಅವುಗಳನ್ನು ದಿನಾಲು ನಮ್ಮ ಮನೆಯ ಮುಂದಿನ ಬಯಲು ಜಾಗದಲ್ಲಿ ಕಟ್ಟುತ್ತೇವೆ. ಅದರಂತೆ ದಿನಾಂಕ:06-04-2018 ರಂದು ಎಂದಿನಂತೆ ಸಾಯಂಕಾಲ ಮನೆಯ ಮುಂದೆ ಕಟ್ಟಿರುತ್ತೇನೆ. ರಾತ್ರಿ ಊಟಮಾಡಿ 11-30 ಗಂಟೆ ನಮ್ಮ ಎಮ್ಮಿಗಳಿಗೆ ಮೇವು ಹಾಕಿ ಮನೆಯೊಳಗೆ ಹೋಗಿ ಮಲಗಿರುತ್ತೇನೆ. ದಿನಾಂಕ:07-04-2018 ರಂದು ಬೆಳಿಗ್ಗೆ 06-00 ಗಂಟೆಗೆ ಎಂದಿನಂತೆ ಎಮ್ಮಿಗಳ ಹೆಂಡಿಕಸ ಮತ್ತು ಮೇವು ಹಾಕ ಬೇಕೆಂದು ಮನೆಯಿಂದ ಹೊರಗೆ ನಾನು ಮತ್ತು ನಮ್ಮ ಅಣ್ಣನಾದ ಚಂದ್ರಕಾಂತ ಭೂಸನೂರ ಇಬ್ಬರು ಬಂದು ನೋಡಲಾಗಿ ನಮ್ಮ ಮನೆಯ ಮುಂದೆ ಗುಟಕ್ಕೆ ಕಟ್ಟಿದ ಎಮ್ಮೆಗಳು ಇರಲಿಲ್ಲ. ಯಾರೊ ಕಳ್ಳರು ಕಳವುಮಾಡಿಕೊಂಡು ಹೊಗಿದ್ದರು. ನಂತರ ನಾನು ಮತ್ತು ನಮ್ಮ ಅಣ್ಣ ಹಾಗೂ ನಮ್ಮ ಸಂಬಂದಿಕರಾದ ಅಂಬಾರಾಯ ತಂದೆ ಹಣಮಂತರಾಯ ಜವಳಿ ಎಲ್ಲರೂ ಕೂಡಿ ನಮ್ಮ ಎಮ್ಮೆಗಳನ್ನು ಎಲ್ಲಾಕಡೆ ಹುಡಕಲಾಗಿ ಇಲ್ಲಿಯವರೆಗೆ ಸಿಕ್ಕಿರುವದಿಲ್ಲ. ನನ್ನ 3 ಎಮ್ಮೆಗಳ ಅಂದಾಜು ಕಿಮ್ಮತ್ತು 48000/-ರೂಪಾಯಿಗಳು ಆಗಬಹುದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಕೀಲ ಅಹ್ಮೆದ ತಂದೆ ಅಯುಬ ಪಟೇಲ್ ಕೂಡಿ ವಯಸ್ಸು:- 26 ವರ್ಷ ಜಾ:ಮುಸ್ಲಿಂ ಉ: ವ್ಯಾಪಾರ ಮು: ಸರಡಗಿ (ಬಿ) ತಾ:ಜಿ:ಕಲಬುರಗಿ ಹಾವ: ಉದನೂರ ಕ್ರಾಸ ಕಲಬುರಗಿ ವಿಳಾಸದಲ್ಲಿ ವಾಸವಾಗಿದ್ದು ನನ್ನ ಸ್ನೇಹಿತನಾದ ಸೈಯ್ಯದ ಸದ್ದಾಂ ಹುಸೇನ್ ತಂದೆ ಸೈಯ್ಯದ ದಸ್ತಗಿರ ಮು:ಮದಿನಾ ಕಾಲೋನಿ ಎಂ.ಎಸ್.ಕೆ ಮೀಲ ಇವರಿಂದ ಹೇಳಿ ಬರೆಸಿಕೊಡುವ ವಿನಂತಿ ದೂರು ಅರ್ಜಿ ಏನೆಂದರೆ ನಿನ್ನೆ ದಿನಾಂಕ:- 10/04/2018 ರಂದು ರಾತ್ರಿ 08:00 ಗಂಟೆ ಸುಮಾರಿಗೆ ನನ್ನ ಹೊಂಡಾ ಆಕ್ಟೀವ್ ಮೋಟಾರ ಸೈಕಲ್ ನಂ KA-32 EF-7565 ನೇದ್ದರ ಮೇಲೆ ಕಲಬುರಗಿ ನಗರದ ಎಂಎಸ್.ಕೆ. ಮಿಲ್ಲ  ಎರಿಯಾದಲ್ಲಿ ಇರುವ ಇವರ ಕಾಕನಾದ  ಎಸ್. ಪಟೇಲ ಇವರಿಗೆ ಭೇಟ್ಟಿ ಆಗಿ ಮರಳಿ ಮನೆಗೆ ಹೋಗಬೇಕೆಂದು ಈ ಮೇಲ್ಕಂಡ ಮೋಟಾರ ಸೈಕಲ್ ಮೇಲೆ ನಾನು ಒಬ್ಬನೇ ಇಂದು ದಿನಾಂಕ:- 11/04/2018 ರಂದು ಮದ್ಯ ರಾತ್ರಿ 01:15 ನಮ್ಮ ಕಾಕನ ಮನೆಯಿಂದ ಹೊರಟು ಮದ್ಯ ರಾತ್ರಿ 01:30 ಎ.ಎಂಕ್ಕೆ ಉದನೂರ ಕ್ರಾಸ ಹತ್ತಿರ ಜಂಪನಲ್ಲಿ ಮೋಟಾರ ಸೈಕಲ್ ನಿಧಾನ ಮಾಡಿ ಹೋಗುತ್ತಿದ್ದಾಗ ಆಗ ಹಿಂದಿನಿಂದ 02 ಮೋಟಾರ ಸೈಕಲಗಳ ಮೇಲ 04 ಜನ ಅಪರಿಚಿತರು ಬಂದು ನನ್ನ ಮೋಟಾರ ಸೈಕಲದ ಮುಂದೆ ಅವರ ಮೋಟಾರ ಸೈಕಲಗಳನ್ನು ಅಡ್ಡ ನಿಲ್ಲಿಸಿದರು ಆಗ ನಾನು ಮೋಟಾರ ಸೈಕಲ ನಿಲ್ಲಿಸಿದೇನು ಆಗ ಅವರೆಲ್ಲರೂ ನನಗೆ ಹಿಂದಿ ಭಾಷೆಯಲ್ಲಿ ಕಹಾ ಜಹರಾಹೆಬೇ ಅಂತಾ ಅಂದು ಅದರಲ್ಲಿ ಇಬ್ಬರು ನನಗೆ ಎದೆಯ ಮೇಲೆ ಅಂಗಿ ಹಿಡಿದು ಜಗ್ಗಾಡಿ ಇನ್ನೋಬ್ಬ ನನ್ನ ಕಿಸೆಯಲ್ಲಿದ್ದ ಅಂದಾಜು 15000/-ರೂ ಹಣವನ್ನು ಮತ್ತು ಸ್ಯಾಮಸಂಗ ಕಂಪನಿಯ ಜೆ5 ಮೋಬೈಲ್ ಅಕಿ-13000/-ರೂ ಕಿಮ್ಮತ್ತಿನ ಮೋಬೈಲ ನಂ-9590444691 ನೇದ್ದನ್ನು ಜಬರದಸ್ತಿಯಿಂದ ಕಸಿದುಕೊಂಡನು ಅವರು 04 ಜನರು ಇದುದ್ದರಿಂದ್ದ ನಾನು ಅವರಿಗೆ ಅಂಜಿ ಸುಮ್ಮನೇ ನಿಂತುಕೊಂಡ್ಡಿದ್ದೇನು ಅದರಲ್ಲಿ ಒಬ್ಬನು ನಾನು ನನ್ನ ಮೋಟಾರ ಸೈಕಲ ಹತ್ತಿರ ಹೋಗುತ್ತಿದ್ದಾಗ ನನಗೆ ಕಾಲಿನಿಂದ ಜೋರಾಗಿ ಒದ್ದು ನನ್ನ ಮೋಟಾರ ಸೈಕಲ್ ನಂ KA-32 EF-7565 ತೆಗೆದುಕೊಂಡು ರಾಮ ಮಂದಿರ ರಿಂಗ ರೋಡ ಕಡೆಗೆ ಹೋದರು ಸದರಿ 04 ಜನರು ಅಪರಿಚಿತರು ಇದ್ದು ಅವರು ಮುಖಕ್ಕೆ ದಸ್ತಿಗಳನ್ನು ಕಟ್ಟಿಕೊಂಡಿದ್ದರು ಅವರುಗಳು ಅಂದಾಜು 25 ರಿಂದ 27 ವಯಸ್ಸಿನವರು ಇರುತ್ತಾರೆ. ಘಟನೆ ಸ್ಥಳದಿಂದ ಅಲ್ಲೆ ಹತ್ತಿರದಲ್ಲಿದ್ದ ಸುಮಾರು 1/2  ಕಿ.ಮೀದಲ್ಲಿ ಅಂತರದಲ್ಲಿದ್ದ ನಮ್ಮ ಮನೆಗೆ ನಡೆದುಕೊಂಡು ಹೋಗಿ ಮನೆಯಲ್ಲಿ ಹಿರಿಯರಿಗೆ ವಿಚಾರ ಮಾಡಿ ನಂತರ ನನ್ನ ಸ್ನೇಹಿತರಾದ ಸೈಯ್ಯದ ಸದ್ದಾಂ ಹುಸೇನ್ ತಂದೆ ಸೈಯ್ಯದ ದಸ್ತಗಿರ ಮತ್ತು ರೆಹಮಾನ ತಂದೆ ಅಹ್ಮೆದ ಮಸೂದ ಪರ್ವೆಜ ಇವರನ್ನು ಪೋನ ಮಾಡಿ ನಮ್ಮ ಮನೆಗೆ ಕರೆಯಿಸಿಕೊಂಡು ಅವರು ನಮ್ಮ ಮನೆಗೆ ಬಂದ ನಂತರ ನಾವು 03 ಜನರು ಕೂಡಿಕೊಂಡು ರೆಹಮಾನ ಇತನ ಕಾರಿನಲ್ಲಿ ಕುಳಿತುಕೊಂಡು  ಪೊಲೀಸ ಠಾಣೆಗೆ ಬಂದಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ ದಿನಾಂಕ 02/04/2018 ರಂದು ಶ್ರೀ ರಸೂಲ ಪಟೇಲ ತಂದೆ ಬಾಷಪಟೇಲ ಕೂಡಿ ಸಾಃ ಕೊಳ್ಳೂರ ಗ್ರಾಮ ತಾ.ಜಿಃ ಕಲಬುರಗಿ ರವರ ಮನೆಯವರೆಲ್ಲರು  ಊಟಕ್ಕೆ ಕುಳಿತು ಕೊಂಡಾಗ ಮೃತಳಾದ ಯಾಸ್ಮೀನ ಇವಳು ಮನೆಯಲ್ಲಿ ಸ್ಟೋ ಮೇಲೆ ಕಾಯಿಸಲು ಇಟ್ಟ ಹಾಲು ತೆಗೆದು ಕೊಳ್ಳಬೇಕೆಂದು ಮೇಲ್ಗಡೆ ಇರುವ ಗ್ಲಾಸ ತೆಗೆದುಕೊಳ್ಳಲು ಹೊದಾಗ ಉಟ್ಟ ಬಟ್ಟೆಗೆ ಬೆಂಕಿ ಹತ್ತಿದ್ದು, ಗಾಬರಿಯಲ್ಲಿ ಸ್ಟೋ ಮೇಲೆ ಬಿದ್ದಾಗ ಮೈಗೆ ಬೆಂಕಿ ಹತ್ತಿ ಮೈಯಲ್ಲಾ  ಸುಟ್ಟಿದ್ದು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 10/04/2018 ರಂದು 2.00 ಪಿ.ಎಮಕ್ಕೆ ಮೃತಪಟ್ಟಿರುತ್ತಾಳೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.