Police Bhavan Kalaburagi

Police Bhavan Kalaburagi

Thursday, April 18, 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ನಾಗಣ್ಣಾ ತಂದೆ ಶಂಕರೆಪ್ಪಾ ಬೆಳಮಗಿ ಸಾ; ಭೀಮಳ್ಳಿ ಗ್ರಾಮ ತಾ;ಜಿ;ಕಲಬುರಗಿ  ರವರ ಎರಡನೆ ಮಗಳಾದ ಅಂಬಿಕಾ ಇವಳಿಗೆ ಕಗ್ಗನಮಡ್ಡಿ ಗ್ರಾಮದ ಮಲ್ಲಪ್ಪಾ ಮೂಲಗೆ ಇವರ ಮಗ ರವಿ ಮೂಲಗೆ ಎಂಬುವವನೊಂದಿಗೆ ಸಂಪ್ರದಾಯದಂತೆ 1ವರ್ಷ10 ತಿಂಗಳ ಹಿಂದೆ ಮದುವೆಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ 2 ತೊಲೆ ಬಂಗಾರ, 11 ಸಾವಿರ ರೂಪಾಯಿ, ಹಾಗೂ ಅಲಮಾರೆ, ಗಾದಿ ಪಲಂಗ, ಬಾಂಡೆಸಾಮಾನುಗಳು ಕೊಟ್ಟಿರುತ್ತೇವೆ ಅಲ್ಲದೆ ನನ್ನ ಮಗಳು ಅಂಬಿಕಾಳಿಗೆ ಕಿವಿಯೊಲೆ, ಕೊರಳಲ್ಲಿ ಮಂಗಳ ಸೂತ್ರದಲ್ಲಿ ಕೊಯಿಪತ್ತೆ ಮಾಡಿಸಿ ಹಾಕಿರುತ್ತೇವೆ. ಮದುವೆಯೂ ಜೇವರಗಿ ತಾಲೂಕಿನ ಸೊನ್ನ ಮಠದಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಟ್ಟಿರುತ್ತೇವೆ. ಮದುವೆಯಾದ 5-6 ತಿಂಗಳು ನನ್ನ ಮಗಳಿಗೆ ಚನ್ನಾಗಿ ಇಟ್ಟುಕೊಂಡಿದ್ದು ನಂತರ ನನ್ನ ಮಗಳು ಅಂಬಿಕಾ ಇವಳ ಗಂಡ ರವಿ ಮೂಲಗೆ ,ಆತನ ತಮ್ಮ ರೇವಣಸಿದ್ದ , ಅವನ ಅಕ್ಕ ಶಿವಲೀಲಾ ಮುದ್ದಡಗಿ , ಮಾವ ರಾಜಪ್ಪಾ ಮುದ್ದಡಗಿ ಇವರೆಲ್ಲರೂ ನನ್ನ ಮಗಳು ಅಂಬಿಕಾಳಿಗೆ  ರಂಡಿ ನಿಮ್ಮ ಅಪ್ಪ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಟ್ಟಿದ್ದಾನೆ , ನೀನು ನಮ್ಮ ಮನೆಗೆ ಒಪ್ಪುವದಿಲ್ಲಾ, ಸರಿಯಾಗಿ ಕೆಲಸ ಮಾಡುವದಿಲ್ಲಾ ಅಂತಾ ಎಲ್ಲರೂ ಅವಾಚ್ಯವಾಗಿ ಬೈಯುವದು , ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಿದ್ದಾರೆ ಅಂತಾ ನನ್ನ ಮಗಳು ಫೋನ ಮಾಡಿ ವಿಷಯ ತಿಳಿಸಿದಳು, ನಂತರ ನಾನು ಮತ್ತು ನನ್ನ ಹೆಂಡತಿ ಸುಭದ್ರಬಾಯ ಇಬ್ಬರು ಕೂಡಿಕೊಂಡು 6ತಿಂಗಳ ಹಿಂದೆ ಭೀಮಳ್ಳಿಯಿಂದ ಕಗ್ಗನಮಡ್ಡಿಗೆ ಹೋಗಿ ನನ್ನ ಅಳಿಯ ರವಿ, ಆತನ ತಮ್ಮ ರೇವಣಸಿದ್ದ , ಅಕ್ಕ ಶಿವಲೀಲಾ ಮುದ್ದಡಗಿ, ಮಾವ ರಾಜಪ್ಪಾ ಮುದ್ದಡಗಿ ಇವರಿಗೆ ನಾವು ಬಡವರಿರುತ್ತೇವೆ  ನನ್ನ ಮಗಳಿಗೆ ಸರಿಯಾಗಿ ನಡೆಯಿಸಿಕೊಳ್ಳಿ ಅಂತಾ ಅವರಿಗೆ ಬೇಡಿಕೊಂಡೇವು ಆಗ ಅವರಲ್ಲರೂ ಕೂಡಿಕೊಂಡು ಮದುವೆ ಯಲ್ಲಿ ವರದಕ್ಷಿಣೆ ಕಮ್ಮಿಕೊಟ್ಟಿದ್ದು ಈಗ ವರದಕ್ಷಣಿ ರೂಪದಲ್ಲಿ ಇನ್ನೂ 1 ತೊಲೆ ಬಂಗಾರ , ಟೇಲರಿಂಗ ಮಸೀನ , ಹಾಗೂ 10,000/- ರೂ ನಗದ ಹಣ ಕೋಡಬೇಕು ಅಂತಾ ಡಿಮ್ಯಾಂಡ ಮಾಡಿದರು. ಆಗ ನಮ್ಮಗೆ ಅಷ್ಟು ಕೊಡಲು ಶಕ್ತಿ ಇಲ್ಲಾ ಆದರೆ 15 ದಿವಸ ಬಿಟ್ಟು ಊರಿಗೆ ಬಂದು ಕೋಡುತ್ತೇನೆ ಅಂತಾ ಹೇಳಿದ್ದೆ ಅಲ್ಲದೆ ಊರಿನ ಗ್ರಾಮ ಪಂಚಾಯ ಸದಸ್ಯರಾದ ಪತ್ರುಶಾ ಮತ್ತು ಕುಪೇಂದ್ರ ಧನ್ನಿ ಇವರ ಸಮಕ್ಷಮಾ ತಿಳುವಳಿಕೆ ಹೇಳಿ ಬಂದಿರುತ್ತೇವೆ. ತದನಂತರ 15 ದಿವಸಗಳ ನಂತರ 5000/- ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ನನ್ನ ಅಳಿಯ ರವಿ ಮೂಲಗೆ ಇವರ ಕೈಯಲ್ಲಿ ಕೊಟ್ಟು ಬಂಗಾರ ಮತ್ತು ಟೇಲರಿಂಗ ಮಸೀನ ಕೆಲವು ದಿವಸಗಳ ನಂತರ ಕೋಡುವದಾಗಿ ಹೇಳಿ ಬಂದಿರುತ್ತೇನೆ. ನಂತರ 1 ತಿಂಗಳ ನಂತರ ಪುನಾ; ನಮ್ಮ ಅಳಿಯ ರವಿ ಮೂಲಗೆ ಅವರ ತಮ್ಮ ರೇವಣಸಿದ್ದ, ಅಕ್ಕೆ ಶಿವಲೀಲಾ ಮಾವ ರಾಜಪ್ಪ ಮುದ್ದಡಗಿ ಇವರೆಲ್ಲರೂ ಕೂಡಿಕೊಂಡು ನನ್ನ ಮಗಳು ಅಂಬಿಕಾಳಿಗೆ  ರಂಡಿ ನಿಮ್ಮ ಅಪ್ಪ 1 ತೊಲೆ ಬಂಗಾರ , ಟೇಲರಿಂಗ ಮಸೀನ ತಂದು ಕೋಡುತ್ತೇನೆ ಅಂತಾ ಸುಳ್ಳು ಹೇಳಿ ಹೋಗಿದ್ದು ಇನ್ನೂ ತಂದು ಕೊಟ್ಟಿಲ್ಲಾ ನೀನು ನಮ್ಮ ಮನೆಯಲ್ಲಿ ಇರಬೇಡಾ ತವರು ಮನಗೆ ಹೋಗು ಅಂತಾ ಮನೆಯಲ್ಲಿ ಹೊಡೆಬಡಿ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೊಟಿದ್ದಾಗ ನನ್ನ ಮಗಳು ಅಳುತ್ತಾ ನಮಗೆ ಫೋನ ಮಾಡಿ ವಿಷಯ ತಿಳಿಸಿದಳು ಆಗ ನಾನು ಭೀಮಳ್ಳಿಯಿಂದ ಕಗ್ಗನ ಮಡ್ಡಿ ಗ್ರಾಮಕ್ಕೆ ಬಂದು ಎಲ್ಲರಿಗೂ ತಿಳಿಹೇಳಿದ್ದು ಅಲ್ಲದೆ ಕಗ್ಗನಮಡ್ಡಿ ಗ್ರಾಮದ ಗ್ರಾಮಪಂಚಾಯತ ಸದಸ್ಯರಿಗೆ ಹೇಳಿಕೇಳಿ ಸರಿಯಾಗಿ ಇಟ್ಟುಕೊಳ್ಳಿರಿ ಅಂತಾ ಹೇಳಿ ಬಂದಿರುತ್ತೇನೆ. ದಿನಾಂಕ. ದಿನಾಂಕ. 17-4-2019 ರುಂದು 11-00 ಎ.ಎಂ.ದಿಂದ 1-00 ಪಿ.ಎಂ. ಮದ್ಯದಲಿ ಕಗ್ಗನಮಡ್ಡಿ ಗ್ರಾಮದ ಮನೆಯಲ್ಲಿ ನನ್ನ ಮಗಳು ಅಂಬಿಕಾಳಿಗೆ ಇನ್ನೂ 1 ತೊಲೆ ಬಂಗಾರ , ಟೇಲರ ಮಸೀನನ್ನು ವರದಕ್ಷಿಣೆ ರೂಪದಲ್ಲಿ ಡಿಮ್ಯಾಂಡ ಮಾಡಿದನ್ನು ಕೊಡದಿದ್ದಕ್ಕೆ  ನನ್ನ ಮಗಳ ಗಂಡ ರವಿ ಮೂಲಗೆ, ಮೈದುನ ರೇವಣಸಿದ್ದ ಮೂಲಗೆ ಇವರಿಬ್ಬರೂ ಕೂಡಿಕೊಂಡು ಮನೆಯಲ್ಲಿ ಅಂಬಿಕಾಳ ಕುತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದು ,ಇದಕ್ಕೆ ಅವರ ಅಕ್ಕ ಶಿವಲಿಲ್ಲಾ ಮುದ್ದಡಗಿ, ಮಾವ ರಾಜಪ್ಪಾ ಮುದ್ದಡಗಿ, ಕಲ್ಯಾಣಿ ಮುದ್ದಡಗಿ ಅವರಿಗೆ ಪರೋಕ್ಷವಾಗಿ ಕುಮ್ಮಕು ನೀಡಿರುತ್ತಾರೆ ಕಾರಣಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 17.04.2019 ರಂದು ಸಾಯಂಕಾಲ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಖಾದ್ರಿ ಚೌಕ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಶಿವಯೋಗಿ ಎ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಖಾದ್ರಿ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಖಾದ್ರಿ ಚೌಕದಲ್ಲಿರುವ ರಹೇಮತ ಹೊಟೇಲ ಮುಂದೆ ಇರುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಮಹ್ಮದ ರಿಯಾಜ ತಂದೆ ಅಬ್ದುಲ ಕರೀಮ ಮುಲ್ಲಾ ಸಾ: ಕಡಗಂಚಿ ಮಠದ ಹಿಂದೆ ಡಕ್ಕನ ಕಾಲೋನಿ ಖಾದ್ರಿ ಚೌಕ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1890 ರೂ  1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ-17/04/2019 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಕಲಬುರಗಿ ನಾಗನಹಳ್ಳಿ ರಿಂಗ್ ರೋಡನಲ್ಲಿ ಒಬ್ಬ ಅಪರಿಚಿತ ಮನುಷ್ಯ ವ: 28 ರಿಂದ 30 ವರ್ಷದವನು ನಡೆದುಕೊಂಡು ರೊಡ ದಾಟುತ್ತಿರುವಾಗ ರಾಮ ಮಂದಿರ ರಿಂಗ್ ರೋಡ ಕಡೆಯಿಂದ ಯಾವುದೋ ಒಂದು ಟಿಪ್ಪರ್ ವಾಹನದ ಚಾಲಕನು ತನ್ನ ಟಿಪ್ಪ ರ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪರಿಚಿತ ಮನುಷ್ಯನಿಗೆ ಭಾರಿ ರಕ್ತಗಾಯಗೊಳಿಸಿ ದ್ದರಿಂದ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಟಿಪ್ಪರ ಚಾಲಕ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ದ್ದು ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳುಬೇಕೆಂದು ಅಂತಾ ಶ್ರೀ ಚಂದ್ರಶೇಖರ ತಂದೆ ನಾಗೇಂದ್ರಪ್ಪಾ ಮಹಾಗಾಂವಕರ ಸಾ : ನಾಗನಹಳ್ಳಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 :ಶ್ರೀ  ಸಂತೋಷ ತಂದೆ ಸಿದ್ರಾಮಪ್ಪಾ ರವರು ದಿನಾಂಕ 17-04-2019 ರಂದು ರಾತ್ರಿ 8-15 ಗಂಟೆ ಸುಮಾರಿಗೆ ನಾನು ನೆಹರು ಗಂಜನಲ್ಲಿರುವಾಗ ನನ್ನ ಗೆಳೆಯ ವಿರೇಶ ತಂದೆ ನಾಗರಾಜ ವಿಶ್ವಕರ್ಮ ಇತನು ವಾಡಿ ಜಂಕ್ಷನದಿಂದ ನನ್ನ ಹತ್ತೀರ ಬಂದನು ಇಬ್ಬರೂ ಸ್ವಲ್ಪ ಹೊತ್ತು ಮಾತನಾಡಿ ಆತನು ವಾಡಿಗೆ ಹೋಗುವವನು ಇದ್ದುದ್ದರಿಂದ ನಾನು ಟೌನಹಾಲ ಕ್ರಾಸ ಹತ್ತೀರ ಬಿಟ್ಟು ನಾನು ಮನೆಗೆ ಹೋಗಬೆಕು ಅಂತಾ ನಾನು ಚಲಾಯಿಸುತ್ತೀರುವ ನನ್ನ ಮೋಟಾರ ಸೈಕಲ ನಂ ಕೆಎ-32/ಇಇ-5618 ನೇದ್ದರ ಹಿಂದುಗಡೆ ಕೂಡಿಸಿಕೊಂಡು ಸುಪರ ಮಾರ್ಕೆಟ ಜಗತ ಸರ್ಕಲ ಮುಖಾಂತರ ಟೌನಹಾಲ ಕ್ರಾಸ ಕಡೆಗೆ ಹೋಗುವಾಗ ಮೋಟಾರ ಸೈಕಲ ನಂ ಕೆಎ-32/ಇಆರ್-2681 ನೇದ್ದರ ಸವಾರ ಎಮ್.ಡಿ ಸಮೀರ ಇತನು ತನ್ನ ಮೋಟಾರ ಸೈಕಲ ಹಿಂದುಗಡೆ ಇಮ್ರಾನ ಮತ್ತು ಶೇಖ ಆರೀಫ ಇಬ್ಬರನ್ನು ಕೂಡಿಸಿಕೊಂಡು ಜಗತ ಸರ್ಕಲ ಕಡೆಯಿಂದ ಎಸ.ವಿಪಿ ಸರ್ಕಲ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಗಾರ್ಡನ ಎದುರುಗಡೆ ಬರುವ ಶೌಚಾಲಯ ಮತ್ತು 4ಎಮ್ ಕಾರ ಡೆಕೊರೆಟರ್ ಮದ್ಯದ ರೋಡ ಮೇಲೆ ಗಾರ್ಡನ ಕಡೆಯಿಂದ ನಡೆದುಕೊಂಡು ರಸ್ತೆ ದಾಟುತ್ತೀರುವ ಬಸವರಾಜ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಹಾಗೆ ಎಡಗಡೆ ಬಂದು ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಮತ್ತು ವಿರೇಶ ರವರಿಗೆ ಗಾಯಗೊಳಿಸಿ ಬಸವರಾಜ ಇವರಿಗೆ ಭಾರಿಗಾಯಗೊಳಿಸಿ ತಾನೂ ಗಾಯ ಹೊಂದಿದ್ದು ಮೋಟಾರ ಸೈಕಲ ಸವಾರ ಎಮ್.ಡಿ ಸಮೀರ ಇತನ ಮೇಲೆ ಕಾನುನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 02 : ಶ್ರೀಶೈಲ್ ತಂದೆ ಬೈಲಪ್ಪ ಈತನು ತನ್ನ ಮೋಟಾರ ಸೈಕಲ ಚೇಸ್ಸಿ ನಂ: MBLHA10ERA9A03389 ನೇದ್ದನ್ನು ಆಫಜಲಪೂರ ರೋಡ ಕಡೆಯಿಂದ ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶರಣಸಿರಸಗಿ ಗ್ರಾಮದ  ನಾಗೂರ ಗುಡಿ ಹತ್ತಿರ ರೋಡಿನ ಮೇಲೆ ಹೋಗುತ್ತಿರುವ ಶ್ರೀ.ಮಲ್ಲಿಕಾರ್ಜುನ ತಂದೆ ಅಣ್ಣರಾಯ ಉಪಾಂಳ ಸಾ:ಶರಣಸಿರಸಗಿ  ತಾ:ಜಿ: ಕಲಬುರಗಿ  ರವರ ಆಕಳಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಮೋಟಾರ ಸೈಕಲ  ಸಮೇತ ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಬಲಕಿವಿಯಿಂದ, ಬಾಯಿಂದ. ಮೂಗಿನಿಂದ. ರಕ್ತಸ್ರಾವ ಆಗಿ ಎದೆಯ ಎಡಪಕ್ಕೆಗೆ ಭಾರಿ ರಕ್ತಗಾಯ, ಬಾಯಿಗೆ ಭಾರಿ ಪೆಟ್ಟಾಗಿ ಕೆಳಗಿನ ಮೂರು ಹಲ್ಲುಗಳು ಮುರಿದು ನಾಲಿಗೆ  ಕಚ್ಚಿದ್ದು ಇರುತ್ತದೆ. ಆಕಳು ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಸತ್ತಿರುತ್ತದೆ. ಶ್ರೀಶೈಲ ಈತನು ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಉಪಚಾರ ಹೊಂದುತ್ತಾ ಉಪಚಾರಿ ಫಲಕಾರಿಯಾಗದೆ ದಿನಾಂಕ 18/04/2019 ರಂದು 2-40 ಎ.ಎಂ ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು  ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀ ಸಾಗರ ಹಾಗೂ ನಮ್ಮ ಸಂಬಂಧಿಕಳಾದ ಕುಮಾರಿ ನಿವೇದಿತಾ ತಂದೆ ಶರಣಪ್ಪಾ ಕೊಡದೂರ ಇಬ್ಬರು ಕಲಬುರಗಿ ಯಿಂದ ನನ್ನ ಹೊಸ ಮೊಟಾರ್ ಸೈಕಲ್ ನಂ ಇನ್ನು ಬಿದ್ದಿರುವುದಿಲ್ಲ ಅದರ ಮೇಲೆ ಚಿಂಚನಸೂರ @ ಚಿಂಚೂರ ಗ್ರಾಮದ ಮಾಹಾಪೂರತಾಯಿ ದೇವಸ್ಥಾನಕ್ಕೆ ಹೋಗಿ ದರ್ಶನಮಾಡಿಕೊಂಡು ಅಂದಾಜು ಮಧ್ಯಾಹ್ನ 1-30 ಪಿ.ಎಂ ಸುಮಾರಿಗೆ ಮರಳಿ ಕಲಬುರಗಿ ಕಡೆಗೆ ಹೊರಡುಬೇಕು ಅಂತಾ ದೇವಸ್ಥಾನದ ಹತ್ತಿರ ನಿಲ್ಲಿಸಿದ ಮೊಟಾರ್ ಸೈಕಲ್ ಮೇಲೆ ನಾವಿಬ್ಬರು ಏರಿ ಕುಳಿತಾಗ ಅಲ್ಲಿಯೇ ಹತ್ತಿರದಲ್ಲಿ ನಿಲ್ಲಿಸಿದ. ಕ್ರೂಜರ್ ವಾಹನ ನಂಬರ್ ಕೆಎ17-ಎ5175 ನೇದ್ದರ ಚಾಲಕನು ತನ್ನ ಕ್ರೂಜರ್ ವಾಹನ ಚಾಲುಮಾಡಿ ಒಮ್ಮಲೇ ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತಂಹ ಮೊಟಾರ್ ಸೈಕಲಗೆ ಜೋರಾಗಿ ಹಿಂದಿನಿಂದ ಡಿಕ್ಕಿಹೊಡೆದು ಅಪಘಾತ ಪಡಿಸಿದನು ಆಗ ನಾವಿಬ್ಬರು ಕೆಳಗೆ ಬಿದ್ದಾಗ ನಮ್ಮ ಮೇಲೆ ಕ್ರೂಜರ್ ಹೈಯ್ದು ನನಗೆ ಬಲಗಾಲ ಮೊಳಕಾಲಿಗೆ ಭಾರಿರಕ್ತಗಾಯ ಮತ್ತು ಗುಪ್ತಗಾಯ ಬಲಗೈ ಬೆರಳುಗಳಿಗೆ ರಕ್ತಗಾಯ ಸೊಂಟಕ್ಕೆ ಭಾರಿ ಗುಪ್ತಗಾಯ ನೇವಿದಿತ ಇವಳಿಗೆ ಎಡಗಣ್ಣಿ ಪಕ್ಕ ಭಾರಿ ರಕ್ತಗಾಯ ಬಲಗಭಾಗದ ಹಣೆಗೆ ಬಾರಿ ರಕ್ತಗಾಯ ಸೊಂಡಕ್ಕೆ ಭಾರಿ ಗುಪ್ತಗಾಯಿ ಬಲಗಾಲಿಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯಳಾಗಿ ನಾವಿಬ್ಬರು ಒದ್ದಾಡುತ್ತಿದ್ದಾಗ ದೇವಸ್ಥಾನ ಹತ್ತಿರ ಇದ್ದ ಕೆಲವು ಜನರು ಘಟನೆಯನ್ನು ನೋಡಿ ನಮಗೆ ಎತ್ತಿ ಕ್ರೂಜರ್ ನಂ ಕೆಎ17-ಎ5175 ನೇದ್ದರಲ್ಲಿ ಹಾಕಿ ಕಳಿಸಿರುತ್ತಾರೆ. ಅದರ ಚಾಲಕನು ನಮಗೆ ಕಾಮರೆಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಆಸ್ಪತ್ರೆಯಿಂದ ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀಮತಿ ರೂಬಿನಾಬೇಗಂ ಗಂಡ ಮಹೇಬೂಬಶಾ ಮಕಾಂದಾರ, ಸಾ:ರೇವೂರ(ಬಿ), ತಾ:ಅಫಜಲಪೂರ ರವರಗೆ 10 ವರ್ಷಗಳ ಹಿಂದೆ ರೇವೂರ(ಬಿ) ಗ್ರಾಮದ ಮಹೇಬೂಬಶಾ ತಂದೆ ಖಾಸಿಂ ಶಾ ಮಕಾಂದಾರ ಇವನೊಂದಿಗೆ ಮದುವೆ  ಆಗಿದ್ದು, ನನ್ನ ತವರು ಮನೆ ನರೋಣಾ ಗ್ರಾಮ ಇರುತ್ತದೆ. ನಾನು ನನ್ನ 5ನೇ ಬಾಣಂತನದ ನಿಮಿತ್ಯ 3ತಿಂಗಳ ಹಿಂದೆ ನನ್ನ ಮಕ್ಕಳಾದ 1)ತಬಸುಮ್, 2)ಆಲಿಯಾ, 3)ಅಂಜುಮ್, 4)ಖಾದರಬಿ ಇವರೊಂದಿಗೆ ತವರು ಮನೆ ನರೋಣಾ ಗ್ರಾಮಕ್ಕೆ ಬಂದಿರುತ್ತೇನೆ. ಕಳೆದ ಒಂದುವರೆ ತಿಂಗಳ ಹಿಂದೆ ನನಗೆ 5ನೇ ಹೆಣ್ಣುಮಗು ಜನಿಸಿರುತ್ತದೆ. ದಿನಾಂಕ:16/04/2019 ರಂದು ನನ್ನ 3ನೇ ಮಗಳಾದ ಅಂಜುಮ್ ವಯಾ: 5ವರ್ಷ, ಇವಳು ಸಾಯಂಕಾಲ 4-00 ಗಂಟೆ ಸುಮಾರಿಗೆ ನಮ್ಮ ಕೇರಿಯಾ ಇತರೆ ಮಕ್ಕಳೊಂದಿಗೆ ನರೋಣಾ ಗ್ರಾಮದ ಮಸೂತಿಗೆ ಅರೇಬಿಕ್ ಓದಲು ಹೋಗಿರುತ್ತಾಳೆ.  ಸಾಯಂಕಾಲ 5-40ರ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಸಂಬಂಧಿಕನಾದ ಸೈಯದ ಖಾಸಿಂ ತಂದೆ ಇಸ್ಮಾಯಿಲಸಾಬ ಇನಾಮದಾರ ಇವರು ನಮ್ಮ ಮನೆಗೆ ಬಂದು ಬಸ್ಟ್ಯಾಂಡ್ ಹತ್ತಿರ ಅಂಜುಂ ಇವಳಿಗೆ ಜೀಪ್ ಅಪಘಾತ ವಾಗಿರುತ್ತದೆ ಅಂತಾ ಹೇಳಿದಾಗ ಗಾಬರಿಯಾಗಿ ಮನೆಯಿಂದ ನಾನು ನನ್ನ ತಾಯಿಯಾದ ಶಾಬಿರಾಬಿ ಗಂಡ ಗುಲಾಬಸಾಬ ಇನಾಮದಾರ, ತಮ್ಮನಾದ ಸೈಯದ್ ಫಾರುಖ್ ತಂದೆ ಗುಲಾಬಸಾಬ ಇನಾಮದಾರ ನಾವೆಲ್ಲರೂ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನರೋಣಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಡಾಂಬರ್ ರೋಡಿನ ಮೇಲೆ ನನ್ನ ಮಗಳಾದ ಅಂಜುಮ್ ಇವಳಿಗೆ ಜೀಪ್ ಅಪಘಾತ ಪಡಿಸಿದ್ದರಿಂದ ಅವಳಿಗೆ ಸದರಿ ಅಪಘಾದಲ್ಲಿ ಬಲಗಾಲಿಗೆ ಭಾರಿಗುಪ್ತಗಾಯ ಹಾಗೂ ಮರ್ಮಾಂಗಕ್ಕೆ ಭಾರಿ ರಕ್ತಗಾಯವಾಗಿದ್ದು, ಇದರ ಬಗ್ಗೆ ನನ್ನ ಸಂಬಂಧಿಕ ಸೈಯದ್ ಖಾಸಿಂ ಇವರಿಗೆ ವಿಚಾರಿಸಿದಾಗ ಸಾಯಂಕಾಲ 5-30ಕ್ಕೆ ನಾನು ನನ್ನ ಪಂಚರ ಅಂಗಡಿ ಮುಂದೆ ನಿಂತಾಗ ಜೀಪ್ ನಂ: ಕೆಎ23-ಎಂ4217 ನೇದ್ದರ ಚಾಲಕನಾದ ಕ್ಷೇಮಲಿಂಗಯ್ಯ ತಂದೆ ಬಸಪುರಯ್ಯ ಬಾಳಿ ಈತನು ತನ್ನ ಜೀಪನ್ನು ಕಲಬುರಗಿ ಕಡೆಯಿಂದ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತ್ತೆಯ ಪಕ್ಕ ಹೊರಟಿದ್ದ ಅಂಜುಮ್ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಸದರಿ ಜೀಪ್ ಸ್ಥಳದಲ್ಲಿಯೇ ಇದ್ದು ಅದರ ನಂಬರ್ ಪರಿಶೀಲಿಸಲಾಗಿ  ಕೆಎ23-ಎಂ4217 ಇರುತ್ತದೆ. ಗಂಭೀರಗಾಯ ಹೊಂದಿದ ನನ್ನ ಮಗಳಿಗೆ ಸೈಯದ ಖಾಸಿಂ ತಂದೆ ಇಸ್ಮಾಯಿಲಸಾಬ ಇನಾಮದಾರ, ಸಲೀಮಾಬಿ ಗಂಡ ಸೈಯದ್ ಖಾಸಿಂ ಇನಾಮದಾರ, ಫಾತಿಮಾಬಿ ಗಂಡ ಸೈಯದ್ ಸಲಿಂ ಇನಾಮದಾರ ಇವರೆಲ್ಲರೂ ಸೇರಿ 108 ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಒಯ್ದು ಹೆಚ್ಚಿನ ಉಪಚಾರಕ್ಕಾಗಿ ಸೋಲಾಪುರದ ಅಶ್ವನಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅವಮಾನ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ದಿಲೀಪ ತಂದೆ ಶ್ರೀನಿವಾಸ ನಾಯಕ ಸಾ: ಸ್ಟೇಷನ ತಾಂಡಾ ಶಹಾಬಾದ ರವರು ದಿನಾಂಕ: 18/04/2019 ರಂದು ನಾನು ಮುಂಜಾನೆ ಮನೆಯಲ್ಲಿದ್ದಾಗ ನನಗೆ ಗೊತ್ತಾಗಿದ್ದೆನೆಂದರೆ ಭಂಕೂರ ಕ್ರಾಸ ಹತ್ತಿರ ನಮ್ಮ ಬಂಜಾರ ಸಮಾಜದ ಮುಖಂಡರಾದ ಶ್ರೀ ಬಾಬುರಾವ ಚವ್ಹಾಣ ಮಾಜಿ ಸಚಿವರು 2) ಸುಭಾಷ ರಾಠೋಡ 3) ಅರ್ ಬಿ ರವಿ ಚವ್ಹಾಣ 4) ನಾಮದೇವ ರಾಠೋಡ ಪೇಠಶಿರೂರ ತಾಲ್ಲೂಕಾ ಪಂಚಾಯತ ಸದಸ್ಯರು ರವರುಗಳ ಭಾವಚಿತ್ರ ಮತ್ತು ಹೆಸರುಗಳು ಇರುವ 3 X 5  ಅಳತೆಯ ಪ್ರೇಕ್ಸ ಬೋರ್ಡನಲ್ಲಿ ಸಮಜಾದ ದ್ರೋಹಿಗಳು ದುಡ್ಡಿಗಾಗಿ ಸಮಾಜದ ತೊರೆದ ನಾಲಾಯಕರು ( ಕಳ್ಳರು ) ಅಂತಾ ಬರೆದು ಭಂಕೂರ ಕ್ರಾಸ ಹತ್ತಿರ ಇರುವ ವಿದ್ಯುತ್ ಕಂಬಕ್ಕೆ ಅಳವಡಿಸಿ ಅದಕ್ಕೆ ಚಪ್ಪಲಿಯ ಹಾರ ಮಾಡಿ ಹಾಕಿ ನಮ್ಮ ಸಮಾಜಕ್ಕೆ ಅವಮಾನ ಮಾಡಿರುತ್ತಾರೆ ಅಂತಾ ಗೊತ್ತಾಗಿ ನಾನು ಮತ್ತು ವಿಜಯ ರಾಠೋಡ  ಹಾಗೂ ಸುರೇಶ ಮೆಂಗನ ರವರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ವಿಷಯ ನಿಜವಿದ್ದು ಯಾರೋ ದುಷ್ಕರ್ಮಿಗಳು ದಿನಾಂಕ: 17/04/2019 ರಂದು ರಾತ್ರಿ ವೇಳೆಯಲ್ಲಿ ನಮ್ಮ ಸಮಾಜದ ಮುಖಂಡರ ಪೋಟೊ ಇರುವ ಪ್ಲೇಕ್ಸ ಹಾಕಿ ಅದಕ್ಕೆ ಚಪ್ಪಲಿಯ ಹಾರ ಹಾಕಿ ಅವಮಾನ ಮಾಡಿ ಚುನಾವಣೆ ಸಮಯದಲ್ಲಿ ನಮ್ಮ ಬಂಜಾರ ಸಮಾಜದ ಮೇಲಿನ  ದ್ವೇಷದಿಂದ  ನಮ್ಮ ಸಮಜಾಕ್ಕೆ ಅವಮಾನ ಮಾಡಿರುತ್ತಾರೆ ಕಾರಣ ಅವರ ವಿರುದ್ದ  ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Wednesday, April 17, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ:15/04/2019 ರಂದು ಸಾಯಂಕಾಲ 5-30 ಪಿ,ಎಮ್.ಸುಮಾರಿಗೆ ನನ್ನ ಗಂಡನು ಹೊಲಕ್ಕೆ ಹೋಗಿ ಬರುತ್ತೆನೆ ಅಂತ ತನ್ನ ಮೋಟಾರ ಸೈಕಲ ನಂಬರ ಕೆ.ಎ-02 ಈಪಿ-2188 ನೇದ್ದನ್ನು ತಗೆದುಕೊಂಡು ನಮ್ಮ ಮನಯಿಂದ ಹೋಗಿರುತ್ತಾನೆ. ನಂತರ 6-30 ಪಿ,ಎಮ್.ಸುಮಾರಿಗೆ ನಮ್ಮ ಜಾತಿಯ ಬಲವಂತ ತಂದೆ ಹಣಮಂತ ಹೋರ್ತಿ ರವರು ನಮ್ಮ ಮನೆಗೆ ಬಂದು ತಿಳಿಸಿದ್ದೆನಂದರೆ ನಾನು ನಮ್ಮ ಹೊಲದಿಂದ ಮನೆಗೆ ಬರಬೆಕೆಂದು ಅಂಬಣ್ಣ ಲೋಣಾರ ರವರ ಹೊಲದ ಹತ್ತೀರ ನಡೆದುಕೊಂಡು ಬರುತ್ತಿರುವಾಗ 6-00 ಪಿ,ಎಮ್.ಸುಮಾರಿಗೆ ಸದರಿ ಹೊಲದ ಹತ್ತೀರ ಮೋಟಾರ ಸೈಕಲ ಮೇಲೆ ಕರಜಗಿ ಕಡೆಯಿಂದ ಬರುತ್ತೀದ್ದ ನಿಮ್ಮ ಗಂಡನ ಮೋಟಾರ ಸೈಕಲಿಗೆ ಅಫಜಲಪೂರ ಕಡೆಯಿಂದ ಟ್ಯಾಂಕರ ನಂಬರ ಕೆ,ಎ-32 ಸಿ-9641 ನೆದ್ದರ ಚಾಲಕನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಅಪಘಾತಪಡಿಸಿದನು ಆಗ ನಾನು ಹೋಗಿ ನೋಡಲಾಗಿ ನಿಮ್ಮ ಗಂಡನ ತಲೆಗೆ ಭಾರಿ ರಕ್ತಗಾಯ, ಬಲಗಾಲಿಗೆ ಮತ್ತು ಬಲಗೈಗೆ ಗಾಯಗಳಾಗಿ ಚರ್ಮ ಸುಲಿದಂತಾಗಿ ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಮತ್ತು ಸದರಿ ಟ್ಯಾಂಕರ ಚಾಲಕನು ತನ್ನ ಟ್ಯಾಂಕರನ್ನು ಸ್ಥಳದಲ್ಲಿ ನಿಲ್ಲಿಸಿ ಅಪಘಾತವಾಗಿರುವದನ್ನು ನೋಡಿ ಟ್ಯಾಂಕರ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಗಂಡನ ಸೋದರ ಅಳಿಯನಾದ ಬಸವರಾಜ ತಂದೆ ಸುಭಾಷ ಶೇಷಗಿರಿ ಇಬ್ಬರು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನು ಅಪಘಾತದಲ್ಲಿ ಆಗಿರುವ ಗಾಯಗಳಿಂದ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಕಂಡುಬಂದಿರುತ್ತದೆ. ಅಂತಾ ಶ್ರೀಮತಿ ಭೌರಮ್ಮ ಗಂಡ ಹಣಮಂತ ನಿಂಬಾಳ ಸಾ: ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಲ್ಲಿನಾಥ ತಂದೆ ಲಿಂಗಣ್ಣ ಅಂಕಲಗಿ ಸಾ: ಬೈರಾಮಡಗಿ ರವರು ದಿನಾಂಕ:24/02/2019 ರಂದು ಘತ್ತರಗಿ ಗ್ರಾಮದ ಶ್ರೀ ಭಾಗ್ಯವಂತಿ ದೆವಸ್ಥಾನದಲ್ಲಿ ನನ್ನ ತಂಗಿಯ ಮಗಳ ಜವಳ ಕಾರ್ಯಕ್ರಮವಿದ್ದ ಕಾರಣ ಸದರಿ ಕಾರ್ಯಕ್ರಮಕ್ಕೆ ಹೋಗುವ ಕುರಿತು ನಾನು ಮತ್ತು ನನ್ನ ತಾಯಿಯಾದ ಶಾರದಾಭಾಯಿ  ಇಬ್ಬರು ಕೂಡಿಕೊಂಡು ಬೆಳಿಗ್ಗೆ  9-30 ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ ನಂಬರ ಕೆ,ಎ-32 ಈಆರ್-7855 ನೇದ್ದರ ಮೇಲೆ ನಮ್ಮೂರಿನಿಂದ ಬಿಟ್ಟಿರುತ್ತೇವೆ ನಾವು 11-00 ಎ,ಎಮ್.ಸುಮಾರಿಗೆ ನಾವು ಹಿಂಚಗೇರಿ ಗ್ರಾಮ ದಾಟಿ ಅಂದಾಜು 500 ಮೀಟರದಲ್ಲಿ ಘತ್ರರ್ಗಿ ಗ್ರಾಮದ ಕಡೆ ಹೋಗುತ್ತಿದ್ದಾಗ ಸದರಿ ಕಾರ್ಯಕ್ರಮಕ್ಕೆ ಬರುತ್ತಿದ್ದ ನಮ್ಮ ಗ್ರಾಮದ ರಾಜ ಅಹ್ಮದ ತಂದೆ ಮಹ್ಮದ ಹುಸೇನಿ ಕೋಗನೂರ ಈತನು ತನ್ನ ಮೋಟಾರ ಸೈಕಲ ನಂಬರ ಕೆ,ಎ-32 ಈಎಲ್-3296 ನೇದ್ದರ ಮೇಲೆ ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಹಿಂದಿನಿಂದ ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿಪಡಿಸಿದ್ದು ಆಗ ನನ್ನ ಮೋಟಾರ ಸೈಕಲ ಮೇಲೆ ಕುಳಿತಿದ್ದ ನನ್ನ ತಾಯಿಯು ಮೋಟರ ಸೈಕಲ ಮೇಲಿಂದ ಕೇಳಗಡೆ ಬಿದ್ದಳು ಆಗ ನಾನು ಮೋಟಾರ ಸೈಕಲ ಮೇಲಿಂದ ಕೆಳಗಡೆ ಇಳಿದು ನೋಡಲಾಗಿ ನನ್ನ ತಾಯಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಬೆಹುಸಾಗಿ ಬಿದ್ದಿರುತ್ತಾಳೆ ಮಾತನಾಡಿಸಿದರು ಮಾತನಾಡುವ ಸ್ಥಿತಿಯಲ್ಲಿ ಇದ್ದಿರುವದಿಲ್ಲ ನಂತರ ನಾನು ನನ್ನ ತಾಯಿಗೆ ಅಫಜಲಪೂರ ಕಡೆ ಬರುತ್ತಿದ್ದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಂದು ಅಫಜಲಪೂರದ ಸರಕಾರಿ ದವಾಖಾನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ವಳಸಂಗಕರ ಆಸ್ಪತ್ರೇಗೆ ಸೇರಿಕ ಮಾಡಿರುತ್ತೇನೆ.   ಕಾರಣ ನನ್ನ ಮೋಟಾರ ಸೈಕಲಕ್ಕೆ ಅಪಘಾತಪಡಿಸಿ ನನ್ನ ತಾಯಿಗೆ ಗಾಯಗೋಳಿಸಿದ ಮೋಟಾರ ಸೈಕಲ ನಂಬರ ಕೆ,ಎ-32 ಈಎಲ್-3296 ನೇದ್ದರ ಸವಾರನಾದ ರಾಜ ಅಹ್ಮದ ತಂದೆ ಮಹ್ಮದ ಹುಸೇನಿ ಕೋಗನೂರ ಸಾ||ಭೈರಾಮಡಗಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲಕ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ 15/04/2019 ರಂದು ಮೃತ ಶಿವರಾಜ ಹಾಗೂ ಈಶ್ವರ ಇವರಿಬ್ಬರು ಕೂಡಿಕೊಂಡು ಸೇಡಂ ಹತ್ತಿರ ರಂಜೋಳ ಗ್ರಾಮದಲ್ಲಿ ಫಿರ್ಯಾದಿಯ ಗ್ರಾಮದವನಾದ ಕಾಶಪ್ಪ ತಂದೆ ಶಾಂತಪ್ಪ ಮಾಂಗ ಇವರು ದೇವರ ಕಾರ್ಯಕ್ರಮಕ್ಕೆ ಹೇಳಿದ ಮೇರೆಗೆ ಮೃತನು ತನ್ನ ಹತ್ತಿರ ಇದ್ದ ಇನ್ನು ಪಾಸಿಂಗ ಆಗದ ಹಿರೋ ಹೊಂಡಾ ಸ್ಪಲೆಂಡರ ಮೋಟರ ಸೈಕಲ ನೇದ್ದನ್ನು ಇಬ್ಬರು ಕೂಡಿ ರಂಜೋಳ ಗ್ರಾಮಕ್ಕ ಹೋಗಿ ದೇವರ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಅದೇ ಮೋಟರ ಸೈಕಲ ಮೇಲೆ ಅಲ್ಲಿಂದ ಊರಿಗೆ ಬರುತ್ತಿದ್ದಾಗ ಸಮಯ 6-15 ಪಿ.ಎಂ ಸುಮಾರಿಗೆ ಕಲಬುರಗಿಯ ಸೇಡಂ ರಾಜ್ಯ ಹೆದ್ದಾರಿಯ ಟೆಂಗಳಿ ಕ್ರಾಸ ಸಮೀಪ ರಾಯಲ ಧಾಬಾದ ರೋಡಿನ ಮೇಲೆ ಮೋಟರ ಸೈಕಲ ಮೇಲೆ ಹೋಗುತ್ತಿದ್ದಾಗ ಎದುರು ಗಡೆಯಿಂದ ಅಂದರೆ ಟೆಂಗಳಿ ಕ್ರಾಸ ಕಡೆಯಿಂದ ಲಾರಿ ನಂಬರ ಎಂ.ಎಚ್ 04 ಜಿ.ಆರ್-8080 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಜಿತನದಿಂದ ಚಲಾಯಿಸಿಕೊಂಡು ಬಂದವನೇ ಮೃತನು ಚಲಾಯಿಸಿಕೊಂಡು ಹೋರಟ ಮೋಟರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಸಿ ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಈ ಅಪಘಾತದಲ್ಲಿ ಮೃತನ ತಲೆಯ ಹಿಂಬದಿಯಲ್ಲಿ ಭಾರಿ ರಕ್ತ ಗಾಯ, ಹಾಗೂ ಹಣೆಯ ಮುಂಭಾಗದಲ್ಲಿ ಭಾರಿ ರಕ್ತ ಗಾಯ, ಬಲಗಣ್ಣಿನ ಹುಬ್ಬಿನ ಮೇಲೆ, ಮುಗಿಗೆ, ಬಾಯಿಗೆ ರಕ್ತ ಗಾಯವಾಗಿರುತ್ತದೆ. ಮತ್ತು ಹೊಟ್ಟೆಯ ಮೇಲೆ ತರಚಿದ ಗಾಯ, ಬಲಗಾಲಿನ ಮೋಳಕಾಲ ಕೆಳಗೆ ರಕ್ತ ಗಾಯ, ಇತರ ಕಡೆಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ತಲೆಯಲ್ಲಿ ರಕ್ತ ಗಾಯ ಮತ್ತು ಕುತ್ತಿಗೆಗೆ, ಹೊಟ್ಟೆಗೆ ಒಳ ಪೆಟ್ಟಾಗಿರುತ್ತದೆ ಕಾರಣ ರಸ್ತೆ ಅಪಘಾತ ಪಡಿಸಿದ ಲಾರಿ ನಂಬರ ಎಂ.ಎಚ್ 04 ಜಿ.ಆರ್-8080 ನೇದ್ದರ ಚಾಲಕನ ಮೇಲೆ ಕಾನೂನಿ ಕ್ರಮ ಜರುಗಿಸಬೇಕೆಂದು ಶ್ರೀ ಈಶ್ವರ ತಂದೆ ಮಲ್ಕಪ್ಪ ತಳಕೇರಿ ಸಾ ಸಂಗಾವಿ ತಾ : ಚಿತ್ತಾಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ          ಠಾಣೆ ಗುನ್ನೆ ನಂ:33/2019 ಕಲಂ:279, 338, 304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ಅಸ್ವಾಭಾವಿಕ ಸಾವು ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಲಲಿತಾಬಾಯಿ ಗಂಡ ದೇವಿದಾಸ ರಾಠೋಡ ಸಾ: ಟೇಕು ನಾಯಕ ತಾಂಡಾ ತಾ: ಆಳಂದ ರವರ ಗಂಡನು ಅಂಗವಿಕಲನಿದ್ದು ನನಗೆ ಎರಡು ಜನ ಹೇಣ್ಣು ಮಕ್ಕಳು, ಮೂರು ಜನ ಗಂಡು ಮಕ್ಕಳು ಇರುತ್ತಾರೆ ಹೇಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು ಗಂಡನ ಮನೆಯಲ್ಲಿ ವಾಸಿವಾಗಿರುತ್ತಾರೆ ಗಂಡು ಮಕ್ಕಳು ಇನ್ನೂ ಚಿಕ್ಕವರಿದ್ದು ನಾನು & ನನ್ನ ಗಂಡ ಒಕ್ಕಲುತನ ಕೆಲಸ ಮಾಡಿಕೊಂಡು ಬಂದಿರುತ್ತೇವೆ, ನಮ್ಮ ಹೇಣ್ಣು ಮಕ್ಕಳ ಮದುವೆ ಕಾಲಕ್ಕೆ ಮತ್ತು ನಮ್ಮ ಹೋಲದಲ್ಲಿ ಬೋರವೆಲ ಹಾಕಿದ್ದು, ಹಾಗು ಇನ್ನೀತರ ಹೊಲದ ಕೆಲಸ ಮಾಡಿಸಲು ಎಸ್.ಬಿ,ಹೆಚ್ ಬ್ಯಾಂಕ ಆಳಂದ ದಲ್ಲಿ ನಮ್ಮ ಹೋಲದ ಮೇಲೆ 1.00.000/- (ಒಂದು ಲಕ್ಷ ರೂಪಾಯಿಗಳು) ಸಾಲಾ ಮಾಡಿದ್ದು ಮತ್ತು ನಮ್ಮ ಪ್ರಾಪಂಚಿಕ ಅಡೆಚಡೆಗಾಗಿ ಅಲ್ಲಿಲ್ಲಿ ನಮ್ಮ ಪರಿಚಯಸ್ಥರಲ್ಲಿ ಕೈಗಡ ರೂಪದಲ್ಲಿ ಸುಮಾರು ಐದು ಲಕ್ಷ ರೂಪಾಯಿಗಳು ಸಾಲ ಮಾಡಿದ್ದು ನನ್ನ ಗಂಡನು ನಮ್ಮ ಮನೆಯಲ್ಲಿ ಆಗಾಗ್ಗೆ ಈ ವರ್ಷ ಮಳೆ ಸರಿಯಾಗಿ ಬಂದಿಲ್ಲ ಯಾವದೇ ಬೇಳೆ ಬೇಳೆದಿರುವದಿಲ್ಲ, ಮತ್ತು ಕಬ್ಬು ಸರಿಯಾಗಿ ಇಳುವರಿ ಕೊಟ್ಟಿರುವದಿಲ್ಲ ನಾನು ಮಾಡಿದ ಬ್ಯಾಂಕ & ಇತರರಲ್ಲಿ ಸಾಲ ಹೇಗೆ ತಿರಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನನ್ನ ಮುಂದೆ ಆಗಾಗ್ಗೆ ಹೇಳಿರುತ್ತಾರೆ. ದಿನಾಂಕ 16/04/2019 ರಂದು 05;00 ಎ.ಎಂಕ್ಕೆ ನನ್ನ ಗಂಡನು ನಮ್ಮ ಮನೆಯಲ್ಲಿ ಎಂದಿನಂತೆ ಎದ್ದು ನಾನು ನಮ್ಮ ಹೋಲದಲ್ಲಿನ ಭಾಗ್ಯವಂತಿ ದೇವಿಗೆ ಪೂಜೆ ಮಾಡಿ ಬರುತ್ತೇನೆ ಅಂತಾ ಹೇಳಿ ಹೋಲಕ್ಕೆ ಹೋಗಿದ್ದು ನಂತರ 07;00 ಗಂಟೆಯಾದರು ಮನೆಗೆ ಬರದೆ ಇದ್ದುದ್ದರಿಂದ ನಮ್ಮ ಮೈದುನನಾದ ಹರಿ ತಂದೆ ತುಕಾರಾಮ ಪವಾರ ಇವರು ನಮ್ಮ ಹೋಲಕ್ಕೆ ಹೋಗಿ ನೊಡಲಾಗಿ ನನ್ನ ಗಂಡ ನಮ್ಮ ಹೋಲ ಸರ್ವೇ ನಂ, 119 ನೇದ್ದರಲ್ಲಿ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ನೇತಾಡುತ್ತಿದ್ದುನ್ನು ನೋಡಿ ಗಾಬರಿಯಾಗಿ ಮನೆಗೆ ಬಂದು ವಿಷಯ ತಿಳಿಸಿದ್ದರಿಂದ ನಾನು ಮತ್ತು, ಹರಿ ಪವಾರ, ನೀಲಕಂಠ ತಂದೆ ಕೀಶನ ರಾಠೋಡ, ಶಂಕರ ತಂದೆ ಲಕ್ಷ್ಮಣ ಆಡೆ, ಮೋಹನ ತಂಧೆ ಗೋಪಿಚಂದ ಪವಾರ, ದಿನೇಶ ತಂದೆ ಖೇರು ರಾಠೋಡ ರವರೆಲ್ಲರೂ ಕೂಡಿಕೊಮಡು ಗಾಬರಿಯಾಗಿ ನಮ್ಮ ಹೋಲಕ್ಕೆ ಹೋಗಿ ನೊಡಲಾಗಿ ಬೇವಿನ ಗಿಡಕ್ಕೆ ನನ್ನ ಗಂಡನು ನೇಣು ಹಾಕಿಕೊಂಡು ನೇತಾಡುತ್ತಿದ್ದನು, ಕಾರಣ ನನ್ನ ಗಂಡನು ಈ ವರ್ಷ ಮಳೆ ಸರಿಯಾಗಿ ಬಂದಿಲ್ಲ ಯಾವದೇ ಬೇಳೆ ಬೇಳೆದಿರುವದಿಲ್ಲ, ಮತ್ತು ಕಬ್ಬು ಸರಿಯಾಗಿ ಇಳುವರಿ ಕೊಟ್ಟಿರುವದಿಲ್ಲ ಮತ್ತು ನಾನು ಮಾಡಿದ ಬ್ಯಾಂಕ & ಇತರರಲ್ಲಿ ಸಾಲ ಹೇಗೆ ತಿರಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಜೀವನದಲ್ಲಿ ಜಿಗುಪ್ಸೆ ಹೊಂದಿ ಇಂದು ಬೇಳಿಗ್ಗಿನ ಜಾವ 05;45 ಎ.ಎಂ ಸುಮಾರಿಗೆ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀ ಸಿದ್ದನಗೌಡ ತಂದೆ ಅಯ್ಯಪ್ಪಗೌಡ ಪೊಲೀಸ ಬಿರಾದಾರ ಸಾ|| ಜಂಬೇರಹಳ್ಳ ತಾ|| ಜೇವರ್ಗಿ ರವರು  ಸುಮಾರು ತಿಂಗಳಿಂದ ನಮ್ಮ ಅಣ್ಣನ ಮಗನಾದ ಬಸವರಾಜ ತಂದೆ ಮಡಿವಾಳಪ್ಪಗೌಡ ಪೊಲೀಸ ಬಿರಾದಾರ ಈತನು ಆಸ್ತಿ ವಿಷಯದಲ್ಲಿ ಮತ್ತು ಮನೆಯಲ್ಲಿ ಪಾಲಿನ ವಿಷಯದಲ್ಲಿ ತಕಾರು ಮಾಡುತ್ತಾ ನನ್ನೊಂದಿಗೆ ಹಗೆ ಸಾಧಿಸುತ್ತಾ ಬಂದಿರುತ್ತಾನೆ. ದಿನಾಂಕ 16-04-2019 ರಂದು 5;30 ಪಿ.ಎಂ ಕ್ಕೆ ನಾನು ನನ್ನ ಮಗ ಮಡಿವಾಳಪ್ಪಗೌಡ ಮತ್ತು ನನ್ನ ಸೊಸೆ ನಿರ್ಮಲಾ ರವರು ಕೂಡಿ ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳತಿದ್ದೆವು, ಅದೇ ಸಮಯಕ್ಕೆ ನಮ್ಮ ಅಣ್ಣನ ಮಗ ಬಸವರಾಜ ಇವನು ಕೈಯಲ್ಲಿ ಕೊಡಲಿ ಸಮೇತ ಮುಳ್ಳಿನ ಕಂಟಿಗಳನ್ನು ಹಿಡಿದುಕೋಂಡು ನಮ್ಮ ಮನೆಗೆ ಬಂದು ಏ ಸೂಳಿ ಮಕ್ಕಳ್ಯಾ ನಿಮ್ಮ ಮನೆಯಲ್ಲಿ ನನಗ ಇನ್ನು ಪಾಲು ಬರಬೇಕು, ನೀವು ಕೊಡುತ್ತಿಲ್ಲಾ, ಅದಕ್ಕೆ ಇವತ್ತ ನಿಮ್ಮ ಮನೆಯಲ್ಲಿ ಮುಳ್ಳು ಕಂಟಿ ಹಾಕಿ ನಿಮಗೆಲ್ಲರಿಗು ಕೊಡಲಿಯಿಂದ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಮುಳ್ಳಕಂಟಿಗಳು ನಮ್ಮ ಮನೆಯಲ್ಲಿ ಹಾಕಿದನು, ನಂತರ ನಾನು ಈತರಹ ಯಾಕ ಮಾಡಲಾಕತ್ತಿ ಅಂತಾ ಕೇಳಿದ್ದಕ್ಕೆ ನನಗೆ ತಡೆದು ನಿಲ್ಲಿಸಿ, ಏ ರಂಡಿ ಮಗನೆ ಈ ಮನೆಯಲ್ಲಿ ನನಗೆ ಪಾಲು ಬರುತ್ತದೆ ಅಂತಾ ಹೇಳಿದರು ನನಗೆ ಪಾಲು ಕೊಡುತ್ತಿಲ್ಲಾ, ಇವತ್ತ ನಿನಗ ಸಾಯಿಸೆ ಬಿಡುತ್ತೇನೆ ಅಂತಾ ಅಂದು ತನ್ನ ಕೈಯಲ್ಲಿದ್ದ ಕೊಡಲಿಯನ್ನು ಬೀಸಿದನು, ಆಗ ನಾನು ನೆಲಕ್ಕೆ ಕುಳಿತುಕೊಂಡೆನು, ಇಲ್ಲದಿದ್ದರೆ ನನ್ನ ತಲೆ ಕತ್ತರಿಸುತ್ತಿತ್ತು, ನಂತರ ನಾನು ಅಲ್ಲಿಂದ ಓಡಿ ಹೋಗುತ್ತಿದ್ದಾಗ, ಬಸವರಾಜ ಇವನು ಕೊಡಲಿ ತೆಗೆದುಕೋಂಡು ನನಗೆ ಸಾಯಿಸಲು ಬೆನ್ನು ಹತ್ತಿದ್ದನು, ನಂತರ ನಮ್ಮೂರ ಶಿವಪುತ್ರಪ್ಪ ತಂದೆ ಗುರಪ್ಪ ಅರಳಗುಂಡಗಿ, ರೇವಣಸಿದ್ದಪ್ಪಗೌಡ ತಂದೆ ಸಿದ್ರಾಮಪ್ಪಗೌಡ ಪೊಲೀಸ ಬಿರಾದಾರ ರವರು ಬಂದು ಬಸವರಾಜನಿಗೆ ಹಿಡಿದು ಅವನ ಕೈಯಲ್ಲಿದ್ದ ಕೊಡಲಿಯನ್ನು ಕಸಿದುಕೋಂಡು ನಮ್ಮ ಮನೆಯ ಮುಂದೆ ಬಿಸಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ:15.04.2019 ರಂದು ರಾತ್ರಿ 10 ಗಂಟೆಯ ಸೂಮಾರಿಗೆ ಸಿರನೂರ ಗ್ರಾಮದ ಹತ್ತೀರ ಇರುವ ವೆಂಕೇಶ್ವರ ಪ್ಲಾಜಾ ರೆಸ್ಟೊರೆಂಟ ಹತ್ತೀರ ರಾಜಅಹ್ಮದ ಹುಸೇನಿ ಕೋಗನೂರ ಸಾ ಬೈರಮಡಗಿ ಇವನು ಶ್ರೀ ಮಲ್ಲಿ ನಾಥ ತಂದೆ ಲಿಂಗಣ್ಣಾ ಅಂಕಲಗಿ ಸಾ : ಬೈರಮಡಗಿ  ಇವರಿಗೆ ಹಣ ಕೋಡು ಅಂತಾ ಹೇಳಿ ವಿನಾಕಾರಣ ಜಗಳ ತೆಗೆದು ಕೈಯಿಂದ ಕಲ್ಲಿನಿಂದ ಹೋಡೆಬಡೆ ಮಾಡಿ ಭಾರಿ ಗಾಯವುಂಟು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಸುನೀಲ ತಂದೆ ವಸಂತ ಕಲಕುಟಗಿ ಸಾಃ ಭೂಸನೂರ ಗ್ರಾಮ, ತಾಃ ಆಳಂದ ರವರು ಮತ್ತು ನನ್ನ ತಾಯಿಯಾದ ಮಲ್ಲಮ್ಮ ಇಬ್ಬರೂ ಕೂಡಿಕೊಂಡು ತೆಲ್ಲೂರ ಗ್ರಾಮಕ್ಕೆ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ತೆಲ್ಲೂರದಿಂದ ನಮ್ಮೂರಿಗೆ ನಾನು ಮತ್ತು ನನ್ನ ತಾಯಿ ಕೂಡಿಕೊಂಡು ದಿನಾಂಕ 16/04/2019 ರಂದು ಖಾಸಗಿ ಜೀಪನಲ್ಲಿ ಬಂದು ನಮ್ಮೂರಿನ ಬಸ ನಿಲ್ದಾಣದಲ್ಲಿ ಇಳಿದು ಬಸ ನಿಲ್ದಾಣದ ಮುಂದೆ ರೋಡಿನ ಪಕ್ಕದಲ್ಲಿ ಮಾತನಾಡುತ್ತಾ ನಿಂತಾಗ ಮಧ್ಯಾಹ್ನ 01.30 ಪಿ.ಎಮ ಸುಮಾರು ನಮ್ಮೂರಿನ ಬಾಷಾಸಾಬ ತಂದೆ ನಜೀರ ಕರ್ಜಗಿ ಮತ್ತು ರಾಜೋಳ ಗ್ರಾಮದ ಆತನ ಸಂಭಂಧಿಕ ಹೆಸರು ಗೊತ್ತಿಲ್ಲ ಇಬ್ಬರೂ ಕೂಡಿಕೊಂಡು ಒಂದು ಮೋಟಾರ ಸೈಕಲ ಮೇಲೆ ಜೋರಾಗಿ ಬಂದು ನನ್ನ ತಾಯಿಯಾದ ಮಲ್ಲಮ್ಮ ಇವಳಿಗೆ ಬೈಕ ಹತ್ತಿ ಸವರಿಕೊಂಡು ಮುಂದೆ ಹೋಗಿದ್ದು ಅದಕ್ಕೆ ನಾನು ಬಾಷಾಸಾಬನಿಗೆ ಮೊಟಾರ ಸೈಕಲ ಸಾವಕಾಸ ನಡೆಸು ನಮ್ಮ ತಾಯಿಗೆ ಸವರಿಕೊಂಡು ಯಾಕ ಹೊಗಿದ್ದಿ ಅಂತ ಅಂದಾಗ ಏ ಭೋಸಡಿ ಮಗನಾ ಸುನೀಲ್ಯಾ ವಡ್ಡರ ಸೂಳೆ ಮಗನೆ ನಿಮ್ಮದು ಊರಾಗ ಬಹಳ ಆಗದ ಅಂತ ಜಾತಿ ಎತ್ತಿ ಬೈದು ಬೈಕ ಅಲ್ಲಿಯೆ ನಿಲ್ಲಿಸಿ ಸ್ವಲ್ಪ ಮುಂದೆ ಹೋಗಿ ಒಂದು ಕಬ್ಬಿಣದ ರಾಡು ತೆಗೆದುಕೊಂಡು ಬಂದನು ಆಗ ಬಾಷಾಸಾಬನ ಸಂಗಡ ಇದ್ದವನು ನನ್ನ ಎರಡು ಕೈಗಳನ್ನು ಹಿಡಿದನು ಬಾಷಾಸಾಬನು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಎಡ ತಲೆಯ ಮೇಲೆ ಹೋಡೆದು ಭಾರಿ ರಕ್ತಗಾಯಪಡಿಸಿದನು, ನಾನು ಕೆಳಗಡೆ ಬಿದ್ದಾಗ ಇಬ್ಬರೂ ಕೂಡಿಕೊಂಡು ಕಾಲಿನಿಂದ ಹೊಟ್ಟೆ, ಬೆನ್ನ ಮೇಲೆ ಕಾಲಿನಿಂದ ಒದ್ದರು ನನ್ನ ತಾಯಿಯು ಬಿಡಸಲು ಬಂದಾಗ ಏ ರಂಡಿ ಮಲ್ಲಿ ನೀನು ಬಂದರೆ ನಿನಗೂ ಕೂಡ ಖಲಾಸ ಮಾಡುತ್ತೇವೆ ಅಂತ ಬೈದು ಜೀವ ಭಯಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, April 16, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸಂಚಾರಿ ಠಾಣೆ 1 : ದಿನಾಂಕ 15.04.2019 ರಂದು ಸಾಯಂಕಾಲ 7-45 ಗಂಟೆ ಸುಮಾರಿಗೆ ಮೃತ ಮಲ್ಲಣ್ಣಾ ಇತನು ಕಲಬುರಗಿ ಜಿಲ್ಲಾ ಸರ್ಕಾರಿ  ಆಸ್ಪತ್ರೆಯಿಂದ ಆಸ್ಪತ್ರೆ ಎದುರುಗಡೆ ಬರುವ ಚಹಾ ಬಂಡಿ ಹೊಟೇಲನಲ್ಲಿ ಚಹಾ ಕುಡಿಯವ ಸಂಬಂದ ನಡೆದುಕೊಂಡು ಬಂದು ಚಹಾ ನೀರು ಕೂಡಿದು ನಡೆದುಕೊಂಡು ವಾಪಸ್ಸ ಜಿಲ್ಲಾ ಸಕರ್ಾರಿ ಆಸ್ಪತ್ರೆ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತೀರುವಾಗ ಕಾರ ನಂಬರ ಕೆಎ-32/ಎನ್-3994 ನೇದ್ದರ ಸವಾರಳು ಜಿ.ಜಿ.ಹೆಚ್. ಸರ್ಕಲ ಕ್ರಾಸ ಕಡೆಯಿಂದ  ಆರ.ಟಿ.ಓ ಕ್ರಾಸ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಮಲ್ಲಣ್ಣಾ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಮಲ್ಲಣ್ಣಾ ಇವರಿಗೆ ಉಪಚಾರ ಕುರಿತು ಒಂದು ಅಂಬುಲೇನ್ಸ ವಾಹನದಲ್ಲಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಾತ್ರಿ 8-30 ಗಂಟೆಗೆ ವೈದ್ಯರಿಗೆ ತೊರಿಸಲು ವೈದ್ಯರು ಆಸ್ಪತ್ರೆಗೆ ಬರುವದಕ್ಕಿಂತ ಮುಂಚಿತವಾಗಿ ಮೃತಪಟ್ಟಿದ್ದು ಇರುತ್ತದೆ ಅಂತಾ ತಿಳಿಸಿದ್ದು ರಸ್ತೆ ಅಪಘಾತದಲ್ಲಿ ಭಾರಿಗಾಯ ಹೊಂದಿದ್ದ ಮಲ್ಲಣ್ಣಾ ಇವರು ಸಾಯಂಕಾಲ 7-45 ಗಂಟೆಯಿಂದ ರಾತ್ರಿ 8-30 ಗಂಟೆಯ ಮದ್ಯದ ಅವಧಿಯಲ್ಲಿ ಅಪಘಾತ ಸ್ಥಳದಿಂದ ಬಸವೇಶ್ವರ ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯ ಅಂಬುಲೇನ್ಸ ವಾಹನದಲ್ಲಿ ಮೃತಪಟ್ಟಿದ್ದು ಇರುತ್ತದೆ.  ಅಂತಾ ಶ್ರೀ ಬಾಬುರಾವ ತಂದೆ ಸಿದ್ದಣ್ಣ ಪೂಜಾರಿ  ಸಾ: ಮಂದರವಾಡ  ತಾ: ಜೇವರಗಿ ಹಾ.ವ. ಗುಮ್ಮಜ ಹತ್ತೀರ ಬಸವೇಶ್ವರ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಮಹ್ಮದ ಆವೇಜ ತಂದೆ ಮಹ್ಮದ ಮಗದುಮ್ ಜುನೈದಿ ಸಾ: ಶೇಖರೋಜಾ ಕಲಬುರಗಿ ರವರು ದಿನಾಂಕ 14-04-2019 ರಂದು ರಾತ್ರಿ ನಮ್ಮ ಓಣಿಯ ಶಹಾದಾಬ ತಂದೆ ಸೈಯ್ಯದ ಜಾಫರ ಈತನಿಗೆ ಸಮಾಜದಲ್ಲಿ ಸರಿಯಾಗಿ ಇರಬೇಕು ಕೆಟ್ಟವರ ಸಂಗಡ ರಾತ್ರಿ ವೇಳೆಯಲ್ಲಿ ತಿರುಗಾಡ ಬಾರದು ಎಂದು ಬುದ್ದಿ ವಾದ ಹೇಳಿದ್ದು ಆಗ ಅವನು ಎಲ್ಲಿಯೂ ತಿರುಗಾಡುವುದಿಲ್ಲ ಮತ್ತು ಕೆಟ್ಟವರ ಸಂಗಡ ಮಾತಾಡುವುದಿಲ್ಲ ಅಂತಾ ಹೇಳಿದ್ದು ಆಗ ನಾನು ಅವನಲ್ಲಿದ್ದ ಚಿಕ್ಕದಾದ ಮೊಬೈಲ ಫೋನ ತೆಗೆದುಕೊಂಡು ಪರಿಶೀಲಿಸಿ ನೋಡಕಲಾಗಿ ಅದರಲ್ಲಿ ಕೆಲವು ದುಶ್ಚಟ ಉಳ್ಳ ಹುಡುಗನೊಂದಿಗೆ ಮಾತಾಡಿದ್ದು ಕಂಡು ಬಂದಿರುವುದರಿಂದ ನನಗೆ ಸುಳ್ಳು ಹೇಳುತ್ತಿಯಾ ಅಂತಾ ಸಿಟ್ಟು ಬಂದಿರುವುದರಿಂದ ಅವನ ಮೊಬೈಲ ಫೋನನ್ನು ಗೋಡೆಗೆ ಹೊಡೆದಿರುತ್ತೇನೆ ನಂತರ ಅವನಿಗೆ ಹೊಸ ಮೊಬೈಲ ಕೊಡಿಸುತ್ತೇನೆ ಅಂತಾ ಹೇಳಿರುತ್ತೇನೆ ಅವನು ನನ್ನ ಮೇಲೆ ಸಿಟ್ಟಿಗೆ ಬಂದು ಮಗನೇ ನಿನಗೆ ಒಂದು ದಿವಸ ನೋಡಿಯೇ ಬಿಡುತ್ತೇನೆ ಅಂತಾ ಹೇಳಿ ಸಿಟ್ಟಿನಿಂದ ಅವನ ತನ್ನ ಮನೆಗೆ ಹೋಗಿದ್ದು ನಾನು ಸಹ ನಮ್ಮ ಮನೆಗೆ ಹೋಗಿರುತ್ತೇನೆ. ದಿನಾಂಕ 15.04.2019 ರಂದು ಸಾಯಂಕಾಲ ನಾನು ಖಾದ್ರಿ ಚೌಕ ಹತ್ತಿರದಲ್ಲಿರುವ ಬಾಬಾ ಪಾನಶಾಪ ಹತ್ತಿರ ಇದ್ದಾಗ 1) ಶಹಾದಾಬ ತಂದೆ ಸೈಯ್ಯದ ಜಾಫರ 2) ಶಾರೂಖ ತಂದೆ ಸೈಯ್ಯದ ಜಾಫರ 3) ಸೋಹೇಲ ತಂದೆ ಸೈಯ್ಯದ ಜಾಫರ 4) ಸೈಯ್ಯದ ಜಾಫರ ತಂದೆ ಹಮ್ಮೀದ 5) ಹಮ್ಮೀದ ಸಾ: ಎಲ್ಲರೂ ಶೇಖ ರೋಜಾ ಕಲಬುರಗಿ ಇವರೆಲ್ಲರೂ ಕೈಯಲ್ಲಿ ಚಾಕೂಗಳನ್ನು ಹಿಡಿದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಹತ್ತಿರದಲ್ಲಿ ಬಂದವರೆ ನನಗೆ ಏ ಬೋಸಡಿ ಮಗನೆ ಈ ಬೋಸಡಿ ಮಗನಿಗೆ ಬಹಳ ಸೊಕ್ಕು ಬಂದಿದೆ ಇವನು ವಿನಾಃ ಕಾರಣವಾಗಿ ನಮ್ಮ ಫೋನ ಒಡೆದಿರುತ್ತಾನೆ ಇವತ್ತು ಇವನಿಗೆ ಮುಗಿಸಿಯೇ ಬಿಡೋಣಾ ಅಂತಾ ಅವರಲ್ಲಿ ಶಾರೂಖ ಮತ್ತು ಸೊಹೇಲ ಇವರು ನನಗೆ ಒತ್ತಿ ಹಿಡಿದುಕೊಂಡರು ಶಹಾದಾಬ ತಂದೆ ಸೈಯ್ಯದ ಜಾಫರ ಈತನು ತನ್ನ ಕೈಯಲ್ಲಿ ಇದ್ದ ಚಾಕುವಿನಿಂದ ಒಮ್ಮೇಲೆ ನನ್ನ ಬಲ ಎದೆಗೆ ಜೋರಾಗಿ ತಿವಿದು ಭಾರಿ ರಕ್ತಗಾಯ ಪಡಿಸಿದನು ಆಗನಾನು ಸತ್ತೆನೆಪ್ಪ ಅಂತಾ ಕುಸಿದು ಕೆಳಗೆ ಬಿದ್ದಾಗ ಶಾರುಖ ಮತ್ತು ಸೋಹೆಲ ಇವರು ಕೈಯಿಂದ ಮತ್ತು ಕಾಲಿನಿಂದ ಬೆನ್ನಿಗೆ ಮತ್ತು ಹೊಟ್ಟೆಗೆ ಹೋಡೆದು ಗುಪ್ತಗಾಯಗಳು ಮಾಡಿರುತ್ತಾರೆ ಇದೇ ಸಮಯದಲ್ಲಿ ಸೈಯ್ಯದ ಜಾಫರ ಮತ್ತು ಹಮ್ಮೀದ ಇವರುಗಳು ಹೊಡೆಯಿರಿ ರಂಡಿ ಮಗನಿಗೆ ಖಲ್ಲಾಸ ಮಾಡಿರಿ ಅಂತಾ ಕುಮ್ಮಕ್ಕು ನೀಡುತ್ತಿದ್ದರು ಆಗ ಅಲ್ಲಿಯೇ ಹಾಜರಿದ್ದ ಪರಿಚಯದ ಅರ್ಶದ ತಂದೆ ಮೈನುದ್ದೀನ ಮತ್ತು ಅಕಬರ ತಂದೆ ಮೋದಿನ ಮುಲ್ಲಾ ಇವರು ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ ಇದೇ ಸಮಯದಲ್ಲಿ ನಜೀಬ ಬಾಬಾ ಅವರು ನನಗೆ ಅವರ ಮೋಟರ ಸೈಕಲ ಮೇಲೆ ಡೆಕ್ಕನ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ಸಧ್ಯ ನಾನು ಉಪಚಾರ ಪಡೆಯುತ್ತಿದ್ದೆನೆ .ಕಾರಣ ನನಗೆ ಶಹಾದಾಬ ತಂದೆ ಸೈಯ್ಯದ ಜಾಪರ ಹಾಗೂ ಇತರರು ಕೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಚಾಕುಗಳನ್ನು ಹಿಡಿದುಕೊಂಡು ಬಂದು ನನಗೆ ಚಾಕುವಿನಿಂದ ತಿವಿದು ಕೊಲೆಮಾಡಲು ಪ್ರಯತ್ನ ಮಾಡಿದವರ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀಮತಿ ಮಾನಮ್ಮ ಗಂಡ ಸದಾಶಿವ ಚಿಗರಾಳ ಸಾ|| ಹಂಗರಗಾ(ಕೆ) ತಾ|| ಜೇವರ್ಗಿ ರವರು ರವರ ಮಗ ಭೀಮರಾಯನಿಗೆ ನಮ್ಮೂರ ಬಸವಂತ್ರಾಯ ನಡುವಿನಮನಿ ರವರ ಮಗಳಾದ ಪಾರ್ವತಿ ಇವಳೊಂದಿಗೆ ಮದುವೆಮಾಡಿರುತ್ತೇವೆ, ಸದ್ಯ ನನ್ನ ಮಗನಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ, ನಮ್ಮೂರ ಸಿಮಾಂತರದಲ್ಲಿ ನಮ್ಮ ಹಿರಿಯರ 11 ಎಕರೆ ಜಮೀನು ಇರುತ್ತದೆ, ನನ್ನ ಮಗ ಸದ್ಯ ನಮ್ಮೊಂದಿಗೆ ಬೇರೆಯಾಗಿ ನಮ್ಮೂರಲ್ಲೇ ಮನೆ ಕಟ್ಟಿಕೊಂಡು ಸಂಸಾರ ಮಾಡುತ್ತಿರುತ್ತಾನೆ, ಅವನ ಉಪಜೀವನ ಸಲುವಾಗಿ 3 ಎಕರೆ ಜಮೀನು ಕೊಟ್ಟಿರುತ್ತೇನೆ, ನನ್ನ ಸೊಸೆ ಪಾರ್ವತಿ ಇವಳು ಸುಮಾರು ಸಲ ನಮಗೆ ಇನ್ನು 3 ಎಕರೆ ಜಮೀನು ಬರುತ್ತದೆ ಅಂತಾ ನನ್ನೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾಳೆ, ಅದರಂತೆ ನನ್ನ ಮಗ ಭೀಮರಾಯನಿಗು ಸಹ ಆಸ್ತಿ ಸಲುವಾಗಿ ದಿನಾಲು ಕಿರುಕುಳ ಕೊಡುತ್ತಾ ಬಂದಿರುತ್ತಾಳೆ, ಈ ಬಗ್ಗೆ ನನ್ನ ಮಗ ಆಗಾಗಾ ನನ್ನ ಮುಂದೆ ಹೇಳುತ್ತಿದ್ದನು, ದಿನಾಂಕ; 12-04-2019 ರಂದು ಬೆಳಿಗ್ಗೆ 09;00 ಗಂಟೆಗೆ ನನ್ನ ಸೊಸೆ ಪಾರ್ವತಿ ಇವಳು ಮನೆಗೆ ಬಂದು ನನ್ನ ಗಂಡನಿಗೆ ಬರಬೇಕಾದ ಇನ್ನು 3 ಎಕರೆ ಜಮೀನು ನನಗೆ ಬಿಟ್ಟುಕೊಡು ಇಲ್ಲಾ ಅಂದರೆ ನಿನಗೆ ಮತ್ತು ನನ್ನ ಗಂಡನಿಗೆ ಖಲಾಸ ಮಾಡಿ ಆಸ್ತಿ ತೆಗೆದುಕೊಳ್ಳುತ್ತೇನೆ ಅಂತಾ ಹೇಳಿ ಹೋದಳು, ನಂತರ ರಾತ್ರಿ ನನ್ನ ಮಗ ಭೀಮರಾಯನಿಗೆ ಅವಳ ಹೆಂಡತಿ ಮತ್ತು ಅವರ ಮನೆಯವರು ಹೊಡೆಯುತ್ತಿದ್ದಾರೆ ಅಂತಾ ವಿಷಯ ಗೊತ್ತಾಗಿ ನಾನು ನಮ್ಮ ಮಗನ ಮನೆಗೆ ಹೋಗಿ ನೋಡಿದಾಗ ಮನೆಯ ಮುಂದೆ ನನ್ನ ಸೊಸೆ ಪಾರ್ವತಿ ಮತ್ತು ಅವರ ತಾಯಿ ಮಹಾದೇವಿ ಗಂಡ ಬಸವಂತ್ರಾಯ ಹಾಗು ಅವರ ಅಣ್ಣ ಸುಬ್ಬಣ್ಣ ತಂದೆ ಬಸವಂತ್ರಾಯ ಹಿಗೆಲ್ಲರೂ ಕೂಡಿ ನನ್ನ ಮಗನಿಗೆ ಸುತ್ತುಗಟ್ಟಿ ತಡೆದು ಏ ರಂಡಿ ಮಗನೆ ನಿಮ್ಮ ತಾಯಿ ಕಡೆಯಿಂದ ಇನ್ನು 3 ಎಕರೆ ಆಸ್ತಿ ತೆಗೆದುಕೊಂಡು ಬಾ ಅಂತಾ ಅಂದು ಸುಬ್ಬಣ್ಣ ಇವನು ಬಡಿಗೆಯಿಂದ ನನ್ನ ಮಗನ ಬಲಗಾಲಿನ ಮೇಲೆ ಹೊಡೆದನು, ಆಗ ನನ್ನ ಮಗ ಕೆಳಗೆ ಬಿದ್ದಾಗ ಮತ್ತೆ ಅದೇ ಬಡಿಗೆಯಿಂದ ಎರಡು ಮೊಳಕೈಗಳಿಗೆ ಹೊಡೆದನು, ನಂತರ  ಪಾರ್ವತಿ ಇವಳು ಇವತ್ತ ನನ್ನ ಹಾಟ್ಯಾನ ಮಗನಿಗಿ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಿಲ್ಲಿದ್ದ ಕಬ್ಬಿಣದ ಊದಗೊಳದಿಂದ ನನ್ನ ಮಗನ ಎಡ ಮೆಲಕಿನ ಹತ್ತಿರ ಜೋರಾಗಿ ಹೊಡೆದು ಭಾರಿ ಗುಪ್ತ ಪೆಟ್ಟು ಪಡಿಸಿದಳು, ಮಹಾದೇವಿ ಇವಳು ಇವನಿಗೆ ಹೊಡೆದು ಖಲಾಸ ಮಾಡಿದರೆ ಎಲ್ಲಾ ಆಸ್ತಿ ನಮಗೆ ಬರುತ್ತದೆ ಅಂತಾ ಅನ್ನುತ್ತಿದ್ದಾಗ ನಾನು ಮತ್ತು ನಮ್ಮೂರ  ರೆಹಮಾನ ತಂದೆ ಮಾಬುಸಾಬ ಚೌದರಿ, ರಾಜಶೇಖರ ತಂದೆ ಹಣಮಂತ್ರಾಯ ಪೂಜಾರಿ ರವರೆಲ್ಲರೂ ಕೂಡಿ ಬಿಡಿಸಿಕೊಂಡು ನನ್ನ ಮಗನಿಗೆ ನಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತೇವೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 27/03/2019 ರಿಂದ 04/04/2019 ರ ಮದ್ಯದ ಅವಧಿಯಲ್ಲಿ ಸೈಯದ್ ಚಿಂಚೋಳ್ಳಿ ಗ್ರಾಮ ಸರ್ವೇ ನಂ 50/02 ರಲ್ಲಿ ಹಾಕಿರುವ 11 ಲೈಟಿನ ಕಂಬಗಳ ಕರೆಂಟ್ ವಾಯರ್ ಅ.ಕಿ.1,25,000/-ರೂ ನೆದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಾಹುಲದೇವ ಭಗವಾಲೆ  ಜೂನಿಯರ ಇಂಜನೀಯರ ಜಸ್ಕಾಂ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶರಣಬಸವಾ ಕಾಂಟೆಪ್ಪಾಪೂಜಾರಿ ಸಾ : ಬೀಮಳ್ಳಿ ತಾ : ಕಲಬುರಗಿ  ರವರ ತಂದೆಯಾದ ಕಂಟೆಪ್ಪಾ ವಯಾ : 45 ವರ್ಷ ರವರು ದಿನಾಂಕ ಮೇ 2015 ರಂದು ನಮ್ಮ  ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ ಇಷ್ಟು ದಿನ ಎಲ್ಲಾ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, April 14, 2019

KALABURAGI DISTRICT REPORTED CRIMES

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಉಸ್ಮಾನ ತಂದೆ ಹುಸೇನಸಾಬ ಮುಜಾವರ ಸಾ: ಮಹೀಬೂಬಸುಬಾನಿ ಚಿಲ್ಲಾ ಝಂಡಾಗಲ್ಲಿ ಎಮ್.ಎಸ್.ಕೆ.ಮೀಲ್ ಕಲಬುರಗಿ ರವರು  ದಿನಾಂಕ 11.04.2019 ರಂದು ಕಲಬುರಗಿ ಲೊಕಸಭಾ ಕ್ಷೇತ್ರ-5 ನೇದ್ದರ ಕಾಂಗ್ರೇಸ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೇ ರವರ ಪರವಾಗಿ ಚುನಾವಣೆ ಪ್ರಚಾರ ಕುರಿತು ನನ್ನ ಅಟೊ ನಂ ಕೆಎ 32 ಸಿ 2486 ನೇದ್ದಕ್ಕೆ ಮೈಕ ಸಟ್ ಮುಂಖಾತ ಪ್ರಚಾರ ಮಾಡಲು ಚುನಾವಣಾಧಿಕಾರಿಗಳು ಪರವಾನಿಗೆ ನೀಡಿದ್ದು ಅದರಂತೆ ಇಂದು ದಿನಾಂಕ 13.04.2019 ರಂದು ಬೆಳ್ಳಿಗ್ಗೆ 11:00 ಗಂಟೆಯಿಂದ ಕಲಬುರಗಿ ಲೊಕಸಭಾ ಕ್ಷೇತ್ರ-5 ನೇದ್ದರ ಕಾಂಗ್ರೇಸ್ಸ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೇ ರವರ ಪರವಾಗಿ ಚುನಾವಣೆ ಪ್ರಚಾರ ಕುರಿತು ನನ್ನ ಅಟೊ ನಂ ಕೆಎ 32 ಸಿ 2486 ನೇದಕ್ಕೆ ಮೈನ ಸಟ್ ಅಳವಡಿಸಿ ಕಾಂಗ್ರೇಸ್ ಪಕ್ಷದ ದ್ವಜವನ್ನು ಅಟೊಕ್ಕೆ ಕಟ್ಟಿ, ಕಾಂಗ್ರೇಸ್ ಪಕ್ಷದ ಬ್ಯಾನರನ್ನು ಅಟೊಕ್ಕೆ ಸುತ್ತುವರೆದು ಕಟ್ಟಿ ಬೆಳ್ಳಿಗ್ಗೆ 11:00 ಗಂಟಗೆ ಯಿಂದ ಆಡಿಯೋ ಮುಖಾಂತರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಅಂತ ಪ್ರಚಾರ ಮಾಡುತ್ತಾ ಸುಪರ ಮಾರ್ಕೇಟ, ಖರ್ಗೇ ಪೆಟ್ರೋಲ ಪಂಪ, ಮಹೀಬೂಬ ನಗರ, ಹುಮನಾಬಾದ ರಿಂಗ್ ರೋಡ, ಮುಸ್ಲಿಂ ಸಂಘ, ಆಳಂದ ಚೆಕ್ಕ ಪೊಸ್ಟ ಮಾರ್ಗವಾಗಿ ಮಧ್ಯಾನ 3:00 ಗಂಟೆಯ ಸುಮಾರಿಗೆ ದೇವಿ ನಗರ ಕಮಾನ ಹತ್ತಿರ ಬಂದಾಗ ಅಲ್ಲಿ ಸಂಚಾರಿ ದಟ್ಟಣೆಯಾಗಿದ್ದು ಸಂಚಾರಿ ದಟ್ಟಣೆಯಿಂದ, ಸಂಚಾರಿ ದಟ್ಟಣೆ ಇದ್ದ ಪ್ರಯುಕ್ತ ದೇವಿ ನಗರ ಕಮಾನದಿಂದ ಖಾದ್ರಿ ಚೌಕ ಕಡೆಗೆ ಹೋಗುವ ಕುರಿತು ಜಬ್ಬಾರ ಪೇಟ್ರೋಲ ಪಂಪ ಹತ್ತಿರ ರಸ್ತೆಯ ಮೇಲೆ ಮಧ್ಯಾನ 3:15 ಗಂಟೆಯ ಸುಮಾರಿಗೆ ನನ್ನ ಅಟೊ ತೆಗೆದುಕೊಂಡು ಆಡಿಯೋ ಮುಖಾಂತರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಅಂತ ಪ್ರಚಾರ ಮಾಡುತ್ತಾ ಮುಂದೆ ಹೊಗುತ್ತಿದ್ದಾಗ ಜಬ್ಬಾರ ಪೇಟ್ರೊಲ ಪಂಪ ಎದರುಗಡೆ ರಸ್ತೆಯ ಮೇಲೆ ಸುಮಾರು 15-20 ಜನರು ಮೊದಿ, ಮೊದಿ ಅಂತ ಕೂಗುತ್ತಾ ನನ್ನ ಅಟೊದ ಹತ್ತಿರ ಬಂದು ಕಾಂಗ್ರೇಸ ಪಕ್ಷದ ಪ್ರಚಾರ ಬಂದು ಮಾಡು ಅಂತ ಹೇಳಿ ನನ್ನ ಅಟೊದ ಗ್ಲಾಸ ಒಡೆದು, ಅದರಲ್ಲಿ ಕೆಲವರು ನನಗೆ ಅಟೊದಿಂದ ಹೊರಗೆ ಎಳೆದುಕೊಂಡು ತಮ್ಮ ಕೈಗಳಿಂದ ನನ್ನ ಮುಖದ ಮೇಲೆ ಮೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ನಂತರ ಸದರಿಯವರು ನನ್ನ ಅಟೊಕ್ಕೆ ಕಟ್ಟಿದ ಕಾಂಗ್ರೇಸ್ ಪಕ್ಷದ ಬ್ಯಾನರ ಹರಿದು ಹಾಕಿದ್ದು, ಅಟೊಕ್ಕೆ ಕಟ್ಟಿದ ಕಾಂಗ್ರೇಸ್ ಪಕ್ಷದ ದ್ವಜಾ ಕಿತ್ತು ಹಾಕಿದ್ದು, ಮತ್ತು ಪ್ರಚಾರ ಕುರಿತು ಅಟೊಕ್ಕೆ ಕಟ್ಟಿದ ಬುಂಗಾ (ಸ್ಪೀಕರ) ಕಿತ್ತು ಹಾಕಿ ಬುಂಗಾ ನೇಲಕ್ಕೆ ಹೊಡೆದು ಅದರ ಯುನಿಟ ಮುರಿದು ಅಟೊದ ಗ್ಲಾಸ, ಸ್ಪೀಕರ ಬುಂಗಾ ಒಡೆದು ಅಂದಾಜ 9,000/-ರೂ ನನಗೆ ಹಾನಿ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಮೌಲಾ ತಂದೆ ಗುಡುಸಾಬ ಮುತಾವಲ್ಲಿ ಸಾ: ಮೌಲಾಲಿ ದರ್ಗಾ ಶೇಟ್ಟಿ ಕಾಂಪ್ಲೇಕ್ಸ್ ಹತ್ತಿರ ಆಳಂದ ರೋಡ ಕಲಬುರಗಿ ರವರು ದಿನಾಂಕ: 13/04/2019 ರಂದು 4-00 ಪಿ.ಎಂ ಸುಮಾರಿಗೆ ನಾನು ಶೇಟ್ಟೆ ಕಾಂಪ್ಲೇಕ್ಸ್ ಹತ್ತಿರ ನಿಂತಿರುವಾಗ ನನ್ನ ಗೆಳೆಯನಾದ ಸೈಯದ ತಂದೆ ಮಹ್ಮದ ಸಲೀಂ ಮಗರಿಬಸಾಬ ಇತನು ತನ್ನ ಮೋಟಾರ ಸೈಕಲ ನಂ. ಕೆಎ-39 ಕ್ಯೂ-7309 ನೇದ್ದನ್ನು ತೆಗೆದುಕೊಂಡು ನನ್ನ ಹತ್ತಿರ ಬಂದನು. ಆಗ ನಾನು ಸೈಯದ ಇತನಿಗೆ ನನ್ನ ಗೆಳೆಯನಾದ ವೇಂಕಟ ಇತನು ಗದಲೇಗಾಂವ ಕಲ್ಯಾಣ ಮಂಟಪದ ಹತ್ತಿರ ಇರುತ್ತಾನೆ. ಅವನ ಹತ್ತಿರ ಹೋಗಿ ಬರೋಣ ಅಂತಾ ಹೇಳಿದೆನು. ಆಗ ಸೈಯದ ಮೋಟಾರ ಸೈಕಲ ಚಾಲು ಮಾಡಿದಾಗ ಅವನ ಹಿಂದೆ ನಾನು ಕುಳಿಕೊಂಡು ಗದಲೇಗಾಂವ ಕಲ್ಯಾಣ ಮಂಟಪ ಹತ್ತಿರ ಹೋದೆವು. ಅಲ್ಲಿ ಹೋಗಿ ನೊಡಲು ವೇಂಕಟ ಇತನು ಇರಲಿಲ್ಲ. ಕಲ್ಯಾಣ ಮಂಟಪದ ಹಿಂದಿನ ಗೇಟ ಹತ್ತಿರ 4-15 ಪಿ.ಎಂ ಸುಮಾರಿಗೆ ಹೋಗಿ ನೊಡಲು ಸುಮಾರು 15-20 ಜನರು ಅಲ್ಲಿ ಕುಳಿತುಕೊಂಡಿದ್ದರು. ಆಗ ನಾವು ಅವರಲ್ಲಿ ವೇಕಂಟ ಇತನು  ಕುಳಿತುಕೊಂಡಿರಬಹುದು ಅಂತಾ ಅವರ ಹತ್ತಿರ ಹೋಗಿ ನೊಡಲು ಅಲ್ಲಿ ವೇಂಕಟ ಇರಲಿಲ್ಲ. ಆಗ ಆ ಗುಂಪಿನಲ್ಲಿದ್ದ ಒಬ್ಬನು  ಏ ಬೊಸಡಿ ಮಕ್ಕಳಾ ನಮಗೇನು ದುರುಗುಟ್ಟಿ ನೋಡುತ್ತಿದ್ದಿರಿ  ಅಂತಾ ಅಂದನು. ಆಗ ನಾನು ಯಾಕೆ ಬೈಯುದ್ದಿರಿ ನಮ್ಮ ಸ್ನೇಹಿತ ವೇಂಕಟ ಇತನು ಇದ್ದಾನೆನೋ ಅಂತಾ ನೋಡುತ್ತಿದ್ದೇವೆ ಅಂತಾ ಅಂದಾಗ ಆತನು ನಮಗೆ ಎದುರು ಮಾತನಾಡುತ್ತಿಯಾ ಬೋಸಡಿಕೆ ಅಂತಾ ಅಂದವನೇ ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿ ತೆಗೆದುಕೊಂಡು ನನ್ನ ತಲೆಯ ಹಿಂಬಾಗಕ್ಕೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು. ಅವರಲ್ಲಿದ್ದ ಇನ್ನೊಬ್ಬನು ಜಾಸ್ತಿ ಎದುರು ಮಾತಾಡುತ್ತಿಯಾ ಅಂತಾ ಅಂದು ಕಲ್ಲಿನಿಂದ ನನ್ನ ಬಲಗಾಲ ಮೊಳಕಾಲ ಮೇಲೆ ಹೊಡೆದು ರಕ್ತಗಾಯ ಗೊಳಿಸಿದನು. ಉಳಿದವರೆಲ್ಲ ಬೈಯುತ್ತಾ ಕೈಯಿಂದ ನನ್ನ ಮೈಕೈಗೆ ಹೊಡೆದು ಗುಪ್ತಗಾಯ ಪಡಿಸಿದರು. ನನಗೆ ಹೊಡೆಯುದನ್ನು ಬಿಡಿಸಿಕೊಳ್ಳಲು ಬಂದ ನನ್ನ ಗೆಳೆಯನಾದ ಸೈಯದ ತಂದೆ ಮಹ್ಮದ ಸಲೀಂ ಇತನಿಗೂ ಸಹ ಅವರೆಲ್ಲರೂ ಕೂಡಿ ಕೈಯಿಂದ ಹೊಡೆಬಡೆ ಮಾಡಿದರು. ಆಗ ನಾವು ಚಿರಾಡ ಹತ್ತಿದ್ದಾಗ ನಮಗೆ ಹೊಡೆಯುವುದನ್ನು ಬಿಟ್ಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಚಾವರಂ ಠಾಣೆ : ದಿನಾಂಕ 13-04-2019 ರಂದು 12.30 ಪಿ.ಎಮ್ ಗಂಟೆಗೆ ಶ್ರೀಮತಿ ಶೋಭಾರಾಣಿ ಗಂಡ ಶೇಖರ ಮಂಗಲಿ ಸಾ : ಕುಂಚಾಚರಂ ರವರು  ನೀರನ್ನು ತುಂಬಿಕೊಂಡು ಮನೆಗೆ ಬರುತ್ತಿರುವಾಗ  ರಾಮಲು ತಂದೆ ಪಪಾಯ ಸಂಗಡ ಇನ್ಒಬ್ಬ ಸಾ : ಕೊಂಚಾವರಂ ಕುಡಿಕೊಂಡು ಫಿರ್ಯಾದಿಗೆ  ತಡೆದು ನಿಲ್ಲಿಸಿ ಅವಾಚ್ಯವಾಗಿ ರಂಡಿ ಬೋಸಡಿ ಅಂತಾ ಬೈದು ಕೈಯಿಂದ ಮತ್ತು ಕಾಲಿನ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದನು ಮತ್ತು ಸದರಿಯವಳ ಹೊಟ್ಟೆಗೆ ಹೊಡೆದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕೊಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, April 13, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 2: ದಿನಾಂಕ-12/04/2019 ರಂದು ಬೆಳ್ಳಿಗೆ 8-30 ಗಂಟೆ ಸುಮಾರಿಗೆ ರಾಮ ಮಂದಿರ ದಿಂದ ನಾಗನಹಳ್ಳಿ ಕ್ರಾಸ್ ರಸ್ತೆಯಲ್ಲಿ ಬರುವ ಓಜಾ ಲೇಔಟ್ ಕ್ರಾಸ್ ಹತ್ತಿರ ರೋಡ ಮೇಲೆ ಆರೋಪಿ ಮಹೆಬೂಬ ಈತನು ತನ್ನ ಸೈಕಲ ಮೇಲೆ ಬಿದರಿನ ಬಡಿಗಿಗೆ  ಕೊಯಿತ್ತಾ ಕಟ್ಟಿಕೊಂಡು ನಿರ್ಲಕ್ಷತನದಿಂದ ನಾಗಹಳ್ಳಿ ರೋಡ ಕಡೆಗೆ ಸೈಕಲ್  ತಿರುಗಿಸಿ ರಾಮ ಮಂದಿರ ಕಡೆಯಿಂದ ಮೋಟಾರ ಸೈಕಲ ನಂ ಕೆಎ-32 ಇವ್ಹಿ-0724 ನೇದ್ದನ್ನು ಚಲಾಯಿಸಿಕೊಂಡು ಬರುತ್ತಿದ್ದ ಮೇಘಾ ಇವಳ ಕುತ್ತಿಗೆಗೆ ಕೊಯಿತ್ತಾ ಹತ್ತಿ ಭಾರಿ ರಕ್ತಗಾಯವಾಗಿದ್ದು ಸದರಿಯವಳಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ 8-45 ಗಂಟೆ ಸುಮಾರಿಗೆ ಮೃತಪಟ್ಟಿ ರುತ್ತಾಳೆ. ಸದರ ಘಟನೆಗೆ ಕಾರಣನಾದ ಮಹೆಬೂಬ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ವರೇಶ ತಂದೆ ಚಂದ್ರಕಾಂತ ಪಡಶೆಟ್ಟಿ ಸಾ : ಕರುಣೇಶ್ವರ ಕಾಲೂನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 2 ರಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ 1: ಶ್ರೀಮತಿ ಭಾಗ್ಯಶ್ರೀ @ ಭಾಗ್ಯಲಕ್ಷ್ಮಿ ರವರು ದಿನಾಂಕ 12-04-2019 ರಂದು ಬೆಳಿಗ್ಗೆ 9-15 ಗಂಟೆ ಸುಮಾರಿಗೆ ನನ್ನ ಪರೀಕ್ಷೆಗಳು ಇರುವದರಿಂದ ನನ್ನ ತಂದೆಯಾದ ಮಲ್ಲಿಕಾರ್ಜುನ ಇವರು ನನಗೆ ವಿ.ಜಿ.ವುಮೇನ್ಸ ಕಾಲೇಜಕ್ಕೆ ಬಿಡುವ ಸಲುವಾಗಿ ಮೋಟಾರ ಸೈಕಲ ನಂ ಕೆಎ-32/ಎಕ್ಸ-5758 ನೇದ್ದರ ಹಿಂದುಗಡ ನನಗೆ ಕೂಡಿಸಿಕೊಂಡು ಲಾಲಗೆರಿ ಕ್ರಾಸ ಮುಖಾಂತರವಾಗಿ ಕೋರ್ಟ ಕ್ರಾಸ ಕಡೆಗೆ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಆನಂದ ಹೊಟೇಲ ಕ್ರಾಸ ಹತ್ತೀರ ರೋಡ ಮೇಲೆ ಮೋಟಾರ ಸೈಕಲ ನಂಬರ ಕೆಎ-32/ಇಎಮ್-9417 ನೇದ್ದರ ಸವಾರಳಾದ ಅಕ್ಷತಾ ಇವಳು ರಂಗ ಮಂದಿರ ಕಡೆಯಿಂದ ಎಸ.ಬಿ ಕಾಲೇಜ್ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಅಡ್ಡವಾಗಿ ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ತಂದೆಗೆ ಭಾರಿಗಾಯ ಹಾಗೂ ನನಗೆ ಗಾಯಗೊಳಿಸಿ ತಾನೂ ಗಾಯ ಹೊಂದಿದ್ದು ಸದರಿಯವಳ ಮೇಲೆ ಕಾನುನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಸಿದ್ದಾರೂಡ ತಂದೆ ಶಾಮರಾವ ಪರಸ್ತಿ ಸಾ : ಪಟ್ಟಣ ತಾ:ಜಿ: ಕಲಬುರಗಿ  ರವರು ಹಾಗು ನನ್ನ ಅಕ್ಕಳಾದ ಅಂಬಿಕಾ ಗಂಡ ಶಿವಲಿಂಗಪ್ಪಾ ಬಿರಾದಾರ ಇಬ್ಬರೂ ಕೂಡಿಕೊಂಡು ಮೊಟರ ಸೈಕಲ ನಂಬರ್ ಕೆಎ-16, ಇಇ-5673  ನೆದ್ದರ ಮೇಲೆ ಲಾಡಚಿಂಚೊಳಿ ಜಾತ್ರೆಯ ನಿಮಿತ್ಯ ದಿನಾಂಕ 11/04/2019 ರಂದು ಲಾಡಚಿಂಚೊಳಿ ಗ್ರಾಮಕ್ಕೆ ಹೋಗಿ ದೇವರಿಗೆ ಕಾಯಿ-ಕರ್ಪುರ ಮಾಡಿಕೊಂಡು ಅದೇ ಮೊಟರ್ ಸೈಕಲ ಮೇಲೆ ಲಾಡಚಿಂಚೋಳಿ ಗ್ರಾಮದಿಂದ ನಮ್ಮೂರಿಗೆ ಬರುವಾಗ ಸಾಯಂಕಾಲ ಅಂದಾಜು 0700 ಗಂಟೆಯ ಸುಮಾರಿಗೆ ಲಾಡಚಿಂಚೋಳಿ ಗ್ರಾಮದ ನೀರಿನ ಟ್ಯಾಂಕ ಹತ್ತಿರ ರೋಡಿನ ಮೇಲೆ ಕ್ರೂಸರ್ ನಂ ಕೆಎ-27, ಎಮ್-1655 ನೆದ್ದರ ಚಾಲಕನು ಲಾಡಚಿಂಚೋಳಿ ಕ್ರಾಸ್ ಕಡೆಯಿಂದ ತನ್ನ ವಶದಲ್ಲಿರುವ ಕ್ರೂಜರ್ ವಾಹನವನ್ನು ಅತೀವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೊಟರ್ ಸೈಕಲಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋದನು. ಸದರಿ ಅಪಘಾತದಲ್ಲಿ ನನಗೆ ಬಲಗಾಲಿನ ತೊಡೆ, ಮೋಳಕಾಲಿನ ಹತ್ತಿರ ಹಾಗು ಹಿಂಬಡಿಗೆ ಭಾರಿ ರಕ್ತಗಾಯ ಹಾಗು ಭಾರಿ ಗುಪ್ತಗಾಯಗಳಾಗಿರುತ್ತದೆ. ನನ್ನ ಸಂಗಡ ಇದ್ದ ನನ್ನ ಅಕ್ಕಳಾದ ಅಂಬಿಕಾ ಇವಳಿಗೆ ಬಲಗೈ ಮೊಣಕೈ ಹತ್ತಿರ ಗುಪ್ತಗಾಯ ಹಾಗು ತುಟಿಗೆ ರಕ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಚುಣಾವಣೆ ನೀತಿಸಂಹಿತೆ ಉಲ್ಲಂಘನೆ ಪ್ರಕರಣ :
ನರೋಣಾ ಠಾಣೆ : ದಿನಾಂಕ:12/04/2019 ರಂದು ಬೆಳಿಗ್ಗೆ ಶ್ರೀ.ಪ್ರವೀಣ್ ತಂದೆ ಅಶೋಕ ಕುಮಾರ ಹೇರೂರ, ಸಾ||ಮನೆ ನಂ:2-631 ಸುಂದರ ನಗರ ಸೇಡಂ ರೋಡ್ ಕಲಬುರಗಿ, ಎಫ್.ಎಸ್.ಟಿ ಮುಖ್ಯಸ್ಥರು ಕಮಲಾಪೂರ, ಮಹಾಗಾಂವ ಮತ್ತು ನರೋಣಾ ಹೊಬಳಿ ರವರ 43-ಗುಲಬರ್ಗಾ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ನರೋಣಾ ಗ್ರಾಮದಲ್ಲಿ ದಿನಾಂಕ: 09.04.2019 ರಂದು ನಡೆದ ಬಿ.ಜೆ.ಪಿ ಪಕ್ಷದ ರಾಜಕೀಯ ಪ್ರಚಾರ ಸಭೆಗೆ ಉಲ್ಲೇಖಿತ (1) ರಂತೆ ಷರತ್ತುಗಳಿಗೆ ಒಳಪಟ್ಟು ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿರುತ್ತದೆ.      ಅದರಂತೆ ತಂಡದ ಮುಖ್ಯಸ್ಥರಾದ ಶ್ರೀ ತಿಪ್ಪಣ್ಣ ಸಿರಸಗಿ, ಶ್ರೀ ಶಿವಲಿಂಗಪ್ಪ ದ್ವಿ.ದ.ಸ, ಶ್ರೀ ರಾಜು ಡಿ.ಇ.ಓ ಗ್ರಾಮ ಪಂಚಾಯತ ಸಣ್ಣೂರ, ಬಸಲಿಂಗಪ್ಪ ಪಿ.ಸಿ ಶಹಾಬಾದ ಪೋಲಿಸ್ ಠಾಣೆ ಇವರುಗಳು ಸದರಿ ಕಾರ್ಯಕ್ರಮದಲ್ಲಿ ನಿಗದಿಪಡಿಸಿರುವಂತೆ ಚಿತ್ರಿಕರಣ ಮಾಡುತ್ತಿರುವ ಸಮಯದಲ್ಲಿ ಸಭೆಗೆ ಹಾಜರಾದ ಜನರಿಗೆ ಊಟದ ವ್ಯವಸ್ಥೆ ಮಾಡುವುದು ಚಿತ್ರಿಕರಣದಲ್ಲಿ ಕಂಡುಬಂದಿರುತ್ತದೆಂದು ಜಿಲ್ಲಾ ಸಮಿತಿಯು ವೀಕ್ಷಿಸಿ ಇದು ನೀತಿ ಸಂಹಿತೆ ಉಲ್ಲಂಘನೆ ಯಾಗಿರುತ್ತದೆಂದು, ಉಲ್ಲೇಖೀತ (2) ರಂತೆ ಕಾರ್ಯಕ್ರಮ ಆಯೋಜಕರಾದ ಶ್ರೀ ಗುರುಸಿದ್ದಯ್ಯ ತಂ. ಛತ್ರಯ್ಯ ಇವರ ಮೇಲೆ ದೂರು ದಾಖಲಿಸಲು ಸೂಚಿಸಿರುವುದರಿಂದ ಕಮಲಾಪೂರ ಮಹಾಗಾಂವ ಮತ್ತು ನರೋಣಾ ಹೊಬಳಿ ಮುಖ್ಯಸ್ಥರಾದ ನಾನು ಶ್ರೀ ಪ್ರವೀಣ ಹೇರೂರ ಮುಖ್ಯಸ್ಥರು ಹಾಗೂ ತಂಡದ  ಶ್ರೀ ಪ್ರೇಮಾನಂದ ಚಿಂಚೋಳಿಕರ ಪ್ರ.ದ.ಸ, ಶ್ರೀ ನಾಗೇಂದ್ರ ಸಿಪಿಸಿ 86 ಗ್ರಾಮೀಣ ಪೋಲಿಸ್ ಠಾಣೆ  ಶ್ರೀ ಅಲಿಮೊದ್ದಿನ ಅವರಾದ ಗ್ರಾಮ ಪಂಚಾಯತ ಆಗಿದ್ದು ದಿನಾಂಕ: 09.04.2019 ರಂದು ನಮ್ಮ ತಂಡದ ಸಮಯ 02:00 ರಿಂದ ರಾತ್ರಿ 10:00 ಗಂಟೆ ಆಗಿದ್ದು ಅಂದು ಏಕ ಕಾಲಕ್ಕೆ 4-5 ಕಡೆ ಬಿ.ಜೆ.ಪಿ ಪಕ್ಷದ ರಾಜಕೀಯ ಪ್ರಚಾರ ಸಭೆಗಳು ಇದ್ದು, ಆ ಸಂದರ್ಭದಲ್ಲಿ ಬೆಳಮಗಿ ಗ್ರಾಮದಲ್ಲಿ ನಡೆಯುವ ಸಭೆಗೆ ಕಾರ್ಯ ನಿರ್ವಹಿಸಲು ಮೇಲಾಧಿಕಾರಿಗಳ ಆದೇಶದ ಮೇಲೆ ಕೆಲಸ ನಿರ್ವಹಿಸಿದ್ದೇವೆ. ದಿನಾಂಕ: 09.04.2019 ರಂದು ನರೋಣಾ ಗ್ರಾಮದ ಕಾರ್ಯಕ್ರಮ ವಿ.ಎಸ್.ಟಿ. ತಂಡ ಚಿತ್ರೀಕರಣ ಮಾಡಿದ್ದು, ಜಿಲ್ಲಾ ಸಮಿತಿಯಲ್ಲಿ ಪರಿಶೀಲಿಸಿದಾಗ ಚಿತ್ರೀಕರಣದಲ್ಲಿ ಸಭೆಗೆ ಹಾಜರಾದ ಜನರಿಗೆ ಊಟ ವ್ಯವಸ್ಥೆ ಮಾಡಿರುವುದು ಕಂಡು ಬಂದಿರುವುದರಿಂದ ದಿನಾಂಕ: 10.04.2019 ರಂದು ಕಾರ್ಯಕ್ರಮ ಆಯೋಜಕರ ಮೇಲೆ ದೂರು ದಾಖಲಿಸಲು ಸೂಚಿಸಿರುವುದರಿಂದ ಶ್ರೀ ಗುರುಸಿದ್ದಯ್ಯ ತಂ. ಛತ್ರಯ್ಯ ಮು||ನರೋಣ ಮೋ.ಸಂ:9844811147, ಆಯೋಜಕರು ಬಿ.ಜೆ.ಪಿ ಪಕ್ಷ ಇವರ ಮೇಲೆ ಭಾರತ ದಂಡ ಸಂಹಿತೆ ಕಾಯ್ದೆ (ಕಅ) ನಿಯಮ 171 (ಇ) ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ 1951  ರ ನಿಯಮ 123(1) ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, April 12, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ-10/04/2019 ರಂದು ಬೆಳಿಗ್ಗೆ ಶಹಬಾದ ರಿಂಗ್ ರೋಡ ಹತ್ತಿರದ ವಿಜಯಕುಮಾರ ಪವಾರ ಇವರ ಪೆಟ್ರೋಲ ಬಂಕ್ ಹತ್ತಿರ ನಿಲ್ಲಿಸಿದ ಎನ್.ಇ.ಕೆ.ಆರ್.ಟಿ ಸಿ ಬಸ್ ನಂ ಕೆಎ-32 ಎಫ್-1780 ನೇದ್ದ ರ ಮುಂದಿನ ಭಾಗಿಲಿನಿಂದ ಶ್ರೀ ಶಿವಲಿಂಗಪ್ಪಾ ತಂದೆ ಬಸಣ್ಣ ಮಂಗಲಗಿ ಸಾ ಬಸವೇಶ್ವರ ಚೌಕ ಹತ್ತಿರ ಹಳೆ ಶಾಹಾಬಾದ  ರವರ ಮಗನಾದ ಬಸವರಾಜ ವ: 17 ವರ್ಷ ಈತನು  ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಾಗ ಬಸ್ ಚಾಲಕ ಅನೀಲ ಈತನು ಅದನ್ನು ಗಮನಿಸದೆ ನಿಸ್ಕಳಜಿಯಿಂದ ತನ್ನ ಬಸನ್ನು ಅತಿವೇಗವಾಗಿ ಮುಂದಕ್ಕೆ ಚಲಾಯಿಸಿ ಫಿರ್ಯಾದಿ ಮಗನಿಗೆ ಕೆಳಗೆ ಬಿಳಿಸಿ ಬಸ್ಸಿನ ಹಿಂದಿನ ಟೈರ್ ಆತನ ತೆಲೆ ಮೇಲಿಂದ ಹಾಯಿಸಿ ತೆಲೆಗೆ ಮತ್ತು ಹಣೆಗೆ ಭಾರಿ ರಕ್ತಗಾಯಗೊಳಿಸಿದರಿಂದ ತೆಲೆಯಿಂದ ಮೆದಳು ಹೊರಗೆ ಬಂದು ಬಸವರಾಜ ಈತನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಎನ್.ಇ.ಕೆ.ಆರ್.ಟಿ.ಸಿ ಬಸ್ ಚಾಲಕ ಅನೀಲ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ 2  ರಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ:11/04/2019 ರಂದು ಶ್ರೀ ವಿಠಲ ತಂದೆ ಶಾಮನಾಯ್ಕ ಸಾ : ವಿ. ಕೆ. ಸಲಗರ  ತಾಂಡಾಕ್ಕೆ ಹೊಂದಿಕೊಂಡೆ ನಮ್ಮ ಹೊಲ ಇರುತ್ತದೆ. ನಾನು ದಿನಾಂಕ: 10/04/2019 ರಂದು ಬೆಳಿಗ್ಗೆ ನಮ್ಮ ಮನೆಯಿಂದ ಹೊಲದ ಕಡೆಗೆ ಹೋದಾಗ ನಮ್ಮ ಬಂದಾರಿ ಮೇಲಿರುವ ಬಾರಿಗಿಡವನ್ನು ಯಾರೋ ಕಡಿದಿದ್ದು, ಕಂಡು ಬಂದಿರುತ್ತದೆ. ನಾನು ಬಂದಾರಿ ಹತ್ತಿರ ಇರುವ ಮನೆಯವನಾದ ದಿಲೀಪ್ ತಂದೆ ಸುಭಾಷ ಚಿನ್ನಿರೋಢ ಈತನಿಗೆ ವಿಚಾರಿಸುತ್ತ ನಿಂತಾಗ ನಮ್ಮ ಬಾಜು ಹೊಲದವನಾದ 1)ಸುನೀಲ್ @ ಸೋಮ್ಯಾ ತಂದೆ ಕಾನು ಚಿನ್ನಿರಾಠೋಡ್ ಹಾಗೂ ಅವನ ತಮ್ಮನಾದ 2)ಸತೀಶ ತಂದೆ ಕಾನು ಚಿನ್ನಿರಾಠೋಡ್ 3)ಶಾರದಾಬಾಯಿ ಗಂಡ ಕಾನು ಚಿನ್ನಿರಾಠೋಡ್ ಇವರು ಅಲ್ಲಿಗೆ ಬಂದರು ನಾನು ದಿಲೀಪನ ಜೊತೆ ಮಾತನಾಡುತ್ತಿರುವುದನ್ನು ಕೇಳಿ ನನಗೆ ಸುನೀಲ @ ಸೋಮ್ಯಾ ಈತನು ಏ ರಂಡಿ ಮಗನೆ ಗಿಡ ಕಡಿದರೆ ನಿನಗೇನಾಯಿತು ಅಂತಾ ಬೈದನು ಆಗ ನಾನು ಹಾಗೆಲ್ಲಾ ಬೈಬೇಡಾ ಅಂತಾ ಹೇಳಿದಕ್ಕೆ ಸದರಿಯವನು ನನಗೆ ಟೆಕ್ಕಿಯಲ್ಲಿ ತಗೆದಕೊಂಡು ಎತ್ತಿ ನೆಲಕ್ಕೆ ಬಡಿದನು ಸತೀಶನು ಕಲ್ಲಿನಿಂದ ಬೆನ್ನಮೇಲೆ ಹೊಡೆದನು ಶಾರದಾಬಾಯಿ ಇವಳು ಈ ಹಾಟ್ಯಾ ಭಾಡಕೋಗ ಬಿಡಬ್ಯಾಡರಿ ಹೊಡಿರಿ ಅಂತಾ ಬೈದಳು ಈ ಘಟನೆಯನ್ನು ದಿಲೀಪನು ನೋಡಿ ಬಿಡಿಸದನು ನನಗೆ ನನ್ನ ಹೆಂಡತಿ ಸೋನಾಬಾಯಿ ಮಗಳಾದ ಪೇಮಾಬಾಯಿ ಗಂಡ ಚಂದು ಜಾದವ್ ಇವರು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ನನಗೆ ಹಣೆಗೆ ರಕ್ತಗಾಯ ವಾಗಿರುತ್ತದೆ. ಕಾರಣ ನನಗೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:11/04/2019 ರಂದು ಶ್ರೀ ದಾಮು ತಂದೆ ರಾಮು ರಾಠೋಡ ಸಾ : ಮಡಕಿ ತಾಂಡಾ ರವರ ಹೆಂಡತಿಯ ತಮ್ಮನಾದ ರುಪೇಶ ತಂದೆ ನಾಮದೇವ ಪವಾರ ಸಾ:ಕಡಗಂಚಿಗತಾಂಡಾ ಈತನಿಗೆ ಅದೇ ಗ್ರಾಮದ ಸವೀತಾ ಇವಳೊಂದಿಗೆ ಸುಮಾರು 18 ವರ್ಷಗಳ ಹಿಂದೆ ಮದುವೆಯಾಗಿ ನಾಲ್ಕು ಮಕ್ಕಳಿರುತ್ತವೆ. ಸವಿತಾ ಇವಳು ಮದುವೆ ಆದಾಗನಿಂದ ರೂಪೇಶನೊಂದಿಗೆ ಆಗಾಗ ಜಗಳ ತಗೆದು ತನ್ನ ತವರು ಮನೆಗೆ ಹೋಗುವುದು ಮತ್ತೆ ಸ್ವಲ್ಪ ದಿನಗಳ ನಂತರ ಗಂಡನೊಂದಿಗೆ ಬರುವುದು ಮಾಡುತ್ತಾ ಬಂದಿರುತ್ತಳೆ ಕಳೆದ ನಾಲ್ಕು ತಿಂಗಳ ಹಿಂದೆ ಮತ್ತೆ ಜಗಳ ಮಾಡಿ ತನ್ನ ತವರು ಮನೆಯಲ್ಲಿ ಹೋಗಿ ಕುಳಿತಿರುತ್ತಾಳೆ. ರೂಪೇಶನು ಹೊಟ್ಟೆಪಾಡಿಗಾಗಿ ಮುಂಬೈ ನಗರದಲ್ಲಿ ವಾಸಿಸುತ್ತಿದ್ದನು ಅವನಿಗೆ ಅಡುಗೆ ಮಾಡಲು ಯಾರು ಇಲ್ಲದ ಕಾರಣ ಹೇಗಾದರು ಮಾಡಿ ತನ್ನ ಹೆಂಡತಿಗೆ ತನ್ನ ಸಂಗಡ ಕರೆದುಕೊಂಡು ಹೋಗಬೇಕು ಅಂತಾ ಸುಮರು 2ದಿವಸಗಳ ಹಿಂದೆ ಮಡಕಿತಾಂಡಾಕ್ಕೆ ಬಂದಿರುತ್ತಾನೆ. ಹೀಗಾಗಿ ದಿನಾಂಕ:10/04/2019 ರಂದು ಮಡಿಕಿತಾಂಡಾದಿಂದ ನಾನು ರುಪೇಶ ಶಾಂತಾಬಾಯಿ ಗಂಡ ರೇಖು ರಾಠೋಡ್, ಬಾಬು ತಂದೆ ಅಂಬ್ರು ರಾಠೋಡ್, ವಿಕ್ಕಿ ತಂದೆ ರೇಖು ರಾಠೋಡ್ ಎಲ್ಲರೂ ಸೇರಿ ಕಡಗಂಚಿ ತಾಂಡಾಕ್ಕೆ ಬಂದು ಸವಿತಾ ಇವಳಿಗೆ ಮನವಲಿಸಿ ಗಂಡ ಹೆಂಡತಿ ಒಂದು ಮಾಡಲು ಅಂತಾ ಬಂದು ಕಡಗಂಚಿ ತಾಂಡಾದ ನಾಯಕರಾದ ಲಕ್ಷ್ಮಣ ತಂದೆ ಸೂರ್ಯ ಚವ್ಹಾಣ್ ಇವರಿಗೆ ತಾಂಡಾದ ದುಬೇಶ ತಂದೆ ರೇವು ಚವ್ಹಾಣ್ ಇವರ ಹೊಟೆಲ್ ಮುಂದೆ ಕರೆಸಿ ನ್ಯಾಯಾ ಪಂಚಾಯಿತಿ ಮಾಡಿ ಸವಿತಾ ಹಾಗೂ ಅವಳ ಮನೆಯವರಿಗೆ ತಿಳುವಳಿಕೆ ಹೇಳಲು ಕೇಳಿಕೊಳ್ಳುತ್ತಿದ್ದಾಗ, 1)ನಾಮದೇವ ತಂದೆ ಪಾಂಡು ರಾಠೋಡ್, 2)ರವಿ ತಂದೆ ನಾಮದೇವ ರಾಠೋಡ್, 3)ಮಂಗಲಾ ತಂದೆ ಪಾಂಡು ರಾಠೊಡ್, 4)ರಾಜೇಶ ತಂದೆ ನಾಮದೇವ ರಾಠೋಡ್, 5)ಸಾವನ ತಂದೆ ನಾಮದೇವ ರಾಠೋಡ್, 6)ಸುಮ್ಮಿ @ ಸುನೀತಾ ಗಂಡ ನಾಮದೇವ ರಾಠೋಡ್, 7)ಸವಿತಾ ಗಂಡ ರೂಪೇಶ ಪವಾರ ಇವರು ನಾವು ಕಡಗಂಚಿ ಕಡಗಂಚಿ ತಾಂಡಾಕ್ಕೆ ಬಂದ ವಿಚಾರ ತಿಳಿದುಕೊಂಡು ಒಮ್ಮಲೇ ಗುಂಪುಕಟ್ಟಿಕೊಂಡು ಅಲ್ಲಿಗೆ ಬಂದು ಎಲ್ಲರೂ ಏ ರಂಡಿ ಮಕ್ಕಳ್ಯಾ ಏನ ಪಂಚಾಯಿತಿ ಮಾಡತಿರಿ ಸೆಂಟಾ ಅಂತಾ ಬೈದು ನನಗೆ ನಾಮದೇವನು ಕಲ್ಲಿನಿಂದ ಬಲಗಣ್ಣಿನ ಮೇಲ್ಭಾಗ ಹೊಡೆದು ರಕ್ತಗಾಯ ಪಡಿಸಿದನು. ರವಿ ಈತನು ಕಲ್ಲಿನಿಂದ ಸೊಂಟಕ್ಕೆ ಹೊಡೆದನು ಮಂಗಲಾ ಹಾಗೂ ರಾಜೇಶ ಇಬ್ಬರು ರಂಡಿಮಕ್ಕಳ್ಯಾ ನೀನು ರೂಪೇಶನ ಮೇಲ ಕಟ್ಟಿ ಬಂದಿರಿ ನಿಮಗ ಇಡಂಗಿಲ್ಲಾ ಅಂತಾ ಬೈದು ನನಗೆ ಟೆಕ್ಕಿಯಲ್ಲಿ ಹಿಡಿದು ಎತ್ತಿ ನೆಲಕ್ಕೆ ಕೆಡವಿದರು. ಇದನ್ನು ನೋಡಿ ಬಿಡಿಸಲು ಬಂದ ರೂಪೇಶನಿಗೆ ನಾಮದೇವ, ರವಿ, ಸಾವನ್ ಇವರು ಎಳೆದಾಡಿ ಕೈಯಿಂದ ತಲೆಯ ಹೊಟ್ಟೆ ಬೆನ್ನಿಗೆ ಗುದ್ದುತ್ತಿದ್ದರು ಆಗ ಸುಮ್ಮಿ ಹಾಗೂ ಸವಿತಾ ಇವರು ಈ ರಂಡಿಮಕ್ಕಳಿಗೆ ಜೀವ ಸಹಿತಾ ಬಿಡಬ್ಯಾಡರಿ ಅಂತಾ ಭಯ ಪಡಿಸುತ್ತಿದ್ದಾಗ ಲಕ್ಷ್ಮಣ ತಂದೆ ಸೂರ್ಯನಾಯಕ, ದುಬೇಶ ತಂದೆ ರೇವು ಚವ್ಹಾಣ್, ರೇವು ತಂದೆ ರಾಮು ಚವ್ಹಾಣ್ ಇವರು ಜಗಳ ನೋಡಿ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ಗುರುಬಾಯಿ ಗಂಡ ಆನಂದ ಜಂಗಲೆ ಸಾ; ಭಿಮ ನಗರ ಆಳಂದ ತಾ; ಆಳಂದ ರವರು ತಮ್ಮ ಭಾವನಾದ ಅಣ್ಣಪ್ಪ ತಂದೆ ಲಕ್ಷ್ಮಣ ಜಂಗಲೆ ಇವರು ನಮ್ಮ ಫಿತ್ರಾರ್ಜಿತ ಮನೆಯ ಜಾಗೆ ಹಂಚಿಕೆ ವಿಷಯದಲ್ಲಿ ಸುಮಾರು ದಿನಗಳಿಂದ ನಮ್ಮೊಂದಿಗೆ ವೈಮನಸ್ಸು ಮಾಡಿಕೊಂಡಿದ್ದು ಸದ್ಯೆ ಅಣ್ಣಪ್ಪ ಇವರು ತಮ್ಮ ಪಾಲಿಗೆ ಬಂದ ಜಾಗೆದಲ್ಲಿ ಮನೆ ಕಟ್ಟಡ ಮಾಡುತ್ತಿದ್ದು, ನಮ್ಮ ಪಾಲಿಗೆ ಬಂದ ಜಾಗೆಯಲ್ಲಿ ಪತ್ರಾದ ಮನೆಯಲ್ಲಿ ವಾಸವಾಗಿದ್ದು ಕಾರಣ ನನ್ನ ಗಂಡನು ನಮ್ಮ ಭಾವನಿಗೆ ನಮ್ಮ ಪಾಲಿಗೆ ಬಂದ ಮನೆ ಜಾಗೆಯವನ್ನು ಖಾಲಿ ಮಾಡಲು ಸುಮಾರು ದಿನಗಳಿಂದ ಹೇಳುತ್ತಾ ಬಂದಿದ್ದರಿಂದ ವೈಮನಸ್ಸು ಮಾಡಿಕೊಂಡಿದ್ದು ದಿನಾಂಕ 10/04/2019 ರಂದು ನಾನು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಗುಂಡಪ್ಪ ತಂದೆ ಲಕ್ಷ್ಮಣ ಜಂಗಲೆ ಇವರ ಜೋತೆಯಲ್ಲಿ ನಮ್ಮ ಮನೆಯ ಜಾಗದ ವಿಷಯು ಕುರಿತು ಮಾತನಾಡುತ್ತಾ ನಿಂತಾಗ ನನ್ನ ಹಿಂದಿನಿಂದ ಅಣ್ಣಪ್ಪ ಜಂಗಲೆ ಇವರು ಓಡಿ ಬಂದನೇ ಏ ರಂಡಿ ನಮ್ಮ ಜಾಗೆ ಕೇಳಲು ನೀನು ಯಾರು ಅಂತಾ ಬೈಯುತ್ತಾ ಸಲಕಿಯಿಂದ ತಲೆಯ ಮೇಲೆ ಹೊಡೆದಿದ್ದು ಭಾರಿ ರಕ್ತಸ್ರಾವವಾಗಿ ತಲೆ ಸುತ್ತ ಬಂದು ಭಾರಿ ರಕ್ತಗಾಯ ಮಾಡಿದ್ದು, ನೀನು ಇನ್ನೋಮ್ಮೆ ನಮ್ಮ ಜಾಗದ ವಿಷಯದಲ್ಲಿ ಬಂದರೇ ನೀನ್ನ ಜೀವ ಸಹಿತ ಖಲಾಸ ಮಾಡುತ್ತೇನೆ ಅಂತಾ ಬೈಯುತ್ತಿರುವಾಗ ಗುಂಡಪ್ಪ ಜಂಗಲೆ, ಚಂದ್ರು ತಂದೆ ಗುಂಡಪ್ಪ ಜಂಗಲೆ ಮತ್ತು ನನ್ನ ಗಂಡ ಮನೆಯೊಳಗಿನಿಂದ ಓಡಿ ಬಂದು ಜಗಳವನ್ನು ಬಿಡಿಸಿದ್ದು ಆಗ ನನ್ನ ಗಂಡನಿಗೆ ಏ ರಂಡಿ ಮಗನೇ ನೀನ್ನ ಹೆಂಡತಿಗೆ ಸರಿಯಾಗಿ ಹೇಳು ಇನ್ನೋಮ್ಮೆ ನನ್ನ ಹೆಸರಿಗೆ ಬಂದರೆ ನೀನಗೆ ಮತ್ತು ನೀನ್ನ ಹೆಂಡತಿ ಖಲಾಸ ಮಾಡುತ್ತೇನೆ ಅಂತಾ ಅವಾಚ್ಚ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ಲಲಿತಾ ಗಂಡ ನಾಗೇಂದ್ರ ಕಡಪಾ ಸಾ: ನ್ಯೂ ಬಸ್ಸ ಸ್ಟ್ಯಾಂಡ ರೋಡ ಆಳಂದ ರವರ ಅತ್ತೆ ಮಾವನವರಿಗೆ ನನ್ನ ಗಂಡ ನಾಗೇಂದ್ರ & ಚಂದ್ರಕಾಂತ, ಶಶಿಕಾಂತ ಅಂತಾ ಮೂರು ಜನರು ಗಂಡು ಮಕ್ಕಳಿದ್ದು ಮತ್ತು ಉಮಾದೇವಿ ಮತ್ತು ರಮಾದೇವಿ ಅಂತಾ ಎರಡು ಜನ ಹೆಣ್ಣು ಮಕ್ಕಳಿದ್ದು, ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು, ಅವರು ತಮ್ಮ ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ, ಮತ್ತು ನಮ್ಮ ಮನೆಯಲ್ಲಿ ನಾನೇ ಹಿರಿಯ ಮಗನಿದ್ದು, ನನ್ನ ಮೈದುನಾದ ಶಶಿಕಾಂತ ಇತನು ನಮಗೆ ಸುಮಾರು ಮೂರು ತಿಂಗಳಿಂದ ಮನೆಗಳ ಹಂಚಿಕೆ ವಿಚಾರದಲ್ಲಿ ನಮ್ಮೊಂದಿಗೆ ತಕರಾರು ಮಾಡಿದ್ದರಿಂದ ನಾನು & ನನ್ನ ಗಂಡ ಕುಟುಂಬ ಸಮೇತ ಬೇರೆ ಕಡೆಗೆ ಬಾಡಿಗೆ ಮನೆ ಮಾಡಿಕೊಂಡು ಆಳಂದ ಪಟ್ಟಣದಲ್ಲಿಯೇ ವಾಸವಾಗಿದ್ದು, ಮತ್ತು ನನ್ನ ಗಂಡನ ನಮ್ಮ ಮಾವನವರ ಹತ್ತೀರ ಈ ಒಂದು ವರ್ಷದ ಹಿಂದೆ ಒಂದು ಪ್ಲಾಟ ತಗೆದುಕೊಳ್ಳಲು ಕೈಗಡ ರೂಪದಲ್ಲಿ ಒಂದು ಲಕ್ಷ ರೂಪಾಯಿಗಳು ಹಣವನ್ನು ಪುನಃ ವಾಪಸ್ಚಸ ಕೊಡುತ್ತೇನೆ ಅಂತಾ ತಗೆದುಕೊಂಡಿದ್ದು, ಸದರಿ ಹಣದ ವ್ಯವಹಾರ ಬಗ್ಗೆ ಶಶಿಕಾಂತ ಇವರು ನಮ್ಮ ಮಾವನವರಿಂದ ತಿಳಿದುಕೊಂಡು ಮೂರು ತಿಂಗಳಿಂದ ನಮ್ಮೊಂದಿಗೆ ವೈಮನಸ್ಸು ಮಾಡಿಕೊಂಡಿದ್ದು ದಿನಾಂಕ 11/04/2019 ರಂದು ಎಂದಿನಂತೆ ಬಾಡಿಗೆ ಮನೆಯಿಂದ ನನ್ನ ಗಂಡನು ದುಕಾನ ಹೊಗಲು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಹೊಗುತ್ತಿರುವಾಗ ಮೈದುನ ಶಶಿಕಾಂತ ಇತನು ಓಡಿ ಬಂದವನೇ ನನ್ನ ಗಂಡನಿಗೆ ಏ ರಂಡಿ ಮಗನೇ ಎಲ್ಲಿಗೆ ಹೊಗುತ್ತಿದ್ದಿ ಅಪ್ಪಾನ ಹತ್ತೀರ ತಗೆದುಕೊಂಡ ಒಂದು ಲಕ್ಷ ರೂಪಾಯಿಗಳು ಯಾವಾಗ ಕೊಡುತ್ತೀ ಭಾ ನೀ ದುಕಾನ ಅಂತಾ ಅವಾಚ್ಚ ಶಬ್ದಗಳಿಂದ ಬೈಯುತ್ತಿರುವಾಗ ನಾನು ಶಶಿಕಾಂತ ಇವರಿಗೆ ಯಾಕೆ ಸುಮ್ಮನೇ ನನ್ನ ಗಂಡನಿಗೆ ಬೈಯುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಏ ರಂಡಿ ನೀನು ನಮ್ಮ ವಿಷಯದಲ್ಲಿ ಕೇಳಲು ಬರುತ್ತೀ ಭೊಸಡಿ ಅಂತಾ ಬೈದು ಕೈಯಿಂದ ಕಪಾಳದ ಮೇಲೆ ಹೊಡೆದು, ಮೈ ಮೇಲಿನ ಸೀರೆ ಹಿಡಿದು ಜೊಗ್ಗಿ ಅವಮಾನಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ.ಶಂಕರರಾವ ತಂದೆ ನಾಗಪ್ಪ ಕಡಪಾ ಸಾ:ಕೊಟಿಗಲ್ಲಿ ಆಳಂದ ರವರಿಗೆನಾಗೇಂದ್ರ, ಚಂದ್ರಕಾಂತ ಮತ್ತು ಶಶಿಕಾಂತ ಅಂತಾ ಮೂರು ಜನ ಗಂಡು ಮಕ್ಕಳಿದ್ದು, ಉಮಾದೇವಿ & ರಮಾದೇವಿ ಅಂತಾ ಎರಡು ಜನ ಹೇಣ್ಣು ಮಕ್ಕಳಿದ್ದು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ, ಗಂಡು ಮಕ್ಕಳು ತಮ್ಮ ತಮ್ಮ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾರೆ ನನ್ನ ಹಿರಿಯ ಮಗನಾದ ನಾಗೇಂದ್ರ ಇತನು ನನ್ನ ಹತ್ತೀರ ಸುಮಾರು ಒಂದು ವರ್ಷದ ಹಿಂದೆ ಪ್ಲಾಟ ತಗೆದುಕೊಳ್ಳಲು ಒಂದು ಲಕ್ಷ ರೂಪಾಯಿಗಳು ತಗೆದುಕೊಂಡಿದ್ದು ಸದರಿ ಹಣವು ನನಗೆ ವಾಪಸ್ಸ ಒಂದು ವರ್ಷದಲ್ಲಿ ಕೊಡಬೇಕಾಗಿತ್ತು ಆದರೆ ಸದರಿ ಹಣವನ್ನು ಇಲ್ಲಿಯವರೆಗೆ ವಾಪಸ್ಸ ಕೊಟ್ಟಿರುವದಿಲ್ಲ, ಹೀಗಿದ್ದು ಇಂದು ದಿನಾಂಕ 11/04/2019 ರಂದು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನನ್ನ ಮಗ ನಾಗೇಂದ್ರ ಇತನು ನನಗೆ ಕೊಡಬೇಕಾದ ಒಂದು ಲಕ್ಷ ರೂಪಾಯಿಗಳು ಹಣದ ವಿಷಯಲ್ಲಿ ನನ್ನೊಂದಿಗೆ ತಕರಾರು ಮಾಡಿ ನಾನು ನೀನಗೆ ಹಣ ಕೊಡುವದಿಲ್ಲ, ನೀನು ನನಗೆ ಮನೆ & ಹಣ ಕೊಡು ರಂಡಿ ಮಗನೇ ಭೊಸಡಿ ಮಗನೇ ಅಂತಾ ಅವಾಚ್ಚ ಶಬ್ದಗಳಿಂದ ಬೈದು ನೀನು ಇನ್ನೋಮ್ಮೆ ಹಣ ಕೇಳಿದರೆ ನೀನ್ನ ಜೀವ ಸಹಿತ ಖಲಾಸ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಬಾಲಾಜಿ ತಂದೆ ರಾಮು ಕೋಳಿ ಸಾ|| ಖಜೂರಿ ರವರು ದಿನಾಂಕ 11/04/2019 ರಂದು ತಮ್ಮೂರಿನ ಸರಕಾರಿ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯ ಮುಂದಿನ ರೋಡಿನ ಮೇಲೆ ಬರುತ್ತಿರುವಾಗ ನನ್ನ ಎದುರಿನಿಂದ ನಮ್ಮೂರಿನಿಂದ ಸಿದ್ದಪ್ಪ ತಂದೆ ಶ್ರೀಮಂತ ಗೌಂಡಿ ಇತನು ತನ್ನ ಕೈಯಲ್ಲಿ ಕೊಡಲಿ ಹಿಡಿದುಕೊಂಡು ಬಂದವನೇ ನನ್ನ ಎದೆಯ ಮೇಲಿನ ಅಂಗ್ಗಿ ಹಿಡಿದು ಜೋಗ್ಗಿ ಮುಂದಕ್ಕೆ ಹೊಗದಂತೆ ತಡೆದು ನಿಲ್ಲಿಸಿ ಏ ರಂಡಿ ಮಗನೇ ನೀನಗೆ ನೀನ್ನೆ ರಾತ್ರಿ ಫೋನ ಮಾಡಿ ಬರಲು ಹೇಳಿದರು ಬರಲ್ಲಾ ಭೋಸಡಿ ಮಗನೇ ಅಂತಾ ಬೈಯುತ್ತಾ ಕೊಡಲಿಯಿಂದ ನನ್ನ ತಲೆಯ ಮೇಲೆ ಎರಡು ಬಾರಿ ಹೊಡೆದು ಭಾರಿ ಗಾಯ ಮಾಡಿದ್ದು ಆಗ ಅಲ್ಲೆ ರಸ್ತೆಯ ಮೇಲೆ ಹೊಗುತ್ತಿದ್ದ 1) ಲಕ್ಷ್ಮಣ ತಂದೆ ಮಲ್ಕಪ್ಪ ಕೋಳಿ, 2) ಮಹಾದೇವ ತಂದೆ ಲಕ್ಷ್ಮಣ ಕೋಳಿ, 3) ಶ್ರೀಮಂತ ತಂದೆ ನಿಂಗಪ್ಪ ಜವಳಿಗಿ ರವರುಗಳು ಬಂದು ಜಗಳವನ್ನು ನೋಡಿ ಬಿಡಿಸಿರುತ್ತಾರೆ ನಂತರ ನನಗೆ ನನ್ನ ತಾಯಿ ತಂದೆಯವರು ಉಪಚಾರ ಕುರಿತು ಸರಕಾರಿ ಬಸ್ಸಿನಲ್ಲಿ ಆಳಂದ ಕ್ಕೆ ಬಂದು ಸರಕಾರಿ ಆಸ್ಪತ್ರೆ ಆಳಂದ ಕ್ಕೆ ಒಯ್ದು ಸೇರಿಕೆ ಮಾಡಿ ಉಪಚಾರ ಪಡೆದುಕೊಂಡಿದ್ದು, ಕಾರಣ ನನಗೆ ತಡೆದು ನಿಲ್ಲಿಸಿ ಅವಾಚ್ಚ ಶಬ್ದಗಳಿಂದ ಬೈದು ಕೊಡಲಿಯಿಂದ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿ ಜೀವದ ಬೇದರಿಕೆ ಹಾಕಿದ ಸಿದ್ದಪ್ಪ ತಂದೆ ಶ್ರೀಮಂತ ಗೌಂಡಿ ಇತನ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.