Police Bhavan Kalaburagi

Police Bhavan Kalaburagi

Tuesday, June 25, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಶೋಕ ನಗರ ಠಾಣೆ : ದಿನಾಂಕ:24.06.2019 ರಂದು ಅಶೋಕ ನಗರ  ಠಾಣಾ ವ್ಯಾಪ್ತಿಯ ಕನಕ ತ್ರಿಶೂಲ್ ಬಾರ ಹತ್ತಿರ  ಇಬ್ಬರು  ವ್ಯಕ್ತಿಗಳು  ಸಾರ್ವಜನಿಕರಿಂದ ಹಣ ಪಡೆದು ಅಂಕೆ ಸಂಖ್ಯೆಗಳನ್ನು ಬರೆದ ಚೀಟಿಗಳನ್ನು ನೀಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುತ್ತಾರೆ ಅಂತ ಮಾಹಿತಿ ಬಂದ ಮೆರೆಗೆ ಪಿ.ಐ.  ಅಶೋಕ ನಗರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ತ್ರಿಶೂಲ್ ಬಾರ ಹತ್ತಿರ  ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಇಬ್ಬರು ವ್ಯಕ್ತಿಗಳು  1/- ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಜನರಿಗೆ ಹೇಳುತ್ತಾ ಅವರನ್ನು ಜೂಜಾಟಕ್ಕೆ ಸೆಳೆದು ಹಣದ ಆಸೆ ತೊರಿಸಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳನ್ನು ಕೊಡುತ್ತಾ ಮಟಕಾ ಜೂಜಾಟದಲ್ಲಿ ತೋಡಗಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಲಾಗಿ ಮಟಕಾ ಚೀಟಿ ಬರೆಯಿಸಲು ಬಂದವರು ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹಿಡಿದುಕೊಂಡಿದ್ದು ಅವರ ಹೆಸರು ಮತ್ತು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಿದ್ದು, ಅವರು ತಮ್ಮ ಹೆಸರು 1) ರಹಮತ ತಂದೆ ಸುಭಾನ ಖಾನ ಸಾ|| ಜಿಲಾನಾಬಾದ ಕಲಬುರಗಿ 1) ಎರಡು ಮಟಕಾ ಚೀಟಿ ಅ.ಕಿ. 00 2) ಒಂದು ಬಾಲ ಪೇನ್ ಅ.ಕಿ. 00/- 3) ನಗದು ಹಣ 370/- ದೊರೆತಿದ್ದು ಇರುತ್ತವೆ. 2) ಈರಣ್ಣಾ ತಂದೆ ಶರಣಪ್ಪಾ ಮಾಹೂರಕರ್ ಸಾ|| ಬಿದ್ದಾಪೂರ ಕಾಲೋನಿ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಹತ್ತಿರ 1) ಒಂದು ಮಟಕಾ ಚೀಟಿ ಅ.ಕಿ. 00/- 2) ಒಂದು ಬಾಲ್ ಪೆನ್ ಅ.ಕಿ. 00/- ಮತ್ತು 3) ನಗದು ಹಣ 2800/-  ಗಳು ದೊರೆತಿದ್ದು ಸದರಿ ಮುದ್ದೆ ಮಾಲನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಶೋಕ ನಗರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ. 51/2019  ಕಲಂ 78(3) ಕೆ.ಪಿ. ಎಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಮತ್ತು ಟೆಂಪೂ ಜಪ್ತಿ :
ವಾಡಿ ಠಾಣೆ : ದಿನಾಂಕ 24/06/2019 ರಂದು ಮದ್ಯಾಹ್ನ ವಾಡಿ ಠಾಣಾ ವ್ಯಾಪ್ತಿಯ ಇಂಗಳಗಿ ಗ್ರಾಮದ ಕಾಗಿಣಾ ನದಿಯಿಂದ ಯಾರೋ ಅನಧಿಕೃತವಾಗಿ ಕಳ್ಳತನದಿಂದ ತಮ್ಮ ಟ್ರ್ಯಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಮೇರೆಗೆ ಪಿ.ಎಸ್.ಐ (ಕಾಸು)  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟು ಮುಂದೆ ಇಂಗಳಗಿ ಗ್ರಾಮ ದಾಟಿ ಶಹಾಬಾದ ಕಡೆಗೆ ಹೋಗುವ ಫೂಲ್ ಹತ್ತಿರ ರೊಡಿನ ಸಮೀಪ ಒಂದು ಟ್ರ್ಯಾಕ್ಟರ ಶಹಾಬಾದ ಕಡೆಗೆ ಹೊರಟಿದ್ದು ಸಂಶಯ ಬಂದು ಟ್ರ್ಯಾಕ್ಟರ ಸಮೀಪ ಹೋಗಿ ಟ್ರ್ಯಾಕ್ಟರ ಚಾಲಕನಿಗೆ ಕೈ ಸನ್ನೆ ಮಾಡಿ ನಿಲ್ಲಿಸಲು ಹೇಳಿದರು ಸಹ ಟ್ರ್ಯಾಕ್ಟರ ಹಾಗೇ ಓಡಿಸಿಕೊಂಡು ಹೊರಟು  ಸ್ವಲ್ಪ ಮುಂದೆ ಹೋಗಿ ಟ್ರ್ಯಾಕ್ಟರ ಚಾಲಕ ಟ್ರ್ಯಾಕ್ಟರ ನಿಲ್ಲಿಸಿ  ನಮ್ಮ ಪೊಲೀಸ ಜೀಪ ನೋಡಿ ಓಡಿ ಹೋದನು. ಆತನಿಗೆ ಸಿಬ್ಬಂದಿಯ ಸಹಾಯದಿಂದ ಬೆನ್ನು ಹತ್ತಿದರು ಸಹ  ಸಿಗಲಿಲ್ಲ. ನಂತರ ಸದರಿ ಟ್ರ್ಯಾಕ್ಟರ ಪರಿಶೀಲಿಸಿ ನೋಡಲಾಗಿ ಅದು ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ಇಂಜಿನ ನಂಬರ ಕೆಎ-32 ಟಿಬಿ-5214 ಮತ್ತು ಟ್ರ್ಯಾಲಿ ನಂಬರ ಕೆಎ-32 ಟಿಬಿ ಅಂತಾ ಬರೆದಿದ್ದು ಸದರಿ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಅಂದಾಜು 01 ಸಾವಿರ ರೂಪಾಯಿದಷ್ಟು ಮರಳು ತುಂಬಿದ್ದು ಟ್ರ್ಯಾಕ್ಟರ ಕಿಮ್ಮತ್ತು ಅಂದಾಜು 01 ಲಕ್ಷ ರೂಪಾಯಿ ಆಗುತ್ತದೆ. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ವಾಡಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 69/2019 ಕಲಂ:379 ಐಪಿಸಿ ಸಂಗಡ 21 ಎಮ್.ಎಮ್.ಅರ.ಡಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ
ಅಫಜಲಪೂರ ಠಾಣೆ : ದಿನಾಂಕ 24-06-2019 ರಂದು ಅಫಜಲಪೂರ ಠಾಣಾ ವ್ಯಪ್ತಿಯ  ಮಣ್ಣೂರ ಗ್ರಾಮದ ಭೀಮಾನದಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಟೆಂಪೊದಲ್ಲಿ ಮರಳು ತುಂಬುತ್ತಿದ್ದಾರೆ ಅಂತ  ಮಾಹಿತಿ ಬಂದ ಮೇರೆಗೆ,  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮ ತಲುಪಿ ಮಣ್ಣೂರ ಗ್ರಾಮದಿಂದ ಶೇ಼ಷಗಿರಿ ಗ್ರಾಮಕ್ಕೆ ಹೋಗುವ ಶೇ಼ಷಗಿರಿ ಕ್ರಾಸ್ ಹತ್ತಿರ ಹೋಗುತ್ತಿದ್ದಂತೆ, ಒಂದು ಮರಳು ತುಂಬಿದ ಟೆಂಪೋ ನಮ್ಮ ಎದುರುಗಡೆ ಬರುತ್ತಿರುವದನ್ನು ಕಂಡು ಅದರ ಚಾಲಕನಿಗೆ ನಿಲ್ಲಸೂವಂತೆ ಕೈ ಸೂಚನೆ ಕೊಟ್ಟಾಗ ಆತನು ಸದರಿ ಟೆಂಪೋ ನಿಲ್ಲಿಸಿ ಓಡಿ ಹೋದನು ಆಗ ನಾವು ಬೆನ್ನಟ್ಟಿದ್ದರು ಸಿಗಲಿಲ್ಲ  ಆಗ ನಾವು ಪಂಚರ ಸಮಕ್ಷಮ ಸದರಿ ಟೆಂಪೊ ಚೆಕ್ಕ ಮಾಡಲು 1) ಟಾಟಾ ಕಂಪನಿಯ ಟೆಂಪೊ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಎಮ್.ಹೆಚ್-10 ಕೆ-5103 ನೇದ್ದು ಇತ್ತು ಸದರಿ ಟೆಂಪೊ ಅ.ಕಿ 2,00,000/-ರೂ  ಇರಬಹುದು. ಸದರಿ ಟಿಪ್ಪರದಲ್ಲಿದ್ದ ಮರಳಿನ ಅ.ಕಿ 5.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟೆಂಪೊ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ  97/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

Monday, June 24, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ 23.06.2019 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಮೃತ ಶಿವಪ್ರಸಾದ ಇತನು ಯಡ್ರಾಮಿ ತಾಲ್ಲೂಕಿನಲ್ಲಿ ಬರುವ ಕಾಚಾಪೂರ ಗ್ರಾಮದಲ್ಲಿರುವ ತಮ್ಮ ಜಮೀನಕ್ಕೆ ಹೋಗಿ ವಾಪಸ್ಸ ಕಲಬುರಗಿಗೆ ಬರುವ ಕುರಿತು ಮೋಟಾರ ಸೈಕಲ ನಂ ಕೆಎ-32/ಇಆರ್-1387 ನೇದ್ದನ್ನು ಚಲಾಯಿಸಿಕೊಂಡು ಬರುವಾಗ ಕಲಬುರಗಿ ಜೇವರಗಿ  ಮುಖ್ಯ ರಸ್ತೆಯ ಮೇಲೆ ಬರುವ ಫೀರೋಜಾಬಾದ ದರ್ಗಾ ಸಮೀಪ ರೋಡ ಮೇಲೆ ಕಾರ ನಂಬರ ಕೆಎ-32/ಪಿ-3346 ನೇದ್ದರ ಚಾಲಕನು ಕಲಬುರಗಿ ಕಡೆಯಿಂದ ಜೇವರಗಿ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದುಗಡೆ ಹೋಗುತ್ತೀರುವ ಒಂದು ಕಾರಿಗೆ ಓವರ ಟೆಕ್ ಮಾಡಿ ಎಡ ರೋಡಿನಿಂದ ಬಲ ರೋಡಿಗೆ ಬಂದು ಎದುರಿನಿಂದ ಶೀವಪ್ರಸಾದ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಶಿವಪ್ರಸಾದ ಇತನಿಗೆ ಭಾರಿಗಾಯಗೊಳಿಸಿದ್ದಿಂದ ಶಿವಪ್ರಸಾದ ಇತನು ಘಟನೆ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಶ್ರೀಮತಿ ಅನುಶ್ರೀ ಗಂಡ ಶಿವಪ್ರಸಾದ ಬಳಗಾನೂರ ಸಾ: ಮುದ್ದೆಬಿಹಾಳ ಹಾ.ವ. ಕುವೆಂಪು ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸಂಚಾರಿ ಪೊಲೀಸ್ ಠಾಣೆ-01  ರ  ಗುನ್ನೆ ನಂ 77/2019 ಕಲಂ 279, 304(ಎ) ಐ.ಪಿ.ಸಿ ಸಂ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಳಂದ ಠಾಣೆ : ದಿನಾಂಕ.27/05/2019 ರಂದು ಬೇಳಗ್ಗೆ 08-00 ಗಂಟೆಯಿಂದ 10-00 ಗಂಟೆಯ ನಡುವಿನ ಅವಧಿಯಲ್ಲಿ ಅಪರಿಚಿತ ಅಂದಾಜು 30-35 ವಯಸ್ಸಿನ ಹುಚ್ಚ ಮನುಷ್ಯ ವಾಗ್ದರ್ಗಿ-ರಿಬ್ಬನಪಲ್ಲಿ ಮುಖ್ಯ ರಸ್ತೆಯ ಖಾನಾಪೂರ ಕ್ರಾಸ್ ಹತ್ತಿರ ರೋಡಿನ ಮೇಲಿಂದ ನಡೆದುಕೊಂಡು ಹೋಗುವಾಗ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ಎಡಗಾಲಿನ ತೊಡೆಯ ಹತ್ತಿರ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿದ್ದು ಅಲ್ಲಲ್ಲಿ ರಕ್ತಗಾಯವಾಗಿದ್ದರಿಂದ ಆತನಿಗೆ ಆಳಂದ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಸದರಿ ಹುಚ್ಚ ಮನುಷ್ಯ ಉಪಚಾರ ಫಲಕಾರಿಯಾಗದೇ ದಿನಾಂಕ.21/06/2019 ರಂದು ಬೇಳಗ್ಗೆ 11-15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ.ಶರಣಬಸಪ್ಪಾ ತಂದೆ ವಿಶ್ವನಾಥ ಕಂಬಾರ ವಯಃ 23ವರ್ಷ ಜಾಃ ಕಂಬಾರ ಉಃಕಾರ ಪೇಂಟರ್ ಕೆಲಸ ಸಾಃನಾಗಲೇಗಾಂವ ತಾಃ ಆಳಂದ ಜಿಃ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆ ಗುನ್ನೆ ನಂ.122/2019 ಕಲಂ.279,338,304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ಶ್ರೀಮತಿ ಮಾಲಾಶ್ರೀ ಗಂಡ ರಮೇಶ ಜಾಧವ  ರವರ ಗಂಡ ರಮೇಶ ತಂದೆ ಹೊಬು ಜಾಧವ  ರವರು ದಿನಾಂಕ ದಿನಾಂಕ 22.06.2019 ರಂದು ಸಾಯಂಕಾಲ ಬಿತ್ತನೆಗೆ ಹತ್ತಿ ಬೀಜ ಖರೀದಿ ಮಾಡಿಕೊಂಡು ಬರಲೆಂದು  ಚಿಗರಳ್ಳಿ ಕ್ರಾಸ್ ಗೆ ಹೋಗಿರುತ್ತಾರೆ.ನಂತರ ರಾತ್ರಿ 8-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನನ್ನ ಗಂಡನ ಚಿಕ್ಕಪ್ಪನಾದ ಸೇವು ತಂದೆ ಚಂದು ನಾಯ್ಕ  ಇವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಈಗ ಅರ್ದ ಗಂಟೆಯ ಹಿಂದೆ ಅಂದರೆ 8-00 ಪಿ.ಎಮ್ ಸುಮಾರಿಗೆ ಚಿಗರಳ್ಳಿ ಕ್ರಾಸ್ ಹತ್ತೀರ ರೋಡಿನಲ್ಲಿ ರಮೇಶನಿಗೆ ಒಂದು EICHER GOODS ವಹಾನ ಡಿಕ್ಕಿಯಾಗಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ನಾನು ರಮೆಶನಿಗೆ ಅಂಬುಲೇನ್ಸ 108 ವಹಾನದಲ್ಲಿ  ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಜೇವರಗಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ನೀವು ಕೂಡಲೆ ಆಸ್ಪತ್ರೆಗೆ ಬನ್ನೀರಿ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ನನ್ನ ಭಾವ ರೇವು ಇವರೊಂದಿಗೆ ಸರಕಾರಿ ಆಸ್ಪತ್ರೆ ಜೇವರಗಿಗೆ ಹೋಗಿ ನೋಡಲಾಗಿ ನನ್ನ ಗಂಡ ರಮೇಶ ಇತನಿಗೆ ತಲೆಗೆ ಭಾರಿ ರಕ್ತಗಾಯ ವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ.ನಂತರ ಅಲ್ಲಿಯೇ ಇದ್ದ ನನ್ನ ಚಿಕ್ಕ ಮಾವ ಸೇವು ಇವರಿಗೆ ಹೇಗಾಯಿತು ಅಂತಾ ವಿಚಾರಿಸಿದಾಗ ನಾವಿಬ್ಬರೂ ಚಿಗರಳ್ಳಿ ಕ್ರಾಸ್ ನಲ್ಲಿ ಹತ್ತಿ ಬೀಜ ಖರೀದಿ ಮಾಡಿಕೊಂಡು ಇನ್ನೇನು ನಮ್ಮೂರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಾ ಚಿಗರಳ್ಳಿ ಕ್ರಾಸ್ ನಲ್ಲಿ ರೋಡಿನ ಬದಿಯಲ್ಲಿ 8 ಪಿ.ಎಮ್ ಸುಮಾರಿಗೆ ನಿಂತಿರುವಾಗ ಇದೇ ವೇಳೇಗೆ ಶಹಾಪೂರ ಕಡೆಯಿಂದ ಒಂದು EICHER ಕಂಪನಿಯ GOODS ವಹಾನ ನಂ KA-36, 5310 ನೇದ್ದರ ಚಾಲಕ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ಕಳೆದುಕೊಂಡು ರೋಡಿನ ಬದಿಯಲ್ಲಿ ನಿಂತಿರುವ ರಮೇಶನಿಗೆ ಡಿಕ್ಕಿ ಪಡಿಸಿದನು.ನಂತರ ಸ್ವಲ್ಪ ಮುಂದೆ ಹೋಗಿ ತನ್ನ ವಹಾನ ನಿಲ್ಲಿಸಿ ಕೆಳಗಿ ಇಳಿದು ರಮೇಶನಿಗೆ ಆದ ಗಾಯ ನೋಡಿ ತನ್ನ ವಹಾನ ಅಲ್ಲಿಯೇ ಬಿಟ್ಟು ಓಡಿ ಹೋದನು. ಅವನ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲಾ ಮುಂದೆ ಅವನನ್ನು ನೋಡಿದರೆ ಗುರುತಿಸುತ್ತೆನೆ. ಅಂತಾ ಹೇಳಿದರು ನಂತರ ನಾನು , ನನ್ನ ಭಾವ ರೇವು ಹಾಗೂ ಮಾವ ಸೇವು ಮೂವರು ಕೂಡಿ ನನ್ನ ಗಂಡನಿಗೆ ಚಿಕಿತ್ಸೆಗಾಗಿ(ಹೆಚ್ಚಿನ) ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ ಕಾರಣ ಮಾನ್ಯರು ನನ್ನ ಗಂಡನಿಗೆ ಡಿಕ್ಕಿ ಪಡಿಸಿದ ವಹಾನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯ ಗುನ್ನೆ ನಂ 131/2019 ಕಲಂ 279,338 ಐಪಿಸಿ ಸಂ. 187 ಐ.ಎಮ್.ವ್ಹಿ ಯಾಕ್ಟ ಪ್ರಕಾರ ಪ್ರಕರಣ  ದಾಖಲಿಸಲಾಗಿದೆ.