Police Bhavan Kalaburagi

Police Bhavan Kalaburagi

Saturday, November 2, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಸಂಗೀತಾ ಗಂಡ ಶ್ರವಣಕುಮಾರು ಕ್ಷತ್ರಿ ಸಾ: ಇಟಗಿ ತಾ: ಜೇವರ್ಗಿ ರವರು ದಿನಾಂಕ  30-10-2019 ರಂದು ನಾನು ಮತ್ತು ನನ್ನ ಗಂಡ ಇಬ್ಬರು ಕೂಡಿಕೊಂಡು ನನ್ನ ತವರು ಗ್ರಾಮವಾದ ಮೈಂದರ್ಗಿ ಗ್ರಾಮದಿಂದ ಇಟಗಿ ಗ್ರಾಮಕ್ಕೆ ಹೋಗಬೇಕೆಂದು ಮೈಂದರ್ಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕುಳಿತಾಗ ಸೊಲ್ಲಾಪೂರದಿಂದ ಗಾಣಗಾಪೂರಕ್ಕೆ ಹೋಗುವ ಸರಕಾರಿ ಬಸ್ (ಮಹಾರಾಷ್ಟ್ರ ಬಸ್) ನಂ ಎಮ್.ಹೆಚ್-14-ಬಿಟಿ-3353 ನೇದ್ದು ಬಂದಿದ್ದರಿಂದ ನಾನು ಮತ್ತು ನನ್ನ ಗಂಡ ಗಾಣಗಾಪೂರದ ವರೆಗೆ ಹೋಗಬೇಕೆಂದು ಹತ್ತಿ ಕುಳಿತೇವು ಸದರಿ ಬಸ್ ದುಧನಿ ಮಾರ್ಗವಾಗಿ ಅಫಜಲಪೂರಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಅಫಜಲಪೂರ ದಾಟಿದ ನಂತರ ನಿಂಬಾಳ ಪೇಟ್ರೋಲ್ ಪಂಪ ಹತ್ತಿರ ಸಮಯ 12:00 ಪಿ.ಎಮ್ ಸುಮಾರಿಗೆ ಸದರಿ ಬಸ್ ಚಾಲಕನು ಬಸ್ಸನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿತನಿಂದ ಚಲಾಯಿಸಿ ರೋಡಿಗೆ ಹೊಂದಿಕೊಂಡಿರುವ ಪೂಲಿನ ಗೋಡೆಗೆ (ಬ್ರೀಡ್ಜ) ಗೆ ಡಿಕ್ಕಿ ಪಡೆಸಿದ್ದರಿಂದ ಬಸ್ಸಿನಲ್ಲಿ ಇರುವ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು ಮತ್ತು ನನಗೆ ಬಲಕಿನ ಕಣ್ಣಿಗೆ ರಕ್ತಗಾಯವಾಗಿರುತ್ತದೆ. ಮತ್ತು ಎಡಕಿನ ಕಾಲಿಗೆ ಮೊಣಕಾಲ ಮೇಲೆ ರಕ್ತಗಾಯವಾಗಿದ್ದು ಹಾಗೂ ನನ್ನ ಹೊಟ್ಟೆಗೆ ಭಾರಿ ಪೆಟ್ಟಾಗಿರುತ್ತದೆ ನಾನು ಗರ್ಭೀಣಿ ಇದ್ದಿದ್ದರಿಂದ ಭಾರಿ ತ್ರಾಸ್ ಆಗಿರುತ್ತದೆ ನಂತರ ಅದೆ ಬಸ್ಸಿನಲ್ಲಿ ಅಫಜಲಪೂರ ಸರಕಾರಿ ಆಸ್ಪತ್ರೆ ಸೇರಿಸಿದ್ದು ನಂತರ ನನ್ನ ಗಂಡ 108 ವಾಹನದಿಂದ ಕಲಬುರಗಿಗೆ ತಂದು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಡಿ ಠಾಣೆ : ಶ್ರೀ ಮನ್ಸೂರಅಲಿಬೇಗ ತಂದೆ ಮೌಲಾನಾಬೇಗ ಸಾ:ನಾಲವಾರ ಸ್ಟೇಷನ ರವರದೊಂದು ಮೊಟರ ಸೈಕಲ ನಂಬರ ಕೆಎ-32 ಇಡಿ-5248 ನೇದ್ದು ಇದ್ದು ಅದನ್ನು ನನ್ನ ಸ್ವಂತಕ್ಕೆ ಉಪಯೋಗಿಸುತ್ತೆನೆ. ದಿನಾಂಕ 17/09/2019 ರಂದು ಬೆಳಗ್ಗೆ 09-00 ಗಂಟೆ ಸುಮಾರು ನನ್ನ ಮೊಟರ ಸೈಕಲ ನಂಬರ ಕೆಎ-32 ಇಡಿ-5248 ನೇದ್ದರ ಮೇಲೆ ವಾಡಿ ಪಟ್ಟಣಕ್ಕೆ ಬಂದು ನನ್ನ ಕೆಲಸವನ್ನು ಮುಗಿಸಿಕೊಂಡು ಮರಳಿ 12-00 ಪಿ.ಎಮ್ ಸುಮಾರು ನಾಲವಾರ ಸ್ಟೇಷನಗೆ ಹೋಗುವ ಸಲುವಾಗಿ ಕೊಂಚೂರ ಮುಖಾಂತರ ಹೊರಟು ಮುಂದೆ ಬಾಲಿ ಸಾಹುಕಾರ ಹೊಲದ ಹತ್ತಿರ ರೊಡಿಗೆ ಹೊರಟಾಗ ಎದರುಗಡೆಯಿಂದ ಒಬ್ಬನು ಮೊಟರ ಸೈಕಲ ಅತಿವೇಗ ಹಾಗೂ ಅಲಕ್ಷತನದಿಂದ ಅಡ್ಡಾ ದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ನನ್ನ ಮೊಟರ ಸೈಕಲ ಎಡಗಡೆ ಸೈಡಿಗೆ ಡಿಕ್ಕಿ ಪಡಿಸಿದನು. ಆಗ ನಾನು ಮೊಟರ ಸೈಕಲ ಸಮೇತ ಕೆಳಗಡೆ ಬಿದ್ದೆನು. ಆಗ ನನ್ನ ಹಿಂದೆ ಮೊಟರ ಸೈಕಲ ಮೇಲೆ ಹೊರಟ ಅಜೀಜಬೇಗ ತಂದೆ ಮಹೇಬುಬಬೇಗ ಎನ್ನುವನು ಬಂದು ನನಗೆ ಎಬ್ಬಿಸಿ ರೊಡ ಪಕ್ಕದಲ್ಲಿ ಕೂಡಿಸಿದನು. ನನ್ನ ಎಡಗಾಲ ಮೊಳಕಾಲ ಕೆಳಗಡೆ ಭಾರಿ ರಕ್ತಗಾಯವಾಗಿದ್ದು ಅಲ್ಲಲ್ಲಿ ಅಲ್ಪಗಾಯಗಳಾಗಿದ್ದವು. ನನಗೆ ಡಿಕ್ಕಿ ಹೊಡೆದ ಮೊಟರ ಸೈಕಲ ಚಾಲಕ ನನ್ನ ಹತ್ತಿರ ಬಂದನು ಅವನ ಹೆಸರು ವಿಚಾರಿಸಲಾಗಿ ಅಬ್ದುಲರಹಿಮಾನ ತಂದೆ ಉಸ್ಮಾನಸಾಬ ಮು:ಜೇವರ್ಗಿ ಅಂತಾ ಹೇಳಿದನು. ಆತನ ಮೊಟರ ಸೈಕಲ ನಂಬರ ನೋಡಲಾಗಿ ಕೆಎ-32 ಇಸಿ-1578 ಅಂತಾ ಬರೆದಿತ್ತು. ನಂತರ ಸದರಿ ವ್ಯಕ್ತಿ ಮತ್ತು ಅಜೀಜಬೇಗ ಕೂಡಿಕೊಂಡು ನನಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ಭಾವಗಿ ಆಸ್ಪತ್ರೆಗೆ ಸೇರಿಕೆ  ಮಾಡಿದರು. ಅಬ್ದುಲರಹಿಮಾನ ಇತನು ನಿನಗೆ ಉಪಚಾರದ ಖರ್ಚು ನೋಡಿಕೊಳ್ಳುತ್ತೆನೆ ನಾನು ಊರಿಗೆ ಹೋಗಿ ಹಣ ತರುತ್ತೆನೆ ಅಂತಾ ಹೇಳಿ ಹೋದವನು. ಮರಳಿ ನನ್ನ ಹತ್ತಿರ ಬರಲಿಲ್ಲ. ನಾನು 03 ದಿವಸಗಳ ಕಾಲ ಭಾವಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆದು ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕುರಾಳ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಅಲ್ಲಿ ವೈದ್ಯರು ನನಗೆ ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ಸುಮಾರು 8-10 ದಿವಸಗಳ ಕಾಲ  ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ನನಗೆ ಖರ್ಚಿಗೆ ಹಣ ಕೊಡುತ್ತೆನೆ ಅಂತಾ ಅಬ್ದುಲರಹಿಮಾನ ಇತನು ಸುಳ್ಳು ಹೇಳಿ ಹೋದವನು ಮರಳಿ ಬಂದಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನರೋಣಾ ಠಾಣೆ : ಶ್ರೀ ದಯಾನಂದ ತಂದೆ ಶಿವಪುತ್ರಪ್ಪಾ ಸಂಗೋಳಗಿ ಸಾ:ಲಾಡಚಿಂಚೋಳಿ ರವರು ದಿನಾಂಕ 01-11-2019 ರಂದು ಆಳಂದ ಪಟ್ಟಣದ ಸಂತೆ ಇದ್ದ ಪ್ರಯುಕ್ತ ನಮ್ಮ ಗ್ರಾಮದ ಪೀಕಪ್ ವಾಹನ ಸಿದ್ದಣ್ಣಾ ಪೂಜಾರಿ ಇವರ ವಾಹನ ಸಂಖ್ಯೆ ಕೆಎ32-ಬಿ4788 ಇದರಲ್ಲಿ ತರಕಾರಿ ಸಾಮಾನು ತಗೆದುಕೊಂಡು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಹೋಗಿದ್ದು, ನಂತರ ಮರಳಿ ನಮ್ಮ ಗ್ರಾಮದ ಕಡೆಗೆ, ಬರುವಾಗ ಅಲ್ಲಿಯಿಂದ ಕಲಬುರಗಿ ಕಡೆಗೆ ಹೋಗಿ ಮತ್ತೆ ಕಲಬುರಗಿಯಿಂದ ಕಿರಾಣಿ ಸಾಮಾನು ತಗೆದುಕೊಂಡು ನಮ್ಮ ಗ್ರಾಮಕ್ಕೆ ಬರುತ್ತಿದ್ದಾಗ, ದಿನಾಂಕ:31/10/2019 ರಂದು ಕಡಗಂಚಿ ಗ್ರಾಮ ದಾಟಿ ನಂದಿ ತೋಟದ ಹತ್ತಿರ ಎದುರುಗಡೆಯಿಂದ ಒಂದು ದೊಡ್ಡಲಾರಿ ಅದರ ಚಾಲಕ ಅತೀವೇಗ ಮತ್ತು ನಿಸ್ಕಾಳಜಿತನಿಂದ ನಡೆಸಿಕೊಂಡು ಬಂದು ಡಿಕ್ಕಿಹೊಡೆದಿದ್ದು, ಅದರಿಂದ ನಮ್ಮ ಪೀಕಪ ವಾಹನ ಪಲ್ಟಿಯಾಗಿ ನನಗೆ ಬಲಗೈಯಿಗೆ ಮತ್ತು ತಲೆಗೆ ಎದೆಗೆ ಭಾರಿ ರಕ್ತಗಾಯವಾಗಿದ್ದು ನಮ್ಮ ವಾಹನ ಚಾಲಕನಾದ ಶರಣಬಸಪ್ಪಾ ತಂದೆ ಪ್ರಭುಲಿಂಗ್ ಬಿಲಗುಂದಿ ಇವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಆಗ ಅಲ್ಲಿಯೇ ಇದ್ದ ಹೊಲದಲ್ಲಿನ ನಮ್ಮ ಗ್ರಾಮದ ನಾಗರಾಜ್ ತಂದೆ ಶಾಂತಪ್ಪಾ ಗೌರ, ಮಾಳಿಂಗರಾಯ ತಂದೆ ಸಿದ್ದಪ್ಪಾ ಚಂದ್ರಶ್ಯಾ ತಂದೆ ವಿಠಲ್ ಅರಬ್, ಪ್ರೇಮಯ್ಯ ತಂದೆ ಶಂಕ್ರಯ್ಯ ಸ್ವಾಮಿ, ಶಂಕರ ತಂದೆ ಹಣಮಂತರಾವ ಪಾಟೀಲ್ ಇವರು ಬಂದು ನನಗೆ ಅಂಬ್ಯೂಲೆನ್ಸಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಉಪಚಾರಕ್ಕಾಗಿ ದಾಖಲಿಸಿದ್ದು, ನಂತರ ಹೆಚ್ಚಿನ ಉಪಚರಕ್ಕಾಗಿ, ಕಾಮರೆಡ್ಡಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ಇರುತ್ತದೆ. ನಂತರ ನನಗೆ ನಮ್ಮ ಸಂಬಂಧಿಕರಿಂದ ಗೊತ್ತಾಗಿದ್ದು ಸದರಿ ಲಾರಿ ನಂಬರ್ ಎಂ.ಹೆಚ್20-ಡಿಇ7269 ಇದ್ದು ಅದರ ಚಾಲಕ ಶೇರಖಾನ ಅಂತಾ ತಿಳಿದು ಬಂದಿರುತ್ತದೆ. ಕಾರಣ ಸದರಿ ಲಾರಿಚಾಲಕನು ಅತೀವೇಗ ಮತ್ತು ನಿಷ್ಕಾಳಜಿತನಿಂದ ನಡೆಸಿಕೊಂಡು ಬಂದು ನಾನು ಕುಳಿತ ವಾಹನಕ್ಕೆ ಡಿಕ್ಕಿಹೊಡೆದು ನನಗೆ ಈ ರೀತಿಯಾಗಿ ತಿವ್ರ ಗಾಯಗೊಳಿಸಿದ ಬಗ್ಗೆ ಯೋಗ್ಯ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, October 31, 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಮಲ್ಲಮ್ಮಾ ಗಂಡ ರಾಮಪ್ಪ ಸಿಂಗೆ ಸಾ|| ಅಫಜಲಪೂರ ರವರು ಕೊನೆಯ ಮಗಳಾದ ಸುಮಿತ್ರಾ ಇವಳಿಗೆ  ಅಫಜಲಪೂರದ ಮನೋಹರ ತಂದೆ ಭಿಮಶ್ಯಾ ಗುಡ್ಡೋಡಗಿ ಇವರಿಗೆ ಮದುವೆ ಮಾಡಿಕೊಟ್ಟಿದ್ದು ನಮ್ಮ ಗ್ರಾಮದಲ್ಲಿ ನಮ್ಮ ಸಂಬಂದಿಕರಲ್ಲಿ ನಿನ್ನೆ ಸರಿಹೋಗಿದ್ದು ಇಂದು ಅಂತಿಮ ಸಂಸ್ಕಾರ ಇದ್ದ ಪ್ರಯುಕ್ತ ಸದರಿ ಅಂತಿಮ ಸಂಸ್ಕಾರಕ್ಕೆ ಸುಮಿತ್ರಾಳು ಬರುತ್ತೇನೆ ಅಂತಾ ನಿನ್ನೆ 4-00 ಪಿಎಮ್ ಸುಮಾರಿಗೆ ಪೊನ ಮಾಡಿ ತಿಳಿಸಿರುತ್ತಾಳೆ ಹೀಗಿದ್ದು ಇಂದು ದಿನಾಂಕ 30-10-2019 ರಂಧು 8-00 ಎಎಮ್‍ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಗೊತ್ತಾಗಿದ್ದೆನೆಂದರೆ ಬಳುರ್ಗಿ ಸಿಮಾಂತರದ ಶ್ರೀ ಮಲ್ಲಯ್ಯಾ ಸ್ವಾಮಿರ ರವರ ಹೊಲದ ಬಂಡಿ ರಸ್ತೆಯಲ್ಲಿ ಒಬ್ಬ ಹೆಣ್ಣುಮಗಳನ್ನು ಬಿಸಾಕಿರುತ್ತಾರೆ ಅಂತಾ ಗೊತ್ತಾಗಿ ನಾನು ಮತ್ತು ನನ್ನ ಮಗನಾದ ಶ್ರೀ ಶರಣಪ್ಪ ತಂದೆ ರಾಮಪ್ಪ ಸಿಂಗೆ ಜೋತೆಗೆ ಹೋಗಿ ನೋಡಲಾಗಿ ನನ್ನ ಮಗಳಾದ ಸುಮಿತ್ರಾಳಿಗೆ ಯಾರೋ ವ್ಯಕ್ತಿಗಳು ಯಾವುದೋ ದುರುದ್ದೇಶದಿಂದ ಹೆಣ್ಣು ಮಕ್ಕಳು ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆಯಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುತ್ತಾರೆ ಸುಮಿತ್ರಾಳಿಗೆ ದಿನಾಂಕ: 29-10-2019 ರ 4-00  ಪಿಎಮ್ ದಿಂದ ದಿ|| 30-10-2019 ರ ಬೆಳಗಿನ  8-00 ಗಂಟೆಯ ಮದ್ಯದ ಅವಧಿಯಲ್ಲಿ  ಕೊಲೆ ಮಾಡಿರುತ್ತಾರೆ ನನ್ನ ಮಗಳನ್ನು ಕೊಲೆ ಮಾಡಿದವರನ್ನು  ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಅವಮ್ಮ ಗಂಡ ಸೋಮಣ್ಣಾ ಹಲಸಂಗಿ ಸಾ|| ಉಡಚಾಣ ರವರಿಗೆ  ಆಕಾಶ ಮತ್ತು ಸುರೇಶ ಅಂತ ಇಬ್ಬರು ಗಂಡು ಮಕ್ಕಳಿರುತ್ತಾರೆ ನನ್ನ ಗಂಡನಾದ ಸೋಮಣ್ಣ್ ತಂದೆ ಬೀರಪ್ಪಾ ಹಲಸಂಗಿ ಈತನು ಒಕ್ಕಲುತನ ಮಾಡಿಕೊಂಡಿರುತ್ತಾನೆ ನಮಗೆ ಉಡಚಾಣ ಸಿಮಾಂತರದಲ್ಲಿ ಹೊಲವಿದ್ದು ಸರ್ವೆ ನಂಬರ 41/2 ನೇದ್ದು ಇರುತ್ತದೆ. ಹಿಗಿದ್ದು ಇಂದು ದಿನಾಂಕ:30/10/2019 ರಂದು ಬೆಳಿಗ್ಗೆ ನಾನು ಮತ್ತು ನನ್ನ ಗಂಡ ಕೂಡಿಕೊಂಡು ಮನೆಯಿಂದ 6-00 ,ಎಮ್,ಸುಮಾರಿಗೆ ನಮ್ಮ ಹೊಲಕ್ಕೆ ಹೋಗಿರುತ್ತೇವೆ ನಾನು ಹೊಲದಲ್ಲಿ ಕಸ ತಗೆಯುತ್ತಿದ್ದಾಗ ನನ್ನಿಂದ ಸ್ವಲ್ಪ ದೂರದಲ್ಲಿ ನನ್ನ ಗಂಡನು ಎತ್ತುಗಳನ್ನು ನಮ್ಮ ಹೊಲದ ಬಾಂದಾರಿಗೆ ಮೇಯಿಸಲು ಬಿಟ್ಟು ಅಲ್ಲಿ ಗಿಡದ ಕೇಳಗೆ ಮಲಗಿಕೊಂಡಿದ್ದನು 6-30 ,ಎಮ್.ಸುಮಾರಿಗೆ ನನ್ನ ಗಂಡನು ಹಾವು ಕಡಿತೊ ಅಂತ ಚಿರಿದನು ಆಗ ನಾನು ಗಾಬರಿಯಿಂದ ಹೋಗಿ ನೋಡಲಾಗಿ ನನ್ನ ಗಂಡನಿಗೆ  ಹೆಡಕಿನ ಕೇಳಗೆ ಬಿನ್ನಿನ ಮೇಲೆ ಸಣ್ಣ ಜೋಳದ ಕಾಳಿನಷ್ಷ ಎರಡು ಚಿಕ್ಕೆ ಗುರುತುಗಳು ಕಂಡವು ನಂತರ ನಾನು ಪಕ್ಕದ ಹೊಲದಲ್ಲಿದ್ದ ನನ್ನ ಗಂಡನ ಅಣ್ಣತಮ್ಮಕಿಯವನಾದ ಶಂಕರಲಿಂಗ ತಂದೆ ಕೆಂಚಪ್ಪ ಹಲಸಂಗಿ ರವರಿಗೆ ಕೂಗಿ ಕರೆದು ಖಾಸಗಿ ವಾಹನ ತರಿಸಿ ನನ್ನ ಗಂಡನಿಗೆ ಮಾಶಾಳ ಆಸ್ಪತ್ರೇಗೆ ಕರೆದುಕೊಂಡು ಹೋಗುತ್ತೀರುವಾಗ ಮಾರ್ಗ ಮದ್ಯದಲ್ಲಿ ಕರಜಗಿ ಗ್ರಾಮದ ಹತ್ತಿರ 7-45 ,ಎಮ್,ಸುಮಾರಿಗೆ ನನ್ನ ಗಂಡನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಾಡಿ ಠಾಣೆ : ಶ್ರೀ ವಿಜಯ ತಂದೆ ಮಾನಸಿಂಗ ರಾಠೋಡ ಮು:ಸಕ್ಕುನಾಯಕ ತಾಂಡಾ ನಾಲವಾರ ರವರು ಕಳೆದ 01 ವರ್ಷದ ಹಿಂದೆ ನಾನು ಬಾಂಬೆಯಲ್ಲಿ ಕೂಲಿಕೆಲಸಕ್ಕೆ ಹೋದಾಗ ನಾಲವಾರ ಸ್ಟೇಷನ ತಾಂಡಾದ ಕಿರಣ ಮತ್ತು ರಾಹುಲ ಸಹ ಬಾಂಬೆಯಲ್ಲಿ ಕೂಲಿಕೆಲಸ ಮಾಡುತ್ತಿದ್ದರು. ಒಂದು ದಿವಸ ಕ್ರೀಕೆಟ ಆಡುವ ಕಾಲಕ್ಕೆ ಕಿರಣ ಮತ್ತು ರಾಹುಲ ಇವರು ವಿನಾಕಾರಣ ನನ್ನೊಂದಿಗೆ ಜಗಳ ಮಾಡಿ ಹೊಡೆ ಬಡೆ ಮಾಡಿದ್ದು ಅಲ್ಲದೇ ಮುಂದೆ ನಿನಗೆ ಬಿಡುವದಿಲ್ಲ ಮಗನೇ ಅಂತಾ ಬೆದರಿಕೆ ಹಾಕಿದ್ದು ನಾನು ಅವರಿಗೆ ಅಂಜಿ ಸುಮ್ಮನಿದ್ದೆನು. ಈಗ ಸುಮಾರು 04 ತಿಂಗಳ ಹಿಂದೆ ಅವರಿಗೆ ಅಂಜಿಕೊಂಡು ಬಾಂಬೆಯನ್ನು ಬಿಟ್ಟು ನಮ್ಮ ತಾಂಡಾಕ್ಕೆ ಬಂದು ಕೂಲಿ ನಾಲಿ ಕೆಲಸ ಮಾಡಿಕೊಂಡು ಉಪ ಜೀವಿಸುತ್ತೆನೆ. ದೀಪಾವಳಿ ಹಬ್ಬಕ್ಕೆಂದು ಕಿರಣ ತಂದೆ ತುಳಸಿರಾಮ , ರಾಹುಲ ತಂದೆ ಗೋವಿಂದ ರವರು ಸಹ ತಮ್ಮ ತಾಂಡಾಕ್ಕೆ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 29/10/2019 ರಂದು ಮದ್ಯಾಹ್ನ 02-30 ಗಂಟೆ ಸುಮಾರು ನಾನು ನಮ್ಮ ಮನೆಯಲ್ಲಿದ್ದಾಗ ಕಿರಣ ತಂದೆ ತುಳಸಿರಾಮ ರಾಠೋಡ , ರಾಹುಲ ತಂದೆ ಗೋವಿಂದ ಜಾಧವ , ಗಂಗಿಬಾಯಿ ಗಂಡ ತುಳಸಿರಾಮ ರಾಠೋಡ ರವರು ನನ್ನ ಮನೆಯ ಹತ್ತಿರ ಬಂದು ಕಿರಣ ಇತನು ‘’ಏ ವಿಜ್ಯಾ ಸುಳೇ ಮಗನೇ ಮನೆಯ ಹೊರಗೆ ಬಾ’’ ಅಂತಾ ಕರೆದನು ಆಗ ನಾನು ಮನೆಯ ಹೊರಗಡೆ ಬಂದಾಗ ಕಿರಣ, ರಾಹುಲ, ಗಂಗಿಬಾಯಿ ರವರಿದ್ದು ಗಂಗಿಬಾಯಿ ಇವಳು ಹಾಂಟ್ಯಾನ ಮಗನೇ ನನ್ನ ಮಗ ಕಿರಣ ಇತನಿಗೆ ಬಾಂಬೆಯಲ್ಲಿ ವಿನಾಕಾರಣ ಜಗಳ ಮಾಡಿ ಹೊಡೆದಿರುವೆ ಅಂತಾ ನಿನ್ನ ಸೊಕ್ಕು ಹೆಚ್ಚಾಗಿದೆ ಮಗನೇ ಅಂತಾ ಬೈದು ಕಿರಣ ಇತನು ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕೈಯಿಂದ ಮೈ ಮೇಲೆ ಹಾಗೂ ಬೆನ್ನಿಗೆ ಹೊಡೆ ಬಡೆ ಮಾಡ ಹತ್ತಿದನು. ರಾಹುಲ ಇತನು ಅಲ್ಲೇ ಬಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಹಿಂದೆ ಹೊಡೆದು ರಕ್ತಗಾಯಪಡಿಸಿದನು. ಆಗ ಮನೆಯಲ್ಲಿದ್ದ ನನ್ನ ಅಣ್ಣ ರಾಜು, ಪ್ರೇಮ ತಂದೆ ಚಂದು ರಾಠೋಡ,ಶ್ರೀಕಾಂತ ತಂದೆ ಚಂದು ರಾಠೋಡ ರವರು ಜಗಳ ಬಿಡಿಸಿರುತ್ತಾರೆ. ಆಗ ರಾಹುಲ ಮತ್ತು ಕಿರಣ ಇವರು ಮಗನೇ ಇವರು ಜಗಳ ಬಂದು ಬಿಡಿಸಿದಾಗ ಸುಮ್ಮನಾಗಿರುತ್ತೆವೆ ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತಿದ್ದೆವು ಅಂತಾ ಜೀವದ ಬೆದರಿಕೆ ಹಾಕುತ್ತ ಹೊರಟು ಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, October 30, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು
ಅಫಜಲಪೂರ ಠಾಣೆ : ದಿನಾಂಕ:29/10/2019 ರಂದು 4-00 ಪಿ,ಎಮ್,ಸುಮಾರಿಗೆ ಶ್ರೀ ಶಶಿಕಾಂತ ತಂದೆ ಬಸವರಾಜ ಸಾಕರೆ ಸಾ|| ತಾರಾಪೂರ ಹಾ|||| ಅಫಜಲಪೂರ ರವರ ತಮ್ಮನು ದುಧನಿ ಗ್ರಾಮದಲ್ಲಿರುವ ನನ್ನ ತಾಯಿಯ ತಂಗಿಗೆ ಮಾತನಾಡಿಸಿ ಬರುತ್ತೇನೆ ಅಂತ ಮನೆಯಿಂದ ನನ್ನ ಮೋಟಾರ ಸೈಕಲ ನಂಬರ ಕೆ,-41 ಇಬಿ-1220 ನೇದ್ದನ್ನು ತಗೆದುಕೊಂಡು ಹೋಗಿರುತ್ತಾನೆ ನಂತರ 4-30 ಪಿ,ಎಮ್,ಸುಮಾರಿಗೆ ಅಫಜಲಪೂರ ಪಟ್ಟಣದ ರಾಚಯ್ಯ ತಂದೆ ಗಂಗಯ್ಯ ಮಠ ರವರು ನನ್ನ ಮೊಬೈಲಗೆ ಕರೆ ಮಾಡಿ ತಿಳಿಸಿದ್ದೆನಂದರೆ ನಾನು ಅಪಜಲಪೂರ-ದುಧನಿ ರೊಡಿಗಿರುವ ಮಳೇಂದ್ರ ಮಠದ ಹೊಲದಲ್ಲಿದ್ದಾಗ 4-30 ಪಿ,ಎಮ್,ಸುಮಾರಿಗೆ ನಿನ್ನ ತಮ್ಮನು ಅಫಜಲಪೂರದಿಂದ ದುಧನಿ ಕಡೆ ಹೋಗುತ್ತಿರುವಾಗ ಎದುರುಗಡೆಯಿಂದ ದುಧನಿ ಕಡೆಯಿಂದ ಬರುತ್ತಿದ್ದ ಕೆ,ಎಸ್,ಆರ್,ಟಿ,ಸಿ ಬಸ್ ನಂಬರ ಕೆ,-32 ಎಫ್-2148 ನೆದ್ದರ ಚಾಲಕನು ಬಸನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ರೊಡ ಬದಿಗೆ ಹೋಗುತ್ತಿದ್ದ ನಿನ್ನ ತಮ್ಮನ ಮೋಟಾರ ಸೈಕಲ ನೇದ್ದಕ್ಕೆ ಗುದ್ದಿ ಅಪಘಾತಪಡಿಸಿದ್ದು ಇರುತ್ತದೆ ಸದರಿ ಅಪಘಾತದಿಂದ ನಿನ್ನ ತಮ್ಮನು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನಗೆ ಪರಿಚಯದವರಾದ ಮಲ್ಲಿಕಾರ್ಜುನ ತಂದೆ ಶೀವರಾಯ ಲಾಳಸಂಗಿ ರವರು ಹೋಗಿ ನೋಡಲಾಗಿ ನನ್ನ ತಮ್ಮನಿಗೆ ಸದರಿ ಅಪಘಾತದಿಂದ ನನ್ನ ತಮ್ಮನಿಗೆ ತಲೆಯ ಹಿಂಭಾಗಕ್ಕೆ,ಎಡಗಡೆಗೆ ಕುತ್ತಿಗೆಯ ಹತ್ತಿರ ಭಾರಿಗಾಯ ಮತ್ತು ಎಡಗಾಲು ಮೋಣಕಾಲು ಕೇಳಗೆ ಕಾಲು ಮುರಿದು ನನ್ನ ತಮ್ಮನು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಮತ್ತು ಸದರಿ ಬಸ್ ಚಾಲಕನು ಅಪಘಾತಪಡಿಸಿದ ಬಸನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ಗೋತ್ತಾಯಿತು. ನನ್ನ ತಮ್ಮನಾದ ಉಮೇಶನಿಗೆ ಅಪಘಾತಪಡಿಸಿ ಸ್ಥಳದಲ್ಲಿಯೆ ಬಸ್ ಬಿಟ್ಟು ಓಡಿ ಹೋದ ಕೆ,ಎಸ್,ಆರ್,ಟಿ,ಸಿ ಬಸ್ ನಂಬರ ಕೆ,-32 ಎಫ್-2148 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವಾಡಿ ಠಾಣೆ : ದಿನಾಂಕ 29/10/2019 ರಂದು ಮದ್ಯಾಹ್ನ 02-00 ಗಂಟೆ ಸುಮಾರು ಶ್ರೀ ದತ್ತಾತ್ರೇಯ ಸಿಪಿಸಿ-1013 ವಾಡಿ ಪೊಲೀಸ ಠಾಣೆ ರವರು ಮತ್ತು ಅಶೋಕ ಸಿಪಿಸಿ-1106 ರವರು ಕೂಡಿಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯ ಕುರಿತು ಹೊರಟು ಲಕ್ಷ್ಮೀಪೂರ ವಾಡಿಯಿಂದ  ರಾವೂರ ಮುಖಾಂತರ ಮುಂದೆ ಚಿತ್ತಾಪೂರ ಕಡೆಗೆ ಹೋಗುವ ರೊಡಿನ ಕಡೆಗೆ ಹೊರಟಾಗ ಬೈಪಾಸ ರೊಡ ಸಮೀಪ ಹೋಗುತ್ತಿದ್ದಂತೆ ಎದರುಗಡೆಯಿಂದ ಒಂದು ಗೂಡ್ಸ ವಾಹನದ ಚಾಲಕನು ಗೂಡ್ಸ ವಾಹನದಲ್ಲಿ ದನಗಳನ್ನು  ಹಿಂಸೆಯಾಗುವ ರೀತಿಯಲ್ಲಿ ಒಂದರ ಮೇಲೆ ಒಂದು ತುಂಬಿಕೊಂಡು ವಾಹನವನ್ನು ಅತಿವೇಗ ಹಾಗೂ ಆಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದನ್ನು ಕಂಡು ಆತನಿಗೆ ಕೈ ಮಾಡಿ ನಿಲ್ಲಿಸಲು ಹೇಳಿದರು ಸಹ ಹಾಗೇ ಸ್ವಲ್ಪ ಮುಂದಕ್ಕೆ ಓಡಿಸಿಕೊಂಡು ಹೊರಟಿದ್ದು ನಾವು ಮೊಟರ ಸೈಕಲ ಮೇಲೆ ಬೆನ್ನು ಹತ್ತಿದಾಗ ಸದರಿ ವ್ಯಕ್ತಿಯು ವಾಹನವನ್ನು ನಿಲ್ಲಿಸಿ ಅಲ್ಲಿಂದ ಓಡ ಹತ್ತಿದನು. ನಾವು ಆತನಿಗೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದರು ಸಹ ಸಿಗದೇ ಓಡಿ ಹೋದನು.ಆಗ ಸಮಯ 02-30 ಪಿ.ಎಮ್ ಆಗಿತ್ತು. ನಂತರ ವಾಹನದ ನಂಬರ ನೋಡಲಾಗಿ ಅಶೋಕ ಲೇ ಲ್ಯಾಂಡ ಕಂಪನಿಯ ಚಿಕ್ಕ ಗೂಡ್ಸ ವಾಹನ ಇದ್ದು ಅದರ ನಂಬರ ಕೆಎ-33 -3767 ಅಂತಾ ಬರೆದಿದ್ದು ಅದರ ಅಂದಾಜು ಕಿಮ್ಮತ್ತು 75 ಸಾವಿರ ರೂಪಾಯಿ ಆಗಬಹುದು ಒಳಗಡೆ 03 ಹೋರಿಗಳು ಹಾಗೂ 02 ಆಕಳುಗಳು ಹಿಂಸೆಯಾಗುವ ರೀತಿಯಲ್ಲಿ ಒಂದರ ಮೇಲೆ ಒಂದು ತುಂಬಿದ್ದು ಅವುಗಳನ್ನು ಪರಿಶೀಲಿಸಿ ನೋಡಲಾಗಿ 1] ಒಂದು ಕಪ್ಪು ಬಣ್ಣದ 2 ½ ವರ್ಷದ ಆಕಳು ಅದರ ಅಂದಾಜು ಕಿಮ್ಮತ್ತು 8 ಸಾವಿರ ರೂಪಾಯಿ 2] ಒಂದು ಕೆಂಪು ಬಣ್ಣದ 3 ½ ವರ್ಷದ ಆಕಳು ಅಂದಾಜು ಕಿಮ್ಮತ್ತು 11 ಸಾವಿರ ರೂಪಾಯಿ 3] ಒಂದು ಬಿಳಿ ಬಣ್ಣದ 1 ವರ್ಷದ  ಹೋರಿ ಅಂದಾಜು  ಕಿಮ್ಮತ್ತು 4 ಸಾವಿರ ರೂಪಾಯಿ 4] ಒಂದು ಕಪ್ಪುಬಣ್ಣದ 02 ವರ್ಷದ ಹೋರಿ ಅಂದಾಜು ಕಿಮ್ಮತ್ತು 6 ಸಾವಿರ ರೂಪಾಯಿ 5] ಒಂದು ಬಿಳಿ ಹಾಗೂ ಕಂದು ಬಣ್ಣದ 01 ವರ್ಷದ ಹೋರಿ ಅಂದಾಜು ಕಿಮ್ಮತ್ತು 3  ಸಾವಿರ ರೂಪಾಯಿ ಹೀಗೆ ಒಟ್ಟು 02 ಆಕಳು ಮತ್ತು 03 ಹೋರಿಗಳು ವಾಹನದ ನಂಬರ ಕೆಎ-33 -3767 ನೇದ್ದರಲ್ಲಿ ತುಂಬಿಕೊಂಡು ವಾಹನ ಚಾಲಕನು ಅವುಗಳಿಗೆ ಯಾವದೇ ಸುರಕ್ಷತೆ ಇಲ್ಲದೇ ಹಿಂಸೆಯಾಗುವ ರೀತಿಯಲ್ಲಿ ಒಂದರ ಮೇಲೆ ಒಂದು ಹಾಕಿಕೊಂಡು ವೇಗವಾಗಿ ಹಾಗೂ ಆಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು ಸದರಿ ವಾಹನ ಮತ್ತು ದನಗಳನ್ನು ಖಾಸಗಿ ವಾಹನ ಚಾಲಕನ ಸಹಾಯದಿಂದ ಪೊಲೀಸ ಠಾಣೆಗೆ ತಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿದರ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನ ಟ್ಯಾಂಕ ಕುಸಿದು ಮಹಿಳೆ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀಮತಿ.ಗಂಗಮ್ಮ ಗಂಡ ಮಹಾದೇವಪ್ಪಾ ಬಿರಾದಾರ, ರವರು ದಿನಾಂಕ:29/10/2019 ರಂದು ಮಧ್ಯಾಹ್ನ  ನಮ್ಮೂರಿನ ಹನುಮಾನ ದೇವರ ಗುಡಿಯ ಹತ್ತಿರ ಇರುವ ಸಾರ್ವಜನಿಕ ನೀರಿನ ಟ್ಯಾಂಕಿಗೆ ನೀರು ತಲರು ಹೋದಾಗ, ನೀರಿನ ಟ್ಯಾಂಕ್ ಒಮ್ಮಿಂದ ಒಮ್ಮಿಂದಲೆ ಕುಸಿದು ಅವಳ ಮೈಮೇಲೆ ಬಿದ್ದಿದ್ದರಿಂದ ಅವಳ ತಲೆಗೆ ಎಡ ಕಪಾಳಿಗೆ ಹೊಟ್ಟೆಗೆ ಬೆನ್ನಿಗೆ ಎದೆಗೆ ಗಂಭೀರಗಾಯ ಹಾಗೂ ಗುಪ್ತಗಾಯಗಳು ಆಗಿದ್ದು, ಇದನ್ನು ನೋಡಿ ನಮ್ಮೂರಿನ ನಾಗರಾಜ ತಂದೆ ಶಿವರಾಜ್ ಬಿರಾದಾರ, ವಿಲಾಸ ತಂದೆ ಶಿವರಾಯ ಹಂಗರಗಾ ಪ್ರಭುಲಿಂಗ ತಂದೆ ಮಾಣಿಕರಾಯ ಬಿರಾದಾರ, ಈರಣ್ಣಾ ತಂದೆ ಶರಣಬಸಪ್ಪಾ ಬಿರಾದಾರ ಇವರೆಲ್ಲರೂ ಸೇರಿ ಬಂದು ಖಾಸಗಿ ಜೀಪಿನಲ್ಲಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತರುವಾಗ ಪಟ್ಟಣದ ಗ್ರಾಮದ ಹತ್ತಿರ ಮೃತಪಟ್ಟಿದ್ದಾರೆ,  ಸದರಿ ನೀರಿನ ಟ್ಯಾಂಕ್ ಹತ್ತುವರ್ಷಗಳ ಹಿಂದೆ ನಿರ್ಮಿಸಿದ್ದು, ಹೋದವರ್ಷ ಕುಸಿದು ಬಿದ್ದಿದ್ದು, ಆಗ ಗ್ರಾಮ ಪಂಚಾಯಿತಿಯವರು ಕಟ್ಟಿಸಿದ್ದು, ಇದನ್ನು ಕಟ್ಟಲು ನಮ್ಮೂರಿನ ಗ್ರಾಮ ಪಂಚಾಯಿತಿ ಸದಸ್ಯರಾದ ಜಾನಾಕಾಯಿ ಗಂಡ ನಾಗಪ್ಪಾ ಕೇರೂರ ಇವರ ಮಗನಾದ ಸಿದ್ದಪ್ಪಾ ತಂದೆ ನಾಗಪ್ಪಾ ಕೇರೂರ ಈತನಿಗೆ ಕೊಟ್ಟಿರುತ್ತಾರೆ. ಸಿದ್ದಪ್ಪನು ಕಟ್ಟಿಸುವಾಗ ಹಳೆಯ ಬೇಸಮಿಂಟ್ ಮೇಲೆ ನಿರೀನ ಟ್ಯಾಂಕ್ ಕಟ್ಟಡ ಕಟ್ಟಿದ್ದು ಇರುತ್ತದೆ. ಕಟ್ಟುವಾಗ ಕಳಪೆ ಮಟ್ಟದ ಕಮಗಾರಿ ಕಟ್ಟಿರುತ್ತಾನೆ. ಹೀಗಾಗಿ ನೀರಿನ ಟ್ಯಾಂಕ್ ಕುಸಿದು ಬಿದ್ದಿರುತ್ತದೆ. ಹೀಗಾಗಿ ನನ್ನ ತಾಯಿ ಮೃತಪಟ್ಟಿರುತ್ತಾಳೆ. ನನ್ನ ತಾಯಿಯ ಸಾವಿಗೆ ನೀರಿನ ಟ್ಯಾಂಕ್ ಕಟ್ಟಿಸಿದ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಅಧ್ಯಕ್ಷರು ಹಾಗೂ ಕಟ್ಟಡ ನಿರ್ಮಿಸಿದ ಗುತ್ತಿಗೆದಾರರು ಹಾಗೂ ಇಂಜಿನಿಯರಗಳು ಮತ್ತು ಸಿದ್ದಪ್ಪಾ ತಂದೆ ನಾಗಪ್ಪಾ ಕೇರೂರ ಇವರ ಬೆಜವಾಬ್ದಾರಿತನ ಹಾಗೂ ನಿರ್ಲಕ್ಷತನವೆ ಕಾರಣವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಠ್ಠಲ ತಂದೆ ನಿಂಗಪ್ಪ ಜಮಾದಾರ ಸಾ|| ಭೋಸಗಾ ರವರು ದಿನಾಂಕ 28-10-2019 ರಂದು 3:00 ಪಿ ಎಮ್ ಕ್ಕೆ ನಮ್ಮೂರಿನ ಜನರು ನಮ್ಮೂರಿನ ಶಿವಪ್ಪ ಹಿಟ್ನಳ್ಳೀ ರವರು ಹೊಲದ ಹತ್ತಿರ ಭಿಮಾ ನದಿಯಲ್ಲಿ ಅಂದಾಜು 25-30 ವರ್ಷ ವಯಸ್ಸಿನ ಗಂಡು ವ್ಯೆಕ್ತಿಯ ಶವವು ನೀರಿನಲ್ಲಿ ತೇಲುತ್ತಾ ಬಂದಿದೆ ಎಂದು ತಿಳಿಸಿದ ಮೇರೆಗೆ ನಾನು ಸಹ ಸ್ಥಳಕ್ಕೆ ಹೋಗಿ ನೋಡಲಾಗಿ ಶವವು ಬೋರಲಾಗಿ ಬಿದ್ದಿತ್ತು, ಶವದ ಮೈಮೈಲೆ ಅಂಡವೇರ ಬಟ್ಟೆ ಇದ್ದು ಯಾವುದೆ ಬಟ್ಟೆ ಇರಲಿಲ್ಲ. ಸದರಿ ವ್ಯೆಕ್ತಿ ಯಾವುದೊ ಸ್ಥಳದಲ್ಲಿ ನೀರಿನಲ್ಲಿ ಈಜಲು ಹೋಗಿ ಅಥವಾ ಮೀನು ಹಿಡಿಯಲು ಹೋಗಿ ನಿರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾನೆ. ಸದರಿ ಮೃತನ ಸಾವಿನಲ್ಲಿ ಸಂಶಯ ಇರುತ್ತದೆ ಎಂದು ಕೊಟ್ಟ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.