Police Bhavan Kalaburagi

Police Bhavan Kalaburagi

Wednesday, May 6, 2020

BIDAR DISTRICT DAILY CRIME UPDATE 06-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-05-2020
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 302 ಜೊತೆ 149 ಐಪಿಸಿ ;-
ದಿನಾಂಕ: 05-05-2020 ರಂದು 1900 ಗಂಟೆಗೆ ಫಿರ್ಯಾದಿ ಎಮ್.ಡಿ. ಮಸ್ತಾನ ತಂದೆ ಚಾಂದಸಾಬ ಝಂಡಾ ವಯ 32 ವರ್ಷ ಉ: ಕೂಲಿ ಕೆಲಸ ಸಾ: ಹರಸೂರ ತಾ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಂಶವೆನೆಂದರೆ  ಇವರ ಅಕ್ಕ ಹಫೀಜಾ ಮತ್ತು ಭಾವ ಬಾಬುಮೀಯ್ಯಾ ಇವರು 40 ವರ್ಷಗಳಿಂದ ಮುಂಬೈಯಲ್ಲಿ ಕೂಲಿ ಮಾಡಿಕೊಂಡು ವಾಸವಾಗಿರುತ್ತಾರೆ. ಅವರ ಮಗಳು ಅಫಸಾನಾ ಇವಳಿಗೆ ಸುಮಾರು 10 ವರ್ಷಗಳ ಹಿಂದೆ ಹಣಮಂತವಾಡಿ ಗ್ರಾಮದ ಚಾಂದಪಾಶಾ  ಇವರಿಗೆ ಕೋಟ್ಟು ಮದುವೆ ಮಾಡಿದ್ದು ಅವರಿಗೆ 3 ಮಕ್ಕಳು ಇರುತ್ತಾರೆ. ಅಫಸಾನಾ ಇವಳ ಗಂಡ ಕಾಯಿಲೆಯಿಂದ ದಿನಾಂಕ: 24-04-2020 ರಂದು ಮೃತ ಪಟ್ಟಿರುತ್ತಾನೆ. ಅಫಸಾನಾ ಇವಳು ತನ್ನ 3 ಮಕ್ಕಳೊಂದಿಗೆ ಹಣಮಂತವಾಡಿ ಗ್ರಾಮದಲ್ಲಿ ಇದ್ದಳು. ಅಫಸಾನಾ ಇವಳ ಗಂಡ ತೀರಿಕೊಂಡ ನಂತರ ಸ್ವಸಾಯ ಸಂಘದಿಂದ ತನ್ನ ಗಂಡ ತೀರಿಕೊಂಡ ನಂತರ ಬರುವ ಮಾಪಿ ಲೋನ ಹಣ ಬರುವದಿದ್ದು ಆ ಹಣದಲ್ಲಿ ನನಗು ಪಾಲು ಬೇಕು ಅಂತ ಅಫಸಾನಾ ಇವಳಿಗೆ ಅವಳ ಭಾವ ಮದರಸಾಬ ಮತ್ತು ಅವನ ಹೆಂಡತಿ ರಿಯಾನಾ ಹಾಗು ಅವರ ಮಗ ನಬಿ ಮತ್ತು ಗಲ್ಲಿಯ ದಸ್ತೆಗಿರ ಹಾಗೂ ಚಹಾ ಅಂಗಡಿಯವನ ಮಗನಾದ ಬಾಬಾ ಇವರೆಲ್ಲರೂ ಹಣದಲ್ಲಿ ನಮಗೆ ಪಾಲು ಕೊಡದ್ದಿದರೆ ನಿನಗೆ ಕೊಲೆ ಮಾಡಿಬಿಡುತ್ತೆವೆ ಅಂತ ಹೆದರಿಸುತ್ತಿದ್ದರು ಈ ವಿಷಯವನ್ನು ಅಫಸಾನಾ ಇವಳು ಫಿರ್ಯಾದಿ ಅಕ್ಕ ಹಾಗೂ  ತಾಯಿ ಹಾಫೀಜಾ ಇವಳಿಗೆ ಫೋನ ಮೂಲಕ ತಿಳಿಸಿರುತ್ತಾಳೆ. ದಿನಾಂಕ: 04-05-2020 ರಂದು ಸಾಯಂಕಾಲ ದಿಂದ ರಾತ್ರಿಯವರೆಗೆ ಅಫಸಾನಾ ಇವಳಿಗೆ ಹಣದ ಪಾಲಿನ ಬಗ್ಗೆ ಜಗಳ ತೇಗೆದು ನಿನು ಪಾಲು ಕೊಡದ್ದಿದರೆ ನಾವೇಲ್ಲರು ಸೇರಿ ನಿನಗೆ ಇವತ್ತೆ ಖತಮ ಮಾಡಿ ಬಂದ ಹಣ ನಾವು ಹಂಚಿಕೊಳ್ಳುತ್ತೆವೆ. ಅಂತ ಜಗಳಮಾಡಿದ್ದನ್ನು ದಿನಾಂಕ: 05-05-2020 ರಂದು ಮುಂಜಾನೆ 9-00 ಗಂಟೆಗೆ ಅಫಸಾನಾ ಇವಳು ತನ್ನ ತಾಯಿಗೆ ಫೋನ ಮೂಲಕ ತಿಳಿಸಿರುತ್ತಾಳೆ. ಸಂಶಯ ಬಂದ ಮೇರೆಗೆ ಹಣಮಂತವಾಡಿ ಗ್ರಾಮಕ್ಕೆ ಹೋಗಿ ನೊಡಿದಾಗ  ಅಫಸಾನಾ ಇವಳು ತನ್ನ ಮನೆಯ ತಗಡಿನ ಶೇಡಿನಲ್ಲಿ ಒಳಗೆ ಸತ್ತು ಬಿದ್ದಿರುತ್ತಾಳೆ ಮತ್ತು ತಗಡದ ಕೇಳಗಿನ ಕಬ್ಬಿಣದ ದಂಟೆಗೆ ಒಂದು ನೇಣು ಹಾಕಿಕೊಂಡಂತೆ ಸೀರೆ ಜೋತು ಬಿದ್ದಿರುತ್ತದೆ. ಘಟನೆಯ ಬಗ್ಗೆ ಗಲ್ಲಿಯ ಮಹೇಬುಬ ಇತನಿಗೆ ವಿಚಾರಿಸಿದಾಗ ಇವನು ತಿಳಿಸಿದೆನೆಂದರೆ ಮುಂಜಾನೆ 11:30 ಗಂಟೆ ಸುಮಾರಿಗೆ ರಿಯಾನಾ ಮತ್ತು ಮದರಸಾಬ ಇವರು ಕೂಗಿದಾಗ ಅಫಸಾನಾ ಇವಳ ಮನೆಗೆ ಹೋಗಿ ಮನೆಯಲ್ಲಿ ನೊಡಿದಾಗ ಅಫಸಾನಾ ಇವಳು ನೇಣುಹಾಕಿಕೊಂಡಿರುವುದು ಕಂಡು ನನ್ನ ಮಗ ಕುತ್ತಿಗೆಯ ನೇಣು ತೆಗೆದು ನೇಲಕ್ಕೆ ಮಲಗಿಸಿ ನೋಡಲು ಅಫಸಾನಾ ಇವಳು ಮೃತ್ತ ಪಟ್ಟಿರುತ್ತಾಳೆ ಅಂತ ತಿಳಿಸಿರುತ್ತಾನೆ. ಅಫಸಾನಾ ಇವಳಿಗೆ ತನ್ನ ಗಂಡ ಮೃತ್ತ ಪಟಿರುವುದರಿಂದ ಸಂಘದಿಂದ ಬರುವ ಮಾಪಿ ಲೋನನ ಹಣದಲ್ಲಿ ಪಾಲು ಕೊಡುವ ಬಗ್ಗೆ ಮದರಸಾಬ ಮತ್ತು ಆತನ ಹೆಂಡತಿ ರಿಯಾನಾ ಹಾಗೂ ಮಗ ನಬಿ ಮತ್ತು ಗಲ್ಲಿಯ ದಸ್ತೆಗೀರ ಹಾಗೂ ಬಾಬಾ ಇವರೆ ಕೂಡಿಕೊಂಡು ನಮ್ಮ ಅಕ್ಕನ ಮಗಳಾದ ಅಫಸಾನಾ ಇವಳಿಗೆ ಹಣದ ಪಾಲು ಕೊಡುವುದಿಲ್ಲಾ ಅಂತ ಅವಳಿಗೆ ನೇಣು ಹಾಕಿ ಕೊಲೆ ಮಾಡಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.                                                      

BIDAR DISTRICT DAILY CRIME UPDATE 06-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-05-2020
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 302 ಜೊತೆ 149 ಐಪಿಸಿ ;-
ದಿನಾಂಕ: 05-05-2020 ರಂದು 1900 ಗಂಟೆಗೆ ಫಿರ್ಯಾದಿ ಎಮ್.ಡಿ. ಮಸ್ತಾನ ತಂದೆ ಚಾಂದಸಾಬ ಝಂಡಾ ವಯ 32 ವರ್ಷ ಉ: ಕೂಲಿ ಕೆಲಸ ಸಾ: ಹರಸೂರ ತಾ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಂಶವೆನೆಂದರೆ  ಇವರ ಅಕ್ಕ ಹಫೀಜಾ ಮತ್ತು ಭಾವ ಬಾಬುಮೀಯ್ಯಾ ಇವರು 40 ವರ್ಷಗಳಿಂದ ಮುಂಬೈಯಲ್ಲಿ ಕೂಲಿ ಮಾಡಿಕೊಂಡು ವಾಸವಾಗಿರುತ್ತಾರೆ. ಅವರ ಮಗಳು ಅಫಸಾನಾ ಇವಳಿಗೆ ಸುಮಾರು 10 ವರ್ಷಗಳ ಹಿಂದೆ ಹಣಮಂತವಾಡಿ ಗ್ರಾಮದ ಚಾಂದಪಾಶಾ  ಇವರಿಗೆ ಕೋಟ್ಟು ಮದುವೆ ಮಾಡಿದ್ದು ಅವರಿಗೆ 3 ಮಕ್ಕಳು ಇರುತ್ತಾರೆ. ಅಫಸಾನಾ ಇವಳ ಗಂಡ ಕಾಯಿಲೆಯಿಂದ ದಿನಾಂಕ: 24-04-2020 ರಂದು ಮೃತ ಪಟ್ಟಿರುತ್ತಾನೆ. ಅಫಸಾನಾ ಇವಳು ತನ್ನ 3 ಮಕ್ಕಳೊಂದಿಗೆ ಹಣಮಂತವಾಡಿ ಗ್ರಾಮದಲ್ಲಿ ಇದ್ದಳು. ಅಫಸಾನಾ ಇವಳ ಗಂಡ ತೀರಿಕೊಂಡ ನಂತರ ಸ್ವಸಾಯ ಸಂಘದಿಂದ ತನ್ನ ಗಂಡ ತೀರಿಕೊಂಡ ನಂತರ ಬರುವ ಮಾಪಿ ಲೋನ ಹಣ ಬರುವದಿದ್ದು ಆ ಹಣದಲ್ಲಿ ನನಗು ಪಾಲು ಬೇಕು ಅಂತ ಅಫಸಾನಾ ಇವಳಿಗೆ ಅವಳ ಭಾವ ಮದರಸಾಬ ಮತ್ತು ಅವನ ಹೆಂಡತಿ ರಿಯಾನಾ ಹಾಗು ಅವರ ಮಗ ನಬಿ ಮತ್ತು ಗಲ್ಲಿಯ ದಸ್ತೆಗಿರ ಹಾಗೂ ಚಹಾ ಅಂಗಡಿಯವನ ಮಗನಾದ ಬಾಬಾ ಇವರೆಲ್ಲರೂ ಹಣದಲ್ಲಿ ನಮಗೆ ಪಾಲು ಕೊಡದ್ದಿದರೆ ನಿನಗೆ ಕೊಲೆ ಮಾಡಿಬಿಡುತ್ತೆವೆ ಅಂತ ಹೆದರಿಸುತ್ತಿದ್ದರು ಈ ವಿಷಯವನ್ನು ಅಫಸಾನಾ ಇವಳು ಫಿರ್ಯಾದಿ ಅಕ್ಕ ಹಾಗೂ  ತಾಯಿ ಹಾಫೀಜಾ ಇವಳಿಗೆ ಫೋನ ಮೂಲಕ ತಿಳಿಸಿರುತ್ತಾಳೆ. ದಿನಾಂಕ: 04-05-2020 ರಂದು ಸಾಯಂಕಾಲ ದಿಂದ ರಾತ್ರಿಯವರೆಗೆ ಅಫಸಾನಾ ಇವಳಿಗೆ ಹಣದ ಪಾಲಿನ ಬಗ್ಗೆ ಜಗಳ ತೇಗೆದು ನಿನು ಪಾಲು ಕೊಡದ್ದಿದರೆ ನಾವೇಲ್ಲರು ಸೇರಿ ನಿನಗೆ ಇವತ್ತೆ ಖತಮ ಮಾಡಿ ಬಂದ ಹಣ ನಾವು ಹಂಚಿಕೊಳ್ಳುತ್ತೆವೆ. ಅಂತ ಜಗಳಮಾಡಿದ್ದನ್ನು ದಿನಾಂಕ: 05-05-2020 ರಂದು ಮುಂಜಾನೆ 9-00 ಗಂಟೆಗೆ ಅಫಸಾನಾ ಇವಳು ತನ್ನ ತಾಯಿಗೆ ಫೋನ ಮೂಲಕ ತಿಳಿಸಿರುತ್ತಾಳೆ. ಸಂಶಯ ಬಂದ ಮೇರೆಗೆ ಹಣಮಂತವಾಡಿ ಗ್ರಾಮಕ್ಕೆ ಹೋಗಿ ನೊಡಿದಾಗ  ಅಫಸಾನಾ ಇವಳು ತನ್ನ ಮನೆಯ ತಗಡಿನ ಶೇಡಿನಲ್ಲಿ ಒಳಗೆ ಸತ್ತು ಬಿದ್ದಿರುತ್ತಾಳೆ ಮತ್ತು ತಗಡದ ಕೇಳಗಿನ ಕಬ್ಬಿಣದ ದಂಟೆಗೆ ಒಂದು ನೇಣು ಹಾಕಿಕೊಂಡಂತೆ ಸೀರೆ ಜೋತು ಬಿದ್ದಿರುತ್ತದೆ. ಘಟನೆಯ ಬಗ್ಗೆ ಗಲ್ಲಿಯ ಮಹೇಬುಬ ಇತನಿಗೆ ವಿಚಾರಿಸಿದಾಗ ಇವನು ತಿಳಿಸಿದೆನೆಂದರೆ ಮುಂಜಾನೆ 11:30 ಗಂಟೆ ಸುಮಾರಿಗೆ ರಿಯಾನಾ ಮತ್ತು ಮದರಸಾಬ ಇವರು ಕೂಗಿದಾಗ ಅಫಸಾನಾ ಇವಳ ಮನೆಗೆ ಹೋಗಿ ಮನೆಯಲ್ಲಿ ನೊಡಿದಾಗ ಅಫಸಾನಾ ಇವಳು ನೇಣುಹಾಕಿಕೊಂಡಿರುವುದು ಕಂಡು ನನ್ನ ಮಗ ಕುತ್ತಿಗೆಯ ನೇಣು ತೆಗೆದು ನೇಲಕ್ಕೆ ಮಲಗಿಸಿ ನೋಡಲು ಅಫಸಾನಾ ಇವಳು ಮೃತ್ತ ಪಟ್ಟಿರುತ್ತಾಳೆ ಅಂತ ತಿಳಿಸಿರುತ್ತಾನೆ. ಅಫಸಾನಾ ಇವಳಿಗೆ ತನ್ನ ಗಂಡ ಮೃತ್ತ ಪಟಿರುವುದರಿಂದ ಸಂಘದಿಂದ ಬರುವ ಮಾಪಿ ಲೋನನ ಹಣದಲ್ಲಿ ಪಾಲು ಕೊಡುವ ಬಗ್ಗೆ ಮದರಸಾಬ ಮತ್ತು ಆತನ ಹೆಂಡತಿ ರಿಯಾನಾ ಹಾಗೂ ಮಗ ನಬಿ ಮತ್ತು ಗಲ್ಲಿಯ ದಸ್ತೆಗೀರ ಹಾಗೂ ಬಾಬಾ ಇವರೆ ಕೂಡಿಕೊಂಡು ನಮ್ಮ ಅಕ್ಕನ ಮಗಳಾದ ಅಫಸಾನಾ ಇವಳಿಗೆ ಹಣದ ಪಾಲು ಕೊಡುವುದಿಲ್ಲಾ ಅಂತ ಅವಳಿಗೆ ನೇಣು ಹಾಕಿ ಕೊಲೆ ಮಾಡಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.                                                      

Monday, May 4, 2020

BIDAR DISTRICT DAILY CRIME UPDATE 04-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 04-05-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 60/2020 ಕಲಂ 32, 34 ಕರ್ನಾಟಕ  ಅಬಕಾರಿ ಕಾಯ್ದೆ :-

ದಿನಾಂಕ:03/05/2020 ರಂದು 10;30 ಗಂಟೆಗೆ  ನಾನು ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಭಾತ್ಮಿದಾರರಿಂದ ಪೋನ್ ಮುಖಾಂತರ ಖಚಿತ ಭಾತ್ಮಿ ತಿಳಿದುಬಂದಿದ್ದೆನೆಂದರೆ ಬಸವಕಲ್ಯಾಣ ನಗರದ ಪರತಾಪೂರ ರಸ್ತೆಯ ಬದಿಯಲ್ಲಿರುವ ರೆಡ್ಡಿ ಧಾಭಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು  ತಮ್ಮ  ಹತ್ತಿರ ಕಳ್ಳಭಟ್ಟಿ ಸರಾಯಿವುಳ್ಳ ಬಿಳಿ ಬಣ್ಣದ ಕ್ಯಾನ್ ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಬಂದ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಇಬ್ಬರನ್ನು ಹಿಡಿದು ವಿಚಾರಿಸಲು  1]ಮಹ್ಮದ ಶಬ್ಬಿರ ತಂದೆ ಮಹ್ಮದ ಯುಸುಫ್ ತಾಂಬೊಲೆವಾಲೆ ವಯಸ್ಸು:39 ವರ್ಷ ಜಾತಿ:ಮುಸ್ಲಿಂ  2] ರಾಜು ತಂದೆ ರೋಪಹಿದಾಸ ಗಾಯಕವಾಡ ವಯಸ್ಸು:35 ವರ್ಷ ಜಾತಿ: ಎಸ್.ಸಿ ದಲಿತ  ಇವರುಗಳಿಂದ  05 ಲೀಟರ   ಕಳ್ಳಭಟ್ಟಿ ಸರಾಯಿ   ಅಂದಾಜು ಕಿಮ್ಮತ್ತು 1500/-ರೂ ನೇದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಬಸವಕಲ್ಯಾಣ ಗ್ರಾಮೀಣ ಪೊಲೀಸ್  ಠಾಣೆ ಯು.ಡಿ.ಆರ್. ಸಂಖ್ಯೆ 05/2020 ಕಲಂ 174 ಸಿಆರ್ಪಿಸಿ :-

ದಿನಾಂಕ 03-05-2020 ರಂದು 1900 ಗಂಟೆಗೆ ಫಿರ್ಯಾದಿ ಅಸ್ಮಾ ಬೇಗಂ ಗಂಡ ಮಹ್ಮದ ಅಜರೋದ್ದಿನ ಮೋಮಿನ ವಯ 28 ವರ್ಷ ಉದ್ಯೋಗ ಮನೆ ಕೆಲಸ ಸಾ: ರಾಜೇಶ್ವರ ಗ್ರಾಮ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನಿಡಿದರ ಸಾರಾಂಶವೆನೆಂದರೆ   ಇವರ ಗಂಡ ಮಹ್ಮದ ಅಜರೋದ್ದಿನ ಇವರು ಹುಮನಾಬಾದ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಅಟೆಂಡರ ಕೆಲಸ ಮಾಡುತ್ತಾರೆ.  ದಿನಾಂಕ 03-05-2020 ರಂದು ಸಾಯಾಂಕಾಲ 1700 ಗಂಟೆಗೆ ಇವರ ಪತಿ ಮಹ್ಮದ ಅಜರೋದ್ದಿನ ಇವರು ಮನೆಯ ಅಂಗಳದಲ್ಲಿ ನಿಂತಿದರು ಇದೆ ವೇಳಗೆ ಗಾಳಿ ದೂಳು ಬಂದಿದ್ದರಿಂದ ಅಂಗಳದಲ್ಲಿ ಹಾಕಿದ ಕರೆಂಟ ವೈರ ಅಕಷ್ಮಿಕವಾಗಿ ಕಟ್ ಆಗಿ ಅಜರೋದ್ದಿನ ಇವರ ಎಡಗೈ   ಮೇಲೆ ಬಿದ್ದರಿಂದ ಇವರಿಗೆ ಕರೆಂಟ ಹತ್ತಿ ಅಲ್ಲೆ ಅಂಗಳದಲ್ಲಿ ಬಿದ್ದಾಗ ಚಿಕಿತ್ಸೆ ಕುರಿತು ಬಸವಕಲ್ಯಾಣ ಪಟ್ಟಣ ನ್ಯೂ ರೀಫಾ ಖಾಸಗಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ಫಿರ್ಯಾದಿ ಪತಿ ಮಹ್ಮದ ಅಜರೋದ್ದಿನ ವಯ: 35 ವರ್ಷ  ಇವರು   ದಿನಾಂಕ 03-05-2020 ರಂದು 1800 ಗಂಟೆಗೆ ನ್ಯೂ ರೀಫಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

Sunday, May 3, 2020

BIDAR DISTRICT DAILY CRIME UPDATE 03-05-2020


ದಿನಂಪ್ರತಿ  ಅಪರಾಧಗಳ ಮಾಹಿತಿ ದಿನಾಂಕ: 03-05-2020
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 57/2020 ಕಲಂ 379 ಐಪಿಸಿ :-
ದಿನಾಂಕ 02/05/2020 ರಂದು 2000 ಗಂಟೆಗೆ ಫಿರ್ಯಾದಿ ಅಶೋಕ ತಂದೆ ರೇವಪ್ಪಾ ಬಿರಾದಾರ ಕಿರಿಯ ಇಂಜಿನಿಯರ ವಿಭಾಗಿಯ ಕಛೇರಿ ಜೇಸ್ಕಾಂ ಹುಮನಾಬಾದ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ   ಜೇಸ್ಕಾಂದ ಟಿ.ಸಿ (ಪರಿವರ್ತಕ) ಗಳು ರಿಪೇರಿ ಕುರಿತು ಖಾಸಗಿ ಕಂಪನಿಯಾದ ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯವರಿಗೆ ಗುತ್ತಿಗೆ ಕೊಟ್ಟಿದ್ದು ಇರುತ್ತದೆ ಆ ಕಂಪನಿಯಲ್ಲಿ ಹಣಮಂತ ಹೇರಾಪೂರ ಅಂತಾ ಮ್ಯಾನೇಜರ ಇರುತ್ತಾರೆ. ಈಗ ಕೆಲವು ದಿವಗಳ ಹಿಂದೆ ನಮ್ಮ ಜೇಸ್ಕಾಂದಿಂದ ಟಿ.ಸಿ ಗಳು ರಿಪೇರಿ ಕುರಿತು ಕೊಟ್ಟಿದ್ದು  ಫಿಯರ್ಾದಿರವರು ದಿನಾಂಕ 30/04/2020 ರಂದು ರಿಪೇರಿ ಸೆಂಟರಗೆ ಹೋಗಿ ನೋಡಲು ಎಲ್ಲ ಟಿ.ಸಿ ಗಳು ಇದ್ದವು, ದಿನಾಂಕ 02/05/2020 ರಂದು ಮುಂಜಾನೆ 1100 ಗಂಟೆಗೆ ಫಿಯರ್ಾದಿಯ ಹಾಗು ದಶರಥ ಸಹಾಯಕ ಸ್ಟೋರ ಕೀಪರ ಇಬ್ಬರು ಸೇರಿ ರಿಪೇರಿ ಸೆಂಟರಗೆ ಹೋಗಿ ನೋಡಲು  ಇವರು  ಕೊಟ್ಟ ಟಿ.ಸಿ ಗಳ ಪೈಕಿ ಎರಡು 25 ಕೆ.ವಿ.ಎ., ಟಿ.ಸಿ ಇರಲಿಲ್ಲ ಯಾರೋ ಅಪರಿಚಿತ ಕಳ್ಳರು ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯ ಶೆಡ್ಡದಲ್ಲಿ ಇದ್ದ 25 ಕೆ.ವಿ.ಎ. ಯ ಎರಡು ಟಿ.ಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ 25 ಕೆ.ವಿ.ಎ ಯ ಎರಡು ಟಿ.ಸಿಯ ಅಂದಾಜು ಕಿಮ್ಮತ್ತ 1,17,400/- ರೂಪಾಯಿ ಇರುತ್ತದೆ. ಕಾರಣ ದಿನಾಂಕ 30/04/2020 ರಿಂದ ದಿನಾಂಕ 02/05/2020 ರಂದು ಮಧ್ಯಾಹ್ನ 1100 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯ ಶೆಡ್ಡದಲ್ಲಿಯ 25 ಕೆ.ವಿ.ಎ ಯ ಎರಡು ಟಿ.ಸಿ ಕಳವು ಮಾಡಿಕೊಂಡು ಹೋಗಿರುತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32, 34 ಕರ್ನಾಟಕ ಅಬಕಾರಿ ಕಾಯ್ದೆ:-

ದಿನಾಂಕ 02/05/2020 ರಂದು 1500 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿರುವಾಗ  ಗೌರ ತಾಂಡಾ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿ ಕಳ್ಳಭಟ್ಟಿ ಸಾರಾಯಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತಿದ್ದಾನೆಂದು ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಬೇಲೂರ ಮಾರ್ಗವಾಗಿ ಗೌರ ತಾಂಡಾ ಕ್ರಾಸ್ ಹತ್ತಿರ ಹೋಗಿ ನೋಡಿದಾಗ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಬಿಳಿ ಪ್ಲಾಸ್ಟಿಕ್ ಡಬ್ಬಿ ಇಟ್ಟುಕೊಂಡು ನಿಂತಿರುವುದನ್ನು ನೋಡಿ  ಅವನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ತಿಳಿಸಿದ್ದೆನೆಂದರೆ,  ಮೋಹನ ತಂದೆ ಲಕ್ಷ್ಮಣ ಪವಾರ ವಯ 42 ವರ್ಷ, ಜಾತಿ ಲಂಬಾಣಿ, ಉ: ಕೂಲಿ ಕೆಲಸ ಸಾ: ಗೌರ ತಾಂಡಾ ಅಂತ ತಿಳಿಸಿರುತ್ತಾನೆ. ಮುಂದುವರೆದು ನಾನು ಮೋಹನ ಈತನಿಗೆ ನಿನ್ನ ಹತ್ತಿರವಿರುವ ಪ್ಲಾಸ್ಟಿಕ ಡಬ್ಬಿಯಲ್ಲಿ ಎನು ಇದೆ ಅಂತ ವಿಚಾರಿಸಲಾಗಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಕಳ್ಳಭಟ್ಟಿ ಸಾರಾಯಿ ಇರುವುದಾಗಿ ತಿಳಿಸಿರುತ್ತಾನೆ.   ಸರಕಾರದ ಪರವಾನಿಗೆ ಇಲ್ಲದೆ, ಅನಧಿಕೃತವಾಗಿ ನನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗ ತಿಳಿಸಿರುತ್ತಾನೆ.   ಅವನ ಹತ್ತಿರವಿದ್ದ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿನ ಅಂದಾಜು 5 ಲೀಟರ ಕಳ್ಳಭಟ್ಟಿ ಸಾರಾಯಿ ಅಂದಾಜು ಕಿಮ್ಮತ್ತು 500/- ರೂಪಾಯಿಗಳು  ಬೆಲೆ ಉಳ್ಳದು ಪಂಚರ ಸಮಕ್ಷಮ  ಜಪ್ತಿ ಹಾಗು ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು  ಆರೋಪಿತನ ವಿರುದ್ದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 110/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 02/05/2020 ರಂದು 16:00 ಗಂಟೆಗೆ ಪಿಎಸ್ಐ ರವಠಾಣೆಯಲ್ಲಿದ್ದಾಗ ಭಾಲ್ಕಿಯ ಭೀಮನಗರದಲ್ಲಿ ಖೂಲ್ಲಾ ಜಾಗೆಯಲ್ಲಿ ಕೆಲವು ಜನರು  ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಒಬ್ಬೋಬ್ಬರ ಹೆಸರು ಮತ್ತು ವಿಳಾಸ ವಿಚಾರಿಸಲು ತಮ್ಮ ಹೆಸರು 1] ಶರಣಪ್ಪಾ ತಂದೆ ತುಳಸಿರಾಮ ಭಾವಿಕಟ್ಟಿ, ವಯ-53 ವರ್ಷ,  2] ಮೊಹ್ಮದ ಗೋರೆ ತಂದೆ ಮಹೆಬೂಬಸಾಬ ಗೋರೆ, ವಯ: 32 ವರ್ಷ  3] ರಾಹುಲ ತಂದೆ ಚಂದ್ರಪ್ಪಾ ಮದನ, ವಯ: 28 ವರ್ಷ,  4] ಪ್ರದೀಪ ತಂದೆ ಪ್ರಕಾಶ ಸಿಂಧನಕೇರೆ, ವಯ: 26 ವರ್ಷ   5] ವಿಶಾಲ ತಂದೆ ರಾಜಕುಮಾರ ಮೇತ್ರೆ, ವಯ: 20 ವರ್ಷ   6] ಮಾರುತಿ ತಂದೆ ಶಿವರಾಮ ಸಿಂಗೆ, ವಯ-45 ವರ್ಷ,   ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 3110 ರೂ ಹಾಗು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Saturday, May 2, 2020

BIDAR DISTRICT DAILY CRIME UPDATE 02-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 02-05-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 73/2020 ಕಲಂ 87 ಕೆ.ಪಿ. ಕಾಯ್ದೆ :-

ದಿನಾಂಕ  01-5-2020 ರಂದು ಕುಂಬಾರವಾಡಾದ ಭವಾನಿ ಮಂದಿರದ ಎದರುಗಡೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ನಸಿಬಿನ  ಇಸ್ಪಟ್ ಜೂಜಾಟ ಆಡುತಿದ್ದಾರೆ ಅಂತಾ ಪಿಎಸ್ಐ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅಂದರ ಬಾಹರ ಇಸ್ಪೀಟ್ ಜೂಜಾಟದಲ್ಲಿ  ತೊಡಗಿದ   ಜನರನ್ನು ಹಿಡಿದು   ಅಂಗ ಜಡ್ತಿ  ಮಾಡಲಾಗಿ (1) ಆನಂದ ತಂದೆ ರಾಜಕುಮಾರ ಹುಗ್ಗೆ ವಯ 20 ವರ್ಷ ಸಾ ಭವಾನಿ ಮಂದಿರದ ಹತ್ತಿರ ಕುಂಬಾರವಾಡ ಬೀದರ ಇವನ ಹತ್ತಿರ ನಗದು ಹಣ ರೂ  540-00(2) ಸದ್ದಾಮ ತಂದೆ ಬಶೀರಮಿಯಾ ವಯ 23 ವರ್ಷ ಜಾತಿ ಮುಸ್ಲಿಂ ಸಾ : ಭವಾನಿ ಮಂದಿರದ ಹತ್ತಿರ ಬೀದರ ಇವನ ಹತ್ತಿರ ನಗದು ಹಣ ರೂ : 630-00 (3) ಮಹ್ಮದ ಚಾಂದಪಾಶಾ ತಂದೆ ಮಹ್ಮದ ಮಖಬೂಲಸಾಬ ವಯ 25 ವಷ್ ಮುಸ್ಲಿಂ ಸಾ : ಭವಾನಿ ಮಂದಿರ ಹತ್ತಿರ ಕುಂಬಾರವಾಡಾ ಬೀದರ ಇವನ ಹತ್ತಿರ ನಗದು ಹಣ ರೂ : 730-00 (4) ಆಕಾಶ ತಂದೆ ಕಂಟೆಪ್ಪಾ ಭೂಶೆಟ್ಟಿ ವಯ 24 ವರ್ಷ ಸಾ : ಭವಾನಿ ಮಂದಿರದ ಹತ್ತಿರ ಕುಂಬಾರಾವಾಡಾ ಬೀದರ ಇವನ ಹತ್ತಿರ ನಗದು ಹಣ ರೂ : 420-00 (5) ಸಿದ್ರಾಮ ತಂದೆ ಮಲ್ಲಿಕಾಜರ್ುನ ವಯ 22 ವರ್ಷ ಸಾ : ಭವಾನಿ ಮಂದಿರ ಹತ್ತಿರ ಕುಂಬಾರವಾಡಾ ಬೀದರ ಇವನ ಹತ್ತಿರ ನಗದು ಹಣ ರೂ : 300-00 (6) ಓಂಕಾರ ತಂದೆ ಜಗನಾಥ ಭೂಶಟ್ಟಿ ವಯ 30 ವರ್ಷ ಸಾ : ಕುಂಬಾರವಾಡಾ ಬೀದರ ಇವನ ಹತ್ತಿರದಿಂದ ನಗದು ಹಣ ರು : 450-00 (7) ಲೋಕೇಶ ತಂದೆ ಬಸವರಾಜ ಜನಶೆಟ್ಟಿ 28 ವರ್ಷ ಸಾ : ಭವಾನಿ ಮಂದಿರ ಹತ್ತಿರ ಕುಂಬಾರ ವಾಡಾ ಬೀದರ ಇವನ ಬಳಿ 460-00 ಹಿಗೆ ಒಟ್ಟು 3,530-00ಎಲ್ಲರ ಮದ್ಯದಲ್ಲಿದ್ದ ನಗದು ಹಣ ರೂ: 1,220-00 ಹಿಗೆ ಎಲ್ಲಾ ಒಟ್ಟು 4750-00 ಮತ್ತು 52 ಇಸ್ಪಿಟ ಎಲೆಗಳು ಇದ್ದು ನಗದು ಹಣ ರೂಪಾಯಿ ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Friday, May 1, 2020

BIDAR DISTRICT DAILY CRIME UPDATE 01-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-05-2020
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 59/2020 ಕಲಂ 353, 332 ಜೊತೆ 34 ಐಪಿಸಿ :-

ದಿನಾಂಕ: 30/04/2020 ರಂದು 1300 ಗಂಟೆಗೆ ಫಿರ್ಯಾದಿ ಶ್ರೀಮತಿ ಗೀತಾ ಗಂಡ ಸುನೀಲ್ ಬುಯೆ ವಯಸ್ಸು:32 ವರ್ಷ ಉ:ಆಶಾ ಕಾರ್ಯಕರ್ತರು ಸಾ:ಹೋಸಪೇಟಗಲ್ಲಿ ಬಸವಕಲ್ಯಾಣ ರವರು ಠಾಣೆಯಲ್ಲಿ ಹಾಜರಾಗಿ ಒಂದು ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನಂದರೆ ಫಿಯರ್ಾದಿ ರವರು ಪ್ರಾಥಮಿಕ ಆರೋಗ್ಯ ಕೇಂದ್ರ ಬಸವಕಲ್ಯಾಣದಲ್ಲಿ ಆಶಾ ಕಾರ್ಯಕತರ್ೆ ಯಾಗಿ ವಾರ್ಡ ಸಂಖ್ಯೆ:14 ಕೈಕಾಡಿಗಲ್ಲಿಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದು  ದಿನಾಂಕ:29/04/2020 ರಂದು   ಕಾರ್ಯಕ್ಷೇತ್ರದಲ್ಲಿ  ಕೋವಿಡ್-19ಸಮೀಕ್ಷೆಯ ಕರ್ತವ್ಯ ನಿರ್ವಹಿಸಿ ಸಹಪಾಠಿ ಶ್ರೀಮತಿ ಸುನೀತಾ ಗಂಡ ವಿಶಾಲ ಆವಸ್ತಿ ರವರ ಜೋತೆಗೆ ನಡೆದು ಕೊಂಡು ಮನೆಗೆ ಹೋಗುತ್ತಿರುವಾಗ ಹೋಳಕುಂದೆ ಕ್ರಾಸ ಬಸವೇಶ್ವರ ದೇವಸ್ಥಾನದ ಕಾಮನ ಹತ್ತಿರ ಸಮಯ: 1520 ಗಂಟೆಗೆ 2 ಜನ ದ್ವಿ ಚಕ್ರವಾಹನದ ಮೇಲೆ ಬಂದು ಹಲ್ಲೆ ಮೇಲೆ ಮಾಡಿ ಪರಾರಿಯಾಗಿರುತ್ತಾರೆ. ದೂರದಿಂದ ದ್ವಿಚಕ್ರವಾಹನ ನೋಡಲು ಆದರ ಸಂಖ್ಯೆ:4141 ಇರುತ್ತದೆ ಮತ್ತು ದಾದಾ ಎಂದು ದ್ವಿ ಚಕ್ರವಾಹನದ ಮೇಲೆ ಹೆಸರು ಕಾಣಿಸಿದ್ದು  ಕಪ್ಪು ಬಣ್ಣದ ಬಟ್ಟೆ ಧರಿಸಿದ್ದು ಇರುತ್ತದೆ. ಮುಖ ಗುರುತಿಸಲು ಕಷ್ಟವಾಯಿತು. ಸದರಿ ಅಪರಿಚಿತ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಎಂಬ ದೂರಿನ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 30/04/2020 ರಂದು 1200 ಗಂಟೆಗೆ ಠಾಣೆಯಲ್ಲಿ ಕರ್ತವ್ಯದ ಮೇಲೆ ಇದ್ದಾಗ  ಜೋನೆಕೇರಿ ಗ್ರಾಮದ ಪತ್ರಿ ಸ್ವಾಮಿ ಮಠದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಕುಳಿತು ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ  1245 ಗಂಟೆಗೆ ಪತ್ರಿ ಸ್ವಾಮಿ ಕಲ್ಯಾಣ ಮಠದ ಹತ್ತಿರ ದೂರದಲ್ಲಿ ಜೀಪ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಕೇಲವು ಜನರು ಗೋಲಾಗಿ ಕುಳಿತು ಇಸ್ಪಟ ಎಲೆಗಳಿಂದ ಅಂದರ ಬಾಹಾರ ನಸಿಬಿನ ಜೂಜಾಟ ಆಡುತ್ತಿದ್ದಾಗ ಖಚಿತ ಪಡಿಸಿಕೊಂಡು ಅವರ ಮೇಲೆ  ದಾಳಿ ಮಾಡಿ ಆರೋಪಿತರಾದ 1) ಅರುಣಕುಮಾರ ತಂದೆ ರಾಜಕುಮಾರ ದಾಬಕೆ ವ/ 22 ವರ್ಷ ಜಾ/ ಲಿಂಗಾಯತ ಉ/ ಕೂಲಿ ಸಾ/ ಜೋನೆಕೇರಿ ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 400/- ರೂ ಹಣ ಸಿಕ್ಕಿದ್ದು 2) ಪ್ರಭುರಾವ ತಂದೆ ಶಿವರಾಯ ಪಾಟೀಲ್ ವ/ 60 ಷರ್ವ ಜಾ/ ಲಿಂಗಾಯತ ಉ/ ಒಕ್ಕಲುತನ ಸಾ. ಜೋನೇಕೇರಿ   ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 300 /- ರೂ ಹಣ ಸಿಕ್ಕಿದ್ದು. ಮಧ್ಯದಲ್ಲಿದ್ದ ಹಣ 1400/- ಹೀಗೆ ಒಟ್ಟು 2100/- ಹಣ ರೂ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡ ತನಿಕೆ ಕೈಗೋಳ್ಳಲಾಗಿದೆ.

 ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 68/2020 ಕಲಂ   273, 284, ಐಪಿಸಿ ಮತ್ತು ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-
 ದಿನಾಂಕ: 30/04/2020 ರಂದು 0630 ಗಂಟೆಗೆ ಪಿಎಸ್ಐ ರವರು  ಭಾಲ್ಕಿಯಲ್ಲಿ ಇದ್ದಾಗ ಸೇವಾನಗರ ತಾಂಡದ ಶೇಶರಾವ ಇವರ ಮನೆಯ ಹಿಂದೆ ಖುಲ್ಲಾ ಸ್ಥಳದಲ್ಲಿ ಝಮಕಾಬಾಯಿ ಸಿ. ಪವಾರ ಸಾ: ಸೇವಾನಗರ ತಾಂಡ ಇವರು ಅನಧಿಕೃತವಾಗಿ ಕಲಬರಿಕೆ ಮಾಡಿದ ಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತವಾದ ಬಾತ್ಮಿ  ಬಂದ ಮೇರೆಗೆ ಸಿಬ್ಬಂದಿಯೊಂದಿಗೆ 0745 ಗಂಟೆಗೆ ಸೇವಾನಗರ ತಾಂಡಾದಿಂದ ಸ್ವಲ್ಪ ಅಂತರದಲ್ಲಿ     ಶೇಶರಾವ ಇವರ ಮನೆಯ ಹಿಂದೆ ಝಮಕಾಬಾಯಿ ಸಿ. ಪವಾರ ಸಾ: ಸೇವಾನಗರ ತಾಂಡ ಇವರು ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾನದಲ್ಲಿ ಭಟ್ಟಿ ಸಾರಾಯಿ ತುಂಬಿ ತಮ್ಮ ವಶದಲ್ಲಿ ಇಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಿರುವುದನ್ನು ನಾವು ಖಚಿತ ಪಡಿಸಿಕೊಂಡು   ದಾಳಿ ಮಾಡಿ   ಸಾರಾಯಿಯ ಅಂದಾಜು ಬೆಲೆ 300/- ರೂಪಾಯಿ ಇರುತ್ತದೆ  ಹಾಗು ಉಳಿದ 5 ಲೀಟರ ಭಟ್ಟಿ ಸಾರಾಯಿ ಕ್ಯಾನ್ ಸಮೆತವಾಗಿ ಮತ್ತು ಸ್ಥಳದಲ್ಲಿ ಸಾರಾಯಿ ಮಾರಾಟ ಮಾಡಲು ಬಳಸುವ ಎರಡು ಪ್ಲಾಸ್ಟಿಕ ಗ್ಲಾಸಗಳನ್ನು ಪ್ರಕರಣದಲ್ಲಿ ಪುರಾವೆ ಕುರಿತು ಜಪ್ತಿ ಮಾಡಿಕೋಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
 ಭಾಲ್ಕಿ ಗ್ರಾಮೀಣ ಠಾಣೆ ಠಾಣೆ ಅಪರಾಧ ಸಂಖ್ಯೆ 56/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ 273, 284 ಐಪಿಸಿ :-.
ದಿನಾಂಕ: 30/04/2020  ರಂದು ನಾನು 1600 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ    ಭಾತಂಬ್ರಾ ಗ್ರಾಮದಲ್ಲಿ ಸರಕಾರಿ ಶಾಲೆಯ ಹತ್ತಿರ   ಒಬ್ಬ ವ್ಯಕ್ತಿ  ಒಂದು ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ (ಕಲಬರಕೆ ಸರಾಯಿ) ಇಟ್ಟುಕೊಂಡು ಮಾರಾಟ ಮಾಡುತಿದ್ದಾನೆ ಅಂತ ಖಚೀತ ಬಾತ್ಮಿ ಮೇರೆಗೆ  ಸಿಬ್ಬಂದಿಯೊಂದಿಗೆ  ಭಾತಂಬ್ರಾ ಭವಾನಿ ಮಂದಿರ ಹತ್ತಿರ  1630  ಗಂಟೆಗೆ ಸರಕಾರಿ ಶಾಲೆಯ ಹತ್ತಿರ ಹೋಗಿ  ಮರೆಯಾಗಿ ನಿಂತು ನೊಡಲು ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು 20 ಲೀಟರ ನಿರೀನ  ಪ್ಲಾಸ್ಟಿಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಕುಳಿತಿದನ್ನು  ನೊಡಿ ಆತನ ಮೇಲೆ 1645  ಗಂಟೆಗೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ   ಅನೀಲಕುಮಾರ ತಂದೆ ಬಾಬುರಾವ ಮಡಿವಾಳ ವಯ 42 ವರ್ಷ ಜಾ; ಮಡಿವಾಳ  ಉ; ಡ್ರೈವರ ಸಾ; ಭಾತಂಬ್ರಾ ಅಂತ ಇತನ್ನನ್ನು ಹಿಡಿದು ಆತನ ಹತ್ತಿರ ಇದ್ದ ಕ್ಯಾನ ನೊಡಲು 20 ಲೀಟರ ನೀರಿನ ಪ್ಲಾಸ್ಟೀಕ  ಕ್ಯಾನ  ಇದ್ದು ಅದನ್ನು ನೊಡಲು ಅದರಲ್ಲಿ ಸರಾಯಿ ವಾಸನೆ ಬರುತಿದನ್ನು ಕಂಡು ಸದರಿಯವನಿಗೆ ಪ್ಲಾಸ್ಟೀಕ ಕ್ಯಾನದಲ್ಲಿ ಎನು ಇದೆ ಅಂತ ವಿಚಾರಿಸಿದಾಗ ಇದರಲ್ಲಿ ಕಲಬರಕೆ ಸರಾಯಿ (ಕಳ್ಳಭಟ್ಟಿ ಸರಾಯಿ ) ಇರುತ್ತದೆ ಅಂತ ತಿಳಿಸಿದನು. ಈ ಸರಾಯಿ ಎಲ್ಲಿಂದ ತಂದಿದಿಯಾ ಅಂತ ವಿಚಾರಿಸಿದಾಗ ಕಾಳ ಸಂತೆಯಲ್ಲಿ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ತೆಗೆದುಕೊಂಡು ಬಂದು  ಒಂದು ಗ್ಲಾಸ್ ಸರಾಯಿ  10 ರೂಪಾಯಿಗೆ ಮಾರಾಟ ಮಾಡುತ್ತೇನೆ ಅಂತ ತಿಳಿಸಿದನು.   . ಸದರಿ ಪ್ಲಾಸ್ಟೀಕ ಕ್ಯಾನದಲ್ಲಿದ್ದ ಕಳ್ಳಭಟ್ಟಿ ಸರಾಯಿ ಪರಿಶೀಲಿಸಿ ನೋಡಲು  ಕ್ಯಾನದಲ್ಲಿ ಅಂದಾಜು 20  ಲೀಟರದಷ್ಟು  ಕಳ್ಳಭಟ್ಟಿ ಸರಾಯಿ ಇದ್ದು ಪ್ರತಿಯೊಂದು ಲೀಟರಿನ ಸರಾಯಿ ಅ;ಕಿ; 100/- ರೂ ಹೀಗೆ ಒಟ್ಟು 20 ಲೀಟರ ಸರಾಯಿ ಅ;ಕಿ, 2000/- ರೂ ಬೇಲೆ ಬಾಳುವದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.