Police Bhavan Kalaburagi

Police Bhavan Kalaburagi

Saturday, July 18, 2020

BIDAR DISTRICT DAILY CRIME UPDATE 18-07-2020


  
ದಿನಂಪ್ರತಿ  ಅಪರಾಧಗಳ ಮಾಹಿತಿ ದಿನಾಂಕ: 18-07-2020

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 29/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 17/07/2020 ರಂದು 1410 ಗಂಟೆಗೆ  ಪಿಎಸ್ಐ ರವರು ಪೊಲೀಸ ಠಾಣೆಯಲ್ಲಿ ಇದ್ದಾಗ ಘೋಡಂಪಳ್ಳಿ ಗ್ರಾಮದಲ್ಲಿ ರಾಜಕುಮಾರ ತಂದೆ  ಮರೆಪ್ಪ ಬಂಧು ವಯ-45 ಜಾ|| ಎಸ್.ಸಿ ಉ|| ಕೂಲಿ ಸಾ|| ಘೋಡಂಪಳ್ಳಿ ಮತ್ತು ಅವನ ಹೆಂಡತಿ ಲಲಿತಾ @ ಲಕ್ಷ್ಮಿ ಗಂಡ ರಾಜಕುಮಾರ ಬಂಧು ವಯ-40 ಜಾ|| ಎಸ್.ಸಿ ಉ|| ಕೂಲಿ ಸಾ|| ಘೋಡಂಪಳ್ಳಿ ಇಬ್ಬರು ರವರು  ತನ್ನ ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ಕೋರೋನಾ ವೈರಸ್  ತಡೆಗಟ್ಟುವ ನಿಮಿತ್ಯ ಜಿಲ್ಲೆಯಲ್ಲಿ ಸರಾಯಿ ಮಾರಾಟ ನಿಷೇಧ ಇದ್ದರು ಸಹ ಅಕ್ರಮವಾಗಿ ಸರಾಯಿ ಮಾರಾಟ ,ಮಾಡಲು ಸಂಗ್ರಹ ಮಾಡಿ ಇಟ್ಟಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಹೋಗಿ ನೋಡಲಾಗಿ ಸದರಿಯವನ ಮೇಲೆ ಕಲಂ 32,34 ಕೆ.ಈ ಎಕ್ಟ ನೇದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 156/2020 ಕಲಂ 379 ಐಪಿಸಿ  :-
ದಿನಾಂಕ: 17/07/2020 ರಂದು 13:00 ಗಂಟೆಗೆ ಫಿರ್ಯಾದಿ ರಮೇಶ ತಂದೆ ಸುಭಾಷ ಹಾರಕೂಡೆ ಸಾ: ನಾಮದಾಪೂರವಾಡಿ ಸದ್ಯ:ಭಾಲ್ಕಿ ರವರು ಠಾಣೆಗೆ ಬಂದು ಕೊಟ್ಟ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಯು ಕೆ.ಎಸ.ಆರ.ಟಿ.ಸಿ ಡಿಪೊದಲ್ಲಿ ಬಸ್ಸ ಚಾಲಕನಾಗಿದ್ದು  ಇವರ ಹತ್ತಿರ ಹಿರೋ ಪ್ಯಾಶನ ಎಕ್ಸ ಪ್ರೋ ಮೊ.ಸೈಕಲ ನಂ .ಕೆಎ-39-ಎಲ್-7521 ನೇದ್ದು ಇರುತ್ತದೆ. ಸದರಿ ವಾಹನ ತಮ್ಮ ಸಂಬಂಧಿಕರಾದ ಸಂತೋಷ ತಂದೆ ಮಲ್ಲಿಕಾಜರ್ುನ ಧಬಾಲೆ ಸಾ: ಹಲಸಿ(ಎಲ್) ರವರ ಹೆಸರಿನಲ್ಲಿ ಇರುತ್ತದೆ. ಹೀಗಿರುವಲ್ಲಿ ದಿನಾಂಕ 16/07/2020 ರಂದು ಮದ್ಯಾಹ್ನ 4 ಗಂಟೆಗೆ ಭಾಲ್ಕಿಯ ಕೆ.ಎಚ.ಬಿ ಕಾಲೀನಿಯ ನಿವಾಸಿಯಾದ ಅಶೋಕ ಬಿರಾದಾರ ರವರ ಹತ್ತಿರ ಕೆಲಸ ಇರುವದರಿಂದ ತನ್ನ ಮೊ.ಸೈಕಲ ನಂ.ಕೆಎ-39-ಎಲ್-7521   ಚಲಾಯಿಸಿಕೊಂಡು ಹೋಗಿದ್ದು ಮೊ.ಸೈಕಲನ್ನು ಅವರ ಮನೆಯ ಮುಂದೆ ನಿಲ್ಲಿಸಿ ಹೋಗಿ ಕೆಲಸ ಮುಗಿಸಿಕೊಂಡು ಸಾಯಂಕಾಲ 5 ಗಂಟೆಗೆ ಹೊರಗಡೆ ಬಂದು ನೋಡಲು   ಮೊಸೈಕಲ ಇರುವದಿಲ್ಲ. ಸುತ್ತ ಮುತ್ತಲೂ ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರುದಿಲ್ಲ, ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಮೊ.ಸೈಕಲ ಅಂದಾಜು ರೂ. 35,000/- ಬೆಲೆ ಬಾಳುವದ್ದು ಇರುತ್ತದೆ  ಅಂತಾ ನೀಡಿದ ದೂರಿನ ಮೇರೆಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 54/2020 ಕಲಂ 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ 17.07.2020 ರಂದು 16:30 ಗಂಟೆಗೆ ಪಿಎಸ್ಐ ರವರು  ಮಂಠಾಳ ಪೊಲೀಸ್ ಠಾಣೆಯಲ್ಲಿರುವಾಗ ಖಿಚಿತ ಮಾಹಿತಿ ಬಂದಿದ್ದೆನೆಂದರೆ, ಆಲಗೂಡ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮದ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೋಡುತ್ತಿದ್ದಾನೆ ಅಂತ ಖಚಿತ ಬಾತ್ಮಿ  ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಆಲಗೂಡ ಗ್ರಾಮದ ಬಸನಿಲ್ದಾಣದ ಹತ್ತಿರ ಹೋಗಿ ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸರಾಯಿ ಪೌಚ್ಗಳು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಡುವುದನ್ನು ಕಂಡು ಅವನ ಮೇಲೆ  ದಾಳಿ ಮಾಡಿ ಅವನಿಗೆ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಬಾಲಾಜಿ ತಂದೆ ಧನರಾಜ ಮುದಗಲೆ ವಯಸ್ಸು 21 ವರ್ಷ, ಜಾತಿ-ಮರಾಠಾ ಉದ್ಯೋಗ-ಕೂಲಿಕೆಲಸ ಸಾ|| ಆಲಗೂಡ ತಾ|| ಬಸವಕಲ್ಯಾಣ ಅಂತ ತಿಳಿಸಿದನು. ಅವನ ತಾಬೆಯಲ್ಲಿದ್ದ ಸರಾಯಿ ರಟ್ಟಿನ ಪೌಚ್ಗಳು ಪರಿಶೀಲಿಸಿ ನೋಡಲು ಅವು 180 ಎಮ್ ಎಲ್ ನ 4 ಓಲ್ಡ್ ಟಾವರ್ನ ವಿಸ್ಕಿ ಸರಾಯಿ ರಟ್ಟಿನ್ ಪೌಚ್ಗಳು ಇದ್ದು ಅದರಲ್ಲಿನ ಒಂದು ಪೌಚ್ನಲ್ಲಿ ಅಂದಾಜು 90 ಎಮ್ಎಲ್ ನಷ್ಟು ಖಾಲಿಯಾದ ಸರಾಯಿ ರಟ್ಟಿನ್ ಪೌಚ್ ಇರುತ್ತದೆ ಇವುಗಳ ಒಟ್ಟು ಅ|| ಕಿ|| 302/-ರೂಪಾಯಿ ನೆದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Friday, July 17, 2020

BIDAR DISTRICT DAILY CRIME UPDATE 17-07-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 17-07-2020
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32 (3) ಕೆ.ಇ ಕಾಯ್ದೆ :-
 ದಿನಾಂಕ 16/07/2020 ರಂದು ಸಾಯಂಕಾಲ 1730 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿದ್ದಾಗ  ಮೋಬೈಲ್ ಮುಖಾಂತರ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಹುಮನಾಬಾದ ಪಟ್ಟಣದ ಧೇರ್ ಮೈದಾನ ಹಿಂದುಗಡೆ ಇರುವ ಎಮಾರೆಡ್ಡಿ ಎಂಬುವವನು ತನ್ನ ಹೇಮರೆಡ್ಡಿ ಮಲ್ಲಮ್ಮಾ ಖಾನಾವಳಿ ಹೊಟೇಲನಲ್ಲಿ  ತನ್ನ ಹತ್ತಿರ ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೊಟ್ಟಿರುತ್ತಾನೆ ಅಂತ ಬಾತ್ಮಿ ಬಂದ ಮೇರೆಗೆ  ಹುಮನಾಬಾದ ಪಟ್ಟಣದ ಥೇರ್ ಮೈದಾನ ಹಿಂದುಗಡೆ ಎಮಾರೆಡ್ಡಿ ಇವನ ಖಾನಾವಳಿ ಹತ್ತಿರ ಹೋಗಿ ನೋಡಿದಾಗ ಟೇಬಲ್ ಮೇಲೆ ಸರಾಯಿ ಖಾಲಿ ಪ್ಯಾಕೇಟಗಳು, ಪ್ಲಾಸ್ಟಿಕ್ ಗ್ಲಾಸಗಳು ಮತ್ತು ನೀರಿನ ಬಾಟಲ ಇದ್ದವು. ಅಲ್ಲೆ ಹಾಜರಿದ್ದ ವ್ಯಕ್ತಿಗೆ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಏಮಾರೆಡ್ಡಿ ತಂದೆ ರಾಮರೆಡ್ಡಿ ಮುಡಬಿ ವಯಃ 50ವರ್ಷ ಜಾತಿಃರೆಡ್ಡಿ ಉ. ಹೋಟೆಲ, ಕೆಲಸ  ಸಾಃ ವಾಂಜ್ರಿ ಅಂತ ತಿಳಿಸಿ ಸದರಿ ಹೊಟೇಲ್ (ಖಾನಾವಳಿ) ತನ್ನದೆ ಇರುತ್ತದೆ ಅಂತ ತಿಳಿಸಿದನು. ಅವನಿಗೆ ಸರಾಯಿ ಬಾಟಲಿ ಬಗ್ಗೆ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ತನ್ನ ಹೊಟೇನಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿ ಕೊಟ್ಟಿರುವುದು ಒಪ್ಪಿಕೊಂಡನು. ಅವನಿಗೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಕುರಿತು ಸರಕಾರದಿಂದ ಪರವಾನಿಗೆ ತೋರಿಸಲು ಹೇಳಿದಾಗ ಅವನು ತನ್ನ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲಾ ಅಂತ ತಿಳಿಸಿದನು. ಮತ್ತು ಓಡಿ ಹೋದವರ ವಿಳಾಸ ವಿಚಾರಿಸಿದಾಗ ಅವರ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲಾ ಅಂತ ತಿಳಿಸಿದನು. ನಂತರ ಟೇಬಲ್ ಮೇಲಿನ 1]  180 ಎಮ್ಎಲ್ನ ಒಂದು ಓಲ್ಡ ತವೇರನ್ ಸರಾಯಿ ಟೇಟ್ರಾ ಪ್ಯಾಕೇಟ ಕಿಮ್ಮತ 74/- ರೂಪಾಯಿ 2]  180 ಎಮ್.ಎಲ್ ಎರಡು ಓಲ್ಡ ತವೇರನ್ ಸರಾಯಿ ಟೇಟ್ರಾ ಪ್ಯಾಕೇಟ (ಖಾಲಿ ಇರುವದು) ಮತ್ತು ಒಡೆದ ಓಲ್ಡ್ ತವೇರನ್ ವಿಸ್ಕಿ ಟೇಟ್ರಾ ಪ್ಯಾಕೇಟದಲ್ಲಿ ಸ್ವಲ್ಪ ಸರಾಯಿ ಇರುವದು ಹೀಗೆ ಒಟ್ಟು 74/- ರೂಪಾಯಿ ಬೆಲೆ ಬಾಳುವ ಸರಾಯಿ ಬಾಟಲಿಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


                                                    

Thursday, July 16, 2020

BIDAR DISTRICT DAILY CRIME UPDATE 16-07-2020


  
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-07-2020

ಭಾಲ್ಕಿ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/2020 ಕಲಂ 174 ಸಿ.ಆರ್.ಪಿ.ಸಿ. :-

ದಿನಾಂಕ 15/07/2020 ರಂದು 1100 ಗಂಟೆಗೆ ಫಿರ್ಯಾದಿ ಶ್ರಿಮತಿ ನಾಗೂಬಾಯಿ ಗಂಡ ತಾತೆರಾವ ಮಾನಕಾರಿ ವಯ: 75 ವéರ್ಷ ಸಾ:ನೇಲವಾಡ ಸದ್ಯ ಲೆಕ್ಚರ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶ ವೆನೆಂಶದರೆ ಇವರ ಪತಿಯು ಶಿಕ್ಷಕರಾಗಿದ್ದರು 2003 ರಲ್ಲಿ ನಿವೃತ್ತ ಹೋಂದಿದರು ದಿನಾಂಕ 14/07/2020 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಇವರ ಪತಿಯು ಕೈಕಾಲು ಮತ್ತು ಬೆನ್ನು ಹಾಗೂ ಎದೆನೋವು ಆಗುತ್ತಿದೆ ಅಂತಾ ತಿಳಿಸಿದರಿಂದ ಕೂಡಲೆ ವಿಜಯಕುಮಾರ ತಡಪಳ್ಳೆ ರವರ ಆಸ್ಪತ್ರೆಗೆ ಒಯ್ದು ಉಪಚಾರ ಮಾಡಿಸಿಕೊಂಡು ಮರಳಿ ಸ್ವಂತೂರಾದ ನೇಲವಾಡ ಗ್ರಾಮಕ್ಕೆ ಹೋಗಿದ್ದು ಬೆಳಿಗ್ಗೆ 5 ಗಂಟೆಗೆ ಪುನಃ ಎದೆ ನೋವು ಆಗುತ್ತಿದೆ ಅಂತಾ ತಿಳಿಸಿದರಿಂದ ಉಪಚಾರ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿದಾಗ ವೈಧ್ಯರು ಪರೀಕ್ಷೆ ಮಾಡಿ ಈಗಾಗಲೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದರು. ಆಸ್ಪತ್ರೆಗೆ ತರುವಾಗ ಅಂದಾಜು 6:30 ಗಂಟೆ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುತ್ತಾರೆ. ನನ್ನ ಗಂಡ ತಾತೆರಾವ ಹೃದಯಘಾತದಿಂದ ಮೃತ ಪಟ್ಟಿದ್ದು ಅವರ ಸಾವಿನ ಬಗ್ಗೆ ನನ್ನದು ಯಾರ ಮೇಲೆ ಯಾವುದೆ ತರಹದ ದೂರು ಅಥವಾ ಸಂಶಯ ಇರುವದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಂತಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/2020 ಕಲಂ 174 ಸಿಆರ್.ಪಿ.ಸಿ.:-

ದಿನಾಂಕ 14/07/2020 ರಂದು  ಶ್ರೀಮತಿ ದೀಪಿಕಾ ಗಂಡ ರವಿ@ಬಂಬಗೊಂಡ ವ/ 26 ವರ್ಷ ಜಾ/ ಎಸ್,ಟಿ ಗೊಂಡ  ಸಾ/ ಕೌಠಾ(ಬಿ) ರವರು ತಮ್ಮ ಹೋಲದಲ್ಲಿ ಕೇಲಸ ಮುಗಿಸಿಕೊಂಡು ಮನೆಗೆ ಬರುವಾಗ ಅವರ ಹೋಲದಲ್ಲಿ ಬಲಗಾಲ ಹೆಬ್ಬಟಿನ ಹತ್ತಿರ ಹಾವು ಕಚ್ಚಿದ್ದರಿಂದ ಚಿಕಿತ್ಸೆ ಕುರಿತು ಅವಳಿಗೆ ಬೀದರ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು ದಿನಾಂಕ 15/07/2020 ರಂದು 01.55 ಗಂಟೆಗೆ ದೀಪಿಕಾ ಇವಳು ಚಿಕಿತ್ಸೆ ಕಾಲಕ್ಕೆ ಗುಣ ಮುಖವಾಗದೆ ಮೃತ ಪಟ್ಟಿರುತ್ತಾಳೆ ಅಂತಾ ಮೃತಳ ತಾಯಿ ಶ್ರೀದೇವಿ ಗಂಡ ತಿಪ್ಪಣ್ಣಾ ಸಾ/ಗೋಡಂಪಳ್ಳಿ ರವರು ನೀಡಿದ ದೂರಿನ ಮೇರೆಗೆ ಯು.ಡಿ.ಆರ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

Wednesday, July 15, 2020

BIDAR DISTRICT DAILY CRIME UPDATE 15-07-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-07-2020

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ಸಂ. 09/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಲಲೀತಾ ಗಂಡ ಗೋವಿಂದ ಚವ್ಹಾಣ ವಯ: 50 ವರ್ಷ, ಜಾತಿ: ಲಂಬಾಣಿ, ಸಾ: ಜನತಾ ಕಾಲೋನಿ ಔರಾದ(ಬಿ) ರವರ ಗಂಡ ಗೋವಿಂದ ಇವರು ಸರಾಯಿ ಕುಡಿಯುವ ಚಟದವರಿರುತ್ತಾರೆ, ದಿನಾಲು ಬೆಳ್ಳಗ್ಗೆಯಿಂದ ರಾತ್ರಿಯವರೆಗೆ ಸರಾಯಿ ಕುಡಿಯುತ್ತಲೆ ಇರುತ್ತಾರೆ, ಹೀಗಿರುವಾಗ ದಿನಾಂಕ 14-07-2020 ರಂದು ಫಿರ್ಯಾದಿಯು ಕೆಲಸಕ್ಕೆ ಹೋದಾಗ ಗಂಡ ಮನೆಯಲ್ಲಿಯ ಟೀನ್ ಶೆಡ್ಡಿನ ಕಬ್ಬಿಣ್ಣದ ರಾಡಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಆತನು ಸರಾಯಿ ಕುಡಿದ ನಶೆಯಲ್ಲಿ ನೇಣು ಹಕಿಕೊಂಡು ಮೃತಪಟ್ಟಿರುತ್ತಾನೆ, ಆತನ ಮರಣದಲ್ಲಿ ನನ್ನದು ನನ್ನ ಕುಟಂಬ ಸದಸ್ಯರದು ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ನಂ. 16/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 13-07-2020 ರಂದು 2330 ಗಂಟೆಗೆ ಫಿರ್ಯಾದಿ ರಾಜೇಶ್ವರಿ ಗಂಡ ವಿಜಯರೆಡ್ಡಿ ವಯ: 35 ವರ್ಷ, ಸಾ: ಅಣದೂರ, ಸದ್ಯ: ಸಿದ್ಧಾರೂಢ ಆಸ್ಪತ್ರೆ ಹಿಂದುಗಡೆ ಗುಂಪಾ ಬೀದರ ರವರಿಗೆ ವಾಂತಿ ಮತ್ತು ಭೇದಿಯಾಗಿದ್ದರಿಂದ ಅವರಿಗೆ ತಕ್ಷಣ ಚಿಕಿತ್ಸೆ ಕುರಿತು ಒಂದು ವಾಹನದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಗಂಡನು ಮೃತಪಟ್ಟಿರುತ್ತಾರೆಂದು ವೈದ್ಯರು ತಿಳಿಸಿರುತ್ತಾರೆ, ತನ್ನ ಗಂಡನ ಮರಣದಲ್ಲಿ ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತಾ ನೀಡಿದ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 14-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 84/2020, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 13-07-2020 ರಂದು ಆರೋಪಿ ಆಕಾಶ ತಂದೆ ವೈಜಪ್ಪಾ ಮೇತ್ರೆ ವಯ: 22 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಲ್ಲೂರ ಇತನ ಸ್ಕಾರ್ಪಿಯೊ ವಾಹನ ನಂ. ಎಪಿ-31/ಟಿ.ವಿ-2884 ನೇದ್ದರಲ್ಲಿ ಫಿರ್ಯಾದಿ ಭದ್ರಪ್ಪಾ ತಂದೆ ಲಕ್ಷ್ಮಣ ಹೊನ್ನಗೊಂಡ ವಯ: 48 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಲ್ಲೂರ ರವರ ಮಗನಾದ ಸಿದ್ದಲಿಂಗ ಮತ್ತು ಗ್ರಾಮದ ಮಹೇಶ ಗದಗ ರವರಿಗೆ ಕೂಡಿಸಿಕೊಂಡು ಮನ್ನಾಏಖೇಳ್ಳಿಗೆ ಹೋಗುವಾಗ ನಿಂಬೂರ ಶಿವಾರ ಚಿಕ್ಕಪಾಟೀಲ ರವರ ಹೊಲದ ಹತ್ತಿರ ರೋಡಿನ ಮೇಲೆ ಆರೋಪಿಯು ಸದರಿ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿದ ಪರಿಣಾಮ ಹಿಡಿತ ತಪ್ಪಿ ರೋಡಿನ ಬದಿಗೆ ತಗ್ಗಿನಲ್ಲಿ ವಾಹನ ಪಲ್ಟಿ ಮಾಡಿದ್ದರಿಂದ ಫಿರ್ಯಾದಿಯವರ ಮಗನಾದ ಸಿದ್ದಲಿಂಗ ಇತನಿಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 14-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 54/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 14-07-2020 ರಂದು ಹಾರಕೂಡ ಗ್ರಾಮದ ಶಿವಾರದಲ್ಲಿ ಮೆಗರಾಜ ನಾಗರಾಳೆರವರ ಹೊಲದ ಹತ್ತಿರ ಗದಲೇಗಾಂವ ಹಾರಕೂಡ ರೋಡಿನ ಬದಿಯಲ್ಲಿ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಅರುಣಕುಮಾರ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಾರಕೂಡ ಗದಲೇಗಾಂವ ಕ್ರಾಸನ ರೋಡಿನ ಮೇಲೆ ಮೆಗರಾಜ ನಾಗರಾಳೆರವರ ಹೊಲದ ಹತ್ತಿರ ಹೋಗಿ ನೋಡಲು ಅಲ್ಲಿ ಆರೋಪಿತರಾದ 1) ಚನ್ನಪ್ಪ ತಂದೆ ಕಲ್ಯಾಣಿ ಕೂಡಂಬಲ ವಯ: 40 ವರ್ಷ, ಜಾತಿ: ಎಸ್.ಸಿ ಹೊಲೆಯ, 2) ಶಿವಶರಣಪ್ಪ ತಂದೆ ಕಲ್ಲಪ್ಪ ಪಾಟೀಲ ವಯ: 56 ವರ್ಷ, ಜಾತಿ: ಲಿಂಗಾಯತ, 3) ಸಿದ್ರಾಮ ತಂದೆ ಕಲ್ಯಾಣಿ ಹೆಗಡೆ ವಯ: 45 ವರ್ಷ, ಜಾತಿ: ಎಸ್.ಸಿ ಹೊಲೆಯ, 4) ಬಾಲಾಜಿ ತಂದೆ ಬಾಬುರಾವ ಬಿರಾದಾರ ವಯ: 40 ವರ್ಷ, ಜಾತಿ: ಮರಾಠಾ, 5) ಹಣಮಂತ ತಂದೆ ಮಹಾದೇವ ಶಿಲವಂತ ವಯ: 33 ವರ್ಷ, ಜಾತಿ: ಲಿಂಗಾಯತ 5 ಜನ ಸಾ: ಹಾರಕೂಡ, 6) ಶರಣಬಸಪ್ಪ ತಂದೆ ಅಂಬಾರಾವ ಶ್ರೀಚಂದ ವಯ: 38 ವರ್ಷ, ಜಾತಿ: ಲಿಂಗಾಯತ, 7) ಬಂಡೆಪ್ಪಾ ತಂದೆ ಅಪ್ಪರಾವ ಶ್ರೀಚಂದ ವಯ: 50 ವರ್ಷ, ಜಾತಿ: ಲಿಂಗಾಯತ, ಇಬ್ಬರು ಸಾ: ಸಿರಗಾಪುರ, 8) ದೇವರಾಜ ತಂದೆ ಭೊಜರಾಜ ಚವ್ಹಾಣ ವಯ: 45 ವರ್ಷ, ಜಾತಿ: ಲಮಾಣಿ, ಸಾ: ಹಾರಕೂಡ ತಾಂಡಾ ಹಾಗೂ 9) ಬಸವರಾಜ ತಂದೆ ಚಂದ್ರಶ್ಯಾ ಬಗದುರೆ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಬಾಗಹಿಪ್ಪರಗಾ, ಸದ್ಯ: ಹಾರಕೂಡ ಇವರೆಲ್ಲರೂ ದುಂಡಾಗಿ ಕುಳಿತು ಇಸ್ಪಿಟ ಆಡುತ್ತಿರುವುದನ್ನು ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಎಲ್ಲರಿಗು ಹಿಡಿದು ಅವರಿಂದ ಒಟ್ಟು ನಗದು ಹಣ 13,410/- ರೂ. ಹಾಗೂ 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 94/2020, ಕಲಂ. 87 ಕೆ.ಪಿ ಕಾಯ್ದೆ ಜೊತೆ 269 ಐಪಿಸಿ :-
ದಿನಾಂಕ 14-07-2020 ರಂದು ಬಸವಕಲ್ಯಾಣ ನಗರದ ಲಾಲತಲಾಬ ಓಣಿಯಲ್ಲಿರುವ ಮಹೆಬೂಬ ಸುಬಾನಿ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೊರೊನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಈ ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಕರೆ ಮುಖಾಂತರ ಸುನೀಲ್ಕುಮಾರ ಪಿ.ಎಸ್.ಐ (ಕಾ&ಸೂ) ಬಸವಕಲ್ಯಾಣ ನಗರ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಲಾಲತಲಾಬ ಓಣಿಯಲ್ಲಿರುವ ಮಹೆಬೂಬ ಸುಬಾನಿ ದರ್ಗಾದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ಲಾಲತಲಾಬ ಓಣಿಯಲ್ಲಿರುವ ಮಹೆಬೂಬ ಸುಬಾನಿ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಯುಸುಫ ತಂದೆ ಮಹೆತಾಬಸಾಬ ಗೋಕೆ ವಯ: 72 ವರ್ಷ, ಜಾತಿ: ಮುಸ್ಲಿಂ, 2) ಗನಿ ತಂದೆ ಮಹೆಬೂಬಸಾಬ ಜಿವಂಗಿ ವಯ: 58 ವರ್ಷ, ಜಾತಿ: ಮುಸ್ಲಿಂ, 3) ಗುಲಾಮೋದ್ದಿನ ತಂದೆ ಅಬ್ದುಲ ರಹೆಮಾನ ಕಮಲಾಪುರೆ ವಯ: 54 ವರ್ಷ, ಜಾತಿ: ಮುಸ್ಲಿಂ, ಮೂವರು ಸಾ: ಅಲ್ಲಾನಗರ ಬಸವಕಲ್ಯಾಣ, 4) ಅಬ್ದುಲ್ ಹಮೀದ ತಂದೆ ಅಬ್ದುಲ ಮಜೀದ ಭಂಗೆ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ಪಾಶಾಪುರ ಬಸವಕಲ್ಯಾಣ, 5) ನಾಜೀಮುದ್ದಿನ ತಂದೆ ಅಬ್ದುಲ್ ರಹೆಮಾನ ಬಾಗ ವಯ: 58 ವರ್ಷ, ಜಾತಿ: ಮುಸ್ಲಿಂ ಹಾಗೂ 6) ಸಲಿಮೋದ್ದಿನ ತಂದೆ ರಹೆಮತವುಲ್ಲಾ ಬಾಗ ವಯ: 51 ವರ್ಷ, ಜಾತಿ: ಮುಸ್ಲಿಂ, ಇಬ್ಬರು ಸಾ: ಧಾರಾಗಿರಿ ಬಸವಕಲ್ಯಾಣ ಇವರೆಲ್ಲರೂ ಗುಂಪಾಗಿ ಕುಳಿತುಕೊಂಡು ಕೊರೋನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಈ ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 21,960/- ರೂ. ಮತ್ತು 52 ಇಸ್ಪಿಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 58/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ  14-07-2020 ರಂದು ರಾಜೇಶ್ವರ ಗ್ರಾಮದ ಹನುಮಾನ ಮಂದಿರದ ಹತ್ತಿರ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ 1/- ರೂಪಾಯಿಗೆ 90/- ರೂಪಾಯಿ ಅಂತಾ ಕೂಗಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ವಸೀಮ ಪಟೇಲ್ ಪಿಎಸ್ಐ (ಕಾ&ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ರಾಜೇಶ್ವರ ಗ್ರಾಮದ ಹೈವೆ ರಸ್ತೆ ಮೇಲಿರುವ ಬಸ್ಸ ನಿಲ್ದಾಣದ ತಲುಪಿ ನೋಡಲು ಹನುಮಾನ ಮಂದಿರದ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಹ್ಮದಮೀಯ್ಯಾ ತಂದೆ ಖದೀರಮೀಯ್ಯಾ ಶೇಖ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ರಾಜೇಶ್ವರ ಇತನು ಜೋರಾಗಿ ಕುಗುತ್ತಾ 1/- ರೂಪಾಯಿಗೆ 90/- ರೂಪಾಯಿ ಅಂತಾ ಜೋರಾಗಿ ಕೂಗಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಅಲ್ಲಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಆರೋಪಿಗೆ ಹಿಡಿದು ಆತನ ಅಂಗ ಝಡ್ತಿ ಮಾಡಲು ಆತನ ಹತ್ತಿರ 2,500/- ರೂಪಾಯಿ, ಒಂದು ಬಾಲ ಪೇನ್ ಹಾಗೂ ಮಟಕಾ ಬರೆದ ಚೀಟಿ ಸಿಕ್ಕಿರುತ್ತವೆ, ಪುನಃ ಆರೋಪಿಗೆ ವಿಚಾರಿಸಲು ಆತನು ತಿಳಿಸಿದ್ದೆನೆಂದರೆ ನಾನು ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಂಡು ಬಂದ ಹಣವನ್ನು 100/- ರೂಪಾಯಿಗೆ 20/- ರೂಪಾಯಿ ಕಮೀಷನಂತೆ ನಮ್ಮೂರಿನ ಖದೀರ ತಂದೆ ಶರೀಫ ಶೇಕ ವಯ: 25 ವರ್ಷ, ಜಾತಿ: ಮುಸ್ಲಿಂ, ಇತನಿಗೆ ಕೊಡುತ್ತೇನೆ ಅಂತಾ ತಿಳಿಸಿದನು, ನಂತರ ನಗದು ಹಣ, ಮಟಕ ಚೀಟಿ, ಬಾಲ ಪೇನ ನೇದ್ದವುಗಳನ್ನು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 104/2020, ಕಲಂ. 279, 338 ಐಪಿಸಿ :-
ದಿನಾಂಕ 14-07-2020 ರಂದು ಫಿರ್ಯಾದಿ ಮಹಮ್ಮದ ಆರೀಫ್ ತಂದೆ ಶೇಕ ಮಹ್ಮದಅಲಿ, ವಯ: 29 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 12-1-486/1/8 ಕಿಸಾನ ನಗರ, ಆಸೀಪ್ ನಗರ ಹೈದ್ರಾಬಾದ ರವರು ಬುಲೇರೋ ಅಶೋಕ ಲಿಲ್ಯಾಂಡ ವಾಹನ ನಂ. ಟಿ.ಎಸ್-13/ಯು.ಬಿ-1136 ನೇದರಲ್ಲಿ ಹೈದ್ರಾಬಾದದಿಂದ ಕಲಬುರ್ಗಿಗೆ ಸೋಪಾ ತೆಗೆದುಕೊಂಡು ಹೋಗಿ ಮರಳಿ ಹೈದ್ರಾಬಾದಕ್ಕೆ ಹೋಗುವಾಗ ಹಳ್ಳಿಖೇಡ(ಕೆ) ಹತ್ತಿರ  ಕಲಬುರ್ಗಿ-ಹುಮನಾಬಾದ ರೋಡ ಹಳ್ಳಿಖೇಡ (ಕೆ) ಪೆಟ್ರೊಲ್ ಬಂಕ್ ಹತ್ತಿರ ಎದುರು ಗಡೆಯಿಂದ ಬಂದ ಟ್ಯಾಂಕರ ಲಾರಿ ನಂ. ಕೆಎ-56/4221 ನೇದರ ಚಾಲಕನಾದ ಆರೋಪಿಯು ತನ್ನ ಟ್ಯಾಂಕರ ಲಾರಿಯನ್ನು ಅತೀವೇಗ ಹಾಗು ನಿಷ್ಕಳಿಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ವಾಹನಕ್ಕೆ  ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ತೆಲೆಗೆ ರಕ್ತಗಾಯ, ಬಲಗೈ ಹಾಗು ಬಲಗಾಲಿಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿರುತ್ತದೆ, ನಂತರ ದಾರಿ ಹೊಕರು ನೋಡಿ ಫಿರ್ಯಾದಿಗೆ ಚಿಕಿತ್ಸೆ ಕುರಿತು 108 ಅಂಬುಲೇನ್ಸ ಮೂಲಕ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರ್ಗಿಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 54/2020, ಕಲಂ. 392 ಐಪಿಸಿ :-
ದಿನಾಂಕ 14-07-2020 ರಂದು ಫಿರ್ಯಾದಿ ಅಂಬೀಕಾ ಗಂಡ ಕೃಷ್ಣಾ ಬಾಯನ್ ವಯ: 33 ವರ್ಷ, ಜಾತಿ: ಪದ್ಮಸಾಲಿ, ಸಾ: ಚಿಟ್ಟಗುಪ್ಪಾ, ಸದ್ಯ: ಸಂತಪುರ ರವರು ತಮ್ಮೂರಲ್ಲಿರುವ ಲಕ್ಷ್ಮೀ ದೇವಸ್ಥಾನಕ್ಕೆ ದೇವರಿಗೆ ನೈವೆದ್ಯ ಮಾಡಿಕೊಂಡು ಬರಲು ಮನೆಯಿಂದ ತನ್ನ ತಾಯಿ ರುಕ್ಮಿಣಿ ಇಬ್ಬರು ಲಕ್ಷ್ಮೀ ದೇವಸ್ಥಾನದ ಹತ್ತಿರ ಇರುವ ಹ್ಯಾಂಡ್ ಪಂಪಗೆ ತಂಬಿಗೆಯಲ್ಲಿ ನೀರು ತುಂಬಿಕೊಂಡು ಸ್ವಲ್ಪ ಮುಂದುಗಡೆ ದೇವಸ್ಥಾನದ ಹತ್ತಿರ ಹೋಗುವಾಗ ಲಕ್ಷ್ಮೀ ದೇವಸ್ಥಾನದ ಹತ್ತಿರ ಎರಡು ಮೋಟಾರ ಸೈಕಲಗಳ ಮೇಲೆ ಇಬ್ಬಿಬ್ಬರು 20 ರಿಂದ 25 ವರ್ಷ ವಯಸ್ಸಿನ ಹುಡುಗರು ದೇವಸ್ಥಾನಕ್ಕೆ ಸುತ್ತು ಹಾಕಿ ಫಿರ್ಯಾದಿಯು ದೇವಸ್ಥಾನದ ಒಳಗೆ ಹೊಗುವಷ್ಟರಲ್ಲಿ ಒಂದು ಯಮಾಹಾ ಮೋಟಾರ ಸೈಕಲ ಮೇಲೆ ಫಿರ್ಯಾದಿಯ ಹಿಂದೆ ನಿಂತಿದ್ದು ಇನ್ನೊಂದು ಪಲ್ಸರ್ ಮೋಟಾರ ಸೈಕಲ ಮೇಲೆ ಇಬ್ಬರು ಎದುರಿನಿಂದ ಬಂದು ಮೋಟಾರ ಸೈಕಲ ಹಿಂದೆ ಕುಳಿತ ಹುಡುಗ ಫಿರ್ಯಾದಿಯ ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ ಬಂಗಾರದ ಗಂಟನ ಸರವನ್ನು ಎಳೆದು ಕಿತ್ತುಕೊಂಡು ಅದೇ ಮೋಟಾರ ಸೈಕಲ ಮೇಲೆ ಓಡಿ ಹೋಗುವಾಗ ಫಿರ್ಯಾದಿಯು ತನ್ನ ಕೊರಳಲ್ಲಿನ ಚಿನ್ನದ ಸರವನ್ನು ಕಿತ್ತುಕೊಂಡು ಮೋಟಾರ ಸೈಕಲ ಮೇಲೆ ಓಡುತ್ತಿದ್ದಾರೆ ಹಿಡಿರಿ-ಹಿಡಿರಿ ಅಂತಾ ಚಿರಾಡುತ್ತಾ ಬೆನ್ನು ಹತ್ತಿದಾಗ ಸದರಿ ಮೋಟಾರ ಸೈಕಲ ನೋಡಲಾಗಿ ಅದು ಪಲ್ಸರ್ ಮೋಟಾರ ಸೈಕಲ್ ತರಹ ಇದ್ದು ಅದಕ್ಕೆ ನಂಬರ್ ಪ್ಲೇಟ್ ಇದ್ದಿರುವುದಿಲ್ಲ, ಕಪ್ಪು ಮತ್ತ ಬೂದಿ ಬಣ್ಣದ ಮೋಟಾರ ಸೈಕಲ್ ತರಹ ಇದ್ದು, ಕೊರಳಿನಿಂದ ಚಿನ್ನದ ಸರವನ್ನು ಕಿತ್ತಿದವನ ಚಹರೆ ಪಟ್ಟಿ ಸ್ವಲ್ಪ ಗಡ್ಡವನ್ನು ಬಿಟ್ಟಿದ್ದು ಆಕಾಶ ನೀಲಿ ಬಣ್ಣದ ತುಂಬುತೊಳಿನ ಟಿ.ಶರ್ಟ ಧರಿಸಿದ್ದು, ಮುಂದೆ ಮೋಟಾರ ಸೈಕಲ್ ನಡೆಸುತ್ತಿದ್ದವನ ಚಹರೆ ಗುರುತು ಆಘಾತದಲ್ಲಿದ್ದ ಫಿರ್ಯಾದಿಗೆ ಗೊತ್ತಾಗಿರುವುದಿಲ್ಲಾ, ಇನ್ನೊಂದು ಮೋಟಾರ ಮೋಟಾರ ಸೈಕಲ್ ಮೇಲೆ ಇಬ್ಬರು ವ್ಯಕ್ತಿಗಳು ಅವನ ಹಿಂದೆ ಜೋರಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದು, ಆಗ ಅದೇ ಓಣಿಯ ಅಮಜದ್ ತಂದೆ ಗಫರಖಾನ್, ಹುಲೆಪ್ಪಾ ತಂದೆ ವೆಂಕಟರಾವ ಸಾಳೆ ಹಾಗು ಹಣಮಂತ ತಂದೆ ನಾಮದೇವ ಕೋಳೆಕರ್ ಇವರೆಲ್ಲರು ಕೂಡಿ ಬೆನ್ನು ಹತ್ತಿದರು ಸಿಗದೆ ಎರಡು ಮೋಟಾರ ಸೈಕಲಗಳ ಮೇಲೆ ಕುಳಿತ ಹುಡುಗರು ಜೋಜನಾ ಕಡೆಗೆ ಓಡಿ ಹೋಗಿರುತ್ತಾರೆ, ಫಿರ್ಯಾದಿಯವರ 4 ತೊಲೆಯ ಬಂಗಾರ ಗಂಟನ ಅ.ಕಿ 1,20,000/- ಆಗಬಹುದು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.