Police Bhavan Kalaburagi

Police Bhavan Kalaburagi

Thursday, March 4, 2021

BIDAR DISTRICT DAILY CRIME UPDATE 04-03-2021

 ದಿನಂಪ್ರತಿ ಅಪರಾಧಳ ಮಾಹಿತಿ ದಿನಾಂಕ 04-03-2021

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 13/2021, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಹಿದಾಯತ ಉಲ್ಲಾ ತಂದೆ ಮಾನಿಖಾನ ವಯ: 40 ವರ್ಷ, ಸಾ: ಮನೆ ನಂ. 3-1-52 ನ್ಸಾಲ್ ತಾಲೀಮ ಬೀದರ  ರವರು ದಿನಾಂಕ 02-03-2021 ರಂದು 1000 ಗಂಟೆಗೆ ತನ್ನ ಮನೆಯಿಂದ ತನ್ನ ಕರ್ತವ್ಯಕ್ಕೆ ಮೆ. ರಾಯಲ್ ಫಾರ್ಮಾ ಬೀದರಗೆ ಹೋಗಿ 1700 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲಿಗೆ ಕೀಲಿ ಹಾಕಿದ್ದು ಇರುತ್ತದೆ, ನಂತರ ಫಿರ್ಯಾದಿಯು ತನ್ನ ಹತ್ತಿರವಿರುವ ಕೀಲಿಯಿಂದ ಕೀಲಿ ತೆಗೆದು ಮನೆಯಲ್ಲಿ ಹೋಗಿ ಊಟ ಮಾಡಿ ತಮ್ಮ ಕರ್ತವ್ಯಕ್ಕೆ ಹೋಗಿ 2030 ಬಂದಾಗ ಸಹ ಮನೆಗೆ ಕೀಲಿ ಇರುತ್ತದೆ. ಆಗ ಫಿರ್ಯಾದಿಯು ತನ್ನ ಹೆಂಡತಿಗೆ ಕರೆ ಮಾಡಲು ಅದು ಸ್ವಿಚ್ಡ ಆಪ್ ಇರುತ್ತದೆ. ನಂತರ ಫಿರ್ಯಾದಿಯು ತನ್ನ ಹೆಂಡತಿಯ ತಮ್ಮ ಹಾಗೂ ಸಂಬಂದಿಕರಿಗೆ ಕರೆ ಮಾಡಲು ಅವಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಮತ್ತು ದಿನಾಂಕ 03-03-2021 ರಂದು ಫಿರ್ಯಾದಿಯು ಹೆಂಡಿತಯ ತಂಗಿಗೆ ಕರೆ ಮಾಡಿದರೂ ಸಹ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ತನ್ನ ಹೆಂಡತಿಯು ಕಾಣೆಯಾಗಿರುತ್ತಾಳೆ ಹಾಗೂ ಮನೆಯಲ್ಲಿದ್ದ 10 ಗ್ರಾಂ ಬಂಗಾರ ಹಾಗೂ 40,000/- ರೂ. ನಗದು ಹಣ ಇರಲಿಲ್ಲ, ಹೆಂಡತಿಯ ವಿವರ 1) ಹೆಸರು: ಮೈಮೋನಾ ಬೇಗಂ, ಗಂಡನ ಹೆಸರು: ಬಾಬು ಮಿಯಾ, ಸಾ: ಹಮಿಲಾಪೂರ, ತಾ & ಜಿ: ಬೀದರ, 2) ಬಣ್ಣ ಬಿಳಿ ಮೈಬಣ್ಣ, ಎತ್ತರ: 5.3, 3) ವಯ 32 ವರ್ಷ, 4) ಮೋಬೈಲ್ ನಂ. 7204903663/8105352685 ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 08/2021, ಕಲಂ. 279, 337, 338 ಐಪಿಸಿ :-

ದಿನಾಂಕ 03-03-2021 ರಂದು ಫಿರ್ಯಾದಿ ಶಿವಶಂಕರ ತಂದೆ ಚಂದ್ರಕಾಂತ ರಾಜೊಳೆ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಬನಶಂಕರಿ ಗಲ್ಲಿ ಬಸವಕಲ್ಯಾಣ ರವರು ತಮ್ಮ ಗೆಳೆಯರಾದ 1) ಸಿದ್ದು ತಂದೆ ಮಹಾದೇವ ಗೌಡೇ ವಯ: 21 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬನಶಂಕರಿ ಗಲ್ಲಿ ಬಸವಕಲ್ಯಾಣ, 2) ಆಕಾಶ ತಂದೆ ಸಂಗಪ್ಪಾ ಸೋನಾರ ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ಬುಧವಾರ ಪೇಟ ಬಸವಕಲ್ಯಾಣ, 3) ಮಹಾದೇವ ತಂದೆ ಶಿವಕಾಂತ ಶಾವಶೆಟ್ಟಿ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಬನಶಂಕರಿ ಗಲ್ಲಿ ಬಸವಕಲ್ಯಾಣ, 4) ಪ್ರಿಯತಂ ತಂದೆ ತಾನಾಜಿ ಬೊಯಿಲೆ ವಯ: 22 ವರ್ಷ, ಜಾತಿ: ಕಬ್ಬಲಿಗ, ಸಾ: ಗೌರಮೆಂಟ ಕಾಲೊನಿ ಲಾತೂರ, ಸದ್ಯ: ಬಸವಕಲ್ಯಾಣ ರವರೆಲ್ಲರೂ ಕೂಡಿಕೊಂಡು ಸಿದ್ದು ಮತ್ತು ಮಹಾದೇವ ಇವರು ಹೊರ ದೇಶಕ್ಕೆ ಹೊಗುವ ಪ್ರಯುಕ್ತ ಇವರಿಗೆ ಹೈದ್ರಾಬಾದಗೆ ಬಿಡಲು ಕಾರ ನಂ ಕೆಎ-32/ಎನ್-3685 ನೇದರಲ್ಲಿ ಕುಳಿತುಕೊಂಡು ಬಸವಕಲ್ಯಾಣದಿಂದ ಬಿಟ್ಟು ಹೈದ್ರಾಬಾದಗೆ ಹೋಗುವಾಗ ಮಾರ್ಗ ಮದ್ಯ ರಾ.ಹೆದ್ದಾರಿ ನಂ. 65 ರ ರೋಡಿನ ಮೇಲೆ ಮರಕುಂದಾ ಗ್ರಾಮದ ಓವರ ಬ್ರಿಡ್ಜನ ಮೇಲೆ ಕಾರ ಚಾಲಕನಾದ ಪ್ರಿಯತಂ ತಂದೆ ತಾನಾಜಿ ಬೊಯಿಲೆ ವಯ: 22 ವರ್ಷ, ಜಾತಿ: ಕಬ್ಬಲಿಗ ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಾ.ಹೆದ್ದಾರಿ ನಂ. 65 ರ ರೋಡಿನ ಡಿವಾಡರಗೆ ಡಿಕ್ಕಿ ಮಾಡಿದ್ದರಿಂದ ಕಾರಿನಲ್ಲಿದ್ದ ಫಿರ್ಯಾದಿಯ ಮೂಗಿನ ಹತ್ತಿರ ಕಟ್ಟಾದ ರಕ್ತಗಾಯ  ಮತ್ತು ಬಲಭುಜಕ್ಕೆ ಗುಪ್ತಗಾಯ, ಸಿದ್ದು ಇತನಿಗೆ ಬಲಗಾಲಿನ ಮೊಳಕಾಲ ಕೆಳಗೆ ಭಾರಿ ರಕ್ತಗಾಯ ಮತ್ತು ಆಕಾಶ ಇತನಿಗೆ ಎಡಗೈ ರಟ್ಟೆಯ ಮೇಲೆ ಭಾರಿ ಗುಪ್ತಗಾಯ ಮತ್ತು ಮಹಾದೇವ ಇತನಿಗೆ ಮತ್ತು ಕಾರ ಚಾಲಕ ಪ್ರಿಯತಂ ಇತನಿಗೆ ಯಾವುದೆ ಗಾಯಗಳಾಗಿರುವುದಿಲ್ಲ, ನಂತರ ಗಾಯಗೊಂಡವರಗೆ ಪ್ರಿಯತಂ ಮತ್ತು ಮಹಾದೇವ ಇವರು 108 ಅಂಬುಲೆನ್ಸನಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

Wednesday, March 3, 2021

BIDSAR DISTRICT DAILY CRIME UPDATE 03-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-03-2021

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 379 ಐಪಿಸಿ :-

ಫಿರ್ಯಾದಿ ನಾಗೇಶ ತಂದೆ ಜ್ಞಾನಚಂದ ಚಲ್ವಾ ಸಾ: ಅಶೋಕ ನಗರ ಬೀದರ ರವರು ತನ್ನ ಹೊಂಡಾ ಎಕ್ಟಿವಾ ಮೊಟರ ಸೈಕಲ ನಂ. KA39Q6735, ಚಾಸಿಸ್ ನಂ. ME4JF507CHU057529, ಇಂಜಿನ ನಂ. JF50EU5056869, ಬಣ್ಣ: ಬಿಳಿ ಬಣ್ಣ, ಮಾಡಲ್: 2017 ಹಾಗೂ .ಕಿ. 40,000/-  ರೂ. ನೇದನ್ನು ಕೆ..ಬಿ ಕಛೇರಿಯ ಎದುರುಗಡೆ ಣಿಯಲ್ಲಿರುವ ಬಸವೇಶ್ವರ ಆಸ್ಪತ್ರೆ ಬೀದರ ನೇದರ ಹೊರಗಡೆ ನಿಲ್ಲಿಸಿರುವುದನ್ನು ದಿನಾಂಕ 23-02-2021 ರಂದು 2300 ಗಂಟೆಯಿಂದ ದಿನಾಂಕ 24-02-2021 ರಂದು 0600 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳªÀÅ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ ಠಾಣೆ, ಬೀದರ ಅಪರಾಧ ಸಂ. 34/2021, ಕಲಂ. 379 ಐಪಿಸಿ :-

ದಿನಾಂಕ 25-01-2021 ರಂದು 0930 ಗಂಟೆಯಿಂದ 1000 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಸಂಜುಕುಮಾರ ತಂದೆ ವಾಮನರಾವ ಅಲ್ಲಾಳೆ ವಯ: 34 ವರ್ಷ, ಜಾತಿ: ರಾಠಾ, ಸಾ: ರಾಜನಾಳ ಗ್ರಾಮ, ತಾ: ಬೀದರ ರವರು ಬೀದರ ಗಾಂಧಿಗಂಜ ಬೀದರದಲ್ಲಿರುವ ಗಣಪತಿ ಮಂದಿರ ಎದುರಗಡೆ ನಿಲ್ಲಿಸಿದ ತನ್ನ ದ್ವಿಚಕ್ರ ವಾಹನ ನಂ. KA-38/X-3106, ENGINE NO. JC85EG0097357, CHESSI NO. ME4JC852HLG058887 ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 40/2021, ಕಲಂ. 379 ಐಪಿಸಿ :-

ಫಿರ್ಯಾದಿ ಶೇಖ್ ಮುಕ್ತಾರ ತಂದೆ ಶೇಖ್ ಮಹೇಮುದ್ ದಪೆದಾರ್ ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಸಿದ್ದಿ ತಾಲಿಮ್ ಹಳೆ ಭಾಲ್ಕಿ ರವರ ಭಾವನಾದ ಜಮೀಲಮಿಯಾ ತಂದೆ ಮಹ್ಮದ್ ಸುಕುರ್ ಸಾ: ವಳಂಡಿ, ತಾ: ದೇವಣಿ, ಜಿ: ಲಾತೂರ (ಎಮ್.ಎಸ್) ಈತನು 2020 ನೇ ಸಾಲಿನಲ್ಲಿ ದೇವಣಿ ಪಟ್ಟಣದಲ್ಲಿ ಮಾರುತಿ ಸುಝುಕಿ ಸ್ವೀಫ್ಟ್ ವಿ.ಡಿ.ಐ ಕಾರ್ ನಂ. ಎಮ್.ಹೆಚ್-20/ಬಿ.ಸಿ-8149 ನೇದನ್ನು ಖರೀದಿ ಮಾಡಿ ಫಿರ್ಯಾದಿಗೆ ಉಪಯೋಗಿಸಲು ಕೊಟ್ಟಿರುತ್ತಾರೆ, ಹೀಗಿರುವಾಗ ದಿನಾಂಕ 01-03-2021 ರಂದು ಫಿರ್ಯಾದಿಯು ಸದರಿ ಕಾರಿನಲ್ಲಿ ತನ್ನ ಖಾಸಗಿ ಕೆಲಸ ಕುರಿತು ಬೀದರಗೆ ಹೋಗಿ 1800 ಗಂಟೆ ಸುಮಾರಿಗೆ ಭಾಲ್ಕಿಗೆ ಬಂದು ದಿನನಿತ್ಯದಂತೆ ಭಾಲ್ಕಿ ಪಟ್ಟಣದ ಸಿದ್ದಿ ತಾಲಿಮ್ ಹಳೆ ಭಾಲ್ಕಿಯ ಮನೆಯ ಮುಂದೆ ಕಾರ್ ನಿಲ್ಲಿಸಿ 2230 ಗಂಟೆ ಸುಮಾರಿಗೆ ಮಲಗಿಕೊಂಡು ನಂತರ ರಾತ್ರಿ 0200 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆ ಕುರಿತು ಎದ್ದಾಗ ಕಾರ್ ನೋಡಲು ತಾನು ನಿಲ್ಲಿಸಿದ ಸ್ಥಳದಲ್ಲಿ ಸದರಿ ಕಾರ್ ಇರಲಿಲ್ಲ, 3 ಲಕ್ಷ ಬೆಲೆ ಬಾಳುವ ಸದರಿ ಕಾರನ್ನು ದಿನಾಂಕ 01-03-2021 ರಂದು 2300 ಗಂಟೆಯಿಂದ ದಿನಾಂಕ 02-03-2021 ರಂದು ರಾತ್ರಿ 0200 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 44/2021, ಕಲಂ. 3 & 7 ಇ.ಸಿ ಕಾಯ್ದೆ :-

ದಿನಾಂಕ 02-03-2021 ರಂದು ಹುಮನಾಬಾದ ಪಟ್ಟಣದ ಅಷ್ಟೇಕರ ಪೆಟ್ರೋಲ ಬಂಕ್ ಹತ್ತಿರ ಲಾರಿ ನಂ. ಜಿ.ಜೆ-36/ಟಿ-5410 ನೇದರಲ್ಲಿ ಸರಕಾರದಿಂದ ಸಾರ್ವಜನಿಕರಿಗೆ ವಿತರಿಸುವ ಅಕ್ಕಿ ಅಕ್ರಮವಾಗಿ ಸಾಗಿಸುವ ಕುರಿತು ನಿಲ್ಲಿಸಿರುತ್ತಾರೆಂದು ಫಿರ್ಯಾದಿ ಶೇಖರ ತಂದೆ ಷಣ್ಮೂಖರಾವ ಕಮಲಾಪುರಕರ ವಯ: 37 ವರ್ಷ, ಜಾತಿ: ಎಸ.ಸಿ ಹೋಲಿಯಾ, ಉ: ಆಹಾರ ನೀರಿಕ್ಷಕರು, ಸಾ: ಭಾರತ ನಗರ ಕಲಬುರ್ಗಿ, ಸದ್ಯ: ತಹಸೀಲ ಕಚೇರಿ ಹುಮನಾಬಾದ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿರ್ಯಾದಿಯವರ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಸದರಿ ಲಾರಿ ಮೇಲೆ ದಾಳಿ ಮಾಡಿ ಒಟ್ಟು 230 ಕ್ವಿಂಟಲ 70 ಕೆ.ಜಿ ಪಿ.ಡಿ.ಎಸ ಅಕ್ಕಿ ಜಪ್ತಿ ಮಾಡಿಕೊಂಡು ಆರೋಪಿತರಾದ 1) ಅಪರಿಚಿತ ಚಾಲಕ ಲಾರಿ ನಂ. ಜಿ.ಜೆ-36/ಟಿ-5410, 2) ಅಪರಿಚತ ಮಾಲಿಕ ಲಾರಿ ನಂ. ಜಿ.ಜೆ-36/ ಟಿ-5410 ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.