Police Bhavan Kalaburagi

Police Bhavan Kalaburagi

Monday, April 26, 2021

BIDAR DISTRICT DAILY CRIME UPDATE 26-04-2021


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ; 26-04-2021

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/2021 ಕಲಂ 174 ಸಿ.ಆರ್.ಪಿ.ಸಿ. :-

 

ದಿನಾಂಕ 25/04/2021 ರಂದು 13:30 ಗಂಟೆಗೆ ಫಿರ್ಯಾದಿ  ಶ್ರೀಮತಿ ವರ್ಷಾಬಾಯಿ ಗಂಡ ಸಂಜುಕುಮಾರ ಹೆಗಡೆ ವಯ: 35 ವರ್ಷ ಜಾತಿ:ಗೊಲ್ಲಾ ಉ: ಕೂಲಿಕೆಲಸ ಸಾ:ಮಲ್ಲಿಕಾರ್ಜುನ ವಾಡಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ  ಇವರ ಪತಿಯ ಹೆಸರಿಗೆ ಸರ್ವೆ ನಂ 145 ರಲ್ಲಿ ಜಮೀನು ಇದ್ದು ಸದರಿ ಜಮೀನಿನಲ್ಲಿ ನೀರಾವರಿ ಮಾಡಿ ಈ ವರ್ಷ ಕಬ್ಬು ಮತ್ತು ತರಕಾರಿ ಹಾಕಿದ್ದು ಇರುತ್ತದೆ. ದಿ:  25-04-2021 ರಂದು ಮುಂಜಾನೆ 0900 ಗಂಟೆಗೆ ಇವರ ಗಂಡ ಸಂಜುಕುಮಾರ ತಂದೆ ಮಾರಿತು ಹೆಗಡೆ ವಯ: 45 ವರ್ಷ ರವರು ಹೋಲದಲ್ಲಿರುವ ಕಬ್ಬಿಗೆ ಮತ್ತು ತರಕಾರಿಗೆ  ನೀರು ಬೀಡುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿದ್ದು   ನೀರು ಚಾಲು ಮಾಡಲು ಹೋಗಿದಾಗ ಆಕಸ್ಮಿಕವಾಗಿ ವಿದ್ಯುತ್ ಹತ್ತಿದರಿಂದ್ದ  ಆಸ್ಪತ್ರೆಗೆ ದಾಖಲಿಸಿದಾಗ  ಆಸ್ಪತ್ರೆಯಲ್ಲಿ ವೈಧ್ಯಾಧಿಕಾರಿಗಳು ಪರೀಕ್ಷೆ ಮಾಡಿ ನನ್ನ ಗಂಡ ಮೃತಪಟ್ಟ ಬಗ್ಗೆ ಖಚಿತಪಡಿಸಿರುತ್ತಾರೆ. ನನ್ನ ಗಂಡನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ತರಹದ ದೂರು ಅಥವಾ ಸಂಶಯ ಇರುವುದಿಲ್ಲ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 76/2021 ಕಲಂ 32, 34 ಕೆ.ಇ. ಕಾಯ್ದೆ ;_

 

ದಿನಾಂಕ 25/04/2021 ರಂದು 09:00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಕಲವಾಡಿ ಗ್ರಾಮದ ಪರಮೇಶ ತಂದೆ ಮಾರುತಿ ಹುಲಿ ಇವನು ತನ್ನ ಅಂಗಡಿಯಲ್ಲಿ ಆಕ್ರಮವಾಗಿ ಮಧ್ಯ ಸಂಗ್ರಹಿಸಿಟ್ಟು ಮಾರಾಟ ಮಾಡುತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಪರಮೇಶ ತಂದೆ ಮಾರುತಿ ಹುಲಿ ವಯ: 33 ವರ್ಷ ಜಾತಿ: ಎಸ್.ಟಿ ಗೊಂಡ ಉ: ಕಿರಾಣಾ ವ್ಯಾಪಾರ ಸಾ: ಕಲವಾಡಿ ಅಂತಾ ತಿಳಿಸಿದ್ದು ಸದರಿಯವನ ವಶದಲ್ಲಿ ಇರುವ ಕಾಟನಗಳನ್ನು ಪರಿಶೀಲಿಸಿ ನೋಡಲು ಅದರಲ್ಲಿ 1] ಓರಿಜಿನಲ್ ಚಾಯ್ಸ ವಿಸ್ಕಿ ಎಂಬ ಹೆಸರಿನ 90 ಎಂ.ಎಲ್ ಉಳ್ಳ 96 ಪೇಪರ ಪೌಚ್ ಇದ್ದು ಒಂದೊಂದರ ಬೆಲೆ 35 ರೂ 13 ಪೈಸೆ ಇರುತ್ತದೆ. 2] ಓಲ್ಡ ಟವರನ್ ವಿಸ್ಕಿ ಎಂಬ ಹೆಸರಿನ 180 ಎಂ.ಎಲ್ ಉಳ್ಳ 48 ಪೇಪರ ಪೌಚ್ ಇದ್ದು ಒಂದೊಂದರ ಬೆಲೆ 86 ರೂ 75 ಪೈಸೆ ಇರುತ್ತದೆ. 3] ಯು.ಎಸ್ ವ್ಹಿಸ್ಕಿ ಹೆಸರಿನ 90 ಎಂ.ಎಲ್ ಉಳ್ಳ 67 ಬಾಟಲಗಳು ಇದ್ದು ಒಂದೊಂದರ ಬೆಲೆ 35 ರೂ 13 ಪೈಸೆ ಇರುತ್ತದೆ. 4] ಕಿಂಗ್ ಫೀಶರ ಸ್ಟ್ರಾಂಗ್ ಪ್ರಿಮಿಯಮ ಎಂಬ ಹೆಸರಿನ 330 ಎಂ.ಎಲ್ ಉಳ್ಳ 10 ಟೀನಗಳು  ಇದ್ದು ಒಂದೊಂದರ ಬೆಲೆ 85 ರೂ ಇರುತ್ತದೆ. 5] ಕಿಂಗ್ ಫೀಶರ ಸ್ಟ್ರಾಂಗ್ ಪ್ರಿಮಿಯಮ ಎಂಬ ಹೆಸರಿನ 330 ಎಂ.ಎಲ್ ಉಳ್ಳ 13 ಬಾಟಲಗಳು ಇದ್ದು ಒಂದೊಂದರ ಬೆಲೆ 85 ರೂ ಇರುತ್ತದೆ. 6] ಮೆಕ್ ಡ್ವಾಲ್ಸ ನಂ 1 ವ್ಹಿಸ್ಕಿ ಎಂಬ ಹೆಸರಿನ 180 ಎಂ.ಎಲ್ ಉಳ್ಳ 11 ಬಾಟಲಗಳು ಇದ್ದು ಒಂದೊಂದರ ಬೆಲೆ 198 ರೂ 23 ಪೈಸೆ ಇರುತ್ತದೆ. 7] ಇಂಪೆರಿಯಲ್ ಬ್ಲ್ಯೂ ಎಂಬ ಹೆಸರಿನ 180 ಎಂ.ಎಲ್ ಉಳ್ಳ 14 ಬಾಟಲಗಳು ಇದ್ದು ಒಂದೊಂದರ ಬೆಲೆ 198 ರೂ 21 ಪೈಸೆ ಇರುತ್ತದೆ. ಅಲ್ಲದೆ ಅವನ ವಶದಲ್ಲಿ ಮಧ್ಯ ಮಾರಾಟ ಮಾಡಿದ ಹಣ 400 ರೂ ಇದ್ದವು ಎಲ್ಲಾ ಸೇರಿ ಅ:ಕಿ: 17200 ರೂ ದಷ್ಟು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.        

 

 

ಭಾಲ್ಕಿ ಗ್ರಾಮೀಣ ಪೊಲಿಸ್ ಠಾಣೆ ಅಪರಾಧ ಸಂಖ್ಯೆ 49/2021 ಕಲಂ 269, 270, 271 ಐಪಿಸಿ ಮತ್ತು 5(4) ಕರ್ನಾಟಕ ಎಪಿಡೆಮಿಕ್ ಡಿಸಿಆರ್ ಕಾಯ್ದೆ 2020 :-

ದಿನಾಂಕ: 25-04-2021 ರಂದು 1700 ಗಂಟೆಗೆ ಮಹೆಂದ್ರಕುಮಾರ್ ಪಿಎಸ್ಐ ರವರು ಕೋವಿಡ್ 19 ನ 2 ನೇ ಅಲೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರದ ಆದೇಶ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರ  ಆದೇಶ ಸಂಖ್ಯೆ ಕಂ;/ಎಮ್.ಎ.ಜಿ./ಸಿ.ಆರ್.08/2021-22 ನೇದ್ದರಂತೆ ಸಾರ್ವಜನಿಕರಿಗೆ ಕರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ  ದಿ: 21-04-2021 ರಂದು ರಾತ್ರಿ 9 ಗಂಟೆಯಿಂದ ದಿ: 04-05-2021 ರಂದು ಬೆಳ್ಳಿಗ್ಗೆ 0600 ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ವಿಧಿಸಿದ್ದು ಹಾಗೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 0600 ಗಂಟೆಯವರೆಗೆ ವಿಕೆಂಡ್ ಕರ್ಫ್ಯೂ ಆದೇಶಿಸಿದ್ದು ಇರುತ್ತದೆ. ಹಿಗಿರುವಲ್ಲಿ ದಿ: 25-04-2021 ರಂದು ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಪೆಟ್ರೋಲಿಂಗ್ ಮಾಡುತ್ತ ಶಾಮಪೂರ, ಸಿದ್ದಾಪೂರವಾಡಿ ಗ್ರಾಮಗಳಿಗೆ ಭೇಟಿ ನೀಡಿ ನಂತರ 1540 ಗಂಟೆಗೆ ಭಾತಂಬ್ರಾ ಕಡೆಗೆ ಹೋದಾಗ ಭಾಲ್ಕಿ ಭಾಂತಾಂಬ್ರ ರೋಡಿಗೆ ಇರುವ ಲಕ್ಷ್ಮಿ ಭಾಂಡೆ ಅಂಗಡಿಯಲ್ಲಿ ಅದರ ಮಾಲಿಕ 5-6 ಜನರಿಗೆ ಕೂಳಿತುಕೊಳ್ಳಲು ಅವಕಾಶ ಮಾಡಿಕೊಟ್ಟು ಮಾಸ್ಕ್ ಹಾಕಿಕೊಳ್ಳಲದೆ ಮತ್ತು ಯಾವುದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸದರಿ ವ್ಯಕ್ತಿಗಳಿಗೆ ಭಾಂಡೆ ಮಾರಾಟ ಮಾಡುತ್ತಿರುವುದನ್ನು ನೋಡಿ ಅವನಿಗೆ ವಿಚಾರಿಸಲು ಹೋದಾಗ ಖರಿದಿ ಮಾಡಲು ಬಂದಿದ್ದ ವ್ಯಕ್ತಿಗಳು ಓಡಿ ಹೋಗಿದ್ದು   ನಂತರ ಅಂಗಡಿಯಲ್ಲಿರುವ ಮಾಲಿಕನಿಗೆ ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ಆತ ತನ್ನ ಹೆಸರು ವಿನಾಯಕ ತಂದೆ ತುಳಸಿರಾಮ ಗೊಟಕರ ವಯ: 40 ವರ್ಷ, ನಂತರ ಅಂಗಡಿಯ ಮುಂದೆ ನಿಂತಿದ್ದ ವ್ಯಕ್ತಿಗೆ ವಿಚಾರಿಸಲು ಆತನು ತನ್ನ ಹೆಸರು ಅಬ್ದುಲ ಸಿರಾಜ ತಂದೆ ಅಬ್ದುಲ ಖಾದರ ವಯ: 45 ವರ್ಷ, ಸಾ: ಭಾಂತಂಬ್ರ, 2. ದಿಲಿಪ ತಂದೆ ಶಿವಪ್ಪ ಭಂಡಾರೆ ವಯ: 44 ವರ್ಷ,ಇವರ ಸಮಕ್ಷಮ ಫೊಟೊ ಮತ್ತು ವಿಡಿಯೊಗ್ರಾಫಿ ಮಾಡಿಕೊಂಡು ಅಂಗಂಡಿಯ ಮಾಲಿಕನಾದ ವಿನಾಯಕ ತಂದೆ ತುಳಸಿರಾಮ ಗೋಟಕರ ವಯ: 40 ವರ್ಷ, ಸಾ: ಜೊಷಿಗಲ್ಲಿ ಭಾಲ್ಕಿ ರವರ ವಿರುದ್ದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 77/2021 ಕಲಂ 269, 270, 271 ಐಪಿಸಿ ಮತ್ತು 5(4) ಕರ್ನಾಟಕ  ಎಪಿಡೆಮಿಕ್ ಡಿಸಿಸ್ ಕಾಯ್ದೆ 2020 :-

ದಿನಾಂಕ 25/04/2021 ರಂದು 13:00 ಗಂಟೆಗೆ  ಫಿರ್ಯಾದಿ ಅಮರ ಕುಲಕರ್ಣಿ ಪಿ.ಎಸ್,ಐ ಭಾಲ್ಕಿ ನಗರ ಪೊಲೀಸ್ ಠಾಣೆ  ರವರು  ಜೊತೆಯಲ್ಲಿ ಸಿಬ್ಬಂದಿಯೊಂದಿಗೆ ಪೇಟ್ರೊಲಿಂಗ ಕರ್ತವ್ಯ ಮಾಡುತ್ತಾ ಠಾಣೆ ಜೀಪ ನಂ ಕೆಎ 38 ಜಿ 268 ನೇದರಲ್ಲಿ ಕುಳಿತು ಹೋರಟು ಹೋಗುವಾಗ ದಿಲೀಪ ಎಪಿಸಿ 138 ರವರು ಜೀಪನ್ನು ಚಲಾಯಿಸುತ್ತಿದ್ದು ಬಸ್ ನಿಲ್ದಾಣ , ಬಿ,ಕೆ,ಐ,ಟಿ ಕಾಲೇಜ ,ಬಸವ ನಗರ ,ಕಲವಾಡಿ ನಂತರ ಹಳೆ ಭಾಲ್ಕಿ ,ಬೀದರ ಬೇಸ್ ,ಅಶೋಕ ನಗರ ,ಚೌಡಿ ಕಡೆಗೆ ತಿರುಗಾಡಿ ಸಾರ್ವಜನಿಕರಿಗೆ ಕೋವಿಡ-2019 ನೇದರ ಬಗ್ಗೆ ಅರಿವು ಮೂಡಿಸುತ್ತಾ ಮರಳಿ ಕುಂಬೇಶ್ವರ ಗಲ್ಲಿ ಹತ್ತೀರ ಬಂದಾಗ ಕುಂಬೇಶ್ವರ ದೇವಾಲಯದಲ್ಲಿ 11:30 ಗಂಟೆಗೆ ಒಂದು ಮದುವೆಯ ಕಾರ್ಯಕ್ರಮ ನಡೆಯುತಿರುವ ಬಗ್ಗೆ ಮಾಹಿತಿ ತಿಳಿದು ಕುಂಬೇಶ್ವರ ದೇವಾಲಯದಲ್ಲಿ ಹೋಗಿ ನೋಡಲು ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರು ಹೊರಡಿಸಿದ ಆದೇಶ ಸಂಖ್ಯೆ:ಕಂ/ಎಂ.ಎ.ಜಿ/ ಸಿ.ಆರ್-08/2021-22/ದಿನಾಂಕ22/04/2021 ನೇದರಲ್ಲಿ  ಮದುವೆಯ ಕಾಲಕ್ಕೆ 50 ಜನರಿಗೆ ಸೇರಲು ಮಾತ್ರ ಅವಕಾಶ ಇದ್ದು ಆದೇಶವನ್ನು ಉಲ್ಲಂಘಿಸಿ ಮದುವೆಯ ಕಾರ್ಯಕ್ರಮದಲ್ಲಿ ಸುಮಾರು 200 ಕಿಂತ ಹೆಚ್ಚು ಜನರು ಭಾಗವಹಿಸಿದ್ದು ಈ ಮದುವೆಯ ಕಾರ್ಯಕ್ರಮವನ್ನು ಯಾರು ಆಯೋಜಿಸಿದ್ದು ಅಂತಾ  ವಿಚಾರಿಸಲು 1] ಶಿವಾಜಿರಾವ ತಂದೆ ಧೊಂಡಿಬಾ ಜಾಧವ ವಯ:55 ವರ್ಷ ಜಾತಿ: ಮರಾಠ ಉ: ಒಕ್ಕಲುತನ ಸಾ: ಹರಕಾರ ಗಲ್ಲಿ ಭಾಲ್ಕಿ 2] ಕೈಲಾಸ ಶಿಂಧೆ ಗಜಾನನ ಟೆಂಟ ಹೌಸ ಮಾಲೀಕರು ಭಾಲ್ಕಿ ಅಂತಾ ತಿಳಿಸಿದ್ದು ಇರುತ್ತದೆ. ಸದರಿಯವರಿಗೆ ಮದುವೆ ನಿಲ್ಲಿಸಲು ಹೆಳಿದಾಗ ಅಡೆ ತಡೆ ಉಂಟು ಮಾಡಿದ್ದು ಇರುತ್ತದೆ. ಕಾರಣ ಮದುವೆಯ ಆಯೋಜಕರು ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ ರೋಗದ ಸೋಂಕನ್ನು ಹರಡುವ ಸಂಭವವಿರುವ ನಿರ್ಲಕ್ಷ ಕೃತ್ಯ ಮತ್ತು ಜನರ ಪ್ರಾಣಕ್ಕೆ ಅಪಯಕಾರಿಯಾದ ಕೋವಿಡ್ ರೋಗದ ಸೋಂಕನ್ನು ಹರಡುವ ಉದ್ದೇಶ, ರೋಗ ನಿರೋದಕ ನಿರ್ಬಂದಕ ನಿಯಮವನ್ನು ಉಲ್ಲಂಘಿಸುವುದು ಮತ್ತು ಸಕಾರದ ಆದೇಶ ಉಲ್ಲಂಘಿಸುವದು ಮತ್ತು ಮದುವೆ ತಡೆಯಲು ಹೋದಾಗ ಅಡೆ ತಡೆ ಉಂಟು ಮಾಡಿದ್ದು ಇರುತ್ತದೆ. ಆದರಿಂದ  ಸದರಿಯವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Sunday, April 25, 2021

BIDAR DISTRICT DAILY CRIME UPDATE 25-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-04-2021

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 48/2021, ಕಲಂ. 279, 337, 338 ಐಪಿಸಿ ಜೊತೆ 187 ಐ.ಎಂ.ವಿ ಕಾಯ್ದೆ :-

ದಿನಾಂಕ 24-04-2021 ರಂದು ಫಿರ್ಯಾದಿ ಮೋಯಿನ್ ತಂದೆ ನಬೀಸಾಬ್ ಖುರೇಷಿ ಸಾ: ಲಖನಗಾಂವ, ತಾ: ಭಾಲ್ಕಿ ರವರ  ಗಳೆಯನಾದ ದತ್ತಾತ್ರಿ ತಂದೆ ರಮೇಶ ಗೌಂಡಗಾವೆ ವಯ: 20 ವರ್ಷ, ಜಾತಿ: ಮರಾಠಾ, ಸಾ: ಲಖನಗಾಂವ ಈತನು ಫಿರ್ಯಾದಿಯ ಹತ್ತಿರ ಬಂದು ನಮ್ಮ ಹೊಲದಲ್ಲಿ ಇಂದು ರಾತ್ರಿ ಟ್ರಾಕ್ಟರ ಹೊಡೆಯುವುದು ಇದೆ ಆದ್ದರಿಂದ ನನ್ನ ಟ್ರಾಕ್ಟರನಲ್ಲಿ ಡಿಸೇಲ್ ಖಾಲಿಯಾಗಿದ್ದು ಭಾತಂಬ್ರಾ ಗ್ರಾಮಕ್ಕೆ ನನ್ನ ಜೊತೆ ಬಾ ಇಬ್ಬರು ಕೂಡಿಕೊಂಡು ನನ್ನ ಮೋಟಾರ್ ಸೈಕಲ ಮೇಲೆ ಡಿಸೇಲ್ ತೆಗೆದುಕೊಂಡು ಬರೋಣ ಅಂತಾ ಹೇಳಿದ್ದಕ್ಕೆ ಸರಿ ಆಯ್ತು ಹೋಗೋಣಾ ಅಂತಾ ದತ್ತಾತ್ರಿ ಈತನ ಮೋಟಾರ್ ಸೈಕಲ ನಂ. ಎಮ್.ಹೆಚ್-24/ಕೆ-2478 ಮೇಲೆ ಲಖನಗಾಂವ ಗ್ರಾಮದಿಂದ ಬಿಟ್ಟು ದತ್ತಾತ್ರಿ ಈತನು ವಾಹನ ಚಲಾಯಿಸುತ್ತಿದ್ದು ಇಬ್ಬರು ಭಾತಂಬ್ರಾ ಗ್ರಾಮಕ್ಕೆ ಬರುವಾಗ ಭಾತಂಬ್ರಾ - ಕಾಕನಾಳ ರಸ್ತೆಯ ಮೇಲೆ  ಮಾಣಿಕಪ್ಪಾ ಸೋಲಾಪೂರೆ ರವರ ಹೊಲದ ಹತ್ತಿರ ಎದುರಿನಿಂದ ಟವೇರಾ ವಾಹನ ಸಂ. ಎಪಿ-28/ಬಿಎನ್-6194 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ವಾಹನ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತ ವಾಹನಕ್ಕೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಾಲು ತೊಡೆಗೆ ಪೆಟ್ಟು ಬಿದ್ದು ಭಾರಿ ಗುಪ್ತಗಾಯ, ರಕ್ತಗಾಯ, ಹಣೆಗೆ ತರಚಿದ ಗಾಯ ಮತ್ತು ಬಲಗೈ ಭುಜದ ಹತ್ತಿರ ತರಚಿದ ಗಾಯವಾಗಿರುತ್ತವೆ ಹಾಗೂ ದತ್ತಾತ್ರಿ ಈತನ ಬಲಗಾಲ ಪಾದ ಹರಿದು ಭಾರಿ ರಕ್ತಗಾಯವಾಗಿರುತ್ತದೆ, ಅದೇ ಸಮಯಕ್ಕೆ ಅಲ್ಲೆ ಇದ್ದ ಪರಮೇಶ್ವರ ತಂದೆ ಪ್ರಕಾಶ ಸೋಲಾಪೂರೆ ಸಾ: ಭಾತಂಬ್ರಾ ಇವರು ಬಂದು ನೋಡಿ 108 ಅಂಬುಲೇನ್ಸಗೆ ಕರೆಯಿಸಿ ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Saturday, April 24, 2021

BIDAR DISTRICT DAILY CRIME UPDATE 24-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-04-2031

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 16/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 21-04-2021 ರಂದು ಫಿರ್ಯಾದಿ ಸಂಗಪ್ಪಾ ತಂದೆ ವೈಜಿನಾಥ ವಯ: 40 ವರ್ಷ, ಜಾತಿ: ಗೊಂಡಾ, ಸಾ: ಹಳೆ ಚಿದ್ರಿ ಬೀದರ ರವರು ಚಿದ್ರಿ ರಿಂಗ ರೋಡದಿಂದ ಚಿದ್ರಿ ಗ್ರಾಮಕ್ಕೆ ಹೋಗುವಾಗ ತಮ್ಮೂರ ಪಂಡಿತ ಚಿದ್ರಿ ಇವರ ಹೊಲದಲ್ಲಿ ಕೆಲವು ಜನರು ನಿಂತಿದ್ದು ಏನೋ ನೋಡುತ್ತಿರುವುದನ್ನು ನೋಡಿ ಫಿರ್ಯಾದಿಯು ಸಹ ಹೋಗಿ ನೋಡಲು ಒಬ್ಬ ಅಪರಿಚಿತ ಗಂಡು ವ್ಯಕ್ತಿ ಮೃತಪಟ್ಟಿದ್ದು ಸದರಿ ವ್ಯಕ್ತಿ ಯಾರು ಎಂಬುದು ತಿಳಿದು ಬಂದಿರುವುದಿಲ್ಲಾ, ಮೃತ ವ್ಯಕ್ತಿ ಸರಾಯಿ ಕುಡಿದು ಬಿಸಿಲಿನಲ್ಲಿ ಬಿದ್ದು ಮೃತಪಟ್ಟಂತೆ ಕಂಡುಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಕಾರಣ ಸದರಿ ವಿಷಯಕ್ಕೆ ಸಂಬಂದಿಸಿದಂತೆ ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಇದೆ ಅಂತಾ ನೀಡಿದ ಸಾರಾಂಶದ ಮೇರೆಗೆ ದಿನಾಂಕ 23-04-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ .

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 15/2021, ಕಲಂ. 498(ಎ), 323, 504, 506 ಜೊತೆ 34 ಐಪಿಸಿ :-

ಫಿರ್ಯಾದಿ ಕಾವೇರಿ ಗಂಡ ವಿಜಯಕುಮಾರ ವಯ: 27 ವರ್ಷ, ಜಾತಿ: ಕುರುಬ, ಸಾ: ರಾಮನಗರ ಚಿದ್ರಿ ರೋಡ ಬೀದರ ರವರ ಮದುವೆಯು ದಿನಾಂಕ 06-05-2013 ರಂದು ಬೀದರ ರಾಮನಗರದ ವಿಠ್ಠಲರಾವ ಯಲಗೊಯಿಕರ್ ರವರ ಮಗನಾದ ವಿಜಯಕುಮಾgÀ ಇತನ ಜೊತೆಯಲ್ಲಿ ಆಗಿರುತ್ತದೆ, ಫಿರ್ಯಾದಿಗೆ ಸಾತ್ವಿಕ್ ವಯ 7 ವರ್ಷ ಮತ್ತು ರುತ್ವಿಕ್ ವಯ 4 ವರ್ಷ ಹೀಗೆ ಎರಡು ಜನ ಗಂಡು ಮಕ್ಕಳು ಇರುತ್ತಾರೆ, ಗಂಡನಾದ ವಿಜಯಕುಮಾರ ಇತನು ಮದುವೆಯಾದ ಸ್ವಲ್ಪ ದಿವಸಗಳ ಕಾಲ ಮಾತ್ರ ಚೆನ್ನಾಗಿ ನೋಡಿಕೊಂಡು ನಂತರ ದಿನಾಲು ಸರಾಯಿ ಕುಡಿದು ಮನೆಗೆ ಬಂದು ಕೈಯಿಂದ ಹೊಡೆ ಬಡೆ ಮಾಡುವದು, ಅವಾಚ್ಯವಾಗಿ ಬೈಯುವದು ಮತ್ತು ಫಿರ್ಯಾದಿಯು ಕೆಲಸದ ನಿಮಿತ್ಯ ಹೊರಗಡೆ ಹೋದಾಗ ಫಿರ್ಯಾದಿಯ ಮೇಲೆ ಸಂಶಯ ಪಟ್ಟು ನೀನು ಬೇರೆಯವರ ಜೊತೆಯಲ್ಲಿ ಮಲಗಿಕೊಂಡು ಮನೆಗೆ ಬರುತ್ತಿ ಅಂತ ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ ಮತ್ತು ಅತ್ತೆಯಾದ ಶುಶೀಲಾಬಾಯಿ ಇವಳು ಸಹ ಗಂಡನಿಗೆ ನಿನ್ನ ಹೆಂಡತಿ ಚೆನ್ನಾಗಿಲ್ಲ, ಅವಳಿಗೆ ಮನೆಯಿಂದ ಹೊರಗೆ ಹಾಕು, ನಿನಗೆ ಬೆರೆ ಮದುವೆ ಮಾಡುತ್ತೇನೆ ಅಂತ ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುತ್ತಾ ಮಾನಸಿಕ ಹಾಗÄ ದೈಹಿಕ ಕಿರುಕುಳ ನೀಡಿರುತ್ತಾಳೆ, ತನಗೆ ಗಂಡ, ಅತ್ತೆ ರವರು ಕಿರುಕುಳ ಕೊಡುವ ಬಗ್ಗೆ ತನ್ನ ತಾಯಿಯಾದ ಮೀನಾಕ್ಷಿ, ಅಣ್ಣನಾದ ವಿಜಯರಾಜ, ದೊಡ್ಡಮ್ಮಳಾದ ಶಿವಮ್ಮಾ, ಚಿಕ್ಕಪ್ಪನಾದ ಚಂದ್ರಶೇಖರ ರವರಿಗೆ ತಿಳಿಸಿದಾಗ ಅವರು ಬೀದರಗೆ ಗಂಡನ ಮನೆಗೆ ಬಂದು ಗಂಡ, ಅತ್ತೆ ರವರಿಗೆ ಬುದ್ದಿವಾದ ಹೇಳಿರುತ್ತಾರೆ, ಆದರೂ ಸಹ ಅವರು ಫಿರ್ಯಾದಿಗೆ vೆÆಂದರೆ ಕೊಡುವದು ಬಿಟ್ಟಿರುವದಿಲ್ಲ, ಹೀಗಿರುವಾಗ ಫಿಯಾದಿಯವರ ಕಾಲೋನಿಯಲ್ಲಿಯೇ ಟೇಲರಿಂಗ ಕೆಲಸ ಕಲಿಸುವವರು ಇದ್ದು ಫಿರ್ಯಾದಿಯು ಸಹ ತನ್ನ ಗಂಡನಿಗೆ ಟೆಲರಿಂಗ್ ಕೆಲಸ ಕಲಿಯುತ್ತೇನೆಂದು ಹೇಳಿದಾಗ ದಿನಾಂಕ 21-04-2021 ರಂದು ಫಿರ್ಯಾದಿಗೆ ನೀನು ಟೇಲರಿಂಗ್ ಕೆಲಸ ಕಲಿಯಲು ಹೋಗುವದಿಲ್ಲ, ಬೇರೆಯವರ ಜೊತೆಯಲ್ಲಿ ಇರಲು ಹೋಗುತ್ತಿ ಅಂತ ಬೈದು ಜಗಳ ಮಾಡಿ ಕೈಯಿಂದ ಕಪಾಳದ ಮೇಲೆ, ಬೆನ್ನಿನ ಮೇಲೆ ಹೊಡೆದು ಕೂದಲು ಹಿಡಿದು ಕಾಲಿನಿಂದ ಒದ್ದಿರುತ್ತಾನೆ ಮತ್ತು ಕಬ್ಬಿಣದ ಪೈಪ್ ತೆಗೆದುಕೊಂಡು ಕೈಗಳ ಮೇಲೆ, ಕಾಲುಗಳ ಮೇಲೆ ಹೊಡೆದಿರುತ್ತಾನೆ ಮತ್ತು ಅಲ್ಲಿಯೇ ಇದ್ದ ಅರಗಲ್ ತೆಗೆದುಕೊಂಡು ಹೊಡೆಯಲು ಬಂದಾಗ ಜಗಳ ಮಾಡುವ ಶಬ್ದವನ್ನು ಕೇಳಿ ಪಕ್ಕದ ಮನೆಯವರಾದ ನಾಗಪ್ಪಾ, ರಾಜಮ್ಮಾ, ಹನುಮಂತ ರವರು ಬಂದು ಬಿಡಿಸಿಕೊಂಡಿರುತ್ತಾರೆ, ಜಗಳದ ವಿಷಯ ನಿನ್ನ ತವರು ಮನೆಯಲ್ಲಿ ಹೇಳಿದರೆ ನಿನಗೆ ಜೀವಂತ ಇಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 23-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 38/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 23-04-2021 ರಂದು ಭೋಸಗಾ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್.ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡ, ಠಾಣೆಯ ಸಿಬ್ಬಂದಿವಯರೊಡನೆ ಭೋಸಗಾ ಗ್ರಾಮಕ್ಕೆ ಹೋಗಿ ಗ್ರಾಮದ ಶಿವಾಜಿ ಚೌಕ ಹತ್ತಿರ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಭೋಸಗಾ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಂಜೀತ ತಂದೆ ಗಣಪತಿ ಮಾನೆ ವಯ: 40 ವರ್ಷ, ಜಾತಿ: ಸಮಗಾರ, ಸಾ: ಭೋಸಗಾ ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದುಕೊಂಡಾಗ ಹಣ ಕೊಟ್ಟು ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ಹಿಡಿದ ವ್ಯಕ್ತಿಗೆ ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಂಡು ಈ ಹಣವನ್ನು ನಮ್ಮೂರ ಅಂUÀದ ತಂದೆ ಹರಿನಾಥ ಕಾಂಬಳೆ ವಯ: 35 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಇವನಿಗೆ ಕೋಡುತ್ತೇನೆ ಅವನು ನನಗೆ ಕಮಿಷ£ï ಹಣ ನೀಡುತ್ತಾನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಆತನ ಹತ್ತಿರ 1) ನಗದು ಹಣ 550/- ರೂಪಾಯಿ, 2) ಒಂದು ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ನ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ  ಆರೋಪಿತನ ವಿರುದ್ಧ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.