Police Bhavan Kalaburagi

Police Bhavan Kalaburagi

Tuesday, August 24, 2021

BIDAR DISTRICT DAILY CRIME UPDATE 24-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-08-2021

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 17/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ತುಕ್ಕಣ್ಣಾ ತಂದೆ ಸಾಯಿಬಣ್ಣಾ ಕಂಠೆಕರ ವಯ: 75 ವರ್ಷ, ಜಾತಿ:  ಕುರುಬ, ಸಾ: ರಾಜೇಶ್ವರ ರವರ ಮಗನಾದ ರಾಜಕುಮಾರ ಇತನು ಯಾವಾಗಲು ಸರಾಯಿ ಕುಡಿಯುವ ಚಟವುಳ್ಳನಾಗಿದ್ದು, ಸರಾಯಿ ಕುಡಿದಾಗ ಮನೆಯಲ್ಲಿ ಯಾರಿಗೂ ಹೇಳದೇ ಲಾರಿ ಮೇಲೆ ಹೋಗುತ್ತಿದ್ದನು, ಒಂದೊಂದು ವಾರದ ನಂತರ ತಿರುಗಿ ಮನೆಗೆ ಬರುತಿದ್ದ, ಅದರಂತೆ ದಿನಾಂಕ 19-08-2021 ರಂದು ಮಗ ರಾಜಕುಮಾರ ಇವನು ಮನೆಯಿಂದ ಹೋದವನು ತಿರುಗಿ ಮನೆಗೆ ಬಂದಿರುವುದಿಲ್ಲಾ, ಹೀಗಿರಲು ದಿನಾಂಕ 19-08-2021 ರಂದು ರಾಜಕುಮಾರ ಇತನು ಸರಾಯಿ ಕುಡಿದ ಅಮಲಿನಲ್ಲಿ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ, ತನ್ನ ಮಗನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ತರಹದ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 57/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 22-08-2021 ರಂದು ಫಿರ್ಯಾದಿ ಶೇಖ ಶೆಬ್ಬಿರ ತಂದೆ ರಸೂಲಸಾಬ ಸಾ: ಬೆಡಕುಂದಾ ರವರ ಹೆಂಡತಿಯ ತಮ್ಮಂದಿರಾದ ಚಾಂದ ತಂದೆ ಅಬ್ದುಲಸಾಬ ಮುಲ್ಲಾ ಇವರು ಕರೆ ಮಾಡಿ ನಾವು ತಪಶ್ಯಾಳ ಕ್ರಾಸೀನ ಬಳಿಗೆ ಕುಳಿತ್ತಿದ್ದು ನಮಗೆ ಕುಶನೂರ ಗ್ರಾಮಕ್ಕೆ ಹೋಗಲು ಯಾವುದೇ ವಾಹನ ಇಲ್ಲ ತಿಳಿಸಿದಕ್ಕೆ ಫಿರ್ಯಾದಿಯು ತನ್ನ ತ್ರೀಚಕ್ರ ವಾಹನ ನಂ. ಕೆಎ-38/ವಿ-7835 ನೇದನ್ನು ತೆಗೆದುಕೊಂಡು ಹೋಗಿ ತಪಶ್ಯಾಳ ಕ್ರಾಸ ಹತ್ತಿರ ಅವರಿಬ್ಬರಿಗೆ ತನ್ನ ವಾಹನದಲ್ಲಿ ಕೂಡಿಸಿಕೊಂಡು ಮರಳಿ ಠಾಣಾ ಕುಶನೂರ ಗ್ರಾಮಕ್ಕೆ ಬರುತ್ತಿರುವಾಗ ಚಾಂದೂರಿ ಗ್ರಾಮದ ಶಿವಾರದಲ್ಲಿ ತಿರುವು ರಸ್ತೆಯಲ್ಲಿ ಎದುರಿನಿಂದ ಮೋಟಾರ್ ಸೈಕಲ್ ನಂ. ಕೆಎ-38/ವ್ಹಿ-7056 ನೇದರ ಚಾಲಕನಾದ ಆರೋಪಿ ಇಬ್ರಾಹೀಂ ತಂದೆ ರಶೀದಖಾನ ಪಠಾಣ ಸಾ: ಕೋರ್ಯಾಳ ಇತನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ತ್ರಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿ ತನ್ನ ಮೋಟಾರ್ ಸೈಕಲನ್ನು ನಿಲ್ಲಿಸದೇ ಓಡಿಡಿಕೊಂಡು ಹೋಗಿರುತ್ತಾನೆಮ, ಸದರಿ ಅಪಘಾತದಲ್ಲಿ ಫಿರ್ಯಾದಿಗೆ ಯಾವುದೇ ಗಾಯವಾಗಿರುವುದಿಲ್ಲಾ, ಚಾಂದಪಾಷಾ ಇವನಿಗೆ ಬಲಗಾಲಿನ ಮೋಲಕಾಲಿಗೆ ಭಾರಿ ಗುಪ್ತಗಾಯ, ಆರೀಫ ಪಾಷಾ ಇವನಿಗೆ ಬಲಗಾಲಿನ ಮೋಳಕಾಲಿನ ಕೆಳಭಾಗದಲ್ಲಿ ರಕ್ತಗಾಯವಾಗಿರುತ್ತದೆ, ನಂತರ ಅಲ್ಲಿ ಸೇರಿದ ಜನರು 108 ಅಂಬುಲೇನ್ಸಗೆ ಕರೆ ಮಾಡಿ ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 83/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 23-08-2021 ರಂದು ಬ್ಯಾಲಹಳ್ಳಿ[ಕೆ] ಗ್ರಾಮದಲ್ಲಿ ಕಣಜಿ [ಕೆ] ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಹೇಳಿ ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ನಸಿಬಿನ ಮಟಕಾ ಜೂಜಾಟ ಆಡಿಸುತ್ತಿದ್ದಾನೆಂದು ವೀರಣ್ಣ ಎಸ್. ದೊಡ್ಡಮನಿ ಸಿಪಿಐ ಭಾಲ್ಕಿ ಗ್ರಾಮಿಣ ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೆರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಕಟ್ಟಿತುಗಾಂವ ಮಾರ್ಗವಾಗಿ ಬ್ಯಾಲಹಳ್ಳಿ ಕಾರಂಜಾ ಬ್ರೀಜ್ಡ [ಡ್ಯಾಮ] ಎದುರುಗಡೆ ಇರುವ ಹುಮನಾಬಾದ - ಬೀದರ ರಸ್ತೆಯ ಸೇತುವೆ ಮೇಲೆ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಅಲ್ಲಿ ಕಣಜಿ[ಕೆ] ಕ್ರಾಸ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಆರೋಪಿ ಅನೀಲಕುಮಾರ ತಂದೆ ರೇವಣಪ್ಪಾ ಮಾಹಗಾಂವ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಕಣಜಿ [ಕೆ] ಇತನು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಕೂಗುತ್ತಾ ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ನಸಿಬಿನ ಮಟಕಾ ಜೂಜಾಟ ನಡೆಸುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಗೆ ಹಿಡಿದುಕೊಂಡು ವಿಚಾರಣೆ ಮಾಡಲು ಆತನು ತಾನು ಜನರಿಂದ ಅಕ್ರಮವಾಗಿ ಹಣ ಪಡೆದು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಆಸೆ ತೋರಿಸಿ ಜನರಿಗೆ ಮಟಕಾ ಚೀಟಿ ಬರೆದುಕೊಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ, ನಂತರ ಆರೋಪಿಗೆ ಪಂಚರ ಸಮಕ್ಷಮ ಶೋಧನೆ ಮಾಡಿದ್ದು ಆತನ ಹತ್ತಿರ 1830/- ರೂ ನಗದು ಹಣ, ಒಂದು ಬಾಲ ಪೆನ್ನ ಹಾಗು ಮಟಕಾ ನಂಬರ ಬರೆದ 06 ಮಟಕಾ ಚೀಟಿಗಳು ದೊರೆತಿದ್ದು ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Monday, August 23, 2021

BIDAR DISTRICT DAILY CRIME UPDATE 23-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-08-2021

 

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 07/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 22-08-2021 ರಂದು ಫಿರ್ಯಾದಿ ಸಂತೋಷಿ ಗಂಡ ಸಂತೋಷ ಪಾಟೀಲ ಸಾ: ನವಲಾಸಪುರ ಗ್ರಾಮ ತಾ: & ಜಿ: ಬೀದರ ರವರ ಗಂಡನಾದ ಸಂತೋಷ್ ತಂದೆ ನಾಗಶಟ್ಟಿ ಪಾಟೀಲ್ ವಯ: 40 ವರ್ಷ ಇವರು ಕೃಷಿ ಕೆಲಸಕ್ಕೆ ಬ್ಯಾಂಕಿನಿಂದ ಸಾಲ ಮಾಡಿದ್ದು, ಸರಿಯಾಗಿ ಮಳೆಯಾಗದ ಕಾರಣ ಬೆಳೆ ಬೆಳೆಯಲಾರದೆ ಸಾಲ ಹೇಗೆ ತೀರಿಸಬೇಕೆಂದು ಮನನೊಂದು ಸಾಲಭಾದೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 16/2021, ಕಲಂ. 174(ಸಿ) ಸಿ.ಆರ್.ಪಿ.ಸಿ :-

ದಿನಾಂಕ 21-08-2021 ರಂದು 1730 ಗಂಟೆ ಸುಮಾರಿಗೆ ಫಿರ್ಯಾದಿ ತ್ರಿವೇಣಿ ಗಂಡ ಶ್ರೀಕಾಂತ ದೊಡ್ಡಮನಿ ವಯ: 33 ವರ್ಷ, ಜಾತಿ: ಎಸ್.ಸಿ ಮಾದಿಗ, ಉ: ಸಹಾಕಯ ತೋಟಗಾರಿಕೆ ನಿರ್ದೇಶಕರು ಹಳ್ಳಿ ಕ್ಷೇತ್ರ, ಸಾ: ಭವಾನಿ ಕಾಲೋನಿ ಹುಮನಾಬಾದ ರವರ ತೋಟಗಾರಿಕೆ ಕ್ಷೇತ್ರದಲ್ಲಿ ಸಹಾಯಕ ತೋಟಗಾರಿಗೆ ಅಧಿಕಾರಿ ಅಂತಾ ಕೆಲಸ ಮಾಡುವ ಪುಂಡಲಿಕ ತಂದೆ ಮಾಣಿಕರಾವ ಮೇಟಿ ರವರು ಕರೆ ಮಾಡಿ ನಮ್ಮ ಸರ್ವೆ ನಂ. 123 ನೇದರ ಜಮೀನಿನಲ್ಲಿರುವ ಬಾವಿಯಲ್ಲಿ ಒಂದು ಅಪರಿಚಿತ ಶವ ಬಿದ್ದಿದೆ ಅಂತಾ ತಿಳಿಸಿದರು, ನಂತರ ಫಿರ್ಯಾದಿಯವರು ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ದಿನಾಂಕ 22-08-2021 ರಂದು 0700 ಗಂಟೆಗೆ ತಮ್ಮ ತೋಟಗಾರಿಕೆ ಕ್ಷೇತ್ರಕ್ಕೆ ಹೋಗಿ ಜಮೀನಿನ ಆವರಣದಲ್ಲಿರುವ ಬಾವಿಯ ಹತ್ತಿರ ಹೋಗಿ ನೋಡಲು ಒಂದು ಅಪರಿಚಿತ ಶವ ಬೋರಲಾಗಿ ನೀರಿನ ಮೇಲೆ ತೆಲುತಿತ್ತು ಶವ ಪೂರ್ತಿ ಕೊಳೆತಂತೆ ಕಂಡುಬರುತ್ತದೆ, ಸದರಿ ಘಟನೆ ಸುಮಾರು 20-25 ದಿವಸಗಳ ಹಿಂದೆ ಜರುಗಿದಂತೆ ಕಂಡು ಬರುತ್ತಿದ್ದು, ಸದರಿ ಸಾವಿನ ಬಗ್ಗೆ ನನಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 94/2021, ಕಲಂ. 379 ಐಪಿಸಿ :-

ದಿನಾಂಕ 23-07-2021 ರಂದು 2200 ಗಂಟೆಯಿ0ದ ದಿನಾಂಕ 24-07-2021 ರಂದು 0600 ಗಂಟೆಯ ಅವಧಿಯಲ್ಲಿ ಬೀದರ ನಗರದ ಯಲ್ಲಾಲಿಂಗ ಕಾಲೋನಿ ನೌಬಾದನಲ್ಲಿರುವ ಫಿರ್ಯಾದಿ ಅಜಯಕುಮಾರ ತಂದೆ ರಾಮಯ್ಯ ಸಾ: ಯಲ್ಲಾಲಿಂಗ ಕಾಲೋನಿ ನೌಬಾದ ಬೀದರ ರವರು ಬಾಡಿಗೆ ಮನೆಯ ಮುಂದೆ ನಿಲ್ಲಿಸಿದ ತಮ್ಮ ಹೊಂಡಾ ಶೈನ ಮೋಟಾರ್ ಸೈಕಲ ನಂ. TS-26/C-8132, Chassis No. ME4JC652KKG025547, Engine No. JC65EG0204305, Color: Black ಹಾಗೂ ಅ.ಕಿ 35,000/- ರೂ. ನೇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 106/2021, ಕಲಂ. 392 ಐಪಿಸಿ :-

ದಿನಾಂಕ 22-08-2021 ರಂದು 0600 ಗಂಟೆಗೆ ಫಿರ್ಯಾದಿ ಸರಸ್ವತಿ ಗಂಡ ಸೂರ್ಯಕಾಂತ ಮಾನಕಾರೆ ವಯ: 47 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸರಸ್ವತಿ ಸೂರ್ಯ ನಿಲಯ ಶಿವನಗರ ಕಾಲೋನಿ ಐಬಿ ಹಿಂದುಗಡೆ ಔರಾದ(ಬಿ) ರವರು ತಮ್ಮ ಮನೆಂiÀÄ ಮುಂದೆ ಕಸಗೂಡಿಸುತ್ತಿರುವಾಗ ಐಬಿ ರಿಂಗ ರೋಡ ಕಡೆಯಿಂದ ಮೋಟರ ಸೈಕಲ ಮೇಲೆ ಒಬ್ಬ ಅಪರಿಚಿತ ವ್ಯಕ್ತಿ ಬಂದು ಫಿರ್ಯಾದಿಯವರ ಕೊರಳಿನಲ್ಲಿನ ಬಂಗಾರದ 84 ಗುಂಡುಗಳು ಮತ್ತು 3 ಮಾಸಿ ಬಂಗಾರದ ಮಾಂಗಲ್ಯ ಅಂದಾಜು 1 ತೊಲೆ ಬಂಗಾರ ಅ.ಕಿ 31,000/- ರೂಪಾಯಿ ನೇದನ್ನು ದೋಚಿಕೊಂಡು ಮೋಟರ ಸೈಕಲ ಮೇಲೆ ಪರಾರಿಯಾಗುವಾಗ ಚಿರಾಡಿ ಅವನಿಗೆ ಬೆನ್ನು ಹತ್ತಿದಾಗ ಅವನು ಅಲ್ಲಿಂದ ಮೋಟರ ಸೈಕಲ ಮೇಲೆ ಫರಾರಿಯಾಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 93/2021, ಕಲಂ. 3 & 7 ಇ.ಸಿ ಕಾಯ್ದೆ :-

ದಿನಾಂಕ 22-08-2021 ರಂದು ಫಿರ್ಯಾದಿ ರಾಜೇಂದ್ರಕುಮಾರ ಆಹಾರ ನಿರೀಕ್ಷಕರು ತಹಶೀಲ ಕಛೇರಿ ಬಸವಕಲ್ಯಾಣ ರವರಿಗೆ ಪಿ.ಎಸ್.ಐ (ಕಾ.ಸೂ) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರು ಕರೆ ಮೂಲಕ ಹುಮನಾಬಾದ ಕಡೆಯಿಂದ ಸರಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಆಗುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಕುರಿತು ಒಂದು ಲಾರಿಯಲ್ಲಿ ತುಂಬಿಕೊಂಡು ಬರುತ್ತಿದ್ದಾರೆಂದು ಮಾಹಿತಿ ನೀಡಿ ಕೂಡಲೇ ಹಳ್ಳಿ ಶಿವಾರದಲ್ಲಿ ರಾ.ಹೆ ಬದಿಯಲ್ಲಿರುವ ಜೈ ಭವಾನಿ ಧಾಬಾ ಹತ್ತಿರ ಬರುವಂತೆ ತಿಳಿಸಿದಾಗ ಫಿರ್ಯಾದಿಯು ಸ್ಥಳಕ್ಕೆ ಹೋಗಿದ್ದು ನಂತರ ಲಾರಿ ಸಂ. ಜಿ.ಜೆ-36/ಟಿ-7666 ನೇದು ಬಂದಾಗ ಸಂಶಯದ ಮೇರೆಗೆ ಅದನ್ನು ತಡೆದು ಅದರ ಚಾಲಕನಾದ ಗಲಾ ತಂದೆ ಕಾನಾಭಾಯಿ ಘೇಲಿಯಾ ವಯ: 27 ವರ್ಷ, ಜಾತಿ: ರಬ್ಬಾರಿ, ಸಾ: ರಿನಾವಡ್ಡಾ, ತಾ: ಜಿ: ಪೋರಬಂದರ ಮತ್ತು ಲಾರಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ವಿರಾ ತಂದೆ ಕಾನಾಭಾಯಿ ಘೇಲಿಯಾ ವಯ: 25 ವರ್ಷ, ಜಾತಿ: ರಬ್ಬಾರಿ, ಸಾ: ರಿನಾವಡ್ಡಾ, ತಾ: ಜಿ: ಪೋರಬಂದರ ರವರಿಗೆ ವಶಕ್ಕೆ ಪಡೆದುಕೊಂಡು ಲಾರಿ ಪರಿಶೀಲಿಸಿ ನೋಡಲು ಬೀಳಿ ಬಣ್ಣದ ಪ್ಲಾಸ್ಟೀಕ ಚೀಲಗಳಲ್ಲಿ 50 ಕೆ.ಜಿ ವುಳ್ಳ 450 ಅಕ್ಕಿ ಚೀಲ ಇದ್ದು ಒಟ್ಟು 225 ಕ್ವೀಂಟಲ ಅಕ್ಕಿ ಇದ್ದು, ಸದರಿ ಅಕ್ಕಿಯನ್ನು ಪರಿಶೀಲಿಸಿ ನೋಡಲು ಸದರಿ ಅಕ್ಕಿ ಸರಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಆಗುವ ಅಕ್ಕಿ ಇರುವದು ಮೇಲ್ನೋಟಕ್ಕೆ ಕಂಡು ಬಂದಿರುವದರಿಂದ ಸದರಿ ಲಾರಿ ಚಾಲಕರು ಈ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಕುರಿತು ಸಾಗಿಸುತ್ತಿದ್ದು ಈ ಅಕ್ಕಿಯ ಅ.ಕಿ 6,75,000 ರೂ. ಮತ್ತು ಲಾರಿಯ ಅ.ಕಿ 12 ಲಕ್ಷ ರೂ. ಹೀಗೆ ಎಲ್ಲಾ ಸೇರಿ ಅಂದಾಜು 18,75,000 ರೂ.ದಷ್ಟು ಇದ್ದು, ಇ ಬಗ್ಗೆ ಪಂಚರ ಸಮಕ್ಷಮ ಸದರಿ ಲಾರಿ ಹಾಗೂ ಅಕ್ಕಿಯನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.