ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಕಲ್ಲಪ್ಪಾ ತಂದೆ ವೀರಪಾಕ್ಷಪ್ಪಾ ಹೆಗ್ಗಣೆ ಸಾ|| ಶಿವಾಜಿ ನಗರ ಗುಲಬರ್ಗಾ ರವರು ನಮ್ಮ ದಾಲ್ ಮಿಲ್ ಕಪನೂರ 2ನೇ ಹಂತದ ಇಂಡಸ್ಟ್ರೀಯಲ್ ಏರಿಯದಲ್ಲಿ ಹೊಸದಾಗಿ ನಿರ್ಮಿಸಿ ದಾಲ ಮಿಲದ ಒಳಗೆ ಯಂತ್ರೊಪಕರಣ ಮತ್ತು ಕೇಬಲ್ ವೈರಗಳು ಜೋಡಸಿ ದಿನಾಂಕ 11/06/2011 ರಂದು ನಮ್ಮ ಮುನೀಮ ರಾತ್ರಿ 8 ಗಂಟೆಯವರಗೆ ಇದ್ದು ಕೀಲಿ ಹಾಕಿಕೊಂಡು ದಿನಾಂಕ 12/06/2011 ರ ಬೆಳಗಿನ ಜಾವ ದಾಲ ಮಿಲಗಿಗೆ ಬಂದು ಚಾವಿ ತೆಗೆದು ನೋಡಲಾಗಿ ಮಿಲಿಗೆ ಜೋಡಿಸಿದ ಹೊಸ ಕೇಬಲ ವೈರಗಳು ಇರಲಿಲ್ಲ ಯಂತ್ರೊಪಕರಣಕ್ಕೆ ಜೊಡನೆ ಮಾಡಿರು ಕೇಬಲ ವೈರ ಅಂದಾಜು 1 ಲಕ್ಷ ರೂ. ಬೇಲೆ ಬಾಳುವದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
ಕೊಲೆ ಪ್ರಕರಣ :
ದೇವಲ ಗಾಣಗಾಪೂರ ಠಾಣೆ : ಶ್ರೀ ತುಕರಾಮ ತಂದೆ ಹಿರೆಗಪ್ಪ ಹಿರೆಕುರ ಸಾ|| ಕೆರಕನಳ್ಳಿ ತಾ|| ಅಫಜಲಪುರ ರವರು ನಾನು ಮತ್ತು ಕೊಲೆಯಾದ ಮಾಹಾಂತಪ್ಪ ತಂದೆ ಶಿವಲಿಂಗಪ್ಪ ಜಮಾದಾರ ಸಾ: ಕೆರಕನಳ್ಳಿ ಜೊತೆಗೆ ಹೀರೊಹುಂಡಾ ಸ್ಪೆಲೆಂಡರ್ ಮೋಟಾರ ಸೈಕಲ್ ನಂ.ಕೆ.ಎ.32. ಟಿ.ಆರ್. ನಂ.8878 ನೇದ್ದರ ಮೇಲೆ ದೇಸಾಯಿಕಲ್ಲೂರಿನಿಂದ ಕೆರಕನಳ್ಳಿಗೆ ದಿನಾಂಕ:15-06-2011 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಬರುತ್ತಿರುವಾಗ ಘೋಳನೂರ ಗ್ರಾಮ ದಾಟಿದ ನಂತರ ಅಮೋಗಿ ಜಮಾದಾರ ರವರ ಹೊಲದ ಹತ್ತಿರ ರೋಡಿನ ಮೇಲೆ ಭೀಮರಾಯ ಅಗಸಿ ಇತರೆ ಆರು ಜನರು ಜೀಪಿನಲ್ಲಿ ಬಂದು ತಮ್ಮ ಜೀಪನ್ನು ಅತೀವೇಗದಿಂದ ನಡೆಸಿಕೊಂಡು ಬಂದು ನಾವು ಕುಳಿತುಕೊಂಡು ಹೊರಟ್ಟಿದ್ದ ಮೋಟಾರ ಸೈಕಲ್‌ಗೆ ಹಾಯಿಸಿದ್ದು ನಾವಿಬ್ಬರೂ ಕೆಳಗೆ ಬಿದ್ದಿದ್ದು ಮಾಹಾಂತಪ್ಪನನ್ನು ಭೀಮರಾಯ, ಪರಸಪ್ಪಾ, ಮತ್ತು ರಮೇಶ ಅಗಸಿ ಹಾಘು ಲಕ್ಷ್ಮಣ, ಮುದ್ದಪ್ಪಾ ಮಹಾಂತಪ್ಪಾ ಕಲ್ಲಪ್ಪಾ ಸಾ|| ದೇಸಾಯಿ ಕಲ್ಲೂರ ರವರೆಲ್ಲರೂ ಸುತ್ತು ವರೆದು ಮಾರಕಾಸ್ತ್ರಗಳಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿ ಪಿಸ್ತೂಲಿನಿಂದ ತೆಲೆಗೆ ಗುಂಡು ಹಾರಿಸಿ ಕೊಲೆ ಮಾಡಿರುತ್ತಾರೆ, ಕೊಲೆಯಾದ ಮಹಾಂತಪ್ಪಾ ಇತನು ಒಂದುವರೆ ವರ್ಷದ ಹಿಂದೆ ಹೆಂಡತಿಯಾದ ರೇಣುಕಾ ಇವಳನ್ನು ಮೈಗೆ ಊರಿ ಹಚ್ಚಿ ಕೊಲೆ ಮಾಡಿರುತ್ತಾನೆ ಹಳೆ ದ್ವೇಷದ ಸಂಬಂಧ ಮಹಾಂತಪ್ಪಾ ಇತನನ್ನು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment