ಕಾಣೆಯಾದ ಪ್ರಕರಣ :
ಅಶೋಕ ನಗರ ಪೊಲೀಸ್ ಠಾಣೆ : ಶ್ರೀ ಮಲ್ಲೇಶ ತಂದೆ ಹಣಮಂತ ವಡ್ಡನಡಗಿ ಸಾ: ಬಸವ ನಗರ ಗುಲಬರ್ಗಾ ರವರು ನನ್ನ ಮಗಳು ರೇಣುಕಾ ಮತ್ತು ಅಳಿಯ ಕೃಷ್ಣಾ ರವರು ದಿನಾಂಕ 09/06/2011 ರಂದು ಪೋನಾದಿಂದ ನಮಗೆ ಮಾತನಾಡುವ ಕುರಿತು ಗುಲಬರ್ಗಾಕ್ಕೆ ಬಂದ್ದಿದ್ದು, ದಿನಾಂಕ 12/06/2011 ರಂದು ಬೆಳಿಗ್ಗೆ ಅಳಿಯ ಕೃಷ್ಣಾ ತಂದೆ ಶರಣಪ್ಪ ಬೆಂಡೆ ವಯ: 35 ಸಾ: ಗೋಕಲೇ ನಗರ ಪೋನಾ ಇತನು ನಮಗೆ ಯಾವುದೇ ರೀತಿಯ ಮಾಹಿತಿ ತಿಳಿಸದೇ ಎಲ್ಲೋ ಹೋಗಿದ್ದು ಇರುತ್ತದೆ. ನಾವು ಎಲ್ಲಾ ಕಡೆ ಹುಡಕಾಡಿದರು ಸಿಕ್ಕಿರುವದಿಲ್ಲ ಕೃಷ್ಣಾ ಇತನು ಕಳೆದ 5-6 ವರ್ಷದಿಂದ ಟಿ.ಬಿ ಕಾಯಿಲೆಯಿಂದ ಬಳಲುತ್ತಿದ್ದು ಅಲ್ಲದೆ ಈಗ 4-5 ತಿಂಗಳಿಂದ ಮಾನಸಿಕ ಅಸ್ವಸ್ಥನಾಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಮಹಮದ ಶಪೀ ತಂದೆ ಅಬ್ದುಲ್ ವಾಹೀದ ಮೀಯಾ ಸಾ|| ಹಳ್ಳೀಖೇಢ ತಾ|| ಹುಮನಬಾದ ಬೀದರ ರವರು ನನ್ನ ತಮ್ಮನಾದ ಮಹಮದ ಮೋಸಿನ್ ಮತ್ತು ಕ್ಲೀನರನಾದ ಮಹ್ಮದ ಮೈಬೂಬ ಇಬ್ಬರೂ ಕೂಡಿಕೊಂಡು ಲಾರಿ ನಂ. ಕೆ.ಎ 39, 5889 ನೇದ್ದನ್ನು ಚಲಾಯಿಸಿಕೊಂಡು ತಾಂಡೂರಿಗೆ ಬರುವಾಗ ಮಾರ್ಗ ಮಧ್ಯದಲ್ಲಿ ತುಮಕುಂಟಾ ಘಾಟದಲ್ಲಿ ನನ್ನ ತಮ್ಮನಾದ ಮಹ್ಮದ ಮೋಸೀನ್ ಇತನು ಲಾರಿಯನ್ನು ಅತೀವೇಗವಾಗಿ ಹಾಗೂ ನಿಸ್ಕಾಳಜೀತನದಿಂದ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಲಾರಿಯು ಪಲ್ಟಿಯಾಗಿ ಬಿದ್ದಿದ್ದು. ತಮ್ಮ ಮೋಸೀನ್ ಇತನು ಲಾರಿಯ ಕೇಳಗೆ ಸಿಕ್ಕಿಬಿದ್ದು ಭಾರಿ ರಕ್ತ ಹಾಗೂ ಗುಪ್ತ ಗಾಯ ಆಗಿದ್ದರಿಂದ ಸ್ಥಳದಲ್ಲಿಯೇ ಸತ್ತಿದ್ದು ಕ್ಲೀನರ ಮಹ್ಮದ ಮೈಬೂಬ ಇತನಿಗೆ ಕೈಯಿಗೆ ಪೆಟ್ಟಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment