Police Bhavan Kalaburagi

Police Bhavan Kalaburagi

Tuesday, June 28, 2011

GULBARGA DISTIRICT REPORTED CRIMES

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಮೊಹ್ಮದ ಖಾಜಾ ಮೈನೋದ್ದಿನ ತಂದೆ ಮಹ್ಮದ ಸಲಿಂ ಸಾಃ ಬಗದಾದ ಕಾಲನಿ ಶಾಹಬಾಜ ಸ್ಕೂಲ್ ಹತ್ತಿರ ಗುಲಬರ್ಗಾ. ನಾನು ಮತ್ತು ಶಾಬೋದ್ದೀನ ಇಬ್ಬರು ನಮ್ಮ ಮೋಟಾರ ಸೈಕಲದ ಮೇಲೆ ಘೋಡವಾಡಿ ದೇವರಿಗೆ ಹೋಗಿ ದರ್ಶನ ಮಾಡಿಕೊಂಡು ರಾತ್ರಿ ಗುಲಬರ್ಗಾಕ್ಕೆ ಬರುವಾಗ ಸ್ವಾಮಿ ಸಮರ್ಥ ರೊಡಿನಲ್ಲಿ ಎದುರುಗಡೆ ಯಿಂದ TATA MAGIC TEMPO No KA-32-B-1055 ಚಾಲಕನ ಅತೀವೇಗದಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ ಡಿಕ್ಕಿ ಪಡಿಸಿದ ಪರಿಣಾಮ ನಮಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಆಳಂದ ಠಾಣೆ :
ಶ್ರೀಶೈಲ್ ತಂದೆ ವಿಠಲ್ ನಡಗೇರಿ ಸಾ|| ಹಳ್ಳಿಸಲಗರ ರವರು ನಮ್ಮ ಅಣ್ಣನಾದ ಮಲ್ಲಿಕಾರ್ಜುನನು ಇತನು ಆಳಂದ ಕ್ಕೆ ಜೀಪಿನಲ್ಲಿ ಬಂದಿದ್ದು ರೇವಣಪ್ಪನಿಗೆ 100 ರೂಪಾಯಿ ಚಿಲ್ಲರೆ ಕೊಡುವ ವಿಷಯದಲ್ಲಿ ಜಗಳ ಆಗಿತ್ತು, ರೇವಣಪ್ಪಾ ಇತನು ನೀನು ಊರಿಗೆ ಬಂದಾಗ ನೋಡಿಕೊಳ್ಳತ್ತಿನಿ ಅಂತಾ ಬೇದರಿಕೆ ಹಾಕಿದ್ದು , ಇಂದು ದಿನಾಂಕ 27-06-2011 ರಂದು ಸಾಯಂಕಾಲ ಆನಂದರಾಯಗೌಡನ ಸಂಗಡ ಇನ್ನೂ 6 ಜನರು ಬಂದು ನಮ್ಮ ತಂದೆಯವರೊಂದಿಗೆ ಜಗಳ ತೆಗೆದು ನಮ್ಮಲ್ಲರಿಗು ಹೊಡೆ ಬಡೆ ಮಾಡಿ ಜಾತಿ ನಿಂದೆನೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: