ಜಾನುವಾರು ಕಳವು ಪ್ರರಕಣ :
ಚಿಂಚೋಳಿ ಠಾಣೆ :
ಶ್ರೀ ಮಲ್ಲಿಕಾರ್ಜುನ ತಂದೆ ಬಸವಂತರಾಯ ರಾಜಾಪುರ ಸಾ|| ಧನಗರಗಲ್ಲಿ ಚಿಂಚೋಳಿ ರವರು ನಾನು ನನ್ನ ಹೋಲ ಸರ್ವೇ ನಂ 48 ಇದ್ದು , ಹೊಲದಲ್ಲಿ ನನ್ನ ಎರಡು ಎತ್ತುಗಳು ಎರಡು ಹೋರಿಗಳು ಒಂದು ಆಕಳು ಕಟ್ಟುತ್ತಿದ್ದು ಎಂದಿನಂತೆ ದಿನಾಂಕ 24.06.2011 ರಂದು ರಾತ್ರಿ ಆಳು ಮಗನಾದ ನಾಗಪ್ಪಾ ಇತನು ಸಹ ಅಲ್ಲಿಯೇ ಮಲಗಿದ್ದು, ರಾತ್ರಿ ಸಮಯದಲ್ಲಿ ನಾಗಪ್ಪನಿಗೆ ನಿದ್ದೆ ಹತ್ತಿರುವಾಗ ಎರಡು ಎತ್ತುಗಳು ಎರಡು ಹೋರಿಗಳು ಒಂದು ಆಕಳನ್ನು ( ಅ|ಕಿ|| 1,35,000-00 ಕಿಮ್ಮತ್ತಿನ ಜಾನುವಾರಗಳನ್ನು) ವಾಹನ ತಂದು ತುಂಬಿಕೊಂಡು ಹೋಗಿದ್ದಾರೆ ಅಂತಾ ನಾಗಪ್ಪಾ ಇತನು ತಿಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment