ಹಲ್ಲೆ ಪ್ರಕರಣ:
ಬ್ರಹ್ಮಪೂರ ಠಾಣೆ :ಶ್ರೀ ಸಂದೀಪ ತಂದೆ ಅಪ್ಪಾರಾವ ಕಾಂಬಳೆ ಸಾ|| ಸುಂದರ ನಗರ ಗುಲಬರ್ಗಾ ರವರು ಹಲ್ಲೆಗೊಳಗಾದ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದು, ಸಂದೀಪ ಇತನು ಬೇಹುಷ ಸ್ಥಿತಿಯಲ್ಲಿ ಇರುವದರಿಂದ ಆತನ ತಾಯಿಯಾದ ಮಂಗಲಾಬಾಯಿ ಕಾಂಬಳೆ ರವರು ನಾನು ಹಾಗು ನನ್ನ ಮಗನಾದ ಸಂದೀಪ್ ಇತನು ಮನೆಯ ಮುಂದೆ ಕುಳಿತಿರುವಾಗ ಹೊರಗಡೆ ಹೊಗಿದ್ದ ನನ್ನ ಗಂಡ ಅಪ್ಪಾರಾವ ಇವರು ಬಂದವರೆ ನನ್ನ ಮಗ ಸಂದೀಪನೊಂದಿಗೆ ಜಗಳಕ್ಕೆ ಬಿದ್ದು ಇಲ್ಲೆಕೆ ಕುಳಿತಿರುವಿ ಯಾವುದಾದರೊಂದು ಕೆಲಸ ಮಾಡುವಂತೆ ನಿನಗೆ ಎಷ್ಟು ಸಾರಿ ಹೇಳಿದರು ಸಹ ನೀನು ಕೆಲಸ ಮಾಡುತ್ತಿಲ್ಲಾ ಅಂತಾ ಅಲ್ಲೆ ಬಿದ್ದ ಕಲ್ಲಿನಿಂದ ಸಂದೀಪನ ತೆಲೆಗೆ ಹೊಡೆದಿದ್ದು ಇದರಿಂದ ಸಂದೀಪನು ಬೆಹುಷ ಆಗಿ ನೇಲದ ಮೇಲೆ ಬಿದ್ದಾಗ ಅವನಿಗೆಕೆ ಹೊಡೆಯುತ್ತಿರುವಿರಿ ಅಂತಾ ನಾನು ಕೇಳಿದಕ್ಕೆ ನನಗೂ ಕೂಡಾ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ ಇಷ್ಟಕ್ಕೆಲ್ಲಾ ನೀನೆ ಕಾರಣ ನಾಳೆಯಿಂದ ಅವನು ಕೆಲಸಕ್ಕೆ ಹೊಗದಿದ್ದರೆ ನಿಮ್ಮಿಬ್ಬರಿಗೆ ಹೊಡೆಯುತ್ತೆನೆ ಅಂತಾ ಬೇದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment