ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಅಪ್ಪರಾವ ತಂದೆ ಮಾಣಿಕರಾವ ಕಾಂಬಳೆ ಸಾ: ಸುಂದರ ನಗರ ಗುಲಬರ್ಗಾ ರವರು ನಾನು ಹಾಗು ನನ್ನ ಮೊದಲನೇಯ ಹೆಂಡತಿಯಾದ ಚಂದ್ರಭಾಗಾ ಇಬ್ಬರು ಮನೆಯ ಮುಂದೆ ಮಾತಾಡುತ್ತಾ ಕುಳಿತಿರುವಾಗ ನನ್ನ ಮಗ ಸಂದೀಪ ಇತನು ಮನೆಯ ಒಳಗಿನಿಂದ ಹೊರಗೆ ಬಂದು ನನಗೆ ಖರ್ಚಿಗೆ ಹಣ ಕೊಡು ಅಂತಾ ಕೇಳಿದನು ಅದಕ್ಕೆ ನಾನು ನನ್ನ ಹತ್ತಿರ ಹಣ ಇಲ್ಲಾ ನಿನ್ನ ಖರ್ಚಿಗಾಗಿ ಯಾವುದಾದರೊಂದು ಕೆಲಸ ಮಾಡಿಕೊ ಅಂತಾ ಅಂದಿದಕ್ಕೆ ನನ್ನ ಮಗನು ನನ್ನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಮುಖದ ಮೇಲೆ ಹೊಡೆದಿದ್ದಲ್ಲದೆ ತನ್ನ ಕಿಶೆಯಲ್ಲಿದ್ದ ಬ್ಲೇಡನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
No comments:
Post a Comment