Police Bhavan Kalaburagi

Police Bhavan Kalaburagi

Tuesday, July 26, 2011

GULBARGA DISTRICT REPORTED CRIMES

ಗೃಹಿಣಿಗೆ ಕಿರುಕುಳ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀಮತಿ ನಸೀಮಾ ಬಾನು ಗಂಡ ಮಹ್ಮ,ದ ಮುಸ್ತಾಕ ಪಟೇಲ ಉ|| ಉಪನ್ಯಾಸಕಿ ಸಾ: ಜುಬೇರಾ ಕಾಲನಿ ಹಾಗರಗಾ ಕ್ರಾಸ ಗುಲಬರ್ಗಾ ರವರು ನನಗೆ ಮೂರುವರೆ ವರ್ಷದ ಹಿಂದೆ ಚಿಕ್ಕಪ್ಪ ಮತ್ತು ಅಣ್ಣಂದಿರು ಕೂಡಿ ಜುಬೇರಾ ಕಾಲನಿ ಮಹ್ಮದ ಮುಸ್ತಾಕ ಪಟೇಲ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಗಂಡ ಹಾಗೂ ಅತ್ತೆ ಮಾವ ಮೈದುನರು ನನಗೆ ಅಡಿಗೆ ಮಾಡಲು ಬರುವುದಿಲ್ಲ ಮನೆಯ ಕೆಲಸ ಬರುವುದಿಲ್ಲ ಅಂತಾ ಸಣ್ಣ ಪುಟ್ಟ ವಿಷಯಗಳಿಗೆ ಮಾನಸಿಕ ತೊಂದರೆ ಕೊಡುವದು ಹಾಗೂ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸುವದು ಹಾಗೂ ತವರು ಮನೆಯಿಂದ ಹಣವನ್ನು ತರುವಂತೆ ಹಿಂಸೆಯನ್ನು ಕೊಡುತ್ತಾ ಬಂದಿರುತ್ತಾರೆ ಅವರುಗಳ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ
:
ಶ್ರೀ ಶರಣಬಸಪ್ಪ ತಂದೆ ಪರಮೇಶ್ವರ ಕಣ್ಣಿ ಸಾ|| ಶರಣಸಿರಸಗಿ ತಾಂಡಾ ರವರು ನಾನು ನಮ್ಮ ದೊಡ್ಡಪ್ಪ ಶಿವಶರಣಪ್ಪ ಕಣ್ಣಿ ಇವರು ಈಚಲ ಕರಂಜಿ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಇವರ ಮೃತ ದೇಹ ಬರುವಿಕೆಗಾಗಿ ಕಾಯುತ್ತಾ ನಿಂತಿದ್ದೇವು. ನಮ್ಮ ಅಳಿಯ ಜಟ್ಟೆಪ್ಪ ತಂದೆ ಸಿದ್ಧಪ್ಪ ಮಲ್ಲಾಬಾದಿ ಈತನು ಗುಲಬರ್ಗಾಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನನ್ನ ಹಿರೋ ಹೊಂಡಾ ಸೂಪರ ಸ್ಪೆಂಡರ ಕೆಎ 32 ವಿ 2436 ತೆಗೆದುಕೊಂಡು ಹೋಗಿ ಶರಣ ಶಿರಸಗಿ ತಾಂಡಾದ ಪೂಲಿನ ಹತ್ತಿರ ಅತೀವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಹೋಗಿ ವೇಗದ ಆಯ ತಪ್ಪಿ ಪೂಲಿನ ಹತ್ತಿರ ಬಿದ್ದಿದ್ದು, ಅವನ ತಲೆಗೆ ಮತ್ತು ಕೈಗಳಿಗೆ ರಕ್ತಗಾಯಗಳಾಗಿದ್ದು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ದೇವಲ ಗಾಣಗಾಪೂರ ಠಾಣೆ : ಶ್ರೀ ತಾರಾಬಾಯಿ ಗಂಡ ರಾಮಚಂದ್ರ ಹಯ್ಯಾಳಕರ ಸಾ|| ಟಾಕಳಿ ರವರು ನನ್ನ ಮೊಮ್ಮಗ ಹಾಗು ಗೀತಾಬಾಯಿ ಮಗ ಇಬ್ಬರೂ ಕೂಡಿಕೊಂಡು ಮೈಮೇಲೆ ನೀರು ಎರಚುಕೊಳ್ಲುತ್ತಿರುವಾಗ ಗೀತಾಬಾಯಿ ಇವಳು ಬೈಯುತ್ತಿದ್ದು, ನಾನು ಯಾಕೆ ಬೈಯುತ್ತಿ ಅಂದಿದ್ದಕ್ಕೆ ಗೀತಾಬಾಯಿ ಮತ್ತು ಸಂಗಡ ಇಬ್ಬರೂ ಕೂಡಿಕೊಂಡು ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಯಡ್ರಾಮಿ ಠಾಣೆ : ಶ್ರೀ ಶರಣಗೌಡ ತಂದೆ ಭೀಮರಾಯಗೌಡ ಒಣಕಿಹಾಳ ಸಾ: ಅಂಬರಖೇಡ ತಾ: ಜೇವರ್ಗಿ ರವರು ನಾನು ಹಾಗು ಶರಣಗೌಡ ಅಸ್ಕಿ ನಾಗಮ್ಮ , ಹೊನ್ನವ್ವ ಮತ್ತು ಪ್ರಶಾಂತ ಸಾ|| ಎಲ್ಲರೂ ಅಂಬರಖೇಡ ಕೂಡಿಕೊಂಡು ಟಂ-ಟಂ ನಂ ಕೆ-ಎ 33-6201 ನೇದ್ದರಲ್ಲಿ ಕುಳಿತುಕೊಂಡು ಹೊಗುವಾಗ ಟಂ-ಟಂ ಚಾಲಕನಾದ ನಾಗಪ್ಪ ಇತನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಅಯ್ಯಣ್ಣ ಹೊಸಮನಿ ಇವರ ಹೋಲದ ಹತ್ತಿರ ಬರುತ್ತಿದ್ದಂತೆ ಒಮ್ಮೆಲೆ ಬ್ರೆಕ್ ಹೊಡೆದು ಟಂ-ಟಂ ಪಲ್ಟಿ ಮಾಡಿದ್ದು ಅದರಲ್ಲಿಯ ಪ್ರಶಾಂತ ಎಂಬುವನಿಗೆ ತಲೆಯ ಹಿಂಬಾಗದಲ್ಲಿ ಬಲ ಕಪಾಳಕ್ಕೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇನ್ನುಳಿದವರಿಗೆ ಭಾರಿ ಗಾಯ ಮತ್ತು ಗುಪ್ತ ಗಾಯವಾಗಿದ್ದು, ಟಂ-ಟಂ ಚಾಲಕನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: