ಹಲ್ಲೆ, ಕೊಲೆ ಪ್ರಯತ್ನ :
ಜೇವರ್ಗಿ ಠಾಣೆ: ಶ್ರೀ ಲಾಲಸಾಬ ತಂದೆ ಮೈಬೂಬ ಸಾಬ ಗಬಸಾವಲಗಿ ರವರು ನಾನು ಮತ್ತು ನನ್ನ ಅಣ್ಣ ಪೈಗಂಬರ ಇಬ್ಬರು ಕೂಡಿ ಗ್ರಾಮದ ಹೋಟೆಲದಲ್ಲಿದ್ದಾಗ ಗುಡು ಪಟೇಲ ಮತ್ತು ಅಮೀನ ಪಟೇಲ ಇವರು ಟಾಟಾ ಸೂಮೊದಲ್ಲಿ ಸಂಗಡ 10-12 ಜನರಿಗೆ ಕರೆದು ಕೊಂಡು ಬಂದು ಕೊಲೆ ಮಾಡುವ ಉದೇಶದಿಂದ ತಿಂಡಿ ತಿಂದ ಹಣ ಕೇಳತ್ತಿ ಅಂತ ಕೈಯಲ್ಲಿ ರಾಡು ಚಾಕು ಬಡಿಗೆ ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಪೈಗಂಬರನಿಗೆ ಗುಡು ಪಟೇಲ ಇತ್ತನು ರಾಡಿನಿಂದ ಹಣೆಯ ಹುಬ್ಬಿನ ಮೇಲೆ ಹೋಡೆದು ಮತ್ತು ಇಮಾಮಬಿ ಬಾಬಾಬಿ ಇವರಿಗೆ ಇನ್ನಿತರರೂ ಬಡಿಗೆಯಿಂದ ಹೊಡೆದು ಗುಪ್ತಗಾಯಗೊಳಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ:
ಸ್ಟೇಶನ ಬಜಾರ ಠಾಣೆ: ಶ್ರೀ ಸಿದ್ದಣ್ಣ ತಂದೆ ಸಂಗನ ಬಸಪ್ಪ ಸಾ|| ಕರುಣೇಶ್ವರ ನಗರ ಮಾನಕರ್ ಲೇಔಟ್ ಗುಲಬರ್ಗಾ ರವರು ನಾನು ಜೇವರ್ಗಿ ರಸ್ತೆಗೆ ಹೊಂದಿಕೊಂಡಿರುವ ಕೃಷ್ಣಾ ಬ್ಯಾಂಕಿನ ಪಕ್ಕದಲ್ಲಿರುವ ಮೊದಿ ಟ್ರೆಡರ್ಸ ಎಂಬ ಹಾರ್ಡವೇರ್ಸ ಮಳಿಗೆ ಇಟ್ಟಿಕೊಂಡು ವ್ಯಾಪರ ಮಾಡುತ್ತೆನೆ. ಮಳಿಗೆಯಲ್ಲಿ ಹಾರ್ಡವೇರ್ ಸಾಮಾನುಗಳು, ಇರುತ್ತವೆ ದಿನಾಂಕ: 25.07.11 ರಂದು ಪ್ರತಿ ದಿವಸದಂತೆ ರಾತ್ರಿ ಅಂಗಡಿಯನ್ನು ಮುಚ್ಚಿಕೊಂಡು ಕಿಲಿ ಹಾಕಿಕೊಂಡು ಮನೆಗೆ ಹೋಗಿರುತ್ತೆನೆ. ಬೆಳಗ್ಗೆ ಬಂದು ನೋಡಲಾಗಿ ಅಂಗಡಿಯ ಕಬ್ಬಿಣದ ಶೇಟರ್ ಬಲಗಡೆಯ ಭಾಗವನ್ನು ಯಾರೋ ಕಳ್ಳರೂ ಮುರಿದು ಅಂಗಡಿಯಲ್ಲಿದ್ದ ಹಾರ್ಡವೇರ ಸಾಮಾನುಗಳು ಅಕಿ 34,750/- ರೂ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಅಣವೀರಯ್ಯ ತಂದೆ ಶಿವಶರಣಯ್ಯ ಬಿದಿಮನಿ ಸಾ: ಬಿದ್ದಾಪೂರ ಕಾಲನಿ ರವರು ನಾನು ದಿನಾಂಕ 7-06-2011 ರಂದು ಹಿರೊ ಹೊಂಡಾ ಸಿಡಿ-100 ನಂ ಕೆಎ 32 ಜೆ 1399 ಮೊಟಾರ ಸೈಕಲ ಪದವಿ ಕಾಲೇಜ ಆವರಣದಲ್ಲಿ ನಿಲ್ಲಿಸಿ ಪ್ರಯೋಗ ಕಛೇರಿಗೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
No comments:
Post a Comment