Police Bhavan Kalaburagi

Police Bhavan Kalaburagi

Wednesday, August 3, 2011

GULBARGA DIST REPORTED CRIMES

ದರೋಡೆ ಪ್ರಕರಣ :

ಎಂ.ಬಿ.ನಗರ ಠಾಣೆ : ಶ್ರೀ ಮೃತುಂಜಯ ತಂದೆ ಗುರುಸ್ವಾಮಿ ಶಾಸ್ತ್ರೀ ಸಾ|| ಜಯನಗರ ಗುಲಬರ್ಗಾ ರವರು ನಾನು ನನ್ನ ಸಿಟಿ ಮೋಬೈಲ್ ಅಂಗಡಿಯಲ್ಲಿದ್ದಾಗ ಒಬ್ಬ ಯಾರೋ ಅಪರಿಚಿತ ವ್ಯಕ್ತಿ ಅಂಗಡಿಯ ಬಾಗಿಲು ಮುಚ್ಚಿ ನನಗೆ ಚಾಕುವಿನಿಂದ ಮುಂಗೈ ಹತ್ತಿರ ಹೊಡೆದು ರಕ್ತಗಾಯಾ ಪಡಿಸಿ ಜಬರಸ್ತಿಯಿಂದ ಬಂಗಾರದ ಆಭರಣಗಳು ಒಂದು ಮೋಬೈಲ ಹೀಗೆ ಒಟ್ಟು 31,000/- ಬೆಲೆ ಬಾಳುವ ಸಾಮಾನುಗಳು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನಭಂಗ ಪ್ರಯತ್ನ ಪ್ರಕರಣ:

ಶಹಾಬಾದ ನಗರ ಠಾಣೆ: ಸುನೀತಾ ಗಂಡ ಶಿವಪುತ್ರ ಪುಜಾರಿ ಸಾ:ಶಾಂತನಗರ ಭಂಕೂರ ರವರು ನನ್ನ ಜೋತೆ ಮಲ್ಲಿಕಾರ್ಜುನ ತಂದೆ ಹಿರೆಗೆಪ್ಪಾ ಇತನು ವಿನಾಕಾರಣ ಜಗಳ ತೆಗೆದು ಅವಾಚ್ಯವಾಗಿ ಬೈದು ನನ್ನನ್ನು ಹಿಡಿದು ಎಳೆದಾಡಿ ಮಾನಭಂಗಕ್ಕೆ ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾತಿ ನಿಂದನೆ ಪ್ರರಕಣ:

ಅಶೋಕ ನಗರ ಠಾಣೆ : ಅರ್ಜಿದಾರ ರಾಜೇಂದ್ರ ತಂದೆ ನಾಯಕ ಗಾಯಕವಾಡ ಸಾ: ಮನೆ ನಂ. 190 ಡಾ: ಜಂಗೆ ಜಗತ ದರ್ಗಾ ರೋಡ ಗುಲಬರ್ಗಾ ರವರು ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನ ಪ್ರತಿಗಳನ್ನು ಕೊರ್ಟ ಸಿಬ್ಬಂದಿ ಹಾಜರ ಪಡಿಸಿದ ಸಾರಾಂಶವೆನೆಂದರೆ ದಿನಾಂಕ 11/11/2010 ರಂದು ರಾಜೇಂದ್ರ ಇತನು ತರಕಾರಿ ಖರಿದಿಸಲು ಕಣ್ಣಿ ಮಾರ್ಕೆಟಿಗೆ ಹೋದಾಗ, ಗೋಪಾಲ ಕುಲಕರ್ಣಿ, ರಾಮಚಂದ್ರರಾವ, ಯಥಿರಾಜಲು, ವರ್ದಾ ನಗರ್ ಸಾ: ಕೆ.ಎಫ್.ಸಿ.ಎಸ್.ಸಿ 1ನೇ ಮಹಡಿ ಕೆ.ಎಚ್.ಬಿ ಪ್ಯಾಜಾ ಕೇಂದ್ರ ಬಸ್ಸ ನಿಲ್ದಾಣದ ಎದುರುಗಡೆ ಗುಲಬರ್ಗಾ ರವರುಗಳು ಅಟೊದಲ್ಲಿ ಬಂದು ಗೊಪಾಲ ಕುಲಕರ್ಣಿ ಇವರು ಕೆ.ಎಫ್.ಸಿ.ಎಸ್.ಸಿ ಯಲ್ಲಿ ನೌಕರಿ ಮೇಲಿಂದ ತೆಗೆದ ಸಂಬಂದ 500/- ರೂ ಕೊಡುವಂತೆ ನನಗೆ ಕೇಳಿ ಜಗಳ ತೆಗೆದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಹೇಳಿಕೊಂಡಿದ್ದರ ಮೇರೆಗೆ ಮಾನ್ಯ 2 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಗುಲಬರ್ಗಾ ರವರ ಆದೇಶದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಮಡು ತನಿಖೆ ಕೈಕೊಳ್ಳಲಾಗಿದೆ.

ದರೋಡೆ ಪ್ರಕರಣ:

ಸ್ಟೇಶನ ಬಜಾರ ಠಾಣೆ : ಶ್ರೀ ರವಿ ತಂದೆ ಮಾಣಿಕರಾವ ಪಾಟೀಲ್ ಉ|| ಇನ್ಸೂರೆನ್ಸ ಕಂಪನಿಯಲ್ಲಿ ಕೆಲಸ ಸಾ|| ಗೋದುತಾಯಿ ಕಾಲೋನಿ ಗುಲಬರ್ಗಾ ರವರು ನಾನು ದಿ: 02.08.11 ರಂದು ಮಧ್ಯಾಹ್ನ ಶರ್ಮಾ ಹೋಟೆಲ್ ದಲ್ಲಿ ನಿಂತಾಗ ಚೋಟ್ಯಾ ಸಾ|| ಪಂಚಶೀಲ್ ನಗರ ಇತನು ತನ್ನ ಕೈಯಲ್ಲಿ ಪಿಸ್ತುಲ ಮತ್ತು ಚಾಕೂ ಹಿಡಿದುಕೊಂಡು ಪಿಸ್ತೂಲ್ ಹೊಟ್ಟೆಗೆ ಹಚ್ಚಿ ಅಂಜಿಸಿ ಚಾಕುವಿನಿಂದ ಎಡ ರಟ್ಟೆಗೆ ಹೊಡೆದು ಕೊರಳಲ್ಲಿಯ ಬಂಗಾರದ ಆಭರಣಗಳು ಹಾಗು ಅಲ್ಲಿಯೇ ಇದ್ದ ನವಿನ ಇತನ ಕೈಯಲ್ಲಿಯ ಬಂಗಾರದ ಉಂಗುರ ಮೂಬೈಲ್ ನಗದು ಹಣ ಕಸಿದುಕೊಂಡು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರರಕಣ:

ಚಿಂಚೋಳಿ ಪೊಲೀಸ ಠಾಣೆ:: ರಾಯಪ್ಪಾ ತಂದೆ ಶಿವರಾಯ ವಾಲೀಕಾರ, ಮಹೇತಾಬ ತಂದೆ ಲಾಲ ಅಹೇಮದ್ದ ಗೌಡಿ ಸಾ: ಇಬ್ಬರು ಚಂದಾಪೂರ ರವರು ದಿನಾಂಕ: 02-08-2011 ರಂದು ಬೆಳಗ್ಗೆ ಚಂದಾಪೂರ ಗ್ರಾಮದ ಗಾಂಧಿ ಚೌಕ ಹತ್ತಿರ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಗೆ ನಿಮಗೆ ಒಂದು ರೂಪಾಯಿಗೆ 80/- ರೂ. ಕೊಡುತ್ತೇವೆ ಮಟಕಾ ನಂಬರ ಬರೆಯಿಸಿ ಅಂತಾ ಸುಳ್ಳು ಹೇಳಿ ಸಾರ್ವಜನಿಕೆ ಮೊಸಮಾಡಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ನಂಬರ ಬರೆದ ಚೀಟಿ ಕೊಟ್ಟು ಸಾರ್ವಜನಿಕರಿಗೆ ಮೊಸ ಮಾಡುತ್ತಿರುವಾಗ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: