ಅಪಘಾತ ಪ್ರಕರಣ:
ಶಹಾಬಾದ ನಗರ ಠಾಣೆ: ಶ್ರೀ ಸೈಯದ ಗೌಸೊದ್ದಿನ್ ತಂದೆ ಸೈಯದ ಖಾಜಾ ಹುಸೈನ ಸಾ|| ಶಾಂತನಗರ ಭಂಕೂರ ಶಹಾಬಾದ ರವರು ನಾನು ದಿನಾಂಕ :03/08/2011 ರಂದು ಬೆಳಿಗ್ಗೆ ಟಂ ಟಂ ನಂ.ಕೆಎ-33, 3310 ನೇದ್ದರಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಭಂಕೂರ ಕ್ರಾಸದಿಂದ ಶಹಾಬಾದ ಕಡೆಗೆ ಬರುತ್ತಿರುವಾಗ ಶಾಂತನಗರ ಮಜೀದ ಹತ್ತಿರ ಎದರುಗಡೆಯಿಂದ ಗೂಡ್ಸ ಟಂ ಟಂ ನಂ.ಕೆಎ-32, 740 ನೇದ್ದರ ಚಾಲಕ ಅಬ್ದುಲ ರಹೆಮಾನ ಇತನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಟಂಟಂದಲ್ಲಿ ಪ್ರಯಾಣೆಸುವರಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment