ನಿಂದನೆ ಪ್ರಕರಣ
ಗ್ರಾಮೀಣ ಠಾಣೆ : ಶ್ರೀ ರಾಮು ತಂದೆ ಹರಿಶ್ಚಂದ್ರ ಚವ್ಹಾಣ ಉ:ಗುತ್ತೇದಾರ ಸಾ: ಉದನೂರ ತಾ:ಜಿ: ಗುಲಬರ್ಗಾ ರವರು ನಾನು ಇಂದು ಮುಂಜಾನೆ ಉದನೂರ ಗ್ರಾಮದಿಂದ ಡಬರಾಬಾದ ಗ್ರಾಮಕ್ಕೆ ನಮ್ಮೂರಿನವರೊಂದಿಗೆ ಆಟೋದಲ್ಲಿ ಹೊರಟಾಗ ಜೈಬೀಮ ತಂದೆ ಶಿವಲಿಂಗಪ್ಪ ಕೊರಳ್ಳಿ ಸಾ|| ಉದನೂರ ದವನು ಕೈಯಲ್ಲಿ ತಲವಾರ ಹಿಡಿದುಕೊಂಡು ಬಂದು ಆಟೋವನ್ನು ನಿಲ್ಲಿಸಿ ಮಗನೇ ರಾಮ್ಯಾ ಕೆಳಗೆ ಇಳಿ ನನಗೆ ಕುಡಿಯಲಿಕ್ಕೆ ಹಣ ಕೊಡು ಅಂತಾ ಕೇಳಿದಾಗ ನಾನು ಏಕೆ ಹಣ ಕೊಡಬೇಕು ಅಂತ ಅಂದಾಗ ಅವನು ಅದಕ್ಕೆ ಹಪ್ತ ಕೋಡಬೇಕು ಅಂತಾ ಅಂದು ಅವ್ಯಾಚ್ಯವಾಗಿ ಬೈದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮತ್ತು ಮಾನಭಂಗ ಪ್ರಕರಣ :
ಗ್ರಾಮೀಣ ಠಾಣೆ: ಶ್ರೀ ಕುಮಾರಿ ಲಕ್ಷ್ಮೀ ತಂದೆ ಶಿವಲಿಂಗಪ್ಪಾ ಕೊರಳ್ಳಿ ಸಾ;ಉದನೂರ ತಾ;ಜಿ;ಗುಲಬರ್ಗಾ
ರವರು ನಾನು ಮತ್ತು ನನ್ನ ಅಣ್ಣ ಜೈಭೀಮ ಕೊರಳ್ಳಿ ಇಬ್ಬರು ಕೂಡಿಕೊಂಡು ಕಮೀಟಿ ಹಾಲ ಹತ್ತಿರ ಹೋಗು ತ್ತಿರುವಾಗ ರಾಮು ತಂದೆ ಹರಿಶ್ಚಂದ್ರ ಚವ್ಹಾಣ, ರಾಮು ತಂದೆ ಹರಿಶ್ಚಂದ್ರ ಚವ್ಹಾಣ , ವಿಠಲ ತಂದೆ ಹರಿಶ್ಚಂದ್ರ ಚವ್ಹಾಣ , ದೇಸು ತಂದೆ ಹರಿಶ್ಚಂದ್ರ ಚವ್ಹಾಣ , ಭೀಮು ಲಕ್ಷ್ಮಣ ಪೂಜಾರಿ ,ಆನಂದ ತಂದೆ ಲಕ್ಷ್ಮಣ ಪೂಜಾರಿ , ವಿಥುನ ತಂದೆ ಮಾಹಾದೇವ ಚವ್ಹಾಣ ಸಾ;ಎಲ್ಲರೂ ಉದನೂರ ದವರು ನಮಗೆ ತಡೆದು ಅವಾಚ್ಯ ಶಬ್ದಗಳಿಂದ ಬೈಯ್ದು , ಕೈಹಿಡಿದು ಎಳೆದುಕೊಂಡು ಸೇವಲಾಲ ಗುಡಿ ಹತ್ತಿರ ಕರೆದುಕೊಂಡು ಹೋಗಿ ಗುಡಿ ಎದುರಿನ ಕಂಬಕ್ಕೆ ಹಗ್ಗದಿಂದ ಕಟ್ಟಿ ಕೈಯಿಂದ ಹೊಡೆದು, ಗುಪ್ತಗಾಯಗೊಳಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment