ಕಳವು ಪ್ರಕರಣ :-
ಎಂ.ಬಿ.ನಗರ ಠಾಣೆ : ಶ್ರೀ ಆರೀಫ ಮತೀನ ತಂದೆ ಮೌಸಿನೂದ್ದಿನ ಖಟೆ ಖಟೆ ಸಾ|| ಗುಬ್ಬಿ ಕಾಲೋನಿ ಗುಲಬರ್ಗಾ ರವರು, ನಮ್ಮ ತಾಯಿ ತೀರಿಕೊಂಡ ನಿಮಿತ್ಯ ಅಂತಿಮ ಸಂಸ್ಕಾರಕ್ಕಾಗಿ ಯಾದಗಿರಕ್ಕೆ ಹೋಗಿದ್ದು ದಿನಾಂಕ 15-09-11 ರಂದು ಮರಳಿ ಮನೆಗೆ ಬಂದು ನೋಡಲಾಗಿ ಹಿಂದಿನ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ನೋಡಲು ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲಮಾರದಲ್ಲಿಟ್ಟಿದ್ದ 25 ಗ್ರಾಂ ಬಂಗಾರದ ಸಣ್ಣ ನೇಕ್ಲೇಸ, 20 ಗ್ರಾಂ ಬಂಗಾರದ ಎರಡು ಎಳೆಯ ಒಂದು ಹಾರ, 10 ಗ್ರಾಂ ಬಂಗಾರದ ಒಂದು ಎಳೆಯ ಚೈನು, ನಗದು ಹಣ 33,000/- ಹೀಗೆ ಒಟ್ಟು 1,43,000/-ರೂ. ಮಾಲ್ಯದ ಸಾಮಾನುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೊಗಿರುತ್ತಾರೆ. ಕಾರಣ ಕಳುವು ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಪ್ರಕರಣ :-
ಆಳಂದ ಠಾಣೆ :ಮಟ್ಕಾ ಆಡುತ್ತಿದ್ದಾರೆಂದು ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ ದೇವಿಂದ್ರಪ್ಪ ಎ.ಎಸ್.ಐ ಮತ್ತು ಸಿಬ್ಬಂದಿಯವರು ಹೋಗಿ ನೋಡಲಾಗಿ, ಆಳಂದ ಪಟ್ಟಣದ ತಹಸಿಲ್ ಆಪೀಸ ಹತ್ತಿರ ಮಟ್ಕಾ ಆಡುತ್ತಿದ್ದ ಅಲಿ ಸಾಬ ತಂದೆ ಅಹ್ಮೆದ ಸಾಬ ಬಾಗವಾನ ಸಾ|| ಆಳಂದ ಎಂಬಾತನನ್ನು ದಾಳಿ ಮಾಡಿ ಬಂಧಿಸಿದ್ದು, ಆತನಿಂದ ಒಂದು ಮಟಕಾ ಚೀಟಿ, 2 ಮೋಬೈಲ ಒಂದು ಪೆನ್ ಮತ್ತು ನಗದು 150/- ರೂ. ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment