ಸುಲಿಗೆ ಪ್ರಕರಣ :
ವಿಶ್ವ ವಿದ್ಯಾಲಯ ಠಾಣೆ : ಶ್ರೀ ಅನೀಲ್ ತಂದೆ ಮಾಸಯ್ಯಾ ಜಂಬಗಿ ರವರು, ನಾನು ದತ್ತಾ ವೈನ ಶಾಪದಲ್ಲಿ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಆಗಾಗ ನಮ್ಮ ವೈನ ಶಾಪ ಮಾಲಿಕರ ಹಣ ರವಿ ತಂದೆ ದತ್ತು ಗುತ್ತೇದಾರ ಸಾ :ಗುಲಬರ್ಗಾ ರವರು ನನೆಗೆ ವೈನಶಾಪಗೆ ಬೇಕಾಗುವ ಮಧ್ಯವನ್ನು ತರಿಸುವ ಕುರಿತಂತೆ ಕಳುಹಿಸುತ್ತಿದ್ದರು. ಹಿಗಿದ್ದು ದಿನಾಂಕ 15-09-11 ರಂದು ಬೆಳಿಗ್ಗೆ 10-45 ಎ.ಎಮ ಸುಮಾರಿಗೆ 638800 ರೂಪಾಯಿಗಳನ್ನು ಐಡಿಬಿಐ ಬ್ಯಾಂಕಗೆ ಹಣ ಕಟ್ಟಲು ಗುಲಬರ್ಗಾಕ್ಕೆ ಮೋಟರ ಸೈಕಲ ಮೇಲೆ ಹೋರಟಿದ್ದು ಖಾಜಾಕೋಟನೂರ ದಾಟಿ ಕೆರೆಯ ದಾಟಿ ಒಂದು ಬ್ರೀಡ್ಜ ಮೇಲೆ ಹೋರಟಾಗ ಬ್ರಿಡ್ಜ ಬಾಜು ಮೂರು ಜನರು ಕುಳಿತಿದ್ದು ನಾನು ಅಂದಾಜು ಹತ್ತು ಫೀಟ ಮುಂದೆ ಹೋಗುವಾಗ ಅಲ್ಲಿ ರೋಡಿಗೆ ಎರಡು ಕಲ್ಲು ಮತ್ತು ಯಾವುದೂ ಗಿಡಗಳ ಕಂಟಿ ತಪ್ಪಲು ಅಡ್ಡಾ ಹಾಕಿದ್ದು ಅದನ್ನು ನೋಡಿ ನಾನು ಸಾವಕಾಶವಾಗಿ ದಾಟುತ್ತಿದ್ದಾಗ ಒಮ್ಮೆಲೆ ಮೂರು ಜನರು ಓಡಿ ಬಂದವರೆ ನಮಗೆ ಸೈಕಲ ಮೋಟಾರ ಮೇಲಿಂದ ದಬ್ಬಿ ಕೊಟ್ಟರು ಆಗ ನಾವು ಇಬ್ಬರು ಕೆಳಗೆ ಬಿದ್ದಾಗ ಆ ಮೂರು ಜನರು ಹೆಲ್ಮೇಟದಲ್ಲಿ ಇಟ್ಟಿದ್ದ ಹಣವುಳ್ಳ ಪ್ಲಾಸ್ಟಿಕ ಚೀಲ ಕೆಳಗೆ ಬಿದ್ದದ್ದು ತೆಗೆದುಕೊಂಡವರೆ ಅಲ್ಲಿಂದ ಖಾಜಾಕೋಟನೂರ ಕಡೆಗೆ ಸುಮಾರು 50 ಅಡಿ ಮೇಲೆ ಓಡಿ ಹೋಗಿ ಅವರು ನಿಲ್ಲಿಸಿದ್ದ ಸೈಕಲ ಮೊಟಾರ ತೆಗೆದುಕೊಂಡು ಮೂರು ಜನ ಖಾಜಾಕೋಟನೂರ ಕಡೆಗೆ ಹೋರಟು ಹೋದರು ಅವರಲ್ಲಿ ಇಬ್ಬರು ಮುಖಕ್ಕೆ ಕೆಂಪು ದಸ್ತಿ ಕಟ್ಟಿಕೊಂಡಿದ್ದು ಒಬ್ಬನು ಕರಿ ಟೋಪಿ ಇಟ್ಟುಕೊಂಡಿದ್ದು ಅವರು ಅಂದಾಜು ಸುಮಾರು 22 ರಿಂದ 25 ವಯಸ್ಸಿನವರು ಇರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment