Police Bhavan Kalaburagi

Police Bhavan Kalaburagi

Saturday, September 3, 2011

GULBARGA DIST REPORTED CRIMES

ತಂದೆಯ ಮೇಲೆ ಹಲ್ಲೆ :
ಅಶೋಕ ನಗರ ಠಾಣೆ :
ಶ್ರೀ ರಾಮಚಂದ್ರ ತಂದೆ ತಿಪ್ಪಣ್ಣ ಬೋಲಾ ಸಾ: ಮನೆ ನಂ. 193 ಕಾಂತಾ ಕಾಲೋನಿ ಗುಲಬರ್ಗಾ ರವರು ನನಗೆ ಸಂತೋಷ ಎಂಬುವ ಮಗನಿದ್ದು ರಾತ್ರಿ ಸರಾಯಿ ಕುಡಿದು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ ಯಾಕೇ ಬಯ್ಯುತ್ತಿ ಅಂತಾ ಕೇಳಿದಕ್ಕೆ, ನನಗೆ ಕುಡಿಯಲಿಕ್ಕೆ ಹಣ ಕೊಡಲು ಕೇಳಿದ್ದು, ನನ್ನ ಹತ್ತಿರ ಹಣ ಇಲ್ಲ ಅಂತಾ ಅಂದಿದಕ್ಕೆ, ಮನೆಯಲ್ಲಿದ್ದ ಹತೋಡಿಯಿಂದ ನನ್ನ ಎಡಗಡೆ ಕೈ ಮೇಲೆ ಹೊಡೆದು ರಕ್ತ ಗಾಯ ಪಡಿಸಿದ್ದು, ನನ್ನ ಹೆಂಡತಿ ಬಿಡಿಸಲು ಬಂದಾಗ ಅವಳಿಗೂ ಕೂಡಾ ಅವಾಚ್ಯವಾಗಿ ಬೈಯುತ್ತಿದ್ದಾಗ ನನ್ನ ಹೆಂಡತಿ ಚಿರಾಡಿದಾಗ ನನಗೆ ಹೊಡೆಯುವುದನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ನೇತಾಕಿ ಪ್ಯಾಂಟ ನಲ್ಲಿಟ್ಟಿದ್ದ 17,500-00 ರೂ ಕಳ್ಳತನ :
ರಾಘವೇಂದ್ರ ನಗರ ಠಾಣೆ:
ನ್ಯೂ ರಾಘವೇಂದ್ರ ಕಾಲೋನಿಯ ರವಿಕುಮಾರ ಬಬಲಾದಿ ಇವರು ನನ್ನ ಮನೆಯಲ್ಲಿ ಹ್ಯಾಂಗರಕ್ಕೆ ಪ್ಯಾಂಟ್ ಹಾಕಿ ಮಲಗಿಕೊಂಡಿದ್ದು, ದಿನಾಂಕ 03-09-2011 ರ ಮಧ್ಯ ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಯ ಕಿಟಕಿಗೆ ಹಾಕಿದ ಜಾಲಿ ಹರಿದು, ಕಟ್ಟಿಗೆಯಿಂದ ಪ್ಯಾಂಟ್ ಹೊರಗೆ ತೆಗೆದುಕೊಂಡು ಪ್ಯಾಂಟನಲ್ಲಿದ್ದ 17,500/-ರೂಪಾಯಿ ಕಳುವು ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: