Police Bhavan Kalaburagi

Police Bhavan Kalaburagi

Sunday, September 4, 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಮಳಖೇಡ ಪೊಲೀಸ ಠಾಣೆ:
ಶ್ರೀ ದಶರಥ ತಂದೆ ಅಂಬಾಜಿರಾವ ಕದಮ ಉ|| ಆರ್.ಸಿ.ಎಫ್ ನಲ್ಲಿ ಕೆಲಸ ಸಾ|| ಲಕ್ಷ್ಮಣ ತಾಂಡಾ ಮಳಖೇಡ ರವರು ನಾನು ನನ್ನ ಹೀರೊ ಹೊಂಡಾ ಮೋಟಾರ ಸೈಕಲ್ ನಂ ಕೆಎ 32 ವಿ 0476 ನೇದ್ದನ್ನು ದಿನಾಂಕ 02/09/2011 ರಂದು  ಸಾಯಂಕಾಲ ಮನೆಯ ಕಂಪೌಂಡ ಒಳಗಡೆ ನಿಲ್ಲಿಸಿದ್ದು ಬೆಳಗ್ಗೆ ಎದ್ದು ನೋಡಲಾಗಿ ಯಾರೋ ಕಳ್ಳರು ನನ್ನ ಮೋಟಾರು ಸೈಕಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾದ ಹೆಣ್ಣು ಮಗಳನ್ನು ಅಪಹರಿಸಿಕೊಂಡು ಹೋಗಿ ಜಭರಿ ಸಂಭೋಗ :
ಅಶೋಕ ನಗರ ಪೊಲೀಸ್ ಠಾಣೆ
:
ಶ್ರೀಮತಿ ನಾಗಮ್ಮಾ ಗಂಡ ಬೂದಯ್ಯಾ ಸ್ವಾಮಿ ಹಿರೇಮಠ ವಯ:19 ಸಾ: ರಾಂಪೂರ ತಾ: ಜೇವರ್ಗಿ ತವರೂರು ತೊಳನವಾಡಿ ತಾ: ಆಳಂದ ಜಿಲ್ಲಾ ಗುಲಬರ್ಗಾ ರವರನ್ನು ಹೆಚಸಿ 156, ಪಿಸಿ 27 ಮತ್ತು ಮಹಿಳಾ ಪಿಸಿ 188 ರವರು ಹೆಣ್ಣು ಮಗಳು ಕಾಣೆಯಾದ ಪ್ರಕರಣದಲ್ಲಿ ಕಾಣೆಯಾಗಿರುವ ನಾಗಮ್ಮ ಗಂಡ ಬೂದಯ್ಯ ಸ್ವಾಮಿ ಇವಳನ್ನು ಪತ್ತೆ ಮಾಡಿ ಠಾಣೆಗೆ ತಂದು ಹಾಜರಪಡಿಸಿದಾಗ ಸದರಿಯವಳಿಗೆ ವಿಚಾರಣೆಗೆ ಒಳಪಡಿಸಿದಾಗ ಅವಳು ಹೇಳಿಕೆ ನೀಡಿದ್ದು ಸಾರಾಂಶ ಏನೆಂದರೆ ನನ್ನ ಮದುವೆ ಜೆವರ್ಗಿ ತಾಲೂಕಿನ ರಾಂಪೂರ ಗ್ರಾಮದ ಬೂದಯ್ಯ ಸ್ವಾಮಿಗೆ ಮದುವೆ ಮಾಡಿಕೊಟ್ಟಿದ್ದು 5 ದಿವಸಗಳ ನಂತರ ತವರು ಮನೆಗೆ ಬಂದಾಗ ನಾಗರಪಂಚಮಿ ಹಬ್ಬಕ್ಕೆಂದು ನನ್ನ ಸೊದರತ್ತೆ ಬೊದನ ಗ್ರಾಮಕ್ಕೆ ಕರೆದುಕೊಂಡು ಹೊಗಿದ್ದು ಅಲ್ಲಿ ಗಣಪತಿ ತಂದೆ ಶರಣಪ್ಪ ಕಾಂದೆ ನನಗೆ ಮಾತಾಡಿಸುವದು ಮಾಡುತ್ತಿದ್ದ ದಿನಾಂಕ 07/08/2011 ರಂದು ಬೊದನ ಗ್ರಾಮದಿಂದ ತವರು ಮನೆಗೆ ಹೊದಾಗ ನನ್ನ ಗಂಡ ಕರೆಯಲು ಬಂದಿದ್ದು ದಿನಾಂಕ 08/08/2011 ರಂದು ನನ್ನ ಗಂಡನೊಂದಿಗೆ ಗುಲಬರ್ಗಾಕ್ಕೆ ಬಂದಾಗ ಬಸ್ ನಿಲ್ದಾಣದಲ್ಲಿ ಬಸ್ ನೊಡಲು ಹೊದಾಗ ಗಣಪತಿ ಇತನು ನನ್ನ ಕೈ ಇಡಿದು ಜಗ್ಗಾಡಿ ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಪುಸಲಾಯಿಸಿ ಕಲ್ಲಂಗರಗಾ ಗ್ರಾಮದ ನಾಗಣ್ಣ ಕೊಳ್ಳುರು ಇವರ ಹೊಟೆಲದಲ್ಲಿ ಒಯ್ದು 7-8 ದಿವಸ ಅಲ್ಲೆ ಇಟ್ಟು ಜಬರ ದಸ್ತಿಯಿಂದ ರಾತ್ರಿ ವೇಳೆಯಲ್ಲಿ ಸಂಭೋಗ ಮಾಡಿರುತ್ತಾನೆ. ನಾನು ಕಾಣೆಯಾಗಿರುತ್ತೆನೆ ಅಂತಾ ನಮ್ಮ ಅಣ್ಣ ಕೇಸ ಮಾಡಿಸಿರುವ ವಿಷಯ ಗೊತ್ತಾಗಿ ಗಣಪತಿ ಕಾಂದೆ ಇತನು ನನ್ನನ್ನು ದಿ: 22/08/2011 ರಂದು ಬೆಂಗಳೂರಕ್ಕೆ ಕರೆದುಕೊಂಡು ಹೊಗಿ ಅಲ್ಲಿ ಒಂದು ಆಫೀಸ ಮುಂದೆ ನಿಲ್ಲಿಸಿ ತಿನ್ನಲು ಎನಾದರು ತರುತ್ತೆನೆ ಅಂತಾ ಹೇಳಿ ಹೊದವನು ಇಲ್ಲಿಯವರೆಗೆ ಬಂದಿಲ್ಲ. ನಾನು ಅಳುತ್ತಿರುವದನ್ನು ನೊಡಿ ಅನಾಥ ಹೆಣ್ಣು ಮಕ್ಕಳ ಕೇಂದ್ರದವರು ನನ್ನನ್ನು ಕರೆದುಕೊಂಡು ಹೊಗಿದ್ದು, ಅಶೋಕ ನಗರ ಪೊಲೀಸ್ ರವರು ಗುಲಬರ್ಗಾಕ್ಕೆ ಕರೆದುಕೊಂದು ಬಂದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಗ್ರಾಮೀಣ ಠಾಣೆ: ಶ್ರೀ ಮಹ್ಮದ ಹಪೀಜ ತಂದೆ ಮಹ್ಮ ಅನ್ವರ ಮಗರಬ ವ: 26 ವರ್ಷ ಉ:ಳ ಆಟೋ ಚಾಲಕ ಸಾ; ಮನೆ ನಂ 9-907-ಎ ಕಂಗಜಪೂರ ಶಹಾಬಜಾರ ಗುಲಬರ್ಗಾ ರವರು ನನ್ನ ಆಟೋ ನಂ ಕೆಎ 32 ಬಿ-3848 ನೇದ್ದರಲ್ಲಿ ಆಳಂದ ಚೆಕ್ಕ ಪೋಸ್ಟ್‌ ಹತ್ತಿರ ನಿಂತಾಗ ಒಬ್ಬಳು ಪ್ಯಾಸೆಂಜರ್‌ ವಯಸ್ಸಾದ ಹೆಣ್ಣು ಮಗಳು ಮಲ್ಲಿಕಾರ್ಜುನ ನಗರಕ್ಕೆ ಹೋಗಬೇಕು ಅಂತಾ ಕೇಳಿದಾಗ ಅವರನ್ನು ಕರೆದುಕೊಂಡು ಹುಮನಾಬಾದ ರಿಂಗ ರೋಡ ಕಡೆಗೆ ಹೊರಟಾಗ ಹಿಂದಿನಿಂದ ಟೆಂಪೊ 407 ವಾಹನ ನಂಬರ ಕೆಎ 41 7367 ನೇದ್ದ ಚಾಲಕ ತನ್ನ ವಾಹನವನ್ನು ಅತೀವೇಗ & ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತ ಪಡಿಸಿದ್ದರಿಂದ ಅಟೋದಲ್ಲಿದ್ದ ಹೆಣ್ನು ಮಗಳಗೆ ರಕ್ತಗಾಯವಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮುಂಜಾಗ್ರತೆ ಪ್ರಕರಣ :
ಬ್ರಹ್ಮಪೂರ ಠಾಣೆ :
ಶ್ರೀ.ಗಜೇಂದ್ರ ಸಿ.ಪಿ.ಸಿ 549 ಬ್ರಹ್ಮಪೂರ ಠಾಣೆರವರು ನಾನು ಮತ್ತು ದೇವಿಂದ್ರ ಪಿಸಿ ದಿನಾಂಕ:03/09/11 ರಂದು ಸಾಯಂಕಾಲ ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು  ಹೋರಟಾಗ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರುಗಡೆ ಒಬ್ಬ ವ್ಯಕ್ತಿ  ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವನನ್ನು ಹಿಡಿದು ಹೆಸರು ಮತ್ತು ವಿಳಾಸ  ವಿಚಾರಿಸಲು ಅಕ್ಷಯ ತಂದೆ ಜೇಲರ ಕಾಂಬಳೆ, ವಯ|| 19 ವರ್ಷ, ಸಾ|| ಮಾಂಗರವಾಡಿ ಗಲ್ಲಿ ಬಾಪೂನಗರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವನನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಢಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ಸಲ್ಲಿಸಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ

ಅಶೋಕ ನಗರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ  ಶ್ಯಾಮರಾವ ಬಾಳದೆ  ಕಪಿಲಾ ಲಾಡ್ಜದಲ್ಲಿ ರಿಸಿಪ್ಸನ್ ಮ್ಯಾನೆಜರ್  ಸಾ|| ಟೆಂಗಳಿ ಹಾ.ವ : ಬನಶಂಕರಿ ಲೇಔಟ ಬ್ರಹ್ಮಪೂರ ಗುಲಬರ್ಗಾ ರವರು ನಮ್ಮ ಲಾಡ್ಜಗೆ ದಿನಾಂಕ 31/08/2011 ರಂದು ಬೆಳಿಗ್ಗೆ ಮಹ್ಮದ ಮೈಸಾದ ತಂದೆ ಅಬ್ದುಲ ಖಾದರ ಸಾ: ಕಲ್ಲಗುಂಡಿ ಹೌಸ ಪೊಸ್ಟ ಸಂಪಾಜಿ ಗ್ರಾಮ ಸುಳ್ಯಾ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಎನ್ನುವವರು ಬಂದು ರೂಮ ಕೇಳಿದ್ದರಿಂದ  ನಮ್ಮ ಲಾಡ್ಜಿನ  3ನೇ ಅಂತಸ್ತಿನಲ್ಲಿರುವ ರೂಮ ನಂ.606 ನೇದ್ದನ್ನು ಕೊಟ್ಟಿರುತ್ತೆನೆ. ಎರಡು ದಿವಸದಿಂದ ರೂಮಿನ ಬಾಗಿಲು ತೆರೆಯುವಂತೆ ನಾನು ಮತ್ತು ನಮ್ಮ ಲಾಡ್ಜ ಹುಡುಗರಾದ ಶ್ರೀನಿವಾಸ ಹಾಗು ಅನೀಲ ಎಲ್ಲರೂ ಸಪ್ಪಳ ಮಾಡಿದರು ಸಹ  ಬಾಗಿಲು ತೆರೆಯಲಿಲ್ಲ ಮತ್ತು ರೂಮಿನಿಂದ ವಾಸನೆ ಬರುತ್ತಿದ್ದರಿಂದ ಈ ಬಗ್ಗೆ ನಮ್ಮ ಲಾಡ್ಜ ಮಾಲಿಕ ರಮಾನಂದ ಭಂಡಾರಿ ರವರಿಗೆ ವಿಷಯ ತಿಳಿಸಿರುತ್ತೆವೆ. ಅವರು ಬಂದ ನಂತರ ಪೊಲೀಸರ ಸಮಕ್ಷಮದಲ್ಲಿ ಬಾಗಿಲು ಮುರಿದು ನೊಡಲಾಗಿ, ಸದರಿ ವ್ಯಕ್ತಿ ರೂಮಿನ ಒಳಗಡೆ ಛತ್ತಿಗೆ ಇರುವ ಫ್ಯಾನಿಗೆ ಬೇಡ ಶೀಟದಿಂದ ನೇಣು ಹಾಕಿಕೊಂಡು ಸತ್ತಿರುತ್ತಾನೆ. ಬಾಡಿ ಡಿಕಂಪೊಜ ಆಗಿರುತ್ತದೆ.  ರೂಮಿನಲ್ಲಿ ಮೃತ ಮಹ್ಮದ ಮೈಶಾದ ಇತನು ತನ್ನ ಸಾವಿನ ಬಗ್ಗೆ "ಡೇತ್‌‌ ನೋಟ" ದಲ್ಲಿ ಪ್ರೇಮ ವೈಫಲ್ಯದಿಂದ ಆತ್ಮ ಹತ್ಯೆ ಮಾಡಿದ್ದ ಬಗ್ಗೆ ಬರೆದು ಇಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಯು.ಡಿ.ಅರ್ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: