ಕಳ್ಳತನ ಪ್ರಕರಣ : ಶ್ರೀ ರಮೇಶ ತಂದೆ ಕಿಶನರಾವ ಸಾ|| ಶಾಸ್ತ್ರಿ ನಗರ ಗುಲಬರ್ಗಾ ರವರು ನಾನು ದಿನಾಂಕ :02.06.2011 ರಂದು ರಾತ್ರಿ 9.00 ಗಂಟೆಗೆ ತಿಮ್ಮಾಪೂರ ಸರ್ಕಲಕ್ಕೆ ಕೆಲಸದ ನಿಮಿತ್ಯ ಹೋಗಿ ಮೋಹನ ಲಾಡ್ಜ ಹತ್ತಿರ ನನ್ನ ಹೀರೊ ಹೊಂಡಾ ಮೊಟಾರ ಸೈಕಲ್ ನಂ ಕೆಎ 32 ಎಸ್ 6691 ನೇದ್ದು ನಿಲ್ಲಿಸಿದ್ದು ಪುನಃ ರಾತ್ರಿ 9.50 ಕ್ಕೆ ಬಂದು ನೋಡಲಾಗಿ ನನ್ನ ಮೊಟಾರ ಸೈಕಲ್ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಎಲ್ಲಾ ಕಡೆ ಹುಡಕಾಡಿ ಇಂದು ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದ ಮೇರೆಗೆ ಸ್ಟೇಷನ ಬಜಾರ ಪೊಲೀಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ: ಶ್ರೀ.ಶಿವಯ್ಯಾ ತಂದೆ ಶರಣಯ್ಯಾ ಸ್ವಾಮಿ ಸಾ|| ವಿಠ್ಠಲ ನಗರ ರವರು ನಾನು ದಿನಾಂಕ: 03/09/2011 ರಂದು ಸಾಯಂಕಾಲ ಕಿರಾಣಿ ಸಾಮಾನು ತರಲು ನಡೆದುಕೊಂಡು ವಿಠ್ಠಲ ನಗರದಲ್ಲಿರುವ ವಿವೇಕಾನಂದ ಕಾಲೇಜ ಎದರುಗಡೆ ಹೊರಟಾಗ ಎದರಿನಿಂದ ಒಬ್ಬ ಅಪರಿಚಿತ ವ್ಯೆಕ್ತಿ ಜೋಲಿ ಹೊಡೆಯುತ್ತ ನನ್ನ ಮೈಮೇಲೆ ಬಿದ್ದು ಜೇಬಿನಿಂದ ಪರಸ್ ಕಳ್ಳತನ ಮಾಡಿಕೊಂಡು ಓಡಿಹೊಗಿದ್ದು ನಾನು ಕೂಡಾ ಬೆನ್ನು ಹತ್ತಿ ಹಿಡಿಯುಷ್ಟರಲ್ಲಿ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ. ಇಂದು ದಿನಾಂಕ: 4/09/2011 ರಂದು ಮುಂಜಾನೆ 1130 ಗಂಟೆ ಸುಮಾರಿಗೆ ಆನಂದ ಹೊಟೇಲದಲ್ಲಿ ಚಾಹ ಕುಡಿಯಲು ಹೊರಟಾಗ ಎದರಿನಿಂದ ನಿನ್ನೆ ನನ್ನ ಪರಸ್ ಹೊಡೆದವನು ಗುರತಿಸಿ ಅವನನ್ನು ಹಿಡಿದು ಬ್ರಹ್ಮಪೂರ ಪೊಲೀಸ ಠಾಣೆಗೆ ಒಪ್ಪಿಸಿದ್ದರಿಂದ ಬ್ರಹ್ಮಪೂರ ಠಾಣೆ ಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment