Police Bhavan Kalaburagi

Police Bhavan Kalaburagi

Monday, October 3, 2011

Gulbarga District Reported Crimes

ಕೊಲೆ ಪ್ರರಕರಣ :
ಮುಧೋಳ ಠಾಣೆ :
ಶ್ರೀಮತಿ ಶಿವಮ್ಮಾ ಗಂಡ ಶಾಣಪ್ಪಾ ಸಾ: ಅಡಕಿ ಮತ್ತು ಇವರ ಅಣ್ಣತಮ್ಮಕಿಯವರಾದ ಮೊಗಲಪ್ಪಾ ತಂದೆ ಸಾಯಪ್ಪಾ ಇವರ ನಡುವೆ ಸುಮರು ವರ್ಷಗಳಿಂದ ತಕರಾರು ಆಗಿ ವೈಮನಸ್ಸು ಬೆಳೆದು ದಿನಾಂಕ 02-10-23011 ರಂದು ರಾತ್ರಿ ನನ್ನ ಗಂಡನಾದ ಶಾಣಪ್ಪಾ ಇವನು ನಮ್ಮ ಮನೆಯ ಕಟ್ಟೆಯ ಮೇಲೆ ಕುಳಿತಾಗ ಮೊಗಲಪ್ಪಾ ಇವನು ಶಾಣಪ್ಪಾನ ಜೋತೆ ವಿ:ನಾಕಾರಣ ಜಗಳ ತೆಗೆದು ಎದೆಯ ಮೇಲಿನ ಅಂಗಿ ಹಿಡಿದು ನೂಕಿ ಕೆಡವಿದಾಗ ಕಟ್ಟೆಯ ಕಲ್ಲು ನನ್ನ ಗಂಡನ ತೆಲೆಗೆ ಬಡಿದು ಭಾರಿ ಗಾಯ ಹೊಂದಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮತ್ತು ಜಾತಿ ನಿಂದನೆ ಪ್ರಕರಣ :
ಜೇವರ್ಗಿ ಠಾಣೆ :ಶ್ರೀ ಈಶ್ವರಪ್ಪ ತಂದೆ ಮಹಾದೇವಪ್ಪ ಕವಲ್ದಾರ ಸಾ: ಕೊಡಚಿ ತಾ: ಜೇವರಗಿ.
ಇವರ ಮಗಳಾದ ಕುಮಾರಿ ಅಯ್ಯಮ್ಮ ಇವಳು .ದಿನಾಂಕ: 24-9-11 ರಂದು ನಮ್ಮ ಹೊಲಕ್ಕೆ ಕೆಲಸಕ್ಕೆ ಹೋಗಿ ಅವಳು ಸಾಯಂಕಾಲ ಮನೆಗೆ ಬರದ ಕಾರಣ ಹೋಗಿ ನೋಡಿ ಬಂದು ನಂತರ ಊರಲ್ಲಿ ಹುಡುಕಾಡುತ್ತಿದ್ದಾಗ ನಮ್ಮೂರ ಸೈಬಣ್ಣ ತಂದೆ ಭೀಮಣ್ಣ ಇತನು ನನಗೆ ಬೇಟಿಯಾಗಿ ಹೇಳಿದ್ದೇನೆಂದರೆ, ನನ್ನ ಮಗಳಿಗೆ ಇಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಗ್ರಾಮದ ಹಳ್ಳೆಪ್ಪ ಇತನು ಟಂಟಂ ದಲ್ಲಿ ಕರೆದುಕೊಂಡು ಹೋಗಿರುತ್ತಾನೆ. ಅಂತಾ ಹೇಳಿದ್ದು ಸದರ ನನ್ನ ಮಗಳಿಗೆ ಹಳ್ಳೆಪ್ಪನು ಆಗಾಗ ಚುಡಾಯಿಸುತ್ತಾ ಬಂದಿದ್ದು ಅವಳು ಒಬ್ಬಳೆ ಹೊಲದಲ್ಲಿ ಇದ್ದಾಗ ಅವಳಿಗೆ ಜಬರದಸ್ತಿಯಿಂದ ಅಪಹರಿಸಿಕೊಂಡು ಎಲ್ಲಿಗೋ ಹೋಗಿ ನನ್ನ ಮಗಳಿಗೆ ಅಂಜಿಸಿ ನಮ್ಮ ಮೇಲೆ ದೌರ್ಜನ್ಯ ಮಾಡಿ ಟಂ.ಟಂ.ದಲ್ಲಿ ಜಬರದಸ್ತಿಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ.ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವರದಕ್ಷಣೆ ಕಿರುಕಳ ಪ್ರಕರಣ :
ಯಡ್ರಾಮಿ ಠಾಣೆ :ಶ್ರೀಮತಿ ಸುಂದರಮ್ಮ ಗಂಡ ಅಶೋಕ ಹೊಸಮನಿ ಸಾ: ಶಿವಪೂರ ತಾ: ಜೇವರ್ಗಿ ಇವರಿಗೆ ಅಶೋಕ ನೊಂದಿಗೆ ಮದುವೆ ನಿಶ್ಚಯ ಕಾಲಕ್ಕೆ 1 ತೊಲಿ ಬಂಗಾಯ ವರದಕ್ಷಣೆ ಮಾತಾಡಿ ಅದರಲ್ಲಿ ಮದುವೆಯಲ್ಲಿ ಅರ್ಧ ತೊಲಿ ಬಂಗಾರ ನಂತರ ಅರ್ಧ ತೊಲಿ ಬಂಗಾರ ಹಾಕುವದಾಗಿ ಮಾತಾಡಿ ಮದುವೆಯನ್ನು ಮಾಡಿದ್ದು ಒಂದು ವರ್ಷದವರೆಗೆ ಗಂಡ, ಅತ್ತೆ, ಬಾವಂದಿರರು, ಮೈದುನ, ಹಾಗೂ ನೆಗೇಣಿ ಎಲ್ಲರೂ ಅನುನ್ಯವಾಗಿದ್ದು ನಂತರ ಮದುವೆಯಲ್ಲಿ ಮಾತಾಡಿದಂತೆ ಇನ್ನು ಅರ್ಧ ತೊಲಿ ಬಂಗಾರ ಕೊಟ್ಟಿಲ್ಲ ಅದರ ಜೊತೆಗೆ ಇನ್ನು 5 ತೊಲಿ ಬಂಗಾರ ನಿನ್ನ ತವರುರಿಂದ ತರಬೇಕು ಅಂತಾ 1.ಅಶೋಕ ತಂದೆ ಭಿಮಪ್ಪ ಹೊಸಮನಿ, 2.ದವಲಮ್ಮ ಗಂಡ ಭಿಮಪ್ಪ ಹೊಸಮನಿ, 3.ಶರಣಪ್ಪ ತಂದೆ ಭೀಮಪ್ಪ ಹೊಸಮನಿ, 4.ಶೇಖಪ್ಪ ತಂದೆ ಭಿಮಪ್ಪ ಹೊಸಮನಿ, 5.ನಾಗಪ್ಪ ತಂದೆ ಭೀಮಪ್ಪ ಹೊಸಮನಿ, 6.ಅನಸುಬಾಯಿ ಗಂಡ ಶರಣಪ್ಪ ಹೊಸಮನಿ ಸಾ: ಎಲ್ಲರೂ ಶಿವಪೂರ ಇವರು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟು ತನ್ನ ಗಂಡನಿಗೆ ಹೇಳಿ ಬಂಗಾರ, ಹಣ ತರುವಂತೆ ಪ್ರಚೊದನೆ ನೀಡಿ ಅದೆ ವಿಷಯದಲ್ಲಿ ನಿನ್ನೆ ದಿನಾಂಕ 01-10-2011 ರಂದು ಸಾಯಂಕಾಲ 5-30 ಗಂಟೆಗೆ ತನ್ನ ಗಂಡ ಒಲೆಯಲ್ಲಿ ಉರಿಯುವ ಕಟ್ಟಿಗೆಯಿಂದ ಬಲಗೈ ಹಸ್ತದ ಮೇಲ್ಬಾಗದಲ್ಲಿ ಬೆಂಕಿ ಹಚ್ಚಿ ಸುಟ್ಟಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಿಣಿಗೆ ಮಾನಸಿಕ ದೈಹಿಕ ಕಿರುಕಳ ಪ್ರಕಣ :
ಗ್ರಾಮೀಣ ಠಾಣೆ :ಶ್ರೀಮತಿ ಮಾಧುರಿ ಗಂಡ ದೀಪಕ ಜೋಶಿ ಸಾ:ಈಚ್ಚಲ ಕಾರಂಜಿ ಮನೆ ನಂ ಬ್ಲಾಕ ನಂ 7/183 ಕಾಪಡ ಮಾರ್ಕೆಟ ತಾ:ಕಂಡಗಲೆ ಜಿಲ್ಲಾ:ಕೊಲ್ಲಾಪುರ ಹಾ:ವ: ಪ್ಲಾಟನಂ ಪಿ 12 ಕಪನೂರ ಇಂಡಸ್ಟ್ರಿಯಲ್ ಏರಿಯಾ ಗುಲಬರ್ಗಾ ರವರು 2005 ನೇ ಸಾಲಿನ ಮೇ ತಿಂಗಳಲ್ಲಿ ದೀಪಕ ಇತನೊಂದಿಗೆ ಮದುವೆಯಾಗಿದ್ದು ಮದುವೆಯಾದ ಮೇಲೆ ಪೂನಾದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಂಡು ಗಂಡ ಹಾಗೂ ಮೈದುನ ನೊಂದಿಗೆ ವಾಸವಾಗಿದ್ದು. ಪಿರ್ಯಾದಿಗೆ ಇನ್ನುವರೆಗೆ ಮಕ್ಕಳು ಆಗದೆ ಇರುವುದರಿಂದ ನಿನಗೆ ಮಕ್ಕಳು ಆಗುವದಿಲ್ಲ ನಾನು ಇನ್ನೊಂದು ಮದುವೆಯಾಗುತ್ತೇನೆ ನೀನು ಬಂಜೆ ರಂಡಿ ಅಂತಾ ಅವ್ಯಾಚವಾಗಿ ಬೈದು ಹೊಡೆ ಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದನ್ನು ತಾಳಲಾರದೆ ಹೇಳದೆ ಕೇಳದೆ ತಮ್ಮ ತಂದೆಯ ಮನೆಗೆ ಬಂದಿದ್ದು, ನಂತರ ದಿನಾಂಕ 18-9-2011 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ಗಂಡ ಹಾಗು ಅವನ ತಮ್ಮ ಇಬ್ಬರು ಬಂದು ಪಿರ್ಯಾದಿಗೆ ನೀನು ನಮಗೆ ಹೇಳದೆ ಕೇಳದೆ ಇಲ್ಲಿಗೆ ಹೇಗೆ ಬಂದಿರುವಿ ಅಂತಾ ಬೈದು ಕೈಯಿಂದ ಹೊಡೆಯುತ್ತಿದ್ದಾಗ. ಪಿರ್ಯಾದಿ ತಂದೆ ಬಿಡಿಸಲು ಬಂದಾಗ ಅವರಿಗೆ ಆರೋಪಿ ಶರದ ಇತನು ಹೊಡೆದು ಮರ್ಯಾದೆಯಿಂದ ನನ್ನ ಹೆಂಡತಿಯನ್ನು ತಂದು ಬಿಟ್ಟರ ಸರಿ ಇಲ್ಲವಾದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಪೀಟ ಜೂಜಾಟದಲ್ಲಿ ನಿರತ 13 ಜನರ ಬಂಧನ :

ಗ್ರಾಮೀಣ ಠಾಣೆ :ದಿನಾಂಕ 02-10-11 ರಂದು ಸಾಯಂಕಾಲ ಕಪನೂರ ಇಂಡಸ್ಟ್ರಿಯಲ್ ಏರಿಯಾದ ಸೋಮಶೇಖರ ಮಚ್ಚಟ್ಟಿ ಇವರ ಹೊಲದಲ್ಲಿ ಕೆಲವು ಜನರು ಜೂಜಾಟವಾಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಸಿಬ್ಬಂದಿಯವರನ್ನು ಹಾಗೂ ಪಂಚರ ಸಮಕ್ಷಮ ಸದರ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1.ಮಂಜುನಾಥ ತಂದೆ ದಶರಥ ಕೋರೆ ಸಾ:ಶಿವಾಜಿನಗರ ಗುಲ್ಬರ್ಗಾ 2.ಬಸವರಾಜ ತಂದೆ ಬಾಬುರಾವ ತಿಳ್ಳಿ ಸಾ: ನಂದಿ ಕಾಲನಿ ಗುಲಬರ್ಗಾ 3.ಶರಣಬಸಪ್ಪ ತಂದೆ ಪರಮೇಶ್ವರ ಉಡಚಣ @ ಯಳಸಂಗಿ ಸಾ: ಆಳಂದ ಕಾಲನಿ ಗುಲಬರ್ಗಾ 4.ಶರಣು ತಂದೆ ಪ್ರಭಾಕಾರ ಜಮಾದಾರ ಸಾ: ಶಿವಾಜಿ ನಗರ ಗುಲಬರ್ಗಾ 5.ವಿಕ್ರಮ ತಂದೆ ಲಕ್ಷ್ಮಣ ನಾಗಭುಂಜಗೆ ಸಾ: ಶಿವಾಜಿ ನಗರ ಗುಲಬರ್ಗಾ 6.ಮಲಕಾಜಿ ತಂದೆ ಯಶ್ವಂತರಾವ ಹಿಪ್ಪರಗಿ ಸಾ: ಸುವರ್ಣಾ ನಗರ ಗುಲಬರ್ಗಾ 7.ಪರಮೇಶ್ವರ ತಂದೆ ಜಗು ಬಂಡಗರ ಸಾ: ಭವಾನಿ ನಗರ ಗುಲಬರ್ಗಾ ರವರನ್ನು ಹಿಡಿದು ಸದರಿಯವರಿಂದ 4 ವಿವಿಧ ಕಂಪನಿಯ ಮೋಟಾರ ಸೈಕಲಗಳು ಹಾಗೂ 7 ವಿವಿಧ ಕಂಪನಿಯ ಮೋಬೈಲಗಳನ್ನು ಅವರಿಂದ ಜಪ್ತಿ ಪಡಿಸಿಕೊಂಡಿದ್ದು ಹಾಗೂ ಜೂಜಾಟಕ್ಕೆ ಬಳಸಿದ ಹಣ ಒಟ್ಟು 24470/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಹೀಗೆ ಒಟ್ಟು ಜೂಜಾಟಕ್ಕೆ ಬಳಸಿದ 1,43,270/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡು ಸದರಿಯವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ :ದಿನಾಂಕ 02-10-2011 ರಂದು ಮದ್ಯಾಹ್ನ ತಾಜಸುಲ್ತಾನಪೂರ ಗ್ರಾಮದಲ್ಲಿ ಕೆಲಸವು ಜನರು ಶ್ರೀ ರೇವಣಸಿದ್ದೇಶ್ವರ ಗುಡಿಯ ಹತ್ತಿರ ಜೂಜಾಟವಾಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಸಿಬ್ಬಂದಿಯವರನ್ನು ಹಾಗೂ ಪಂಚರ ಸಮಕ್ಷಮ ಸದರ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಡಲಾಗಿ ಅಲ್ಲಿ ಈ ಮೇಲಿನ 6 ಜನರು ದುಂಡಾಗಿ ಕುಳಿತು ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ದೈವದ ಜೂಜಾಟವನ್ನು ಆಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿ 1.ಗುರುರಾಜ ತಂದೆ ಮಲ್ಲಿಕಾರ್ಜುನ ಮಾಹಾಗಾಂವ ವಾಡಿ 2. ಭಾಗಣ್ಣಾ ತಂದೆ ಪ್ರಭು ಜಮದಾರ 3. ಶಿವಾನಂದ ತಂದೆ ರಾಜಶೇಖರ ಚಿಟಗುಂಪಿ 4. ಚಂದ್ರಕಾಂತ ತಂದೆ ರೇವಪ್ಪಾ ಖಲಕೋರಿ 5.ಗುರುರಾಜ ಸಾವಳಗಿ 6.ಶರಣಬಸ್ಸಪ್ಪಾ ಅಂಬಲಗಿ
@ ಖೇಳಗಿ ಸಾ; ಎಲ್ಲರೂ ತಾಜಸುಲ್ತಾನಪೂರ ತಾ: ಜಿ: ಗುಲಬರ್ಗಾ ಅವರಲ್ಲಿ 3 ಜನರನ್ನು ಹಿಡಿದಿದ್ದು ಇನ್ನೂ 3 ಜನರು ಓಡಿ ಹೋಗಿದ್ದು ಅವರು ಜೂಜಾಟಕ್ಕೆ ಬಳಸಿದ ಹಣ 1240/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಸದರಿಯವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ :
ದಿನಾಂಕ 02-10-11 ರಂದು ಶ್ರೀ ಸಿದ್ರಾಮ ತಂದೆ ಅಡಿವೆಪ್ಪಾ ಗುಂಜಾಳಕರ ಸಾ:ವಡ್ಡರ ಸಂಘ ಶಾಹಾಬಾದ ರವರ ಮಾಲಗತ್ತಿ ಸಿಮೇಯು ಸರ್ವೇ ನಂ 203 ರಲ್ಲಿಯ ಪರ್ಶಿ ಕಣೀಯಲ್ಲಿ ಕ್ವಾರಿ ಕಟಿಂಗ ಸಲ್ಲುವಾಗಿ ಜೋಡಿಸಿದ ಕರೇಂಟ ಕೇಬಲ ವೈರ ಅ.ಕಿ 8500/- ರೂ ಯಾರೋ ಕಳ್ಳರು ಬೆಳಗಿನ 2-3 ಗಂಟೆಯ ಸುಮಾರಿಗೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: