ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಮೌಲಾಲಿ ಕಿರಿಯ ಅಬಿಯಂತರರು ಶಾಖಾಧಿಕಾರಿಗಳು ಹಡಗಿಲ ಹಾರುತಿ ಗ್ರಾಮೀಣ ವಿಭಾಗ ಗುಲಬರ್ಗಾ ರವರು ದಿನಾಂಕ:08/11/2011 ರಂದು ಮುಂಜಾನೆ ಬಬಲಾದ (ಎಸ್) ಗ್ರಾಮದಲ್ಲಿ N.E.R.T.C ಬಸ್ಸು ಸಂಖ್ಯೆ K.A 32 F-941 ವಿದ್ಯುತ ಸರಬರಾಜು ಮಾಡುವ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 2 ವಿದ್ಯುತ್ತ ಕಂಬಗಳು ಮುರಿದು ವಿದ್ಯುತ್ತ ವ್ಯವಸ್ದೆ ಸಹ ನಿಂತು ಹೋಗಿದ್ದು ಅಲ್ಲದೆ ಊರಿನ ಜನರಿಗೆ ವಿದ್ಯುತ್ತ ತೊಂದರೆಯಾಗಿರುತ್ತದೆ. ಕಾರಣ ಗುಲಬರ್ಗಾ ವಿದ್ಯುತ್ ಸರಭರಾಜು ಕಂಪನಿಗೆ ಸುಮರು 13000/- ಹಾನಿ ಆಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 329/2011 ಕಲಂ 279 427 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಜೇವರ್ಗಿ ಪೋಲಿಸ ಠಾಣೆ : ಶ್ರೀಮತಿ ಮಲ್ಕಮ್ಮ ಗಂಡ ಶರಣಪ್ಪ ರವರು ನಾನು ದಿನಾಂಕ 08-11-2011 ರಂದು ರಾತ್ರಿ 8-30 ಗಂಟೆಗೆ ಅಖಂಡೇಶ್ವರ ಮಾರ್ಗವಾಗಿ ಬಜಾರ ಮಾಡಲು ಹೊಗುತ್ತಿರುವಾಗ ಕೆ.ಎ.32-6548 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ವಾಹನದೊಂದಿಗೆ ಹಾಗೆ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 192/11 ಕಲಂ 279.337..ಐ.ಪಿ.ಸಿ. 187 ಐ.ಎಮ್.ವ್ಹಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಕು|| ಮಹ್ಮದ ಸಲ್ಮಾನ ತಂದೆ ಮಕ್ಮದ ಸಲೀಮ ವ: 15 ವರ್ಷ ಉ; ವಿದ್ಯಾರ್ಧಿ ಸಾ; ಮನೆ ನಂ 11-1041/ಇಬಿ2 ಎಕ್ಬಾಲ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 06.11.2011 ರಂದು ಸಾಯಂಕಾಲ್ 7-00 ಗಂಟೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಂ:ಕೆಎ 32 ಎಫ್ 1562 ನೇದ್ದರ ಬಸ್ಸನಿಂದ ಕೇಂದ್ರ ಬಸ್ ನಿಲ್ದಾಣದ ಎದುರು ಇಳಿಯತ್ತಿರುವಾಗ ಬಸ್ಸ ಚಾಲಕನು ಅಲಕ್ಷತನದಿಂದ ಚಲಾಯಿಸಿಕೊಂಡು ಮುಂದು ಹೋಗಿದ್ದರಿಂದ ನಾನು ಬಾಗಿಲನಿಂದ ಕೆಳಗೆ ಬಿದ್ದು ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ ಅತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 142/11 ಕಲಂ: 279 .338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ :
ರೋಜಾ ಠಾಣೆ : ಶ್ರೀ ಅಬ್ದುಲ ಬಾಕಿ ತಂದೆ ಅಬ್ದುಲ ರಹೀಮ ಸಾ:ಹಾಗರಗಾ ಕ್ರಾಸ್ ಹತ್ತಿರ ನೂರಾನಿ ಮೊಹಲ್ಲಾ ಗುಲಬರ್ಗಾರವರು ದಿನಾಂಕ:08/11/2011 ರಂದು 3:30 ಪಿಎಮ್ ದಿಂದ 7:00 ಪಿಎಮ್ ದ ನಡುವಿನ ಅವಧಿಯಲ್ಲಿ ನೂರಾನಿ ಮೊಹಲ್ಲಾ ಬಡಾವಣೆಯಲ್ಲಿರುವ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ರೂಮದಲ್ಲಿದ್ದ 10 ಗ್ರಾಮದ ಮಂಗಳಸೂತ್ರ ಅ.ಕಿ.10500/-ರೂ. ಮತ್ತು 9 ಗ್ರಾಮದ ಒಂದು ಜೊತೆ ಇಯರಿಂಗ್ ಅ.ಕಿ.9500/-ರೂ. ಹೀಗೆ ಒಟ್ಟು 20000/-ರೂ. ಬೆಲೆಬಾಳುವ ಬಂಗಾರದ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.105/2011 ಕಲಂ.454,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment