ಅಪಘಾತ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ : ಶ್ರೀ ಶಿವರುದ್ರಪ್ಪಾ ತಂದೆ ಈರಣ್ಣಾ ನೆಲೋಗಿ ಸಾ:ಹಳೆ ಶಹಾಬಾದ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆಂದರೆ ನನ್ನ ಹೆಂಡತಿ ಚಂದ್ರಕಲಾ ಇವಳು ಟ್ರಾಕ್ಟರ ನಂ. ಕೆಎ-32 ಟಿಎ-2295/96 ನೇದ್ದರಲ್ಲಿ ಕುಳಿತುಕೊಂಡು ಬರುತ್ತಿರುವಾಗ ಟ್ಟ್ರಾಕ್ಟರ ಚಾಲಕನಾದ ಅಂಬಾರಾಯ ತಂದೆ ಶಿವಶರಣಪ್ಪಾ ಸರಡಗಿ ಇತನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಕಟ ಮಾಡಿದ್ದರಿಂದ ಟ್ರಾಕ್ಟರ ಪಲ್ಟಿಯಾಗಿದ್ದರಿಂದ ನನ್ನ ಹೆಂಡತಿಗೆ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ 168/11 ಕಲಂ 279, 304(ಎ) ಐಪಿಸಿ ಸಂ:187 ಐಎಮ್‌ವಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ರಟಕಲ ಪೊಲೀಸ ಠಾಣೆ: ಶ್ರೀಮತಿ ಲಾಲಾಬಾಯಿ ಗಂಡ ಮೋತಿರಾಮ ಪವಾರ ಸಾ||ಚೆಂಗಟಾ ರವರು ನಾನು ಬೆಳಿಗ್ಗೆ ಹೊಲಕ್ಕೆ ಹೋಗುವಾಗ ಅಂಬಾರಾಯ ತಂದೆ ಶಂಕ್ರೆಪ್ಪಾ ಕಣ್ಣಿ ಇತನು ನಾನು ನಿನ್ನೆ ನಿಮ್ಮ ತಾಂಡಾಕ್ಕೆ ಬಂದಾಗ ಕಲ್ಲಿನಿಂದ ಹೊಡೆದಿದ್ದಿ ಅಂತಾ ಅವಾಚ್ಯವಾಗಿ ಬೈಯ್ದು ಮಾನ ಭಂಗಮಾಡುವ ಉದ್ದೇಶದಿಂದ ಕೈಹಿಡಿದು ಎಳೆದು ಅವಮಾನ ಮಾಡಿ ಕೈಯಿಂದ ಹೊಡೆದು ಗುಪ್ತ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 61/2011 ಕಲಂ341,504,323,354,506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ .
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಅನ್ನಪೂರ್ಣ ಗಂಡ ಅಂಬಾರಾಯ ಕಲಾಮೂರ್ತಿ ಸಾಃ ಕಾಳಮಂದರಗಿ ರವರು ನಾನು ದಿನಾಂಕ: 07/11/2011 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನನ್ನ ಮನೆಯಲ್ಲಿದ್ದಾಗ ನನ್ನ ಮೈದುನ ಸತೀಷ ತಂದೆ ಲಿಂಗಪ್ಪಾ ವಯ: 28 ವರ್ಷ ಈತನು ನನಗೆ ನೋಡಿ, ವಿನಾಃಕಾರಣ ಅವಾಚ್ಯವಾಗಿ ಬೈದು ನನ್ನ ಹೆಂಡತಿ ತೀರಿಕೊಂಡಿದ್ದು. ನಾನು ಇನ್ನೊಂದು ಮದುವೆ ಮಾಡಿಕೊಳ್ಳಬೇಕು ಅಂತಾ ನಾನು, ನೋಡಿರುವ ಹೆಣ್ಣುಗಳಿಗೆ ಮದುವೆ ಮಾಡಿಕೊಳ್ಳಬೇಡಿ ಅಂತಾ ನನ್ನ ನೆಂಟಸ್ತನ ಮುರಿದಿದ್ದಿ ಎಂದು ನಿನಗೆ ಒಂದು ಕೈ ನೋಡುತ್ತೇನೆ ಅಂತಾ ಅವಾಚ್ಯವಾಗಿ ಬೈಯುತ್ತಾ ಕಲ್ಲು ಎತ್ತಿ ನನ್ನ ಬಲಗಾಲ ಮೇಲೆ ಹಾಕಿದ್ದರಿಂದ ನನ್ನ ಬಲಗಾಲಿನ ಹೆಬ್ಬಟ್ಟು, ಕಿರುಬರೆಳಿಗೆ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 139/2011 ಕಲಂ. 323, 324, 504 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment