Police Bhavan Kalaburagi

Police Bhavan Kalaburagi

Tuesday, January 24, 2012

GULBARGA DIST REPORTED CRIME


ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:
ಬಸವರಾಜ ತಂದೆ ಚಂದಪ್ಪ ಸಿಂಗೆ ಸಾ ಸಂಗೊಳಗಿ ತಾ ಅಕ್ಕಲಕೋಟ ಜಿ ಸೋಲಾಪೂರರವರು ನನ್ನ ತಂಗಿಯಾದ ಸತ್ಯವ ಇವಳಿಗೆ ನಂದರಗಾ ಗ್ರಾಮದ ಚಂದ್ರಕಾಂತ ತಂದೆ ಚನ್ನಪ್ಪ ದೊಡ್ಡಮನಿ ಎಂಬುವನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಬಳೂರ್ಗಿ ಗ್ರಾಮದಲ್ಲಿ ಹಿಟ್ಟಿನ ಗಿರಣಿ ಹಾಕಿಕೊಂಡು ಅಲ್ಲಿಯೇ ಕೆಲಸ ಮಾಡುತ್ತಿದ್ದಾಗ ನನ್ನ ತಂಗಿಯ ಮೇಲೆ ಶೀಲದ ಬಗ್ಗೆ ಶಂಕೆ ಪಟ್ಟು ಆಗಾಗ ತಕರಾರು ಮಾಡುತ್ತಾ ಇದ್ದನು. ಬಳೂರ್ಗಿ ಗ್ರಾಮದಲ್ಲಿನ ಹಿಟ್ಟಿನ ಗಿರಣಿಯನ್ನು ಮಾರಾಟ ಮಾಡಿ ತಮ್ಮ ಗ್ರಾಮವಾದ ನಂದರಗ ಗ್ರಾಮದಲ್ಲಿ ಮೂರು ತಿಂಗಳಿಂದ ಬಂದು ವಾಸವಾಗಿರುತ್ತಾರೆ ಇಲ್ಲಿಯೂ ಸಹ ತನ್ನ ಹೆಂಡತಿ ಸತ್ಯವ್ವ ಇವಳ ಮೇಲೆ ಸಂಶಯ ಪಟ್ಟು ಅವಳ ಜೊತೆಗೆ ತಕರಾರು ಮಾಡುತ್ತಿದ್ದನು ದಿನಾಂಕ 23.01.12 ರಂದು ರಾತ್ರಿ 9 ಗಂಟೆಯಿಂದ ದಿನಾಂಕ 24.01.12 ಬೆಳಿಗ್ಗೆ 7 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮಾಮ ನನ್ನ ತಂಗಿಯ ಮೇಲೆ ಸಂಶಯ ಪಟ್ಟು ಮನೆಯಲ್ಲಿಯೆ ಅವಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2012 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: