ಕೊಲೆ ಪ್ರಕರಣ:
ಮಳಖೇಡ ಠಾಣೆ: ಚಂದ್ರಪ್ಪಾ ತಂದೆ ಭೀಮಣ್ಣಾ ಹಲಗೇರಿ ಸಾ: ಹೂಡಾ(ಬಿ) ಗ್ರಾಮ ರವರು ನನ್ನ ನಮ್ಮ ಮಗಳು ರೇಖಾ ಇವಳು ಅಂದಾಜು 4-5 ವರ್ಷಗಳ ಹಿಂದೆ ನಮ್ಮೂರ ಮಹ್ಮದ ಗೌಸ್ ಎಂಬುವವನೊಂದಿಗೆ ಪ್ರಿತಿಸಿ ಮದುವೆ ಮಾಡಿಕೊಂಡಿರುತ್ತಾಳೆ. ರೇಖಾ ಇವಳಿಗೆ ಮದುವೆ ಆದ ಬಳಿಕ 2 ವರ್ಷಗಳ ನಂತರ ಅವಳ ಗಂಡ ಮಹ್ಮದ ಗೌಸ್ ಹಾಗೂ ಅವಳ ತಾಯಿ ಆಶಾಬಿ ಇವರು ನೀನೂ ಸರಿ ಇಲ್ಲಾ ನಿನಗೆ ಕೇಲಸ ಬರುವದಿಲ್ಲಾ ಅಂತಾ ಬೈದು ಮಾನಸಿಕ ಕಿರಕುಳ ಕೂಡಲು ಪ್ರಾರಂಭಿಸಿದರು. ನನ್ನ ಮಗಳು ರೇಖಾ ಇವಳು ತನ್ನ ಅತ್ತೆ ಮಾವನ ಮನೆಯಲ್ಲಿ ಕಿರಕುಳ ಜಾಸ್ತಿ ಆಗಿದ್ದರಿಂದ ಈ ಗ 5-6 ತಿಂಗಳ ಹಿಂದೆ ನನ್ನ ಮನೆಯ ಪಕ್ಕದಲ್ಲಿ ಒಂದು ಬೇರೆ ಮನೆಯನ್ನು ಮಾಡಿಕೊಂಡು ತನ್ನ ಮಗಳಒಂದಿಗೆ ವಾಸವಾಗಿದ್ದಳು. ದಿನಾಂಕ: 23.01-2012 ರಂದು ಮದ್ಯಾಹ್ನ 1.30 ಗಂಟೆಯ ಸುಮಾರಿಗೆ ನನ್ನ ಹೆಂಡತಿಯು ನನ್ನ ಮಗಳಾದ ರೇಖಾಳಿಗೆ ಅವಳ ಗಂಡನ ಮನೆಗೆ ಬಿಟ್ಟು ಬರಲು ಹೋದರು ರೇಖಾಳಿಗೆ ಅವಳ ಗಂಡನ ಮನೆಯವರು ಮನೆಯಲ್ಲಿ ಕರೆದುಕೊಂಡಿರುವದಿಲ್ಲಾ. ಅವಳಿಗೆ ಸಿಕ್ಕಾಪಟ್ಟೆ ಬೈದು ಮನೆಯ ಹೊರಗಡೆ ಹಾಕಿ ಎಲ್ಲಿಯಾದರು ಸಾಯಿ ಅಂತಾ ತ್ರಾಸು ಕೊಟ್ಟರು ಅಂತಾ ತಿಳಿಸಿದರು. ದಿನಾಂಕ;- 23.01.2012. ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ಮಗಳು ರೇಖಾ ಮಮ್ಮೂಗಳು ಪರೀದಾ ಇವರು ಮನೆಯಿಂದ ಹೊರಹೋದರು ರಾತ್ರಿ ಯಾದರು ಮನೆಗ ಬರಲಿಲ್ಲಾ ನಾವು ಎಲ್ಲಾ ಕಡೆ ಹೂಡಕಾಡಿದೆವು. ಸಿಕ್ಕಿರುವದಿಲ್ಲಾ ರಾತ್ರಿಯಾಗಿದ್ದರಿಂದ ಸುಮ್ಮನಾದೆವು. ದಿನಾಂಕ 24.01.2012. ರಂದು ಬೆಳಗ್ಗೆ ಮಳಖೇಡ ಕಾಗೀಣಾ ನದಿಯಲ್ಲಿ ಒಂದು ಹೆಣ್ಣು ಮಗು ಮತ್ತು ಒಂದು ಹೆಣ್ಣು ಮಗಳು ನೀರಿನಲ್ಲಿ ಮುಳಗಿ ಸತ್ತಿರುತ್ತಾರೆ ಅಂತಾ ವಿಷಯ ತಿಳಿದ ಮೇರೆಗೆ ನಾವು ಮಳಖೇಡ ಕಾಗೀಣಾ ಬ್ರೀಜ್ ಬಳಿ ಹೊಗಿ ನೋಡಲಾಗಿ ಅಲ್ಲಿ ಸತ್ತಿರುವ ಹೆಣ್ಣುಮಗಳು ನಮ್ಮ ಮಗಳಾದ ರೇಖಾ ಮತ್ತು ನನ್ನ ಮಮ್ಮೋಗಳಾದ ಪರೀದಾ ರವರೇ ಆಗಿದ್ದು ನೋಡಿದೆವು. ನನ್ನ ಮಗಳು ರೇಖಾ ಇವಳು ತನಗೆ ತನ್ನ ಗಂಡ ಮತ್ತು ಅತ್ತೆ ಯವರು ನೀಡಿದ ಕಿರಕುಳ ತಾಳಲಾರದೆ ದಿನಾಂಕ 23.01.2012. ರಂದು ರಾತ್ರಿ ವೇಳೆಯಲ್ಲಿ ನನ್ನ ಮೋಮ್ಮಗಳಾದ ಪರೀದಾಳಿಗೆ ನೀರಿನಲ್ಲಿ ಬೀಸಾಕಿ ತಾನು ನೀರಿಗೆ ಹಾರಿ ಸತ್ತಿರುತ್ತಾಳೆ,ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 05/12. ಕಲಂ. 302. ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜಾತಿ ನಿಂದನೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಹುಸನಪ್ಪ ತಂದ ಧೂಳಪ್ಪ ಬಡಿಗೇರ ಜಾತಿ ಪರಿಶಿಷ್ಟ ಜಾತಿ ಸಾ: ಬೇಲೂರ (ಜೆ) ಗ್ರಾಮ ರವರು ನಾನು ದಿನಾಂಕ 24-01-12 ರಂದು ರಾತ್ರಿ 8-45 ಗಂಟೆ ಸುಮಾರಿಗೆ ದೇವಪ್ಪ ಇತನು ತನ್ನ ತಮ್ಮ ಶ್ರೀಶೈಲನಿಗೆ ಕುಡಿದ ಅಮಲಿನಲ್ಲಿ ಬೈಯ್ಯುತ್ತಿದ್ದಾಗ, ಅಂಬಾರಾಯ ಪೂಜಾರಿ ಈತನು ದೇವಪ್ಪ ತನಗೆ ಬೈಯ್ಯುತ್ತಿದ್ದಾನೆ ಎಂದು ತಪ್ಪಾಗಿ ತಿಳಿದುಕೊಂಡು ಅಂಬಾರಾಯ ತಂದೆ ಅಣ್ಣೆಪ್ಪ ಪೂಜಾರಿ, ಬಸವರಾಜ ತಂದೆ ವಿಶ್ವನಾಥ ಮೊಲಗೆ , ರವಿ ಮೊಲಗೆ ಮಾಸ್ಟರ, ಬಸವರಾಜ ಗೋಳಾ,ಪಾಪು ತಂದೆ ಚಂದಪ್ಪ ಗೋಳಾ,ಚಂದಪ್ಪ ಗೋಳಾ, ಪ್ರಭು ತಂದೆ ಸಾತಲಿಂಗಪ್ಪ ಸಾ: ಎಲ್ಲರೂ ಬೇಲೂರ (ಜೆ) ಗ್ರಾಮ ಮತ್ತು ಇತರರು ಕೂಡಿಕೊಂಡು ನನಗೆ ಮತ್ತು ನನ್ನ ದೇವಪ್ಪ ಶ್ರೀಶೈಲನಿಗೆ ಜಾತಿ ಎತ್ತಿ ಬೈದು ಜಗಳಾ ತೆಗೆದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ, ಮನೆಯ ಮೇಲ ಕಲ್ಲು ತೂರಾಟ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 22/2012 ಕಲಂ 143,147,148, 504, 323,324,307,336 ಸಂ.149 ಐಪಿಸಿ ಮತ್ತು 3(1) (10) ಎಸ್.ಸಿ./ಎಸ್.ಟಿ. ಎಕ್ಟ 1989 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಅಂಬಾರಾಯ ತಂದೆ ಅಣ್ಣೆಪ್ಪ ಪೂಜಾರಿ ಜಾತಿ ಕುರುಬ ಸಾ: ಬೇಲೂರ (ಜೆ) ಗ್ರಾಮ ರವರು ನಾಣು ದಿನಾಂಕ 24-01-12 ರಂದು ರಾತ್ರಿ 8-45 ಗಂಟೆ ಸುಮಾರಿಗೆ ನನ್ನ ಹೆಂಡತಿಯಾದ ಪಾರ್ವತಿ ಇವಳಿಗೆ ಬೈದ ವಿಷಯದಲ್ಲಿ ದೇವಪ್ಪ ಈತನಿಗೆ ಕೇಳಲು ಹೋದಾಗ ದೇವಪ್ಪ ತಂದೆ ಧೂಳಪ್ಪ ಬಡಿಗೇರ, ಶ್ರೀಶೈಲ ತಂದೆ ಧೂಳಪ್ಪ ಬಡಿಗೇರ , ಹುಸನಪ್ಪ ತಂದೆ ಧೂಳಪ್ಪ ಬಡಿಗೇರ, ಮಲ್ಲಿಕಾರ್ಜುನ ಕೆಸರಟಗಿ , ಸುರೇಶ ತಂದೆ ಧೂಳಪ್ಪ ಮತ್ತು ಇತರರು ಎಲ್ಲರೂ ಬೇಲೂರ (ಜೆ) ಗ್ರಾಮ ದವರು ಕೂಡಿಕೊಂಡು ಕೈಯಲ್ಲಿ ಕಲ್ಲು, ಕುಡುಗೋಲು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಮತ್ತು ಕುಡುಗೋಲಿನಿಂದ ಹೊಡೆದು ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ 143,147,148, 504, 324, 506(2) ಸಂ.149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment