Police Bhavan Kalaburagi

Police Bhavan Kalaburagi

Tuesday, January 31, 2012

GULBARGA DIST REPORTED CRIME

ವಾಯು ಮಾಲಿನ್ಯ ಕಲುಷಿತಗೊಳಿಸುತ್ತಿರುವ ಬಗ್ಗೆ :

ಗುಲಬರ್ಗಾ ಗ್ರಾಮೀಣ ಠಾಣೆ : ಶ್ರೀ ಜಟ್ಟೆಪ್ಪ ತಂದೆ ನಾಗಪ್ಪ ಜಾನಕರ ಉ: ಹಿರಿಯ ನಿರ್ಮಲ್ಯ ನಿರೀಕ್ಷಕರು ಮಾಹಾ ನಗರ ಪಾಲಿಕೆ ಗುಲಬರ್ಗಾರವರು ನಾನು ದಿನಾಂಕ 31-01-12 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಪರೀಶಿಲನೆ ಮಾಡಲು ಉಸ್ಮಾನಮಿಯ್ಯಾ ತಂದೆ ಖಾಸೀಮ ಅಲಿ ಸಾ||ಚಾಂದಬೀಬಿ ಬಿ.ಎಡ್. ಕಾಲೇಜ ಹತ್ತಿರ ಬುಲಂದ ಪರವೇಜ ಕಾಲನಿ ಗುಲಬರ್ಗಾ, ಮಹ್ಮದ ಜಾಕೀರ ಅಬ್ದುಲ ಸತ್ತಾರ ಸಾ||ಇಸ್ಲಾಂಬಾದ ಕಾಲನಿ ಗುಲಬರ್ಗಾ, ಮಹ್ಮದ ರಜಾಕ ತಂದೆ ಉಸ್ಮಾನಮಿಯ್ಯಾ ಸಾ: ಚಾಂದಬೀಬಿ ಬಿ.ಎಡ್. ಕಾಲೇಜ ಹತ್ತಿರ ಬುಲಂದ ಪರವೇಜ ಕಾಲನಿ ಗುಲಬರ್ಗಾ ಅಹ್ಮದ ಪಾಶಾ ತಂದೆ ಬಾಬುಮಿಯ್ಯಾ ಸಾ||ಇಸ್ಲಾಂಬಾದ ಕಾಲನಿ ಗುಲಬರ್ಗಾ ಇವರು ಗುಲಬರ್ಗಾ ಮಾಹಾ ನಗರ ಪಾಲಿಕೆಯವರಿಂದ ಪರವಾನಿಗೆ ಪಡೆದುಕೊಳ್ಳದೇ ಮಿಲ್ಲತ ನಗರ ಬಡಾವಣೆಯ ಲತೀಫ ತಂದೆ ಅಬ್ದುಲ ರಜಾಕ ಇವರಿಗೆ ಸೇರಿದ ಸ್ಥಳದಲ್ಲಿ ರಾತ್ರಿ ಸಮಯದಲ್ಲಿ ಅನಧಿಕೃತವಾಗಿ ಪ್ರಾಣಿಗಳ ಕೊಳೆತು ಮಾಂಸ (ಕರಳು) ಮತ್ತು ಚರ್ಬಿ ಸಂಗ್ರಹಿಸಿದ್ದು, ಇದರಿಂದ ಸುತ್ತ ಮುತ್ತಲಿನ ಸಂಪೂರ್ಣ ಪ್ರದೇಶ ದುವಾರ್ಸನೆಯಿಂದ ಕುಲಸಿತಗೊಂಡು ಸಾರ್ವಜನಿಕರ ಆರೋಗ್ಯ ಹಾನಿ ಉಂಟಾಗುವ ಅಥವಾ ರೋಗ ಹರಡುವದು ಮತ್ತು ವಾಯು ಮಾಲಿನ್ಯ ಕಲುಷಿತಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2012 ಕಲಂ ಕಲಂ 269, 278, 290, 336 ಸಂ.149 ಐಪಿಸಿ ಮತ್ತು ಕರ್ನಾಟಕ ಕಾರ್ಪೋರೇಶನ ಎಕ್ಟ ಕಲಂ 387 ಮತ್ತು ಎನ್ವವಾರಮೆಂಟ್ ಪ್ರೊಟೆಕ್ಷನ ಎಕ್ಟ 1986 ಕಲಂ 7,8, 15 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: