Police Bhavan Kalaburagi

Police Bhavan Kalaburagi

Monday, January 30, 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀಮತಿ ಮಹಾದೇವಿ ಗಂಡ ಸಿದ್ದಣ್ಣಾ ಶಹಾಬಾದ ಸಾ:; ಹನುಮಾನ ದೇವಸ್ಥಾನದ ಹತ್ತಿರ ಜಗತ ಗುಲಬರ್ಗಾ ರವರು ನಾನು ದಿನಾಂಕ: 29-01-2012 ರಂದು 9=30 ಪಿ.ಎಮ್.ಕ್ಕೆ ಪಟೇಲ್ ಸರ್ಕಲದಿಂದ ಜಗತ ಸರ್ಕಲ ಮೇನ ರೋಡಿನಲ್ಲಿ ಬರುವ ಅನ್ನಪೂರ್ಣ ಆಸ್ಪತ್ರೆಯ ಕ್ರಾಸ್ ಹತ್ತಿರ ರೋಡಿನ ಮೇಲೆ ಬರುತ್ತಿರುವಾಗ ಮೋಟಾರ ಸೈಕಲ ನಂ:ಕೆಎ 38 ಹೆಚ್ 521 ನೇದ್ದರ ಚಾಲಕ ಜಗತ ಸರ್ಕಲ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದಾಗ ನನಗೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 14/2012 ಕಲಂ: 279,337 ಐ.ಪಿ.ಸಿ ಸಂ 187 ಐ.ದಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ರಾಜೇಶ ತಂದೆ ಚಂದ್ರಶೇಖರ ಸಿಂಗೆ ಸಾ:ಮನೆ ನಂ 11-9543/1 ಅಶೋಕ ನಗರ ಗುಲಬರ್ಗಾರವರು ನಾನು ದಿನಾಂಕ 30-01-2012 ರಂದು 9 ಗಂಟೆ ಸುಮಾರಿಗೆ ಆರ್.ಪಿ ಸರ್ಕಲದಿಂದ ಕೇಂದ್ರ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಬರುವ ಸಂಗಮೇಶ್ವರ ಆಸ್ಪತ್ರೆ ಎದುರು ರೋಡಿನ ಮೇಲೆ ಹೊರಟಾಗ ಮೋಟಾರ ಸೈಕಲ ನಂ ಕೆಎ-02 ಹೆಚ್ ಇ 3609 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 15/2012 ಕಲಂ: 279,337 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಸುಲೇಪೇಟ ಠಾಣೆ:
ಶ್ರೀ ರಾಜಪ್ಪಾ ತಂದೆ ಮರೆಪ್ಪಾ ತಳವಾರ ಸಾ ತೇಗಲತಿಪ್ಪಿ ರವರು ನಾನು ದಿನಾಂಕಃ 30.01.2012 ರಂದು 11.30 ಎ.ಎಮ್ಮ.ಕ್ಕೆ ಮುಂಜಾನೆ ಕೆಲಸದ ನಿಮಿತ್ಯ ಗಡೀಕೇಶ್ವರ ಪೋಸ್ಟ ಆಫೀಸಗೆ ಹೋಗಿ ವಾಪಸ್ ತೇಗಲತಿಪ್ಪಿಗೆ ಬರುವ ಕುರಿತು ಗಡಿಕೇಶ್ವರ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಬರುತ್ತಿರುವಾಗ ಮುಂಜಾನೆ 8.30 ಗಂಟೆಯ ಸುಮಾರಿಗೆ ಗ್ರಾಮದ ರಮೇಶ ತಂದೆ ಶರಣಪ್ಪಾ ಭೈಲ ಮತ್ತು ಇತರರು ಸೇರಿ ಕೊಂಡು ನನಗೆ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 6/2012 ಕಲಂ 323,324,341,504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ತನಿಖೆ ಕೈಕೊಂಡಿರುತ್ತಾರೆ.

No comments: