ಮಾನನಷ್ಟ ಮೊಖದೊಮ್ಮೆ ಪ್ರಕರಣ:
ಆಳಂದ ಪೊಲೀಸ ಠಾಣೆ:ಆಳಂದ ತಾಲೂಕಾ ಪಂಚಾಯಿತ ಅಧ್ಯಕ್ಷರ ಚುನಾವಣೆ ನಡೆದ ನಂತರದ ಸಂದರ್ಭದಲ್ಲಿ ಆಳಂದ ತಾಲುಕಿನ ತೀರ್ಥ ಗ್ರಾಮದ ಶ್ರೀ ಗೋಪಿನಾಥ ತಂದೆ ರೇವಣಪ್ಪ ಸಿಂಗೆ ಮತ್ತು ನಸಿರವಾಡಿ ಗ್ರಾಮ, ಬಾಬು ತಂದೆ ಅಂಬರಾಯ ಬೇಮಣಗೆ, ಶಾಂತಪ್ಪ ತಂದೆ ಹಣಮಂತ ಹುಲ್ಲೆ ಇವರುಗಳು ಸಾರ್ವಜನಿಕರ ಎದುರುಗಡೆ ನನ್ನ ವೈಯಕ್ತಿಕ ಹೆಸರಿನಿಂದ ಅವಾಚ್ಯೆ ಶಬ್ದಗಳಿಂದ ಮಾನ ಹಾನಿಯಾಗುವಂತೆ ಬೈಯ್ದಾಡಿರುತ್ತಾರೆ. ಅಂತಾ ಕೆಲವರು ನನ್ನ ಗಮನಕ್ಕೆ ತಿಂದಿರುವದರಿಂದ ಸುಭಾಷ ಆರ್ ಗುತ್ತೆದಾರ ಸಾ:ಆಳಂದರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 12/2012 ಕಲಂ 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಯತ್ನ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ: ಮಹೇಶ ತಂದೆ ಗುಂಡಪ್ಪಾ ಸಾಹು ಸಾ:ಕುರಿಕೋಟಾ ತಾ;ಜಿ: ಗುಲಬರ್ಗಾ ರವರು ನಾನು ಮತ್ತು ನನ್ನ ಅಣ್ಣನಾದ ರಮೇಶ ಈತನು ನಮ್ಮೂರಲ್ಲಿ ಸಾರ್ವಜನಿಕರೊಂದಿಗೆ ಬೆರೆತು ನ್ಯಾಯ ಪಂಚಾಯತಿ ಹಾಗೂ ಸಮಾಜದಲ್ಲಿಯ ಆಗುಹೋಗುವ ಸಮಸ್ಯೆ ಬಗೆಹರಿಸುವುದು ಮಾಡುತ್ತಾನೆ.ಅಲ್ಲದೇ ಈಗ ಎರಡು-ಮೂರು ದಿವಸಗಳಿಂದ ನಮ್ಮ ಗ್ರಾಮದ ಹರಿಜನ ಓಣಿಯ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಎಂಬುವವನು ಸಾರ್ವಜನಿಕರಿಗೆ ಬೈಯುವುದು, ಹೊಡೆಯಲಿಕ್ಕೆ ಹೋಗುವುದು ಮಾಡುತ್ತಾ ಸಿಕ್ಕ ಸಿಕ್ಕವರಿಗೆ ತೊಂದರೆ ಕೊಡುವುದು ಮಾಡುತ್ತಿದ್ದು., ಆದ್ದರಿಂದ ಆತನಿಗೆ ನನ್ನ ಅಣ್ಣ ರಮೇಶ ಈತನು ಈ ರೀತಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿ ಅಲ್ಲ ಅಂತಾ ಬುದ್ದಿವಾದ ಹೇಳಿದ್ದರಿಂದ ಆತನು ನನ್ನ ಅಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನಗೆ ನೋಡಿಯೇ ಬಿಡುತ್ತೇನೆ ಅಂತಾ ಅಂದು ತಕರಾರು ಮಾಡಿರುತ್ತಾನೆ ದಿನಾಂಕ: 19/01/2012 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಮತ್ತೆ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಈತನು ಪುನಃ ಅದೇ ರೀತಿ ಸಾರ್ವಜನಿಕರಿಗೆ ಹೊಡೆಯುವುದು ಮಾಡುತ್ತಿದ್ದರಿಂದ ನನ್ನ ಅಣ್ಣ ರಮೇಶ ಮತ್ತು ನಮ್ಮೂರ ಪ್ರಮುಖರು ಸಮಕ್ಷಮದಲ್ಲಿ ಬುದ್ದಿವಾದ ಹೇಳಬೇಕೆಂದು ನಮ್ಮೂರ ಬಸ್ ನಿಲ್ಲುವ ಸ್ಥಳದ ಹತ್ತಿರ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಹಾಗೂ ತಮ್ಮ ಮಲ್ಲು ತಂದೆ ತಿಪ್ಪಣ್ಣ ಕಲ್ಲಾ ಹಾಗೂ ಆತನ ತಂದೆ ತಿಪ್ಪಣ್ಣ ತಂದೆ ಭೀಮಶ್ಯಾ ಕಲ್ಲಾ ಇವರುಗಳಿಗೆ ಕರೆಯಿಸಿ ಮಲ್ಲು ಹಾಗೂ ತಿಪ್ಪಣ್ಣನಿಗೆ ಈ ರೀತಿ ಮಾಡುವುದು ಸರಿ ಅಲ್ಲ ಅಂತಾ ಹೇಳಿರಿ ಅಂತಾ ಹೇಳುವಾಗ ಮಲ್ಲು ಹಾಗೂ ತಿಪ್ಪಣ್ಣ ಇವರು ಈ ಭೋಸಡಿ ಮಗನದು ಬಹಳ ಆಗಿದೆ ನೋಡಿಯೇ ಬಿಡು, ಖಲಾಸ ಮಾಡು ಅಂತಾ ಅಂದಾಗ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಇತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಅಣ್ಣ ರಮೇಶ ಈತನ ತೆಲೆಯ ಬಲಗಡೆ ಹೊಡೆದು ಭಾರಿ ರಕ್ತಗಾಯ ಮಾಡಿ ನನ್ನ ಅಣ್ಣನಿಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 04/2012 ಕಲಂ 307.504.114. ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi

Friday, January 20, 2012
GULBARGA DIST REPORTED CRIMES
Subscribe to:
Post Comments (Atom)
No comments:
Post a Comment