Police Bhavan Kalaburagi

Police Bhavan Kalaburagi

Monday, February 27, 2012

BIDAR DISTRICT DAILY CRIME UPDATE 27-02-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-02-2012

ಬಗದಲ್ ಪೊಲೀಸ್ ಠಾಣೆ ಗುನ್ನೆ ನಂ 24/2012 ಕಲಂ 323, 324, 354, 504 ಜೊತೆ 34 ಐಪಿಸಿ :-

ದಿನಾಂಕ 26-2-2012 ರಂದು ಫಿರ್ಯಾದಿತಳಾದ ಜಗದೇವಿ ಗಂಡ ಶಿವರಾಜ ಮೇತ್ರೆ ವಯ: 25 ವರ್ಷ, ಜಾತಿ: ಕುರುಬ, ಸಾ: ಕಂಗನಕೋಟ್ ಇವರು ಕಬ್ಬು ಕಟಾವು ಮಾಡುತ್ತಿದ್ದಾಗ ಆರೋಪಿತರಾದ 1) ಮಹಾದೇವ ತಂದೆ ವೈಜಿನಾಥ , 2) ಈರಮ್ಮಾ, 3) ಶಾಂತಮ್ಮ ಇವರು ನಾವು ಪಾಲಕ್ಕೆ ಮಾಡಿದ ಜಮೀನಿನಲ್ಲಿ ದನಗಳಿಗೆ ಹಾಕುವ ದಂಡಿ (ವಾಡಿ) ಆಯುತ್ತಿದ್ದರು ದಂಡಿ (ವಾಡಿ) ಆಯಾಬೇಡಿರಿ ನಮಗೆ ಬೇಕು ಅಂತಾ ಅಂದಿದಕ್ಕೆ ಆರೋಪಿತರು ಫಿರ್ಯಾದಿತಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಬಡಿಗೆಯಿಂದ ತಲೆಯ ಎಡಕ್ಕೆ ಹೊಡೆದು ರಕ್ತಗಾಯ ಪಡಿಸಿ, ಸೀರೆ ಏಳೆದಾಡಿರುತ್ತಾರೆ, ಇದನ್ನು ನೋಡಿದ ಫಿರ್ಯಾದಿತಳ ಗಂಡ ಹೆಣ್ಣು ಮಕ್ಕಳ ಮೇಲೆ ಕೈ ಮಾಡಬೇಡ ಅಂದಿದ್ದಕ್ಕೆ ಆರೋಪಿತರು ಶಿವರಾಜ ಇತನಗೂ ಕೂಡ ಬಡಿಗೆಯಿಂದ ತಲೆಯ ಎಡಗಡೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ 498(ಎ), 504 ಐಪಿಸಿ :-

ದಿನಾಂಕ 26/02/2012 ರಂದು ಆರೋಪಿ ನರಸಿಂಗ್ ತಂದೆ ಕರಣಾಜಿ ಸೂರ್ಯವಂಶಿ, ವಯ: 50 ವರ್ಷ, ಜಾತಿ: ಹೋಲಿಯಾ, ಸಾ: ವಾಂಜರಖೇಡಾ ಇತನು ಫಿರ್ಯಾದಿತಳಾದ ಉತ್ತಮಬಾಯಿ ಗಂಡ ನರಸಿಂಗ್ ಸೂರ್ಯವಂಶಿ ವಯ: 45 ವರ್ಷ, ಜಾತಿ: ಹೋಲಿಯಾ, ಸಾ: ವಾಂಜರಖೇಡಾ ಇಕೆಗೆ ಬಟ್ಟೆ ಒಗೆಯಲು ಬರುವುದಿಲ್ಲ, ಅಡಿಗೆ ಮಾಡಲು ಬರುವುದಿಲ್ಲಾ, ಬೇರೆ ಜನರ ಸಂಗಡ ನೀನು ಏಕೆ ಮಾತನಾಡುತ್ತಿ ಅಂತ ಫಿರ್ಯಾದಿತಳ ಶೀಲದ ಬಗ್ಗೆ ಸಂಶಯಪಟ್ಟು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಗುನ್ನೆ ನಂ 25/2012 ಕಲಂ 279, 337, 338 ಐಪಿಸಿ :-

ದಿನಾಂಕ 26-2-2012 ರಂದು ಫಿರ್ಯಾದಿ ಮೈಬೂಬ ತಂದೆ ಉಸ್ಮಾನ ಶಾಹಾ ವಯ: 18 ವರ್ಷ, ಸಾ: ಖೇಡಾ, ತಾ: ಜಹಿರಾಬಾದ (ಎಪಿ) ಇತನು ಫ್ಯಾಷನ ಮೊಟಾರ್ ಸೈಕಲ್ ಮೇಲೆ ಮರ್ಜಾಪುರ (ಎಂ) ಗ್ರಾಮದಿಂದ ಹೈದ್ರಾಬಾದಕ್ಕೆ ಹೊಗುವಾಗ ಬೀದರ್-ಮನ್ನಾಏಖೇಳ್ಳಿ ರೋಡ ಹೊನ್ನಡಿ ಕ್ರಾಸ ಹತ್ತಿರ ಫಿರ್ಯಾದಿ ಕುಳಿತು ಹೋಗುತ್ತಿದ್ದ ಮೋಟಾರ್ ಸೈಕಲ್ ಚಾಲಕನಾದ ಆರೋಪಿ ಸಮದ ತಂದೆ ಎಂ.ಡಿ ಖಾಜಾ ಶಾಹ ಸಾ: ಐನೊಳ್ಳಿ, ತಾ: ಚಿಂಚೊಳ್ಳಿ, ಸದ್ಯ: ಕಿಶನಬಾಗ ಹೈದ್ರಾಬದ್, ಇತನು ಸದರಿ ಮೋಟಾರ್ ಸೈಕಲನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮೇಲೆ ಸ್ಲಿಪಾಗಿ ರೋಡಿನ ಮೇಲೆ ಬೀದ್ದು ಬಲ ಮೇಲಕಿನ ಮೇಲೆ ರಕ್ತಗಾಯ, ಬಲಕಾಲು ಹಿಮ್ಮಡಿಗೆ ರಕ್ತಗಾಯ, ಆಫೆಸ ಇತನಿಗೆ ಬಲ ಕಪಾಳಕ್ಕೆ ಭಾರಿ ರಕ್ತಾಗಾಯ, ಬಲ ಕೈ ಮೊಳಕೈಗೆ ತರಚಿದ ಗಾಯ, ಆರೋಪಿಯ ಬಲ ಕಪಾಳಕ್ಕೆ ರಕ್ತಾಗಾಯ ಮತ್ತು ಬಲಗೈ ಮೊಳಕೈಗೆ ತರಚಿದ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ 15/2012 ಕಲಂ 279, 337, 338 ಐಪಿಸಿ :-

ದಿನಾಂಕ: 26/02/2012 ರಂದು ಫಿರ್ಯಾದಿ ನಾಗರಾಜ ತಂದೆ ಶರಣಪ್ಪಾ ಧರ್ಮಣ್ಣನೋರ್ ವಯ: 27 ವರ್ಷ, ಜಾತಿ: ಕಬ್ಬಲಿಗ, ಸಾ: ಕುತ್ತಾಬಾದ, ಇತನು ಆರೋಪಿ ದಶರಧ ತಂದೆ ಮಾರುತಿ ಭಂಗೆನೋರ, ಸಾ: ಕುತ್ತಾಬಾದ ಇತನ ಬಜಾಜ್ ಎಮ್ 80 ನಂ ಕೆಎ-38/ಇ-8020 ನೇದರ ಮೇಲೆ ಕುತ್ತಾಬಾದದಿಂದ ಕಮಠಾಣಾ ಗ್ರಾಮಕ್ಕೆ ಹೋಗಿ ಐಸ್ ಕ್ರೀಮ್ ಮಾರಾಟ ಮಾಡಿ ಮರಳಿ ಕುತ್ತಾಬದ್ಗೆ ಬರುತ್ತಿರುವಾಗ ಆರೋಪಿಯು ಸದರಿ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರುಗಡೆ ರೋಡಿನ ಮೇಲೆ ಕೆಟ್ಟು ನಿಂತ ಮಹಿಂದ್ರಾ ಗೂಡ್ಸ ಬಿಳಿ ಬಣ್ಣದ ವಾಹನ ನಂ ಕೆಎ-39/3328 ನೇದ್ನನ್ಉ ಇಂಡಿಕೇಟರ್ ಹಾಕದೇ ಮತ್ತು ಯಾವುದೇ ಮುನ್ಸೂಚನೆ ಫಲಕ ಹಾಕದೇ ನಿಲ್ಲಿಸಿದ ವಾಹನಕ್ಕೆ ಒಮ್ಮೇಲೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಯಾವುದೇ ರೀತಿಯ ಗಾಯಗಳು ಇರುವುದಿಲ್ಲ, ಮತ್ತು ಆರೋಪಿಗೆ ಮೇಲ್ಭಾಗದಲ್ಲಿ ಭಾರಿ ರಕ್ತಗಾಯ, ಗಟಾಯಿಗೆ ಗುಪ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: